ಒಟ್ಟು 3955 ಕಡೆಗಳಲ್ಲಿ , 115 ದಾಸರು , 2389 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಓಡಿ ಬಾ ನಿನ್ನ ಎತ್ತಿ ಮುದ್ದಾಡುವೆ ನಾಗಶಯನ ರಂಗನೇ ಪ. ನಾಗಶಯನ ರಂಗನೆ, ನಾಗಶಯನ ರಂಗನೇ ಅ.ಪ. ಕುಣಿ ಕುಣಿಯುತ ಗೆಜ್ಜೆ ಝಣ ಝಣರೆನೆÀ್ನ ಕೃಷ್ಣಾ ಫಣಿಶಾಯಿ ನಿನ್ನ ನಾ ಕ್ಷಣದಲ್ಲಿ ಬಿಗಿದೂ 1 ಚಿನ್ನರೊಡನೆಗೂಡಿ ಮಣ್ಣನೆ ಮೆಲ್ಲದಿರೂ ಕೃಷ್ಣಾ ಅಣ್ಣಯನೊಡನಾಡೊ ಚಿನ್ನ ಗೋಪಾಲನೇ 2 ಗೋಪಿಯರೊಡನಾಡಿ ಗೋಕುಲಾಂಬುಧಿ ಚಂದ್ರ ಗೋಪಾಲಕೃಷ್ಣವಿಠಲ ಗೋವಳರೊಡೆಯ 3
--------------
ಅಂಬಾಬಾಯಿ
ಓಡಿ ಬಾರೋ ರಂಗಯ್ಯ ಓಡಿ ಬಾರೋ ಕೃಷ್ಣಯ್ಯ ಪ. ನೋಡಿ ನಿನ್ನ ಮುತ್ತನೀಡುವೆ ಹಾಡಿ ಜೋಗುಳವ ಪಾಡುವೆ ಅ.ಪ. ಮೊಸರು ಭಾಂಡ ಒಡೆದು ಬೆಣ್ಣೆ ಹಸುಳೆ ಮೆದ್ದು ಬಾಯೆಲ್ಲಾ ರಸಿಕಸಿಯಾಗಿರುವ ಮೈಗೆ ಬಿಸಿ ನೀರೆರೆವೆನೊ ರಂಗ 1 ಬಿಸಿ ದೋಸೆಯ ಕೊಡುವೆನೆ ಮೊಸರೋಗರವ ಉಣಿಸಿ ನಿನಗೆ ಹಸುರಂಗಿಯ ತೊಡಿಸುವೆ ಕೃಷ್ಣಾ 2 ಮುದ್ದು ಮುದ್ದಾದ ಪಾದ ಹೆಜ್ಜೆನಿಟ್ಟು ಬಾರೆಲೊ ಮುದ್ದೆ ಬೆಣ್ಣೆ ಹಣ್ಣು ಕೊಟ್ಟು ಮುದ್ರೆಯುಂಗುರವನಿಟ್ಟು ನೋಡುವೆ 3 ಅಣ್ಣ ಬಲರಾಮನೊಡನೆ ಚಿಣ್ಣ ಆಡಬಾರೆಲೊ ಚಿಣ್ಣಿಕೋಲು ಚಂಡು ಬುಗುರಿ ಚಿಣ್ಣ ಕೊಡುವೆನೋ ಕೃಷ್ಣಾ 4 ಶೃಂಗಾರವ ಮಾಡುವ ಶ್ರೀ ಶ್ರೀನಿವಾಸ ಬಾರೆಲೊ ಮುದ್ದು ಕಂಗಳಿಗೆ ಕಪ್ಪನ್ಹಚ್ಚಿ ರಂಗ ನಿನ್ನ ನೋಡುವೆದಣಿಯ5
--------------
ಸರಸ್ವತಿ ಬಾಯಿ
ಓಡಿಬಾ ಬಾ ರಂಗ ಆಡುಬಾ ನೀಲಾಂಗ ಪಾಡಿ ಪೊಗಳುವೆ ರಂಗ ಶ್ರೀಪಾಂಡುರಂಗ ಪ ಬೇಡುವೆನೊ ಮಾರಾಂಗ ನೋಡಿನಲಿವೆನೊರಂಗ ನೀಡು ವರಂಗಳ ರಂಗ ಶ್ರೀಕರಾಂಗ ಅ.ಪ ಬಡ ಮೌನಿಗಳು ನಿನ್ನ ಪಿಡಿಯ ಬಂದಿಹರೆನ್ನ ತೊಡೆಯ ಮೇಲಿರೋ ಚಿನ್ನ ಮುದ್ದುಮೋಹನ್ನ ಬೆಡಗ ತೋರುತೆ ಚೆನ್ನ ಚೆಲುವ ಬಾ ರನ್ನ ಒಡೆಯ ಮಾಂಗಿರಿಯ ಚೆನ್ನಿಗ ನಂಬಿಹೆನೊ ನಿನ್ನ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಓಡಿಬಾರೊ ರಂಗನಾಥ ಪ್ರಿಯಾ ಪ ನೋಡೀ ಕೂಡೀ ಆಡೀ ಪಾಡುವೆ ಅ.ಪ ಮಾಡಬಾರದೆಲ್ಲ ಮಾಡಿ ಬಂದೆ ಬಂದೆ [ಓಡಿಬಂದು] ನಿಂದೆ ಕಂದಾ ತಂದೆಯೆ 1 ಏತಕೆನ್ನ ಮೇಲೆ ಇಷ್ಟು ಕೋಪ ಕೋಪಾ [ಆರ್ತರ] ಪಾಲಿಸ ಭೂಪಾ ಶ್ರೀಶನೆ2 ಗುರುವು ತುಲಸಿರಾಮ ದಾಸಪ್ರೇಮಾ ಪ್ರೇಮಾ [ವರ] ಕಾಮೀ ನಾಮ ಶ್ಯಾಮನೆ 3
--------------
ಚನ್ನಪಟ್ಟಣದ ಅಹೋಬಲದಾಸರು
ಓದಿ ಮರುಳಾದರಯ್ಯ ಬೋಧವಿಲ್ಲದೆ ಓದಿನೋಡಲದನರಿತು ಹರಿಯ ನೆನೆಯಲೊಲ್ಲದೆ ಪ. ಕರಣೇಂದ್ರಿಯ ಕಾಟಕೆ ಸಿಲುಕದ ಕರ್ಮದಾವುದು ಪರಗತಿ ವಿಚಾರವಿಲ್ಲದ ನಿಜದಾವುದು ಗುರುಚರಣ ಪರಿಚಯವಿಲ್ಲದ....ಯಾವುದು1 ಅಂತರಂಗ ಶುದ್ಧಿಯಿಲ್ಲದ ಕಂತೆಯಾವುದು ನಿತ್ಯ ಶಾಂತಿ ಶಮದಮವಿಲ್ಲದ ಭ್ರಾಂತಿ ಯಾವುದು ಸಂತತ ಸಮಾಧಾನದ ಚಿಂತೆಯಾವುದು ನಮ್ಮ ಕಪಟ ದಾವುದು 2 ಮಧ್ವಮತದ ಮಾರ್ಗವನ್ನು ಮೀರಿದಾವುದು ಶ್ರುತಿ ಸಿದ್ಧ ಹರಿಯ ಗುಣವ ಹಾಡಿಪಾಡದ್ಯಾವುದು ವೃದ್ಧರನ್ನು ಕೆಣಕಿ ಕಾಡಿ ಕೊಂಬದಾವುದು ಅದು ಸಿದ್ಧಯಮನ ಬಾಧೆಗೆ ಒಳಗಾಗುವದಾವುದು 3 ಸಾರತತ್ವ ಸುಧೆಯ ಸವಿಯ ದೂರಿದಾವುದು ಪರಿ- ವಾರ ಜನರ ಪೊರೆವರುಪಚಾರ ದಾವುದು ಸಾರಿ ತನ್ನ ಸಾಕ್ಷಿಗಿನ್ನು ಬಾರದಾವುದು ಅದು ಕೀರನಾಕ....ಯಾ ಸಂಸ್ಕಾರ ದಾವುದು 4 ಅನ್ನದ ಜೀವ ಭಿನ್ನಹರಿ ಎನ್ನದಾವುದು ದ್ವಾಸು- ಪರ್ನಪಥವ ಪಾ....ಮಾಡದಾವುದು ಧನ್ಯ ಹಯವದನ ನಾನೆನ್ನುವುದು ಅದು ಕುನ್ನಿಯಂತೆ ಹಲವು ಪರಿಯ ಕೂಗುವುದದು 5
--------------
ವಾದಿರಾಜ
ಔಷಧದ ಬೇರೊಂದನು ನಾರದನು ತಂದ ಪೋಷಣೆಗೆ ಸಕಲರೂ ಸವಿಯಲೆಂದ ಪ ಜ್ವರಭೇದಗಳಿಗೆಲ್ಲ ನರಹರಿ ಎಂಬ ಬೇರು ಶಿರವೇಧೆ ಎಂಬುದಕೆ ಹರಿಹರಿ ಎಂಬ ಬೇರು ವಾತ ರುಜೆಗಳಿಗೆ ಸಿರಿಲೋಲನೀ ಬೇರು ಪರಿಪರಿಯ ಭವಗಳಿಗೆ ನಾರಾಯಣಾ ಎಂಬ ಬೇರು 1 ಪಿತ್ತರೋಗಂಗಳಿಗೆ ಚಿತ್ತಜನಪಿತನೆಂಬ ಪೃಥ್ವಿಯೊಳಗತ್ಯಧಮ ವಿಭಂದ ರೋಗಗಳಿ ಗರ್ಥಿಯಿಂ ಲೇಪಿಸುವ ಸತ್ವಗುಣನಿಧಿಯೆಂಬ ನಿತ್ಯಶೌರಿಯ ನಾಮ ಶಿವಬೇರು 2 ನಾರದನು ಬೇರೂರೆ ನೀರೆರೆದ ಪ್ರಹ್ಲಾದ ಧೀರಬಲಿ ಬೆಳೆಯಿಸಿದ | ನೀರ ಗಜನೆರೆದ ವೀರದಶಶಿರನನುಜನೆಚ್ಚರದೊಳಿದ ಕಾಯ್ದ ನಾರಿ ದ್ರೌಪದಿ ಶಿರದಿ ಮೊಗ್ಗಾಗಿ ಧರಿಸಿದಂಥ 3 ಅರಳಿದ ಸುಮಗಳನು ಅಕ್ರೂರ ಪೋಷಿಸಿದ ತ್ವರಿತದಿ ಕಾಯ್ಗಳನು ಶುಕದೇವ ಕಾಯ್ದ ನರರೆಲ್ಲರೀ ಫಲವ ದಿನದಿನವು ಮೆಲಲೆಂದು ವರದ ಮಾಂಗಿರಿರಂಗ ಪೇಳುತಿಹನು 4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಕಂಗಳಿದ್ಯಾತಕೊ ಕಾವೇರಿ ರಂಗನ ನೋಡದ ಪ. ರಂಗನ ಶ್ರೀಪಾದಂಗಳ ನೋಡದ ಅ.ಪ ಎಂದಿಗಾದರೊಮ್ಮೆ ಜನರುಬಂದು ಭೂಮಿಯಲ್ಲಿ ನಿಂದುಚಂದ್ರ ಪುಷ್ಕರಣಿ ಸ್ನಾನವ ಮಾಡಿ ಆ-ನಂದದಿಂದಲಿ ರಂಗನ ನೋಡದ 1 ಹರಿ ಪಾದೋದಕ ಸಮ ಕಾವೇರಿವಿರಜಾನದಿಯ ಸ್ನಾನವ ಮಾಡಿಪರಮ ವೈಕುಂಠ ರಂಗಮಂದಿರಪರವಾಸುದೇವನ ನೋಡದ 2 ಹಾರ ಹೀರ ವೈಜಯಂತಿತೋರ ಮುತ್ತಿನ ಹಾರ ಧರಿಸಿತೇರನೇರಿ ಬೀದಿಲಿಮೆರೆವ ರಂಗವಿಠಲನ್ನ ನೋಡದ 3
--------------
ಶ್ರೀಪಾದರಾಜರು
ಕಂಗಳಿದ್ಯಾತಕೋ ಚಿನುಮಯ ರಂಗನ ನೋಡದಾ ಸಂಗರಹಿತಾತ್ಮನ ನೋಡದಾ ಪ ಶರೀರವೇ ತಾನೆಂದು ನಂಬಿ ಮೆರೆದು ನಿಜಾನಂದವನ್ನು ದೃಷ್ಯಂಗಳನ್ನು ನೋಡುವಾ 1 ತಾನಿದ್ಯಾರು ತನಗೆ ತೋರ್ಪ ತನುವಿದೇನೆಂದರಿವುತಿರ್ಪ ಜ್ಞಾನದೃಷ್ಟಿಯಿಲ್ಲದಂಥ ಆನನಂಗಳನು ನೋಡುವ 2 ಹಂಸ ತಾನಾಗಿ ಚರಿಪ ಹಂಸನ ಪ್ರಕಾಶವನ್ನು ಶುಂಶುಮಾರದಿ ಬೆಳಗುತಿರ್ಪಭ್ರಂಶಿತಾಂ ತನ್ನ ನೋಡದಾ 3 ಸಂತಸಾಧು ಚರಣಕ್ಕೆರಗಿ ಚಿಂತೆಗಳನು ಹರಿದು ಭರದಿ ಶಾಂತಿ ಸುಖವನಿತ್ತ ಗುರು ಶಾಂತಮೂರುತಿ ನೋಡಲಾರದ 4
--------------
ಶಾಂತಿಬಾಯಿ
ಕಡಲಶಯನನ ಪುರÀದಿ ಬಡವ ರೊಬ್ಬರಿಲ್ಲಪಡೆಯಲಿ ಮುತ್ತು ಅಳೆದಳೆದು ಕೋಲಪಡೆಯಲಿ ಮುತ್ತು ಅಳೆದಳೆದು ರಂಗಯ್ಯಕೊಡವೋನು ದಾನ ಕಡೆಯಿಲ್ಲ ಕೋಲ 1 ಚಿಂತಾಮಣಿ ಕಾಮಧೇನು ಕಲ್ಪತರು ಎಂಬೊಶ್ರೀಕಾಂತನ ಕೈದಾನಕ್ಕೊಳಗಾಗಿ ಕೋಲ ಶ್ರೀಕಾಂತನ ಕೈದಾನ ಕ್ಕೊಳಗಾಗಿ ಸ್ವರ್ಗದ ಅಂತಃ ಪುರದಲ್ಲಿ ಅಡಗಿದವು ಕೋಲ2 ಒಂದಕ್ಕೊಂದು ತಾವು ನಿಂತು ಮಾತಾಡುತತಂದೆ ರಾಮೇಶನ ಅರಮನೆಗೆ ಕೋಲತಂದೆ ರಾಮೇಶನ ಅರಮನೆಗೆ ತಾವುಹೋಗೋದು ಛsÀಂದಲ್ಲವೆಂದು ಜರಿದಾವು ಕೋಲ3
--------------
ಗಲಗಲಿಅವ್ವನವರು
ಕಂಡಿರೆ ಶ್ರೀ ಕೃಷ್ಣನ ಪ. ಪುಂಡರಿಕಾಕ್ಷ ಪುರುಷೋತ್ತಮನ ಅಂಡಜವಾಹನ ಅಸುರಾಂತಕನ ಅ.ಪ. ಅರುಣ ಕಿರಣ ಸೋಲಿಪ ಚರಣ ವರ ಗೆಜ್ಜೆಯ ಧರಿಶಿಹನ ಕಿರುನಗೆಯಿಂದಲಿ ಬೆರಳಲಿ ಮುರಳಿಯ ಸ್ವರÀ ಊದಿದ ಮುರಹರನ 1 ಸೂರ್ಯ ಕಿರೀಟ ಧರಿಸಿ ಹಾಟಕಾಂಬರಧರ ನಮ್ಮ ಊಟ ಮಾಡಿ ಪಾಲ್ ಬೆಣ್ಣೆಯ ಮೆದ್ದು ವಾರೆ ನೋಟದಿ ಮನ ಸೆಳೆಯುವನ2 ಅಂಗಿಯ ತೊಡಿಸಿ ಉಂಗುರವಿಟ್ಟು ಅಂಗಳದೊಳು ಬಿಟ್ಟೆನಮ್ಮ ರಂಗ ಶ್ರೀ ಶ್ರೀನಿವಾಸನ ಕಾಣೆ ನಿ ಮ್ಮಂಗಳದೊಳು ಇಹನೇನಮ್ಮ ಇಹನೇನಮ್ಮ 3
--------------
ಸರಸ್ವತಿ ಬಾಯಿ
ಕಂಡಿರೇನೇ ರಂಗನಾ ನಿಮ್ಮ ಮನೆಗಳಲ್ಲಿ ಕಂಡರೆ ಹೇಳಿರಮ್ಮಾ ಒಂದು ಮಾತಿನಲಿ ಬೆಂಡಾದೆನೇ ಅರಸುತ ನಾನಾದಾರಿಗಳಲ್ಲಿ ಪುಂಡರೀಕಾಕ್ಷನು ದೋರನು ಎಲ್ಲಿ ಮಣಿ ಕುಂಡಲ ಮಂಡಿತ ಗಂಡ ಕಪೊಲ ಪ್ರಚಂಡನ ಲೀಲೆ 1 ಒಮ್ಮೆ ಭಾವಿಕ ಗೋವಳರಾ ಆಟ ಪಾಟದಲಿರುವಾ ಒಮ್ಮೇ ಕಾಮುಖ ಗೊಲ್ಲತೇರಾ ಚಿತ್ತಕಾನಂದ ನೀವಾ ಒಮ್ಮೆ ಯಜ್ಞ ಪತ್ನಿಯರಾ ಸವಿಯಾಟ ಕವಲಿವಾ ಅಮ್ಮ ಒಂದೇ ಠಾರ್ವೆನೇ ಹೇಳುವಾ ಅವ ನಿಮ್ಮವನೇ ತಮ್ಮನೇ ಸುಮ್ಮನೇ ತಿರುಗುತ ಘಮ್ಮನೇ ಝುಮ್ಮನೇ ಹೊಳೆವಾ 2 ಪುಲ್ಲ ನಾಭನ ಕಾಣದಿರೇ ಕಣ್ಣು ಕುರುಡವು ನಮ್ಮ ಸೊಲ್ಲ ವಾಲಿಸದಿಹ ಹರಿಯಾ ಕಿವಿಬಧಿರವು ನಮ್ಮ ಅಲ್ಲಿ ಮನುಜ ಮಹಿಪತಿಸುತ ಪ್ರಭು ಪರಬೊಮ್ಮ ನಿಲದಪ್ಪಿ ಕೊಳಲು ಸಂಭ್ರಮಾ ಅವನೆಲ್ಲೆಲ್ಲ ನೋಡಲು ಅಲ್ಲಲ್ಲಿ ನಿಂದಿಹ ಇಲ್ಲದ ಸ್ಥಳವಿಲ್ಲವಮ್ಮಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕಂಡು ಕೌತುಕ ಕಾಯದೊಳಗಿನಾಶ್ರಯ ಸಾಧನ ಕೊಂಡಾಡಲೆಷ್ಟೆಂದು ನಾ ಧ್ರುವ ಏಳು ಮೂರೆರಡು ನಾದಗಳು ಪರಿಪರಿಗಳುಕೇಳಬರುತಲ್ಯದ ತಾಳಮೃದಂಗ ಭೇರಿಗಳು ಸುಫೋಷಗಳು ಕೇಳಗುಡುತಲ್ಯದ 1 ಒಳಗೆ ಕಂಡೆ ನಾ ರಾಶಿ ಬೆಳಗಿನ ಮಳೆ ಮಿಂಚಿನ ತಳದ್ಹಿಡಿದು ತುಂಬೇದ ಕಳೆಕಾಂತಿ ರವಿಕೋಟಿ ಕಿರಣ ತೇಜ:ಸ್ಪುರಣ ಥಳಥಳಗುಡುತ್ಯದ 2 ಮಂಗಳಕರದಾನಂದೋದಯ ಮಹದಾಶ್ರಯ ರಂಗಮಯದೋರುತ್ಯದ ಸಂಗಸುಖ ಬೀರುತ್ಯದ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಂಡು ಧನ್ಯಳಾದೆ ನಾ ಪಾಂಡುರಂಗವಿಠಲನಾ ಪ. ಕಂಡು ಧನ್ಯಳಾದೆ ಹರಿಯ ಪುಂಡರೀಕ ಪದದಿ ಎನ್ನ ಮಂಡೆ ಇಟ್ಟು ವಂದಿಸುತಲಿ ಪುಂಡರೀಕ ವರದ ನಾ ಅ. ದೂರದಿಂದ ಬಂದು ಹರಿಯ ಸೇರಿವಂದಿಸುತಲಿ ಈಗ ಹಾರಹಾಕಿ ನಮಿಸಿ ಮನೋ ಹಾರ ನೋಡಿ ದಣಿದೆನಿಂದು 1 ಗುರುಗಳಂತರ್ಯಾಮಿ ಹರಿಯ ಇರಿಸಿ ಎನ್ನ ಬಿಂಬ ಸಹಿತ ಸ್ಮರಿಸಿ ಚಿಂತಿಸಿ ವಿಠಲನಲ್ಲಿ ಕರುಣಮೂರ್ತಿ ಪಾಂಡುರಂಗನ 2 ಗುರುಪುರಂದರ ಸ್ತಂಭ ಕಂಡೆ ವರದ ಚಂದ್ರಭಾಗ ತೀರದಿ ಚರಣ ಇಟ್ಟಿಗೆಯಲಿ ಇಟ್ಟು ಸಿರಿ ಗೋಪಾಲಕೃಷ್ಣವಿಠಲನ 3
--------------
ಅಂಬಾಬಾಯಿ
ಕಂಡು ಮನ ಹಿಗ್ಗೋದು ರಂಗಯ್ಯನ ಕೊಂಡಾಡಿಮನ ಉಬ್ಬೋದು ಪ. ಎಂಟು ದಿಕ್ಕಿಗೆ ದಿವ್ಯ ಮಂಟಪ ಮಣಿಯುಎಸೆಯೆ ಕಂಠದಿ ಸ್ವರವ ಕುಣಿಸುತಕಂಠದಿ ಸ್ವರವ ಕುಣಿಸುತಸಭೆಯೊಳು ನಟನೆ ಮಾಡುವರು ಕಡೆಯಿಲ್ಲ 1 ಛÀತ್ರ ಚಾಮರ ದಿವ್ಯ ಉತ್ತಮ ವ್ಯಜನವಸುತ್ತ ಬೀಸುವ ಸುಗುಣಿಯರುಸುತ್ತ ಬೀಸುವ ಸುಗುಣಿಯರುಸಭೆಯೊಳು ನರ್ತನ ಮಾಡೋರಮ್ಮ ಐವರು 2 ಕುಂದಣವುಳ್ಳ ಇಂದಿರೆರಮಣನಒಂದೊಂದು ಗುಣವ ವಿವರಿಸಿಒಂದೊಂದು ಗುಣವ ವಿವರಿಸಿಸಭೆಯೊಳು ವಂದಿಗರು ಬಂದು ಹೊಗಳೋರು3 ಭಾಗೀರಥಿ ಜಲವ ಬ್ಯಾಗ ಗಿಂಡಿಯ ತುಂಬಿಸಾಗರಶಯನನ ಅಭಿಷೇಕಸಾಗರಶಯನನ ಅಭಿಷೇಕ ಮಾಡುವಪನ್ನಂಗವೇಣಿಯರು ಕಡೆಯಿಲ್ಲ 4 ಮಲ್ಲಿಗೆ ತುರುಬಿನ ಮಲ್ಲಮುಷ್ಠಿಕರೆಲ್ಲಗುಲ್ಲು ಮಾಡುತಲೆ ಸಭೆಯೊಳು ಗುಲ್ಲು ಮಾಡುತಲೆ ಸಭೆಯೊಳು ಅಲ್ಲಲ್ಲೆಬಿಲ್ಲನೆತ್ತುವರು ಕಡೆಯಿಲ್ಲ 5 ಬಾಲೆಯರು ಅಂಗಾಲು ಲಾಲಿಸಿ ಒರೆಸುತಮ್ಯಾಲೆ ಪನ್ನೀರು ಎರೆಯುತ ಮ್ಯಾಲೆ ಪನ್ನೀರು ಎರೆಯುತ ರಂಗಯ್ಯನಕಾಲಿಗೆ ಎರಗುವರು ಐವರು 6 ಹರದೆಯರು ಅಂಗಾಲು ಸೆರಗಿಲೆ ಒರೆಸುತ ಕಿರುಗೆಜ್ಜೆ ರುಳಿಯ ಸರಿಸುತಕಿರುಗೆಜ್ಜೆ ರುಳಿಯ ಸರಿಸುತ ರಾಮೇಶನ ಎರಕಿ ನಿಂತವರು ಕಡೆಯಿಲ್ಲ7
--------------
ಗಲಗಲಿಅವ್ವನವರು
ಕಂಡು ಹೇಳಿಕೊಂಡೆನೆನ್ನ ಕಷ್ಟವ | ರಂಗನನು ಪ ಕಂಡ ಹೇಳಿಕೊಂಡೆನೆನ್ನ ಕಷ್ಟವ ಅ.ಪ. ಭೃತ್ಯ ಜನರು ಕುಡಿದ ನೀರು ಕದಲದಂತೆ ಒಡಲ ಸಲಹಿಕೊಂಡು ಬರುವ ಕಡಲಶಯನನಾದ ಹರಿಯ 1 ಜಗವ ಪೊರೆವ ದೇವ ಕುಂತಿ ಮಗನ ರಥಕೆ ಸೂತನಾಗಿ ಭುಜಗ ಶರವು ಅವನ ತಗಲದಂತೆ ಮಾಡಿದವನ 2 ಭಕುತ ಜನರು ಮಾಡಿದಂಥ ಸಕಲ ದುರಿತಗಳನು ಕಳೆದು ಮುಕುತಿ ಮಾರ್ಗ ತೋರುತಿರುವ ಶಕುತ ರಂಗೇಶವಿಠಲನ 3
--------------
ರಂಗೇಶವಿಠಲದಾಸರು