ಒಟ್ಟು 596 ಕಡೆಗಳಲ್ಲಿ , 81 ದಾಸರು , 553 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸತ್ಯವೋ ಏನು ಮಿಥ್ಯವೋ ಚಿತ್ತಜಪಿತ ಭಕ್ತವತ್ಸಲನೆಂಬೋಕ್ತಿ ಪ ಕಷ್ಟನಿವಾರ ಭಕ್ತರಿಷ್ಟದಾಯಕನೆಂದು ಅಟ್ಟಹಾಸದಿ ವೇದ ಕಟ್ಟಳಿಲ್ಲದೆ ಕೂಗ್ವುದು 1 ಧಾತ್ರಿತ್ರಯಕೆ ತಾನೆ ಸೂತ್ರಧಾರಕನೆಂದು ಸ್ತೋತ್ರ ಪೊಗಳಿದು ಮನು ಗೋತ್ರರ್ವಚನಂಗಳು 2 ಭಕ್ತವತ್ಸಲ ನೀನು ಸತ್ಯವಾಗಿರ್ದೊಡೆ ಭೃತ್ಯನ ಮನಕೀಗ ಪ್ರತ್ರ್ಯಕ್ಷಾಗಲಿ ರಾಮ 3
--------------
ರಾಮದಾಸರು
ಸಂಪತ್ತು ನಿನಗಿಂದು ಪೊಸದಾಯಿತೆ | ಸಿಂಪಿನಲಿ ಪಾಲುಗುಡಿದದು ಮರದಿಯಾ ರಂಗ ಪ ಪಾಲು ಮೊಸರು ಕದ್ದು ಗೋವಳರೆಂಜಲನುಂಡು | ತಾಳ ಫಲಗಳ ಮೆದ್ದದು ಮರದಿಯಾ || ಕಾಲ ಕಾಲಕೆ ಇಲ್ಲಿ ಷಡುರಸಾಯನ ಸವಿದು | ಮೇಲಾಗಿ ಪೊಟ್ಟೆಯೆ ಪೊರೆವ ಅತಿಶಯವೇನು 1 ಕಂಡವರ ಕೈಯ್ಯ ಪಳ್ಳಿಯಲಿ ಹಳ ಹಳ ಎನಿಸಿ | ಕೊಂಡು ಭಂಡಾಗಿ ಇದ್ದದು ಮರದಿಯಾ || ವಾಹನ | ಕರ ಮುಗಿದು ಕೊಂಡಾಡುವ ಭರವೊ 2 ಮತಿಹೀನ ಖಳಗಂಜಿ ವನಧಿಯೊಳಗೆ ದ್ವಾರ | ವತಿಯಲ್ಲಿ ವಾಸವಾದದು ಮರದಿಯಾ || ಪ್ರತಿದಿವಸದಲ್ಲಿ ಸದ್ಭಕ್ತಿಯುಳ್ಳ ಶುದ್ಧ | ಯತಿಗಳಿಂದಲಿ ಪೂಜೆ ಕೈಗೊಂಬ ಸಂಭ್ರಮವೊ 3 ಈ ವೈವಸ್ವತ ಮನ್ವಂತರ ಉಳ್ಳತನಾಕಾ | ಕರ್ಮ ತಪ್ಪಲರಿಯದು || ಕೋವಿದರು ಪೇಳುವದು ಪುಸಿ ಎನ್ನದಿರು ದೇವ | ಈ ಉಡಪಿನ ಸ್ಥಾನ ನೆಚ್ಚಕೇನೊ ನಿನಗೆ 4 ಕ್ಲೇಶ ಕಳಿಯದಿರಲು | ಭಕುತವತ್ಸಲನೆಂಬ ಬಿರಿದು ಬರಿದೇ || ಮುಕುತೀಶ ಶಿರಿ ಕೃಷ್ಣ ವಿಜಯವಿಠ್ಠಲ | ವಿ |ರುಕತಿಯೆ ಇತ್ತರೆ ಕೀರ್ತಿ ಬಾಹದು ನಿನಗೆ 5
--------------
ವಿಜಯದಾಸ
ಸರಸಿಜನಾಭ ಪ. ಉಡುಪಿಯ ಕೃಷ್ಣನೇ ಅ.ಪ. ಏನು ಕಾರಣವನ್ನು ತೋರಿದ್ಪೊ ಶ್ರೀನಿವಾಸನೆ ನಿನ್ನ ಮಹಿಮೆಯ ಪೊಗಳಲು ನಾ ಶಕ್ತಳಲ್ಲಾ ಭಕ್ತವತ್ಸಲಾ 1 ನಿನ್ನ ನೋಡಿ ಧನ್ಯಳಾದೆನೊ ಸನ್ನುತಾಂಗನೇ ಎನ್ನ ಮೇಲೆ ಕರುಣವ ತೋರಿ ನಿನ್ನ ದರುಶನವಿತ್ಯೋ ದೇವಾ 2 ಮಾಡಿಸೊ ಧ್ವಂದ್ವಕಾರ್ಯ ನಿನ್ನದೆಂಬ ಸೊಲ್ಲ ಪಾಲಿಸು 3 ನಿನ್ನ ನಾಮದ ಸ್ಮರಣೆಯನ್ನು ಮರಿಯದೆ ನುಡಿಸೆನೆಗೆ ಕರುಣಾನಿಧಿಯೇ4 ನಿನ್ನ ಪಾದದ ಧ್ಯಾನವು ನಿರಂತರವಿರಲೆನೆಗೆ ನಿನ್ನ ಕಡೆಯಾಕಣ್ಣಲಿ ನೋಡೊ ರಮಾವಲ್ಲಭವಿಠಲನೆ ಕರುಣದಿ5
--------------
ಸರಸಾಬಾಯಿ
ಸರಸಿಜೋದ್ಭವನುತ ಸಿರಿಲೋಲ ಹರಿ ಸರ್ವರೊಳಿಹ ಶ್ರೀ ಗೋಪಾಲ ಶರಣಾಗತವತ್ಸಲ ಕರುಣಾನಿಧಿ ಕೃಪಾಲ ಸುರಜನ ಸಾನುಕೂಲ ವರಮುನಿಪಾಲ 1 ಮಾಮನೋಹರ ಮಾರಪಿತನೀತ ಕಾಮಪೂರಿತ ವಿಮಲ ಚರಿತ ಸಾಮಗಾಯನಪ್ರಿಯ ಸೋಮಶೇಖರ ಧೇಯ ಸಾಮಜ ವರದ ಸಮಸ್ತಹೃದಯ 2 ಸಾಹ್ಯಸಕಲಕೆ ಸನ್ನಿಧನೀತ ಇಹ ಸರ್ವಾನಂದ ಸರ್ವಭರಿತ ಸ್ವಹಿತ ಸುಖದಾತ ಬಾಹ್ಯಾಂತ್ರ ಸದೋದಿತ ಮಹಿಪತಿ ಪ್ರಾಣನಾಥ ಶ್ರೀಹರಿ ಸಾಕ್ಷಾತ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸರ್ವದಾ ಕಾವ ದೈವ ನೀ ಶ್ರೀಹರಿ ಸರ್ವದಾ ಕಾವ ದೈವ ನೀ ಧ್ರುವ ಶರಣಾಗತ ವತ್ಸಲ ಕರುಣಾನಿಧಿ ಅಚಲ 1 ಭಾವಕ ನೀ ಸುಲಭ ಜೀವ ಪ್ರಾಣದೊಲ್ಲಭ 2 ಅನುದಿನ ಸದೋದಿತ 3 ಅನುಕೂಲದ ಸಾಧನಿ ಭಾನುಕೋಟಿ ತೇಜ 4 ಸ್ವಹಿತ ಸುಖದಾಯಕ ಮಹಿಪತಿ ಪ್ರಾಣನಾಯಕ5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸರ್ವಾಂತರ್ಯಾಮಿ ನೀ ಸಲಹೋ ಎನ್ನ ಪ ದುರ್ವಾರ್ತೆ ಕೇಳಿ ಮನ ಬರಿದೆ ಚಿಂತಿಸುತಿದೆ ಅ ಕಾಲ ಕರ್ಮ ಪ್ರಕೃತಿಯು ಸ್ವ ಭಾವಗಳನನುಸರಿಸಿ ಸುಖದುಃಖವಾ ಈವ ದೊರೆ ನೀನಲ್ಲದಿನ್ನುಂಟೆ ಜಗಕೆ ಮ ದಾತ 1 ಸತ್ಯ ಸಂಕಲ್ಪ ನೀನೆಂದೆಂದಿಗೂ ಸರಿ ಭೃತ್ಯವತ್ಸಲನೆಂಬ ಬಿರುದಲ್ಲವೇ ದತ್ತರೂಪನೆ ನಿನ್ನ ಸ್ಮರಣೆ ಮಾತ್ರದಲಿ ಅಪ ಮೃತ್ಯು ಪರಿಹರವಾಹುದು ಸಂದೇಹವಿಲ್ಲಿದಕೆ 2 ಮಾಪತಿ ಎನ್ನ ವಿಜ್ಞಾಪನೆ ಕೈಕೊಂಡು ಪಾಪಿಜನರಿಂದ ಬಂದಾಪತ್ತನು ನೀ ಪರಿಹರಿಸಿ ಸಲಹೋ ದ್ರೌಪದಿ ವರದ 3
--------------
ಜಗನ್ನಾಥದಾಸರು
ಸರ್ವಾಂತರ್ಯಾಮಿ ಸಲಹೊ ಎನ್ನ ಸರ್ವಕಾಲದಲಿ ಭಕ್ತರ ಅಂತರಂಗದಿ ನಲಿವೆ ಪ ಭಕ್ತರನು ತೋಷಿಸಲು ಹತ್ತವತಾರದಿ ಯುಕ್ತಿಯಲಿ ಖಳರ ವಧಿಸಿದೆಯಲ್ಲವೆ ಭಕ್ತವತ್ಸಲನೆಂಬೊ ಬಿರುದು ಹೊತ್ತಿಹೆ ದೇವ ಭಕ್ತರಾಧೀನ ನಾನೆಂದು ನಿನ್ನ ಭಕ್ತರೊಳು ನಲಿವೆ 1 ಅಂತ್ಯದೊಳು ಅಜಮಿಳನ ಅಂತರಂಗದಿ ಪೊಕ್ಕು ಸಂತ ಆತ್ಮಜನ ಸಾರಗನೆಂದು ನುಡಿಶಿ ನಿನ್ನ ಸ್ವಂತ ಲೋಕಕೆ ಕಳಿಸಿ ಅಜಭವಾದಿಗಳಿಂದ ಅ ತ್ಯಂತ ಹೆಚ್ಚಿನ ಸ್ತುತ್ಯನಾದೆ ಗೋವಿಂದ 2 ಆವಾವ ಕಾಲದೊಳು ಆವಪರಿ ಕಷ್ಟದೊಳು ಕಾವ ನಿನ್ನಯ ನಾಮ ಮರೆಯದಂತೆ ದೇವ ಶ್ರೀ ಶ್ರೀನಿವಾಸ ಝಾಮಝಾಮದಿ ನುಡಿಸೊ ಶ್ರೀವರ ನೀನಲ್ಲದೆ ಮತ್ತಾರಿಹರೊ ದೇವ 3
--------------
ಸರಸ್ವತಿ ಬಾಯಿ
ಸರ್ವೋತ್ತಮನ ಪರಮ ಪುರುಷ ಪರಮಾತ್ಮನ ವರ ಶಿರೋಮಣಿ ಪುರುಷೋತ್ತಮನ 1 ಧರೆಯ ಗೆಲಿದ ಮಹಾಶೂರನ ವರವಿತ್ತ ಉಗ್ರಾವತಾರನ 2 ಧರೆಯ ಬೇಡಿದ ಬ್ರಾಹ್ಮಣೋತ್ತಮನ ಪರಶುಪಿಡಿದ ಪರಾಕ್ರಮನ ಸ್ಥಿರ ಪದವಿತ್ತ ದೇವೋತ್ತಮನ ಗಿರಿಯನೆತ್ತಿದ ಮಹಾಮಹಿಮನ 3 ಗುಪಿತ ಪೊಕ್ಕಿದ್ದನ ಅಪರಂಪಾರ ಮಹಿಮಾನಂದನ ಒಪ್ಪುವ ತೇಜಿನೇರಿದ್ದನ ಕಪಟನಾಟಕ ಪ್ರಸಿದ್ಧನ 4 ಭಕ್ತವತ್ಸಲ ಭವನಾಶನ ಮುಕ್ತಿದಾಯಕ ದೇವ ದೇವೇಶನ ಮಹಿಪತಿ ಆತ್ಮ ಪ್ರಾಣೇಶನ ಗುರು ಭಾನುಕೋಟಿ ಪ್ರಕಾಶನ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಲಹು ನಂದಕುಮಾರ ಸಲಹು ಗೋಪೀತನಯ ಸಲಹು ವಸುದೇವನಿಗೆ ಪುತ್ರನೆನಿಸಿದನೆಸಲಹು ದೇವಕಿ ಜಠರದಲಿ ಬಂದನೆನಿಸಿದನೆಸಲಹು ಶ್ರೀ ರಾಮ ಶ್ರೀಕೃಷ್ಣ ಜಯ ಕೃಷ್ಣ ಸಲಹು ಸಲಹೂ ಪನಂದನೆನೆ ಸಕಲ ಸಂಪತ್ತ ಸೂಚಿಸುತಿಹುದುಚಂದದಿಂದಣಿಮಾದಿ ಸಿದ್ಧಿುರಲಾಗಿಬಂದವಿದ್ಯೆಯು ಮುಚ್ಚಲಾ ಶಕ್ತಿ ಕುತ್ಸಿತವುಹಿಂದುಗಳೆವದರಿಂದ ನಂದನಕುಮಾರ 1ಜ್ಞಾನಶಕ್ತಿಯು ತಾನು ಗುಪ್ತವಾಗಿರಲಾಗಿಧ್ಯಾನಿಸುವ ಭಕ್ತರಿಗೆ ವಿಸ್ತರಿಸಿ ಕೊಡಲುನೀನು ಗೋಪೀತನಯನೆಂಬ ನಾಮವ ತಾಳ್ದೆದೀನರಕ್ಷಾಮಣಿಯೆ ಜ್ಞಾನದಾಯಕನೆ 2ವಸುವೆನಲು ಪರಿಶುದ್ಧವಾದ ಕರಣದ ಪೆಸರುಎಸೆದು ನೀನಿರಲಲ್ಲಿ ದೇವನೆನಿಸುವದುಅಸಮ ತೇಜದಿ ಪುರುಷನೆನಿಸಿ ಸಲಹಲು ಜಗವವಸುದೇವಪುತ್ರನೆನಿಸಿತು ನಿನ್ನ ನಾಮ 3ದೇವಕಿಯು ನಿನ್ನ ಬಗೆ ಮಾಯೆ ಬ್ರಹ್ಮಾಂಡಗಳಭಾವಿಸಲು ನೀನದನು ಕುಕ್ಷಿಯೊಳಗಿರಿಸಿಸಾವಧಾನದಿ ಸಕಲದೊಳು ಸತ್ಯನಾಗಿರಲುದೇವಕಿಯ ಜಠರದಲಿ ಬಂದನೆನಿಸಿದನೆ 4ನಿತ್ಯದಲಿ ಯೋಗಿಗಳು ನಿನ್ನಲ್ಲಿ ರಮಿಸುತಿರೆಪ್ರತ್ಯಕ್ಪ್ರಕಾಶದಲಿ ಜಡಪದಾರ್ಥಗಳುಅತ್ಯಂತ ರಮಣೀಯವಾಗಿಯದರೊಳು ಜನರುನಿತ್ಯ ರಮಿಸಲು ರಾಮನೆನಿಪ ಶ್ರೀ ಹರಿಯೆ 5ಮೂರು ವರ್ಣದ ನಾಮ ಮುನಿವಂದ್ಯ ನಿನಗಿರಲುಸಾರುವುದು ಸದ್ರೂಪನೆಂದೆರಡು ವರ್ಣಮೂರನೆಯ ವರ್ಣವಾನಂದಮಯನೆನ್ನುತಿದೆಈ ರೀತಿಯಲಿ ನೀನು ಕೃಷ್ಣನೆನಿಸಿದನೆ 6ಪರಮಾತ್ಮ ನೀನಾಗಿ ಪರಿಪರಿಯ ರೂಪಿನಲಿಸುರಮುನೀಶ್ವರ ಭಾವ್ಯ ಚರಿತನೆಂದೆನಿಸಿತಿರುಪತಿಯ ವಾಸವನು ಸ್ಥಿರವಾಗಿ ನಿರ್ಧರಿಸಿುರುವ ವೆಂಕಟರಮಣ ಕರುಣರಸಪೂರ್ಣ 7ಓಂ ಯಶೋದಾವತ್ಸಲಾಯ ನಮಃ
--------------
ತಿಮ್ಮಪ್ಪದಾಸರು
ಸಂಸಾರ ಚಿಂತೆ ನಮ್ಮ ಸ್ವಾಮಿ ಶ್ರೀ ಹರಿಗುಂಟು ಸಂಸಾರಿ ಕೃಷ್ಣ ಕರುಣಿಸುವ ಇದರಿಟ್ಟು ಧ್ರುವ ತುತ್ತಾಯತವ ಮಾಡಿ ಹೊತ್ತು ನಡೆಸುವ ಒಡಿಯ ಮತ್ತೆ ಚಿಂತಿಸಲ್ಯಾಕೆ ಹತ್ತು ಕಡೆಯ ಭಕ್ತವತ್ಸಲ ಸ್ವಾಮಿ ಚಿಂತ್ಯಾಕೆನ್ನೊಡಿಯ ಗ್ರಾಸ ಭಕ್ತರೊಡಿಯ 1 ಅನೆ ಮೊದಲಿರುವೆ ಕಡೆ ತಾಂ ನಡೆಸುತಿರಲಿಕ್ಕೆ ಜನಕೊಡ್ಡಿ ಕೈಯ ನಾ ದಣಿಯಲೇಕೆ ಅನುದಿನ ಹರಿವಾಕ್ಯ ಅನುಭವಿಸುತಿರಲಿಕ್ಕೆ ಅನುಮಾನವಿಡಿದು ನಾ ಹೆಣಗಲ್ಯಾಕೆ 2 ಭಾರ ವಹಿಸಿ ಕೊಂಡಿರಲು ಮಾರಪಿತ ಪರಿಪೂರ್ಣ ಸಾರಾಂಶ ವಿತ್ತು ವರಕೃಪೆಯ ಙÁ್ಞನ ಆರ್ಹಂಗವೆನಗ್ಯಾಕೆ ತೋರುತಿದೆ ನಿಧಾನ ತರಳ ಮಹಿಪತಿ ಹೊರೆವ ಗುರು ಕರುಣ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಾಕು ಸಾಕು ಸ್ವಾಮಿ ಸಂಸಾರವು ಪ ಸಾಕಿದರೊಳು ಲೇಶ ಸೌಖ್ಯವು ಕಾಣೆನು ಬೇಕು ನಿನ್ನ ಪಾದಭಜನೆ ನಿರಂತರ ಅ.ಪ ಚತುರಶೀತಿ ಲಕ್ಷಯೋನಿಗಳಲಿ ಪು- ಟ್ಟುತ ಬೆಳೆಯುತ ಮೃತಿ ಪೊಂದುವ ಕಷ್ಟವು 1 ಮಾಂಸರಕ್ತ ಪೂರಿತ ಕೂಪದಿ ನವ- ಮಾಸ ಮಾತೃಗರ್ಭಯಾತನೆಯಿನ್ನು 2 ಬಾಲರ ಕೂಡುತ ಬಾಲ್ಯದಲ್ಲಿ ಚೆಂಡು ಗೋಲಿ ಗಜ್ಜುಗಗಳಾಡಿದ ಆಟವು 3 ಗರ್ವದಿಂದ ಮೈಮರೆತು ತಿರುಗುವುದು 4 ಸೇರಿ ಇರುವ ಕೌಮಾರಾವಸ್ಥೆಯು 5 ಕಿವಿಗಳು ಕೇಳದು ಕಣ್ಕಾಣದು ಬಾಂ- ಧವರಧೀನದಲಿ ಬಾಳುವ ಕಷ್ಟವು 6 ಮರಣವಾದ ಮೇಲೆ ನರಕವು ಸ್ವರ್ಗವು ಧರಣಿಯಲಿ ಪುಟ್ಟುವುದೋ ತಿಳಿಯದು 7 ಎಂತಾದರು ನಿನ್ನವರೊಳಿಡು ಸದಾ ಪಂಥವೆ ದೀನರ ಮೇಲೆ ದಯಾನಿಧೆ 8 ಭಾಗ್ಯವಲ್ಲಿ ಹನುಮಂತನೊಡೆಯ ಶರ- ಣಾಗವÀತ್ಸಲ ಗುರುರಾಮವಿಠಲ9
--------------
ಗುರುರಾಮವಿಠಲ
ಸಾಧು ಸಜ್ಜನ ಸಂತರ ಸಲಹುವ ಪತಿ ಹರಿ ಯಶೋದ ನಂದನಾ ಪ ಕನಕಾಂಬರಧರ ಕಮಲಸಂಭವ ಪಿತ ಇನಕುಲ ಭೂಷಣ ವೀರಾಧಿವೀರ ಘನಮಕುಟಧರ ಶಿರ ಕಾರುಣ್ಯಸಾಗರ ಅನಿಮಿತ್ತ ಬಂಧು ಜಗದಾದಿ ಪ್ರಿಯ ದಿನಕರ ಕೋಟಿ ತೇಜ ದೇವಾದಿದೇವ ದೀನರಕ್ಷಕ ರಾಮ ಜಾನಕಿ ಪ್ರೇಮಾ ಅನಿಮಿಷ ರೊಡೆಯ ಶ್ರೀ ಆದಿನಾರಾಯಣ ಕನಿಕರಿಸಿ ಎನ್ನಮೇಲೆ ಕೃಪೆ ಮಾಡೋ ಗೋವಿಂದಾ1 ವಾಸುಕಿಶಯನ ಶ್ರೀವಸುದೇವ ತನಯಾ ಸಾಸಿರನಾಮದ ಸರ್ವೇಶಾ ಈಶಾ ವಾಸುದೇವಾಕೃಷ್ಣಾ ವಾರಿಜೋದರ ಶ್ರೀನಿವಾಸ ವೇದೋದ್ಧಾರ ವೈದೇಹಿ ರಮಣ ಭೂಸುರ ವಂದಿತ ಪೂಜಿತ ಸರ್ವತ್ರ ಶ್ರೀಶವೇಣನಾದ ಶೀತ ಜನಪೋಷಾ ಭಾಸುತ ಕೀರ್ತಿ ವಿಶಾಲ ಭಕ್ತವತ್ಸಲ ದಾಸನು ನಾ ನಿನ್ನ ದಯಮಾಡಿ ರಕ್ಷಿಸೆನ್ನ 2 ಸುಂದರ ವದನ ಸುರೇಂದ್ರ ಅರ್ಚಿತ ಪರಮಾನಂದ ಮುಕುಂದ ಮಹಾದೇವನೆ ಹೊಂದಿ ನಿಮ್ಮಯ ಚರಣದ್ವಂದ್ವ ಪೂಜಿಪ ರಂದದಿ ಪುರವಂತ ಬಿರುದುಳ್ಳ ದೇವಾ ಸಿಂಧು ಶಯನನಾದ 'ಶ್ರೀಹೆನ್ನವಿಠ್ಠಲಾ’ ಕರೆದೆನ್ನ ------------------------- ------ ಎನ್ನನ್ನು ಕರುಣಿಸು ಕಾಯೋ
--------------
ಹೆನ್ನೆರಂಗದಾಸರು
ಸಿಕ್ಕಿದನೆಲೆ ಜಾಣೆ ಶ್ರೀ ವೇಣುಗೋಪಾಲಭಕ್ತವತ್ಸಲ ದೇವನು ಪ ಮಕ್ಕಳ ಚೆಂಡಿಕೆ ಮರದ ಕೊನೆಗೆ ಕಟ್ಟಿಘಕ್ಕನೆ ಕೈ ಚಪ್ಪಾಳಿಕ್ಕಿ ನಗುವ ರಂಗ ಅ.ಪ. ಹೆಣ್ಣುಮಕ್ಕಳು ಬಚ್ಚಲೆಣ್ಣೆ ಮಂಡೆಯೊಳುಬಣ್ಣ ವಸ್ತ್ರವ ಬಿಟ್ಟು ಬರಿಮೈಯೊಳಿರಲುಚೆನ್ನಿಗ ಬಿಸಿನೀರ ಚೆಲ್ಲಿ ಸೀರೆಗಳೊಯ್ದುಉನ್ನಂತವಾದ ವೃಕ್ಷವೇರಿ ಕಾಡುವನಮ್ಮ 1 ಪರಿ ಎಷ್ಟೆಂತೆ ಪೇಳಲೆ2 ಸಡಗರದೊಳು ಸೋಳಸಾಸಿರ ಗೋಪೇರಒಡಗೂಡಿ ಕೊಳಲನು ಪಿಡಿದು ತಾ ಮೊಸರಕಡೆವೊ ಗೊಲ್ಲತಿಯರ ಕೈ ಪಿಡಿದಾಡುವಒಡೆಯನೆ ಇವನಮ್ಮ ಉಡುಪಿನ ಶ್ರೀಕೃಷ್ಣ3
--------------
ವ್ಯಾಸರಾಯರು
ಸಿರಿ | ಉರಗಾದ್ರಿ ವಾಸಾ ಪ ಭವ | ವಾರಿಧೀಯ ಅ.ಪ. ಸುತ್ರಾಮ ವಂಧ್ಯಾ 1 ಭಕ್ತ ವತ್ಸಲ ಕೃಷ್ಣ | ಮುಕ್ತಿದಾಯಕ ಹರಿಯೆ |ಸಕ್ತವಾಗಿಸು ನಿನ್ನ ಪ್ರಸಕ್ತಿಲೀ |ದೃತ - ಭೋಕ್ತø ಭೋಗ್ಯಗ ಮುಕ್ತರಾಶ್ರಯ |ಭಕ್ತಿ ಪುಟ್ಟಿಸಿ ನಿನ್ನ ಪದದಲಿಯುಕ್ತ ರೀತಿಲಿ ವ್ಯಕ್ತವಾಗ್ವುದು |ಭಕ್ತವತ್ಸಲ ಅವ್ಯಕ್ತ ಮೂರ್ತೇ 2 ಊರು ಒಂದೆನಗಿಲ್ಲಾ | ಗಾರಗಳ್ಮಿತಿಯಿಲ್ಲಮರಳಿ ಬರುವ ರೋಗ | ಪಾರ ಗಾಣಿಸೊ ದೇವ ||ದೃತ - ಬಾರಿ ಬಾರಿಗೆ | ಮೊರೆಯ ನೀಡುವೆನು |ಧೀರ ಗುರು ಗೋವಿಂದ ವಿಠಲನೆಸೂರಿಗಮ್ಯ | ಸುಖಾತ್ಮ ಚಿನುಮಯಚಾರು ರೂಪವ | ತೋರೊ ಬೇಗ3
--------------
ಗುರುಗೋವಿಂದವಿಠಲರು
ಸಿರಿ ನರಸಿಂಗನ ಪಾಡಿರೊ | ಮಂಗಳಮೂರುತಿ ಡಿಂಗರಿಗರ ಹೃಸ್ಸಂಗ ಕರುಣಾತರಂಗಾ ಪ ಮೊರೆಯಿಡಾ ಬಂದ | ಕಂಭದೊಳಿಂದ | ಲೋಕಸ್ವಾಮಿ | ಅಂತರ್ಯಾಮಿ || ಕರುಳಮಾಲೆ ಇಟ್ಟಾ | ಕೊರಳೊಳು ದಿಟ್ಟಾ | ಜಯವೆನುತಿರೆ ಮೆರೆದಾ | ಪ್ರಹ್ಲಾದವರದಾ 1 ಕೊಡುವನು ಚಲುವಾ | ಭಕುತರಿಗೊಲಿವ | ಹರಿ ನಮಗೆಲ್ಲಾ | ಭಕ್ತವತ್ಸಲಾ || ಗುಣಾಂಬುಧಿ ತೇಜ | ರಾಜಾಧಿ ರಾಜ | ಕರ್ತನು ಸಖ್ಯ 2 ಕನಕಮುನೀಶ್ವರ ತಪವನು ಮಾಡಲು ಮೆಚ್ಚಿ | ಬಂದನು ಮೆಚ್ಚಿ | ಕನಕ ವರುಷವನು ಗರೆವದು ಅಂದಿನ ದಿನದಿ | ಆನಂದವನಧಿ | ಕನಕ ನೃಕೇಸರಿ ಎನಿಸಿದಾ ಅಂದಿನಾರಭ್ಯಾ | ಈತನೆ ಸಭ್ಯಾ | ನುತಿಸಲು ಸುಳಿವಾ 3 ಇದು ಪುಸಿಯಲ್ಲಾ | ವೇದಾ | ಪೇಳ್ವದು ಮೋದಾ || ಅವನೇ ದನುಜಾ | ನಮಗೀತ ತಂದೆ 4 ನಿಧಿಯೊಳು ಧನದಾ | ದಿಕ್ಕಿಲಗಾಧಾ | ಮುನಿಜನ ಸಮ್ಮತ ಶ್ರುತಿ ಉಕ್ತಿಗಳಲ್ಲಿ ಅಕ್ಕು | ಕೇಳೀವಾಕು | ಮಾಡಲು ಭಕುತಿ | ಉಂಟು ವಿರಕುತಿ | ವಿಠ್ಠಲ ನರಸಿಂಗಾ | ರಿಪುಗಜ ಸಿಂಗಾ 5
--------------
ವಿಜಯದಾಸ