ಒಟ್ಟು 5788 ಕಡೆಗಳಲ್ಲಿ , 92 ದಾಸರು , 4690 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೃಷ್ಟಿ ನಿನ್ನ ಪಾದದಲ್ಲಿ ನೆಡುವ ಹಾಗೆ - ಧರೆಯದುಷ್ಟ ಜನರ ಸಂಗಗಳನು ಬಿಡುವ ಹಾಗೆ ಪ.ಕೆಟ್ಟ ಮಾತ ಕಿವಿಯಿಂದ ಕೇಳದ ಹಾಗೆ ಮನವಕಟ್ಟು ಸದಾ ನಿನ್ನ ಧ್ಯಾನ ಬಿಡದ ಹಾಗೆ ಅಪದೃಷ್ಟನಾಗಿ ಕೈಯನೆತ್ತಿ ಕೊಡುವ ಹಾಗೆ ಶ್ರೀಕೃಷ್ಣ ನಿನ್ನ ಪೂಜೆಯನ್ನು ಮಾಡುವ ಹಾಗೆ ||ಭ್ರಷ್ಟನಾಗಿ ನಾಲ್ವರೊಳು ತಿರುಗದ ಹಾಗೆ ಬಲುಶಿಷ್ಟ ಜನರ ಸೇವೆಯನು ಮಾಡುವ ಹಾಗೆ 1ಪುಟ್ಟಿಸಿದ ತಾಯಿ - ತಂದೆಯಲ್ಲವೆ ನೀನು - ಒಂದುಹೊಟ್ಟೆಗಾಗಿ ದೈನ್ಯ ಪಡಬೇಕೇ ನಾನು ||ಪಟ್ಟೆ -ಪಟ್ಟಾವಳಿ ಬೇಡಲಿಲ್ಲ ನಾನು ಎನ್ನಗುಟ್ಟು ಅಭಿಮಾನಗಳ ಕಾಯೋ ನೀನು2ನಟ್ಟನಡು ನೀರೊಳೀಸಲಾರೆ ನಾನು ಎತ್ತಿಕಟ್ಟೆಯ ಸೇರಿಸಬೇಕಯ್ಯ ನೀನು ||ಬೆಟ್ಟದಷ್ಟು ಪಾಪ ಹೊತ್ತಿರುವೆ ನಾನು ಅದನುಸುಟ್ಟು ಬಿಡುಪುರಂದರ ವಿಠಲ ನೀನು3
--------------
ಪುರಂದರದಾಸರು
ದೇವ ಬಂದ ನಮ್ಮ ಸ್ವಾಮಿ ಬಂದನೋದೇವರ ದೇವಶಿಖಾಮಣಿಬಂದನೋಪಉರಗಶಯನ ಬಂದ ಗರುಡಗಮನಬಂದನರಗೊಲಿದವ ಬಂದ ನಾರಾಯಣ ಬಂದ 1ಮಂದರೋದ್ಧಾರ ಬಂದಮಾಮನೋಹರಬಂದವೃಂದಾವನಪತಿಗೋವಿಂದ ಬಂದ2ನಕ್ರಹರನು ಬಂದ ಚಕ್ರಧರನು ಬಂದಅಕ್ರೂರಗೊಲಿದ ತ್ರಿವಿಕ್ರಮ ಬಂದ 3ಪಕ್ಷಿವಾಹನ ಬಂದ ಲಕ್ಷ್ಮಣಾಗ್ರಜ ಬಂದಅಕ್ಷಯಫಲದ ಶ್ರೀ ಲಕ್ಷ್ಮೀ ರಮಣ ಬಂದ4ನಿಗಮಗೋಚರ ಬಂದನಿತ್ಯತೃಪ್ತನು ಬಂದನಗೆ ಮುಖಪುರಂದರವಿಠಲ ಬಂದನೋ5
--------------
ಪುರಂದರದಾಸರು
ದೇವಕಿನಂದ ಮುಕುಂದ ಪನಿಗಮೋದ್ಧಾರ -ನವನೀತ ಚೋರ |ಖಗಪತಿವಾಹನ ಜಗದೋದ್ಧಾರ1ಶಂಖ -ಚಕ್ರಧರ - ಶ್ರೀ ಗೋವಿಂದ |ಪಂಕಜಲೋಚನ ಪರಮಾನಂದ 2ಮಕರಕುಂಡಲಧರ - ಮೋಹನವೇಷ |ರುಕುಮಿಣಿವಲ್ಲಭ ಪಾಂಡುವಪೋಷ 3ಕಂಸಮರ್ದನ - ಕೌಸ್ತುಭಾಭರಣ |ಹಂಸ -ವಾಹನ ಪೂಜಿತಚರಣ 4ವರವೇಲಾಪುರ ಚೆನ್ನಪ್ರಸನ್ನ |ಪುರಂದರವಿಠಲ ಸಕಲಗುಣ ಪೂರ್ಣ 5
--------------
ಪುರಂದರದಾಸರು
ದೇವಕಿಯುದರ ಸಂಜಾತನೆ ತ್ರುವಿಕಾವನ ಪಿತ ಕಮಲಾಕ್ಷನೆ ತ್ರುವಿಶ್ರೀ ವೈಭವಸಚ್ಚಿದಾನಂದ ತ್ರುವಿಭಾವಕಿಗೋಪಿಯ ಕಂದನೆ ತ್ರುವಿ......... ತ್ರುವಿ1ಮಧುರೆಯೊಳುದಿಸಿದ ಮಹಿಮನೆ ಜೋ ಜೋಯದುಕುಲ ತಿಲಕ ಯಾದವರಾಯ ಜೋ ಜೋ ||ಮಧುಕೈಟಭ ಮುರಮರ್ದನ ಜೋ ಜೋಚದುರನಾಗಿ ತುರುಗಳ ಕಾಯ್ದೆ ಜೋ ಜೋ 2ಗೋಕುಲಪಾಲಕ ಗೋವಿಂದ ತ್ರುವಿಶ್ರೀ ಕುಚಕುಂಕುಮಾಂಕಿತ ಕೃಷ್ಣ ತ್ರುವಿ ||ಪಾಕ ಶಾಸನ ಮುಖ್ಯ ಸುರವಂದ್ಯ ತ್ರುವಿಲೋಕವೀರೇಳ ಪೆತ್ತಾತನೆ ತ್ರುವಿ ........... ತ್ರುವಿ 3ಶ್ರುತಿಚೋರ ಸಂಹಾರಕ ದೇವ ಜೋ ಜೋಜತನದಿ ಸುರರಿಗಮೃತವಿತ್ತೆ ಜೋ ಜೋ ||ಕ್ಷಿತಿಯ ಕದ್ದೊಯ್ದನ ಸೀಳ್ದೆ ನೀ ಜೋ ಜೋಮತಿಯುತ ಬಾಲಕನತಿ ರಕ್ಷ ಜೋ ಜೋ 4ಕ್ಷಿತಿಯ ಈರಡಿಗೆಯ್ದ ವಾಮನ ತ್ರುವಿಯತಿವಂಶ ಜನನಭಾರ್ಗವರೂಪ ತ್ರುವಿ ||ಕ್ರತುವ ರಕ್ಷಕ ಕಾಕುತ್ಸ್ಥನೆ ತ್ರುವಿರತಿಪತಿಪಿತಸುರನುತ ಕೃಷ್ಣ ತ್ರುವಿ ......... ತ್ರುವಿ5ಗೋಪಿಕಾನಂದ ಮುಕುಂದನೆ ಜೋ ಜೋಭೂಪರೊಳ್ಕಾದಿ ಬಳಲಿದನೆ ಜೋ ಜೋಶ್ರೀ ಪುರುಷೋತ್ತಮ ನರಸಿಂಹ ಜೋ ಜೋಅಪಾರ ಮಹಿಮಾರ್ಣವ ದೇವ ಜೋ ಜೋ........ಜೋ ಜೋ 6ಮಣ್ಣೊಳಗಾಡಿ ನೀ ಬಂದೆಯ ತ್ರುವಿಬೆಣ್ಣೆಯ ಬೇಡೆ ಬಯ್ದೆನೆ ಕಂದ ತ್ರುವಿಕಣ್ಣ ದೃಷ್ಟಿಗೆ ಕರಗದ ಕಂದ ತ್ರುವಿಚಿಣ್ಣಸುಮ್ಮನೆ ಇರು ಶ್ರೀ ಕೃಷ್ಣ ತ್ರುವಿ ............ ತ್ರುವಿ7ತಾರಕ ಸತಿವ್ರತಹಾರಕ ಜೋ ಜೋವಾರಣ ಹಯವೇರಿ ಮೆರೆದನೆ ಜೋ ಜೋ ||ಸಾರಿದವರ ಸಂತೈಸುವ ಜೋ ಜೋಶ್ರೀ ರಮಾಕಾಂತ ಶ್ರೀ ಕೃಷ್ಣನೆ ಜೋ ಜೋ.......ಜೋ ಜೋ 8ಶರಣಾಗತ ವಜ್ರಪಂಜರ ತ್ರುವಿಕರುಣಾಕರ ಕಮಲಾಕ್ಷನೆ ತ್ರುವಿ ||ಧರಣಿಧರಶಾಯಿ ಶ್ರೀವರ ತ್ರುವಿ ||ವರದ ಶ್ರೀ ಪುರಂದರವಿಠಲನೆ ತ್ರುವಿ ........... ತ್ರುವಿ 9
--------------
ಪುರಂದರದಾಸರು
ದೇವದೇವೇಶ ಶ್ರೀ ಹರಿಯಲ್ಲದೆ ಪ.ಆವ ತಂದೆಯು ಸಲಹಿದನು ಪ್ರಹ್ಲಾದನಆವ ತಾಯಿ ಸಲಹಿದಳು ಧ್ರುವರಾಯನಆವ ಸುತ ಸಲಹಿದನು ಆ ಉಗ್ರಸೇನನಜೀವರಿಗೆ ಪೋಷಕನು ಹರಿಯಲ್ಲದೆ 1ಆವ ಬಂಧುವು ಸಲಹಿದನು ಗಜರಾಜನನುಆವಪತಿ ಕಾಯ್ದ ದ್ರೌಪದಿಯಮಾನ ||ಆವ ಸೋದರರು ಸಲುಹಿದರು ವಿಭೀಷಣನಜೀವರಿಗೆ ದಾತೃ ಶ್ರೀ ಹರಿಯಲ್ಲದೆ 2ಆವನಾಧಾರ ಅಡವಿಯೊಳಿಪ್ಪ ಮೃಗಗಳಿಗೆಆವ ರಕ್ಷಕ ಪಕ್ಷಿಜಾತಿಗಳಿಗೆಆವ ಪೊಷಕನು ಗರ್ಭದಲ್ಲಿದ್ದ ಶಿಶುಗಳಿಗೆದೇವ ಶ್ರೀ ಪುರಂದರವಿಠಲನಲ್ಲದಲೆ 3
--------------
ಪುರಂದರದಾಸರು
ದೇವರನಾಮ - ಶ್ರೀ ಸೇತುಮಾಧವ ಸ್ತೋತ್ರ62-1ಸೇತುಮಾಧವ ವಿಭುವೇ | ನಿನ್ನಯ ದಿವ್ಯವೃತತಿಜ ಪದಯುಗಳ |ಸತತ ನಂಬಿದೆ ಎನ್ನ ಹಿತದಿ ಪಾಲಿಸಿ ಸದಾಕೃತ ಕೃತ್ಯ ಧನ್ಯನ ಮಾಡಿ ಸಲಹೋ ಸ್ವಾಮಿ ಪಪುಟ್ಟಿದಾರಭ್ಯ ನಿನ್ನ | ನಾಮವ ಒಂದು |ತೃಟಿಯು ಭಜಿಸಲಿಲ್ಲವೋ |ವಿಠ್ಠಲರಾಯ ಪರಮೇಷ್ಟಿಯ ಪಿತ ಎನ್ನಕಷ್ಟಗಳಳಿದು ಸಲಹೋ ಸರ್ವೋತ್ಕøಷ್ಟ ||ಕೃಷ್ಣ ಕೃಷ್ಣಾವರದ ಅಜಮಿಳಭ್ರಷ್ಟತನವ ಎಣಿಸದೇ ಬಹುನಿಷ್ಟವಿಪ್ರಸುಧಾಮಗೊಲಿದತ್ರಿಧಾಮ ನಮೋ ಮಧ್ವೇಷ್ಟಪಾಹಿ1ಸೇತು ಸರ್ವಾಶ್ರಯನೇ | ನೀನೊಬ್ಬನೇ |ಮುಕ್ತಾ ಮುಕ್ತಾಶ್ರಯನು |ತ್ರಾತನೀನೇವೆ ಯೆಂದರಿತವರ ಭೀತಿಹರಪಾತ ಸರ್ವೋತ್ತಮ ಜಗದೇಕ ಈಶದ್ಯುಧರಾ ಪಾತಾಳ ಸರ್ವಾಧಾರನಾಗಿಹಪ್ರಭುವೇ ನಿನ್ನಯ ಅತಿ ಅಗಾಧಸುಮಹಿಮೆ ಅನಂತವು |ಮೋದಮಯ ದಶಶತಸಹಸ್ರಾನಂತರೂಪನೇ ||2ಹೀನಮಂದನು ನಾನೆಂದು | ದೂರನೀ ||ಎನ್ನ ಮಾಡದೇ ಸಲಹೋ |ಎನ್ನ ಹಿರಿಯರು ನಿನ್ನಚ್ಛನ್ನ ಭಕ್ತರೋಘನದಯಾಂಬುಧೇ ಗಂಗಾಜನಕ ಪಾವನ ನಾಮಾ |ಮನೋವಾಕ್ಕಾಯದಿ ನಿಂತು ಎನ್ನೊಳುನೀನೆ ಮಾಡಿ ಮಾಡಿಸುವುದೆಲ್ಲನಿನಗೆ ಸುಪ್ರೀತಿಯಾಗಲೋ ಮುಕ್ -ಕಣ್ಣ ವಿಧಿಪ ಶ್ರೀ ಪ್ರಸನ್ನ ಶ್ರೀನಿವಾಸ ಶ್ರೀಶ || 3
--------------
ಪ್ರಸನ್ನ ಶ್ರೀನಿವಾಸದಾಸರು
ದೇವರನ್ನು ಹಸೆಗೆ ಕರೆದ ಪದಗಳುವೇದ ಉದ್ಧರಿಸೀದಾ ಮತ್ಸ್ಯಾವತಾರನೇ |ಆದಿತ್ಯಾರಿಗೊಲಿದಮೃತ ನೀಡಿದನೇ ||ಮೇದಿನಿಯನು ಪೊತ್ತ ವರಹವತಾರನೆ |ಆ ದೈತ್ಯನಳಿದು ಪ್ರಹ್ಲಾದಗೊಲಿದನೇ ||ಭೂ ದೇವಾ ರೂಪೀ ಹಸಿಗೇಳೂ 1ಭೃಗು ಕುಲೋದ್ಭವನೇ ಭೀಷ್ಮನ ಬೆಳಸಿದನೇ |ನಗಜ ರಮಣನ ಕಾರ್ಮೂಕ ಮುರಿದವನೇ ||ಹಗೆಯನಳಿದು ಪಾಂಚಜನ್ಯ ಘಳಿಸಿದನೆ |ಇಗಡ ದೈತ್ಯರ ಬುದ್ಧಿ ಭೇದ ಮಾಡಿದನೇ ||ಅಗಣಿತಮಹಿಮಾ ಹಸಿಗೇಳೂ 2ಕುದರೀಯೇರಿ ಕುಜನರಾ ಕುಲ ತರಿದವನೇ |ಬುಧರಗೋಸುಗ ಹತ್ತಾವತಾರವಾದವನೇ ||ಸುದರೂಶನ ಶಂಖ ಗದ ಜಲಜ ಧರನೇ |ವಿಧಿಪಿತಶ್ರೀ ರಮಣ ಪ್ರಾಣೇಶ ವಿಠ್ಠಲನೆ ||ಸುಧಿಗಡಲಾಲಯನೆ ಹಸಿಗೇಳೂ 3
--------------
ಪ್ರಾಣೇಶದಾಸರು
ದೇವವರಗೆ ಹಾರ ನೀಡಿದೆÀ ಪಗೋವರ ಮನಿ ಮಹಾದೈವನಾದವಗೆ ಅಪವೇದಚೊರನ ಕೊಂದ ಶೂರಗೆಭಾರಮೇದಿನಿತಂದಿಹ ವೀರಗೆ ಮಹಬೋಧರ ವರಫೋರರೂಪನಾದವಗೆ 1ತಿರುಕರೂಪಗೆಪರಶುಧರವನಚರಗೆಖರಾಸುರ ವೈರಿಗೆ ಕಂಸಮರ್ದನಗೆ 2ನೀತಸತಿವ್ರತ ಹಾರಗೆಖಳಜಾತಿ ಜನರ ಸಂಹಾರಗೆಖ್ಯಾತ ಗುರುಜಗನ್ನಾಥ ವಿಠಲಗೆ 3
--------------
ಗುರುಜಗನ್ನಾಥದಾಸರು
ದೇಹವೇಕೆ ನಮಗೆ ದೇಹ - ದೇಹ ಸಂಬಂಧಗಳೇಕೆ |ಆಹುದೇನೊ ಹೋಹುದೆನೊ ಇದರಿಂದ ಹರಿಯೆ ಪ.ಮೆಚ್ಚಿ ಕಟ್ಟಿದ ಚೆಲುವ ಮಾಳಿಗೆ ಮನೆ ಏಕೆ |ಮುಚ್ಚಿ ಹೂಳಿದ ಹೊನ್ನು ಹಣವೇತಕೆ |ಪಚ್ಚೆ ಮಾಣಿಕವಜ್ರ ವೈಡೂರ್ಯವೇತಕೆ |ಅಚ್ಯುತನ ದಾಸರಲಿ ಭಕ್ತಿ ಇಲ್ಲದ ಬಳಿಕ 1ಹೆಂಡಿರು ಮಕ್ಕಳು ಏಕೆ - ಹಣ ಹೊನ್ನು ಎನಲೇಕೆ |ಕಂಡ ವೇದ ಶಾಸ್ತ್ರಗಳನೋದಲೇಕೆ - ಭೂ ||ಮಂಡಲಾಧಿಪತ್ಯವೇಕೆ - ಮೇಲೆ ಸೌಂದರ್ಯವೇಕೆ |ಪುಂಡರೀಕಾಕ್ಷನ ದಾಸನಲಿ ಭಕ್ತಿಯಿಲ್ಲದ ಬಳಿಕ 2ಮಂದಾಕಿನಿ ಮೊದಲಾದ ತೀರ್ಥಯಾತ್ರೆಗಳೇಕೆ |ಚೆಂದುಳ್ಳ ವಿಹಿತ ಕರ್ಮಗಳೇತಕೆ |ಇಂದಿರೇಶ ನಮ್ಮ ಪುರಂದರವಿಠಲನ |ಪೊಂದಿ ಭಜಿಸಿದವನ ಇಂದ್ರಿಯಂಗಳೇಕೆ 3
--------------
ಪುರಂದರದಾಸರು
ದೋಷ ಎಣಿಸದೆ ಕಾಯೊ ಜೀಯಾ ಪಕಂಡ ಕಂಡವರ ಭಜಿಸೀ -ಬೇಡಿತೋಂಡವತ್ಸಲ ಕರುಣೆ ಸಲಿಸೀಪಾದಪುಂಡರೀಕ್ಯನ್ನೊಳಗೆ ಇರಿಸಿಕಾಯೋ 1ಮಾqಬಾರದ ಕೃತ್ಯವಾ - ನಾ ಬಲುಮಾಡಿದೆಗೃಹಕೃತ್ಯವಾಬೇಡದಕಿ ಭೃತ್ಯತ್ವವಾ - ಈ ದೋಷನೋಡದಲೆ ಭಕ್ತತ್ವವಾ ನೀಡೊ 2ದೀನ ಜನಪಾಲ ನಿನ್ನಾ-ರೂಪಧ್ಯಾನ ಮಾಡಿದೆ ಬಿಡದೆ ಘನ್ನಾ-ಗತಿಎನು ಪೇಳಯ್ಯಾ ಎನಗೆ ಮುನ್ನಾ ಸ್ವಾಮಿ 3ಗುರುರಾಘವೇಂದ್ರರಾಯ - ಎನ್ನಶರಣು ಪೊಕ್ಕೆನೊ ನಿನಗೆ ನಾನಯ್ಯಾ ಕರುಣೀ 4ಮಾತ ಪಿತ ಭ್ರಾತ್ರÀ ಬಂಧೂ - ಎನಗೆದಾತನಿನ್ನ ದೂತನೆಂದೂ- ಬಂದ-ನಾಥನನು ನೀ ಕಾಯುವುದು ಪ್ರಭುವೇ 5ಕರುಣಸಾಗರನೆ ಈಗ - ತವರೂಪಶರಣು ಪೊಕ್ಕವನ ವೇಗಾ-ಭವ-ಅರಣ ದಾಟಿಸುವಂಥ ಯೋಗಾ ಪೇಳಿ 6ಹೋಗುತಿದೆ ಹೊತ್ತು ಪದುಮಾಕ್ಷ -ಹ್ಯಾಗೆಆಗುವದೊ ನಿನ್ನಅಪರೋಕ್ಷಜಾಗುಮಾಡದೆಸಲಿಸ್ಯನ್ನಪೇಕ್ಷಾ ಸ್ವಾಮಿ7ಪಾರದೋಷಗಳನ್ನೆ ತಾಳೋಘೋರಅಙ್ಞÕನ ಕೀಳೋ- ಪರಲೋಕಸೇರಿಸೆನ್ನನು ಕೃಪಾಳೋ ಸ್ವಾಮಿ 8ಎಷ್ಟು ಪೇಳಲಿ ಎನ್ನ ತಾತಾ - ಕೃಪಾ -ದೃಷ್ಟಿಯಲಿನೋಡುನಾನಿನ್ನ ಪೋತಾಧಿಟ್ಟ ನೀಗುರುಜಗನ್ನಾಥಾ- ವಿಠಲನನಿನ್ನೊಳಗೆ ತೋರೋದಾತಾಖ್ಯಾತಾ9
--------------
ಗುರುಜಗನ್ನಾಥದಾಸರು
ದ್ರೌಪದಿ ಕೃಷ್ಣಾ ಪಾಂಚಾಲಿ | ದೇವಿ |ಗೋಪತಿಧ್ವಜವಂದ್ಯೆಕಾಳಿ | ಆಹಾ |ಪಾಪಗಳೆಣಿಸದೆಲೇ ಪುನೀತನ | ಮಾಡೆ |ಶ್ರೀ ಪವನನ ಕರುಣಾಪಾತ್ರೆ ಸುಚರಿತ್ರೆ ಪವಾಣಿ ಭಕ್ತಿಗೆ ಅಭಿಮಾನಿ | ತಾಯಿನೀನೆ ಗತಿಯೆಲೆ ಸುಶ್ರೋಣಿ | ಶ್ರೀಶಧ್ಯಾನವ ಮಾಡಲು ಮನ ಪೋಣಿಸುವ |ದೇನನೊಲ್ಲೆನು ಪೂರ್ಣಜ್ಞಾನಿ| ಆಹಾ ||ದೀನ ರಕ್ಷಕೆ ಮಿಕ್ಕ ಹೀನ ದೇವರಪಾದ|ಕ್ಕೆ ನಮಿಸುವ ಮತಿಯನೆಂದು ಕೊಡದಿರೆ 1ಶಾರದೆ ಹರಿಯ ಕುಮಾರಿ | ನಿನ್ನ |ಸಾರಿದೆ ಕುಜನ ಕುಠಾರಿ | ದಯಾ |ವಾರಿಧೆ ಸುಜನೋಪಕಾರಿ | ತೋರೆ |ಸಾರೆಗರಿದು ಮುಕ್ತಿ ದಾರಿ | ಆಹಾ ||ಶ್ರೀ ರಮಣ್ಯುಳಿದೆಲ್ಲ ನಾರೀ ಶಿರೋಮಣಿ |ಆರಾಧಿಸುವೆ ಯೆನ್ನ ದೂರ ನೋಡಲು ಬೇಡ 2ಹಲವರಿಗೆಲ್ಲ ಬಾಯ್ದೆರೆದು | ಬೇಡಿ |ಕೊಳುವದೇನದೆ ದಿನ ಬರಿದು | ಸಾಧು |ನೆಲೆಯದೋರರು ಹತ್ಯಾಗರೆದು | ಬುದ್ಧಿ |ಕಲಿಸೆ ಭಾರತಿಯೆನ್ನ ಮರೆದು | ಆಹಾ |ಇಳೆಯೊಳು ಶ್ರಮಪಡಿಸಲು ಸಲ್ಲ ದಿತಿಜರ |ನಳಿದ ಪ್ರಾಣೇಶ ವಿಠಲಗಚ್ಛಿನ್ನ ಭಕ್ತಳೆ 3
--------------
ಪ್ರಾಣೇಶದಾಸರು
ಧನವಗಳಿಸಬೇಕಿಂತಹದು - ಈಜನರಿಗೆ ಕಾಣಿಸದಂತಹದು ಪ.ಕೊಟ್ಟರೆ ತೀರದಂತಹದು - ತನ್ನಬಿಟ್ಟು ಅಗಲಿ ಇರದಂತಹದುಕಟ್ಟಿದ ಗಂಟನು ಬಯಲೊಳಗಿಟ್ಟರೆಮುಟ್ಟರು ಆರು ಅಂತಹದು 1ಕರ್ಮವ ನೋಡಿಸುವಂತಹದುಧರ್ಮವ ಮಾಡಿಸುವಂತಹದುನಿರ್ಮಲವಾಗಿದೆ ಮನಸಿನೊಳಗೆ ನಿಜಧರ್ಮವ ತೋರಿಸುವಂತಹದು 2ಅಜ್ಞಾನವು ಬಾರದಂತಹದು - ನಿಜಸುಜ್ಞಾನವ ತೋರುವಂತಹದುವಿಜಾÕನಮೂರ್ತಿ ಪುರಂದರವಿಠಲನಪ್ರಜೆÕಯನ್ನು ಕೊಡುವಂತಹದು 3
--------------
ಪುರಂದರದಾಸರು
ಧರಣಿಗೆ ದೊರೆಯೆಂದು ನಂಬಿದೆ - ಇಂಥ - |ಪರಮಲೋಭಿಯೆಂದು ಅರಿಯೆ ಶ್ರೀ ಹರಿಯೆ ಪಕಾಡಿಬೇಡುವರಿಗೆ ಕೊಡಲಾರದೆ ಅಂಜಿ |ಓಡಿ ನೀರೊಳು ಸೇರಿಕೊಂಡೆ ಬೇಗ ||ಹೇಡಿಯ ತೆರದಲಿ ಮೋರೆಯ ತೋರದೆ |ಓಡಿ ಅರಣ್ಯದಿ ಮೃಗಗಳ ಸೇರಿದೆ 1ಬಡವರಬಿನ್ನಪ ಲಾಲಿಸದಲೆ ಹಲ್ಲ |ಕಡುಕೋಪದಲಿ ತೆರೆದಂಜಿಸಿದೆ ||ತಡೆಯದೆ ಭಿಕ್ಷುಕನಾದರು ಬಿಡರೆಂದು |ಕೊಡಲಿಯ ಪಿಡಿದುಕೋಡಗ ಹಿಂಡ ಕಾಯ್ದೆಯೊ2ಉತ್ತಮನೆಂದರೆ ಮತ್ತೆ ಚೋರನಾದೆ |ಬತ್ತಲೆ ನಿಂತು ತೇಜಿಯನೇರಿದೆ |ಎತ್ತಪೋದರು ಬಿಡೆ ಬಿಡೆ ನಿನ್ನ ಪಾದವ |ಚಿತ್ತಜ ಜನಕ ಶ್ರೀ ಪುರಂದರವಿಠಲನೆ3
--------------
ಪುರಂದರದಾಸರು
ಧರಣಿಯಈರಡಿಮಾಡಿದನ | ಭೂ |ಸುರರಿಗೆ ದಾನವ ನೀಡಿದನೆ ||ನೆರೆದು ಕಪಿಹಿಂಡು ಕೂಡಿದನೆ |ಫಣಿ |ಶಿರದಲ್ಲಿ ಕುಣಿ ಕುಣಿದಾಡಿದನಕ್ಕ 2ಉಟ್ಟದ್ದು ಬಿಟ್ಟು ತಾ ನಿಂತಿಹನೆ | ರಂಗ |ದಿಟ್ಟಾದ ಕುದುರೆಯನೇರಿದನೆ ||ದುಷ್ಟರನೆಲ್ಲ ಅಳಿದಿಹನೆ | ನಮ್ಮ |ಬಿಟ್ಟಾದಿ ಪುರಂದರವಿಠಲ ಕಾಣಕ್ಕ
--------------
ಪುರಂದರದಾಸರು
ಧರೆಯದಾನವ ಬೇಡಿ ನೆಲವ ಮೂರಡಿ ಮಾಡಿಪರಶುವಿಡಿದು ಕ್ಷತ್ರಿಯರ ಸವರಿಚಿತ್ತಜಕೋಟಿಲಾವಣ್ಯ ಮುಪ್ಪುರದೊಳುಉತ್ತಮ ಸ್ತ್ರೀಯರ ವ್ರತವಳಿದೆಮತ್ತೆ ಕಲ್ಕಿಯಾದೆ ಮಲೆತರ ಮಡುಹಿದೆಉತ್ತಮ ಶ್ರೀರಾಮನೆಂದು ಸ್ತುತಿಸಿದೆನಲ್ಲದೆ.ಬತ್ತಲೆನಿಂತªನೆಂದೆನೆ ತೇಜಿಯನೇರಿಒತ್ತಿಬಾಹವನೆಂದೆನೆ ಬಾರಿಬಾರಿಗೆಸತ್ತುಹುಟ್ಟುವನೆಂದೆನೆಪುರಂದರವಿಠಲಹತ್ತವತಾರದ ಹರಿಯೆಂದೆನಲ್ಲದೆ
--------------
ಪುರಂದರದಾಸರು