ರಾಮ ರಮಾರಮ ರಾಮ ಶ್ರೀರಾಮ ಪ ರಾಮ ಸೀತಾರಾಮ ರಾಮ ಜಯರಾಮ ಅ.ಪ. ಶ್ರೀ ರಘುವಂಶ ಲಲಾಮನೆ ರಾಮ ತಾರಕ ಮಂಗಳ ರಾಮನೆ ರಾಮ ನೀರದ ನಿರ್ಮಲ ಶ್ಯಾಮನೆ ರಾಮ ಸಾರಸಲೋಚನ ಸೌಮ್ಯನೆ ರಾಮ 1 ಕೌಸಲ್ಯದೇವಿ ಕುಮಾರಕ ರಾಮ ಕೋಸಲ ದೇಶಾನಂದಕ ರಾಮ ಆಸುರೀ ತಾಟಕ ಶಿಕ್ಷಕ ರಾಮ ಕೌಶಿಕ ಯಜ್ಞ ಸಂರಕ್ಷಕ ರಾಮ 2 ಮುನಿಪತಿ ಶಾಪ ವಿಮೋಚಕ ರಾಮ ಕಾರ್ಮುಕ ಭಂಜಕ ರಾಮ ಜನಕ ಸುತಾನಂದ ವರ್ಧಕ ರಾಮ ಅನುಪಮ ಲೀಲಾದ್ಯೋತಕ ರಾಮ 3 ಸತ್ಯಪರಾಕ್ರಮ ಸಾತ್ವಿಕ ರಾಮ ಪಿತೃವಾಕ್ಯ ಪರಿಪಾಲಕ ರಾಮ ಉತ್ತಮ ಚರಿತಾದರ್ಶಕ ರಾಮ ಚಿತ್ರಕೂಟಾದ್ರಿ ನಿವಾಸಕ ರಾಮ 4 ಕಾಕುತ್ಥವಂಶ ಸುಧಾರಕ ರಾಮ ಲೋಕೇಶ ಲೋಕ ಮನೋಹರ ರಾಮ ಶ್ರೀಕರಾಶ್ರಿತ ಜನ ಮಂದಾರ ರಾಮ ಶ್ರೀ ಕರಿಗಿರೀಶ ಸುಂದರ ರಾಮ 5
ರಾಯ ಕಳುಹಿದ ರಂಗ ರಾಯ ಕಳುಹಿದ ಪ್ರಿಯಭಾವೆ ರುಕ್ಮಿಣಿಯರಪ್ರೇಮಭಾಳೆ ನಿಮ್ಮ ಮ್ಯಾಲೆ ಪ. ಕೇಳೋರಾಯ ನಿಮ್ಮ ಮ್ಯಾಲಿ ಬಹಳ ಪ್ರೇಮಕೃಷ್ಣರಾಯ ಹೇಳಲ್ಪಶವೆಮುಯ್ಯ ತಂದು ಏಳು ದ್ವಾರ ದಾಟಿ ಬಂದು1 ಚಂಚಲಾಕ್ಷಿ ಅರಸಿಯರು ನಿಮಗೆ ಪಂಚಪ್ರಾಣ ಕೃಷ್ಣರಾಯ ಕೆಂಚಿ ರುಕ್ಮಿಣಿಮುಯ್ಯ ತಂದುಮುಂಚಿ ಬಾಗಿಲಮನೆಯೊಳು ಇಳಿದರು 2 ಕುಂತಿದೇವಿಯರ ಅರಮನೆಗೆ ಚಿಂತಾಮಣಿಯ ತಾನೆ ಬಂದ ಎಂಥ ಸುಕೃತರಾಯ ನಿಮ್ಮಇಂಥ ಭಾಗ್ಯ ಎಲ್ಲಿ ಕಾಣೆ 3 ಸುದ್ದಿ ಕೇಳಿ ಧರ್ಮರಾಯ ಗದ್ಗದಿ ನುಡಿಯನೆ ನುಡಿದಾನಮುದ್ದು ಮುಖವ ನೋಡಿಪಾದಕೆ ಬಿದ್ದು ಧನ್ಯರಾದೆವಮ್ಮ 4 ಅಂದ ಮಾತು ಕೇಳಿರಾಯ ನಂದ ಬಟ್ಟು ನಂದ ಭಾಷ್ಪಬಿಂದು ಉದುರಿ ಬಿಗಿದು ಕಂಠಛಂದದಿ ರೋಮಗಳು ಉಬ್ಬಿ 5 ಇಂದು ಭದ್ರೆ ದ್ರೌಪತಿಗೆ ತಂದರಮ್ಮ ರುಕ್ಮಿಣಿ ಮುಯ್ಯಆನಂದದಿಂದ ಭಾವೆ ಕೃಷ್ಣಇಂದು ನಿಮ್ಮ ಅರಮನೆಗೆ 6 ಎಷ್ಟು ಸುಕೃತರಾಯ ನಿಮ್ಮ ಧಿಟ್ಟ ರಾಮೇಶತಾನೆ ಬಂದ ಅಷ್ಟ ಸೌಭಾಗ್ಯದ ಮುಯ್ಯ ಶ್ರೇಷ್ಠ ತೋರೋದಮ್ಮ ಸಭೆಯು 7