ಒಟ್ಟು 36191 ಕಡೆಗಳಲ್ಲಿ , 138 ದಾಸರು , 9678 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಗಲಿರಲಾರೆನೊ ಹರಿಯೆ ನಿನ್ನನು ಪ ಹಗಲು ಇರಳು ಸಮ್ಮೊಗದಲಿರುತಿಹ ಮಿಗೆ ಭಾಗ್ಯವ ಕೊಡೊ ನಗೆಮೊಗದರಸನೆ ಅ.ಪ. ಅನುದಿನ ನಿನ್ನಯ ಚರಣ ವನಜಕೆ ಮಣಿಯುವುದೆನಗಾಭರಣ ಅನಿಮಿಷರೊಡೆಯನೆ ಅನಿಮಿತ್ತ ಬಂಧುವೆ ಪ್ರಣತ ಜನ ಮಂದಾರ ಮುಕುಂದನೇ 1 ಮಾರ ಜನಕ ಎನ್ನ ಕರುಣದ ಪಾರ ಪ್ರಭುವರೇಣ್ಯ ಸಾರಸನಯನ ಉದಾರ ಹೃದಯ ಗಂ ಭೀರ ಗುಣಾಂಬುಧಿ ಸಾರಸನಾಭನೇ 2 ಮಂಗಳಾಂಗ ಹರಿಯೇ- ತವಪದ ಭೃಂಗನೆನಿಸೊ ದೊರೆಯೆ ರಥಾಂಗ ಪಾಣಿ ಭವ ಭಂಗ ಕರಿಗಿರಿ ನೃಸಿಂಗ ಶುಭಾಂಗನೆ 3
--------------
ವರಾವಾಣಿರಾಮರಾಯದಾಸರು
ಅಂಗವ ಶಿಂಗರಿಸೊ ಶ್ರೀ ರಾಮಗೆ ಪ. ರಥವೆಂದು ಮಂಗಳ ಮಹಿಮನ ಉಂಗುಟದಿಂದ ಬಂದ ಗಂಗೆಯ ಸ್ನಾನದಿ ಹಿಂಗಿಸು ಭವವೆಂದು ಅ.ಪ. ಗಂಗಾಜನಕನ ಸ್ಮರಿಸುತ ನಿನ್ನ ಅಂಗವನುಜ್ಜಿ ಕಲಿಮಲ ತೊಳೆದು ಭಂಗ ತರದ ಪರಿ ರಂಗುರಂಗುಗಳ್ವಸ್ತ್ರ ರಂಗಗೆ ಪೀತಾಂಬರವೆಂದು 1 ಗೋಪೀ ಚಂದನ ಲೇಪಿಸುತಂಗಕೆ ಶ್ರೀಪ ವಲಿವನೆಂದ್ಹರುಷದೊಳು ಧೂಪಾರತಿ ಅಂಗಾರದಕ್ಷತೆ ಸೊಬಗ ಶ್ರೀಪತಿ ನೋಟಕೆ ಭೂಪನಾಗಿಹೆನೆಂಧು 2 ಮಂಗಳದನ್ನ ವೀಳ್ಯವ ಮೆದ್ದು ತನ್ನ ಅಂಗನೆಯೊಳು ಅನಂಗಜನಕನ ರಂಗನಲೀಲೆಯಂದದಿ ಹರುಷಿಸೀ ಇಂಥಾ 3
--------------
ಸರಸ್ವತಿ ಬಾಯಿ
ಅಘಟಿತ ಘಟನಾತ್ಮ ಶಕ್ತಿಯ ನಂಬಿದ ರಘುಕುಲವೇನಿರದು ಮಗುವನು ಮಾತೆ ಮಮತೆಯಿಂದ ಪೊರೆವಂತೆ ನಗುತ ರಕ್ಷಿಪ ಬಿರಿದು ಪ. ಶಕ್ರನ ಸಲಹ ಬೇಕೆಂದು ವಾಮನವಾಗಿ ಶುಕ್ರ ಶಿಷ್ಯನ ಯಜ್ಞದಿ ವಕ್ರಮತಿಯ ದಾನವರನೆಲ್ಲ ಸದೆದ ತ್ರಿವಿಕ್ರಮಾಹ್ವಯನೀವನು ಚಕ್ರ ಶಂಕ ಖಡ್ಗ ಗದೆಯ ಧರಿಸಿ ರಿಪು ಚಕ್ರ ಕತ್ತರಿಸುವನು 1 ಪಂಚಪಂಚದ ಮೇಲಿನ್ನೆರಡು ವರುಷ ವನ ಸಂಚರಿಸಿದ ಬಳಿಕ ಪಂಚ ಪಾಂಡವರಿಗೆ ಪಂಚಗ್ರಾಮವನೀವ ಹಂಚಿಕೆ ಸರಿಯೆನುತ ಪಂಚಪಾತಕಿ ಕೌರವೇಂದ್ರನ ಸಭೆಯಲಿ ಪಂಚಾಯಿತನಾಗುತ ವಂಚಿಸಿ ಭಾವಿ ವಿರಿಂಚಗೆ ಸಕಲ ಪ್ರಪಂಚಾಧಿಪತ್ಯವಿತ್ತ 2 ಅನುಗಾಲ ನಿಜಪಾದ ವನಜವೆ ಗತಿಯೆಂಬ ಜನರ ಮನೋರಥವ ಮನಸಿಜಪಿತ ತಾನೆ ನೆನೆಸಿಕೊಂಡಿವುದಕನುಮಾನಿಸನು ಸತತ ಸನಕಾದಿ ವಂದ್ಯ ಶೇಷಾದ್ರಿ ಶಿಖರವಾಸ ಮನೆಗಧಿಪತಿಯೆನುತ ಮನ ವಚನಗಳಿಂದ ಮಾಧವಗರ್ಪಿಸಲನುಕೂಲಿಸುವ ನಗುತ 3
--------------
ತುಪಾಕಿ ವೆಂಕಟರಮಣಾಚಾರ್ಯ
ಅಂಚಿತ ವಿಕ್ರಮನೆ ಪ ಪೊರೆಯೊಯೆನ್ನ ಅ.ಪ ದುಷ್ಟರೊಳಗೆ ಸೇರಿಕೊಂಡು ಭ್ರಷ್ಟ ಮಾಡುತಿಹರೈ ಶ್ರೇಷ್ಠನು ನಾನೆಂಬಜ್ಞಾನವ ಕೊಟ್ಟು ಕೆಡಿಸುವರೈ 1 ಹಾಸ್ಯಗಾರರಾಟ ನಿಲಿಸು ನೀ ಸಲಹಬೇಕು ಎನ್ನಗುರುವೆ 2 ತಂದೆರಾಮಚಂದ್ರಗಾಗಿ ಮಂದಮತಿ ರಾವಣನ ಮಂದಿ ಎಲ್ಲವನ್ನು ಕೊಂದು ದಂದುಗಾವ ಬಿಡಿಸಿದೆ 3 ಪಾತಕ ದಶಕಂಠನ ಭೂತಗಳ ಪಾಲು ಮಾಡಿಸಿ ಖ್ಯಾತಿಯನ್ನು ಪಡೆದೆ ನೀಂ 4 ಗುರುರಾಮ ವಿಠಲಗೆ ಪರಮಾಪ್ತ ಹನುಮಂತ 5
--------------
ಗುರುರಾಮವಿಠಲ
ಅಚ್ಯುತ ಅಡಿಗಡಿ ಗೆಚ್ಚರಿಕ್ಹೇಳುತಾನೋ ಪ ಮೆಚ್ಚಿ ಬಿಡದೆ ಎನಗೆಚ್ಚರಿಕ್ಹೇಳುತಾನೋ ಹುಚ್ಚರಾಗಿ ಇಹ್ಯಮೆಚ್ಚಲು ಮುಂದೆಮ ಕಿಚ್ಚುಕಾಣೆನುತಾನೋಅ.ಪ ನಿಂದೆ ಬಿಡೆನ್ನುತಾನೋ ಜಗವಿದು ಕುಂದುವುದೆನುತಾನೋ ನಿನಗಿದು ಒಂದು ಇಲ್ಲೆನುತಾನೋ ಬಂದದ್ದು ತಿಳೀದಿರೆ ಮುಂದೆ ನಿನಗೆ ಭವಬಂಧ ಬಿಡದೆನುತಾನೋ 1 ನಿಶ್ಚಲಾಗೆನ್ನುತಾನೋ ಮನ ಬಹು ಸ್ವಚ್ಛಮಾಡೆನ್ನುತಾನೋ ತನು ಮುಚ್ಚಿ ಭಜಿಸೆನ್ನುತಾನೋ ಬಚ್ಚಿಟ್ಟು ಭಜಿಸಲು ಇಚ್ಛೆಯಂತಿರ್ದು ನಿನ್ನ ಮೆಚ್ಚಿಕೊಂಬೆನ್ನುತಾನೋ 2 ಮರೆವು ತಾರೆನುತಾನೊ ನಿಚ್ಚವಾ ದರಿವು ತಿಳಿಯೆನುತಾನೋ ಅರಿವಿನ ಕುರಹು ಕಾಣೆನುತಾನೋ ಪರಮ ಶ್ರೀರಾಮನ ತರಣಿ ಕಂಡು ಹರಷದ್ಹಾಡೆನುತಾನೋ 3
--------------
ರಾಮದಾಸರು
ಅಚ್ಯುತನ ಧ್ಯಾನದೊಳಿರಿ ಅನುದಿನದಿ ಪ ಗುಚ್ಚರಿಸುವೆ ಕಲಿಯ ತುಚ್ಛ ದುರ್ಗುಣಗಳ ಅ.ಪ ನಿತ್ಯ ಕರ್ಮಕೆ ಕ್ಷುಧೆಯು ತಾ ಬಾಧಿಸುತಿಹುದು 1 ವೊಲಿದಂತೆ ನಡೆದು ನಿಜ ಸುಖದಾಸೆಯಿಲ್ಲ 2 ಸಾರ ವರಿತ ಮಹಾತ್ಮರ ಸಂಸರ್ಗವಿಲ್ಲ 3 ನೀತಿ ಪೇಳ್ವರಿಗೆ ಘಾತಕವೆಣಿಸುವುದು 4 ಪರ ಗತಿಯ ಸಾಧನೆಗಳೀ ಕಾಲದೊಳಿಲ್ಲ 5 ಸಾರ ನರಿಯದವನೆ ಪಿತೃಗಳಿಗೆ ವಿರೋಧ 6 ದ್ಗುರುವನ್ನು ಸೇರಿದಡವನೆ ನಿರ್ದೋಷ 7 ಕೃತ್ಯದಿ ನಡೆಯಲವಗಹುದು ಇಷ್ಟಾರ್ಥ 8 ಶ್ರೀ ಗುರುದೇವ ಸದಾನಂದಮಯನು 9
--------------
ಸದಾನಂದರು
ಅಚ್ಯುತಾನಂತನೆ ನಿನ್ನ ನೆಚ್ಚಿಕೊಂಡಿಹೆನು ಇಚ್ಛಾರೂಪ ಸ್ವಚ್ಛಾಭೂಪ ಸ್ವೇಚ್ಛೋಪಾತ್ತ ಸಗುಣ ರೂಪ ಪ. ನಾಮತ್ರಯ ಮಂತ್ರ ಜಪಿಸಿ ಸೋಮಧರನು ತಾನು ಆ ಮಹಾ ಹಲಾಹಲವನು ನೇಮದಿಂದ ಜಯಿಸಿರುವನು ಕಾಮಚಾರ ಕುಮತಿ ಮನುಜರಾ ಮಾಯಾದಿಗಳನು ಶ್ರೀಮಹೀಶ ಸಿಂಧುವಾಸ ನೀ ಮನ್ನಿಸಲು ನಿಲುವದೇನು 1 ನಗಧರ ನಿನ್ನಂಘ್ರಿಕಮಲಯುಗಳ ಒಂದೆ ಸಾಕು ಎನಗೆ ತ್ರಿಗುಣ ವಿಷಯವಾದ ಸರ್ವ ನಿಗಮಕರ್ಮವ್ಯಾಕೊ ಅಗಣಿತಾತ್ಮ ಅಮೃತಾಂಧಸರ ಮಗುವಿನಂತೆ ಪೊರೆವಿ ನಗುತಲೆನ್ನ ನೀ ಕಾಯ್ದದಕೆ ಪೊಗಳಲು ನಾ ಶಕ್ತನಹುದೆ 2 ಪೋರ ಕೆಟ್ಟುಹೋದನೆಂದು ಊರಜನರು ನುಡಿದಾ ಕ್ರೂರ ಮಾತ ಕೇಳಿ ತಾಳಲಾರದೆ ನಾ ಬಂದು ವಾರಿಜಾಕ್ಷ ನಿನ್ನ ಪದಕೆ ದೂರ ಪೇಳಲಂದು ಶ್ರೀರಮಣಿಯ ಸಹಿತಲೆನಗಾಧಾರವಾದಿ ದೀನಬಂಧು 3 ಇಂದ್ರಿಯಂಗಳೆನ್ನ ವಿಷಯಬಂಧದಿಂದ ಬಿಡಲು ಒಂದು ಕರ್ಮದಲು ಸಾಂಗದಿಂದಲೆನಗೆ ನಿಲಲು ಇಂದಿರೇಶ ಈ ಕಾರಣದಿ ಕುಂದಮನಕೆ ತಾರದಿರೊ ತಂದೆ ನೀನೆ ಶರಣನೆಂದು ಹೊಂದಿರುವದನೆಣಿಸಿ ಸಲಹೊ 4 ನಾಮಸ್ಮರಣವಿತ್ತು ಕಾಯಿ ಕಾಮಿತಾರ್ಥದಾಯಿ ನೇಮ ಒಂದು ನಡೆಸದಂಥ ಪಾಮರನಾಗಿಹೆನು ಸೋಮಧರನ ಶುದ್ಧಿಕರಿಸ ಭೂಮಿತೀರ್ಥ ಜನಕರಾಮಕೃಷ್ಣ ವೇದವ್ಯಾಸ ಸ್ವಾಮಿ ಶ್ರೀನಿವಾಸ 5
--------------
ತುಪಾಕಿ ವೆಂಕಟರಮಣಾಚಾರ್ಯ
ಅಚ್ಯುತಾನಂದ ಗೋವಿಂದ ಎಚ್ಚರಾಗಿರು ನಂಬಿದವರ ನೋಡನೆಂಬ ತುಚ್ಛನುಡಿಯ ಪಡೆಯದಿರು ಪ. ಪವನ ಮುಷ್ಟಿವೆಷ್ಟವಿಷವ ಶಿವನು ಗೆಲಲು ನಿನ್ನ ನಾಮ ಸ್ತವನಗೈದನೆಂದು ಮಂತ್ರ ಕವಿಗಳೆಂಬೊ ಕವನವೇನೊ 1 ಭರ್ಮಗರ್ಭಾದಿಗಳು ಪೇಳ್ದ ಕರ್ಮಕಾಂಡ ನೋಡೆ ದೇವ ಶರ್ಮ ವರದ ನಿನ್ನ ಸ್ಮರಣೆ ಮರ್ಮವೆಂದು ಒದರುತಿಹುದು 2 ಮೂರಾರು ಪುರಾಣ ಮಹಾ ಭಾರತಾದಿ ಕಾವ್ಯಾದಿಗಳ ಸಾರವರದು ನೋಡೆ ದೀನೋ- ದ್ಧಾರ ನೀನೆ ತೋರಿಕೊಂಬಿ 3 ಇಂಥನಂತಾನಂತ ಮಹಿಮ ವಂತ ನೀನೆ ಶರಣನೆಂದು ಚಿಂತಿಸುವರಾಜನರಿ- ಗಂತರಾಯವೆಂತಾಗುವುದು 4 ಚಂದನ ಮೂರುತಿಯ ನಂಬಿ ಕುಂದಿದನೆಂಬಪಕೀರುತಿಯ ಎಂದೆಂದಿಗು ವಹಿಸದಿರು ತಂದೆ ಲಕ್ಷ್ಮೀ ವೆಂಕಟೇಶ 5
--------------
ತುಪಾಕಿ ವೆಂಕಟರಮಣಾಚಾರ್ಯ
ಅಂಜನಾಸುತ ವರದ | ವಿಠಲ ಪೊರೆ ಇವನಾ ಪ ಕಂಜಜನಯ್ಯ ಹರಿ | ಸಂಜೆ ಚರಹರನೇ ಅ.ಪ. ಕರ್ಮ | ಮಾಡಿ ಮಾಡಿಸುತಾಮತಿರಹಿತ ಜೀವನಿಗೆ | ಫಲ ಎಂಬ ತೆರಮಾಳ್ವೆಕೃತುಭುಜನೆ ಈ ತರಳ | ನುದ್ಧಾರಗೈಯ್ಯೊ 1 ಆದ್ಯಂತರಹಿತ ಸ | ದ್ಬುದ್ಧಿಗಳ ಪ್ರೇರಕನೆಶ್ರ್ರದ್ಧಾಳು ಎನಿಸಿವನ | ಮಧ್ವಮತದಲ್ಲೀಪದ್ಧತಿಯ ಪ್ರಕಾರ | ಬದ್ದನಾಗಿಹದಾಸಶುದ್ಧ ದೀಕ್ಷೆಯಲಿವನ | ಉದ್ಧರಿಸೋ ದೇವ 2 ಉತ್ತಮಾಧಮರೆಂಬ | ತತ್ವ ತರತಮ ತಿಳಿಸಿಆರ್ಥಿಯಿಂದಿವನ ಭಾವ | ಉತ್ತರಿಸೊ ಹರಿಯೇ |ಕತೃ ಸರ್ವಕೆ ನೀನೆ | ಅತ್ಯಂತ್ಯ ಆಪ್ತ ತಮಮತ್ತೊಬ್ಬರಿಲ್ಲಿವಗೆ | ಸ್ತುತ್ಯ ಶ್ರೀಹರಿಯೇ 3 ಕಂಸಾರಿ ತವತಾಮಶಂಸನಕೆ ಎಡೆಗೊಟ್ಟು | ಸಲಹ ಬೇಕಿವನಾಅಂಶ ಅವತಾರಗಳ | ಶಂಸನದಿ ತವಪಾದಪಾಂಸುವನೆ ಭಜಿಪಂಥ | ಸನ್ಮತಿಯನೀಯೊ 4 ಸತ್ಸಂಗ ದೊರಕಿಸುತ | ಕುತ್ಸಿತರ ದೂರಗೈಮತ್ಸ್ಯಧ್ವಜ ಪಿತ ಶ್ರೀ | ವತ್ಸಲಾಂಛನನೇನಿತ್ಯ ತವ ಸಂಸ್ಮರಣೆ | ಇತ್ತುಪಾಲಿಪುದಿವನಚಿತ್ಸುಖಪ್ರದ ಗುರು | ಗೋವಿಂದ ವಿಠಲಾ 3
--------------
ಗುರುಗೋವಿಂದವಿಠಲರು
ಅಂಜಬ್ಯಾಡ ಬ್ಯಾಡೆಲೆ ಜಾಣಿ ಭವಭಂಜನ ಬಲರಾಮನ ಅಣಿ ಪ. ಕುಂಜರಗಮನೆ ಕಮಲಾಕ್ಷಿಕುಂಜರಗಮನೆ ಕಮಲಾಕ್ಷಿ ದ್ರೌಪದಿಅಂಜಬ್ಯಾಡ ಅಭಯಕೊಡತೇವ1 ಭಯವುಳ್ಳ ಬಾಲೆ ನೀ ಐವರಿಗೆ ಇಂತಿಪ್ಪೆಸೈವಲ್ಲದ ಮಾತು ಜಗಕಿದುಸೈವಲ್ಲದ ಮಾತು ಜಗಕಿದು ಈ ನಡೆತೆನಯವಲ್ಲವೆಂದು ನಗುತಾರೆ2 ಲೋಕದೊಳೊಬ್ಬಳಿಗೆ ಏಕಪತಿಯುಂಟುಏಕಕಾಲದೆ ಐವರ ಏಕಕಾಲದಲೆ ಐವರನ ಕೂಡೋದುನಾ ಕಾಣಿನೆಲ್ಲೂ ಕೌತುಕವ3 ಕೆಂಡವ ತುಂಬಿದ ಕುಂಡದಿ ಪುಟ್ಟಿದಿಕಂಡ ಜನಕೆಲ್ಲ ಭಯವಾದಿಕಂಡ ಜನಕೆಲ್ಲ ಭಯವಾದಿ ಭೀಮಸೇನನಿನ್ನ ಗಂಡ ಎಂಥ ಎದೆಗಾರ4 ಎಲ್ಲ ನಾರಿಯರೊಬ್ಬ ನಲ್ಲನಬೆರಿಯೆಬಲ್ಲಿದ ಭೂಪ ರೈವರುಬಲ್ಲಿದ ಭೂಪರೈವರ ನೊಲಿಸಿದಿಎಲ್ಲರಂತಲ್ಲ ಬಲುಧೀರೆ 5 ಪಲ್ಯಾದ ತುದಿಯಿಂದ ಎಲ್ಲ ಪದಾರ್ಥಮಾಡಿಬಲ್ಲಿದ ಮುನಿಗೆ ಉಣಿಸಿದಿಬಲ್ಲಿದ ಮುನಿಗೆ ಉಣಿಸಿದಿ ಇಂದ್ರÀಜಾಲಬಲ್ಲವಳಿಗಿಂಥ ಭಯವುಂಟೆ6 ಕೇಳ ದ್ರೌಪತಿ ರಾಜ್ಯವಾಳೊಗಂಡನ ಕೈಲೆಲಾಳಿ ತಕ್ಕೊಂಡ ಪರಿಯಂತೆಲಾಳಿ ತಕ್ಕೊಂಡ ಪರಿಯಂತೆ ಈ ನಡತೆಕೇಳಿದವರೆಲ್ಲ ನಗುತಾರೆ 7 ಅತ್ತೆಯ ಮಗ ನಿನ್ನ ಅತ್ಯಂತ ನಗೆನೋಡಿತಪ್ತವಾಗೊಮ್ಮೆ ತಿರುಗಿದತಪ್ತವಾಗೊಮ್ಮೆ ತಿರುಗಿದ ದ್ರೌಪತಿಮತ್ತಾರೆ ಬುದ್ಧಿ ಬರಲಿಲ್ಲ8 ಅರಸನ ಮಡದಿ ಒಬ್ಬ ಅರಸನ ಮನೆಯಲ್ಲಿನಿರುತ ದಾಸಿಯೆಂದು ಇರುತಲೆನಿರುತ ದಾಸಿಯೆಂದು ಇರುತಲೆ ಸೇವಿಸೋದುಈ ಸರಸ ರಮೇಶಗೆ ಹರುಷೇನ9
--------------
ಗಲಗಲಿಅವ್ವನವರು
ಅಜಭವಾದಿ ವಂದ್ಯ ಚರಣೇ | ತಾಯಿನಿಜ ಜನರ ಪೊರೆವ ಕರುಣೇ ಪ ರಜತಮನ ಕಳೆವ ಹೊಣೇ | ಅಜನಮ್ಮ ನಿನ್ನ ಹವಣೇ ಅ.ಪ. ದಿವಿಜ ಪತಿ | ಪದ್ಮ ಪದಹವ | ನುದ್ಭವ ಗೈ 1 ಗುಣ ಮೂರ ಮಾನಿನಿಯೆ | ಗುಣ ದೊರೆ ಅಂಭ್ರಣೀಯೆಗುಣ ಜಡವ ಕಳೆಯದಿರೆಯೆ | ಘನವೇನೆ ನಿನಗೆ ತಾಯೇ ||ವಾನರನು | ನಾನಾ ದುರ್ | ಯೋನಿಯಲಿ | ಜನೀಸಿಹೆಮಾನೀಸನು | ಧ್ಯಾನಿಲ್ಲವು | ಏನುಗತಿ | ನೀನೇ ಪೊರಿ 2 ಭವ ನೀ ಕಳೆರಮೆ 3 ಅವ್ಯಕ್ತಾಭಿಮಾನಿ ಕಾಯೋ ಭವ್ಯಮೂರ್ತಿ ಹರಿಯ ಜಾಯೇ |ತ್ರಯ್ಯ ಗೋಚರ ಶ್ರೀ ಹರಿಯೇ | ಗಮ್ಯನೆಂಬುದ ತೋರಿ ಪೊರೆಯೆಶ್ರೋತವ್ಯನ | ಮಂತವ್ಯನ | ಧ್ಯಾತವ್ಯನ | ಸ್ಮರ್ತವ್ಯನಅಗಮ್ಯನೆ | ಪೂಜ್ಯನನೆ | ಶ್ರೀ ಸ್ತವ್ಯನ | ತೋರಯ್ಯೆನ 4 ತಾಪ ಇಂದಿರೆ ಸಿರಿ ಸಿರಿ ಸಿರಿ ಸಿರಿ ಸಿರಿ ಸಿರಿ ಮಾಯೆ | ಶ್ರೀ ಪೊರೆಯೇ... 5
--------------
ಗುರುಗೋವಿಂದವಿಠಲರು
ಅಂಜಿಕೆಯಾಗುತಿದೆ ುದನೋಡಿ ಅಂಜಿಕೆಯಾಗುತಿದೆಮಂಜಿನಂದದ ಮಾಯೆ ರಂಜನೆಯಾಗಿ ರಂಜನನರಿಯದಿರೆ ಪಹುಸಿಯೆಂದು ಶ್ರುತಿ ಸಾರ್ದರೂ ತಾನೊಮ್ಮೆ ನಸಿಯದೆ ನಿಜದಂತಿರೆಹೊಸದು ಕಟ್ಟಿದ ಬಲೆ ಹೊದಿಸಿದಂದದಿ ಮತ್ತೂ ಹೊಸಹೊಸತಾಗಿರಲುಹಸಿವು ತೃಷೆಗಳೆಂಬಿವು ದಿನದಿನ ಹಸಗೆಡಿಸುತಲಿರಲುಕುಸುಮಬಾಣನ ಕಾಟ ಕುಸಿಯ ಮೆಟ್ಟಲು ಮನ ಮಸಿಯಾಗಿ ಮುದ್ರಿಸಲು 1 ಪೇಳ್ವದು ಪರತತ್ವವು ಬುದ್ದಿಯ ಬಾಳ್ವಿಕೆ ಬಹು ಬದ್ಧವುಕೋಳ್ವೋದ ಶೂರನ ಕಲಿತನದಂತಿದು ಕೀಳ್ವಾಯಕಿಳೀಯುತಿರೆಕೇಳ್ವರೆ ಮಾರ್ಗವನು ಜ್ಞಾನಿಯು ಕೋಳ್ವಿಡಿಯಲಿ ಬದ್ಧನುಹಾಳ್‍ವಾದದಲಿ ಹೊತ್ತು ಹೋಗುತ ನಿಜವಾಗಿ ಆಳ್ವನನರಿಯದಿರೆ 2 ಯೋಗಿಗಳ್‍ಕಾಣದಿರೆ ಕರ್ಮದ ರಾಗಿಗಳ್ ಕಾಳಾಗಿರೆಭೋಗಿಗಳೆಲ್ಲರು ಭಯದಲ್ಲಿ ಮುಳುಗಿರೆ ರೋಗಗಳ್ ಬಹುವಾಗಿರೆಸಾಗದೆ ಮಾರ್ಗವಿರೆ ಪುನರಪಿ ಪ್ರಾಗನೆ ಪಡೆಯುತಿರೆಹಾಗೆ ವಾಸನೆಯನ್ನು ಹೊದ್ದಿ ಮತ್ತತಿಶಯವಾಗಿಯೆ ವರಕೊಂಡಿರೆ 3ಧರ್ಮವ ಮಾಡದಿರೆ ಮನ ಪಾಪ ಕರ್ಮವ ಕೂಡುತಿರೆದುರ್ಮಾರ್ಗವೆಂದರೆ ದೃಢವಾಗಿ ನಲಿದು ವಿಕರ್ಮಕ್ಕೆ ವೊಡಲಾಗಿರೆಹಮ್ಮನು ನೆಗ್ಗಿದರೆ ಹೋಗದೆ ಬಿಮ್ಮಾಗಿ ಬೆಳೆಯುತಿರೆನೆಮ್ಮುತ ವಿಷಯವ ನೆನೆಯುತಲೀ ಪರಿ ಹೆಮ್ಮೆಯೆ ಹೆಚ್ಚುತಿರೆ 4ಮೊಳೆಯುತ ಮೇಲ್ಮುಟ್ಟಿರೆ ಹಮ್ಮಿದು ಬೆಳೆಯುತ ಬೇರ್ಬಿಟ್ಟಿರೆಕಳಚಿದರ್ಕೆಡದಾಶೆ ಕಾಲ್ಕಟ್ಟಿ ಕೆಡಹಿರೆ ತಳತುದಿ ತೋರದಿರೆಅಳಿಯುವದೆಂದಿಗಿದು ಸುಖ ತಾನು ಹೊಳೆಯುವದೆಂದಿಗದುನಳಿನಾಕ್ಷ ತಿಳುಹಿಸು ನಂಬಿದೆ ತಿರುಪತಿನಿಳಯ ವೆಂಕಟನಾಥನೆ 5ಕಂ||ಎಡೆಬಿಡದನುತಪಿಸುತ ಪದವಿಡಿದೆರಗಿಯೆ ಬಿನ್ನವಿಸಲು ತಿರುಪತಿಯೊಡೆ ಯಂಕಡು ಕರುಣದಿಂದ ಗುರುತನು ವಿಡಿದಭಯವನಿತ್ತ ನುಡಿಯನನುವದಿಸುವೆನಾಂ ಓಂ ಪರಸ್ಮೈಬ್ರಹ್ಮಣೇ ನಮಃ
--------------
ತಿಮ್ಮಪ್ಪದಾಸರು
ಅಂಜಿಸೋದ್ಯಾತಕಯ್ಯಾ ಬ್ರಹ್ಮಣ್ಯ ಗುರು ಪ ಅಂಜಿಸೊದ್ಯಾಕ‌ಘ ಭಂಜಕನೆನಿಸಿ ನೀ ಕಂಜನಾಭನ ಭಕ್ತಿ ಪಂಜರದೊಳಿಡದೇ ಅ.ಪ ಹೊಂದÀದೀ ನರಜನ್ಮವ ಇಂದಿರೇಶನು ಎಲ್ಲ ಹೊಂದೀ ಹೊದರಿಯದ ಮಂದಮತಿಯನು 1 ಬಿಂಬ ಮೂಡಲು ಪ್ರತಿಬಿಂಬ ಮಾಡುವುದೆಂದು ಶಂಬರಾರಿಯ ಪಿತನ ನಂಬದ ಢಂಬಿಯೊಳಂ ಜಿಸೋದ್ಯಾತಕಯ್ಯಾ2 ಶ್ರೀ ನರಹರಿಪಾದ ಧ್ಯಾನವ ಮಾಡದೆ ಬುದ್ಧಿ ಹೀನನಾದವಗೆ ಸುಜ್ಞಾನ ಕೊಡದೆ ಸುಮ್ಮನಂ ಜಿಸೋದ್ಯಾತಕಯ್ಯಾ 3
--------------
ಪ್ರದ್ಯುಮ್ನತೀರ್ಥರು
ಅಂಜೋರೆ ಹೀಂಗೆ ಅಂಜೋರೆನಮ್ಮ ಕಂಜನಾಭನ ಮುಂದೆ ಕಾದುವ ಭ್ರಮತೆಯರು ಪ. ಅಷ್ಟೂರೊಳಗೆ ಅತಿ ಶ್ರೇಷ್ಠಳೆ ಭಾವೆ ಅಷ್ಟೂರಿಗೆ ಅಭಯ ಕೊಡದಲೆಅಷ್ಟೂರಿಗೆ ಅಭಯ ಕೊಡದಲೆ ಒಳಗೋಗಿಕೃಷ್ಣನ ಮುಸುಕಲಿ ಅಡಗೋರೆ ಜಾಣಿ1 ಚಲುವರೊಳಗೆ ಅತಿ ಚಲುವಳು ಭಾವೆ ಎಲ್ಲರಿಗೆ ಅಭಯವ ಕೊಡದಲೆ ಎಲ್ಲರಿಗೆ ಅಭಯವ ಕೊಡದಲೆ ರಂಗನವಲ್ಲಿ ಮುಸುಕಲಿ ಅಡಗೋರೆ ಜಾಣೆ2 ಕೃಷ್ಣರಾಯನ ಮತ್ತಷ್ಟು ಮಡದಿಯರುಎಷ್ಟು ಅಂಜುತಲೆ ನಮಗಿನ್ನುಎಷ್ಟು ಅಂಜುತಲೆ ನಮಗಿನ್ನು ಕೈಕಾಲುಮುಟಿಗ್ಯಾಗಿ ಕುಳಿತಾರೆ ಜಾಣಿ 3 ಬಲರಾಮನ ಮಡದಿಯ ಛಲವನೆ ನೋಡಿರೆಲಲನೆಯರು ಕರೆಯೆ ಬರಲಿಲ್ಲಲಲನೆಯರು ಕರೆಯೆ ಬರಲಿಲ್ಲ ನಮಗಂಜಿನೆಲವ ಗೀಚುತಲೆ ಕುಳಿತಾರೆ ಜಾಣಿ 4 ಕಂಜಾಕ್ಷಿ ರುಕ್ಮಿಣಿ ಕರೆಯ ಬರಲಿಲ್ಲ ಸಂಜೀಲೆ ನಾವು ಬಂದೇವಸಂಜೀಲೆ ನಾವು ಬಂದೇವ ರಾಮೇಶನ ಅಂಜಿಕೆ ಇಲ್ಲೇನ ಮಡದಿಯರ ಜಾಣಿ 5
--------------
ಗಲಗಲಿಅವ್ವನವರು
ಅಜ್ಞರಿಗೆಯಿದುನೋಡೆ ಹಾಸ್ಯವಾಗುವುದು ಪ ಜೀವ ಪರಮಾತ್ಮನಂ ತಿಳಿವದಡಕೆಲೆ ಶಾಸ್ತ್ರ ದೇವಧರ್ಮವು ಬರುವುದೇ ನಿಶ್ವಿತಾರ್ಥ ನಾವೆಂಬುವುದು ಬಿಡುವುದೆ ಭಾಜಾಭಜಂತ್ರಿಗಳು 1 ಗುರುಹಿರಿಯರಾಜ್ಞೆಯೆ ನಗನಾಣ್ಯಜವಳಿಗಳು ಸರವರಿಗು ಮರಿಯಾದೆ ಸಭೆಯ ಪೂಜೆ ದುರುಳನು ನಿಂದಿಪೋದು ಬೀಗತಿಯ ಹಾಡು 2 ಅಂತರ್ಮುಖತ್ವವೇ ಭೂಮದೂಟ ತತ್ವಗಳ ಮರೆಯದಿರುವುದೆ ದಿವ್ಯತಾಂಬೂಲ ಸತ್ವಗುಣ ವೃತ್ತಿಗಳೆ ನಿತ್ಯಸಂತೋಷ 3 ಕೊಬ್ಬಿದವರಿದು ಬಿಟ್ಟು ಹಣಕಾಸು ಕಳಕೊಂಡು ಕೋರಿಕೆಗಳಿಂದ ಸತಿಯೊಡನೆ ಕಾದುವರು 4 ಮಹಾಗುರುವೆ ಪರಮಾತ್ಮ ಶಿಷ್ಯರು ಜೀವರಾಶಿ ಅರಿತವರಿಗಿದರರ್ಥ ಅಮೃತಪಾನಕೆ ಸಮವು ಗುರುರಾಮ ವಿಠಲನು ಮನದಿ ಹೊಳೆಯುವನು 5
--------------
ಗುರುರಾಮವಿಠಲ