ಒಟ್ಟು 782 ಕಡೆಗಳಲ್ಲಿ , 88 ದಾಸರು , 678 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮುದ್ದು ಸುರಿಯುತಾನೆ ನೋಡಿ ಕೃಷ್ಣ ಪ ಮುದ್ದು ಸುರಿಯುತಾನೆ ಸಿದ್ಧ ಜನರ ವಂದ್ಯ ಮಧ್ವವಲ್ಲಭ ಕೃಷ್ಣ ಹೃದ್ವನಜದಲಿ ಬಲ್ ಅ.ಪ ತ್ರಿವಂಗಿ ಭಾವದಿ ಶ್ರೀ ವೇಣುಪಿಡಿದು ತಾ ಸಾವೇರಿ ಮೊದಲಾದ ರಾಗವ ಪಾಡುತ1 ಬಲದ ಪಾದದಿ ಚೆಲುವ ಎಡದ ಪಾದವನಿಟ್ಟು ನಳಿನಮುಖಿ ರುಕ್ಮಿಣಿ ಬಲ ಸತ್ಯಭಾಮೇರಿಂದ 2 ಧ್ವಜ ವಜ್ರಾಂಕುಶ ಚಕ್ರ ಕಂಜಚಿನ್ಹೆಗಳಿಂದ ತೇಜ ಮುಕುಟ ಶಿರಶ್ಚಕ್ರ ಶೋಭಿತಮುಖ 3 ಶ್ರೀ ಪಾದರಾಯರಿಗೆ ಸ್ವಪ್ನಲಬ್ಧನಾಗಿ ಶ್ರೀ ಪದ್ಮಭವಂದ್ಯ ಪ್ರತ್ಯಕ್ಷ ವ್ಯಾಸಮುನಿಗೆ 4 ಶ್ರೀ ನರಹರಿಯು ತಾ ನೆನೆಯುವರಿಗೆ ಭವ ಕಾನನದ ಭಯದ ಮನ ಶಂಕಿಸದಿರೆಂದು5
--------------
ಪ್ರದ್ಯುಮ್ನತೀರ್ಥರು
ಮುನಿರಾಯಗೊಂದಿಸುವೆನನು ದಿನದಲಿ ಮನವಚನಕಾಯದಿಂ ಮರೆಯದಲೆ ಗುರು ಮಧ್ವ ಪ ವಾಸುದೇವ ಅಮಾನವಪ್ರತಿಮ ವಿಷ್ಣು ಹರಿ ದಾಸವರ ಪ್ರಥುಧಿ ತ್ರಿಜಗದ್ಗುರು ವರ ಶ್ವಾಸಪತಿ ಚತುರಧೀ ತ್ರಿಜಗದ್ಗುರುವರೇಣ್ಯ ಬೋಧ 1 ವಿಭುವಿಶ್ವವಿತುಪೂರ್ಣ ಬೋಧಾಲವ ಸುಬುದ್ಧಿ ತ್ರಿಭುವನಾಲಯ ಧಿಷಣ ಭೂರಿಚೇತಾ ಅಮಿತ ಬುದ್ಧಿ ಸುಖತೀರ್ಥ ಜಗ ದಭಿವಂದ್ಯದಭ್ರಚೇತಸ ಮಹಾಮನ ಮಧ್ವ2 ಸೂರಿಮಸ್ತಕ ಮುಕುಟ ಸಕಳಜ್ಞ ಸರ್ವವಿತ್ ಮಾರುತಾತ್ಮಜ ಪೂರ್ಣ ಪುಷ್ಠ ಬುದ್ಧಿ ವೃಜಿನ ನಾಶಕನಂತ ಕವಿ ಲೋಕನಾಯಕ ಪ್ರಾಜ್ಞ 3 ಆನಂದತೀರ್ಥ ಗುರು ಬುದ್ಧಿ ಸುಖತೀರ್ಥ ಅನು ಮಾನಯತಿ ಸಂಮೋದ ಹಂಸರಾಟ್ ಚಾರು ಕೃತಾಂತವಿತ್ ಮಹಾ ಮಾನಸ ಪ್ರ್ರಮೋದಾರ್ಯವರ್ಯ ವಿದ್ಯಾಧಿಪತಿ4 ಭುವನ ಭೂಷಣ ವ್ಯಾಸಶಿಷ್ಯ ಅಜಸಮ ಧನ್ಯ ಪ್ರವರ ಪ್ರಾಜ್ಞಾರ್ಯ ಧ್ವಸ್ತದುರಾಗಮ ಕವಿರಾಯಾ ಸುಹೃತ್ ಅಖಿಳಜ್ಞ ದಶಧಿಷಣನೆ ಅವಿರಳ ಜಗನ್ನಾಥ ವಿಠಲನಿಗತಿ ಪ್ರಿಯ 5
--------------
ಜಗನ್ನಾಥದಾಸರು
ಮೂರ್ತಿ ಶ್ರೀಗಣರಾಯಗೆ ಪ ಶರ್ವಾಣಿಸುತ ಚತುರ್ದಶ ವಿದ್ಯದಾಗರ | ಸರ್ವಗುಣಾಂಬುಧಿ ಗಜಮುಖಗೆ | ಊರ್ವಿಯೊಳಗೆ ತನ್ನ ಚರಣವ ನೆನೆವರ | ನಿರ್ವಿಘ್ನದಲಿ ಕಾವ ದಯಾನಿಧಿಗೆ 1 ರನ್ನ ಮುಕುಟ ದಿವ್ಯ ಕುಂಡಲಧಾರಿಗೆ | ಪನ್ನಗ ಭೂಷಣ ಚತುರ್ಭುಜಗೆ | ಸನ್ನುತ ಪರಶಾಂಕುಶವನು ಪಿಡಿದಗೆ | ಮೂಷಕ ವಾಹನಗೆ 2 ಸಮಚರಣಾಂಬುಜ ಸುರವರವಂದ್ಯಗೆ | ಕಮಲಸಕನ ತೇಜ ಗೆದ್ದವಗೆ | ವಿಮಲ ಮತಿಯ ನೀವ ಸಿದ್ದಿಧೀರೇಶಗೆ | ನಮೋಎಂಬೆ ಮಹೀಪತಿ ಸುತಪ್ರಿಯಗೆ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮೂಲನಾರಾಯಣ ವಟಪತ್ರಶಾಯಿ ಕಾಲಕಾಲಕೆ ವೊದಗಿ ನೀಯೆನ್ನ ಕಾಯೋ ಪ. ಎಂದೆಂದಿಗೂ ಎನಗೆ ತಂದೆ ನೀ ದೇವಾ ಯಿಂದೆನ್ನ ಕರಪಿಡಿಯೋ ಬಿಂದುಮಾಧವಾ ಅ.ಪ. ಸ್ವಚ್ಛ ಮನವಮಾಡು ಮತ್ಸರೂಪಕನೆ ತುಚ್ಛ ಮನಕೊಂದ ವಿಶ್ವವ್ಯಾಪಕನೆ 1 ಮುಂದೆನ್ನ ಉದ್ಧರಿಸು ಮಂಧರೋದ್ದರನೆ ಇಂದ್ರಾದಿ ಸುರರಿಂದ ವಂದ್ಯಾಸುರವರನೆ 2 ಹಿರಣ್ಯಾಕ್ಷನ ತರಿದಂಥ ಧೀರ ಭರಧಿ ವೇದವ ತಂದ ಮಹಿಮೆ ಅಪಾರ 3 ತರಳ ಪ್ರಹ್ಲಾದನ ತಲೆಗಾಯ್ದ ರೂಪ ಸರಳ ಮತಿಯನಿತ್ತು ಪಾಲಿಸು ಶ್ರೀಶ 4 ಬಲಿಯ ಸಿಕ್ಕನು ಮುರಿದೆ ಪ್ರಬು ನಿನ್ನ ಕೀರ್ತಿ ಯೊಳ ಎನ್ನ ಮನವಿಡು ವಾಮನಮೂರ್ತಿ 5 ಕ್ಷತ್ರಿಯ ಕುಂಭವ ಸವರಿದ ರಾಮ ಶತಷಟ್ಯಂದರ ಬಡಿದ ದಿವ್ಯ ನಾಮ 6 ದಾನವ ಕುಲಕುಟಾರ ಶ್ರೀ ರಾಮ ಮಾನಾಭಿಮಾನವು ನಿನ್ನದೋ ರಮ 7 ಮಲ್ಲರ ಗೆದ್ದಂಥ ದೂಕುಳ ವೈರಿ ಗೊಲ್ಲಬಾಲಕರ ಕೂಡಾಡಿದ ಶೌರಿ ಶೌರಿ 8 ತ್ರಿಪುರರ ಸ್ತ್ರೀಯರ ವ್ರತ ಕೆಡಿಸಿದ ಜಾಣ ಉಪಗಮನ ವೀಯೋ ವಿಶ್ವೇಶ ಸುಜ್ಞಾನ 9 ಕಲಿಮುಖದೈತ್ಯರ ಅಳಿಯುವ ಕಲ್ಕಿ ಸಲಹೋ ಬಳಲುವೆ ನಾನು ಭವದಿಂ ಶಿಲ್ಕಿ10 ಗುರು ಕಾಳೀಮರ್ಧನಕೃಷ್ಣ ಯಾವಾಗ್ಯು ಶರಣುಜನರಪಾಲ ಏನು ಬಂದಾಗ್ಯು 11
--------------
ಕಳಸದ ಸುಂದರಮ್ಮ
ಮೃಡ ಫಣೀಂದ್ರವೀಂದ್ರ ವಂದ್ಯ ಕಡಲಶಯನ ಶ್ರೀನಿವಾಸ ಒಡೆಯನಾಜ್ಞೆಯಿಂದಲೆನಗೆ ಪ. ಜೀವಗಣಪತೆ ಸರ್ವದೇವತಾಗತೆ ಪಾವನಾತ್ಮ ಪದ್ಮ ಸಮಕರಾವಲಂಬಿತ್ತು ಬೇಗ 1 ಮೂರು ತಾಪವಾ ಹತ್ರ ಸೇರದಂದದಿ ಅದರ ಬೇರ ಕಡಿದು ಭಕ್ತಿಸಾರ ಧಾರದಿಂದ ದೃಢವ ಮಾಡಿ 2 ಕೈಟಭಾರಿಯ ಪುರದ ಭಾಟದಾರಿಯ ಬೇಟ ಜಲಟ ಕುಕ್ಕುಟಗಳ ನೋಟಾಪಾಟದೊಡನೆ ತೋರಿ 3 ಹರಿಯ ದೊರೆತನ ಕರುಣಿಕಾಗ್ರಣಿ ಕಮಲ ಕರವ ಎನ್ನ ಶಿರದೊಳಿಕ್ಕಿ 4 ನಿನ್ನ ಕರುಣವು ನಿಯತವಾಗಲು ಪನ್ನಗಾಚಲೇಂದ್ರ ದಯದಿ ತನ್ನ ದಾಸನೆಂದು ಕಾವ 5
--------------
ತುಪಾಕಿ ವೆಂಕಟರಮಣಾಚಾರ್ಯ
ಮೃತ್ಯುಂಜಯನೇ ಶರಣು ಶಂಕರನೆ ಶರಣು ಶರಣು ಪ ವಾಸವೇ ಕೈಲಾಸ ವಸನವೇ ದಿಕ್ಕುಗಳು ಪೂಸಿಹುದು ಸರ್ವಾಂಗವೆಲ್ಲ ಭಸ್ಮ ನೇಸರಿನ ತೇಜ ಶಶಿಜೂಟ ಗಂಗಾಧರನ ಪಾಸಟಿಯು ನಿನಗೊಬ್ಬರಿಲ್ಲ ಗೌರೀಶ 1 ಪಂಚ ವಿಂಶತಿ ತತ್ವದೂರ ವಿಶ್ವಾಧಾರ ಪಂಚ ಶರಹರ ವಿರಂಚ್ಯಾದಿ ಸಂಸ್ತುತಾ ನಿತ್ಯ ಪ್ರ ಪಂಚ ಮಯನಾದ ಗಿರಿಜೇಶ ವಿಶ್ವೇಶ 2 ಪರಮ ಪುರುಷ ಪರೇಶ ಪರಮ ಗುಣಗಣ ನಿಲಯ ಶರಣ ಜನ ಸುರಧೇನು ವಿಶ್ವವಂದ್ಯಾ ಭವ ಪೂಜ್ಯಸೂರ್ಯ ಕೋಟಿಪ್ರಕಾಶ ಉರಗ ಭೂಷಣ ವೃಷಭಾರೂಢ ಗೌರೀಶ 3 ಭೂತಪತಿ ಭುವನೇಶ ಪ್ರೇತ ನಿಲಯ ನಿವಾಸ ನೂತನದ ಗಜಚರ್ಮ ನಿನಗೆ ವಿಖ್ಯಾತ ಗೀತ ನೃತ್ಯ ವಿಲಾಸ ಮಾತುಳಾಧ್ವರನಾಶ ಭಾತಿ ಕಂಠದಿ ವಿಷವು ಗೌರೀಶ 4 ಧರೆಯೊಳಧಿಕತರ ವರದ ಮೂಲನಿವಾಸ ಕರಿವದನ ನಂದೀಶ ಶಕ್ತಿ ಉಮೆ ಸಹಿತ ಭರದಿಂದ ನೆಲಸಿ ಸೊಪ್ಪಿನ ಸುಬ್ಬಗೆವರವಿತ್ತೆ ದುರಿತವನು ಪರಿಹರಿಸೋ ಶಂಭುಲಿಂಗೇಶ 5
--------------
ಕವಿ ಪರಮದೇವದಾಸರು
ಮೃತ್ಯುವಿಗೆ ಶ್ರೀನರಕೇಸರೀ ||ಅ|| ಭೃತ್ಯನ್ನ ಪಾಲಿಪುದು ಅತಿಶಯವೆ ನಿನಗೆ ಅ.ಪ. ಮೋದ ಪಡಿಸುತಲವನಬಾಧೆ ಪಡಿಸದೆ ಮನದಿ | ಐದಿಸೋ ಮನೆಗೆ 1 ಸರ್ವ ಪ್ರೇರಕನೆಂದು | ಸರ್ವ ವಿಧ ಬೇಡುವೆನೊಪರ್ವ ಕಾಲದಿ ಕೈಯ್ಯ | ಬಿಡದೆ ಸಲಹೋ |ಶರ್ವಾದಿ ಸುರವಂದ್ಯ | ಸರ್ವಜ್ಞ ಶ್ರೀ ಹರಿಯೆದುರ್ವಿಭಾವ್ಯನೆ ದೇವ | ದರ್ವಿ ಜೀವನ ಕಾಯೋ 2 ಅತಿ ದಯಾ ಪರನೆಂದು | ಮತಿಯಿಂದ ಮೊರೆಯಿಡುವೆಹಿತದಿಂದ ಸಲಹುವುದು | ಪ್ರತಿ ರಹಿತ ದೇವಾ |ಗತಿ ಗೋತ್ರನಾದ ಗುರು | ಗೋವಿಂದ ವಿಠ್ಠಲನೆಯತನ ನಮ್ಮದು ಕಾಣೆ | ನೀನಾಗಿ ಪೊರೆಯೋ 3
--------------
ಗುರುಗೋವಿಂದವಿಠಲರು
ಮೋದ ಪ್ರದ ನರಹರಿ | ವಿಠಲ ಪೊರೆ ಇವಳಾ ಪ ಪಾದ್ಯ ಪ್ರ | ಹ್ಲಾದ ರಕ್ಷಕನೇ ಅ.ಪ. ನೀನೇವೆ ಗತಿಯೆಂದು | ಆನೇಕ ವಿಧ ನಿನ್ನಸಾನುರಾಗದಿ ಪೊಗಳ್ವ | ಮಾನುನೀ ಮಣಿಗೇಜ್ಞಾನೋದಯವ ಗೈದು | ಕಾಣಿಸೋ ಸದ್ಗತಿಯಮಾನ ಮಾನ್ಯದ ಹರಿಯೆ | ಆನತೇಷ್ಟದನೇ 1 ಜೀವ ಅಸ್ವಾಂತಂತ್ರ | ದೇವ ನಿಜ ಸ್ವಾತಂತ್ರಈ ವಿಧದ ಸುಜ್ಞಾನ | ಓದಿ ಪಾಲಿಸುತಾ |ಕೇವಲಾನಂದ ಮಯ | ದೇವ ತವ ಸೇವೆಯನುಭಾವ ಭಕ್ತಿಯಲಿಂದ | ಗೈದ ಮನನೀಯೋ2 ನೆರೆಹೊರೆಯ ಜನರೇನು | ಮರಳಿ ಬಹು ಬಾಂಧವರುಹರಿ ನಿನ್ನ ಪರಿವಾರ | ಸರಿಯೆಂಬ ಮತಿಯಾಕರುಣಿಸುತ ತರಳೆಗೇ | ಪರುಷಾರ್ಥ ಸಾಧನದಪರಿಯನರುಹುತ ಪೊರೆಯೊ | ವರಲಕ್ಷ್ಮಿ ಪತಿಯೇ 3 ಸಾಧನ ಸುಜೀವಿಗಳ | ಕಾದು ಬಾಯ್ದೆರೆಯುತಿರೆಮೋದ ಬಡಿಸುವುದು ಚಿತ್ | ಸಾಧು ಜನವಂದ್ಯಾಮೋದ ಮುನಿ ಪಾದಾಬ್ಜ | ಆದರದಿ ವಂದಿಪಳೋಹೇ ದಯಾಂಬುಧೆ ಮನದಿ | ಮೈದೊರೊ ಹರಿಯೇ 4 ಬೋವ ನೀನಾದೇನೀ ವೊಲಿಯಲಿನ್ನೇನು | ಆವುದಾಸಾಧ್ಯವೋಪೂವಿಲ್ಲನಯ್ಯ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಮೋದದಲಿರಬೇಕಮ್ಮ | ಸುಮ್ಮನೆ ನೀನು ಮೋದದಲಿರಬೇಕಮ್ಮ ಪ. ಮೋದ ಶ್ರೀ ಗುರುಗಳ ಚರಣ ಕಮಲವನ್ನು ಮೋದದಿಂದಾಶ್ರಯಿಸಿ ಸುಖದಲಿರಲಿಬೇಕು ಲೋಕದ ಜನಗಳ ನುಡಿಗಳ ಲೆಕ್ಕಿಸದೆ ಲೋಕವಂದ್ಯನ ಚರಣ ಕಮಲವ ಸ್ಮರಿಸುತ ಅ.ಪ. ಪರಮಾತ್ಮನ ಕೃಪೆಗೆ ಕಾರಣವಿದು ಗುರುಕರುಣದ ಬಲವು ಅರಿಯದ ಮನುಜರ ಬಿರುನುಡಿಗೆ ಮನ ಕೊರಗಿಸದಂದದಿ ಹರುಷಪಡಲಿಬೇಕು 1 ಎಚ್ಚತ್ತು ನಡಿಯಬೇಕು | ಶ್ರೀ ಗುರುಸೇವೆ ಇಚ್ಛೆಯಿಂ ಮಾಡಬೇಕು ತುಚ್ಛ ಮಾತುಗಳಿಗೆ ಮನಕೊಡದೆ ಹರಿ ಮೆಚ್ಚುವಂದದಿ ಗುರು ಇಚ್ಛೆಯನರಿತು ನಡೆದು 2 ವಂದನೆ ನಿಂದ್ಯಗಳ | ಮೋಕ್ಷಾರ್ಥಿಯು ಒಂದಾಗಿ ಭಾವಿಸುತ ಮಂದರೋದ್ಧರನ ಮಾಯಕೆ ಮನದಿ ಮೋದಿಸುತ ಮಂದರಂದದಿ ಮನುಜರಿಗೆ ತೋರುತಲಿದ್ದು 3 ಮಾನವ ಜನ್ಮ ಸಾಧನ ಜನ್ಮವಮ್ಮ ಸಾಧಾರಣವಲ್ಲ ಸಾಧು ಸಜ್ಜನಸಂಗ ಸಾಧಿಸಿ ದುಷ್ಕರ್ಮ ಛೇದಿಸಬೇಕಮ್ಮ 4 ಚಿಂತೆಯನಳಿಯಬೇಕು | ಶ್ರೀ ಗುರು ಕರುಣ ಅಂತರ ತಿಳಿಯಬೇಕು ಸಂತತ ಗೋಪಾಲಕೃಷ್ಣವಿಠ್ಠಲನ ಅಂತರಂಗದಿ ಭಜಿಸಿ ಮುಕ್ತಿ ಸಾಧಿಸಬೇಕು 5
--------------
ಅಂಬಾಬಾಯಿ
ಯತಿ ಕುಲ ಶಿರೋರನ್ನ - ಪತಿತ ಜನ ಪಾವನ್ನಮತಿ ವಿಕಳ ನಾದೆನ್ನ - ಉದ್ದರಿಸೊ ರನ್ನ ಪ ಭವ ಜನಿತ - ದುಃಖಗಳಹರ್ತಾ 1 ಪರಿ ಪರೀಯಲಿ ಬಲ್ಲವೇದ ವೇದಾಂತ ವೇದ್ಯ - ಅನವದ್ಯಾ ||ವೇದ ಮುಖ ಸುರವೃಂದ | ವೇದವಾಣೀ ವಂದ್ಯಸಾಧು ಜನರಘಹರಣ - ತೋರೊ ತವ ಚರಣ 2 ಪತಿ ಖ್ಯಾತಪಾದಿನಾಮದ ಹರ್ತ - ಲೋಕಕರ್ತಾ ||ನೋವಿಲ್ಲದವನೆ ಗುರು - ಗೋವಿಂದ ವಿಠಲ ಹರಿಭಾವದಲಿ ತವರೂಪ - ಕೋರ್ವೆ ಬಹುರೂಪ 3
--------------
ಗುರುಗೋವಿಂದವಿಠಲರು
ಯಾಕೆ ನಿರ್ದಯನಾದೆ ಲೋಕೇಶ ಪ್ರಭುವೆ ಸಾಕಲಾರದೆ ಎನ್ನ ನೂಕಿ ಭವದೊಳಗೆ ಪ ನಿನ್ನ ನಾಮಸ್ಮರಣೆ ಮಾಡದಲೆ ಹಗಲಿರುಳು ಅನ್ಯ ವಿಷಯಗಳಿಂದ ನೊಂದು ಬಳಲಿದೆನೊ ನಿನ್ನ ಧ್ಯಾನವ ಮಾಳ್ಪಚ್ಛಿನ್ನ ಭಕ್ತರೊಳಿರಿಸಿ ಚನ್ನಾಗಿ ಸಲಹೊ ಪ್ರಸನ್ನ ಮಾಧವನೆ 1 ಆಪನ್ನ ಜನರನು ಪೊರೆದೆ ಸನ್ನುತಾಂಗನೆ ದೇವ ಸರ್ವವ್ಯಾಪಕನೆ ಪನ್ನ ಗಾರಿವಾಹನ ಪ್ರಸನ್ನ ಶ್ರೀಹರಿ ಶೌರಿ ಎನ್ನ ಕಡೆಹಾಯಿಸಯ್ಯ ಜೀಯ 2 ಅಕ್ಷಯ ಫಲಪ್ರದ ಪಕ್ಷಿವಾಹನ ಕೃಷ್ಣ ಕುಕ್ಷಿಯೊಳು ಜಗವನಿಂಬಿಟ್ಟ ಶ್ರೀ ಹರಿಯೆ ರಕ್ಷ ಶಿಕ್ಷಕ ಜಗದ್ರಕ್ಷ ಪಾಂಡವ ಪಕ್ಷ ಈಕ್ಷಿಸಿ ಎನ್ನನುದ್ಧರಿಸಿ ಸಲಹದಲೆ3 ಪರಿಪರಿಯ ಕಷ್ಟಗಳ ಪರಿಹರಿಸಿ ಭವದೊಳಗೆ ದುರಿತದೂರನೆ ಕಾಯೊ ಶರಣ ಜನರ ಪರಿಸರನೊಡೆಯ ನಳನಾಮ ಸಂವತ್ಸರದಿ ಕರೆಕರೆಯ ಕಷ್ಟಗಳ ಬಿಡಿಸಿ ಸಲಹದಲೆ4 ಕನಕಗರ್ಭನ ಪಿತನೆ ಕಮಲನಾಭ ವಿಠ್ಠಲ ಮಿನಗುತಿಹ ದಿವ್ಯ ಸೌಂದರ್ಯ ಮೂರುತಿಯೆ ಸನಕಾದಿ ಮುನಿವಂದ್ಯ ಕ್ಷಣ ಬಿಡದೆ ಸ್ಮರಿಸುವರ ಇನಕುಲೇಂದ್ರನೆ ದೇವ ಬಿಡದೆ ಸಲಹದಲೆ5
--------------
ನಿಡಗುರುಕಿ ಜೀವೂಬಾಯಿ
ಯಾಕೇ ನಿನೀಪರಿ | ಶೋಕ ಸಂಶಯವೀವೆರಾಕೇಂದು ವದನನೆ | ಏಕಮೇವನೆ ಹರಿಯೇ ಪ ಮಾ ಕಮಲಾಸನದಿ | ವೌಕಸ ವಂದ್ಯನೆತೋಕನೆನಿಸಿ ಎನ್ನ | ಸಾಕುವುದೆಲೊ ಘನ್ನಅ.ಪ. ನಿನ್ನ ನಾಮಗಳನ್ನ | ಮನ್ನದಿ ನೆನೆಯದೆಮನ್ನ ಮಾಡಿದುದಕ್ಕೆ | ಯನ್ನ ನೀ ಪರಿಯಾ |ದಣ್ಣಿಸೋದೊಳಿತಲ್ಲ | ಮನ್ನ ನಾಮಕನಾಗಿಮನ್ನವನೀಯದೆ | ಅನ್ಯಾಯ ಗೈಯುತ 1 ಮಾಯಾ ವಿನುತ ಶ್ರೀ | ಕಾಂತ ಮೂರುತಿಯೇ |ಅಂತು ನಿನ್ನಯ ಪಾದಾ | ಕ್ರಾಂತನಾಗಿರುವೆನೊಸ್ವಾಂತರಂಗದಲ್ಲಿ | ಶಾಂತೀಶ ನೆಲೆಸಯ್ಯ 2 ಮಂದಿಯ ಕೈಯಲ್ಲಿ | ನಿಂದಿಸಿ ಕುಂದಿಸಿಮಂದ ಭಾಗ್ಯನ ಮನ | ಸಂದೇಹ ಕಳೆಯಯ್ಯಕಂದರ್ಪಪಿತ ಗುರು | ಗೋವಿಂದ ವಿಠಲಯ್ಯಕುಂದೆಣಿಸದೆ ಕೈಯ್ಯಾ | ಇಂದೆ ನೀ ಪಿಡಿಯಯ್ಯ 3
--------------
ಗುರುಗೋವಿಂದವಿಠಲರು
ಯಾದವರರಸಿಲ್ಲೆ ಸಿಕ್ಕಿದನಲ್ಲೆ ಪ. ಸಿಕ್ಕಿದನಲ್ಲೇ ದಕ್ಕಿದನಲ್ಲೆಅ.ಪ.ಗೋಪಿಯ ಕಂದನೆ ಬೆಣ್ಣೆಯ ತಿಂದನೆಪೂತಣಿಯ ಕೊಂದನೆ ಮಧುರೆಗೆ ಬಂದನೆ 1 ಮಾಧವನಿವನೇ ವೇದಕೆ ಸಿಲುಕನೆಸಾಧುಗಳರಸನೆ ಸಜ್ಜನಪೋಷನೆ 2 ಜಾಣರಜಾಣನೆ ಗಾನಕೆ ಪ್ರೀಯನೆಮುನಿಗಳ ವಂದ್ಯನೆ ಮನ್ಮಥಪಿತನೆ 3 ಕಾಮಿತವೀವೋನೆ ಭಾಮಾಪ್ರೀಯನೆನೇಮದಿಭಜಿಪರ ಸದನಕ್ಕೆ ಬರುವನೆ 4 ವೇದವ ತಂದನೆ ಗಿರಿಯ ಪೊತ್ತನೆಬೇರನು ತಿಂದನೆ ಕಂಬದಿ ಬಂದನೆ 5 ದಾನವ ಬೇಡನೆ ಕ್ಷತ್ರೇರ ಕೊಂದನೆವನಕೆ ಪೋದನೆ ದುರುಳರ ಕೊಂದನೆ6 ಕಾಳೀಯ ಭಂಜನೆ ಬತ್ತಲೆ ನಿಂದನೆಹಯವನೇರ್ದನೆ ಹಯವದನನೆ7
--------------
ವಾದಿರಾಜ
ಯಾದವೇಂದ್ರ ಪಾಲಿಸೆನ್ನ ಓ ದಯಾನಿಧೇ ಪ ಶಂಕರಾದಿ ದಿವಿಜರು ಪಂಕಜಾದಿ ಪೊಗಳಿಂ ಪಾದ ಪೂಜೆಗೈವರು 1 ಶಾರಧೇಂದು ಭಾಸಮಾನ ಹಾರರಾಜೆ ಶೋಭಿತ ನಾರದಾದಿ ಗಾನ ಲೋಲ ವಾರಿಜಾಸ್ಯನ 2 ನಾಮರೂಪ ರಹಿತನೆ ಸಾಮಜಾದಿ ಪಾಲಕ ಧೇನು ನಗರಾಭಿವಂದ್ಯ ನಾಮಲೋಲನೆ 3
--------------
ಬೇಟೆರಾಯ ದೀಕ್ಷಿತರು
ಯಾವ ಪರಿಯಲಿ ಒಲಿಸಿ ಪಡೆವೆ ಹರಿಯೊಲವನು ಭೂವಿವರವನು ಪೊತ್ತ ಮಹಶೇಷಗರಿದು ಪ ಸುರನದಿ ಜಲದೊಳಭಿಷೇಕವ ಮಾಡುವರೆ ಚರಣದಲಿ ಜನಿಸಿಹಳು ದೇವಗಂಗೆ ಮೆರೆವ ದಿವ್ಯಾಸನವನೀಯೆ ವಿಶ್ವಾಧಾರ ಧರಿಸಿ ಕೊಡಲಿಕೆ ವಸ್ತ್ರ ಪೀತಾಂಬರ 1 ಹೇಮರಚಿತಾಭರಣದಿಂದ ಮೆಚ್ಚಿಸಲವಗೆ ಕಾಮಿನಿಯೆ ಶ್ರೀಮಹಾಲಕ್ಷ್ಮಿದೇವಿ ಪ್ರೇಮದಿಂ ಶಾಲ್ಯಾನ್ನದಿಂದ ತೃಪ್ತಿ ನಿತ್ಯ ತೃಪ್ತ 2 ಕ್ಷೀರದಿಂ ಮೆಚ್ಚಿಸಲಿಕವಗೆ ಪಾಲ್ಗಡಲೆಮನೆ ಮಾರುತಾತ್ಮಜ ಕೋಣೆ ಲಕ್ಷ್ಮೀಶ ನಂಘ್ರಿಗೆ ನಮಸ್ಕಾರದಿಂ ಮೆಚ್ಚಿಸಲಿಕವ ಜಗದ್ವಂದ್ಯಾ 3
--------------
ಕವಿ ಪರಮದೇವದಾಸರು