ಒಟ್ಟು 1797 ಕಡೆಗಳಲ್ಲಿ , 110 ದಾಸರು , 1470 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಗದೊಳಗಿದ್ದವ ಧೀರಾ | ಭವ ದೂರ ದೂರ ದೂರ ದೂರ ಪ ಮೆರೆವ ಪ್ರಪಂಚ ಪರಮಾರ್ಥ ದೂರಾ | ಎರಡು ಸಮಲಿದ್ದವ ಧೀರ ಧೀರ ಧೀರ ಧೀರ 1 ಸಕಲವೆಲ್ಲವು ಹರಿಯಚ್ಚರಾ | ಯುಕುತಿಮನ ಬಲಿದವ ಧೀರ ಧೀರ ಧೀರ ಧೀರ 2 ಜರಿಯ ಸಂಸಾರವ ವಿರಕ್ತಿಯ ದೋರಾ | ನೀರು ಕಮಲದಂತೆ ಇರುವಾ ಧೀರ ಧೀರ ಧೀರ ಧೀರ 3 ಗುರುಮಹಿಪತಿ ಸ್ವಾಮಿ ಚರಣ ತತ್ಪರಾ | ಗಿರುವ ಸಾವಧಾನದಿಂದ ಧೀರ ಧೀರ ಧೀರ ಧೀರ 4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಜಗದೊಳು ಬಂದೀ ಜಗವೇನು ಕಂಡೀ ಜಗದ ಮಾಯೆಗೆ ಸಿಲ್ಕಿ ಬಗೆ ತಿಳಿಯದ್ಹೋದಿ ಪ ಉನ್ನತ ಜನುಮ ಅನ್ಯಥಾ ಕಳೆದಿ ಉಣ್ಣೆ ಕೆಚ್ಚಲೊಳೀದ್ರ್ಹಾಲುಣ್ಣದಂತಾದಿ 1 ವಿಮಲ ಸುಖದೆಬಂದಿ ಶ್ರಮಗೆಟ್ಟು ನಡೆದಿ ಕಮಲದಡಿಯ ಕಪ್ಪೆ ಬಂಡು ಕುಡೀದ್ಹಾಗಾದಿ 2 ಎಂಥ ಸಮಯ ಇದರಂತರರಿಯದ್ಹೋದಿ ಅಂತರಾತ್ಮನ ಕಾಣದಂತಕಗೀಡಾದಿ 3 ನಿಜವಬಯಸಿಬಂದಿ ನಿಜತಿಳಿಯದ್ಹೋದಿ ಮಾಜುವುದುದಕೆ ಬರಿದೆ ಗಿಜಿಗಿಜಿಯಾದಿ 4 ಕಲ್ಪದ್ರುವದಿ ನಿಂದಿ ಅಲ್ಪರಿಗಾಲ್ಪರಿದಿ ಕಲ್ಪಿತವನು ಪೂರಮಾಳ್ಪ ರಾಮನ ಮರೆದಿ 5
--------------
ರಾಮದಾಸರು
ಜಗದೋದ್ದಾರನ ಸಖಿ ಮೊದಲಿಗೆ ಬಲಗೊಂಬೆಮುದದಿಂದ ಮುಯ್ಯ ಗೆಲಿಸೆಂಬೆನಲ್ಲೆ ನಮೋ ಎಂಬೆ ಸುರರ ಎಲ್ಲರ ಬಲಗೊಂಬೆ ಪ. ನಿಗಮ ತಂದವನಿಗೆ ಮುಗಿವೆವು ಕರಗಳನಗವ ಪೊತ್ತವನ ಬಲಗೊಂಬೆ 1 ಜಗವನೆತ್ತಿದವಗೆ ಜಾಣಿ ವಂದಿಸಿಕರುಳು ಬಗೆದ ನರಸಿಂಹನ ಬಲಗೊಂಬೆ 2 ಪೊಡವಿಯನಾಳಿದವಗೆ ಬಿಡದೆ ವಂದಿಸಿಕೊಡಲಿಯ ಪಿಡಿದ ಭಾರ್ಗವನ ಬಲಗೊಂಬೆ 3 ಸೇತುವೆ ಕಟ್ಟಿದವಗೆ ಪ್ರೀತಿಲೆ ನಮಿಸಿಪಾರಿಜಾತ ತಂದವನ ಬಲಗೊಂಬೆ4 ವಸ್ತ್ರ ಹೀನಗೆ ನಾವು ಅತ್ಯಂತ ನಮಿಸಿ ಕುದುರೆಹತ್ತಿದ ರಾಮೇಶನ ಬಲಗೊಂಬೆ 5
--------------
ಗಲಗಲಿಅವ್ವನವರು
ಜಗದ್ಗುರೋ ರಾಮ ತ್ರಾಹಿ ಶ್ರೀ ರಾಮಚಂದ್ರಜಗದ್ಗುರೋ ರಾಮ ತ್ರಾಹಿ ಪದಶರಥನಂದನ ದನುಜ ವಿಮರ್ದನಪಶುಪತಿನುತ ಗುಣ ರವಿನಯನ 1ಕೌಸಲ್ಯಾತ್ಮಜ ಕಮನೀಯಾನನಕೋಮಲ ಕುವಲಯ ದಳ ವರ್ಣ 2ವನಚರ ಪೋಷಕ ಸೇತು ವಿಧಾಯಕಘನ ಧನುಃಶರಧರ ಧೃತಲೋಕ 3ಜಯಜಯ ರಾಘವ ಜಾನಕೀವಲ್ಲಭಭಯಗಣ ನಾಶನ ಭಾನು ನಿಭ 4ದಶಮುಖ ನಂದನ ಮಾನ ವಿಭಂಜನಬಿಸಜಜ ಪೂಜಿತ ಪದನಳಿನ 5ಮುನಿಮಖಪಾಲಕ ತಾಟಕೀಶಿಕ್ಷಕಮುನಿಸತಿದಾಯಕ ಮುನಿತಿಲಕ 6ತರಣಿ ಕುಲೋದ್ಭವ ತಿರುಪತಿ ಗಿರಿವರಸ್ಥಿರಸ್ಥಿತ ವೆಂಕಟ ಸುಖಸಾರ 7ಓಂ ಮ್ಟುಕಾಸುರ ಚಾಣೂರ ಮಲ್ಲಯುದ್ಧವಿಶಾರದಾಯ ನಮಃಕಂ||ಸ್ಥಿರವಾರದರ್ಚನೆಯು ಸುಸ್ಥಿರ ಸಂಪದ್ಭಕ್ತಿ ವಿಜ್ಞಾನಪ್ರದವೆಂದೇಸ್ಥಿರಚಿತ್ತನಾಗಿ ಮಾಡ್ದೆನುಸ್ಥಿರವಾಗಿರು ಮನದಿ ನೀನೆ ವೆಂಕಟರಮಣಾ
--------------
ತಿಮ್ಮಪ್ಪದಾಸರು
ಜಗಪತಿಯ ತೋರಮ್ಮ ಎನಗೆ ಕರುಣವ ಮಾಡಮ್ಮ ಪ ಮೃಗಲಾಂಛನ ವದನೆ ಮೃದು ಸರಸಿಜ ಸದನೆ ಕಿರೀಟಿಯ ಬೀಗನ್ನ1 ಭ್ರಮರ ಕುಂತಳೆ ಜಾಣೆ ಸುಮನ ಕೋಕಿಲಗಾನೆ ಕಮಲ ತುಳಸಿ ಮಣಿಹಾರನ್ನ ಜಗದಾಧಾರನ್ನ ದಶಾವತಾರನ್ನ 2 ಅಜರಾಮರಣ ಸಿಧ್ದಿ ತ್ರಿಜಗದೋಳ್ ಪ್ರಸಿದ್ಧಿ ಜಗವÀ ಪೋಷನ 3
--------------
ವಿಜಯದಾಸ
ಜನನಿ ಜಾನಕೀ ನೀದಯಮಾಡೇ ಜಗದೀಶ್ವರ ನಾಯಕೀ ಪ ಫಣಿವಿಲಾಸನ ಪ್ರೀಯೆ ಭಜಕರ ಮನವಿಗಳ ನೀಕಾಯೆ ತಾಯಳೇ ಪ್ರಣವರೂಪಳೆ ಪ್ರಣಮಿಸುವೆ ತ್ರಿಣಯಸಖನಾರಾಣಿ ಸುಂದರೀ 1 ಸರ್ವತಂತ್ರಳೆ ಸಾಕ್ಷರೂಪಿಣಿ ದುರ್ಮದಾಂತಕಿ ದುಃಖದೂರಳೆ ನಿರ್ವಿಕಲೆ ಗೀರ್ವಾಣೆ ಶುಭಕರಿ ಉರ್ವಿಪಾಲಿಕಳಾದ ಸೀತೆಯ 2 ಆದಿಶಕ್ತಿ ಅನಂತರೂಪಳೆ ವೇದಮಾನಿನಿ ವಾದಿಭೀಕರಿ ಪಾದಸೇವ ಕನಿಷ್ಟಮೊದಗಿಸೆ ಭೂಧರಗೆ ನಿಜರಾಣಿ ವೈಭವೆ 3 ರಂಗನಾಯಕಿ ರಾಧೆ ಶ್ರೀ ಜಯ ಮಂಗಳಾಂಗಿ ಸಮೋದೆ ನಿಚ್ಚಲೆ ಜಂಗಮಾರ್ಚಿತ ಗುರುವು ತುಳಸೀ ಬೆಂಗಳೂರೊಳಗಿರುವ ಕಾರಣ4
--------------
ಚನ್ನಪಟ್ಟಣದ ಅಹೋಬಲದಾಸರು
ಜನನಿ ರುದ್ರಾಣಿ ರಕ್ಷಿಸು ಎನ್ನ ಜಗದೀಶನ ರಾಣಿ ಪ. ವನಜಭವಸುರಮುನಿಕುಲಾರ್ಚಿತೆ ಕನಕವರ್ಣಶರೀರೆ ಕಮಲಾ- ನನೆ ಕರುಣಾಸಾಗರೆ ನಮಜ್ಜನ- ಮನಮುದಾಕರೆ ಮಾನಿತೋದ್ಧರೆ ಅ.ಪ. ಆದಿಕೃತಾಯುಗದಿ ಪ್ರತಿಷ್ಠಿತ- ಳಾದೆ ಧರಾತಳದಿ ಆದಿತೇಯರ ಬಾಧಿಸುವ ದಿತಿ- ಜಾಧಮರ ಭೇದಿಸಿದೆ ಸಜ್ಜನ- ರಾದವರ ಮನ್ನಿಸಿದೆ ತ್ರೈಜಗ- ದಾದಿಮಾಯೆ ವಿನೋದರೂಪಿಣಿ 1 ಖಂಡ ಪರಶುಪ್ರೀತೆ ನಿಖಿಲಬ್ರ- ಹ್ಮಾಂಡೋದರಭರಿತೆ ಚಂಡಮುಂಡವೇತಂಡದಳನೋ- ದ್ದಂಡಸಿಂಹೆ ಅಖಂಡಲಾರ್ಚಿತೆ ಪಾಂಡುತನುಜ ಕೋದಂಡ ವಿತರಣೆ ಚಂಡಿಕೇ ಕರದಂಡಲೋಚನಿ2 ಸಿಂಧೂರ ಸಮಯಾನೆ ಸರಸ ಗುಣ- ವೃಂದೆ ಕೋಕಿಲಗಾನೆ ಸುಂದರಾಂಗಿ ಮೃಗೇಂದ್ರವಾಹಿನಿ ಚಂದ್ರಚೂಡಮನೋಜ್ಞೆ ಸತತಾ- ನಂದಪೂರ್ಣೆ ಮುನೀಂದ್ರನುತೆ ಸುಮ- ಗಂಧಿ ಗೌರಿ ಶಿವೇ ಭವಾನಿ 3 ಲಂಬೋದರಮಾತೆ ಲಲಿತ ಜಗ- ದಂಬಿಕೆ ಗಿರಿಜಾತೆ ಕಂಬುಕಂಠಿ ಕಾದಂಬನೀಕು- ರುಂಬಜಿತಧಮ್ಮಿಲ್ಲೆ ತವ ಪಾ- ದಾಂಬುಜವ ನಾ ನಂಬಿದೆನು ಎನ- ಗಿಂಬು ಪಾಲಿಸೆ ಶುಂಭಮರ್ದಿನಿ 4 ಘನವೇಣುಪುರವಾಸೆ ಸರ್ವಾರ್ಥದಾ- ಯಿನಿ ತ್ರೈಜಗದೀಶೆ ಸನಕನುತೆ ಶ್ರೀಲಕ್ಷುಮಿನಾರಾ- ಯಣಭಗಿನಿ ಶ್ರೀಮಹಿಷಮರ್ದಿನಿ ಮನಮಥಾಮಿತರೂಪೆ ಕಾತ್ಯಾ- ಯಿನಿ ನಿರಾಮಯೆ ಮಂಜುಭಾಷಿಣಿ 5
--------------
ತುಪಾಕಿ ವೆಂಕಟರಮಣಾಚಾರ್ಯ
ಜನ್ಮ ಸಫಲ ಕಾಣಿರೋ ನಮ್ಮ ಗುರು ವಾದಿರಾಜರಾಯರ ಕಂಡು ಜನ್ಮ ಸಫಲ ಕಾಣಿರೋ ಪ ಯುಕ್ತಿ ಮಲ್ಲಿಕೆಯೆಂಬ ಗ್ರಂಥ ಮಾಡಿಹರು ಮತ್ತೆ ಮುತ್ತಿನ ಸಿಂಹಾಸನವನೇರಿಹರು ಮತ್ತೆ ದುರ್ವಾದೀಭಗಳಿಗೆ ಮೃಗೇಂದ್ರರು ಸೂತ್ರನಾಮದಿ ಮುಂದೆ ಮೆರೆವರು 1 ದಾಸಕೂಟಗಳಲ್ಲಿ ರತ್ನದಂತಿಹರು ಭಾಸುರಕಾಯದಿ ನೂರ ಇಪ್ಪತ್ತು ವರ್ಷಗಳೊಳಗಿದ್ದು ಮೆರೆದವರು 2 ಮೂಜಗದೊಳಗಿಂಥ ಗುರುಗಳೆಲ್ಲಿಹರು ಕಂಜಸುತನ ಪದವೇರುವವರು ರಾಜೇಶ ಹಯಮುಖ ಕಿಂಕರಾಗ್ರಣಿಗಳು ರಾಜಿಪ ಶ್ರೀಸೋದಾಪುರದೊಳಗಿಹರು 3
--------------
ವಿಶ್ವೇಂದ್ರತೀರ್ಥ
ಜಂಭಾರಿಸುತ ಅಭವ ಪ ಪುರಹರ ಸಾಂಬ ತ್ರಿಯಂಬಕ ಶಂಬಕಾರಿ ರಿಪುಗಂಭೀರ ಕರುಣಿ ಅ. ಪ. ಭಸಿತ ಭೂಷಿತ ಶರೀರ-ಭಕ್ತರುದ್ಧಾರ ವಿಷಕಂಠ ದುರಿತಹರ ಪಶುಪತಿ ಫಣಿಹಾರ-ಪಾವನಕಾರ ನೊಸಲನಯನ ವಿಕಸಿತಾಂಬುಜ ಮುಖ ಶಶಿಧರ ಮತ್ತರಕ್ಕಸ ಮದ ಮರ್ದನ ಘಸಣೆಗೊಳಿಪ ತಾಮಸವ ಕಳೆದು ಮಾ- ಬಿಸಜ ಪಾದವ ತೋರೊ 1 ರಜತ ಪರ್ವತ ನಿವಾಸ ನಿರ್ಮಲ ಭಾಸ ಗಜವೈದ್ಯನಾಶ ಗಿರೀಶ ಸುಜನರ ಮನೋವಿಲಾಸ ವ್ಯೋಮಕೇಶ ತ್ರಿಜಗದಲ್ಲಣ ಗೌರೀಶ ಅಜಸುತನಧ್ವರ ಭಜನೆಯ ಕೆಡಸಿದೆ ಅಜಗರ ಮಂದಿ ಗಜಮುಖ ಜನಕನೆ ಗಜಗಮನ ಮುನಿ ತನುಜನ ಕಾಯ್ದನೆ ವಜ್ರಮುನಿ ವಂದಿತ ಭಜಿಸುವೆ ನಿನ್ನ2 ಮಧರಾಪುರಿ ನಿಲಯ ಮೃತ್ಯುಂಜಯ ಸದಮಲ ಸುಮನಗೇಯ ಸದಾ ನಮಿಪರ ಹೃದಯದೊಳಗುಳ್ಳ ಭಯ- ಸದೆಯುತ್ತ ಕೊಡು ಅಭಯ ಜಾಹ್ನವಿ ಧರಕೃತ ಮಾರಾ ನದೀತೀರದಿ ವಾಸವಾಗಿಪ್ಪ ಸೌಂದರ್ಯ ಮಧುಪುರಿ ವಿಜಯವಿಠ್ಠಲನ ಪದಾಬ್ಜಕೆ ಮಧುಪನೆನಿಪ ಪಂಚವದನ ಕೈಲಾಸ 3
--------------
ವಿಜಯದಾಸ
ಜಯ ಜಯ ಮಂಗಳಜಯ ಮಂಗಳ ಅಮರಾಧೀಶನಿಗೆ ಪ ಕಪ್ಪು ಗೊರಳನಿಗೆ ಕರುಣಾಸಮುದ್ರಗೆ ಕಾಮ ಸಂಹಾರ ಮಾಡಿದಗೆಮುಪ್ಪುರ ಗೆಲಿದಗೆ ಮೂಜಗದೊಡೆಯಗೆ ಮೂರನೆಯ ಗುಣದಾ ಮನೆಯವಗೆಒಪ್ಪುವ ದಶಭುಜ ತೋಳಲಿ ಡಮರುಗ ವಿಡಿದಿಹ ಪಾಶಾಂಕುಶಧರಗೆತಪ್ಪದೆ ಭಕ್ತರಿಗೊಲಿವಗೆ ಪಾಲಿಪ ಕರುಣಕೋಟಿ ಪ್ರಕಾಶನಿಗೆ 1 ಸುರನದಿ ಧರಿಸುತ ಮೆರೆದವಗೆಕೊರಳೊಳು ರುಂಡದ ಮಾಲೆಯ ಹಾಕಿಹಕೋಮಲ ಸ್ಫಟಿಕ ಪ್ರಕಾಶನಿಗೆಕರದಲಿ ಕಂಕಣ ಧರಿಸಿಹ ಮೂರ್ತಿಗೆ ಕಣ್ಣುರಿಭಾಳದಿ ರಂಜಿಪಗೆ 2 ದೇಶದಿ ಪೆಸರಾಗಿರುತಿಹ ಅಮರಾಧೀಶನು ಎನಿಪ ನಾಯಕಗೆಮಾಸದ ಮಂಜಿನ ಮಲೆಯೊಳು ನೆಲಸಿಯೆ ಆಸೆಯನೆಲ್ಲವ ಸಲಿಸುವಗೆಶ್ರೀಸಚ್ಚಿದಾನಂದಾವಧೂತ ದೊರೆ ಶಿರತಾರಕ ಅಮರೇಶನಿಗೆ 3
--------------
ಚಿದಾನಂದ ಅವಧೂತರು
ಜಯ ಜಯ ಮಂಗಳಜಯ ಮಂಗಳ ಶುದ್ಧಾದೈತನಿಗೆ ಪ ಅಗಣಿತ ಮಹಿಮಗೆ ಅಕ್ಷಯರೂಪಗೆಅಖಂಡ ಸಹಜಾನಂದನಿಗೆಝಗಿ ಝಗಿತಾತ್ಮಗೆ ಝಳುಕಿಸಿ ಕರ್ಣದಿಝಣನಾದವ ಕೇಳ್ವನಿಗೆಸೊಗಯಿಸಿ ಚಂದ್ರನ ಶತಕೋಟಿಯಪ್ರಭೆ ಸಾರವ ಸವಿಸವಿದುಣ್ಣುವಗೆಬಗೆ ಆನಂದದಿ ಸುಖಿಸುವ ದೇವಗೆಭಾಸ್ಕರ ತೇಜಃಪುಂಜನಿಗೆ1 ನಿತ್ಯಾನಂದಗೆ ನಿರ್ಮಲರೂಪಗೆನಿಶ್ಚಲ ಪರಬ್ರಹ್ಮಾತ್ಮನಿಗೆನಿತ್ಯಶುದ್ಧಗೆ ನಿಜನಿರ್ಮಾಯಗೆನಿಜಬೋಧ ಜ್ಞಾನೈಕ್ಯನಿಗೆಪ್ರತ್ಯಗಾತ್ಮಗೆ ಪೂರ್ಣಬ್ರಹ್ಮನಿಗೆಪರಮ ಪರತರ ಪಂಡಿತಗೆನಿತ್ಯತೃಪ್ತಗೆ ನಿಗಮಾಗಮನಿಗೆನಿಶ್ಚಿಂತಾತ್ಮ ನಿಸ್ಪøಹಗೆ 2 ಕೈಯಲಿ ಪಿಡಿದಿಹ ಜಪಮಾಲೆಯಸರ ಕರ್ಣಕುಂಡಲವಿಟ್ಟಿಹಗೆಮೈಯೊಳು ಪೊದ್ಹಿಹ ಕಾಷಾಯಂಬರಮಿರುಪಿನ ಕೌಪೀನವುಟ್ಟಿಹಗೆಮೈಯೊಲೆದಾಡುವ ಸ್ವಾತ್ಮಾನಂದದಿನಲಿವ ಸದ್ಗುಣ ಶಾಂತನಿಗೆಮೈಯನೆ ಸದ್ಗತಿ ಭಕ್ತರಿಗೀಯುವವ್ಯಾಪಿತ ಜೀವನ್ಮುಕ್ತನಿಗೆ3 ಆರವಸ್ಥೆಯ ಧರಿಸಿಯೆ ಜಗದಲಿಅನಂತರೂಪ ತಾನಾಗಿಹಗೆಮೀರಿಯೆ ಸದ್ಗುಣ ನಿರ್ಗುಣ ರೂಪವಮೆರೆದಿಹ ಮುಮುಕ್ಷಾಂಗನಿಗೆತೋರುವ ತ್ವಂಪದ ತತ್ತ್ವಮಸಿಪದತೋರಿ ವಿರಾಜಿಪ ತುಷ್ಟನಿಗೆಧೀರೋದ್ಧಾರಗೆ ದೀನರನಾಥಗೆದೃಶ್ಯಾದೃಶ್ಯ ವಿದೂರನಿಗೆ 4 ನಿರುಪಮ ನಿರಮಯ ನಿಜ ನಿರ್ಲಿಪ್ತಗೆನಿರ್ಭಯ ನಿರ್ವಿಕಲ್ಪನಿಗೆಪರಮಪುರುಷಗೆ ನಿಗಮೋದರನಿಗೆಪರಮಾರೂಢಾ ಮಾರ್ಗನಿಗೆಗುರುಚಿದಾನಂದ ಅವಧೂತಾತ್ಮಗೆಗುಣನಿಧಿ ತುರಿಯಾತೀತನಿಗೆಸ್ಥಿರಸಿದ್ಧ ಪರ್ವತದಾಸ ಶ್ರೀಪುರುಷಗೆಬಗಳಾ ಶ್ರೀಗುರು ರೂಪನಿಗೆ 5
--------------
ಚಿದಾನಂದ ಅವಧೂತರು
ಜಯ ಜಯ ಮೃತ್ಯುಂಜಯ ಜಗದಾಶ್ರಯ ಭಯಹರ ವಿಗತಾಮಯ ಶಿವ ಸದಯಪ. ಭಾಗವತೋತ್ತಮ ಭಾಸುರಕಾಯ ಭಾಗೀರಥೀಧರ ಭಗವತೀಪ್ರಿಯ1 ಅಗಜಾಲಿಂಗನ ಸುಗುಣನಿಕಾಯ ಮೃಗಧರಚೂಡ ಮುನಿಜನಗೇಯ2 ಲಕ್ಷ್ಮೀನಾರಾಯಣಪರಾಯಣ ರಕ್ಷಿಸು ತ್ರಿಜಗಾಧ್ಯಕ್ಷ ಸುಶ್ರೇಯ3
--------------
ತುಪಾಕಿ ವೆಂಕಟರಮಣಾಚಾರ್ಯ
ಜಯ ಜಯ ಶ್ರೀಹರಿಪ್ರಿಯೆ ಮಹಾ- ಭಯಹರೆ ಜಗದಾಶ್ರಯೆ ಲಯವರ್ಜಿತ ನಿತ್ಯಾತ್ಮೆ ಚಿನ್ಮಯೆ ಜಯಶೀಲೆ ನಿರಾಮಯೆ 1 ನಿತ್ಯಮುಕ್ತಿ ನಿರ್ವಿಕಾರೆ ನಿಜ- ಭೃತ್ಯನಿಚಯ ಮಂದಾರೆ ಪ್ರತ್ಯಗಾತ್ಮ ಹರಿಭಕ್ತಿರಸಪೂರೆ ಸತ್ವಾದಿಗುಣವಿದೂರೆ 2 ಲಕ್ಷ್ಮೀನಾರಾಯಣಿ ಹರಿ- ವಕ್ಷಸ್ಥಲವಾಸಿನಿ ಅಕ್ಷರರೂಪಿಣಿ ಬ್ರಹ್ಮಾಂಡಜನನಿ ಸುಕ್ಷೇಮಪ್ರದಾಯಿನಿ 3
--------------
ತುಪಾಕಿ ವೆಂಕಟರಮಣಾಚಾರ್ಯ
ಜಯ ಜಯತು ಕಾಮಾಕ್ಷಿ ಜಯ ಜಯ ವಿಶಾಲಕ್ಷಿ ಪ ಜಯ ಜಯತು ಮೀನಾಕ್ಷಿ ಜಯತು ಹರಿಣಾಕ್ಷಿ ಅ.ಪ ಸತಿ ಜಯ ಕೃಪಾಪೂರ್ಣಾಕ್ಷಿ ಜಯ ಜಯತು ಕಮಲಾಕ್ಷಿ ಜಯ ಚಂಚಲಾಕ್ಷಿ 1 ಜಯ ಜಯ ಸ್ವರ್ಣಾಂಬೇ ಜಯತು ಚಾಮುಂಡಾಂಬೆ ಜಯತು ಜಯ ಜಗದಂಬೆ ಜಯತು ದುರ್ಗಾಂಬೆ 2 ಜಯತು ಜಯ ಶಶಿಬಿಂಬೆ ಜಯತು ವರ ಗಿರಿಜಾಂಬೆ ನಿತ್ಯ ಶುಭ ಮಂಗಳಂ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಜಯ ಜಯವೆನ್ನಿ ಗುರು ಜಗದೀಶಗೆ ಜಯ ಜಯ ಜಗತ್ರಯ ಪಾವನಗೆ ಧ್ರುವ ಆನಂದೊ ಬ್ರಹ್ಮ ಆನಂದ ಕಂದಗೆ ಅನುದಿನ ಜಯ ಜಯ ಅನುಪಮಗೆ ಸನಕ ಸನಂದನ ವಂದಿತಗೆ ಮುನಿಜನ ಹೃದಯ ನಿವಾಸಗೆ 1 ನಿತ್ಯ ನಿರ್ಗುಣಗೆ ಅಗಣಿತಗುಣ ಪರಿಪೂರ್ಣಗೆ ಝಗಿಝಗಿಸುವ ಜಗನ್ಮೋಹನಗೆ ಜಗಜ್ಜೀವ ಜಗದಾತ್ಮಗೆ 2 ಜಯ ಜಯ ಮಂಗಳ ಮಹಾಮುನಿಗೆ ಮಹಿಮಾನಂದ ಗುರುಮೂರ್ತಿಗೆ ಮಹಿಪತಿ ಸ್ವಾಮಿ ಸರ್ವೋತ್ತಮಗೆ ಜಯ ಜಯವೆನ್ನಿರೊ ಜಗದೊಳಗೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು