ಒಟ್ಟು 12958 ಕಡೆಗಳಲ್ಲಿ , 134 ದಾಸರು , 6175 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮುದ್ದು ಮೋಹನ ಗುರುಗಳಂಘ್ರಿ | ಶ್ರದ್ಧಾ ಭಕುತೀಲಿಬುದ್ಧಿ ಪೂರ್ವಕ ಭಜಿಪ ಜನರ | ನ್ನುದ್ಧರೀಸುವಾ ಪ ಕರ್ಮ ನಿಷ್ಠಾತೃಸುಮ್ಮನಸ ವಿಜಯಗುರವ | ನಮ್ಮಿತುತಿಸುವ 1 ತೀರ್ಥಕ್ಷೇತ್ರ ಚರಿಸೂತ | ಮೂರ್ತಿದರ್ಶನಾಸಾರ್ಥಕವ ಮಾಡಿಕೊಂಡ | ತೀರ್ಥಪಾವನಾ |ಕಾರ್ತಸ್ವರೇತ್ಯಾದಿವಿತ್ತ | ಪಾರ್ಥಿವಸಮಾಶಾಸ್ತ್ರ ಪ್ರಾಕೃತಾದಿ ತಿಳಿಪ | ಹರಿ ಸರ್ವೋತ್ತಮ 2 ಶ್ರೀ ವರರಿಂದುಪದಿಷ್ಟ | ವಿಠಲ ಪ್ರತಿಷ್ಟಓ ವಿಸಾಧೀಸಲು ಹರಿಯೊಳ್ | ಪ್ರಾಯೋಪವಿಷ್ಟ |ಭಾವಿ ಬ್ರಹ್ಮನಲ್ಲಿ ಗುರು ಗೋವಿಂದ ವಿಠಲನಭಾವ ಅಷ್ಟ ಕುಸುಮದಿ | ಸೇವಿಸೀದನ 3
--------------
ಗುರುಗೋವಿಂದವಿಠಲರು
ಮುದ್ದು ಮೋಹನ ದಾಸ | ತಿದ್ದಿಯನ್ನಯ ದೋಷಉದ್ಧರಿಸೊ ಬುಧತೋಷ | ನಮಿಪೆ ನಿನ್ನನಿಶಾ ಪ ದಾಸ ದೀಕ್ಷೆಯ ವಹಿಸಿ | ಕ್ಲೇಶಗಳ ಬಹುದಹಿಸಿದೇಶ ದೇಶವ ಚರಿಸಿ | ಹರಿ ಪ್ರತಿಮೆಗಳ ಭಜಿಸಿ | ಮೀಸಲೆನಿಸಿದ ಮತವ | ವ್ಯಾಸರಿಗೆ ಸಮ್ಮತವದಾಸರಾಯರ ಮಾತ | ಬೀರಿರುವ ಖ್ಯಾತಾ1 ಕರಿಗಿರಿಯ ದುರ್ಗದಲಿ | ವರ ರಥೋತ್ಸವ ಸಮಯನರಸಿಪುರ ಶೇಷಪ್ಪ | ವರ ಕುವರ ನಾಗಾಖ್ಯಗೆಕರುಣಿಸುತ ಲಂಕಿತವ | ಪರಿಸರನ ಮತರಸವಒರೆದು ಸಲಹಿದೆ ಗುರುವೆ | ನೀ ಪರಮ ಗುರುವೇ 2 ಸುಜನ | ಆರ್ತರುದ್ಧರಣಾ 3 ತಂಬ್ರೂಹಿ ಎನುವಂಥ | ತಂಬೂರಿ ನೀ ಕೊಡುತತುಂಬಿ ದ್ವ್ಯೊಭವದಿಂದ | ಪೊರೆದೆ ಮುದದಿಂದಾ |ಉಂಬುಡುವುದೂ ಹರಿಗೆ | ಕೊಂಬ ಸರ್ವವ ಹರಿಗೆಎಂಬ ಜ್ಞಾನವನಿತ್ತು | ಸಂಭ್ರಮವ ಬಿತ್ತೂ 4 ಅಮಿತ ಗುಣ ಪೂರ್ಣಾ |ಸಿರಿಪತಿ ಶ್ರೀಗುರೂ | ಗೋವಿಂದ ವಿಠ್ಠಲನಉರುತರದಿ ಭಜಿಪಂಥ | ಕರುಣಿಸೆಲೊ ಪಂಥ 5
--------------
ಗುರುಗೋವಿಂದವಿಠಲರು
ಮುದ್ದು ಮೋಹನ ರಾಯಾ | ಸುಜನರಉದ್ಧರಿಸಿದ್ಯೊ ಜೀಯಾ | ಪ ಶ್ರದ್ಧಾಳುತನದಲಿ | ಬದ್ಧ ದೀಕ್ಷಿತನೆಮಧ್ವಮತವು ಎನೆ | ದುಗ್ಧಾಬ್ದಿ ಚಂದಿರ ಅ.ಪ. ಚಿಪ್ಪಗಿರಿ ಸುಕ್ಷೇತ್ರಾ | ದೊಳಗೆಅಪ್ಪ ಶ್ರೀ ವರರಿಂದಾ |ಗೊಪ್ಪ ಸದುಪ ದೇಶ | ಅಪ್ಪುತದಾಸನೆನೆಪ್ಪು ಕೊಡುತ ತಿ | ಮ್ಮಪ್ಪನೊಳಗೆಮನ 1 ತೀರ್ಥಕ್ಷೇತ್ರ ಚರಿಸೆ | ದೇಹವುಸಾರ್ಥಕಾಯಿತು ಎನಿಸೀ |ಯಾತ್ರೆ ಮಾಡಿದೆ ಸ | ತ್ಪಾತ್ರರ ಸೇರುತಗಾತ್ರ ಗೈಸಿದೆ ಪಾವಿ | ತ್ರ್ಯ ಬಾಹ್ಯಾಂತರ 2 ಗುರುಗೋವಿಂದ ವಿಠಲನೇ | ಪರತತ್ವಸರ್ವೋತ್ತಮನವನೇ |ಒರೆಯುತ ಸುಜನರ | ಪರಿಪಾಲಿಸಿದಿಯೊವರಬಳ್ಳಾಪುರದಲಿ | ವಿಠಲನ ಸನಿಯ 3
--------------
ಗುರುಗೋವಿಂದವಿಠಲರು
ಮುದ್ದು ಮೋಹನದಾಸರೆ | ಎನ್ನನು ಬೇಗ ಉದ್ಧರಿಸಿರಿ ಪ್ರೀತರೆ ಪ. ಬಿದ್ದಿಹೆ ದುರ್ವಿಷಯಾಂಧ ಕೂಪದೊಳೀಗ ಶುದ್ಧ ಜ್ಞಾನವನಿತ್ತು ಪದ್ಮನಾಭನ ತೋರಿ ಅ.ಪ. ಪರಮಯತಿಚರ್ಯರೆ | ಈ ಜಗದೊಳು ವರ ಭಕ್ತಿವೆಗ್ಗಳರೆ ತರಳತನದಲಿ ಪಾದಚಾರಿಗಳಾಗಿ ಧರೆಯ ಕ್ಷೇತ್ರವನೆಲ್ಲ ಚರಿಸಿರ್ಪ ವಶಗೈದು ಹರಿಯ ಮೆಚ್ಚಿಸಿ ದಾಸಭಾವದಿ ಪರಿಪರಿಯ ಅಂಕಿತದಿ ಶಿಷ್ಯರ ಪರಮ ಸಂಭ್ರಮಗೊಳಿಸಿ ಮೆರೆಯುತ ಸಿರಿವರನ ಪದಸಾರಿದಂಥ 1 ಶೀಲವಂತರೆ ನಿಮ್ಮನು | ಕೊಂಡಾಡೆ ಈ ಸ್ಥೂಲಮತಿಗೆ ಸಾಧ್ಯವೆ ಕಾಲಕಾಲದಿ ಹರಿಲೀಲೆಯ ಪಾಡುತ ನೀಲವರ್ಣನ ಹೃದಯಾಲಯದಿ ಕಂಡು ಮೂಲರೂಪಿಯ ಪಾದಕಮಲದಿ ಲೋಲುಪಡುತಲಿ ಓಲ್ಯಾಡಿದ ಬಹು ಶೀಲಗುಣಗಣಪಾಲರೆ ಎನ್ನ ಪಾಲಿಸಿರಿ ಸಿರಿಲೋಲನ ತೋರಿ 2 ಸಂದೇಹವಿನ್ಯಾತಕೆ | ಮಂತ್ರದ ಮನೆ ಮಂದಿರದೊಳಗಿರೆ ಬಂದಿರಿ ದಾಸತ್ವದಿಂದ ಧರೆಯೊಳು ನಂದಕಂದನ ಲೀಲೆ ಅಂದ ಪಾಡುತಲಿ ಅಂದು ಗ್ರಂಥಗಳನೋದಿ ಪದವನು ಒಂದು ರಚಿಸಿ ಸಾಲದೆ ಮು- ಕುಂದನಾ ಗುಣವೃಂದ ಪೊಗಳಲು ಚಂದದಿಂದ ವಸುಂಧರೆಯೊಳು 3 ವರತತ್ವ ಅಂಶದಲಿ | ಶ್ರೀ ಗುರುವಿಗೆ ತಾರಕರೆನಿಸಿದಿರಿ ಸಾರಿರೆ ನಿಮ್ಮ ಪದ ಸ್ವಪ್ನದೊಳು ತೋರಿ ತೀರುಥವನೆ ಕೊಟ್ಟು ಸುಮ್ಮನಿರಲು ಗುರು ಸಾರಿ ಬಂದು ಬದಿಯಲಿ ನಿಂದು ಭೂರಿ ಕರುಣವ ಮಾಡಬೇಕೆಂದು ತೋರಿ ಪೇಳಲು ಹರಿ ನಿರ್ಮಾಲ್ಯ ಅಪಾರ ಕರುಣದಿ ಕೊಟ್ಟು ಪೊರೆದಿರಿ 4 ಸ್ತುತಿಸಲಳವೆ ನಿಮ್ಮನು | ಈ ಜಡಮತಿ ಕೃತಕವಲ್ಲವು ಇದಿನ್ನು ಅತಿಪ್ರೇಮ ಗುರುಗಳ ಹಿತದಿಂದ ನುಡಿದುದು ಚ್ಯುತದೂರ ಗೋಪಾಲಕೃಷ್ಣವಿಠ್ಠಲನ ಸತತ ಸ್ತುತಿಸುವ ಮತಿಯ ಪಾಲಿಸಿ ಪಥವ ತೋರಿರಿ ಕರ್ಮಜರೆ ಬೇಗ ಸತತ ಶ್ರೀ ಗುರು ವ್ರತವ ಪಾಲಿಪ ಮತಿಯ ದೃಢದಲಿ ಹಿತದಿ ಕರುಣಿಸಿ 5
--------------
ಅಂಬಾಬಾಯಿ
ಮುದ್ದು ವೆಂಕಟ ವಿಠಲ | ಬುದ್ಧಿ ಪ್ರೇರಕನೇ ಪ ಉದ್ವೇಗ ಕಳೆದು ಸ | ದ್ವಿದ್ಯ ಪ್ರದನಾಗೋ ಅ.ಪ. ಭವ ಕೂಪದಿಂದೆತ್ತಿಓದಿ ಕರೆದ್ಯೊದುದನ | ಭಾವುಕಗೆ ತಿಳಿಪೇ 1 ಮಾನವ ಮನದಿ | ಶಂಕಿಸುತ್ತಿರಲೂಕೊಂಕುಗಳ ಪರಿಹರಿಪ | ವೆಂಕಟೇಶ ನಾನುಅಂಕನವ ದಯೆಗೈಸಿ | ಸಂಕಟವ ಕಳೆದಾ 2 ಸೃಷ್ಟಿ ಸ್ಥಿತಿ ಸಂಹಾರ | ಅಷ್ಟ ಕರ್ತೃಕ ಹರಿಯೆಪುಷ್ಠತವ ಮಹಿಮೆಗಳ | ಶಿಷ್ಟನಿಗೆ ತೋರೀಕಷ್ಟಗಳ ಪರಿಹರಿಸಿ | ಸುಷ್ಠು ಪಾಲಿಪುದಿವನಜಿಷ್ಣು ಸಖ ಭ್ರಾಜಿಷ್ಣು | ಕೃಷ್ಣ ಮೂರುತಿಯೇ 3 ಭವ ಬಂಧ ಕಳೆಯೋಮಧ್ವಶಾಸ್ತ್ರದಿ ಮನವು | ಸುವಿಚಾರಗೈವ ಪರಿಶ್ರೀ ವರನೆ ಕೃಪೆಗೈದು | ತತ್ವಗಳ ತಿಳಿಸೋ 4 ಪತಿ ಗುರೂ | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಮುನಿಯ ನೋಡಿರೊ ವಂದನಿಯ ಮಾಡಿರೊ ಕನಸಿನೊಳಗೆ ನೆನೆದ ವರವ ಕ್ಷಣದಲೀವ ಘನ ಸಮರ್ಥ ಪ ತೊಲಗದಿಪ್ಪ ಭೂತಪ್ರೇತ ನೆಲೆಯಾಗಿರಲು ಇವರ ಚರಣ ತೊಳೆದ ಜಲವು ಬೀಳಲಾಕ್ಷಣ ಹಲುಬಿಕೊಳುತಲಳಿದು ಪೋಗೋವು 1 ಹಿಂದೆ ವ್ಯಾಸ ಮುನಿಗಳಿಂದ ನೊಂದು ನಮಿತರಾಗಿ ಅವರಿಂದ ಭೇದವರಿತು ಗೋ ವಿಂದ ಒಡೆಯನೀತ 2 ಮೊದಲು ಹೇಮಕಶ್ಯಪಜನ ಬದಿಯಲಿದ್ದು ತತ್ವ ಜ್ಞಾನ ಮುದದಿ ತಿಳಿದು ಮಾಯಿ ಶಾಸ್ತ್ರ ವೊದೆದು ಕಳೆದ ನಿಜ ಸದಮಲ ಸಮರ್ಥ 3 ಮಧ್ವಮತಾಂಬುಧಿಯೊಳು ಪುಟ್ಟಿ ಅದ್ವೈತ ಮತವನೆಲ್ಲ ಸದದು ಸದ್ವೈಷ್ಣವರನ್ನ ಪಾಲಿಸಿ ಊಧ್ರ್ವ ಲೋಕದಲ್ಲಿ ಮೆರೆದ4 ವರಸತ್ಯಾಭಿನವತೀರ್ಥರ ಕರಕಂಜದಿಂದ ಜನಿಸಿ ವೇಲೂರ ಪುರಪಯೋನಿಧಿವಾಸ ಜಗದ ದೊರೆ ವಿಜಯವಿಠ್ಠಲನ್ನದಾಸ5
--------------
ವಿಜಯದಾಸ
ಮುಯ್ಯದ ಹಾಡುಗಳು ನೋಡೆ ಧರಣಿ ನಿನ್ನ ಬೀಗರೋಡಿ ಬರುವುದಾ ಕಾಡು ಜನರು ನಗುವ ರೀತಿ ಮಾಡಿ ಮೆರೆವುದಾ ಪ. ಸುತ್ತ ನಾಲ್ಕು ಮುಖದಿ ವೇದ ತತ್ವ ಪೇಳ್ವ ಹಂಸ ಪಕ್ಷಿ ಹತ್ತಿಕೊಂಡು ಬಂದ ಹಳಬ ಮುತ್ಯನೊಬ್ಬನು ಹಸ್ತದೊಳಗಕ್ಷಮಾಲೆಯೆತ್ತಿ ಮಣಿಗಳೆಣಿಸುವಗಿ ನ್ನೆತ್ತ ಪೂಜೆಯಿಲ್ಲವೆಂಬರತ್ಯಾಶ್ಚರ್ಯವರಿಯೆಯ 1 ಮತ್ತೊಬ್ಬನ ನೋಡೆ ಮುದಿಯೆತ್ತನೇರಿ ಬರುವನಿವನ ಜೊತೆಯಲಿರುವ ಭೂತಗಣವು ಸುತ್ತ ಮೆರೆವುದ ಬತ್ತಲಿದ್ದು ಭಸ್ಮ ಪೂಸಿ ಕೃತ್ತಿವಾಸನನಾದ ಫಾಲ ನೇತ್ರ ರುಂಡಮಾಲಶೂಲವೆತ್ತಿ ಕುಣಿವ ಮುತ್ಯತನವ 2 ಗರುವದಿಂದ ಗಜವನೇರಿ ಬರ್ವನ ನೋಡಮ್ಮ ಶತ ಪರ್ವವನ್ನು ಪಿಡಿದ ಸಕಲ ಗೀರ್ವಾಣೀಶನ ಸರ್ವಾವಯವದಲ್ಲಿ ಕಣ್ಣಾಗಿರ್ವದೇನೊ ತಿಳಿಯದು ನಿ ಗರ್ವಿ ಶಿರೋಮಣಿಯೆ ಈತ ಪರ್ವತಾರಿಯೆಂಬುವುದನು 3 ಠಗರು ಕೋಣನೆಗಳ ಮೇಲೆ ಸೊಗಸಿನಿಂದಲೇರ್ದ ಕೆಲಸ ಬಗೆ ಬಗೆ ಬೈರೂಪ ವರ್ಣನೆಗಳು ಸಾಕಿನ್ನು ಸುಗುಣೆ ಮೊದಲೆ ತಿಳಿಯದೆ ನೀ ಮಗಳನೀವ ಭಾಷೆ ಕೊಟ್ಟ ಬಗೆಯ ಪೇಳೆ ಭಾಗ್ಯದ ಹಮ್ಮಿಗೆ ತಕ್ಕಂಥ ನಗೆಯ ಕೇಳೆ 4 ಎರಡು ಮಗುಗಳದರಳೊಂದು ಬಿರುದ ಹೊಟ್ಟೆ ಮೇಲೆ ಕಟ್ಟಿ ದುರಗ ಬೆಳೆವ ಪೋರ ನೋಡೆ ಕರಿಯ ಕುವರನು ಕಿರಿಯ ಕೂಸಿನೊಂದು ನವಿಲ ಮರಿಯನೇರುತ್ತಾರು ಮುಖದಿ ಮೆರೆವ ಛಂದವೇನನೆಂಬೆ ಥರವೆ ನಿನಗೆ ಮಿಸುಣಿ ಗೊಂಬೆ 5 ಅಳಿಯನ ಸಂಸ್ಥಿತಿಯ ನೋಡಿ ತಿಳಿವದೆಂತು ಸುಲಭವಲ್ಲ ಹಲವು ಜನರ ಕೂಡಿಕೊಂಡು ಸುಳಿವರೆ ಬಲ್ಲ ನೆಲೆಯ ಕಾಣದಖಿಳ ವೇದ ಕುಲವು ಭ್ರಮೆಯ ತಾಳ್ವದಿಂಥಾ ಕುಲವೆಂದರಿಯಳಾಗಿ ಲೋಕ ಚೆಲುವೆ ಮಗಳನಿತ್ತೆಯಲ್ಲೆ 6 ಆದರೀತ ಭಕ್ತಜನರ ಕಾದುಕೊಳುವನೆಂಬ ಗುಣವ ಶೋಧಿಪರಿಗೆ ಸಕಲಾನಂದ ಸಾಧಕನೆಂದು ಬೋಧಗೊಳದೆ ನುಡಿದ ಸ್ವಾಪರಾಧವೆಲ್ಲ ಕ್ಷಮಿಸಿ ನಮ್ಮ ಶ್ರೀದ ವೆಂಕಟಾದ್ರಿನಾಥ ಕಾದುಕೊಳಲಿ ಕರುಣವಿಡಲಿ 7
--------------
ತುಪಾಕಿ ವೆಂಕಟರಮಣಾಚಾರ್ಯ
ಮುಯ್ಯಾ ಒಯ್ದಹಾಡುಗಳು ಕೋಲೆನ್ನಿ ಕೋಮಲೆಯರು ಅಮ್ಮಯ್ಯ ಮುಯ್ಯಿ ಮೇಲೆನ್ನಿ ಮೇಲೆನ್ನಿರಿ ಅಕ್ಕಯ್ಯ ಪ. ಇಂದು ಗುರುಗಳಂಫ್ರಿಗೆರಗಿ ಅಮ್ಮಯ್ಯ ಸುಭದ್ರೆ ತಂದ ಮುಯ್ಯಿ ರಚಿಪೆÀನಕ್ಕಯ್ಯ 1 ನಿಷ್ಠಿಲೆ ಗುರುಗಳಿಗೆ ನಮಿಸಿ ಅಮ್ಮಯ್ಯ ದ್ರೌಪದಿ ಕೊಟ್ಟ ಮುಯ್ಯವ ರಚಿಪೆ ಅಕ್ಕಯ್ಯ 2 ಪಾದ ಭಾವೆ ಚರ್ಚಾ ಮಾತುಗಳನ್ನೆ ರಚಿಸೆ ನಕ್ಕಯ್ಯ 3 ರುಕ್ಮಿಣಿ ನಕ್ಕುನುಡಿದ ನುಡಿಯ ರಚಿಪೆನಕ್ಕಯ್ಯ 4 ನಮ್ಮ ಗುರುಗಳಂಫ್ರಿಗೆರಗಿ ಅಮ್ಮಯ್ಯ ಪಾರ್ಥ ರಮಿಯರಸನ ಮಹಿಮೆ ರಚಿಪೆನಕ್ಕಯ್ಯ 5
--------------
ಗಲಗಲಿಅವ್ವನವರು
ಮುರವೈರಿಯೇ ಮೊರೆ ಹೊಕ್ಕೆ ನಿನ್ನಕರಿಯ ಕಾಯ್ದಹಲೈಯ | ವರದನೆಂದರಿತು ಪ ಸರಸಿ ಜಾಂಡದೋಳು | ಅರಸಿ ಅನ್ಯ ಕಾಣೆಕರುಣಿ ಕಂಜನಯನ | ಪರಿಪೋಷಿಸೆನ್ನ ಅ.ಪ. ಭಕ್ತಾಭೀಷ್ಟದಾ | ಮುಕ್ತಿದಾಯಕಾಶಕ್ತನಾಗಿ ಇರಲು | ವ್ಯಕ್ತನಾಗದಿರೆ |ಸೂಕ್ತವೇನೊ ನಿನಗೆ | ಯುಕ್ತಿ ಪೂರ್ಣ ಪುರುಷಸೂಕ್ತ ಮೇಯ ನೀನು | ವ್ಯಕ್ತನಾಗೊ ಮನದಿ 1 ಕಣ್ಣು ಬಿಟ್ಟು ಗಿರಿಯ | ಬೆನ್ನಿಲ್ಹೊತ್ತರೇನುಮಣ್ಣ ಹಲ್ಲಿಲಗಿದು | ಚಿಣ್ಣನನ್ನೆ ಪೊರೆದುಸಣ್ಣ ವಟುವೆ ಪಿಡಿದೆ | ಚೆನ್ನ ಪರಶುವನ್ನಘನ್ನ ಧನುವ ಮುರಿದ | ಕನ್ಯೆ ಸೀತೆ ಪತಿಯ 2 ಗೊಲ್ಲರೋಳು ಪುಟ್ಟಿ | ಮಲ್ಲರನು ಕುಟ್ಟಿಚೆಲ್ವ ಕನ್ಯೆ ಕೂಡಿ | ಕೊಲ್ಲಿಸಿ ತ್ರಿಪುರರಚೆಲ್ವ ಹಯವನೇರಿ | ಕೈಲಿ ಖಡ್ಗ ಪಿಡಿದುಚೆಲ್ವ ಕಲ್ಕಿ ಗುರು ಗೋವಿಂದ ವಿಠಲ 3
--------------
ಗುರುಗೋವಿಂದವಿಠಲರು
ಮುರಳಿ ಧ್ವನಿಯ ಮಾಡೋ ಮುರಾರೇ ಪ ಮುರುಳಿ ಧ್ವನಿಯ ಕೇಳಿ ಪರಮ ಭಕುತರೆಲ್ಲ ಭವ ಶರಧಿ ದಾಟುವರೈ ಅ.ಪ ವಾಮ ಭುಜದಿ ದಿವ್ಯ ವಾಮ ಕಪೋಲಿಟ್ಟು ಕಾಮಜನಕ ಗುಣಧಾಮ ಶ್ರೀ ಕೃಷ್ಣಾ 1 ಶ್ರೀ ವರ ನಿನ್ನಯ ಭ್ರೂ ವಿಲಾಸದಿಂದ ಆವು ಮೆಚ್ಚುವಂತೆ ಸಾವಧಾನದಿಂದ 2 ಶ್ಯಾಮಸುಂದರ ಬಲು ಕೋಮಲ ಬೆರಳಲ್ಲಿ ಪ್ರೇಮದಿಂದೊಪ್ಪುತ ಶ್ರೀ ಮನೋರಮನೆ 3 ಕೆಳ ಕೆಂದುಟಿಯಲ್ಲಿ ಕೊಳಲ ನಿಲ್ಲಿಸಿ ಬೇಗ ನಳಿನಮುಖಿಯರನ್ನು ಒಲಿಸುತಲೊಮ್ಮೆ 4 ವನಜಸಂಭವಪಿತ ಶೀ ನರಹರಿಯೆ ಕನಸಿನಂದದಿ ಜಗವರಿತು ನೆನೆಯುವಂತೆ 5
--------------
ಪ್ರದ್ಯುಮ್ನತೀರ್ಥರು
ಮುರಳಿಯಧರ ಶ್ರೀ ಕೃಷ್ಣನ ನೋಡಲು ಏನೋ ಸಂತೋಷ ಏನೋ ವಿನೋದ ಪ ಹರಿವಳು ಯಮುನೆಯು ಮೆಲ್ಲನೆ ನೋಡಲು ಗೋವಿಂದನನು ಪರಮಾನಂದದಿ ಅ.ಪ ಕೊಳಲೂದಲು ಶ್ರೀಕೃಷ್ಣನು ನಾದದ ಸುಳಿ ಬಾಡುವುದೆಂಬುವ ಭೀತಿಯಲಿ ಜಲ ಮೂಲನು ಬೆಳದಿಂಗಳ ಕರಗಳ ತಳಿರುಗಳಿಂದಲಿ ತಳ ಸೇರಿಸುವ 1 ಶರಧಿ ತರಂಗಗಳೆದ್ದವು ರಂಗನ್ನ ವದನ ಶಕಾಂಕನ್ನ ನೋಡಿ ಅಂಗನೆಯರು ತಮ್ಮಂಗಗಳಲಿ ಭಂಗವ ಪಡೆದರನಂಗನ ಶರದಿ 2 ಭುವನವ ತುಂಬಿತು ಗಗನವು ತುಂಬಿತು ದಿವಿಜರ ಲೋಕಗಳೆಲ್ಲವು ತುಂಬಿತು ಕವಿಗಳು ಬೆರಗಾದರು ವರ್ಣಿಸಲೀ ಸವಿ ಮುರುಳಿಯು ನಾದದ ಪ್ರವಹನನು 3 ತುರುಗಳ ಪಯಧರ ಸ್ರವಿಸಿತು ಕ್ಷೀರವ ಕರೆದರು ಮೋದದ ಕಂಬನಿಯೆಲ್ಲರು ಮರೆತರು ನರಲೋಕದ ಮಂದಿಗಳು ಅರಿತು ಮೋಕ್ಷದ ಸುಖವೆಂತೆಂಬುದ 4 ಈಶನು ಕೈಲಾಸದಲಿ ಕುಣಿದನು ಶೇಷನು ಸಾಸಿರ ಫಣಿಗಳನಾಡಿದ ದೋಷರಹಿತ ವಾಣೀಶನ ವದನ ವಿ ಕಾಸವು ಬೆಳಗಿತು ನಾಕು ದಿಕ್ಕುಗಳ 5 ಆ ಸಮಯವ ಇತಿಹಾಸಗಳಲಿ ಕವಿ ವ್ಯಾಸರಿಗಲ್ಲದೆ ವರ್ಣಿಸಲಳವೆ ಭಾಸುರ ಸುಂದರ ವದನ ಪ್ರಸನ್ನನು ರಾಸಕ್ರೀಡೆಯ ರಸವನು ಹರಿಸುತ 6
--------------
ವಿದ್ಯಾಪ್ರಸನ್ನತೀರ್ಥರು
ಮುರಳೀ ಮನೋಹರ ವಿಠಲ | ಪೊರೆ ಇವಳಾ ಪ ಗುರು ರಾಘವೇಂದ್ರರ್ಗೆ | ತೋರ್ದ ಶಿರಿಕೃಷ್ಣಾ ಅ.ಪ. ಸಿರಿ | ನರಸಿಂಹ ಮೂರುತಿಯೆಚಂದದಲಿ ಸುಜ್ಞಾನ | ದೊಂದು ಅಂಕುರವಾ |ಸಂದೇಹ ವಿಲ್ಲದಲೆ | ಅಂದು ಸ್ವಪ್ನದಿ ತೋರಿಮಂದಳನ ಉದ್ಧಾರ | ವೆಂದು ಸೂಚಿಸಿದೇ 1 ಭಯ ಕೃತುವು ಭಯನಾಶ | ವಿಯದಧಿಪ ಗೊಲಿದವನೆನಯ ವಿನಯದಿಂ ಬೇಡ್ವ | ಹಯಮೊಗನ ದಾಸ್ಯದಯದಿ ಕೊಟ್ಟವಳೀಗೇ | ಭಾಗ್ಯ ವೈರಾಗ್ಯವನುದಯೆಗೈದು ಹೇಯೊ ಸಾ | ದೇಯಗಳ ತಿಳಿಸೋ 2 ಹರಿಯು ನೀ ನಿತ್ತುದಕೆ | ಉರುತರದ ತೃಪ್ತಿಯನುಅರಿತಿಹಳು ಈ ಗೃಹಿಣಿ | ಪರಿಸರೇಡ್ಯಾ |ದುರಿತ ರಾಶಿಗಳಳಿದು | ಹರುಷವನೆ ಸುಡಿಸುವುದುಶರಣ ಜನ ಮಂದಾರ | ಕರುಣಾಬ್ಧಿ ಹರಿಯೇ 3 ಮಧ್ವಮತ ಪದ್ಧತಿಗ | ಳುದ್ಧರಿಸ ಇವಳಲ್ಲಿಶ್ರದ್ಧೆ ಭಕುತಿಯು ಜ್ಞಾನ | ಮಧ್ವಮತದೀಕ್ಷಾವೃದ್ಧಿಗೈಸಿವಳಲ್ಲಿ | ಶುದ್ಧ ಆನಂದಾತ್ಮಅಧ್ವರೇಡ್ಯನೆ ಅನಿ | ರುದ್ಧ ಮೂರುತಿಯೇ 4 ಮೋದ ಮೋದ ಬಡಿಸಿವಳಾ 5
--------------
ಗುರುಗೋವಿಂದವಿಠಲರು
ಮುರಳೀ ಲೋಲನ ಪ್ರೇರಿಸುವಳು ರಾಧೆ ಪ ಒಲಿವಲಿ ನಲಿವಲಿ ಉಲಿವಲಿ ನಿಲುವಲಿ ಮಲಿನವ ಕಳೆವಲಿ ಲೀಲೆಗಳಲಿ ರಾಧೆ ಅ.ಪ ಕಂಗಳ ನೋಟದಿ ಸಂಗರದಾಟದಿ ಅಂಗ ಸೌಂದರ್ಯದಿ ಮಂಗಳ ವೇಷದಿ 1 ಮುರಳಿಯ ರವದಲಿ | ಕೊರಳಿನ ಸರದಲಿ ಕರುಣೆಯ ಮನದಲಿ | ಪರಿಮಳ ಭರದಲಿ2 ಮಾಂಗಿರಿ ಶೃಂಗದಿ | ರಂಗನ ವೇಷದಿ ಮಂಗಳನಾದದಿ | ಹೊಂಗೊಳಲೂದಿ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮುರಾರಿಯನೆ ಕೊಂಡಾಡು ಎಲೆ ಮನ ಮುರಾರಿ ಪ ಮಂದಿಯ ಮತಿಗೆ ಯೆಂದೆಂದು ಮರುಗದೆ | ಮುಂದಿನ ಗತಿಯನು ನೋಡು 1 ಕಾಲನ ದೂತ ಕಾಲಿಗೆ ಬಿದ್ದರೆ | ನಾಳೆಗೆ ನಿಲ್ಲೋರೆ ನೋಡು 2 ರಾಜೀವ ಮುಖಿಯರ ಸೋಜಿಗ ಮೆಚ್ಚಿದೆ |ವಿಜಯವಿಠ್ಠಲನ ಬೇಡು 3
--------------
ವಿಜಯದಾಸ
ಮುಳ್ಳು ಮೊನಿಯ ಮ್ಯಾಲ ಮೂರು ಕೆರಿಯ ಕಟ್ಟಿಎರಡು ಹೂಳು, ಒಂದು ತುಂಬಲೆ ಇಲ್ಲ 1 ತುಂಬದ ಕೆರೆಗೆ ಮೇಯಾಕ ಬಂದವು ಮೂರು ಎಮ್ಮಿಎರಡು ಗೊಡ್ಡು ಒಂದು ಕಂದು ಹಾಕಿ ಕರುವೇ ಇಲ್ಲ 2 ಕರುವಿಲ್ಲದ ಎಮ್ಮಿಯ ಕೂಡಿದರ ಮೂವರು ಹೆಣ್ಮಕ್ಕಳಾಇಬ್ಬರು ಬಂಜಿಯರು, ಒಬ್ಬಾಕಿ ಹಡೆದೇ ಇಲ್ಲ 3 ಹಡೆಯದ ಹೆಣ್ಣ ಕೂಡಿಕೊಂಡರು ಮೂವರು ಕುಂಬಾರರುಇಬ್ಬರು ಚೊಂಚರು, ಒಬ್ಬಗೆ ಕೈಯೇ ಇಲ್ಲ 4 ಕೈಯಿಲ್ಲದ ಕುಂಬಾರ ಮಾಡಿಕೊಟ್ಟ ಮೂರು ಮಡಿಕಿಗಳಎರಡು ದದ್ದು, ಒಂದಕೆ ತಳವೆ ಇಲ್ಲ5 ತಳವಿಲ್ಲದ ಮಡಕಿಗಿ ಕೊಟ್ಟಾರ ಮೂರು ರೊಕ್ಕಎರಡು ನಕಲು, ಒಂದು ಸವಕಲು 6 ಸವಕಲು ರೊಕ್ಕದಾಗ ಕುಚ್ಚಲಿಕೆ ತಂದಾರ ಮೂರ ಕಡುಬಎರಡು ಕುದಿಯಲಿಲ್ಲ ಒಂದು ಬೇಯಲಿಲ್ಲ 7 ಬೇಯದ ಕಡುಬಿಗಿ ಬಂದಾರ ಮೂವರು ಬೀಗರಇಬ್ಬರು ಬೊಚ್ಚರು, ಒಬ್ಬಗೆ ಹಲ್ಲೇ ಇಲ್ಲ 8 ಹಲ್ಲಿಲ್ಲದ ಬೀಗನಿಗೆ ಕೊಟ್ಟಾರ ಮೂರು ಚಿಕಣಿ ಅಡಕಿಎರಡು ಗೋಟು, ಒಂದು ಸಿಡಿದು ಕಾಣೆಯಾಯಿತು 9 ಕಾಣೆಯಾದ ಅಡಿಕಿಯ ನೋಡಾಕಂತ ಹೋಗ್ಯಾರ ಮೂರ ಮಂದಿಇಬ್ಬರು ಒಂಚೊರಿ, ಒಬ್ಬಗೆ ಕಣ್ಣೇ ಇಲ್ಲ10 ಕಣ್ಣಿಲ್ಲದವನ ಕರೆತರಬೇಕಂತ ಹೋಗ್ಯಾರ ಮೂರ ಮಂದಿಇಬ್ಬರು ಕುಂಟರು, ಒಬ್ಬಗೆ ಕಾಲೇ ಇಲ್ಲ 11 ಕಾಲಿಲ್ಲದವನ ಹೊತ್ತು ತರಬೇಕಂತ ಹೋಗ್ಯಾರ ಮೂರು ಮಂದಿ ಇಬ್ಬರು ಲಂಡರು, ಒಬ್ಬ ಮೊಂಡ 12 ಕಾಗಿನೆಲೆ ಕನಕದಾಸ ಹಾಕಿದ ಮುಂಡಗಿಇದ ತಿಳಿದವ ಜಾಣ. ಒಡೆದು ಹೇಳಿದವ ಕೋಣ13
--------------
ಕನಕದಾಸ