ಒಟ್ಟು 4509 ಕಡೆಗಳಲ್ಲಿ , 123 ದಾಸರು , 3059 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂಥಾದರು ಬಂದರು ಚಿಂತೇ ಇಲ್ಲಾ ಪಂಥವು ಸರಿಯಲ್ಲಾ ಪ ಚಿಂತೆ ಎಂದೆಂಬುದೆ ಮನಸಿನ ರೋಗಾ ಸಂತಸ ಸಂತ್ಯಾಗ ಎಂಥೆಂಥ ಮಿಂಚುವ ದೇಹವಿದೀಗ ಕೃಂತನ ವಿಧಿಭಾಗ ಎಂತಲ್ಲಿ ನೆಲೆಸಿ ಹವಣಿತ ರೋಗಾ ಸಂತತ ಜಡ ಬೀಗಾ ನೀ ನೆನ್ನೊ 1 ಹಿತಾಹಿತವೆಂದಿಗೂ ಕೈಶೇರಿಲ್ಲಾ ಕೃತಿಪತಿ ತಾ ಬಲ್ಲಾ ಮತಿಗೆಟ್ಟು ಸತಿಯೇ ಗತಿಯೆಂದೆಲ್ಲಾ ಸುತಮೋಹ ಬಿಡಲಿಲ್ಲಾ ಮಿತಿಮೀರಿ ಪಣ ಭಂಡಾರದೊಳೆಲ್ಲಾ ರತಸುಖರೆ ಡಿಲ್ಲಾ ಕೇಸರಿ ಸುಖಗುರಿ ಮುರಿಯಲು ಧೃತಿಗೆಟ್ಟು ಬಳಲುವ ಸಂಗತಲ್ಯಾರು ತಿಳಿಯೋ 2 ನೀರಿನ ಬುದ್ಬುದ ಪರಿಸಂಸಾರಾ ದುಃಖದ ಆಗಾರಾ ಶ್ರೀರಾಮ ಮಂತ್ರದ ಸಾರಾ ನಿಜ ಸೌಖ್ಯದ ದ್ವಾರಾ ಶೇರಿ ಹಣ ಹೊನ್ನು ಹೆಂಣ ವಿಚಾರಾ ಗಂಜಾಸಮ ತಾರಾ ನಿಜಸುಖವನು ಪಡೆಯೇ 3
--------------
ನರಸಿಂಹವಿಠಲರು
ಎಂಥಾದೋ ಶ್ರೀ ವೈಕುಂಠವೆಂಥಾದೋ ಪ ಕಂತುಪಿತನ ದೇಹಕಿರಣ ಅದ ರಂತರಂಗ ಹೇಮಾಭರಣ ಕಾಂತಿ ಗಂತು ನಾಚಿದ ರವಿ ಅರುಣ ಅಹಾ ನಂತ ಕಾಲದಲ್ಲಿ ಸಂತತ ತುತಿಪರ್ಗೆ ಪ್ರಾಂತಕ್ಕೆ ನಾಲ್ಕು ನಿಶ್ಚಿಂತ ಮುಕ್ತಿಯ ಸ್ಥಾನ 1 ಪಾಲಸಾಗರ ಮಧ್ಯೆ ಕೂಟ ಒಳ ಗೇಳು ಸುತ್ತಿಸಾಗರ ದಾಟಿ ತಾಳ ಮೇಳದವರು ಮೂರುಕೋಟಿ ನಾಮ ಪೇಳ್ವ ಗಾಯಕರ ಗಲಾಟೆ ಆಹ ಶೀಲ ಮುನಿಗಳು ದೇವ ಗಂಧರ್ವರು ಜೀವನ್ಮುಕ್ತರುಗಳು ಸೇರಿಪ್ಪ ಹರಿಪುರ2 ಹೇಮ ಪ್ರಾಕಾರದ ಪುರವು ಅಲ್ಲಿ ಆ ಮಹ ಬೀದಿ ಶೃಂಗಾರವು ನೋಡೆ ಕಾಮಧೇನು ಕಲ್ಪತರುವು ಬಲು ರಮಣೀಯವಾದ ಇರವು ಆಹಾ ಶ್ರೀ ಮೂರುತಿಯೊಂದು ವೇದಾಂತಶ್ರುತಿ ಸಾರೆ ಆ ಮಹಮುಕ್ತರು ಸೇರಿಹ ಮಂದಿರ 3 ಸುತ್ತಲು ಸನಕಾದಿ ಮುನಿಯ ದಿವ್ಯ ನರ್ತನ ಗಾಯನ ಧ್ವನಿಯು ಪುಷ್ಟ ವೃಷ್ಟಿ ಚಂಪಕ ಜಾಜಿ ಹನಿಯು ಅಲ್ಲಿ ಅಷ್ಟಮ ಸ್ತ್ರೀಯರ ಮನೆಯು ಆಹಾ ಪಾದ ಸಂ ಪತ್ತಿಗೀ ಶಯನ ಸರ್ವೋತ್ತಮನ ಗೃಹ 4 ಥಳಥಳಿಸುವ ದಿವ್ಯದ್ವಾರ ಅಲ್ಲಿ ಹೊಳೆವಂಥ ರಂಗಮಂದಿರ ಮುತ್ತಿ ಭಾರ ಹೇಮ ತುಳಸಿ ಸರದ ಶೃಂಗಾರ ಆಹಾ ಹೊಳೆವ ಮಾಣಿಕದ ಮಂಟಪ ಮಧ್ಯದೊಳ್ಮೆರವ ಚೆಲುವ ಜಗನ್ನಾಥ ವಿಠಲನ ನಿಜಸ್ಥಾನ 5
--------------
ಜಗನ್ನಾಥದಾಸರು
ಎಂಥಾದ್ದೊ ಹರಿಯ ಕರುಣ ಪ ಎಂಥಾದ್ದೊ ಹರಿಯ ಮಹಿಮೆಎಂಥಾದ್ದೆನ್ನ ಬಾರದು ಗಡ ಅ.ಪ ಅಂತ್ಯವಿಲ್ಲದ ನಿಜಾನಂದ ತೃಪ್ತನು ಗಡಸಂತರೊಕ್ಕುಡಿತೆಯ ಜಲಕೆ ಹಿಗ್ಗುವ ಗಡ 1 ಸನಕಾದಿ ಮುನಿಮನಕೆ ಸಿಲುಕದಗಮ್ಯನು ಗಡನೆನೆವರ ಮನದಣಿಯೆ ತನ್ನ ತೋರುವ ಗಡ2 ಶ್ರ್ರುತಿತತಿಗೆ ಮೈದೋರದತಿ ಮಹಿಮನು ಗಡಮತಿಯುಳ್ಳವನ ಭಕ್ತಿ ಸ್ತುತಿಗೆ ಹಿಗ್ಗುವ ಗಡ3 ಲೋಕ ಪತಿಗಳಿಗೆಲ್ಲ ಒಡೆಯ ತಾನೆ ಗಡಬಾಕುಳಿಕನಾಗಿ ಭಕುತರ ವಶದಲ್ಲಿಪ್ಪ ಗಡ 4 ಆರರೊಳು ಸಡ್ಡೆಯಿಲ್ಲದ ನಿಸ್ಸಂಗನು ಗಡಸಾರಿದವರಿಗೆ ತಂದೆತಾಯಿ ಸಿರಿಕೃಷ್ಣ ಗಡ 5
--------------
ವ್ಯಾಸರಾಯರು
ಎಂದಿಗಾಹುದೋ ನಿನ್ನ ದರುಶನ | ಇಂದಿರೇಶ ಮುಕುಂದ ಕೇಶವ ಪ ಗಾನಲೋಲನೆ ದೀನವತ್ಸಲ | ಮಾನದಿಂದಲಿ ನೀನೆ ಪಾಲಿಸೋ 1 ಯಾರಿಗೆ ಮೊರೆ ಇಡುವೆ ಶ್ರೀ ಹರಿ | ಸಾರಿ ಬಂದು ನೀ ಈಗಲೆ ಪೊರಿ 2 ಗಜವ ಪಾಲಿಸೊ ಗರುವದಿಂದಲಿ | ಭುಜಗಶಯನ ಶ್ರೀ ವಿಜಯವಿಠಲಾ 3
--------------
ವಿಜಯದಾಸ
ಎಂದಿಗೀಪದ ಕರುಣಮಾಡುವೆಯೋ ನಿಮ್ಮ ಧ್ಯಾನಾ ನಂದ ಅಮೃತಪಾರ ನವಿನುಡಿಯ ಪ ಎಂದಿಗೀಪದ ಕರುಣಮಾಡಿ ಕರವ ಪಿಡಿದು ಮಂದಮತಿಯ ತರಿದು ಪೊರೆಯುವೆ ಸಿಂಧುಶಯನ ತಂದೆ ಶ್ರೀಹರಿ ಅ.ಪ ವಿಷಮಸಂಸಾರ ಮೋಹವನು ಬಿಡಿಸಿ ನಿಮ್ಮ ಭಜನ ಅಸಮ ಸುಖದೆನ್ನ ಮನವ ನಿಲ್ಲಿಸಿ ವ್ಯಸನ ಏಳರ ಕಾಟ ತಪ್ಪಿಸಿ ಬಿಡದೆ ಎನ್ನ ರಸನೆಮೇಲ್ನಿಮ್ಮ ನಾಮ ಸ್ಥಾಪಿಸಿ ವಸುಧೆ ಜನರ ಸುದ್ದಿ ಮರೆಸಿ ನಶಿಪ ಲೌಕಿಕದಾಸೆ ಕೆಡಿಸಿ ಕುಶಲಮತಿಯಿತ್ತು ಪಾಲಿಸುವ ಮಹ ಅಸಮಶುಭದಿನ ಕುಸುಮನಾಭ 1 ಹತ್ತು ಇಂದ್ರಿಯ ಮೂರು ಬಾಧೆ ತೊಲಗಿಸಿಬಿಡದೆ ಎನ್ನ ನೇತ್ರದೊಳು ತವಮೂರ್ತಿ ನಿಲ್ಲಿಸಿ ಸುತ್ತಿ ಕೊಲುವ ಮಾಯ ಮುಸುಕು ಹಾರಿಸಿ ನಿತ್ಯದೆನ್ನ ಚಿತ್ತದೊಳು ನಿಜಜ್ಞಾನ ಸ್ಥಿರಪಡಿಸಿ ಸತ್ಯ ಸನ್ಮಾನ್ಯಕ್ತನೆನಿಸಿ ನಿತ್ಯ ನಿರ್ಮಲ ನಿಮ್ಮ ಭಕ್ತರ ಉತ್ತಮ ಸಂದರುಶನವಿತ್ತು ತವ ಭೃತ್ಯನೆನಿಸೆನ್ನ ಸಲಹುವಂಥ 2 ಕ್ಲೇಶ ಪಂಚಕದುರುಲು ಪರಿಹರಿಸಿ ಅನುಮೇಷ ನಿಮ್ಮ ದಾಸಜನರಾವಾಸದೆನ್ನಿರಿಸಿ ಮೋಸಮರವೆಯ ಜಾಲ ಛೇದಿಸಿ ನಿಶಿದಿವದಿ ನಿಮ್ಮ ಧ್ಯಾನದೊಳೆನ್ನ ಮನವಐಕ್ಯೆನಿಸಿ ಮೋಸ ಪಾಶಗಳೆಲ್ಲನಾಶಿಸಿ ದೋಷರಾಶಿಯಿಂ ಮುಕ್ತನೆನಿಸಿ ಶ್ರೀಶ ಶ್ರೀರಾಮ ನಿಮ್ಮ ಚರಣ ದಾಸನೆನಿಸಿ ಪೋಷಿಸುವಂಥ 3
--------------
ರಾಮದಾಸರು
ಎಂದಿಗೂ ಮರುಳಾಗೆನೋ ಸಂಸಾರಕ್ಕೆ ಎಂದಿಗೂ ಮರುಳಾಗೆನೋ ಪ ಬಂಧವ ತರಿವ ಕೇಶವನ ದಾಸನಾಗಿ ಪಾದ ಸೇರುವೆನಯ್ಯ ಅ.ಪ ನಾರಿಯರನು ನೆಚ್ಚಿಸೀ ಧರ್ಮವ ಬಿಡಿಸಿ ಮಾರಿಯರ ಸಾಕಿಸೀ ಆರರ ವಶಮಾಡಿ ರತಿಕ್ರೀಡೆ ನಂಬಿಸಿ ಮಾರಿಯ ಗೃಹಕೆನ್ನ ಗುರಿಮಾಡ್ವ ಭವಕೇ 1 ಹÉೂನ್ನುಗಳಿಗೆ ಮೆಚ್ಚಿಸೀ ಸತ್ಯವ ಬಿಡಿಸಿ ಮಣ್ಣುಗಳಿಗೆ ಸೊಕ್ಕಿಸೀ ಬಣ್ಗೆಣ್ಣಿಸಲಾಗದ ಪಾಪವ ಮಾಡಿಸಿ ಚಿನ್ನನ ಮರೆಸುವ ಪುಸಿಯಾದ ಭವಕೇ 2 ಸ್ಮರಣೆಗಳನ್ನೇ ಮಾಡಿ ಸರಸದಿ ಪಾಲಿಪ ಭಕ್ತರ ಪರಿಯನ್ನು ಭರದಿ ಸೇರಿಸಿ ಚನ್ನಕೇಶವಾ ಗತಿಯೆಂಬೇ 3
--------------
ಕರ್ಕಿ ಕೇಶವದಾಸ
ಎಂದಿಗೆ ದೊರಕುವನು ಶ್ರೀಗುರುವನ ಗೆಂದಗೆ ದೊರಕುವನು ಪ ಮಂದಮತಿಯ ಕಡೆಗ್ಹೊಂದಿಸಿ ಸಚ್ಚಿದಾ ನಂದ ಬ್ರಹ್ಮನ ಕೃಪೆಯಿಂದ ಪಾಲಿಸಿದಾತಾ ಅ.ಪ. ಕರುಣದಿ ಕರದು ತನ್ನಾ ತೊಡೆಯ ಮೇಲ್ಕು ಳ್ಳಿರಿಸಿ ಶರಧಿಯೊಳೀಡಾಡಿ ಈಶ್ವರನ ತೋರಿದ ಗುರು ಎಂದಿಗೆ 1 ತನ್ನ ತಾ ತಿಳಿವವೊಲು ತತ್ವನಸಾರ ವನ್ನು ಸಾಧುಗಳಿಂದಲಿ ಚೆನ್ನಾಗಿ ಅರಿತುಕೊಳ್ಳೆಂದು ಅಮೃತಪಾನವನ್ನು ಮಾಡಿಸಿದ ಪ್ರಸನ್ನವದನ ಗುರು ಎಂದಿಗೆ 2 ಹುಟ್ಟಿಸಾಯದಂದದಿ ವಾಕ್ಯದ ಮದ್ದು ಕೊಟ್ಟು ಜೀವನ್ಮುಕ್ತಿಯ ಪಟ್ಟವ ಗಟ್ಟಿ ಫಣಿಗೆ ಮಂಗಲಾಕ್ಷತೆ ಇಟ್ಟ ವಿಮಲಾನಂದ ಬಟ್ಟೆದೋರಿದ ಗುರು 3
--------------
ಭಟಕಳ ಅಪ್ಪಯ್ಯ
ಎಂದಿಗೆ ಬಿಟ್ಟೀತು ಈ ಆಸೆ ಪ ಕುಂದಿ ಕುಂದಿ ಕೊರಗುವ ಮನಸೆ ಅ.ಪ ಸಾರವಿಲ್ಲದ ಸುಖಗಳ ಕೋರಿ | ಸಂ- ಸಾರವೆಂಬ ಚಕ್ರದಿ ಸೇರಿ1 ಕಷ್ಟದಿಂದೇನು ಕಾಣುವೆ ಕೊನೆಗೆ 2 ಗರ್ವಹಂಕಾರಗಳಿಂ ಮೆರೆದೆ 3 ಅದು ಇದು ಬೇಕೆಂದಪೇಕ್ಷಿಸುವೆ | ನಿನ್ನ ಮೊದಲರಿಯದೆ ವೃಥಾ ಯೋಚಿಸುವೆ 4 ಪರಮಸುಖವ ಪಡು ನೀ ಸತತ 5
--------------
ಗುರುರಾಮವಿಠಲ
ಎಂದಿಗೊ ಕಾಣೆ ಸುಖವು | ಜೀವಕೆ ಪ ಬಂಧಕದೊಳು ಸಿಕ್ಕಿ ಬಾಧೆ ಪಡುತಿಹುದು ಅ.ಪ ಜನರೂಢಿ ನೋಡಿದರೆ ಕೊನೆಗಾಣುವುದೇ ಇಲ್ಲ 1 ಗರ್ಭಯಾತನೆ ಎಂಬೋದÀರ್ಭುದವಾಗಿಹದು ನಿರ್ಭರ ದುಃಖಗಳಾವಿರ್ಭೂತವಾಗುವುದೊ 2 ಬಾಳುವ ಕೌಮಾರದಿ ಬಹುಚಿಂತೆಯನುದಿನ 3 ಬದ್ಧ ಸಂಸಾರಕೆ ಮದ್ದು ಮಾಡುವರಾರು 4 ಯಾವಾವಸ್ಥೆಗಳಲ್ಲಿ ಜೀವಗೆ ಸುಖವಿಲ್ಲ ಕಾವನು ಗುರುರಾಮವಿಠಲನೊಬ್ಬನೆ ಬಲ್ಲ 5
--------------
ಗುರುರಾಮವಿಠಲ
ಎಂದು ಕಾಣಬೇಕೋ ಹೀಂಗಾದ ಮೇ ಲೆಂದು ಕಾಣಬೇಕೋ ಪ ಎಂದು ಕಾಣಬೇಕು ಮಂದಮನವೇ ನೀ ಹೊಂದಿ ಭಜಿಸವಲ್ಲ್ಯಾಮಂದರಧರನಡಿ ಅ.ಪ ದುರಾಸೆ ತೊರಿವಲ್ಲಿ ನಿನ್ನ ದುರ್ಗುಣ ಬಿಡವಲ್ಲಿ ಅರಿವು ನಿಲ್ಲಿಸವಲ್ಲಿ ಮರುಳುಗುಣಳಿವಲ್ಲಿ ನಿರುತ ಭಜಿಸುವಲ್ಲಿ ನರಹರಿ ಚರಣ 1 ಸಂಶಯ ಬಿಡವಲ್ಲಿ ಮನದ ಹಿಂಸಗುಣಳಿವಲ್ಲಿ ಧ್ವಂಸ ಮಾಡುವಲ್ಲಿ ಸಂಸಾರದ ಬಲೆ ಹಿಂಸನೆ ನೆನೆವಲ್ಲಿ ಕಂಸಾರಿಯಪಾದ 2 ಕ್ಲೇಶ ನೀಗುವಲ್ಲಿ ವಿಷಯದಾಸೆ ತೊರೆಯವಲ್ಲಿ ವಾಸನಳಿಯುವಲ್ಲಿ ಮೋಸಬಿಡವಲ್ಲಿ ಪಾದ 3
--------------
ರಾಮದಾಸರು
ಎಂದು ಕಾಂಬುವೆ ಮಾಧವತೀರ್ಥರ ಸುಂದರ ಮಂದಿರ ಪ ಚಾರುಚಿತ್ರ ಕಲಶಕನ್ನಡಿ ಆರೊಂದು ನೆಲೆಗೋಪುರವ ಸವಿ ಸ್ತಾರಮಾಗಿ ತೋರುವ ಮಹಾ ದ್ವಾರದಮುಂದೆ ಬಿದ್ದು ನಮಿಸಿ 1 ತೊಲೆತುಂಡು ಕಂಭ ಬೋದುಗೆ ಶಿಲೆಯಿಂದ ನಿರ್ಮಿತವಾಗಿ ಹೊಳೆವ ಮಂಟಪ ರಂಗು ಮಧ್ಯ ದೊಳಗೆಚೆಲುವ ವೃಂದಾವನವ 2 ಮೂಲ ಪ್ರತಿಮೆ ಸಾಲು ಸಾಲು ವಿ ಮೂಲಪೀಠದ ಪವಿತ್ರಶಾಲೆ ಕಾಲತ್ರಯದಿ ವೇದಘೋಷ 3 ಧಾತ್ರಿಜನರು ಬಂದು ಕೂಡಿ ಯಾತ್ರೆಗೈದು ಜನುಮ ನಿತ್ಯ ಸಾರ್ಥಮಾಡಿಕೊಂಡು ಸತತ ಅರ್ಥಿಯಿಂದ ಪೋಪ ಸಮಯ 4 ಧರೆಯೊಳಧಿಕ ಬುದ್ಧಿನ್ನಿಪುರದಿ ಮೆರೆವ ಶ್ರೀಗುರು ಮಾಧವೇಂದ್ರ ವರಮಂದಿರದಮಿತ ವೈಭವ ಕರುಣಿ ಶ್ರೀರಾಮ ನಿಂತು ನಡೆಸುವ 5
--------------
ರಾಮದಾಸರು
ಎಂದು ಕಾಂಬೆನು ಪಾಂಡುರಂಗ ಮೂರುತಿಯಾ ಇಂದು ಭಾಗನಿವಾಸ ನರನ ಸಾರಥಿಯ ಪ ಚಾರು ಚರಣಾಂಗುಲಿ ನಖರ ತರುಣೀಂದುಚ್ಛವಿ ತಿರಸ್ಕರಿಸುವ ಪ್ರಖರ ಕಿರುಗೆಜ್ಜೆ ಕಡಗ ನೂಪುರ ಪೆಂಡೆ ಶಫರ ತೆರಜಾನು ಜಂಘೆ ಭಾಸ್ಕರ ರತ್ನ ಮುಕುರ1 ರಂಭಾ ಪೋಲುವ ಊರು ಪೊಂಬಣ್ಣಾಂಬರವ ಕುಂಭೀ ಮಸ್ತಕದೊಲ್ ನಿತಂಬದಿ ಪೊಳೆವ ಕಂಬು ಮೇಖಳಕಂಜ ಗಂಭೀರ ನಾಭೀ ವಿಧಿ ಶಂಭು ಪೂಜಿತನ 2 ಲವಕುಕ್ಷಿತ್ರವಳಿ ಬಾರ್ಗವಿ ವಕ್ಷ ಉರವು ಕೌಸ್ತುಭ ವೈಜಯಂತಿಯ ಸುವಿಶಾಲ ವಕ್ಷದೊಳ್ ವಿವಿಧ ಹಾರಗಳು ನವನೀತ ಚೋರ ಶ್ರೀ ಪವಮಾನಾರ್ಚಿತನ 3 ಪದಕ ಸರಿಗೆಯ ಜಾಂಬೂನದ ಕಂಬುಕಂಠ ರದನೀಕರ ಬಾಹು ಚದುರ ಭುಜಕೀರ್ತಿ ಬದರ ಸಂಕಾಶಾ ಅಂಗದ ರತ್ನ ಕಟಕಾ ಪದಮಾರುಣ ಕರಯುಗ್ಮ ಕಟಿಯಲ್ಲಿಟ್ಟವನಾ4 ವಿಧುಬಿಂಬೋಪಮ ಚಲ್ವವದನ ಕೆಂದುಟಿಯಾ ಬಿದುರಾಭಾದಶನಾಲಿಂಗದನೊಳ್ ಕಿರುನಗೆಯಾ ಕದಪು ಕನ್ನಡಿ ನಾಸಾ ತುದಿ ಚಂಪಕ ತೆನೆಯಾ ಉದಕೇಜಾಯತ ನೇತ್ರಯದುವಂಶೋದ್ಭವನಾ 5 ಕುಂಡಲ ಕರ್ಣ ಸುಲಲಿತ ಭ್ರೂಯುಗಳ ಪೊಳೆವ ಬಾಲ ಶಶಾಂಕ ತಿಲಕಾಂಕಿತ ಫಾಲ ಅಳಿಬಾಲವೆನಿಪ ಕುಂತಳ ರತ್ನ ಚಕಿತ ಕಲಧೌತ ಮಕುಟ ದಿಗ್ವಲಯ ಬೆಳಗುವನ 6 ಮಾನವ ಹರಿಯಾ ವಟುಭಾರ್ಗವ ಕಾಕುಸ್ಥ ಶಠ ಕಂಸದ್ವಿಷನ ನಿಟೆಲಾಂಬಕ ಸಹಾಯ ಖಳಕಟಕಾರಿ ಭೀಮಾ ತಟವಾಸ ಜಗನ್ನಾಥವಿಠಲ ಮೂರುತಿಯ 7
--------------
ಜಗನ್ನಾಥದಾಸರು
ಎಂದು ಕಾಂಬೆನೆ ಯದುವರನಾ| ತಂದು ಲೋಲಿಸೆ ಸಖಿಜಿತ ರೂಪಸ್ಮರನಾ ಪ ಶಿರಿದೇವಿ ಪ್ರೀಯನ ಶರಣಾಶ್ರಯನಾ| ಭವ ಭವ ಮುಖರೊಡೆಯನಾ 1 ವಿಮಲೆ ಚರಣನಾ ಕಮಲೇಕ್ಷಣನಾ| ದುರಿತ ಕುಲದೀನೋದ್ಧರನಾ 2 ಹೇಮಾಂಬರನಾ ಶಾಮಸುಂದರನಾ| ಕಾಮಿತಾರ್ಥವ ನೀವ ಕರುಣಾ ಸಾಗರನಾ 3 ತಂದೆ ಮಹಿಪತಿಯಾ ನಂದನ ಸಾರಥಿಯಾ| ಹೊಂದಿದವ ಕಾಂಬಾನಂದ ಮೂರಿತಿಯಾ4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಎಂದು ಕಾಂಬೆನೊ ನಿನ್ನ ಹೇ ಶ್ರೀನಿವಾಸಾ ಪ ನಗೆಮೊಗದ ನತಜನ ಬಂಧು ಬಾಬಾರೆನ್ನ ಬಿ - ಟ್ಟಗಲದಲೆ ಮನ ಮಂದಿರದೊಳಿರು ಮುನ್ನಾದರು ಸುಪ್ರಸನ್ನ ಮುಂದೆ ಗತಿ ಏನಯ್ಯ ಮುಕುತರ ಹಿಂದುಳಿದವನಲ್ಲದಲೆ ತನು ಸಂ - ಬಂಧಿಗಳ ವಶನಾಗಿ ದುರ್ವಿಷ - ಯಾಂಧಕಾರದಿ ಮುಳುಗಿದೆನೊ ನಾ ಅ.ಪ. ಹಲವು ಜನ್ಮದ ನೋವಾ ನಾ ಹೇಳಿಕೊಳಲೇನೆಲವೊ ದೇವರ ದೇವಾ ನೀ - ನಲ್ಲದಲೆ ಭೂವಲಯದೊಳಿಗಿನ್ನಾವಾ ನಂಬಿದರ ಕಾವ ಸುಲಭರೊಳಗತಿ ಸುಲಭನೆಂಬುವ ಅಲವಬೋಧಮತಾನುಗರು ಎನ - ಗೊಲಿದು ಪೇಳಲು ಕೇಳಿ ನಿಶ್ಚಂ - ಚಲದಿ ನಿನ್ನನೆ ಧೇನಿಸುವೆ ನಾ ಕಲುಷ ಸಂಸ್ಕಾರಗಳ ವಶದಿಂ ಹೊಲಬುಗಾಣದೆ ಹರುಷಗುಂದುವೆ ಹೊಲೆ ಮನದ ಹರಿದಾಟ ತಪ್ಪಿಸಿ ನೆಲೆಗೆ ನಿಲ್ಲಿಸದಿರ್ದ ಬಳಿಕಿನ್ನೆಂದು 1 ಭಾರತೀಪತಿಪ್ರೀಯಾ ಎಂದೆಂದು ಭಕುತರ ಭಾರ ನಿನ್ನದೊ ಜೀಯಾ ಜಗವರಿಯೆ ಕರುಣಾ - ವಾರಿಧಿಯೆ ಪಿಡಿ ಕೈಯ್ಯಾ ಫಣಿರಾಜಶಯ್ಯಾ ತಾರಕನು ನೀನೆಂದು ತಿಳಿಯದ ಕಾರಣದಿ ಸುಖ ದುಃಖಮಯ ಸಂ - ಸಾರ ದುಸ್ತರ ಶರಧಿಯೊಳು ನಾ ಪಾರಗಾಣದೆ ಪರಿದು ಪೋಪೆನೊ ದೂರನೋಳ್ಪದು ಧರ್ಮವಲ್ಲವೊ ದ್ವಾರಕಾಪುರನಿಲಯ ಪರಮೋ - ದಾರ ತನುವೆಂದೆನ್ನ ಪಾಲಿಗೆ ಬಾರದಲ್ಲದೆ ಭವವಿಮೋಚನ 2 ವಿಕಸನಾರ್ಚಿತಪಾದ ವಿಶ್ವೇಶ ಜನ್ಮಾ - ದ್ಯಖಿಲ ಕಾರಣನಾದ ನಿರ್ದೋಷ ಸತ್ಯಾ - ಸುಖಗುಣಾರ್ಣವ ಶ್ರೀದವಿಠಲಪ್ರಸೀದ ಸಕಲ ಕ್ರಿಯ ಯೋಗಗಳು ತನು ಬಂ- ಧಕವು ನಿನಗೊಪ್ಪಿಸದಿರಲು ಎನೆ ನಿಖಿಳ ಜೀವರ ಭಿನ್ನ ನಿನ್ನಯ ಯುಕುತಿಗೆ ನಮೊ ಎಂಬೆನಲ್ಲದೆ ಯುಕುತ ಯುಕ್ತಿಗಳೊಂದರಿಯದ - ರ್ಭಕನ ಬಿನ್ನಪ ಸಲಿಸಿ ನವವಿಧ ಭಕುತಿ ಭಾಗ್ಯವ ಕೊಟ್ಟು ತವ ಸೇ - ವಕರ ಸೇವಕನೆನಿಸದಿರ್ದೊಡೆ 3
--------------
ಶ್ರೀದವಿಠಲರು
ಎಂದೂ ಬಂಧವಿಲ್ಲ ಆತ್ಮಗೆ ಬಂಧವ ಕಲ್ಪನೆ ಮಿಥ್ಯವಿದೆಲ್ಲ ಮಂದರ ನುಡಿಯಿದು ಈ ಸಂಸಾರ ಪ ನಿತ್ಯಮುಕ್ತನೇ ತಾನಾದವಗೆ ಮಿಥ್ಯವ ಕಲ್ಪನೆ ಬರುವದೆಂತೋ ತಥ್ಯವಿಲ್ಲದ ಮಾತಿನ ಮಾಲೆ ಮತ್ತೆ ಬಂಜೆಯಾ ಮಗನೆಂಬುವವೋಲ್ 1 ಆತ್ಮನೆ ತಾನೆಂಬನುಭವ ಪಡೆಯದೆ ಮತ್ತೆ ಶಬ್ದ ಮಾತ್ರವನರಿತವಗೆ ಸುತ್ತಿಕೊಳ್ಳುವುದು ಸಂಶಯ ವಿದುವೆ ಅನುಭವದೊಳಗೇನಿಲ್ಲ ವಿಕಲ್ಪ 2 ಭಾನುವಿಗುಂಟೇ ಉದಯಾಸ್ತಗಳು ಮಾನವಕಲ್ಪನೆಗಳು ತಾನೆಲ್ಲ ತಾನೇ ತಾನಾದವಗಿನ್ನು ಹೀನಭವದ ಭಾಧೆಯುತಾನುಂಟೇ 3 ಅನುಭವರೂಪನು ತಾನಾದಾಗ ಅನುಭವ ಬರುವದು ಈ ನುಡಿ ಕೇಳೈ ಮನವಾಣಿಗೆ ಮೀರಿದ ಸ್ವಾತ್ಮನುನೀ ಚಿನುಮಯ ಶಂಕರತಾನಾದವಗೇ 4
--------------
ಶಂಕರಭಟ್ಟ ಅಗ್ನಿಹೋತ್ರಿ