ಒಟ್ಟು 1737 ಕಡೆಗಳಲ್ಲಿ , 106 ದಾಸರು , 1369 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚಿನ್ಮನೆಂದುಪೇಕ್ಷಿಸದೇ ದತ್ತಾತ್ರೇಯಾ ಪ ಸರಸಿರುಹ ಸಖ ಶತಕೋಟಿ ತೇಜಾ ಪರಭಕ್ತ ಜನ ಸುರ ಭೂಜಾ ಕರುಣಾ ಸಾಗರ ಅತ್ರಿ ತನುಜಾ ಮೊರೆ ಹೊಕ್ಕವರ ರಾಜಾಧೀರಾಜಾ 1 ಪತಿತ ಜನರ ಮಾಡುತಿಹೆ ಉದ್ಧಾರಾ ಚತುರ್ದಶ ಭುವನಾಧಾರ ಅತಿಕೀರ್ತಿ ಸು ಶೋಭಿತ ದಿಗಂಬರಾ ನುತಗುಣ ಮಂಡಿತ ಮುನಿ ಮನೋಹರಾ 2 ಪರಮ ಪುರುಷ ಸದ್ಗುರು ಸಿರಿಲೋಲಾ ಸರಸಿಜ ನೇತ್ರ ದಯಾಳಾ ಧರಿಯೊಳನೇಕ ರೂಪವ ದೋರ್ಪೆ ಘನಲೀಲಾ ಗುರುವರ ಮಹಿಪತಿ ನಂದನ ಪಾಲಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಚಿರಶಾಂತಿ ಪ್ರದಾತಾ ಗುರುವರಾ ಪರಮಾರ್ಥಪ್ರಬೋಧಾ ಸುಖಕರಾ ಭವವಿತರಣಾ ದಿವ್ಯಚರಣಾ ತಿಮಿರ ಮುಸುಕಿರೆ ಸೋಹಮೆನಿಪ ಜ್ಞಾನಸೂರ್ಯ ಉದಿಸಿ ನೀ ಘನಸ್ವಾತ್ಮರಂಜನಾ ಶೃತಿಶಿರಗಳಿಗೂ ಪೇಳಲಾಗದೆ ನೇತಿ ಎನ್ನುವ ಮೌನವ ಧರಿಸಿದ ಆತ್ಮತತ್ವವ ಪೇಳ್ದೆ ಧೀರನೇ ಭವಶರಧಿಯಲಿ ನಾವಿಕ ನೀನೇ ಸಾವಕಾಶದಿ ದಾಂಟಿಸುತಿರುವೀ
--------------
ಶಂಕರಭಟ್ಟ ಅಗ್ನಿಹೋತ್ರಿ
ಛೀ ಹಳಿ ಥೂ ಖೋಡಿ ಪಾಪಿ ಮನವೆ, ನಿನ್ನ ಪ ಕುಹಕ ಬುದ್ಧಿಗಳೆಲ್ಲ ಬಿಡು ಕಂಡ್ಯ ಮನವೆಅ.ಪ ಬಣ್ಣದ ಬೀಸಣೆಗ್ಯಂತೆ ಹೆಣ್ಣು ತಿರುಗೋದ ಕಂಡು ಕಣ್ಣು ಸನ್ನೆಯಮಾಡಿ ಕೈ ಹೊನ್ನು ತೋರಿ ತಣ್ಣೀರು ಹೊಯಿದ ಹೊಸ ಸುಣ್ಣದಂತೆ ಕುದಿದು ನಿನ್ನ ಕಣ್ಣಿಗೆ ಮಣ್ಣು ಚೆಲ್ಲಿಕೊಂಬರೆ ಮನವೆ 1 ನೆರೆಹೊರೆ ಮನೆಗಳಲಿ ಪ್ರಸ್ಥವನ್ನು ಮಾಡಿದರೆ ಕರೆಯದೆಲೆ ಮೊದಲ್ಹೋಗಿ ಹಾಳು ಹರಟೆ ಬಡಿಗಂಟು ಸುದ್ದಿ ನೂರಾರು ಹೇಳಿ ಅವರ ಹಿರಿಯ ಮಗನಂತೆ ಉದರವ ಪೊರೆವೆ ಮನವೆ 2 ಉತ್ತಮಾನ್ನವ ನೀಡೆ ಮುಸುರೆ ಬಯಸುವಂತೆ ಚಿತ್ತದೊಲ್ಲಭನ ಸಂಗಡದಿ ನಲಿದು ಮತ್ತೆ ಉಪರತಿಗೆ ಪರಪುರುಷನ ಬಯಸುವ ತೊತ್ತು ಬುದ್ಧಿಯನೆಲ್ಲ ಬಿಡು ಕಂಡ್ಯ ಮನವೆ 3 ಪಗಡೆ ಚದುರಂಗ ಕವಡೆಯನಾಡÀ ಕರೆದರೆ ನಿಗುರುವುವು ಕರ್ಣಗಳು ಮೊಚ್ಚೆಯಂತೆ ಜಗದೀಶನ ದಿನದಿ ಜಾಗರಕೆ ಕರೆದರೆ ಮುಗಿಲ್ಹರಿದು ಬಿದ್ದಂತೆ ಧರೆಗಿಳಿವೆ ಮನವೆ 4 ವಾಸುದೇವನ ಪೂಜೆಯೊಮ್ಮೆ ಮಾಡೆಂದರೆ ಬೇಸತ್ತು ತಲೆಯ ಚಿಟ್ಟಿಕ್ಕಿ ಕುಳಿತೆ ಆ ಸಮಯದೊಳಗೊಬ್ಬ ಕಾಸು ಕೊಟ್ಟೇನೆನಲು ದಾಸಿ ಮಗನಂತೆ ಬೆನ್ನಟ್ಟಿ ಪೋದೆ ಮನವೆ 5 ಕುಳ್ಳಿರುವ ಸ್ಥಳವೆಷ್ಟು ಕೂಳು ತಿಂಬುವುದೆಷ್ಟು ಉಳ್ಳನಕ ಕೀರ್ತಿಯಪಕೀರ್ತಿಯೆಷ್ಟು ಗುಳ್ಳೆಯಂದದ ದೇಹನೆಚ್ಚಿ ನೀ ಕೆಡಬೇಡ ಉಳ್ಳಿಪÀರೆ ಸುಲಿದರೆ ಹುರುಳಿಲ್ಲ ಮನವೆ 6 ಬಿಂದು ಮಾತ್ರವೊ ಸುಖವು ದು:ಖ ಪರ್ವತದಷ್ಟು ಸಂದೇಹವಿಲ್ಲವಿದು ಶಾಸ್ತ್ರಸಿದ್ಧ ಎಂದೆಂದು ಸಿರಿಯರಸ ವಿಜಯವಿಠ್ಠಲನಂಘ್ರಿ ಕುಂದದೆ ಹೃದಯದೊಳು ನೆನೆಕಂಡ್ಯ ಮನವೆ 7
--------------
ವಿಜಯದಾಸ
ಜನುಮ ಜನುಮದಲಿ ಎನಗಿರಲಿ ಪ ಹನುಮ ಭೀಮ ಮಧ್ವಮುನಿಗಳ ಸೇವೆಯು ಅ.ಪ ಮಾತರಿಶ್ವ ನೀ ಪ್ರೀತನಾಗೆ ಅಜ ತಾತನು ಸುಲಭದಿ ಒಲಿಯುವನು ಕೋತಿಯ ರೂಪದಿ ಭೂತಲದಲಿ ಬಲು ಖ್ಯಾತಿ ಪಡೆದ ರಾಮದೂತರ ಸೇವೆಯು 1 ಹರನ ಭಕುತ ಜರಾಸಂಧನ ಕಾಯುವ ಹರಿದು ಮುರಿದು ಬಲು ಸುಲಭದಲಿ ಹರಿಗಪರೋಕ್ಷದಿ ಅರ್ಪಣೆ ಮಾಡಿದ ಕುರುಕುಲಪತಿ ಬಲಭೀಮರ ಸೇವೆಯು 2 ಶುದ್ಧ ದ್ವಿಜಕುಲದಿ ಉದ್ಧವಿಸುತ ಅನಿ ರುದ್ಧನಿಗನುಮತವಾಗಿರುವ ಸಿದ್ಧಾಂತದ ಪದ್ಧತಿಯನು ತೋರಿದ ಮಧ್ವಮತದ ತತ್ವದಲಿ ಪ್ರಸನ್ನತೆ 3
--------------
ವಿದ್ಯಾಪ್ರಸನ್ನತೀರ್ಥರು
ಜನ್ಮ ಸಫಲವಾಯಿತು ಪ. ಆದಿ ಅನಂತ ಜನಾರ್ದನನ ಕಂಡುಎನ್ನ ಜನ್ಮ ಸಫಲವಾಯಿತು ಅ.ಪ. ಬ್ರಹ್ಮಾನಂದ ಸುಗುಣ ನಿಮ್ಮ ಮಹಿಮೆಯ ಅ-ಗಮ್ಯಗೋಚರನೆಂದು ಸ್ತುತಿಸುತಿರೆಬ್ರಹ್ಮರುದ್ರಾದಿಗಳು ಇಂದ್ರ ಚಂದ್ರಾದಿಗಳುನಿರ್ಮಲಮೂರುತಿ ನಿಮ್ಮ ನಿಜವ ತೋರಿದಮ್ಯಾಲೆ 1 ಒಡ್ಡಿ ನಿಂತದ್ದು ಕಂಡು 2 ಮಕರಕುಂಡಲ ಕೌಸ್ತುಭ ಕೊರಳವೈಜಯಂತೀ ಮಾಲಿಕೆಗಳ ಕಂಡು ಎನ್ನ 3 ನಡುವಿನ [ಬಾಗಿಲಲಿ]ನಾಭಿಕಮಲ ಕಂಡೆಉದ್ಭವಿಸಿ ಮೆರೆವ ವಿರಿಂಚಿಯ ಕಂಡೆಜಡಿವೊ ಪೀತಾಂಬರ ನಡುವಿನೊಡ್ಯಾಣವಉಡಿಗೆಜ್ಜೆ ಮೇಲಿನ ಕಿರುಗೆಜ್ಜೆಗಳ ಕಂಡು 4 ಮೂರನೆ ಬಾಗಿಲಲಿ ಮುದ್ದು ಶ್ರೀಚರಣವುಶ್ರೀದೇವಿ ಭೂದೇವಿ ಸೇವೆಮಾಳ್ಪುದ ಕಂಡೆಸುರರು ಮಾನವರ ಕಂಡೆ ಸ್ತೋತ್ರಮಾಳ್ಪುದ ಕಂಡೆಉರಗಶಯನ ಮ್ಯಾಲೆ ಹಯವದನನ ಕಂಡು ಎನ್ನ 5
--------------
ವಾದಿರಾಜ
ಜನ್ಯಧರ ದೂರ್ವಾಸ ಪ್ರಮುಖ ಮುನಿ ಸ ನ್ಮಾನ ಕರುಣಿ ವಿಲಾಸ ಶ್ರೀ ಶ್ರೀನಿವಾಸ ಪ ಎನ್ನವಗುಣ ಸಹಸ್ರವೆಣಿಸದೆ ನಿನ್ನವರೊಳಗೆಣಿಸಿ ಅನುದಿನ ಮನ್ಮನಾಲಯದೊಳು ನೆಲಸು ಮೈ ಗಣ್ಣನನುಜ ವರಾಭಯ ಶ್ರೀಕರ ಅ.ಪ. ಕಾಮಿತಪ್ರದಕೋಲಾ ಅಂಜನಾಧಿರÀ ಧಾರ ಧಾಮ ಭೂಮಿ ವಿಲೋಲಾ ಶಂಖಣನೃಪವರದ ಹೇಮ ಲೋಚನ ಕಾಲಾ ದ್ವಿಜ ಮಹಿಳೆಯುಳುಹಿದ ಶಾಮಲಾಂಗ ಸುಶೀಲಾ ವೆಂಕಟ ಕುಲಾಲ ಭೀಮಗೊಲಿದ ಮಹಾಮಹಿಮನೆ ಪಿ ತಾಮಹನ ನಾಸೋದ್ಭವನೆ ವಿಯ ಜಾಮಾತ ಕಟಿಸು ತ್ರಾಮಸುತಸೂತ ಪ್ರಮೋದಾಸು ಧಾಮ ಸೌಖ್ಯ ಪ್ರದವರಾಹ ತ್ರಯೀಮಯನೆ ಪ್ರಣತಾರ್ತಿಹರ ಬಲ ಸದನ ಸಹಸ್ರನಾಮ ಸಾಮಜಪತಿ ಪೋಷಕ ರಿಪುವನ ಧೂಮಧ್ವಜ ವಿಧಿಭ ಸೇವಿತ ವ್ಯೋಮಾಳಕಸಖ ಸರ್ವಜ್ಞರ ಮಾಮನೋಹರ ಮನ್ನಿಪುದೆಮ್ಮ 1 ದೀನಜನ ಮಂದಾರ ದೇವಕಿಸುತ ಜಗ ತ್ರಾಣ ಗುಣ ಗಂಭೀರ ಪೃಥ್ವೀಶ ತೋಂಡ ಮಾನವರದ ಉದಾರ ಲುಬ್ದಕನ ವಿಷ್ವ ವೈನತೇಯ ವರೂಥ ಖಳ ಸ್ವ ರ್ಭಾನುವಿನ ತಲೆಗಡಿದು ರವಿಶಶಿ ಕವಿ ಶನಿಗಳ ಶ್ರೇಣಿಯಲಿ ಮಾನಿಗಳ ಮಾಡ್ಡ ಮ ಕಲಿಮಲಾಪಹಾರಿ ಕೃ ಶಾನುಸಖ ಸಂಪೂಜ್ಯ ಸುಮನಸ ಧೇನು ಶರಣ ಜನರ್ಗೆ ಸಂತತ ಆ ನಮಿಸುವೆ ನಳಿನಜಪಿತ ನಿ ನಿರವದ್ಯ ನಿರುಜ ಬ್ರ ಹ್ಮಾಣಿ ಸುರನಿಕರ ನಿಲಯನುಸಂ ಧಾನಕೆ ಕೊಡು ಬಹುವಿಧಕರ್ಮ 2 ಸೇವ್ಯ ದಾರವಿಂದ ಮಹಂತಾ ಸತ್ವಾದಿ ತ್ರಿಗುಣವಿ ದೂರ ದಿತಿಜ ಕೃತಾಂತಾ ಗುಣರೂಪ ಪಾರಾ ವಾರ ವಿಗತಾದ್ಯಂತಾ ಶ್ರೀ ಭೂಮಿಕಾಂತಾ ಕಮಠ ವರಹ ಕ ಕಶಿಪು ವಿದಾರಣನೆ ಭಾ ಗೀರಥಿಯ ಪದನಖದಿಪಡದಂಗಾರ ವರ್ಣನೆ ಭೃಗುಕುಲೋದ್ಭವ ವಾರಿನಿಧಿಬಂಧನ ವನೌಕಸ ವಾರ ಪೋಷಕ ನಂದಗೋಪ ಕು ಮಾರ ತ್ರಿಪುರ ವಿದೂರ ತುರಗವನೇರಿದ ಜಗನ್ನಾಥವಿಠಲ ಸಾರುವೆ ತವÀ ಪದಪಂಕಜ ಜಂ ಭವ ಭಯ ತಾರಕ ನಿನ್ನವರೊಳು ತತ್ವ ವಿಚಾರಕೊಡು ಚಿರಕಾಲದಲಿ 3
--------------
ಜಗನ್ನಾಥದಾಸರು
ಜಯ ಜಯ ಕರುಣಾಕರ ಕೃಪಾಲ ಜಯ ಜಯ ಗುರುಮುನಿಜನ ಪ್ರತಿಪಾಲ ಧ್ರುವ ರಾಜತೇಜೋನಿಧಿ ರಾಜ ರಾಜೇಂದ್ರ ಮಣಿ ಸುರೇಂದ್ರ ಮಣಿ ಸಾಂದ್ರ ಅಜಸುರ ಸೇವಿತ ಸುಜ್ಞಾನ ಸುಮೋದ 1 ಅಗಣಿತ ಗುಣ ಅಗಾಧ ಅಪಾರ ನಿಗಮಗೋಚರ ನಿರುಪಮ ನಿರ್ಧಾರ ಸಗುಣ ನಿರ್ಗುಣನಹುದೊ ಸಾಕ್ಷಾತ್ಕಾರ ಭಕ್ತವತ್ಸಲ ಮುನಿಜನ ಮಂದಾರ 2 ಧೀರ ಉದಾರ ದಯಾನಿಧಿ ಪೂರ್ಣ ತಾರಕ ಸ್ವಾಮಿ ಸದ್ಗುರು ನಿಧಾನ ತರಳ ಮಹಿಪತಿ ಜನ್ಮೋದ್ಧರಣ ಚರಣ ಸ್ಮರಣಿ ನಿಮ್ಮ ಸಕಲಾಭರಣ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜಯ ಜಯ ಕರುಣಾಕರ ಗುರುದೇವ ವಾಸುದೇವ ಧ್ರುವ ಮುನಿಜನ ಪಾಲಕ ದೀನ ದಯಾಳ ಅನಾಥ ಬಂಧು ಶರಣಾಗತ ವತ್ಸಲ ಸನಕಾದಿಗಳೊಂದಿತ ಸಿರಿಸುಖಲೋಲ ಅನುದಿನ ಅಣುರೇಣುಕ ನೀನೆ ಸುಕಾಲ 1 ಪತಿತ ಪಾವನ ಪರಮ ಉದಾರ ಭಕ್ತವತ್ಸಲ ಮಾಮನೋಹರ ಅತಿಶಯಾನಂದ ಸುಜ್ಞಾನಸಾಗರ ಚತುರ್ದಶ ಭುವನಕೆ ನೀ ಸಹಕಾರ 2 ದೇಶಿಕರಿಗೆ ದೇವ ನೀನೇ ನಿಧಾನ ವಿಶ್ವಪಾಲಕ ಸ್ವಾಮಿ ನೀ ಸುಗುಣ ಭಾಸ್ಕರ ಕೋಟಿ ತೇಜ ನೀನೇ ಪೂರ್ಣ ಲೇಸಾಗ್ಹೊರಿಯೊ ದಾಸ ಮಹಿಪತಿ ಪ್ರಾಣ3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜಯ ಜಯ ಗುರುನಾಥ ದಯ ಗುಣದಲಿ ಅಖಂಡಿತ ಧ್ರುವ ಅನುಗ್ರಹದಲಿ ಸಮರ್ಥ ಜನವನದೋರುವೆ ಪರಮಾರ್ಥ ನೀನೆ ಸಕಲಾರ್ಥ ಅಣು ರೇಣುಕ ಸುಹಿತಾರ್ಥ 1 ಬಡವರಿಗಾಧಾರಿ ನೀಡುವುದರಲಿ ಘನ ಉದಾರಿ ಕುಡುವೆ ನಿಜದೋರಿ ಕಡೆಗಾಣಿಸುವೆ ಸಹಕಾರಿ 2 ಪಿಡಿದವರ ಕೈಯ ಬಿಡ ಎಂದೆಂದಿಗೆ ನಿಶ್ಚಯ ಒಡೆಯನಹುದಯ್ಯ ಮೂಢ ಮಹಿಪತಿ ಮಹದಾಶ್ರಯ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜಯ ಜಯ ಭೀಮಸೇನ ಪ. ಜಯ ಭೀಮಸೇನ ದುರ್ಜಯ ಪರಾಕ್ರಮ ಧೀರಾದಯಾಪಯೋನಿಧಿಯೆ ನಿರ್ಭಯ ವೈಷ್ಣವಾಗ್ರಣಿಅ.ಪ. ಅಂಬ ಪಾವಕ ದೀನೋದ್ಧಾರಿ1 ವೃಕೋದರ ವಿಷ್ಣುಸೇವಕ ವಿಜ್ಞಾನಾಂಬುಧಿಬಕಮದಧ್ವಂಸಿ ಜಟಾಸುರಾಂತಕ ಹಿಡಿಂ-ಬಕಾಸುರಗರ್ವಪರ್ವತ ಪವಿಧರ ಹಿಡಿಂಬಕಿ ಚಿತ್ತಕುಮುದಕೋರಕ ಪೂರ್ಣೋಡುಪರಾಜಅಕಳಂಕ ಧನುರಾಗಮಾಚಾರ್ಯ ನಿಪುಣ ಕೀ-ಚಕ ಬಲ ನಿರ್ಮೂಲನ ದ್ರೋಣಾದಿ ಸೈ-ನ್ಯ ಕುಮನ ಅಸುಹರಣ ಧಾರ್ತರಾಷ್ಟ್ರನಿಕರವಾರಣ ವಿದಾರಣ ಪಂಚವದನಾ 2 ಮಣಿಮಯರಥವೇರಿ ಫಣಿಕೇತನನನುಜನುನೆಣನು ದುರ್ಗುಣನು ಮಾರ್ಗಣಗಣದಿಂದಲಿರಣಾಂಗಣದಿ ನಿನ್ನ ಸೆಣಸಲಾಕ್ಷಣ ನೋಡಿತೃಣಮಾಡಿ ಗದೆಯಿಂದ ಹಣಿದು ಹಣೆಯ ಮೆಟ್ಟಿಪಣದಿ ನುಡಿದವರ ರಣವ ತಿದ್ದಿ ಅತ್ಯು-ಲ್ಬಣದಿಂದವಗೆ ಲಂಘಿಸಿ ವಕ್ಷದಿ ರಕ್ತಕೊಣನ ಶಸ್ತ್ರದಿ ನಿರ್ಮಿಸಿ ಕದಡಿಗೂಡಿರಣದೊಳೊಪ್ಪಿದ್ಯೊ ನಿನಗೆಣೆಯಿಲ್ಲವೆನಿಸಿ 3 ಮದ್ದಾನೆ ರೂಪ ಧರಿಸಿ ಮಾಯದಲಿ ಬಂದಾರುದ್ರಾನ ಯುದ್ಧದಿ ಗೆದ್ದುವೋಡಿಸಲಾಗಕೃದ್ಧನಾಗಿ ವ್ಯಾಘ್ರಸಿಂಹರೂಪದಿ ಬರೆಗುದ್ದಿ ಕೆಡಹಿ ವೇಗಕೆ ದಾರಿ ಕಟ್ಟಿದೆಯಿದ್ಧರೆಯೊಳು ನಿಮಗೆಣೆಯಾರು ಮಹಾಬಲಿಮದ್ರಾಧಿಪತಿಯ ಅಂಬರಕಟ್ಟಿ ರಾಜಸೂ-ಯಾಧ್ವರದಲಿ ಮಾಗಧನ ಸಂಹರಿಸಿದತಿಶುದ್ಧ ಸ್ವಭಾವ ಶೂರ ಸತತ ಸಾಧ್ಯಸಿದ್ಧೇಶನಿಲ ಕುಮಾರ ನಮಿಪೆಯೆನ್ನಉದ್ಧರಿಸುವುದಯ್ಯ ಶುದ್ಧ ಮನೋಹರ 4 ಸೂತ್ರ ಅಮಿತ ರೂಪ ಸದ್ಗುಣಗಣಧಾಮ ವೀರಪ್ರತಾಪ ಭಕುತಿ ಜ್ಞಾನಕಾಮಿತಾರ್ಥಗಳಿತ್ತು ಪೊರೆಯಯ್ಯ ಅಸುವ 5
--------------
ಗೋಪಾಲದಾಸರು
ಜಯ ದೇವ ಜಯ ದೇವ ಜಯ ಜಗಜೀವನ ಕರ ರತ್ನ ಧ್ರುವ ಅಜ ಸುರ ಮುನಿ ಪ್ರಾಣ ರಾಜೀವ ನಯನ ಸುಜನ ಸುಭೂಷಣ ತ್ರಿಜಗ ಪಾವನ 1 ಭಕ್ತ ಜನ ಉದ್ಧಾರ ಘನಗುರು ದಾತಾರ ಪತಿತಪಾವನಮೂರ್ತಿ ಮುನಿಜನ ಮಂದಾರ ಅತಿಶಯಾನಂದ ಅನುಪಮ ವ್ಯಾಪಕ ನಿರ್ಧಾರ ಸತತ ಸುಪಥ ಸದ್ಗುರು ಸಹಕಾರ 2 ಸಹ್ಯಾದ್ರಿ ಗಿರಿವಾಸ ಶ್ರೀಗುರು ಸರ್ವೇಶ ಬಾಹ್ಯಾಂತ್ರ ಪರಿಪೂರ್ಣ ಜಗದೀಶ ಮಹಿಪತಿಸ್ವಾಮಿ ಶ್ರೀ ದೇವದೇವೇಶ ದಾತ ಭಾಸ್ಕರಕೋಟಿ ಪ್ರಕಾಶ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜಯ ಭೀಮಸೇನ ಪ. ಉದ್ದಂಡ ಕದನಪ್ರಚಂಡಅ.ಪ. ಕಿಮ್ಮೀರ ಬಕ ಹಿಡಿಂಬ ಕೀಚಕಧ್ವಂಸದುರ್ಮತವನಚ್ಛೇದೋತ್ತಂಸ 1 ಅನುಜ ಸೇನಾಸಹಿತ ಕಲಿಧಾರ್ತರಾಷ್ಟ್ರನ್ನದನುಜಗಜ ಪಂಚಾಸ್ಯನೆಂದೆನಿಸಿದ ಘನ್ನ 2 ದ್ರೌಪದೀಪ್ರಿಯ ಸಕಲವಿದ್ಯಾಪ್ರದೀಪಪಾಪಹರ ಹಯವದನಪದಕಂಜಮಧುಪ3
--------------
ವಾದಿರಾಜ
ಜಯ ಸದ್ಗುರು ಮೂತಿ ದಯವುಳ್ಳ ನಿಮ್ಮ ದಯ ಕೀರ್ತಿ ಧ್ರುವ ದಯಗುಣದಲಿ ಬಲು ಉದಾರ ತ್ರೈಲೋಕ್ಯಕೆ ನೀನೆ ಆಧಾರ ಜಯ ಸದ್ಗುರು ಮಾಮನೋಹರ ಇಹಪರ ಸಹಕಾರ 1 ಮುನಿಜನರಿಗೆ ನೀ ಪ್ರತಿಪಾಲ ಸ್ವಾನುಭವದ ಸುಖದ ಕಲ್ಲೋಳ ಘನಗುರು ನೀನೆ ಕೃಪಾಲ ದೀನದಯಾಳ 2 ಜೀವದ ಸುಪ್ರಾಣ ಪರಮಾಮೃತದ ನಿಧಾನ ಹೊರಿಯೊ ನೀ ಕರುಣ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜಯಜಯತು ಶುಭಕಾಯ ಜಯಜಯತು ಹರಿಪ್ರೀಯಜಯತು ಜೀಯ ಮಧ್ವಾಖ್ಯಮುನಿರಾಯಪ. ರಾಮಾವತಾರದಲಿ ಹನುಮಂತನಾಗಿ ನೀತಾಮಸನ ಪುರವ ಅನಲಗಾಹುತಿಯನಿತ್ತೆಭೂಮಿಜೆಯ ಕುಶಲವನು ರಘುನಾಥಗರುಹಿದೆಸ್ವಾಮಿಕಾರ್ಯವ ವಹಿಸಿ ಖಳರ ನೀ ತರಿದೆ 1 ದ್ವಾಪರಾಂತ್ಯದಲಿ ಶ್ರೀಕೃಷ್ಣನಂಘ್ರಿಯ ಭಜಿಸಿಪಾಪಿಮಾಗಧ ಬಕ ಕೀಚಕಾದಿಗಳಕೋಪದಿಂದಲಿ ತರಿದು ಕುರುಕುಲವ ನೀನಳಿದೆ ಪ್ರ-ತಾಪದಿಂದಲಿ ಮೆರೆದೆ ಖಳರ ನೀ ಮುರಿದೆ 2 ಮಾಯಿಗಳು ಹೆಚ್ಚಿ ಮತವೆಲ್ಲ ಸಂಕರವಾಗಿತಾಯಿಗಳಿಲ್ಲದ ಶಿಶುಗಳಂತೆ ಸುಜನರಿರಲುನೀಯವತರಿಸಿ ಮತವೆಲ್ಲ ಉದ್ಧರಿಸಿ ನಾ-ರಾಯಣನೆ ಮೂಜಗಕೆ ಪರದೈವವೆಂದೊರೆದೆ 3 ದುರುಳ ವಾದಿಗಳಿಗುತ್ತರವ ಕೊಡಬೇಕೆನುತಸರುವ ಶಾಸ್ತ್ರಾಮೃತವ ಸೃಜಿಸಿ ವಾಕ್ಯಗಳ ಕ್ರೋಡಿಸಿದರುಶನ ಗ್ರಂಥಗಳ ರಚಿಸಿ ಶಿಷ್ಯರಿಗಿತ್ತೆಪರಮ ತತ್ವದ ಖಣಿಯೆ ಗುರುಶಿರೋಮಣಿಯೆ 4 ನಿನ್ನ ಮತವೇ ವೇದಶಾಸ್ತ್ರಗಳ ಸಮ್ಮತವುನಿನ್ನ ಮತವೇ ಇಹಪರಕೆ ಸಾಧನವುಪನ್ನಂಗಶಯನ ಶ್ರೀ ಹಯವದನದಾಸರೊಳುನಿನ್ನ ಪೋಲುವರುಂಟೆ ಮಧ್ವಮುನಿರಾಯ 5
--------------
ವಾದಿರಾಜ
ಜಯಜಯವೆಂದು ಶರಣೆನ್ನಿ ಹನುಮಯ್ಯಗ | ಜಯ ಭೀಮಶೇನಾನಂದ ತೀರ್ಥರೇಯಗ ಪ ಆದಿಲಿ ಅಂಜನಿ ಉದರದಲಿ ಬಂದಾ | ಸಾದರ ರಘುಪತಿ ಸೇವೆಯಲಿ ನಿಂದಾ | ಶ್ರೀದೇವಿ ಸುದ್ದಿ ಶರಧಿಯ ದಾಟಿ ತಂದಾ | ಭೇದಿಸಿ ರಾವಣನಾ ದಳವೆಲ್ಲಾ ಕೊಂದಾ 1 ತರಿ ತರಿದೊಟ್ಟದಾ ಕುರುಕುಲಾನ್ವಯ ವೃಂದಾ ಅರಸ ಯುಧೀಷ್ಠಿರನಾ ವಾಸಿಯ ತಂದಾ2 ಮೂರನೇ ರೂಪದಿ ಮಧ್ಯಗೇಹದಿ ಬಂದಾ ನೆರೆ ಬಾದರಾಯಣನಾಜ್ಞೆಲಿ ನಿಂದಾ ವರವರದ್ಹೇಳಿದ ತತ್ಪಾರ್ಥ ಛಂದಾ ಗುರುವರ ಮಹಿಪತಿ ನಂದನ ಮನಕಾನಂದಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು