ಒಟ್ಟು 39871 ಕಡೆಗಳಲ್ಲಿ , 136 ದಾಸರು , 11580 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಯಮಾಡಿ ಬಾರೆನ್ನ ಗುರುವೇ ಮಂತ್ರಾಲಯ ಪ್ರಭುವೇ ಪ ಧರೆಯೊಳು ಸುಜನರಾ ಪೊರೆಯಲೋಸುಗ ನೀನು ವರ ಮಂತ್ರಾಲಯದೊಳು ಬಂದು ನಿಂದಿಹೆ ಗುರುವೇ 1 ಬಹು ವಿಧದಲಿ ನಿನ್ನ ಮಹಿಮೆಗಳ ಕೇಳೀ ದೇಶ ದೇಶದಿ ಜನರು ಬಂದು ಕಾದಿಹರೋ2 ಕರೆದಾರೆ ಬರುವಂಥ ಕರುಣಸಾಗರ ನೀನು ಪರಿ ಪರಿಸ್ತುತಿಸುವೆ ಕಾರುಣ್ಯ ಮೂರ್ತಿಯೆ 3 ಬೇಡಿದಳಾ ವರಗಳ ಕೊಡುವ ನೀನೆನುತಲಿ ಧೃಡ ಭಕುತಿಯೊಳು ನಿನ್ನಡಿಗಳ ಸೇವಿ ಸುವರೋ 4 ಹಗಲು ಇರುಳು ನಿನ್ನ ಬಿಡದೆ ಸ್ತುತಿಸುವಂತೆ ಮತಿಯ ಪಾಲಿಪುದು - ಶ್ರೀ ಗುರುರಾಘವೇಂದ್ರಾ 5
--------------
ರಾಧಾಬಾಯಿ
ದಯಮಾಡಿ ಸಲಹಯ್ಯ ಭಯನಿವಾರಣನೆಹಯವದನ ನಿನ್ನ ಚರಣ ನಂಬಿದೆನೊ ಜೀಯ ಪ. ಕ್ಷಣ ಕ್ಷಣಕೆ ನಾ ಮಾಡಿದಂಥ ಪಾಪಂಗÀಳನುಎಣಿಸಲಳವಲ್ಲ ಅಷ್ಟಿಷ್ಟುಯೆಂದುಫಣಿಶಾಯಿ ನೀನೆನ್ನ ಅವಗುಣಗಳೆಣಿಸದೆನೆನಹಿನಾತುರ ಕೊಟ್ಟು ದಾಸನೆಂದೆನಿಸಯ್ಯ 1 ಕಂಡ ಕಂಡ ಕಡೆಗೆ ಪೋಪ ಚಂಚಲ ಮನವುಪಿಂಡ ತಿಂಬಲ್ಲಿ ಬಹು ನಿಷ್ಠ ತಾನುಭಂಡಾಟದವನೆಂದು ಬಯಲಿಗೆ ತಾರಣಕೊಂಡಾಡುವಂತೆ ಭಕುತಿಯ ಕೊಟ್ಟು ಸಲಹಯ್ಯ 2 ಜಾತಿಧರ್ಮವ ಬಿಟ್ಟು ಅಜಾಮಿಳನು ಇರುತಿರಲು ಪ್ರೀತಿಯಿಂದಲಿ ಮುಕುತಿ ಕೊಡಲಿಲ್ಲವೆಖ್ಯಾತಿಯನು ಕೇಳಿ ನಾ ಮೊರೆಹೊಕ್ಕೆ ಸಲಹಯ್ಯವಾತಜನ ಪರಿಪಾಲ ಶ್ರೀರಂಗವಿಠಲ 3
--------------
ಶ್ರೀಪಾದರಾಜರು
ದಯಮಾಡು ದಯಮಾಡು ಎನ್ನ ಮೇಲೆ | ಅಂತರಂಗದೊಳಿಪ್ಪ ಅಚ್ಚುತಮೂರ್ತಿ ಪ ಕುಸುಮ ಜಾಜಿ ಮಲ್ಲಿಗೆ ಮಾಲೆ | ಮಂದಾರ ಹಾರ ಕೊರಳೊಳಿಡಲೂ || ಚಂದವಿಲ್ಲವೆಂದು ತೆಗೆದು ಬಿಸಾಟಿ ಊರ | ಹಂದಿಯಂದದಿ ಇಲ್ಲಿ ಇಪ್ಪ ನರಗೆ || 1 ಹೆತ್ತ ತುಪ್ಪ ಸಣ್ಣಶಾವಿಗೆ ಪರಮಾನ್ನ | ಹೆತ್ತತಾಯಿ ತಂದು ಉಣ್ಣ ಬಡಿಸಲು || ಅತ್ತ ಮೊಗವಗಬೆ ತೊತ್ತು ಉಣಬಡಿಸಿದ | ಓಗರ ತಿಂದು ಇಪ್ಪೆನೆಂಬ ನರಗೆ 2 ತುಂಬಿದ ಹೊಳೆಯಲ್ಲಿ ಹರಿಗೋಲಿಟ್ಟುಕೊಂಡು | ಅಂಬಿಗ ತಡೆಯದೆ ದಾಟಿಸಲು || ಅಂಬುವಾಸನೆ ನೋಡಿ ದಾಟಿ ಪೋಗುವೆನೆಂ | ದೆಂಬ ಮಾನವನಾದೆ ವಿಜಯವಿಠ್ಠಲ ಕರುಣೀ3
--------------
ವಿಜಯದಾಸ
ದಯಮಾಡು ದಯಮಾಡು ಶಾರದಾಂಬೇ ನಯ ನೀತಿ ಕಲೆ ಭಾಗ್ಯ ಘನ ಕುಟುಂಬೇ ಪ ಜಯ ವಿಜಯ ಯಶಭೋಗ ಶ್ರೀಕರಾಂಬೇ ಭಯ ಭೀತಿ ಪರಿಹಾರೆ ವರಕದಂಬೆ ಅ.ಪ ಫಣಿ ಕಲ್ಯಾಣಿ ಸರಸಗುಣಿ ಗೀರ್ವಾಣಿ ವೀಣಾಪಾಣಿ 1 ಸಾರತರ ಶುಕವಾಣಿ ನೀರೇಜ ಮೃದುಪಾಣಿ ಭೂರಿದಯೆ ಸುಶ್ರೋಣಿ ದೇವಿ ಶುಭವಾಣಿ 2 ಸಕಲ ಲೋಕಖ್ಯಾತೆ ಸಕಲ ಜಗಸನ್ನುತೇ ಸಕಲ ಜಗವಂದಿತೇ ಸಕಲ ಶುಭಗೀತೇ ಸಕಲ ವೈಭವದಾತೇ ಸಕಲ ಸದ್ಗುಣ ಲಸಿತೇ ಸಕಲ ಸನ್ನುತೇ ಮಾಂಗಿರೀಶ ವಿನುತೇ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ದಯಮಾಡು ಬಡವಗೆ ಮಹರಾಯ ದಯಾಕರ ವಿಜಯವಿಠಲರಾಯ ಪ ದೃಢದಿಂದಲಿ ನಂಬಿ ಬೇಡುವೆನು ಕೊಡುಗಡ ನಿನ್ನಡಿಭಕ್ತಿಯನು ಕಡುಪೀಡಿಪ ಈ ಜಡಬಡತನದಿಂ ಕಡೆಹಾಯ್ಸೆನ್ನನು ಕಡುದಯದಿಂ ಪೊರೆ 1 ಸೆರೆಗೊಡ್ಡಿ ಬೇಡುವೆ ಮಾಧವ ಕರುಣದಿ ಕರುಣಿಸು ವರವ ಪರಿಭವ ದು:ಖವ ಪರಿಹರಿಸಿ ನಿಮ್ಮ ಸ್ಮರಣೆಯೊಳಿರಿಸೆನ್ನ 2 ಸತ್ಯಭಾಮೆರಮಾಕಾಂತನೆ ಭಕ್ತರ ಕಕ್ಕುಲಾತಿದೇವನೆ ನಿತ್ಯನಿರಂಜನ ಮುಕ್ತಿದಾಯಕ ಉತ್ತಮಮತಿಕೊಡು ನಿತ್ಯಾತ್ಮ ಶ್ರೀರಾಮ 3
--------------
ರಾಮದಾಸರು
ದಯಮಾಡೆನಗೇ ಕೃಷ್ಣದಯ ತೋರನಗೇ ರಂಗ ದಯ ಮಾಡೆನಗೆ ಶ್ರೀ ಚನ್ನಕೇಶವನೇ ಪ ಧರಣಿ ಪಾಲಕನಂತೆ ಮೃತವ ನಾನರಿಯೆನು ಸರಳೆ ದ್ರೌಪದಿಯಂತೆ ಸ್ತೋತ್ರವನರಿಯೇ ಕರಿರಾಜನಂತೆ ನಾ ಮರೆಹೊಕ್ಕಲರಿಯೆನು ತರಳ ಧೃವನಂತೆ ತಪ ಮಾಡಲರಿಯೇ 1 ಪರೀಕ್ಷಿತನಂತೆ ಶ್ರವಣವ ಮಾಡಲರಿಯೆನು ವರಶುಕರಂತೆ ಕೀರ್ತನೆ ಮಾಡಲರಿಯೇ ತರಳ ಪ್ರಲ್ಹಾದನಂದದಿ ಸ್ಮರಿಸಲರಿಯೆನು ಚರಣವ ರಮೆಯಂತೆ ನಾ ಭಜಿಸಲರಿಯೇ 2 ಹರಿಯನ ಕ್ರೂರನಂತೇ ನಮಿಸಲರಿಯೆನು ಹರಿಯ ಪೃಥುವಿನಂತೆ ಪೂಜಿಸಲರಿಯೇ ಮರುತಜನಂತೆ ನಾ ದಾಸ್ಯತ್ವವರಿಯನು ನರನಂತೆ ಮಿತ್ರತ್ವ ಪಡೆಯಲಿಕ್ಕರಿಯೇ 3 ಆತ್ಮವ ಬಲಿಯಂತೆ ಅರ್ಪಿಸಲರಿಯೆನು ನಿತ್ಯವು ನರಕದಿ ಮುಳುಗಿ ನಾನಿರುವೇ ಮತ್ಸ್ಯಾದಿ ದಶರೂಪವೆತ್ತಿದ ರಂಗನೆ ಬೃತ್ಯರ ಸಲಹಯ್ಯ ಸ್ವಾಮಿ ದೂರ್ವೇಶಾ 4
--------------
ಕರ್ಕಿ ಕೇಶವದಾಸ
ದಯಮಾಡೈ ಶ್ರೀ ಹರಿಯನಗಿಂದು ದಯಮಾಡೈ ಶ್ರೀಹರಿಯನಗಿಂದು ಪ ನಿಗಮಾಗಮ ಪೌರಾಣದ ಕತೆಯಾ ಬಗೆಯಲಿಯದ ಪಾಮರ ಪಾಥರಿಗೆ 1 ವಿಷಯಾ ಸಕ್ತಿಲಿ ನೆನೆಯದೆ ಹಿತವಾ ಪರಿ ದಿನಗಳಿದೀಗ 2 ಗುರುಮಹಿಪತಿ ಪ್ರಭು ಬಂದೆನು ಶರಣಾ ಬಿರುದವು ದೀನರ ಹೊರೆವುದು ನಿನಗೇ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ದಯಮಾಡೊ ಕಾಶಿ ಬಿಂದುಮಾಧವಮಾಡದಿರೆನಗೆ ತಂದೆ ಭೇಧವ ಪ. ಪಾಪನಾಶನ ಪಾಲಿಸೊ ಎನ್ನಸರ್ಪಭೂಷಣನತಾತನೆಂದೆನಿಸುವ ತವ ನಾಮಸ್ಮರಣೆಪಾರ್ವತಿಪತಿಯ ಧ್ಯಾನದೊಳಿರಿಸೊ 1 ಮೋಕ್ಷÀದಾಯಕ ಪಾಲಿಸೊ ಎನ್ನಲಕ್ಷ್ಮೀನಾಯಕಕುಕ್ಷಿಯೊಳೀರೇಳುಭುವನ ತಾಳಿದವನೆಭಿಕ್ಷಾಪಾತ್ರ ಶಿವನಧ್ಯಾನದೊಳಿರಿಸೊ 2 ಆದಿಮೂರುತಿ ವಿಶ್ವೇಶ್ವರಗೆ ವಿಷ್ಣುಪಾದವೆ ಗತಿಮೇದಿನಿಯೊಳು ಸೋದೆಪುರದಿ ನೆಲೆಸಿವಾದಿರಾಜವರದನೆ ಬಂದೆ ಹಯವದನನೆ 3
--------------
ವಾದಿರಾಜ
ದಯಮಾಡೊ ದಯಮಾಡೋಪಯಸಾಗರದೊಡೆಯನೆ ಶ್ರೀಕೃಷ್ಣಾ ಪ ಬನ್ನಬಿಡಿಸುವರ್ಭಕನ ದುರಿತವಘನ್ನ ಮಹಿಮ ನೀಜವದಿಂ ತರದು 1 ನೀ ಪೊರಿಯದೆ ಜರಿದರೆ ಕಾಯ್ವರನಾ |ಈ ಪೊಡವಿಯೊಳೆಲ್ಲೆಲಿ ಕಾಣೇ 2 ಶೇಷಗಿರಿ ನಿಲಯ ಬಿನ್ನಪ ಲಾಲಿಸೋ |ಶ್ರೀಶ ಪ್ರಾಣೇಶ ವಿಠಲ ದಯಾಳೋ 3
--------------
ಶ್ರೀಶಪ್ರಾಣೇಶವಿಠಲರು
ದಯಮಾಡೊ ರಂಗ ದಯ ಮಾಡೊಕೈವಲ್ಯಪತಿ ನಮಗೆ ಕರುಣೆ ಮಾಡೊ ಕೃಷ್ಣ ಪ. ಕುಂತಿ ದೇವಿಯರು ತಂದ ಅನಂತ ಪದಾರ್ಥವ ಶಾಂತ ಮೂರುತಿಯೆ ಕೈಕೊಳ್ಳೊ ಕೃಷ್ಣಶಾಂತ ಮೂರುತಿಯೆ ಕೈಕೊಳ್ಳೊ ಎನುತಲಿ ಕಾಂತೆ ಸುಭದ್ರಾ ನುಡಿದಳು1 ಶ್ರೀದೇವಿಯರಸನ ಪಾದವ ತೊಳೆದರು ಕ್ಯಾದಿಗೆ ಗಂಧ ತುಳಸಿಕ್ಯಾದಿಗೆ ಗಂಧ ತುಳಸಿ ಅಕ್ಷತೆಯಿಂದ ವೇದಗೋಚರನ ಉಪಚರಿಸಿ 2 ಕರವ ಜೋಡಿಸುತ ಐವರು3
--------------
ಗಲಗಲಿಅವ್ವನವರು
ದಯಮಾಡೋ ದಯಮಾಡೋ ಪ ಭಯಕರ ಸುಮಹ -ದ್ಭಯಹರ ಯತಿವರ ಅ.ಪ ಮೋಕ್ಷದ ಕರುಣ - ಕಟಾಕ್ಷದಿ ಎನ್ನನು ವೀಕ್ಷಿಸಿ ನಿನ್ನ ನಿರೀಕ್ಷಿಸುವಂತೆ 1 ಲಕ್ಷ್ಯಾಧೀಶರ ಲಕ್ಷಿಲ್ಲದೆ ಙÁ್ಞ - ನಾಕ್ಷದಿ ತವಪದ ಲಕ್ಷಿಸುವಂತೆ 2 ಸತ್ಯಾಭಿದ - ನಪ - ಮೃತ್ಯುಹರಿಸಿ ಮುದ ವಿತ್ತು ಪಾಲಿಸಿದ - ಉತ್ತಮ ಎನಗೇ 3 ಬಲ್ಲಿದತರ ಮಹ - ಪ್ರಲ್ಹಾದ ನಿನ್ನೊಳು ನಿಲ್ಲಿಸು ಎನಮನ - ಎಲ್ಲಿ ಚಲಿಸದಂತೆ 4 ದಾತಗುರು ಜಗನ್ನಾಥ ವಿಠಲನ ದೂತಾಗ್ರಣಿ ಸು - ಖೇತರ ಕಳೆದು 5
--------------
ಗುರುಜಗನ್ನಾಥದಾಸರು
ದಯಮಾಡೋ ದಯಾಸಾಗರ ಪ ಕರುಣಾ ಕಟಾಕ್ಷನೆ ವರಪೀನ ವಕ್ಷನೆ ಪರಮ ಪುರುಷ ಪವನಾತ್ಮನೇ ಪರಮ ಪುರುಷ ಪವನಾತ್ಮನೇ 1 ಕಂಬು ಕಂದರನೆ ಸಂಭ್ರಮದಿ ಕಾಯೊ ದೇವನೆ ಸಂಭ್ರಮದಿ ಕಾಯೊ ದೇವನೆ 2 ಜ್ಞಾನಿಗಳರಸನೆ ಪ್ರಾಣನಾಥವಿಠಲನೆ ಮಾನದಿಂದ ಕಾಯೊ ದೇವನೆ ಮಾನದಿಂದ ಕಾಯೊ ದೇವನೆ 3
--------------
ಬಾಗೇಪಲ್ಲಿ ಶೇಷದಾಸರು
ದಯಮಾಡೋ ಹನುಮಾ ದಯಮಾಡೋ ಪ ಎನ್ನೊಡನಾಡೋ ಬೇಡಿದ ವರಗಳ ಎನಗೆ ನೀಡೋ ಅ.ಪ. ಅಂಜಾನಿಯ ಕಂದನೆ ಸಂಜೀವನ ತಂದನೆ ಅಂಜಾದೆ ರಕ್ಕಸರ ಕೊಂದಾನೆ 1 ಕೀಟಕಾಂತಕನೆ ಕಿರೀಟ ಸಖನೆ ಪಾಂಚಾಲಿ ಹೃತ್ಕುಮುದ ಚಂದ್ರನೆ 2 ಆನಂದತೀರ್ಥನೆ ಅಮ್ನಾಯಸ್ತುತನೆ ಮಾನಿಧಿವಿಠಲನ ದೂತನೆ 3
--------------
ಮಹಾನಿಥಿವಿಠಲ
ದಯವ ಮಾಡೋ ಎನ್ನ ಭಯವ ಬಿಡಿಸೋ ಪ ರಥಾಂಗ ಮಾವಿನಕೆರೆರಂಗಾ ಅ.ಪ ಅನುದಿನ ಭಜಿಪರೋ ತನು ಮನ ಧನಗಳ ನಿನಗೊಪ್ಪಿಸಲು ಘನ ತಪೋಶಕ್ತಿಯಿಂದ ಮನವೊಲಿಸುವರು ನಿನ್ನಾ ಅನಿತನರಿಯದೆನ್ನೊಳು ಸನುಮತದಿಂದಲಿಯೆನ್ನೊಳು 1 ಕಾಮ ಕ್ರೋಧಂಗಳಿಂ ಭ್ರಾಮಕನಾದೆನ್ನ ನೇಮವೊಂದಿಲ್ಲ ನಿನ್ನ ನಾಮಂಗಳುಲಿಯೆ ನಾ ಭೂಮಿಯೊಳನೇಕ ಜನ್ಮನಾಮದಿಂದೆ ಜನಿಸಿ ಪಾಪ ಕರ್ಮವ ತಳೆದೆಂ ರಾಮದಾಸಾರ್ಚಿತನೆ ಯೆನ್ನೊಳು 2 ಕರಿಯ ಪೊರೆದೆ ಹರೀ ತರಳಗೊಲಿದೇ ಶೌರಿ ದುರುಳನ ಪೊರೆದೆ ಉದಾರಿ ಸರಸಿಜಾಕ್ಷ ಮುರಾರಿ ಸುರಪತೆ ರಕ್ಕಸಾರಿ ಕರುಣಿಸೋ ಸೂತ್ರಧಾರಿ ಕರವಪಿಡಿದು ಯೆನ್ನೊಳು 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ದಯವದೋರೋ ದೇವ ಭಕುತ ಭಯನಿವಾರ ಅಭವ ಪ ದಯವದೋರೋ ನಿನ್ನ ಪಾವನಪಾದ ಸು ಸೇವಕ ಜನಮಹಜೀವ ಜಾನಕೀಧವ ಅ.ಪ ಪಾಪಗೆಲಿಯ ಬಂದೆ ಸಂಸಾರ ಕೂಪದೊಳಗೆ ನಿಂದೆ ಕೋಪಜ್ವಾಲದಿ ಬೆಂದೆ ವಿಷಯ ತಾಪತ್ರಯದಿನೊಂದೆ ಆ ಪರಲೋಕದ ವ್ಯಾಪಾರ ಮರೆದಿಹ್ಯ ದ್ವ್ಯಾಪಕನಾಗಿ ಬಲುತಾಪಬಡುವೆ ತಂದೆ 1 ಅಂಗಮೋಹವ ಬಿಡಿಸೋ ನಿನ್ನವರ ಸಂಗವ ಕರುಣಿಸೊ ಭಂಗವ ಪರಹರಿಸೊ ಜಗದವ ರ್ಹಂಗಹನು ತಪ್ಪಿಸೊ ಮಂಗಳಾತ್ಮ ನಿನ್ನ ಮಂಗಳಾಮೂರ್ತಿ ಎನ್ನ ಕಂಗಳೋಳ್ನಿಲ್ಲಿಸಿ ಹಿಂಗದಾನಂದ ನೀಡು 2 ದೋಷದಾರಿದ್ರ್ಯ ಹರಿಸೊ ಮನದ ಅಶಾಪಾಶ ಬಿಡಿಸೊ ಹೇಸಿಪ್ರಪಂಚ ಗೆಲಿಸೊ ಸುಜನರಾ ವಾಸ ತೀವ್ರ ಪಾಲಿಸೊ ದೋಷನಾಶ ಜಗದೀಶ ಶ್ರೀರಾಮ ನಿನ್ನ ದಾಸಾನುದಾಸೆನಿಸಿ ಪೋಷಿಸು ಸತತ 3
--------------
ರಾಮದಾಸರು