ಒಟ್ಟು 10607 ಕಡೆಗಳಲ್ಲಿ , 130 ದಾಸರು , 5708 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಾಮ ರಕ್ಷಮಾಂ ರಾಮ ರಕ್ಷಮಾಂ ರಾಮ ರಕ್ಷಮಾಂ ರಾಮ ರಕ್ಷಾಮಾಂರಾಮ ರಕ್ಷಮಾಂ ಕಾಮಿತಾರ್ಥದ ಪ್ರೇಮಸಾಗರ ಶ್ರೀ ಮನೋಹರ ಪದಶರಥಾತ್ಮಜ ದಾನವಾಂತಕ ಶಶಿನಿಭಾನನ ಶತಮಖಾರ್ಚಿತಕುಶಿಕನಂದನ ವಶಮಖಾವನ ಶಶಿಮುಖೀತನೋಃ ಶಮಲವಾರಣ 1ಹರ ಶರಾಸನ ಹರ ಧರಾಸುತಾ ಕರ ಪರಿಗ್ರಹಾರಾಮ ನಿಗ್ರಹಗುರು ನಿಯೋಜಿತ ಗುಹ ಸುಪೂಜಿತ ವರ ವನಾಶ್ರಿತ ಭರತ ಪ್ರಾರ್ಥಿತ 2ಮೃಗ ನಿಷೂದನ ಖಗಪ ಪಾಲನ ಭಂಜನ ಶಬರಿ ಪಾವನಸುಗತಿ ದಾಯಕ ವಾಲಿಶಿಕ್ಷಕ ಮೃಗಪರಕ್ಷಕ ರಾಜ್ಯದಾಯಕ 3ಶರಧಿಬಂಧನ ಪುರ ವಿಮರ್ದನ ವರವಿಭೀಷಣ ಭಯನಿವಾರಣಧುರ ಧುರಂಧರ ದುಷ್ಟ ಖಳಸಹೋ ದರ ಶಿರೋಹರ ದೈತ್ಯಸಂಹರ 4ಧರಣಿಜಾನ್ವಿತ ದುರಿತ ವಾರಕ ಭರತವಂದಿತ ಪುರವರಸ್ಥಿತವರ ಮುನಿಸ್ತುತ ಸುರಸಮಾಶ್ರಿತ ತಿರುಪತೀಶ್ವರ ವೆಂಕಟೇಶ್ವರ 5ಓಂ ಕುಬ್ಜಾ ಕೃಷ್ಟಾಂಬರಧರಾಯ ನಮಃ
--------------
ತಿಮ್ಮಪ್ಪದಾಸರು
ರಾಮ ರಘೋತ್ತಮ ಕೃಷ್ಣ ಘನ | ಶಾಮಸುಂದರ ತ್ರಿಭುವನ ಜೀವನ ಪ ಪತಿ | ವಸುದೇವ ಸುತ ರುಕ್ಮಿಣಿ ರಮಣಾ 1 ಋಷಿ ಮಖದಾಲನ ಸಾಂದೀಪ ತೋಷಣ | ದಶಶಿರ ಕಂಸಾಸುರ ದಮನಾ 2 ಅಹಲ್ಯೋದ್ದಾರಣ ಕುಜಕೃತ ಪಾವನ | ಮಹಿಪತಿ ಸುತ ಪ್ರಭು ಶುಭಚರಣಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ರಾಮ ರಾಮ ಎಂಬೆರಡಕ್ಷರ | ಪ್ರೇಮದಿ ಸಲುಹಿತು ಸುಜನರನು ಪ ಹಾಲಾಹಲವನು ಪಾನವಮಾಡಿದ | ಫಾಲಲೋಚನನೆ ಬಲ್ಲವನು || ಆಲಾಪಿಸುತ್ತ ಶಿಲೆಯಾಗಿದ್ದ | ಬಾಲೆ ಅಹಲ್ಯೆಯ ಕೇಳೇನು 1 ಅಂಜಿಕೆಯಿಲ್ಲದೆ ಗಿರಿಸಾರಿದ ಕಪಿ-| ಕುಂಜರ ರಮಿಸುತÀ ಬಲ್ಲವನು || ಎಂಜಲ ಫಲಗಳ ಹರಿಗರ್ಪಿಸಿದ | ಕಂಜಲೋಚನೆಯ ಕೇಳೇನು 2 ಕಾಲವರಿತು ಸೇವೆಯ ಮಾಡಿದ ಲೋಲ ಲಕ್ಷ್ಮಣನೆ ಬಲ್ಲವನು || ವ್ಯಾಳಶಯನ ಶ್ರೀ ವಿಜಯವಿಠ್ಠಲನ ಲೀಲೆ ಶರಧಿಯ ಕೇಳೇನು3
--------------
ವಿಜಯದಾಸ
ರಾಮ ರಾಮ ರಾಮ ರಾಮಯೆಂದು ರಾತ್ರಿ ಹಗಲು---ಪ್ರೇಮದಿಂದ ಇಲ್ಲಿ ಬಂದು ಪ್ರತಿಗತಿ ಪಡಿಸಿಯಿಂದೂ ಪ ಕಾಮಿತ ಫಲದಾಯಕನೆಂದೂ ಕಮಲಗರ್ಭನ ಪಿತನೀತೆಂದೂ ನಿತ್ಯ ಕರ್ಮದಿಂದ 1 ಒಂದು ನಿಮಿಷ ಮರೆಯದೆಂದು ವಾಸುದೇವಾನಂದ ನೆಂದೂ ನಾಮ ನರೆ ತಂದೂ 2 ಸಿಂಧು ಶಯನ ಶ್ರೀನಿವಾಸ `ಹೊನ್ನವಿಠ್ಠಲೇಶಾ’ 3
--------------
ಹೆನ್ನೆರಂಗದಾಸರು
ರಾಮ ರಾಮ ರಾಮ ಶ್ರೀರಾಮನೆನ್ನಿರೊ ಪ್ರೇಮದಿಂದ ಶ್ರೀ ಜಾನಕಿ ಪ್ರೇಮನನೆನೆಯಿರೊ ಪ ಅಂದದಿಂದ ಈ ದಶರಥನಂದನೆಂದು ---- ಚಂದದಿಂದ ಚಲನೆಯಿಲ್ಲದೆ ಚಿತ್ತಸ್ವಸ್ಥದಿ ಕಾಲ ಕಳೆಯ ಹೊಂದಿ ದೇವರ ಚರಣ ಕಮಲಾ ನಂದ ಅರ್ಚಿಸುವ ಮಂದಿರದಿ ಭಜಿಸಿರೊ 1 ಕಾಮನಯ್ಯನ ಕಡಲೊಳಾಳ್ದÀ್ದನ ಕೂರ್ಮರೂಪ ವರಾಹನಾದನ ಸ್ವಾಮಿ ನರಹರಿ ವಾಮನ ಪರಶುರಾಮನಾದನಾ ರಾಮಕೃಷ್ನ ಬೌದ್ಧಕಲ್ಕಿ ನಾಮವುಳ್ಳ ನಾರಾಯಣನ ನೇಮದಿಂದ ನಿತ್ಯದಲ್ಲಿ ನಾಮ ಸ್ಮರಿಸಿರೊ 2 ಪಿತೃವಾಕ್ಯ ಪಾಲಿಸಿದವನು ಸತತ ಭಕ್ತರ ಸಲಹುತಿಹನು ಕ್ಷಿತಿಗೆ ಒಡೆಯನಾದ ದೇವನು 'ಶ್ರೀ ಹೊನ್ನ ವಿಠ್ಠಲಾ’ ನತಿಶಯದಿಂದಲಿ ಹೃದಯನಂಬಿ ಇರುವ ನರರಿಗೆ--------ಸದ್ಗತಿಯ ತೋರುವನಧಿಕ ಸಂಪನ್ನ 3
--------------
ಹೆನ್ನೆರಂಗದಾಸರು
ರಾಮ ರಾಮ ರಾಮ ಹರೇ ರಘೂ ಪ ರಾಮ ಜಾನಕಿ ಪ್ರೇಮ ಕೃಪಾಂಬುಧಿ ಸ್ವಾಮಿ ಪರಂಧಾಮ ಸಾರುಚಿವರದಾ ಅ.ಪ ಪತಿತಪಾವನದೇವಾ ಸದ್ಭಕ್ತರ ಸತತ ಬಿಡದೆ ಕಾಯುವಾ ಮಹಾನುಭಾವ- ನತಿಶಯದಲಿ ಮನಹಿತದಲಿ ಅನುದಿನ ಸ್ತುತಿಯನು ಮಾಡುವರಿಗೆ ಗತಿ ಕಾಣಿಸುವಂಥ 1 ಅಂಡಜವಾಹನನೆ ಅನೇಕ ಭೂ ಮಂಡಲ ನಾಳುವನೆ ಮಣಿಯ ಮುಕುಟಧರನೆ ಉದ್ದಂಡ ರಕ್ಕಸರಳಿದ ಚಂಡಪರಾಕ್ರಮಿ2 ಪನ್ನಗಾದ್ರಿಯವಾಸಾ ಭಜಕರ ಪೋಷಾ ಶ್ರೀ ಹೆನ್ನವಿಠ್ಠಲ ವೇಶಾ ಪರಮೋಲ್ಹಾಸಾ ಚಿನ್ಮಯ ಮೂರುತಿ ಶ್ರೀ ಗೌರೀವರಪ್ರಿಯ ಮದನ ಜನಕ ಹರೆ 3
--------------
ಹೆನ್ನೆರಂಗದಾಸರು
ರಾಮ ರಾಮ ಶ್ರೀ ರಘುರಾಮ ನೀಲಮೇಘ- ಶ್ಯಾಮ ನಿಸ್ಸೀಮ ಕಾಮಿತಾರ್ಥವಕರೆದತಿ- ಪ್ರೇಮದಿಂದ ಪಾಲಿಸುವುದು ನಿನ್ನ ನಾಮ ಪ ಕಲ್ಲೋದ್ಧಾರಕ ಕರುಣಾಳು ರಾಮ ಬಿಲ್ಲನೆತ್ತಿದ್ದ ಬಿರುದಾತ ರಾಮ ಸೊಲ್ಲು ಸೊಲ್ಲಿಗಿರಲು ಹರಿನಾಮ ಚೆಲ್ಲ್ಯಾಡುವ ದಯ ಅವರಲ್ಲಿ ಪ್ರೇಮ 1 ಧೀರಪುರುಷನೆ ದಿಗ್ವಿಜಯ ರಾಮ ವಾರಿಧಿಯ ಕಟ್ಟಿದ್ವನಜಾಕ್ಷ ರಾಮ ಕ್ರೂರರಾಕ್ಷಸರನು ಕೊಂದು ಲಂಕಾ ಸೂರೆಯನು ಮಾಡಿದಂಥ ನಿಸ್ಸೀಮ 2 ದುಷ್ಟರಾವಣಶತ್ರು ಶ್ರೀರಾಮ ಹುಟ್ಟಿ ಭಾನುವಂಶದಿ ಸೀತಾರಾಮ ಮುಟ್ಟಿಭಜಿಸೆ ಸಜ್ಜನರಿಗೆ ಭೀಮೇಶ- ಧಾಮ 3
--------------
ಹರಪನಹಳ್ಳಿಭೀಮವ್ವ
ರಾಮ ರಾಮ ಹರಿ ರಾಮ ರಾಮ ಸೀತಾ ರಾಮ ರಾಮ ನುತಪ್ರೇಮ ರಾಮ ಓಂ ಪ ರಾಮ ರಾಮ ಪುಣ್ಯನಾಮ ಪಾಪವಿ ರಾಮ ಕುಜನಕುಲ ಭೀಮ ರಾಮ ಓಂ ಅ.ಪ ಶಾಮಸುಂದರ ಸುಖಧಾಮ ದಾಮೋದರ ಕಾಮಿತದಾಯಕ ಸ್ವಾಮಿ ಶ್ರೀರಾಮ ಓಂ ಸೋಮಕಸಂಹರ ಕಾಮಜನಕ ತ್ರೈ ಭೂಮಿಪಾಲಯ ನಿಸ್ಸೀಮ ರಾಮ ಓಂ 1 ಕಡಲಮಥನ ಪಾಲ್ಗಡಲನಿಲಯ ಮಹ ಕಡಲಬಂಧಕ ದಯಗಡಲ ರಾಮ ಓಂ ಜಡಜನಾಭ ಭವತೊಡರು ನಿವಾರಣ ಕಡಲಸುತೆಯ ಪ್ರಾಣದೊಡೆಯ ರಾಮ ಓಂ2 ದೋಷ ವಿನಾಶನ ಶೇಷಶಯನ ದಯ ಭೂಷಣ ಕೇಶವ ರಾಮರಾಮ ಓಂ ಭಾಸುರಕೋಟಿಪ್ರಕಾಶ ಅಪ್ರಮೇಯ ಸಾಸಿರನಾಮಕ ರಾಮ ರಾಮ ಓಂ3 ಭಕ್ತಾಂತರ್ಗತ ಭಕ್ತವತ್ಸಲ ನಿತ್ಯ ನಿರ್ಮಲಾತ್ಮ ರಾಮ ರಾಮ ಓಂ ಸತ್ಯ ಸರ್ವೋತ್ತಮ ಮೃತ್ಯು ವಿಜಯ ನಿಜ ಸತ್ಯಸಂಕುಲಧಾಮ ರಾಮ ರಾಮ ಓಂ 4 ಜಾನಕಿರಮಣ ದೀನ ಪಾಲನ ದಾನವಾಂತಕ ಹರಿ ರಾಮ ಓಂ ಧ್ಯಾನದಾಯಕ ಜಗತ್ರಾಣ ಪ್ರವೀಣ ಮಮ ಪ್ರಾಣೇಶ ಶ್ರೀರಾಮ ನಮ:ನಮ:ಓಂ 5
--------------
ರಾಮದಾಸರು
ರಾಮ ರಾಮಯೆಂದು ನೇಮದಿಂದಲಿ ಪಾಡಿ ಪ್ರೇಮದಿ ನಮಿಸಿರಿ ಕಾಮನ ಪಿತನ ಪ ಭಾಮೆಗಕ್ಷಯ ವಿತ್ತು ಪ್ರೇಮದಿ ಸಲಹಿದ ಪಾದ ಸೇರೀ 1 ತನುಮನ ಧನದಿಂದ ಚನ್ನಕೇಶವನನ್ನು ಅನುದಿನ ಭಜಿಸಿ ಚಿನ್ಮಯಪಾದ ಸೇರಿ2 ಕರುಣದಿ ಭಕ್ತರ ಪೊರೆವ ಕೇಶವನ 3
--------------
ಕರ್ಕಿ ಕೇಶವದಾಸ
ರಾಮ ರಾವಣಧೂಮ ನಿಸ್ಸೀಮಾ ವೊ ಪ ಸ್ವಾಮಿ ನಿಮ್ಮ ಪದಾಬ್ಜ ಸೇವೆಗೆ ತಾಮಸವುತ್ತೇನು ಕರುಣಿಸೋ ಕಾಮಿತಾರ್ಥಗಳೀವಸಗುಣ ನಾಮ ಸರ್ವಸಭೀಮಾ ಸೀತಾರಾಮಾ 1 ನಿನ್ನ ಧ್ಯಾನದೊಳಿರುವ ಸಂಭ್ರಮ ಮೆನ್ನ ಮನಕದು ಫಲಿಸುಲೋಸುಗ ಚೆನ್ನಕೇಶವನೆಂದು ಭಜಿಸುವೆ ಪನ್ನಗಾಧಿಪಶಾಯಿ ಸೀತಾ 2 ನಿತರ ಚಿಂತೆಯ ನಳಿಸಿದಾ ನಿಜ ಯತಿ ಜನೋದ್ದಾರ ಯಕ್ಷರಕ್ಷಕ ಪತಿತಪಾವನಾದ ಮದ್ಗುರು ಸತಿ ಶಿರೋಮಣಿಯಾದ ಸೀತಾ 3
--------------
ಚನ್ನಪಟ್ಟಣದ ಅಹೋಬಲದಾಸರು
ರಾಮ ಶ್ರೀ ರಘುನಂದನ ಶರಣು ಸಾರ್ವ- ಭೌಮ ಭೂಸುರವಂದ್ಯ ಸೋಮಶೇಖರಮಿತ್ರ ಕಾಮಿತ ಫಲದಾತ್ರ ಸನ್ನುತ ಸೀತಾ ಪ. ಕ್ರೂರ ದಾನವ ಸಂಹಾರ ಕೌಸಲ್ಯಾಕುಮಾರ ಭೂ- ಭಾರಹರ ಭಜಕÀಜನೋದ್ಧಾರ ವೇದಾಂತಸಾರ ಚಾರುವದನ ಮಣಿಹಾರ ಕುಂಡಲಧರ ವೀರರಾಘವ ವಿಶ್ವಾಧಾರ ಕರುಣಿಸು ಸೀತಾ 1 ಪಾಪರಹಿತ ಪಾವನ ಚರಿತ ಅಹಲ್ಯಾ ಹರಣ ದಿವ್ಯರೂಪ ರಮಾರಮಣ ತಾಪ ವಿಚ್ಛೇದನ ತಾಮಸ ಗುಣಹರಣ ದ- ಯಾಪರ ಬ್ರಹ್ಮಸ್ವರೂಪ ಮೂರುತಿ ಸೀತಾ 2 ಮಾಧವ ಪುಣ್ಯಚರಿತ ಕರುಣಾಪಾಂಗ ಹೆಳವನಕಟ್ಟೆ ರಂಗಯ್ಯ ಸದಾನಂದ ಸುಮತೀಂದ್ರ ಹೃದಯ ಪಂಕಜಭೃಂಗ ಕದನ ವಿಕ್ರಮ ಬಾಹು ಕೋದಂಡಧೃತ ಸೀತಾ 3
--------------
ಹೆಳವನಕಟ್ಟೆ ಗಿರಿಯಮ್ಮ
ರಾಮಕೋಟಿ ನಾಮಭಜನಾ ನೇಮದಿಂದ ಮಾಳ್ಪನು ಧನ್ಯ ಪ ಪ್ರೇಮಪಾಶದಿಂದಬಿಗಿದುಸ್ವಾಮಿಯನ್ನ ಹೃದಯದಿನೆನೆದು ಅ.ಪ ಶಂಭು ತನ್ನ ಮನದಿನಿತ್ಯ ಇಂಬಿನಿಂದ ಧ್ಯಾನಿಸುತ್ತ ಅಂಬಿಕೆಗನುಮೋದಿಸುತ್ತ ಸಂಭ್ರಮದಿಂದೊರೆದ ಸತ್ಯ1 ನೇಮದಿ ಕಾರ್ಯವನು ಬಗೆದು ಭೂಮಿಜಾತೆಯ ಕಂಡವಗೊಲಿದ 2 ಕರುಣಾಮೂರುತಿಯೊಲುಮೆವಡೆದು ಪರಮಪುಣ್ಯ ವಿಭೀಷಣ ಒರದ 3 ಭರತಭೂಮಿಯೊಳಗೆ ಜನಿಸಿ ಹರಿಯ ಭಕ್ತ ಗಣ್ಯರೆನಿಸಿ ಪುರಂದರ ಕನಕದಾಸರು ಕರುಣದೊರೆದ ಭವತಾರಕವಾ 4 ಸಾಸಿರನಾಮವ ಪಠಿಸಿ ವಾಸುದೇವನಿಗೆ ವಂದಿಸಿ ಭೂಸುರರಾನಂದಿಸುವ ಕೇಶವ ಜಾಜೀಶನ ತೋರ್ಪ 5
--------------
ಶಾಮಶರ್ಮರು
ರಾಮಚಂದಿರ ಶ್ಯಾಮಸುಂದರ ಪ್ರೇಮಸಾಗರಾ ಪ ಭೂಮಿಜಾತೆಯರಸ ಬಂಧುರ ಕೋಮಲಾಕರ ಶರಣಪಾಲಾ ಅ.ಪ ವೇದವಿದಿತಾ ಮೋದಭರಿತ ಶ್ರೀಧರಾಚ್ಯುತ ಭಾರ ನಿನ್ನದು 1 ಶಿಲೆಯ ಸತಿಯಗೈವ ಪಾದವ ತೊಳೆದ ಜನಕನು ಸುಲಭಮಾರ್ಗದಿ ಶಬರಿ ನಿನ್ನಯ ಜಲಜಪಾದ ಸೇವೆಗೈದಳು 2 ಕರುಣವೇ ಶರಣರ ಪರಮಸೌಭಾಗ್ಯ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ರಾಮಚಂದ್ರ ಪ್ರೇಮದಿ ಬಾ ಜನಕ ಪ ಕೋಮಲಾಂಗನೆ ಕಾಮಿತದಾತನೆ ಕರುಣಾವಾರಿಧಿ ರಾಮ 1 ಸಾರಸಾಕ್ಷನೆ ತೋರಿಸು ಚರಣವ ಪೂರೈಸೆನ್ನ ಮನ ಸುರಾಮ 2 ಶ್ರೀನಿವಾಸನೆ ಭವ ಕಾನನಾನಲಹನುಪಮ 3
--------------
ಪ್ರದ್ಯುಮ್ನತೀರ್ಥರು
ರಾಮಚಂದ್ರ ರಘುವೀರಾ ನಮೋ ನಮೋ ಪ ಶ್ಯಾಮಾಂಗ ಸುಕುಮಾರಾ ನಮೋ ನಮೋ ಕಾಮಿತಾರ್ಥದಾತಾರಾ ನಮೋ ನಮೋ ಓಂಕಾರ ಅ.ಪ ವಸಿಷ್ಟಾದಿಮುನಿ ತೋಷಿತ ನಮೋ ನಮೋ ನಿಶಚರೇಭ ಕುಲಕಾಲಾ ನಮೋ ನಮೋ ಶ್ರೀ ಬಾಲಾ 1 ನೀತಿಸುಗುಣಯುತಶೀಲಾ ನಮೋ ನಮೋ ಘನಲೀಲಾ 2 ಮಾರೀಚಾಂತಕ ವೀರಾ ನಮೋ ನಮೋ ಶ್ರೀಕಾರಾ 3 ಖ್ಯಾತ ಮೃದುವಾಕ್ ದೀಪ್ತಾ ನಮೋ ನಮೋ ಸಂತೃಪ್ತಾ4 ಪರಮ ಪುಣ್ಯಚರಿತ್ರಾ ನಮೋ ನಮೋ ಶ್ರೀಗಾತ್ರಾ 5 ಅರಿಕುಲ ನಾಶಕ ರಂಗಾ ನಮೋ ನಮೋ ಶ್ರೀರಂಗ 6 ದೇವ ದಿವಿಜನುತ ನಮೋ ನಮೋ ಶ್ರೀರಾಮಾ 7 ನಿತ್ಯ ಮುಕ್ತ ವನಮಾಲಾ ನಮೋ ನಮೋ ಭೂಪಾಲಾ8 ಮಾಂಗಿರೀಶ ಮಾಲಿಂಗಾ ನಮೋ ನಮೋ ಶ್ರೀರಂಗ 9
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್