ಒಟ್ಟು 18608 ಕಡೆಗಳಲ್ಲಿ , 136 ದಾಸರು , 8432 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಡಿ ಇನಿಯನ ವಶದಿ ಮನಸಿಜನಯ್ಯನ ದಯದಿಂದ ಬಾಲೆ ಪ ಮನೆಗೆಲಸಗಳನು ದಿನಗೈಯುತ ಬಲು ವಿನಯ ಸೌಶೀಲ್ಯದಿ ವನಿತೆಯರೊಳು ನೀ 1 ಪತಿಯನು ಪರದೇವತೆಯೆಂಬುವ ಮಹಾ ಮತಿಯಲಿ ಸೇವಿಸಿ ಸುತರನು ಪಡೆದು ನೀ 2 ಗುರುಜನರಿಗೆ ಸದಾಶಿರಬಾಗುತ ಬಹು ಸರಸದಿ ಸದ್ಗುಣಾಭರಣಗಳಿಂದ ನೀ 3 ರತಿಪತಿ ಪಿತನಿಗೆ ಪ್ರತಿಮೆಗಳೆನ್ನುತ ಅತಿಥಿಗಳನು ಸಂತತ ಸತ್ಕರಿಸುತ 4 ಗಿರಿಜೆಯ ಪೂಜೆಯನು ನಿರುತದಿಗೈಯುತ ಸಿರಿಕಾರ್ಪರ ನರಹರಿಯನು ಸ್ಮರಿಸುತ 5
--------------
ಕಾರ್ಪರ ನರಹರಿದಾಸರು
ಪಡಿ ಪಡಿ ಜೀವನ್ಮುಕ್ತಿ ಪ ಗುರುವರನು ತಾ ಪರಶಿವನೆಂದು | ಅರಿದು ಪೂಜಿಸು ಮನದೊಳಗಿಂದು 1 ವ್ರತನೇಮಗಳೊಳು ಫಲವಿಲ್ಲಾ | ಸದ್ಗತಿ ನಿನಗದರೊಳಗಾಗುವದಿಲ್ಲ 2 ಭವತಾರಕನ ಭಜಕರ ನೋಡು | ಕಂಡರೆ ಕರೆದರ್ಚನೆಯನು ಮಾಡು 3
--------------
ಭಾವತರಕರು
ಪಡೆದಲ್ಲದೆ ಮಿಗಿಲು ಬರಲರಿಯದು ಎಡೆ ಬಿಡದೆ ಎಲೆ ಮನವೇ ಏಕೆ ಬಳಲುವಿ ವೃಥಾ ಪ ವನನಿಧಿಯೊಳು ಪೊಕ್ಕು ಸಲಿರೆಡಿ ನೋಡಿದರೂ ಭರದಿ ಬಲುಭಾರವನು ಹೊರಲಿ ಬೆನ್ನಿಲಿ ಧರಗೆ ತಲೆಯನ್ನು ಬಾಗಿ ತಾನು ಯೋಚನೆ ಮಾಡಿ ಪರಿ ಪರಿಯಲಿ ಭಯಂಕರ 1 ಬಡವನೆಂದ್ಹೇಳ ಭರಬಾಗಿಲಲಿ ನಿಂದಿರಲು ದೃಢದಿ ವೈರಿಗಳ ಖಂಡಿಸಲು ಮುದದಿ ಅಡವಿ ಸಂಚರಿಸುತಲಿ ಹಾರೈಸಿ ಹುಡುಕಿದರು ಕಡು ಕಳ್ಳತನ ಕಲೆತು ಕಂಡಕಡೆ ತಿರುಗಿದರು 2 ಬರಿಯ ಬತ್ತಲು ನಿಂತು ನರರಿಗ್ಹೊಂನವ ತೋರಲು ತುರಗವನ್ನೇರಿ ಧರಣಿಯನು ಪಾಲಿಸಲಿ 'ವರ ಹೆನ್ನೆಪುರನಿಲಯ ನರಹರಿಯು ಮಾಡಿದ್ದ ಬರಿದೆ ಚಿಂತಿಸಿ ನೀನು ಭಾಗ್ಯವದರಿಂದೇನು 3
--------------
ಹೆನ್ನೆರಂಗದಾಸರು
ಪಂಢರಿಯ ಬಿಟ್ಟಲ್ಲಿ ಹೆಂಡತಿಯ ಕರಕೊಂಡುಬಂದ ಕಾರಣ ತಿಳಿಯದೋಹೆಂಡತಿಯ ಕಾಟವೊ ಇದು ನಿನ್ನ ಆಟವೊಭಕ್ತಭೂ'ುಗೆ ಓಟವೊಪಂಢರಿಯ ಬಿಟ್ಟಿಲ್ಲಿ ಬಂದ ಕಾರಣವೇನುಪೇಶಯ್ಯ ಪಾಂಡುರಂಗಾsಚಂದ್ರಭಾಗಾ ತೀರ ಸುಂದರ ಮಂದಿರವುಇಂದಿರಾರಮಣ ನಿನಗಲ್ಲಿ 1ಅರುಣೋದಯಕೆ ನಿತ್ಯ ಪಂಚಾಮೃತದ ಸ್ನಾನನವನೀತ ಬಾು ತುಂಬಾsಜರತಾರಿ ಮುಂಡಾಸು ಭರ್ಜರಿ ನಿಲುವಂಗಿಸೊಂಪಿನಂಚಿನ ಮಡಿಯು ನನಗೆತರತರದ ಪುಷ್ಪಗಳು ಎಳೆ ತುಳಸಿ ವನಮಾಲಿಕೊರಳೊಳಗೆ ವೈಜಯಂತಿಪರಿಮಳದ ಗಂಧ ಕಸ್ತೂರಿ ಫಣಿಯಲಿಟ್ಟುವೈಭವದಿ ಪೂಜಿಸುವರು 2ಅಂದಚೆಂದದ ರತ್ನ ಮುತ್ತಿನಾಭರಣಗಳುತರತರದ ಸೊಗಸಾದ ಪಂಚಪಕ್ವಾನ್ನಗಳುಸರಿಯಾಗಿ ಮಧ್ಯಾಹ್ನ ಮಾಪೂಜೆ ನಡೆಯುವದುಭಕ್ತರಿಗೆ ಲೆಕ್ಕ'ಲ್ಲಾ sಪಾದಕ್ಕೆ ಹಣೆ ಹಚ್ಚಿ ತಿಕ್ಕುವರು ಮೇಲೆದ್ದುನಿಂತುಬಿಡುವರು ಅಲ್ಲಿ ದಬ್ಬಿದರು ಎಚ್ಚರಿಲ್ಲಾಇಂಥ ಭಕ್ತಿಯ ಭಾವ ಇನ್ನೆಲ್ಲಿಯೂ ಕಾಣೆಭಕ್ತವತ್ಸಲ 'ಠ್ಠಲಾs 3ಗೋಧೂಳಿ ಕಾಲಕ್ಕೆ ಪಾದಪೂಜೆಯು ಮಹಾಧೂಪ ದೀಪೋತ್ಸವಗಳುsಆಪಾದಮೌಳಿ ಪರ್ಯಂತ ದರ್ಶನ ಪಾದಸ್ಪರ್ಶದಾ ಆನಂದವೋsರಾತ್ರಿ ಹತ್ತಕ್ಕೆ ಶಯನೋತ್ಸವದ ವೈಭವವುನೋಡಿದವರೇ ಧನ್ಯರುsಸಚ್ಚಿದಾನಂದಮೂರ್ತಿ ಅಲ್ಲಿ ಪ್ರತ್ಯಕ್ಷಭಕ್ತರಿಗೆ ಕಾಣುತಿಹನು 4ಸತ್ಯವಾದೀ ಜಗಕೆ ಪಂಚಭೇದವು ನಿತ್ಯಸರ್ವತ್ರ ತಾರತಮ್ಯಸೃಷ್ಟ್ಯಾದಿ ಅಷ್ಟ ಕರ್ತೃತ್ವ 'ಠ್ಠಲಗುಂಟು'ಠ್ಠಲನೆ ಸವೋತ್ತಮಾsಹರಿಯು ಸರ್ವೋತ್ತಮನು ವಾಯು ಜೀವೋತ್ತಮನುಮೂಲಗುರು ಮುಖ್ಯ ಪ್ರಾಣನುಮಧ್ವಮತವೇ ಮತವು ಸಕಲಶ್ರುತಿಸಮ್ಮತವುನಿತ್ಯ ತತ್ತ್ವಜ್ಞಾನವುs 5ಅಣುರೇಣು ಪರಿಪೂರ್ಣ ಸರ್ವಗುಣ ಸಂಪನ್ನನಿರ್ದೋಷ ನಿರ್'ಕಾರಾsಸರ್ವತಂತ್ರ ಸ್ವತಂತ್ರ ಸರ್ವಾಂತರ್ಯಾ'ುಸರ್ವಜ್ಞ ಸರ್ವಸ್ವಾ'ುsಸಚ್ಚಿದಾನಂದಾತ್ಮ ಪೂರ್ಣಾತ್ಮ ಪರಮಾತ್ಮನಿತ್ಯತೃಪ್ತನು ಶ್ರೀಹರಿsನಿರ್ಗುಣ ನಿರಾಕಾರ ಅ'ುತಗುಣ ಆಕಾರತ್ರಿಗುಣವರ್ಜಿತ ತ್ರಿಧಾಮಾs 6ಕಾರ್ಯಕಾರಣ ಅಂಶಿ ಅಂಶಾವತಾರಅಂತರ್ಯಾ'ುಯಾಗಿ ಇಹನುsಪ್ರೇರ್ಯಪ್ರೇರಕನಾಗಿ ಬಾದ್ಯ ಬಾಧಕನಾಗಿವ್ಯಾಪ್ಯ ವ್ಯಾಪಕನು ತಾನುsಯಾರು ತನ್ನನೆ ನಂಬಿ ಸರ್ವಸ್ವವನು ನೀಡಿದಾಸರಾಗುವರೊ ಅವರನ್ನುsಕ್ಲೇಶಗಳ ಕಳೆದು ಭವಪಾಶ ಬಂಧವ ಬಿಡಿಸಿಶ್ರೀಶ ಕೈಪಿಡಿದು ಪೊರೆವಾs 7'ಷ್ಣು ಸರ್ವೋತ್ತಮತ್ವ ತಿಳಿಯದ ಜ್ಞಾನಶೂನ್ಯರಿಗೆಬೇಸತ್ತು ಇಲ್ಲಿ ಬಂದ್ಯಾ sಭಕ್ತ ಪ್ರಹ್ಲಾದನವತಾರ ರಾಯರು ಇಲ್ಲಿಬಂದದ್ದು ಕೇಳಿ ಬಂದ್ಯಾ sಮಧ್ವಸಿದ್ಧಾಂತ ಪದ್ಧತಿಗೆ ಅನುಸರಿಸಿಪೂಜೆಗೊಂಬಲು ಬಂದೆಯಾsಮುದ್ದುಭೂಪತಿ'ಠಲ ಬಿದ್ದೆ ನಿನಪಾದಕ್ಕೆಉದ್ಧಾರ ಮಾಡೊ ಸ್ವಾ'ು 8ಫಲಶ್ರುತಿಚಿತ್ತನಿರ್ಮಲರಾಗಿ ಭಕ್ತಿಭಾವದಿ ನಿತ್ಯ'ಠ್ಠಲಾಷ್ಟಕ ಪಠಿಸಲು'ಠ್ಠಲನು ಕೈಪಿಡಿದು ಕಷ್ಟಗಳ ಪರಿಹರಿಸಿಇಷ್ಟಾರ್ಥಗಳ ಕೊಡುವನುsಸತ್ಯ'ೀ ಮಾತಿದಕೆ ಸಾಕ್ಷಿ ಬೇಕಾದರೆಪ್ರತ್ಯಕ್ಷ ಪಾಂಡುರಂಗಾsಕಾವೇರಿ ಶ್ರೀರಂಗ ಕಂಬೆವರದರಾಜಗಲಗಲಿಯ ನರಸಿಂಗನೋs 9
--------------
ಭೂಪತಿ ವಿಠಲರು
ಪತಿ ಎನಿಸಿ | ವೀಣೆಯನು ಪಿಡಿಯುತ್ತಲೀ ||ಕ್ಷೋಣಿ ಬೆಳಗಾವಿ ಬ್ರಾಹ್ಮಣ | ಶ್ರೇಣಿಯಲಿ ನೀ ನಿಂತೆಯೋ ||ಕಾಣೆನೊ ನಿನಗೆಣೆಯ | ಕಾಣೆ ಕರುಣಿಗಳರಸ ಜ್ಞಾನಿ ಜನ ಮನೊವಾಂಛಿತಾ |ಮಾಣದಲೆ ನೀ ನೀವೆ | ಪ್ರಾಣ ಪದಕನೆ ಹನುಮಜ್ಞಾನ ಭಕುತಿಯ ಬೇಡುವೇ 1 ವಾತ ವ್ರಾತ ಕಿನ್ನಣೆಯುಂಟೆಮಾತುಳಾರಿಯ ದೂತ ಜಯೆ ಜಾತಾ ||ಸೋತು ಬಲು ಭವದೊಳಗೆ | ಆರ್ತನಾಗುತ ನಿನ್ನ ಕಾತುರೆತಲಿಂ ಪ್ರಾರ್ಥಿಪೇ 2 ವೃಂದಾವನಾರ್ಯರಿಂದ್ವಂದಿತವು ಎಂದೆನಿಪ ವೃಂದಾವನಿಲ್ಲಿ ಇಹುದೂ |ವೃಂದಾರ ಕೇಂದ್ರ ಜನ | ಬಂದಿಲ್ಲಿ ರಾಜರ |ವೃಂದಾವನರ್ಚಿಸುವರೋ |ನಂದನನು ದಶರಥಗೆ | ನಂದನನು ದೇವಕಿಗೆ | ನಂದನನು ಸತ್ಯವತಿಗೇ |ಒಂದೊಂದು ಹಯಶೀರ್ಷ | ಅಂದರೂಪಗಳಿಂದ ನಂದನನು ಭಕ್ತ ಜನಕೇ 3 ಜೀವಾಂತರಂಗದಲಿ | ಜೀವಾಂತರಾತ್ಮನನ ದ್ವೈವಿಧ್ಯ ರೂಪ ಸೇವಾ |ತಾವಕದಿ ನೀ ಮಾತರಿಶ್ವಾಖ್ಯನೆಂದೆನಿಸಿ ಸೇವಿಸುವೆ ಘರ್ಮೋಕ್ತದಿ ||ಜೀವ ಸಕಲೋತ್ತಮನೆ | ದಾವ ಶಿಖಿ ಭವವನಕೆದೇವ ಬಲಿಭುಜ ಮಾರುತೀ |ದೇವಾದಿ ವಂದ್ಯ ಗುರು | ಗೋವಿಂದ ವಿಠ್ಠಲನಭಾವದಲಿ ತೋರಿ ಪೊರೆಯೊ 4
--------------
ಗುರುಗೋವಿಂದವಿಠಲರು
ಪತಿ ಗೋಪಾಲ | ವಿಠಲ ಕಾರುಣಿಕಾ ಪ ನೀನಾಗಿ ಒಲಿದಿವನ | ಪೊರೆಯೆ ಪ್ರಾರ್ಥಿಸುವೇ ಅ.ಪ. ಉತ್ತಮ ಸುಸಂಸ್ಕøತಿಯ | ಪೊತ್ತು ಜನಿಸುತ ಸರ್ವಕರ್ತೃ ನಿನ್ನಯ ಸೇವೆ | ಅರ್ಥಿಯಂ ಗೈವೆ |ಅರ್ಥಿಸುವ ನಿನ್ನ ದಾಸತ್ವ ದೀಕ್ಷೆಯನೂಸುಪ್ರೀಶ ತೋರ್ದಪರಿ | ಇತ್ತಿಹೆನೊ ಅದಗೇ 1 ಕರ್ಮನಾಮಕನೆ ದುಷ್ಕರ್ಮಗಳ ಪರಿಹರಿಸಿನಿರ್ಮಲ ಸುಸಾಧನಕೆ | ಸನ್ಮಾರ್ಗ ತೋರೋ |ಮನ್ಮಥನ ಜನಕ ತವ | ನಾಮಸ್ಮರಣೆಯ ಕವಚಪೇರ್ಮೆಯಿ ತೊಡಿಸಿ ಸ | ದ್ಧರ್ಮರಥನೆನಿಸೋ 2 ವೃದ್ಧ ಜನಗಳ ಸೇವೆ | ಬುದ್ಧಿಪೂರ್ವಕಗೈದುಮಧ್ವಮತ ಸಚ್ಛಾಸ್ತ್ರ | ತಿದ್ದಿ ಪೇಳುವಲೀ |ಶುದ್ಧಬುದ್ದಿಯನಿತ್ತು | ಉದ್ದರಿಸಬೇಕಿವನಹದ್ದುವಾಹನದೇವ | ಮಧ್ವಾಂತರಾತ್ಮಾ 3 ಅಧಿಭೂತ ಅಧ್ಯಾತ್ಮ | ಅದಿದೈವದೊಳು ನಿನ್ನಅದುಭೂತ ವ್ಯಾಪ್ತಿಯನೆ | ವದಗಿಸಿ ಮನಕೇ |ಬುಧ ಜನೇಢ್ಯನೆ ದೇವ | ಸದಯದೀ ತರಳಂಗೆಹೃದಯದಲಿ ಮೈದೋರಿ | ಮುದವನೇ ಬೀರೋ 4 ದೀರವನು ಎಂದೆನಿಪ | ಪಾವಮಾನೀಯ ಪ್ರಿಯಕೇವಲಾನಂದಮಯ | ಮಾವಿನೋಧೀಸಾವಧಾನದಿ ತರಳ | ಭಾವುಕಗೆ ಒಲಿಯೆಂದುಓದಿ ಭಿನ್ನವಿಪೆ ಗುರು | ಗೋವಿಂದ ವಿಠಲ 5
--------------
ಗುರುಗೋವಿಂದವಿಠಲರು
ಪತಿ ತನಯೇ ಪ ಆರು ನಿನಗೆ ಸರಿ ಮೂರು ಲೋಕದೊಳುವೃತ್ರಾರಿಗಳಿಂದಾರಾಧಿತಳೇ ಅ.ಪ. ಅಗಜೆ ಎನ್ನ ವದನಾ | ಮಾಡಲಿ | ನಗಧ5ಗುಣಸ್ತವನಾಖಗ ವಹ ಸಖ ಶಿವ | ಮೃಗ ಪಾಣಿಯ 5iÉುಹಗಲಿರುಳಲಿ ಹರಿ ಗಾಯನ ಮಾಡಿಸೇ 1 ಮನಸಿಜಾರಿಯ ಜಾಯೇ | ಮನ್ಮನ | ಚಪಲ ಬಿಡಿಸು ತಾಯೇಕನಸಿಲಿ ಮನಸಿಲಿ ಘನ ವಿಷಯಂಗಳನೆನೆವ ಕೊಡದೆ ಹರಿ ಧ್ಯಾನವನೀಯೇ 2 ಲೋಕ ಪಾವನ ಮೂರ್ತೇ | ಪಾಲಿಸು | ಏಕದಂತನ ಮಾತೇನೋಕನೀಯ ಗುರು ಗೋವಿಂದ ವಿಠಲನಜೋಕೆಯಿಂದ ನೆನೆ ನೆನೆಯುವ ಮಾತೇ 3
--------------
ಗುರುಗೋವಿಂದವಿಠಲರು
ಪತಿ ತನುಜ ಕರುಣಿಸೋ ಹರಿ ನಿನ್ನವ ನೆನಿಸೋ | ಸಿರಿಪತಿ ತವ ನಾಮಾಮೃತ ಫಲನುಣಿಸೋ ಪ ನಿನ್ನ ದಾಸರ ಸಂಗವನುದಿನ ಬಲಿಸೋ | ಘನ ವಿಚಾರಕ ಮನವೆನ್ನ ನಿಲಿಸೋ 1 ಮಂಗಳಂಘ್ರಿಯ ಕುಂಬ ಕಂಗಳದೆರಿಸೋ | ರಂಗಭಕುತಿ ಅಂತರಂಗ ದೆಚ್ಚರಿಸೋ 2 ಜನುಮಕ ಬಹಭವ ಪರಿಹರಿಸೋ | .........................................3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಪತಿ ಪಾಹಿ | ರುದ್ರದೇವ ಪ ರುದ್ರದೇವ ಅದ್ರಿಜೆ ರಮಣನೆ | ಭದ್ರವ ಕೊಟ್ಟುದ್ದರಿಸೆನ್ನ ಅ.ಪ. ಭುಜಗ ಪಾವನಿ | ಗಂಗಾಧರನೇ 1 ದಿನಮಣಿ ಸೋಮ | ಅನಲೇಕ್ಷಣನೆಮನುಜ ಸಿಂಹಾಂಕಿತ | ಅನಘನ ಸೇವಿಪ2 ರಾಮ ತಾರಕ | ಆ ಮಹ ಮಂತ್ರವಭಾಮಿನಿ ಗಿರಿಜೆಗೆ ಪ್ರೇಮದಿಂದೊರೆದೆ 3 ಕುಸುಮ ಕುಸುಮ 5ಭೃಂಗ 4 ಸುರವರೇಣ್ಯ ಗುರು |5ೂೀವಿಂದ ವಿಠಲನಕರುಣವ ದೊರಕಿಸು | ಹರ ಮಹದೇವ 5
--------------
ಗುರುಗೋವಿಂದವಿಠಲರು
ಪತಿ ವಿಠಲ | ಬುಧಜನೇಡ್ಯಾಮುದದಿಂದ ಲೀಕೆಯನು | ಸಲಹೊ ಶ್ರೀ ಹರಿಯೇ ಪ ನೊಂದು ಭವದಲಿ ಬಹಳ | ಇಂದಿರಾರಮಣ ತವಅಂದ ಪದದಾಸ್ಯ ಮನ | ಮಂದಿರದಿ ಬಯಸೀ |ಬಂದು ಬೇಡ್ದಳಿಗೆ ನಾ | ನೊಂದು ಅಂಕಿತವಿತ್ತೆತಂದೆ ತೈಜಸನೆ ನೀ | ನಂದೆ ಪೇಳ್ದಂತೇ 1 ಬಹಳ ಭಕ್ತಿಯಲಿಂದ | ವಿಹಿತ ಕರ್ಮಾಸಕ್ತೆಅಹಿಶಯ್ಯ ಕೃಪೆಯಿಂದ | ಮಹಿಮೆ ತೋರೀ |ಅಹಿತ ವಿಹಿತಗಳೆರಡ | ಸಹನೆ ದಯಪಾಲಿಸುತಮಹಮಹಿಮ ಪೊರೆ ಇವಳ ಸುಹೃತ ಜನರ ಬಂಧೋ2 ಜ್ಞಾನಾಯು ರೂಪನಿಗೆ | ನೀನಿವಳನೊಪ್ಪಿಸುತಸಾನುಕೂಲಿಸು ಮುಕುತಿ | ಜ್ಞಾನ ಭಕುತಿಗಳಾ |ಕಾಣೆ ತವ ಕಾರುಣ್ಯ | ಕೆಣೆಯು ತ್ರೈಭುವನದಲಿಮಾಣದಲೆ ಪೊರೆ ಇವಳ | ದೀನ ಜನ ಪಾಲಾ 3 ಪತಿ ಕೃಷ್ಣ | ಕಾಳಿಪತಿನುತ ಹರಿಯೆಕಾಳಘಾವಳಿಗಳನು | ಕಳೆದು ಪೊರೆ ಇವಳಾ4 ಪಾವನಾತ್ಮಕ ದೇವ | ಪಾವಮಾನಿಯ ಪ್ರೀಯಜೀವ ಪರತಂತ್ರತೆಯ | ಭಾವ ಅನುಭವದೀದೇವ ಸಾಧನಗೈಸಿ | ಜೀವಿ ಇವಳನು ಪೊರೆಗೋವಿಂದಾಂಪತಿ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಪತಿ ವಿಠಲ | ಶ್ರೀನಿವಾಸ ಪ ದೀನ ಜನ ಮಂದಾರ | ನೀನಿವನ ಸಲಹೋ ಅ.ಪ. ಮೋದ ಉಣಿಸಿವಗೇ 1 ಪ್ರಾಚೀನ ಕರ್ಮಾಂಧ | ಕೂಪದಲಿ ಬಿದ್ದಿಹೆನೊಖೇಚರೊತ್ತಮ ಪ್ರಾಣ | ಮತದಿ ಬಂದಿಹನೋವಾಚಿಸುತ ಇವನಲ್ಲಿ | ನಿಚೋಚ್ಚ ತರತಮನಮೋಚಿಸೋ ದುಷ್ಕರ್ಮ | ಕೀಚಕಾರಿ ಪ್ರಿಯಾ 2 ದಾಸ ದೀಕ್ಷೆಯಲಿ ಮನ | ದಾಶಿ ಬಲು ಇಟ್ಟಿಹೆನೊಶ್ರೀಶ ತ್ಯೆಜಸನೀನೆ | ಲೇಸು ಸತ್ಪಂಥಾ |ಸೂಸಿ ತೋರಿಹೆ ಹರಿಯೇ | ಹೇ ಸದಾಶಿವ ವಂದ್ಯಕ್ಲೇಶ ನಾಶನ ಕಾಯೊ | ವಾಸವಾನುಜನೇ 3 ತೈಜಸನೆ ನೀ ತೋರ್ದ | ತೇಜರೂಪೋಪಾಸಾಮಾಜದಲೆ ಪೇಳಿರುವೆ | ವಾಜಿವದನಾ |ಸೋಜಿಗದ ತರಳನಿಗೆ | ಓಜಸ್ಯ ಪಾಲಿಸುತರಾಜಿಸೋ ಇವನಲ್ಲಿ | ಮೂಜಗತ್ಪತಿಯೇ 4 ಸರ್ವಾಂತರಾತ್ಮ ತವ | ದಿವ್ಯ ಸಂಸ್ಕøತಿಯನ್ನಸರ್ವತ್ರ ಸರ್ವದಾ | ಓವಿ ಪಾಲಿಪುದೋ |ದುರ್ವಿ ಭಾವ್ಯನೆ ಗುರೂ | ಗೋವಿಂದ ವಿಠಲಯ್ಯದರ್ವಿ ಜೀವಿಯ ಕಾಯೊ | ಬಿನ್ನವಿಪೆ ಹರಿಯೇ 5
--------------
ಗುರುಗೋವಿಂದವಿಠಲರು
ಪತಿ ಪೋದನೆಂದು ಶೋಕಿಸುವುದ್ಯಾಕೆ ಶ್ರೀ - ಪತಿಯು ಇರಲಾಗಿ ಮರುಳೆ ಪ ಪ್ರತಿ ಪ್ರತಿ ಜನ್ಮದಿ ಜತೆ ಮಾಡಿದ ಪಂಚ - ಕಾಯ ಸತ್ಯ ಸ್ಥಿರವಲ್ಲವೇ ಮರುಳೆ ಅ.ಪ ನೋತ ಪುಣ್ಯಾಪುಣ್ಯದ ಫಲ ವ್ರಾತ ಸುಖ ಸುಖವಿತ್ತು ಬರಿದಾಗುವುದು ನಿತ್ಯವಾಗಿ ಸುಖವೆ ಇರಲೆಂದು ಬೇಡಿದರೆ ವ್ಯರ್ಥಧಾವತೆ ಅಲ್ಲದೆ ಸಾರ್ಥಕೆಲ್ಲಿ ಮರುಳೆ 1 ಸೃಷ್ಟಿಯಲಿ ಎಲ್ಲರೂ ನಷ್ಟವಾಗುವರಲ್ಲದೆ ಶ್ರೇಷ್ಠರಾಗಿ ಬಾಳುವರೊಬ್ಬರಿಲ್ಲ ಎಷ್ಟು ಶೋಕಿಸಿದರು ಪೋದ ಕಾಷ್ಠ ಬರಲರಿಯದು ಎ- ಳ್ಳಷ್ಟು ಲಾಭ ಇದರಿಂದ ಇಲ್ಲ ಮರುಳೆ2 ಮುಟ್ಟಿ ಕಟ್ಟಿದ ತಾಳಿಯ ಸಂಬಂಧ ಕೊಟ್ಟ ಹರಿ ತಾ ತಟ್ಟನೆ ಒಯ್ದ ಮೇಲೆ ದುಷ್ಟವೆನ್ನದಲೆ ಇಷ್ಟವೆಂದೆಣಿಸಲು ಸೃಷ್ಟಿಪತಿಯು ತುಷ್ಟನಾಗುವ ಮರುಳೆ 3 ಸರಿಯಲ್ಲಾ ಬರಿದೆ ಚಿಂತಿಸುವುದು ನಿನಗೆ ಕರೆಕರೆಯು ಹೆಚ್ಚುವುದು ಮುಂದೆ ಬಹಳ ಹರಿಕಥೆಯ ಕೇಳು ಹರಿದಾಸರೊಳ್ ಬೀಳು ಹರಿಗೆ ಪೇಳು ನಿನ್ನಯ ಗೋಳು 4 ಇನ್ನಾದರೂ ನೀನು ಹರಿಯ ಸಂಕಲ್ಪವಿದೆಂದು ನಿನ್ನ ಮನದೊಳು ತಿಳಿದುಕೊಂಡು ಘನ್ನ ಮಹಿಮಾ ವಿಜಯ ರಾಮಚಂದ್ರವಿಠಲನ್ನ ಸನ್ನುತಿಸಲು ಮುನ್ನೆ ಹತಿಯಾಗುವುದು ಮರುಳೆ 5
--------------
ವಿಜಯ ರಾಮಚಂದ್ರವಿಠಲ
ಪತಿತ ಪಾವನ ನೀನೆ ಗತಿಯೆನಗೆ ಕೇಳು ಅತಿ ನೀಚ ತರತಮನಾದವಗೆ ಪ. ಸಾರಥಿ ಸ್ಥಿರವಲ್ಲವು ದುರುಳ ದಶೇಂದ್ರಿಯಾಶ್ವಗಳಿರವು ಹುರುಳಿಲ್ಲದಂತೆ ದುರ್ವಿಷಯಾಂಧಕೂಪಕೆ ಸರಿದು ಪೋಗುತಲೆನ್ನ ಕೆಡಹುವವು 1 ಅನ್ಯರಿಗುಸುರೆ ಲಜ್ಜಾಕರದ ಅನ್ಯಾಯ ಕೃತ್ಯದಿಂದಲಿ ನೆರೆದ ಮುನ್ನಿನ ನರಕಯಾತನೆಗಳ ತರಿವದ ನಿನ್ನ ಚರಣಕೊಪ್ಪಿಸಿದೆ ವರದ 2 ದಾಸದಾಸ್ಯವನೆಲ್ಲ ದಯಮಾಡು ಪ- ರೇಶ ಪರಾತ್ಪರ ಮೂರುತಿಯೆ ಲೇಶಾಯಾಸವಿಲ್ಲದೆ ಸಲಹುವ ಜಗ- ದೀಶ ಶೇಷಾಚಲವಾಸಿ ಹರೇ 3
--------------
ತುಪಾಕಿ ವೆಂಕಟರಮಣಾಚಾರ್ಯ
ಪತಿತನ್ನ ಪಾವನ ಮಾಡುವ ರಂಗಾ | ಗತಿಯಿಲ್ಲದವರಿಗೆ ಗತಿಯೇ ನೀನೇ ಗತಿ ಪ ನಿಂದಿರಲು ನೆರಳಿಲ್ಲ ನಿಲ್ಲಲು ನೆಲೆಯಿಲ್ಲ | ತಂದಿ-ತಾಯಿಯೆಂಬೋರು ಮೊದಲೆ ಇಲ್ಲ|| ಒಂದು ಸಂಗತಿ ಇಲ್ಲ ಪಡದಾನಂದನರಿಲ್ಲ | ಬಂದು-ಬಳಗದವರು ಆರಿಲ್ಲ ಹರಿಯೇ 1 ಕುಡಿಯಲು ನೀರಿಲ್ಲ ಕಾಲಿಡಲು ಇಂಬಿಲ್ಲಾ | ಪಿಡಿವೆನೆಂದರೆ ಮೇಲೆ ಕೊಡೆಯಿಲ್ಲ || ಒಡನೆ ಬರುವರಾರಿಲ್ಲ ಸಂಗಡದಿ | ಆಡಿವೆನೆಂದರೆ ವಳ್ಳಿಗಾಯಿತೊ ಹರಿಯೆ 2 ಧೈರ್ಯ ಕೊಡುವವರು ಇಲ್ಲ ದಾತರೊಬ್ಬರಿಲ್ಲ | ಕಾರ್ಯವೆಂದರೆ ಕೇಳಿ ಅರಿವರಿಲ್ಲಾ || ವೀರ್ಯವು ಎನಗಿಲ್ಲ ವಸಿಷ್ಠನು ನಾನಲ್ಲ | ಧೈರ್ಯವು ದು:ಖವು ವೆಗ್ಗಳಿಸಿತೋ ಹರಿಯೆ 3 ತನ್ನವರು ತನಗಿಲ್ಲ ತಾಳು ಎಂಬುವರಿಲ್ಲ | ಸಣ್ಣ ಮನಸ್ಸು ಅಲ್ಲದೇ ಘನವು ಯಿಲ್ಲ || ಕರ್ಮ ಬೆನ್ನ ತೊಲಗಲಿಲ್ಲ | ಇನ್ನು ಜನ್ಮ ವ್ಯರ್ಥವಾಯಿತೊ ಹರಿಯೇ 4 ಪಾದ | ಸಾಕಾರ ಮಾಡಿಕೊಂಬುವರ ಸಂಗಡ || ಶ್ರೀಕಾಂತ ವೆಂಕಟ ವಿಜಯವಿಠ್ಠಲರೇಯ | ನೀ ಕರುಣಸಿದರೆ ಸಕಲಾರ್ಥವಹುದು 5
--------------
ವಿಜಯದಾಸ
ಪತಿತಪಾವನ ಕರಿವದನ ನಾರಾಯಣ ಮತಿಗೆಮಂಗಳವೀಯೋ ಮುನಿಜನಾಭರಣ ಪ ಇತರವ್ಯಾಕುಲಗಳ ಮಥನವು ಮನದೆ ಬಹಳ ವ್ಯಥೆಯ ತೋರುತ್ತಲಿದೆ ಗತಿಯಾವುದೊ ಹರಿಯೆ ಸತತ ನಿನ್ನ ಗುಣಕಥನ ಮಾಡುವ ಅತಿಶಯ ಮಾರ್ಗದಿ ಕ್ಷತಿಯೊಳು ಪೊರೆಯ್ಯೆ 1 ಧ್ರುವ ಪ್ರಹ್ಲಾದ ನರ ದ್ರೌಪದಿ ಅಂಬರೀಷ ಇವರ ಕಷ್ಟಗಳಿಂದ ಪಾರುಗಾಣಿಸಿದೆ ಅವನೀಭಾರವನಿಳುಹುವ ದೊರೆಯೇ ಕುವಲಯನೇತ್ರ ಕುಮಾರನ ಕೈಪಿಡಿ2 ಶ್ರೀರಮಣೀವರ ಸಾರಗುಣಾಕರ ಸಿರಿ ಜಾಜೀಶ್ವರ ಕೋರುತಿರುವೆಮಗೆ ತೋರಿಸು ತವಪದ ನಾರದ ಮುನಿನುತ ಸಾರುತೆ ನಮಿಪೆ 3
--------------
ಶಾಮಶರ್ಮರು