ಛಂದದಿಂದ ಬಂದು ಸಲಹೊ ಫಂಡರೀಶ ನಿನ್ನ ನಂಬಿದೆ ಪ ತಂದೆ ನೀನೆ ಸರ್ವರಿಗೆ ಅನಿಮಿತ್ತ ಬಂಧುವಲ್ಲವೆ ಅ.ಪ ದೋಷಿನಾನು ಮೂಢನಾನು ವಲಿಯೆನೆಂದು ಏಕೆ ಹೇಳು ದೋಷದೂರ ಜ್ಞಾನರೂಪ ಬಿಂಬ ನಿನ್ನ ದಾಸನಲ್ಲವೆ 1 ಎಲ್ಲಾ ಸತ್ತಾದಾತ ನೀನು ಇಲ್ಲ ನಿನಗೆ ಭೇದವೇನು ನಲ್ಲ ಶರಣು ಎಂದಮೇಲೆ ವಲ್ಲೆ ಎನ್ನೆ ಬಿರುದು ಪೋಗದೆ 2 ಕಾಕುಮಾಡಿ ಎನ್ನ ಜಗದಿ ನೂಕಿ ಬಿಟ್ಟು ಭಂಟರಲ್ಲಿ ಸಾಕದೇನೆ ಬಿಟ್ಟರೀಗ ಲೋಕನಗದೆ ಭಕ್ತರಾಣೆ 3 ಮುಂದುಮಾಡಿ ಹಿಂದೆ ಎನ್ನ ಹಿಂದು ಮಾಡಿ ಈಗ ನಗುವೆ ಇಂದಿರೇಶ ನಿನ್ನ ನ್ಯಾಯ ಮಂದನಾನು ಅರಿಯೆ ಶರಣು 4 ಲಕುಮಿ ಮೊದಲು ಎಲ್ಲಾ ಜಗಕೆ ಶಕುತ ನೀನೆ ಒಬ್ಬ ಆಶ್ರಯ ನೀಡಿಕಾಯೋ ಬೇಗನೆ 5
ಜಗದಂತರ್ಯಾಮಿಯೆಂದೆನುತ ನಿನ್ನನಿಗಮ ಸಾರುವ ಮಾತು ಪುಸಿಯೆ ರಂಗ ಪ ಸಿರಿ ಸಂಪತ್ತುಗಳನೀವಶ್ರೀದೇವಿ ನಿನ್ನ ಹಿರಿಯರಸಿಯೋ ದೇವ 1 ಎಂಬತ್ತುನಾಲ್ಕು ಲಕ್ಷ ಜೀವರಾಶಿಗಳನ್ನುಬೊಂಬೆಗಳ ಮಾಡಿ ಭವರಂಗದಲಿತುಂಬಿ ಕಲೆಗಳನೊತ್ತಿ ನೊಸಲ ಬರೆಹವ ಬರೆವಅಂಬುಜೋದ್ಭವ ನಿನ್ನ ಹೆಮ್ಮಗನು ದೇವ 2 ಸಕಲ ಜೀವರಾಶಿಗಳನು ಕಲ್ಪಿಸುವ ಬೀಜಸುಖದಿಂದ ಮಾಯಾಂಗನೆಯರೊಡಲೊಳುಅಕ್ಕರದಿ ಪಿಂಡಾಂಡಗಳ ಕಟ್ಟಿ ಬಲಿಸುವಮಕರಾಂಕ ನಿನ್ನ ಕಿರಿಮಗ ದೇವ 3 ರಾಮನಾಮವ ಜಪಿಸಿ ಪರಮ ವೈಷ್ಣವನಾಗಿಹೇಮಗಿರಿ ಸನಿಹ ಸಾಹಸ್ರನಾಮಪ್ರೇಮದಲಿ ಜಪಿಸುತ್ತ ವೈರಾಗ್ಯನಿಧಿಯಾದಸೋಮಶೇಖರನು ನಿನ್ನ ಮೊಮ್ಮಗನು 4 ಜಂಗಮ ಸ್ಥಾವರಕಾಧಾರವಾಗಿಹಳುಭಂಗಪಡುವ ಜನರ ಕರ್ಮವ ಕಳೆವಳುಹಿಂಗದೆ ಜಗವ ಪಾವನವ ಮಾಡುವ ಪುಣ್ಯಗಂಗೆಯೆಂಬಾಕೆ ನಿಮ್ಮಯ ಮಗಳು ದೇವ 5 ಶುದ್ಧ ಬುದ್ಧಿಯನುಳ್ಳ ಪ್ರದ್ಯುಮ್ನನಾ ಮಗಳುಶ್ರದ್ಧೆಯೆನಿಸಿಕೊಂಡು ಸೂತ್ರಗೆ ಸತಿಯಾಗಿಸದ್ಯೋಜಾತನ ಪಡೆದು ಪ್ರಸಿದ್ಧವಹ ದೇವಿ ಈ ಧರೆಯೊಳು ಪುಟ್ಟಿ ನಿನ್ನ ದಾಸಿಯಾದಳು 6 ಇಂತು ಅಣುರೇಣು ತೃಣ ಕಾಷ್ಠದೊಳಗೆಲ್ಲಸಂತೋಷವಾಗಿಹುದು ನಿನ್ನ ಸ್ಮರಣೆಯಂತ್ರವಾಹಕನೆಂಬ ಬಿರುದು ಸಲುವುದು ನಿನಗೆಕಂತುಪಿತ ಕಾಗಿನೆಲೆಯಾದಿಕೇಶವನೆ 7