ಒಟ್ಟು 927 ಕಡೆಗಳಲ್ಲಿ , 92 ದಾಸರು , 842 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾಲಿಸು ಪಾಲಿಸು ಪಾರ್ವತಿ ತನಯನೆ ಫಾಲಚಂದ್ರಯುತನೆ ಕಾಲ ಸಂಭಾವನಲೋಲುಪ ವಾರಿಜಾಸ್ಯನುತನೆ ಪ ಸುಜನ ಗಜವದನಾ ಸುರಕುವಲಯ ದಿನಕರ ಧೂರ್ಜಟಿಸುತ ಗಣಪ 1 ಕಾಮಿತ ಫಲಗಳ ಪಡೆಯಲು ಸುಜನರು ನೇಮದಿ ಪೂಜಿಪರು ಸಾಮಜ ವದನನೆ ಭಕ್ತರಭೀಷ್ಟವÀ ಪ್ರೇಮದಿ ಕರುಣಿಸುತ 2 ಗಾನಲೋಲ ವರತಾಂಡವ ಪ್ರೀತನೆ ಕೋಮಲಾಂಗ ಸತತಂ ಧೇನುನಗರ ಸಂರಕ್ಷಣ ದಕ್ಷನೆ ಸಾನುರಾಗದಲನಿಶಂ 3 ಇಂದ್ರಾದಿ ದಿವಿಜರೆಲ್ಲ ಕುಂದುತ್ತ ದೈತ್ಯ ಭಯದಿಂ ಸುಂದರಿ ನಿನ್ನ ಭಜಿಸೆ ನಿಂದೆಲ್ಲರನ್ನು ಪೊರೆದೆÀ 4 ಕಮಲಾಕ್ಷಿ ವಿಮಲಪಾಣಿ ಕಮಲಾಪ್ತ ಮುಖ್ಯರಮಣೆ ಸುಮಶೋಭಮಾನವೇಣಿ ಕಮನೀಯ ದಿವ್ಯಪಾಣಿ 5 ಶಾಕಿನಿರೂಪೆ ದೇವಿ ಲೋಕೈಕ ವೀರ್ಯ ಧೈರ್ಯ ಬೇಕಾದ ವರಗಳಿತ್ತು ಶ್ರೀಕಾರ ಶಕ್ತಿಯೆನ್ನ 6 ಜ್ಞಾನವು ಮೌನ ಜಯವುಂ ಧ್ಯಾನ ಸುಮಂಗಲತ್ವಂಮಾನ ಸುಪುತ್ರ ಹಿತಮಂ ಧೇನು ಪುರೀಶೆ ಕೊಟ್ಟು 7
--------------
ಬೇಟೆರಾಯ ದೀಕ್ಷಿತರು
ಪಾಲಿಸು ಮರೆಯದೆನ್ನ ಪಾಲ ತ್ರಿಜಗಮೋಹ ಮಾಲಕೌಸ್ತುಭ ಸತ್ಯಭಾಮಾ ಲೋಲ ಭಕ್ತಜನರ ಪ್ರೇಮ ಕಾಲಕಾಲದಿ ನಿಮ್ಮ ಭಜನಲೋಲಜನರೊಳಿರಿಸಿ ಎನ್ನ ಬಾಲನೆಂದು ಕರುಣದಾಳು ಕಾಳರಕ್ಕಸಕುಲಸಂಹಾರ ಪ ವಾರಿಧಿಯೊಳು ಮುಳುಗಿದ ವೇದಗಳ ತಂದು ವಾರಿಜಾಸನಗೊಪ್ಪಿಸಿದಿ ಸಾಧುಗಳ ಬಂಧು ವಾರಿಧಿಯೊಳು ವಾರಿಧಿಯ ಕಡೆದಿ ವಾರಿಧಿಯೊಳು ವಾಸನಾದಿ ವಾರಿಧಿಸುತೆಪತಿ ನೀನಾದಿ ವಾರಿಧಿಯನು ಬಂಧಿಸಿ ಮತ್ತೆ ವಾರಿಧಿಯ ಮಧ್ಯದ ಪುರವ ಸೂರೆಗೈದಾಪಾರಮಹಿಮ ಘೋರತಾಪದಿ ಬಿಡದೆ ದೇವ1 ಮಾಯಾಜಗವ ತುಂಬಿದಿ ಮಹರಮಣ ಹರಿಯೆ ಮಾಯದ ಮರುಣುಣಿಸಿದಿ ವೈಕುಂಠಪತಿಯೆ ಮಾಯೆಗೆ ಮಾಯೆಯೆನಿಸಿದಿ ಮಾಯೆಹರನಾದಿ ಮಾಯದಿಂ ಬಲಿಯನ್ನು ತುಳಿದಿ ಕಶ್ಯಪನ ಅಳಿದಿ ಮಾಯದ್ಹಿರಣ್ಯಕನ ಸೀಳಿದಿ ಮಾಯದಿಂ ಮಾಯೆಮೂಗು ಕುಯ್ಸಿದಿ ಮಾಯಮೃಗವನು ಮಾಯದಿಂ ಕೊಂದಿ ಮಾಯದೆನ್ನ ನೂಕದೆ ದೇವ 2 ಕಪಟಕೋಟಿಗಳನ್ನಳಿದಿ ಚಪಲಸುರಪನ ಕಪಟಗರುವವ ಮುರಿದಿ ಲಕುಮಿರಮಣ ಕಪಟನಾಟಕ ನೆನಿಸಿದಿ ಕಪಟಹರನಾದಿ ಕಪಟ ಅಸುವ ಸೆಳೆದಿ ಕಪಟ ಕಂಸನ ಶಿರವಮೆಟ್ಟಿದಿ ಕಪಟಿಗಳ ಮಹ ಕಪಟದಿಂ ಕೊಂದಿ ಶ್ರೀರಾಮ3
--------------
ರಾಮದಾಸರು
ಪಾಲಿಸು ಶ್ರೀನಿವಾಸ ಪಾಲಿಸೋ ಪ ಪಾಲಿಸೋ ಯದುಕುಲ ಬಾಲಾ ಗಾನ- ಲೋಲನೆ ಯಾಕಿಂಥ ಜ್ವಾಲಾ ಜನ್ಮ ಬಲ್ಲೇನಾ ಸಂಸಾರಶೂಲಾ ನಿನ್ನ ಚಾಲನದಿಂದಾದವೆಲ್ಲಾ ಪದ್ಯ ಮಾಲೆಹಾಕುವೆ ಸಿರಿಲೋಲಾ ಆಹಾ ಬಾಲನ ಪಡೆದು ಪಾಲಿಸಲಾರೆನೆಂದರೆ ಸೀಲನೇ ಜನನಿ ಪದ್ಮಾಯಗಳಿಗೆ ಪೇಳ್ವೆ 1 ನಾನು ಮಾಡುವುದೆಂಬುದಿಲ್ಲಾ ಯೆನಗಾವ ಸ್ವಾತಂತ್ರ್ಯವು ಇಲ್ಲಾ ಇರೆ ಅನುಗಾಲ ಕಷ್ಟವು ಸಲ್ಲಾ ಎನಗೆ ಜನುಮಾದಿ ಭಯವು ಬಿಟ್ಟಿಲ್ಲ ನೀನು ತನುಸ್ಥಾನ ಬಿಟ್ಹೋದ ಮ್ಯಾಲೆ ಎನ್ನ ಸ್ವಾತಂತ್ರ್ಯವು ಇಲ್ಲವಾಯಿತಲ್ಲ ಆಹಾ ಅನುದಿನ ಹಸಿವೆ ತೃಷೆಗಳಿಂದ ಬಳಲೋ ದಾ- ಸನು ನಿನ್ನವನಿಗೆ ಸ್ವಾಧೀನವೆಲ್ಲಿಹುದೈಯ್ಯಾ 2 ನಿತ್ಯ ಸಂಸಾರಿಯಾದೆನಗೆ ಮತ್ತೆ ಮೃತ್ಯು ಬೆನ್ಹತ್ತಿರುವವಗೆ ಮಾಡೋ ಕರ್ಮ ಬದ್ಧ ಎನಗೆ ನೀ- ಚತ್ವದಿದುಪಜೀವಿಸುವವಗೆ ನಾನು ನಿತ್ಯನೆಂಬುವ ದುರಾತ್ಮನಿಗೆ ಆಹಾ ಮುಕ್ತಿಗೊಡೆಯ ಪುರುಷೋತ್ತಮ ನಿನ್ನ ದಾ- ಸತ್ವನಿತ್ತು ಸುಶಕ್ತನಮಾಡು ನೀ 3 ನಿನ್ನ ಆಧೀನವೊ ಎಲ್ಲಾ ನಾನು ನಿನ್ನ ದಾಸನು ಶಿರಿನಲ್ಲಾ ಅನು- ದಿನ ಮಾಡುವ ಕಾರ್ಯವೆಲ್ಲ ನೀನು ಚಲನೆದಂದದಿ ಮಾಡ್ವೆನಲ್ಲಾ ಯೆಂನೊ- ಳಾವ ತಪ್ಪಿತವೇನೋ ಇಲ್ಲಾ ನಿನ್ನ ಸಂಕಲ್ಪದಂತಾಗೋದೆಲ್ಲಾ ಆಹಾ ತನುವ ಕೊಟ್ಟವ ನೀನೆ ತನು ಕೊಂಡೊಯ್ವನೂ ನೀನೆ ಹನುಮೇಶವಿಠಲಾ ನಿನ್ನವನಾದ ಮ್ಯಾಲೆನ್ನಾ4
--------------
ಹನುಮೇಶವಿಠಲ
ಪಾಲಿಸು ಶ್ರೀಹರಿಯೆ ಯದುಭೂಮಿಪತಿಯೆ ಪ ಬಾಲಾರ್ಕ ಸಮಮುಖ ಲೋಲ ಮುರಳೀಧರ ಅ.ಪ. ನಂದ ನಂದನ ದಿವ್ಯ ಸುಂದರ ರೂಪನೆ ಬಂಧುರಾಲಕ ವರ ಮಂದಹಾಸನೆ 1 ಗೋಪ ಸುಂದರೀಗಣ ದೀಪವಿರಾಜಿತ ತಾಪಿಂಛ ಪಲ್ಲವ ನೂಪುರ ಶೋಭಿತ2 ಕಾಳೀಯ ಮರ್ದನ ನೀಲಾಂಬುದ ಪ್ರಭ ನಾಳೀಕಾನನ ಚಿತ ಲೋಲಾಕ್ಷಿ ಚಿತ್ತನೆ3 ಭವ ಭಂಗ ಮಾನುಷ ವೇಷ ಶೃಂಗಾರ ಶೋಭಿತ ಭೃಂಗಾಲಕಾರ್ಚಿತ 4 ಧೇನುನಗರ ದೊರೆ ಸಾನುರಾಗದಿ ಪೊರೆ ಗಾನ ವಿನೋದ ಹರೆ ಭಾನುಸನ್ನಿಭ ಶೌರೆ 5
--------------
ಬೇಟೆರಾಯ ದೀಕ್ಷಿತರು
ಪಾಲಿಸೆ ಯೆನ್ನ ಇಂದಿರಾದೇವಿ, ಪಾಲಿಸೆ ಯೆನ್ನಾ ಪ ಶ್ರೀಲೋಲನ ಪದಕೀಲಾಲಜ ತೋರಿ ಅ.ಪ ನಿತ್ಯ ಜಡಪ್ರಕೃತ್ಯಭಿಮಾನಿ ಸತ್ಪ್ರಮಾಣವಾದ ಕೀರ್ತನೆ ನುಡಿಸುತ್ತ1 ಮಂತ್ರಗಳರಿಯೆನು ಮಂದಮತಿಯು ಸ್ವ ತಂತ್ರದವನಲ್ಲ ಸೃಷ್ಟ್ಯಾದ್ಯಷ್ಟ ಕರ್ತೆ2 ಗುಣಪ್ರಕ್ರಿಯೆಗಳ ಅರಿತವುಳ್ಳ ಲಕ್ಷಣವಂತೆ ವಿಜಯವಿಠ್ಠಲನ ನಿಜಾಂಗನೆ 3
--------------
ವಿಜಯದಾಸ
ಪಾಲಿಸೆನಗೀ ಜ್ಞಾನ ಪಾಲಸಾಗರಶಾಯಿ ಶ್ರೀ ಲೋಲ ನೀ ನಿತ್ಯದಿ ಪ. ಶೀಲಗುಣ ನಿನ್ನ ಏನು ಬೇಡುವುದಿಲ್ಲೊ ಕಾಲರೂಪನೆ ನಿನ್ನನು | ಇನ್ನು ಅ.ಪ. ಒಂದು ಅಸ್ವತಂತ್ರ ಒಂದು ಸರ್ವಸ್ವತಂತ್ರ ಒಂದು ಮನೆಯೊಳಗೆ ಇದ್ದು ಒಂದೆರಡು ಲೋಕಕ್ಕೆ ಒಂದೆ ದೈವನು ಎನಿಸಿ ಒಂದೊಂದರಲಿ ಇರುವ ಒಂದು ಅಪೇಕ್ಷಿಸದೆ ಒಂದೆರಡು ಗುಣದಿಂದ ಒಂದೆರಡು ಮಾಳ್ಪ ಜಗವ ಇಂದಿರೇಶನೆ ನಿನ್ನ ಈ ವಿಧದ ವ್ಯಾಪಾರ ಒಂದೊಂದು ಮನಕೆ ತೋರೋ | ಸ್ವಾಮಿ 1 ಎರಡು ಮಾರ್ಗಗಳಿಹವು ಎರಡು ಕರ್ಮಗಳಿಂದ ಎರಡು ವಿಧ ಸಮ ತಿಳಿದರೆ ಎರಡು ರೂಪಗಳನು ಒಂದಾಗಿ ಭಾವಿಸುತ ಎರಡೊಂದು ಜೀವ ತಿಳಿದು ಎರಡು ಫಲ ಅನುಭವಿಸಿ ಎರಡು ಹರಿಗರ್ಪಿಸುತ ಎರಡು ವಿಧ ಕರ್ತನೆಂದು ಎರಡು ಎಪ್ಪತ್ತು ಸಹಸ್ರನಾಡಿಗಳಲ್ಲಿ ಎರಡು ರೂಪದಲಿರುವ ಪೊರೆವ 2 ಮೂರು ಅವಸ್ಥೆಯಲಿ ಮೂರು ತಾಪವ ಸಹಿಸಿ ಮೂರು ಮಾರ್ಗದಲಿ ನಡೆದು ಮೂರೆಂಟು ಇಂದ್ರಿಯವ ಮೂಲರೂಪದಿ ಲಯಸಿ ಮೂರಾರು ವಿಧ ಭಕ್ತಿಯಲಿ ಮೂರೈದು ನುಗ್ಗೊತ್ತಿ ಮೂರು ಮೂರು ಅರಿಯ ಮೂರು ಶುದ್ಧಿಯಲಿ ಗೆದ್ದು ಮೂರಾರು ಎರಡೊಂದು ಖೋಡಿ ಮತಗಳ ಮುರಿಸಿ ಮಾರುತಿಯ ಮತದಿ ನೆಲಸಿ | ತಿಳಿಸಿ 3 ವಿೂನ ಕೂರ್ಮನೆ ವರಹ ಶ್ರೀ ನಾರಸಿಂಹನೆ ದಾನಯಾಚಕ ಭಾರ್ಗವ ವಾನರರಿಗೊಲಿದನೆ ವೇಣುಹಸ್ತರೂಪಿ ಮಾನವಿಲ್ಲದ ಕಲ್ಕಿಯೆ ಶ್ರೀನಿವಾಸನೆ ನಿನ್ನ ನಾನಾವಿಧ ರೂಪಗಳು ನಾನು ವರ್ಣಿಸಲು ಅಳವೆ ಮಾನಾಭಿಮಾನದೊಡೆಯನೆ ಕೃಷ್ಣ ಕೈಪಿಡಿಯೊ ಭಾನುಪ್ರಕಾಶ ಹರಿಯೆ | ಸಿರಿಯೆ 4 ಶಿರದಲ್ಲಿ ಕಿರೀಟ ಫಣೆಯಲ್ಲಿ ತಿಲುಕವು ಮೆರೆವ ಕುಂಡಲದ ಕದಪು ಕಿರುನಗೆಯ ಪಲ್ಗಳು ಕೊರಳಲ್ಲಿ ಹಾರಗಳು ಕರದಲ್ಲಿ ಆಯುಧಗಳು ಸಿರಿ ಭೂಮಿ ಎಡಬಲದಿ ಸುರನದಿಯ ಪೆತ್ತಪಾದ ಸಿರಿರಮಣ ಗೋಪಾಲಕೃಷ್ಣವಿಠ್ಠಲ ಎನಗೆ ಪರಿ ಪರಿಯ ರೂಪ ತೋರೊ ಸ್ವಾಮಿ 5
--------------
ಅಂಬಾಬಾಯಿ
ಪಾಲಿಸೆನ್ನ ಚನ್ನ ಕೇಶವಾ ನಿನ್ನ ಬಾಲನೆಂದೆಣೆಸೋ ಮಾಧವಾ ಪ ಲೋಲ ಲೋಚನ ತಂದೆ ಶೀಲ ನಂಬಿದೆ ಬಂದೆ ಅ.ಪ. ದೂರ್ವಾಪುರ ನೆಲೆವಾಸಿಯೇ ತಂದೆ ಸರ್ವಾಭೀಷ್ಟ ಫಲದಾತನೇ ಪರ್ವಾ ಸಪ್ತದಿ ನಿನ್ನ ಭಜಿಸೇ ಸ್ಮರಿಸುವೆನು 1 ನಂದನಂದನ ಗೋವಿಂದನೇ ತಂದೆ ಬಂಧವ ನೀಗುವ ಶಕ್ತಿಯ ಮಂದರಧರದಯ ತೋರೆಂದು ನೆನೆಯುವೆ 2 ಭಕ್ತರ ಪೊರೆ ನೀ ದಾತನೇ ತಂದೆ ಮುಕ್ತಿ ಸ್ವಾತಂತ್ರ್ಯವ ನೀಡೆಲೋ ಶಕ್ತಿ ಸ್ವರಾಜ್ಯಕ್ಕೆ ಮಾತೃ ಸೇವೆಗೆ 3
--------------
ಕರ್ಕಿ ಕೇಶವದಾಸ
ಪಾಲಿಸೆನ್ನ ಪಂಕಜಾಕ್ಷ ಪತಿತಪಾವನ ನೀಲಮೇಘಶ್ಯಾಮ ರಮಾಲೋಲ ಜಗನ್ಮೋಹನಾ ಪ ಭವವಿದಾರ ಭಯವಿದೂರ ಭಾರ್ಗವೀವರ ಭವ ಸುರೇಶವಂದಿತಾಂಘ್ರಿಯುಗಳ ಶ್ರೀಧರ 1 ನಿನ್ನನೇ ಮರೆಹೊಕ್ಕೆ ನಾನನ್ಯಭಾವದೆ ಪನ್ನಗಾದ್ರಿನಿಲಯ ಸಲಹು ಸಾನುರಾಗದೆ ಪಾಲೆಸೆನ್ನ 2
--------------
ನಂಜನಗೂಡು ತಿರುಮಲಾಂಬಾ
ಪಾಲಿಸೆನ್ನ ಲೋಲಲೋಚನ ಬಾಲಗೋಪಾಲ ಪ ಶೌರಿ ಶ್ರೀವನಮಾಲಿ ಶ್ರೀಲೋಲ ಅ.ಪ ಪಾದ ನಿನ್ನ ಭಾವನ | ಸಂಜೀವನ ಪತಿತರಾ ಪೊರೆವೆ 1 ಸತತ ನಿನ್ನ ಚರಣದಿ ಬೇಡುವೆ ಹಿತದೊಳೆರಗುವೆ ಮಾಂಗಿರೀಶ ಕಲುಷನಾಶ ರಂಗ ಸುಪ್ರಕಾಶ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಪಾಲಿಸೆನ್ನ ಶ್ರೀಲೋಲ ಕೃಪಾಳು ಪ ಬಾಲಕನುಕ್ತಿಯ ಲಾಲಿಸಿ ಕೇಳೀ ಅ.ಪ ಕಾರಾಗಾರ ಶರೀರದಾಯಗಳ ದಾರಾ[ಧಿ]ಪತ್ಯದ ದಾರಿಯನಿ[ತು]ಗಳ1 ಆರುಮಂದಿ ಬಲುಶೂರರು ಖಳರು ಚೋರರು ಚಿತ್ತವ ಹಾರಿಸುತಿಹರು 2 ತನುಸಂಬಂಧದ ಜನರರ್ಥಿಯಲಿ ಕೊನೆವರು ದುರ್ಮೃಗವನು ಪೋಲುತಲಿ 3 ತಾಪತ್ರಯ ಪರಿತಾಪದ ಬೇಗೆ ಈ ಪರಿಮೋಚನ ಶ್ರೀಪತಿ ಹೇಗೆ 4 ಕರುಣದಿ ಶ್ರೀಪುಲಗಿರಿಯೊಳಿರುವನೆ ಶರಣರಪೊರೆಯುವ ವರದ ವಿಠಲನೆ 5
--------------
ವೆಂಕಟವರದಾರ್ಯರು
ಪಾಲಿಸೆನ್ನ ಶ್ರೀಲೋಲ ಕೃಪಾಳೋ ಬಾಲಕನುಕ್ತಿಯ ಲಾಲಿಸಿ ಕೇಳೋ ಪ ಕಾರಾಗಾರ ಶರೀರದಯುಗಳ ದಾರಾಪತ್ಯದ ದಾರಿಯನಿಗಳ 1 ಚಿತ್ತವ ಹಾರಿಸುತಿಹರು 2 ಕೊನೆವರು ದುರ್ಮೃಗವನು ಪೋಲುತಲಿ 3 ತಾಪತ್ರಯ ಪರಿತಾಪದ ಬೇಗೆ | ಈ ಪರಿಮೋಚನ ಶ್ರೀಪತಿ ಹೇಗೆ 4 ಶರಣರ ಪೊರೆಯುವ ವರದವಿಠಲನೆ 5
--------------
ಸರಗೂರು ವೆಂಕಟವರದಾರ್ಯರು
ಪಾಲಿಸೆನ್ನನು ಶ್ರೀ ಲೋಲ ಸದ್ಗುಣ ವಿಶಾಲ ನೀಲ ಪ. ಶ್ರೀರಮಣನೆ ನಿನ್ನ ಚರಣ ಸದ್ಗುಣಗಣ ವಾರಿಧಿಗಣನೆ ನೀನೆಂದು ಸಿರಿದೇವಿಯಂದು ಪಾರವಿಲ್ಲದ ತವ ಚರಿತ್ರೆಯ ಸಾರಗಳನೀಕ್ಷಿಸಲು ನಯನಾಂ- ಪಾದ ಹತಮಾಂಸಾರಕೇಶವ 1 ಶ್ರುತಿ ತತಿಗಳನೈದಸುರನ ಕೊಂದ ದಿತಿಜಗೋಸುಗ ನಗಧರನ ಕೃಪಹಾರ ಹಣನ ದಿತಿಜಹರ ಸುರತತಿಗೆ ರಾಜ್ಯವನತಿ ವಿಲಾಸದೊಳಿತ್ತ ಭಾರ್ಗವ ಬಾಧ್ಯನೆ ಅತುಳಹಯನೆ 2 ಸುರರು ನಿನ್ನಯ ಪಾದ ನಿರ್ಮಲ ರಜೋದ್ಧಾರಕರ ಬಿನ್ನಪವ ಕೇಳ್ ಗಜ ಚರ್ಮ ವಸ್ತ್ರ ಸಮಧ್ವಜಾಸನ ನಿನ್ನ ದಾಸರ ದಾಸರೊ- ಷಣ್ಮುಖಾತ್ಮಜ ಜಯನ ಗಿರಿಗನೆ 3
--------------
ತುಪಾಕಿ ವೆಂಕಟರಮಣಾಚಾರ್ಯ
ಪಾಲಿಸೆನ್ನನು ಶ್ರೀಲಕುಮಿವರ ಭೂಲೋಲಕಾರ್ಪರ ದೊಳು ಪಿಪ್ಪಲತರು ಸುಮಂದಿರ ಪ ಬಾಲತನದಿ ಜನಕನ ಬಹು ಕೀಳುನುಡಿಗಳನು ಸಹಿಸಿದ ಬಾಲಗೊಲಿದ ನರಹರಿಯೆ ಕೃಪಾಳೊ ನಿಮ್ಮಯ ಕಾಲಿಗೆರಗುವೆ ಅ.ಪ ಸಾಲಿಗ್ರಾಮದಿ ನೆಲಸಿ ತರುವರ ಮೂಲದಿ ಸೇವಿಪರ ಪಾಲಿಸಲೋಸುಗ ನಿರಂತರ ಕಾಲಕಾಲಗಳಲ್ಲಿ ಬಿಡದೆ ವಾಲಗ ಕೈಕೊಳ್ಳುತ ಮೆರೆವ ಕಾಳಿಯಮದನನೆ ತವಪದ ಕೀಲಾಜದಲಿ ಭಕುತಿಯ 1 ಮಂದಜಾಸನಾದಿ ಸುರಗಣ ವಂದಿತ ಸುಚರಣ ದ್ವಂದ್ವ ಭಜಕ ವೃಂದಪೋಷಣ ಸಿಂಧುಶಯನವಂದಿಪೆ ಭವ ಬಂಧ ಬಿಡಿಸ್ಯಾನಂದಗರಿವ ಮಂದಿರದಲಿ ತಂದುತೋರಿಸಿ2 ನಾರದಾದಿ ಮುನಿ ಸುವರ್ಣಿತ ಉದಾರ ಚರಿತ ನಾರಾಯಣ ಮುನಿಸು ಪೂಜಿತ ಧಾರುಣಿಯೊಳು ಘೋರ ಕೃಷ್ಣಾತೀರ ಸಂಸ್ಥಿತ ಸೇರಿದ ಭಕುತರಿಗೆ ತ್ರಿದಶ ಭೂರುಹ ಸಿರಿನರಸಿಂಹನೆ 3
--------------
ಕಾರ್ಪರ ನರಹರಿದಾಸರು
ಪಾಲಿಸೆನ್ನನೂ ರಾಮ ಪಂಥವ್ಯಾತಕೋ ಪ ಕಾಲವೈರಿ ಕಪಟನಾಟಕ | ಆಲಿಸೆನ್ನ ಬಿನ್ನಪವಂ ಚಾಲನೆ ಶ್ರೀಲೋಲನೇ ನೀಂ ಅ.ಪ ರಕ್ಷಕಾಮಣಿ ಸಾಧುಜನ ರಕ್ಷಾಮಣಿ ಅಕ್ಷಯ ಸುಜನರಾಶ್ರಿತÀ ನಿನ್ನ ಭಿಕ್ಷವನಾಂಬೇಡುವೆನೈ ಪಕ್ಷಿವಾಹನ ಜಗದಧ್ಯಕ್ಷನೇ ಸೀತಾರಾಮ 1 ಪಂಡಿತಾಮಣಿ ಜ್ಞಾನಕುಂಡಲಿನಗರೀಶ ನೀ ನಂಡಜ ವಾಹನನಹುದೊ ಪಂಡರಿಪುರನಾಯಕ ಚಾ ಮುಂಡಿ ವರದಾಯಕ ನೀಂ [ಶ್ರೀರಾಮ] 2 ಶಾಶ್ವತ ಜನಭಾಷಾ ಭಾಸ್ಕರಕೋಟಿ ತೇಜಾ ಈಶ್ವರ ಮತ್‍ಗುರು ತುಲಶೀರಾಮಾ 3
--------------
ಚನ್ನಪಟ್ಟಣದ ಅಹೋಬಲದಾಸರು
ಪಾಲಿಸೆನ್ನಾ ದೀನ ದಯಾಳಾಪ ಪಾಲಿಸೆನ್ನ ಸಂವಿಶಾಲ ನಯನಾ| ಶ್ರೀಲತಾಂಗಿಯ ಲೋಲ ಮುಕುಂದಾ 1 ಅಂಬುರುಹ ಪಾಣ್ಯಾಂಬುಜ ಭವನುತ| ಕುಂಭಿನಿ ಭಯಹರ ಅಂಬುಧಿವಾಸ2 ನಂದ ನಂದನಾನಂದ ಸ್ವರೂಪಾ| ನಂದಿವಾಹನಾ ವಂದ್ಯನೆ ಕೃಷ್ಣಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು