ಒಟ್ಟು 386 ಕಡೆಗಳಲ್ಲಿ , 78 ದಾಸರು , 348 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹನುಮಂತ ನೀ ಬಲು ಜಯವಂತನಯ್ಯ |ಅನುಮಾನವಿಲ್ಲ ಆನಂದತೀರ್ಥರಾಯ ಪರಾಮಸೇವಕನಾಗಿ ರಾವಣನ ಪುರವ ನಿರ್ಧೂಮವ ಮಾಡಿದೆ ನಿಮಿಷದೊಳಗೆ ||ಭೂಮಿಯ ಪುತ್ರಿಗೆ ಮುದ್ರೆಯುಂಗುರವಿತ್ತು |ಕ್ಷೇಮ ಕುಶಲವ ಶ್ರೀರಾಮ ಪಾದಕರ್ಪಿಸಿದೆ 1ಕೃಷ್ಣಾವತಾರದಿ ಭೀಮನಾಗಿ ಬಂದುದುಷ್ಟ ದೈತ್ಯರನೆಲ್ಲ ಸಂಹರಿಸಿದೆ |ದೃಷ್ಟಿಹೀನ ಧೃತರಾಷ್ಟ್ರನ ವಂಶವನುಕಷ್ಟವಿಲ್ಲದೆ ಕೊಂದು ಶ್ರೀಕೃಷ್ಣಪಾದಕರ್ಪಿಸಿದೆ 2ಪತಿತ ಸಂಕರ ಹುಟ್ಟಿ ಮತವೆಲ್ಲ ಕೆಡಿಸಲುಮತಿ ಹೀನರಾದ ಸಜ್ಜನರಿಗೆಲ್ಲ ||ಅತಿ ಬೇಗದಲಿ ಮಧ್ವಯತಿರೂಪಧರಿಸಿ ಸದ್ಗತಿಪಾಲಿಸಿದೆಪುರಂದರವಿಠಲನ ದಾಸ3
--------------
ಪುರಂದರದಾಸರು
ಹೊಲೆಯ ಹೊಲತಿ ಇವರವರಲ್ಲಹೊಲಗೇರಿಯೊಳು ಹೊಲೆಯ ಹೊಲತಿಯಿಲ್ಲ ಪ.ಸತಿಯಳ ವಶನಾಗಿಜನನಿ - ಜನಕರಿಗೆಅತಿ ನಿಷ್ಟುರ ನುಡಿವವ ಹೊಲೆಯಸುತರ ಪಡೆದು ವಾರ್ಧಿಕ್ಯ ಮದವೇರಿಪತಿದ್ಟೇಷ ಮಾಡುವಳೆ ಹೊಲತಿ 1ಗುರುಗಳಲ್ಲಿ ವಿದ್ಯೆಗಳನು ಕಲಿತುಹಿರಿಯರ ಬಳಲಿಸುವವ ಹೊಲೆಯಪರಪುರಷಗೊಲಿದು ತನ್ನ ಪುರುಷನವಿರಸವ ಮಾಡುವ ಕುಲಕೇಡಿತೆ ಹೊಲತಿ 2ಒಡೆಯನನ್ನವನುಂಡು ಅಡಿಗಡಿಗೆ ಬಾಯ್ಬಿಡದೆ ತರ್ಕಿಸುವ ಜಡ ಹೊಲೆಯಬಡತನ ಬಂದರೆ ಪುರುಷನ ರಚ್ಚೆಗೆಬಿಡದೆ ತಹಳೆ ಶುದ್ಧ ಹೊಲತಿ 3ನೂರೊಂದು ಕುಲ ಕುಂಬಿಪಾಕಕಟ್ಟುವಪರನಾರಿಯಲ್ಲಿ ವೀರ್ಯವಿಟ್ಟವ ಹೊಲೆಯಆರೊಳು ಕಲಹಾಪಸ್ಮಾರಿ ದುರ್ಮುಖಿಯು - ಕಠೋರಕುಮತಿ ಶುದ್ಧ ಹೊಲತಿ 4ಅಜನುತ ಪುರಂದರವಿಠಲನ ದಾಸರಭಜನೆಯ ದಾರಿಯ ಬಿಟ್ಟವ ಹೊಲೆಯನಿಜವರ್ಯರಾದ ಸಜ್ಜನರ ಪಾದಪದ್ಮವಭಜಿಸದಿರುವಳೆ ಶುದ್ಧ ಹೊಲತಿ 5
--------------
ಪುರಂದರದಾಸರು
ಹ್ಯಾಂಗೆ ಶೋಭಿಸುವ ನೋಡೆ ಯಾದವ ಕೃಷ್ಣಹ್ಯಾಂಗೆ ಶೋಭಿಸುವ ನೋಡೆ ಪಮಂಗಳ ಮಹಿಮ ಶ್ರೀರಂಗ ತನ್ನವರಿಗೆ ಅ.ಪಘಲುಘಲು ಘಲುರೆನ್ನುತ ಕಾಲ್ಗಡಗ ನೂ-ಪುರಗೆಜ್ಜೆ ಸರಪಣಿಯುಸರಿಗೆಳೆಯರ ಕೂಡಿ ಮುರಳಿಯ ಧರಿಸುತಹರುಷದಿಂದಲಿ ಸಪ್ತಸ್ವರಗಳ ನುಡಿಸುತ್ತ 1ಉಟ್ಟ ಪೀತಾಂಬರವು ನಡುವಿಗೆ ಜರದಪಟ್ಟೆಯ ಚಲ್ಲಣವುಗಟ್ಟಿ ಕಂಕಣ ಕೈಗಳಿಟ್ಟು ಕಟಿಯ ಮೇಲೆಭಕ್ತವತ್ಸಲ ಸ್ವಾಮಿ ಸೃಷ್ಟಿಪಾಲಕ ಕೃಷ್ಣ 2ಎಳೆ ತುಳಸಿಯ ಮಾಲೆಯು ಕಂಠದಿ ಮೆರೆವಪದಕಕೌಸ್ತುಭಮಣಿಯುನಳಿನಲೋಚನೆಯ ಉರದಲ್ಲಿ ಧರಿಸಿಕೊಂಡುಚಲುವ ಚನ್ನಿಗನಾಗಿ ಹೊಳೆಯುವ ದೇವನು 3ಕೋಟಿ ಸೂರ್ಯರ ಸೋಲಿಪ ಮುಖಕಾಂತಿಯಸಾಟಿಯಾರುಂಟವಗೆನೀಟಾಗಿ ಕರ್ನಕುಂಡಲ ಕಿರೀಟವು ಹೊಳೆಯೆಲಲಾಟದಿ ಕಸ್ತೂರಿ ತಿಲುಕವು ಹೊಳೆಯುತ್ತ 4ಕಂಗಳ ಕುಡಿನೋಟದಿ ಸಜ್ಜನರ ಪಾ-ಪಂಗಳ ಪರಿಹರಿಸಿಮಂಗಳ ಮಹಿಮ ಶ್ರೀರಂಗ ಮೂರುತಿ ಸಾಧುಸಂಗ ವಂದಿತಸಿರಿಕಮಲನಾಭ ವಿಠ್ಠಲ5
--------------
ನಿಡಗುರುಕಿ ಜೀವೂಬಾಯಿ