ಒಟ್ಟು 19658 ಕಡೆಗಳಲ್ಲಿ , 137 ದಾಸರು , 8696 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೀರಜಾಕ್ಷ ನಿರ್ದಯವ್ಯಾಕೊ ಕರುಣದಿ ಎನ್ನಾ ಪ ಒಡಲಿಗನ್ನಾ ತೊಡಲು ಅರಿವೆ ಕೊಡುವವರನು ನಾ ಕಾಣೆ ಹರಿಯೇ ಬಡತನ ಕಂಗೆಡಿಸಿತೋ ಕಡೆಗ್ಹಾಯಿಸಯ್ಯ ತ್ವರದಿ ಗುಣಮಣಿಯೇ 1 ಖೂಳ ಜನರ ಆಳಾಗಿ ನಾ ಹಾಳು ಒಡಲನ್ನು ಹೊರೆಯಲಾರೇ ಕೂಳಿಗೋಸುಗ ಬಾಳಾಯ್ತೀಪರಿ ತಾಳಲಾರೆ ಕಾಯೋ ಮುರಾರೇ2 ನೀ ಕೈಬಿಡಬ್ಯಾಡೋ ಶ್ರೀ ಹನುಮೇಶವಿಠಲನೆ ಎನ್ನಾ ಇಷ್ಟದಂದರಿ ಥಟ್ಟನೆ ಮಾಡೋ 3
--------------
ಹನುಮೇಶವಿಠಲ
ನೀರಜಾಕ್ಷ ರಾಮ ಲೋಕಾಭಿರಾಮ ಪ ನೀರದನಿಭಶ್ಯಾಮ ನಿತ್ಯಮಂಗಳ ನಾಮ ಅ.ಪ. ನಿನ್ನ ಬಿಟ್ಟು ನಾನು ಅನಾಥನು ಸನ್ನುತ ಗುಣರನ್ನ ಸತ್ಕೀರ್ತಿ ಸಂಪನ್ನ 1 ದೇಶಕೊಡೆಯ ನೀನು ದಾಸ ನಿನಗೆ ನಾನು ಕೌಸಲ್ಯವರಪುತ್ರ ಕೋಮಲ ಶುಭಗಾತ್ರÀ 2 ನಿನ್ನ ಸನ್ನಿಧಿವಾಸ ಪುಣ್ಯಫಲವಿಶೇಷ ಘನ್ನ ಕರಿಗಿರೀಶ ಗಂಭೀರ ಗುಣಭೂಷ 3
--------------
ವರಾವಾಣಿರಾಮರಾಯದಾಸರು
ನೀರಜಾಕ್ಷನಿನ್ನೂರಿಗೆ ಪೋಗುವ ದಾರಿಯ ತೋರಯ್ಯ ಪ ತೊಳಲುವೆ ದಾರಿಯ ಕಾಣದೆ ಅ.ಪ. ಜನ್ಮಾಂತರಕೃತ ಕರ್ಮಗಳೆಂಬುವ ಹೆಮ್ಮರಗಳು ಬೆಳೆದು ಧರ್ಮನಿರೋಧವಿ ಕರ್ಮದ ಬಳ್ಳಿಯು ಬಿಂಮನೆ ಬಿಗಿವಡೆದು ಲಮ್ಮಗೊಡವುಹರಿ 1 ಮೀರಿಬರಲುಘನ ಚೋರರು ಕಾದಿಹರಾರುಮಂದಿ ಮುಳಿದು ಸಾರಿ ಬಾಯಾರಿಸುತಿರ್ಪವು 2 ದಾಂಟುವೊಡರಿದು ಧನಕನಕಾದಿಗಳೆನಿಪ ಪಿಶಾಚಗಳನವರತವು ಬಿಡವು ಪೋಲುತ ನಮ್ಮನು ಬಾಧಿಸುತಿರುವರು3 ಕ್ಷುದ್ರವಿಷಯಗಳು ಛಿದ್ರವಹುಡುಕುವ ವಧ್ರುಗದೇಹದೊಳು? ಕದ್ರುಸುತರವೋಲುಪದ್ರವಗೈವವಭದ್ರದ ಭೀತಿಗಳೂ ಜರೆಯೆಂಬುದ್ರಿಕ್ತಾಂಗನೆ4 ನರಿಗಳ ಪರಿಯಲಿ ನರಳುವರೆಲ್ಲರು ನರಕಗಳನುಭವಿಸಿ ವರದ ವಿಠಲನಿಜ ಚರಣವೆ ನಂಬಿದೆ 5
--------------
ಸರಗೂರು ವೆಂಕಟವರದಾರ್ಯರು
ನೀರಧಿಶಯನ ಮುಕುಂದ ಹರಿನಾರಾಯಣ ಗೋವಿಂದ ಪ ಪ್ರಚಲಿತ ಲಯ ಜಲ ವಿಹರಣ ಶಾಶ್ವತ ಅಚಲೋದ್ಧರಣ ಸಮರ್ಥ ಸದಾಶ್ರಿತ ಪಂಚಾನನ ಪ್ರಖ್ಯಾತ 1 ಮಂದಾಕಿನಿ ಪಿತ ದೇವ ತ್ರಿವಿಕ್ರಮ ನಂದಿತ ಗೋಕುಲ ವೃಂದ ಪರಾಕ್ರಮ ಸಿಂಧುನಿಬಂಧನ ರಾಮಾನಂದದ ಸುಂದರ ಶ್ಯಾಮ 2 ಬುದ್ಧ ಸುವೇಶ ಶ್ರೀಕರ ಕಲ್ಕಿ ಪಾಹಿ ನಿರ್ದೋಷ ಕಾಕೋದರ ಗಿರಿವಾಸ ಜಯ ಶ್ರೀಕಾಂತ ಶ್ರೀ ಶ್ರೀನಿವಾಸ 3
--------------
ಲಕ್ಷ್ಮೀನಾರಯಣರಾಯರು
ನೀರನಾ ಕರತಾರೆ ನಾರಿಮಣಿಯೇ ಪ ಸೂರೆ ಹೋಗ್ತಾನೆ ಜೀವಾ ಆರಿಗುಸುರಲಿ ಬೇಗಾ ಅ.ಪ ಬರುವೆನೆಂದು ಪೋಗಿ ಬಾರನೇತಕೆ ಸಖಾ ಕರತಾರೆ ಕಾಮಿಸಿ ಸುರತಾವನಾಡುವಾ 1 ಮಾರನಯ್ಯನಾಣೆ ತೀರಿತೆನ್ನ ಪ್ರೀತಿ ದೂರಕ್ಕೋದನೂ ಗಂಡಾ ಬಾರದೇಕೆ ಪೋದನೆ 2
--------------
ಚನ್ನಪಟ್ಟಣದ ಅಹೋಬಲದಾಸರು
ನೀರಿನೊಳು ಮುಳುಗುತಿರೆ ತೋರದಲಿ ಪೋಗುವರೆ ಕರ ಪಿಡಿವರೈ ತೋರು ಶೌರೇ ವಾರಿಜಾನಾಭ ಭಯ ತೋರುವರೆ ಕರುಣಾಳು ಬಾರದಿರುವಂಥ ಅಪರಾಧವೇನೆಲೊ ಹರೀ ಪ. ಪರಿ ಮನಸಿನೊಳಗೊಂದು ಪರಿ ವನಜನಯನನೆ ಭಯವ ತೋರಿ ತೋರೀ ಪರಿ ಏನೋ ಬಿನಗುದೈವರ ಗಂಡ ಪರಿಹರಿಸು ಗಂಡಾ1 ಕರಿಯ ನೀರೊಳು ಕಾಯ್ದೆ ಪೊರೆದೆ ನೀರೊಳು ಮನುವ ಧರಣಿ ಪ್ರಹ್ಲಾದರನು ಜಲದಿ ಸಲಹೀ ಬಿರುದು ಪೊತ್ತವ ಎನ್ನ ಪರಿಯನರಿಯೆಯೆ ದೇವ ಪೊರೆವರಿನ್ನಾರು ಹೇ ಕರುಣಾಳು ಶರಣೂ 2 ಮುಳುಗಿಹೆನು ಸಂಸಾರ ಗಣಿಸಲಾಗದ ಕರ್ಮ ಕರವ ಪಿಡಿದೂ ಧಣಿಸು ನಿನ ದಾಸತ್ವ ಧರೆಯೆ ಮೇಲ್ ಡಂಗುರದೀ ಘಣಿಶಾಯಿ ಗೋಪಾಲಕೃಷ್ಣವಿಠಲ ಕೈಪಿಡಿದು 3
--------------
ಅಂಬಾಬಾಯಿ
ನೀರೆ ದ್ವಾರಕೆಯ ಸೊಬಗು ಬ್ರಹ್ಮರಾಯ ಬಟ್ಟಾನು ಬೆರಗು ನೀರೆಪ. ಚದುರೆ ಬಾಜಾರದಿ ಕುದುರೆ ಸಾಲುಗಳೆಷ್ಟುಎದುರಿಗೆ ಬಾಹೋ ರಥಗಳೆಷ್ಟುಎದುರಿಗೆ ಬಾಹೋ ರಥಗಳೆಷ್ಟು ಅಂಬಾರಿಸದರಿನ ಆನೆ ಸೊಬಗೆಷ್ಟು1 ಹಿಂಡು ಗೆಳತಿಯರೆಲ್ಲ ತಂಡ ತಂಡ ನೆರೆದುದುಂಡು ಮಲ್ಲಿಗೆಯ ತುರುಬಿನದುಂಡು ಮಲ್ಲಿಗೆ ತುರುಬಿನ ಕುವರಿಯರು ಚಂಡನಾಡುವÀರು ಕಡೆಯಿಲ್ಲ 2 ನೀಲಮಾಣಿಕ ಬಿಗಿದ ಮೇಲಾದ ಮನೆಗಳುಮ್ಯಾಲೆ ಕನ್ನಡಿಯ ನಿಲ್ಲಿಸ್ಯಾವಮ್ಯಾಲೆ ಕನ್ನಡಿಯ ನಿಲ್ಲಿಸಿದ ಮನೆಯೊಳುಸಾಲು ದೀವಟಿಗೆ ಸೊಬಗೆಷ್ಟು 3 ಬಟ್ಟ ಮುತ್ತಿನ ತೋರಣ ಕಟ್ಟಿದ ಮನೆಯೊಳುಅಟ್ಟಳ ಮ್ಯಾಲೆ ಧ್ವಜಗಳುಅಟ್ಟಳ ಮ್ಯಾಲೆ ಧ್ವಜಗಳು ಗಗನಕ್ಕೆಮುಟ್ಟಿವೆಂಬಂತೆ ನಿಲ್ಲಿಸ್ಯಾವೆ4 ದೊರೆಗಳ ಮನೆಯಿಂದ ಬರೆದ ಚಿತ್ರದÀ ಬೊಂಬೆಗಳುಕರೆದಾವ ಕೈ ಬೀಸುತೆಕೈ ಬೀಸಿ ನಮ್ಮ ಎದುರಿಗೆಬರತಾವೆಂಬಂತೆ ನಿಲ್ಲಿಸ್ಯಾವ 5 ಏಳಂತಸ್ತಿನ ಮಾಳಿಗೆ ಮ್ಯಾಲಿನ ಗೊಂಬೆಗಳು ಬಾಳೆ ಎಲೆಯಂತೆ ಬಳಕುತ ಬಾಳೆ ಎಲೆಯಂತೆ ಬಳಕುತಕಿವಿಮಾತು ಹೇಳ್ಯಾವೆಂಬಂತೆ ನಿಲ್ಲಿಸ್ಯಾವೆ6 ಮದನ ಜನಕನು ಸುಳಿಯೋನೆಒಮ್ಮೊಮ್ಮೆ ಮುದದಿ ಭಕ್ತರನ ಸಲುಹಲಿ 7
--------------
ಗಲಗಲಿಅವ್ವನವರು
ನೀರೆಯರು ಸಾರುತ್ತ ಮುದದಿ ನೀರಜದಾರತಿ ಬೆಳಗಿದರು ಪ ಸೇರಿ ಸೀತಾ ನಾರೀಮಣಿಯಿಂ ರಾರಾಜಿಪ ಶ್ರೀರಾಮಗೆ ಅ.ಪ. ಕಂದರ್ಪಸತಿ ಸುಂದರಾಂಗಿಗೆ ಇಂದುವಂಶ ನಂದಿನಿ ಸೀತೆಗೆ 1 ಕರಾಂಬಕಿ ಲೋಕ ವಂದ್ಯೆಗೆ ಮಾತೃ ಮಾತೆಗೆ ಸೀತೆಗೆ 2 ಚಿತ್ತ ಮಿತ್ರೆ ಮೀನನೇತ್ರೆಗೆ ಧೇನುನಗರ ನಾಥೆಗೆ ಸೀತೆಗೆ 3
--------------
ಬೇಟೆರಾಯ ದೀಕ್ಷಿತರು
ನೀರೇ ತೋರೇ ಪಯೋನಿಧಿ ವಾಸನಾ| ನೀರ ಜಾಸನಾನಂತ ಸರ್ವೇಶನಾ ಪ ಹಸ್ತ ವರದನ ಹರಿಮಧುಸೂದನ| ಹಸ್ತಿ ವಾಹಜನ ಸೂತಾದನಾ 1 ಕರಿಯೇರಿದಾತನ ಶರಕುರುವಾತನ| ಕರಿಹರ ಸಖ ಸನಾತನಾ 2 ಅನಂತ ಮಹಿಮ ಕೇಶವ ಮುಕುಂದನ| ಅನಂತ ಶಯನ ಗೋವಿಂದನಾ 3 ಮಕರ ಧ್ವಜ ಪಿತನ ಪರಮಾನಂದನ| ಮಕರ ಧ್ವಜ ಪಿತ ವಂದ್ಯನಾ4 ತಂದೆ ಮಹಿಪತಿ ನಂದನ ಜೀವನ| ಹೊಂದಿದವರ ಕಾವಾ ದೇವನಾ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೀರೇ ದÉೂೀರೆ ದೋರೆ ರಂಗನಾ| ಕರೆ ತಾರೇ ಮುನಿಜನ ಸಂಗನಾ ಪ ಶರಣ ರಕ್ಷಕ ನೆಂಬೋ ಬಿರುದವ ಸಾರಲು | ಮೊರೆಯಾ ಹೊಕ್ಕೆನು ಕೇಳಿ ಬಂದುನಾ1 ಜ್ಞಾನ ಭಕುತಿಗಳ ಏನೇನರಿಯದ | ಮಾನಿನಿ ನೋಡುವರೇ ಅವಗುಣಾ 2 ಗುರುಮಹಿಪತಿ ಸುತ ಪ್ರಭು ಕರುಣಾಕರ | ನೆನದನು ಮೊರೆಕೇಳಿ ಇಂದಿನಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೀರೇ ನೀಕರೆ ತಾರೇ ಪ್ರಾಣದೊಲ್ಲಭನಾ|ಜಾಣ ಸುಜ್ಷಾನೇ ಪ ಹೃದಯ ಮಂದಿರದೊಳು ಅರುಹುದೀಪವಹಚ್ಚಿ| ಹಾಡಿ ನೋಡಲಿಹೆ ಮೈದೋರನ್ಯಾಕ|ಮೈದೋರ ನ್ಯಾಕ 1 ಧ್ಯಾಸಮಂಚದಿ ಭಕುತಿ ಹಾಸಿಕೆಯು ಸು| ವಾಸನೆಪುಣ್ಯಕ ವಲಿದು ಬಾರನೇ|ವಲಿದು ಬಾರನೇ 2 ಸಕಲ ನುಕೂಲಿರಲು ಕ್ರೀಡೆಗೆ ಇನಿಯನು ಪುಕಟ ದೊಲಿಯಭಾಗ್ಯ ಮಂದಳು ಕಾಣೇ|ಮಂದಳು ಕಾಣೇ 3 ಅರಿದವಳು ಎಂದು ಅರಿತು ಕೈಯ್ಯವಿಡಿದು| ಮರಳೆನ್ನ ಅಂತ ನೊಡುವರೇನೇ ನೋಡುವರೇನೇ 4 ಧರೆಯೊಳು ಭೋಗಪದಾರ್ಥಿವು ಸರ್ಪದ| ಸರಸದ ಓಲಾಯಿತು ಅಗಲಿರಲಾರೇ|ಅಗಲಿರಲಾರೇ 5 ಬಂದರೊಂದಿನ ನಿಶೆದಲಿ ಕಳೆಗೂಡದೇ| ಒಂದು ಜಾವ ವ್ಯರ್ಥಿಹೋಯಿತಲ್ಲಮ್ಮಾ|ಹೋಯಿತಲ್ಲಮ್ಮಾ 6 ಗುರುವರ ಮಹಿಪತಿ ನಂದನ ಪ್ರಭುವಿನ| ಚರಣವಗಾಣದೇ ಜೀವಿಸಲಾರೆ|ಜೀವಿಸಲಾರೆ 7
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೀಲ ಕನಕಚೇಲ ಲೀಲಯಾ ಪ ಪುಲಿಶೈಲರಚಿತಲೀಲಾ ರಮಾಲೋಲ ಪಾಲಯಾ ಅ.ಪ ಶರದಿಂದುವದನ ಕುಂದರದನ ನಂದನಂದನಾ ಅರವಿಂದನಯನ ಸಿಂಧುಶಯನ ವಂದಿ ಚಂದನಾ 1 ಯದುರಾಜ ಕಲ್ಪಭೂಜದೇವರಾಜಪೂಜಿತ ಕರಿರಾಜರಾಜರಾಜ ಸಮವಿರಾಜ ರಾಜಿತ 2 ಘನದುರಿತ ಪಟುಲಹರಣ ಚಟುಲಚರಣಪಾಟಲಾ ಕರಿವರದ ವಿಮಲಚರಿತ ವಿಪುಲವರದವಿಠಲ 3
--------------
ವೆಂಕಟವರದಾರ್ಯರು
ನೀಲ ಸುಂದರ ಲೀಲವಿಗ್ರಹನೆ ಪ ಭಂಜನ ಬಾರೈ ಉರುಟಣೆಗೆ ಅ.ಪ. ಸಾರಸ ರೇಖರಂಜಿತ ಪಾದಪಂಕಜಕೆ ನವ್ಯಮಾದ ಸುಗಂಧ ಚೂರ್ಣವ ನಿಂದು ಲೇಪಿಸುವೆ 1 ಫಾಲ ಫಾಲ ದೇಶದಿ ನಾಂ ಇಂದು ತಿಲಕವ ತಿದ್ದಿ ನಿಲವೆನು ಪ್ರಾಣ ನಾಯಕನೆ 2 ಸಾಧು ರಕ್ಷಣ ದಕ್ಷ ರಾಕ್ಷಸ ಶಿಕ್ಷ ಭುಜಯುಗಕೆ ಶ್ರೀಧರಿತ್ರೀಫಾಲ ಲೋಲನೆ ಗಂಧವ ಲೇಪಿಸುವೆ 3 ಕಂಬುಕಂಠ ಶ್ರೀಕಂಠ ಮಿತ್ರನೆ ನಿನ್ನಯ ಕಂಠಕೆ ನಾಂ ಅಂಬುಜೋಪಮ ಹಸ್ತದಿ ಗಂಧವ ನಿಂದು ಲೇಪಿಸುವೆ 4 ಚಕೋರ ಚಂದ್ರನೆ ಮಾಲೆಯನರ್ಪಿಸುವೆ ಧೇನುನಗರ ಶ್ರೀರಾಮಚಂದ್ರನೆ ವೀಟಿಯ ಸ್ವೀಕರಿಸೈ 5
--------------
ಬೇಟೆರಾಯ ದೀಕ್ಷಿತರು
ನೀಲ ಗಗನ ನಿಭ ನಿರ್ಮಲಗಾತ್ರನೆ ಪ ಬಾಲಶಶಾಂಕನ ಪೋಲ್ವ ಸ್ವಾಮಿ ಬಾಲಶಶಾಂಕನ ಪೋಲ್ವ ನೀಲಕುಂತಳ ಪರಿಶೋಭಿತ ಫಾಲಕೆ ಕುಂಕುಮವ ಹಚ್ಚುವೆನು 1 ನಳಿನ ನಯನ ಕೋಮಲ ಕಮಲಾನನ ಚಲುವ ಕರಂಗಳ ತೋರೋ ಸ್ವಾಮಿ ನಳಿನವ ಪೋಲುವ ಚಲುವ ಕರಕೆ ನಾ ನರಿಸಿನ ಹಚ್ಚುವೆನೀಗ ಸ್ವಾಮಿ 2 ಅಂಬುಜನಾಭನೆ ಅಂಬುಧಿ ಗಂಭೀರ ಶಂಬರಾರಿ ಶತತೇಜ ಸ್ವಾಮಿ ಕಂಬುಕಂಧರ ತೋರು ಸಂಭ್ರಮದಲಿ ನಾ ಗಂಧವ ಹಚ್ಚುವೆನೀಗ ಸ್ವಾಮಿ 3 ಸುಮಶರ ಜನಕನೆ ಸುವಶರ ವೈರಿಯ ಕಾರ್ಮುಕ ಭಂಜಕ ಸ್ವಾಮಿ ಸಮ ವಿರಹಿತ ನಿನ್ನ ಕೊರಳಿಗ್ಹಾಕುವೆನೀಗ ಕುಸುಮ ಮಾಲೆಯ ನಾನು ಸ್ವಾಮಿ 4 ವಾರಿಧಿ ಚಂದ್ರಮನೆ ಧೀರ ವೀರ ದಿತಿಜಾರಿದೇವ ಶ್ರೀರಘುವೀರ ಶ್ರೀ ಕರಿಗಿರೀಶನೇ ನಿಮ ಗಾರತಿ ಎತ್ತುವೆ ಸ್ವಾಮಿ 5
--------------
ವರಾವಾಣಿರಾಮರಾಯದಾಸರು
ನೀಲ ಚೇಲ ಲೀಲಯಾ ಪುಲಿಶೈಲರಚಿತಲೀಲರಮಾಲೋಲ ಪಾಲಯಾ ಪ ಶರದಿಂದುವದನ-ಕುಂದರದನ ನಂದ ನಂದನಾ ಅರವಿಂದ ನಯನ ಸಿಂಧುಶಯನ ವಂದಿ ಚಂದನಾ1 ಯದುರಾಜಕಲ್ಪಭೂಜದೇವ ರಾಜಪೂಜಿತ ಕರಿರಾಜರಾಜ ರಾಜ ಸಮ ವಿರಾಜ ರಾಜಿತ 2 ಘನದುರಿತ ಪಟುಲಹರಣ ಚಟುಲಚರಣ ಪಾಟಲಾ ಕರಿವರದ ವಿಮಲ ಚರಿತ ವಿಪುಲ ವರದ ವಿಠಲ 3
--------------
ಸರಗೂರು ವೆಂಕಟವರದಾರ್ಯರು