ಒಟ್ಟು 6439 ಕಡೆಗಳಲ್ಲಿ , 132 ದಾಸರು , 3726 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶರಣು ಆತ್ಮಕ ಸರ್ವತೋಮುಖ ಶರಣು ಸರ್ವಲೀಲಾತ್ಮಕಶರಣುಗುರುಚಿದಾನಂದ ವಿಗ್ರಹ ಶರಣು ಸುರಮುನಿ ಪಾಲಕಪರೂಪು ಹರ ನಿರ್ಲೇಪಘನಚಿದ್ರೂಪರೂಪವಿರೂಪಕತಾಪನಾಶಕ ಪೋಷ ಭಕ್ತಕೃತಪರಾಧಿ ಪವಿತ್ರಕದೀಪ ಹೃದಯ ಸಭಾಸ ಉನ್ಮನ ದೀಪ್ಯಮಾನ ಮಹಾತ್ಮಕಭೂಪ ಸುರಮುನಿ ಸಿದ್ಧರಕ್ಷಕ ಭುವನದಧಿಪತಿ ರಕ್ಷಕ1ಪ್ರಣವಪುರುಷ ಪರೇಶಪಾವನ ಪ್ರಣತಸುಜನಪರಾವರ ಮರಣರಹಿತ ನಿಜ ನಿಶ್ಚಲಾತ್ಮಕ ಗುಪ್ತ ಮೂರುತಿ ಗುರುವರಎಣಿಸಬಾರದನಂತ ಲೋಕಕೆ ಏಕನಾಥದಿವಾಕರಅಣಿಮ ಮಹಿಮಾಷ್ಟಾಂಗ ಯೋಗಗಳಳವಿಗೊಡದ ಪ್ರಭಾಕರ2ಎರಡು ಮೂರಾರೆಂಬವೆಲ್ಲವ ಎಣಿಸೆ ಏಳೈದೆಂಬವಪರಿವಿಡಿಯ ನಾಲ್ಕೆಂಟು ನವದಶ ಪರಿಪರಿಯ ವಿಕಾರವಹರಿಹರ ಬ್ರಹ್ಮಮರೇಂದ್ರರು ಹರಿವರಿಯದ ಸ್ವಭಾವವಬೆರಸದಿಹ ಚಿದಾನಂದ ಮೂರ್ತಿಯ ಭೇದವಿರಹಿತ ಚಿತ್ಪ್ರಭಾ3
--------------
ಚಿದಾನಂದ ಅವಧೂತರು
ಶರಣು ಭಾರತೀ ತಾಯೆ |ಕರವಬಿಡದಲೆ ಕಾಯೆ ||ಮರುತದೇವನ ರಮಣಿ | ಸುರ ನದಿಯ ಭಗಿನಿ ಪಪ್ರದ್ಯುಮ್ನ ದೇವಸುತೆ | ರುದ್ರಾದಿ ಸುರ ವಿನುತೆ ||ಭದ್ರ ವಿಗ್ರಹೆ ದಯಾ ಸ | ಮುದ್ರೆ ಕುಲಿಶೆ ||ಅದ್ರಿಯೋಪಮ ದೋಷ | ಕಿದ್ದ ದುರ್ಮತಿಕ್ಲೇಶ||ವೊದ್ದು ನಿನ್ನವನೆನ್ನು | ಬುದ್ಧಿ ಕೊಡು ಇನ್ನೂ 1ನೀರಜಾಂಬಕೆ ಯನಗೆ | ತೋರು ಸಾಧನ ಕುನಗೆ |ಜಾರಿಸು ಭಕುತಿಯನ್ನು | ತೋರು ಕರುಣಾ ||ವಾರಿಧಿಹರಿಯಪಾದ| ಆರಾಧಿಸಲುಮೋದ|ವಾರವಾರಕೆ ಈಯೇ |ವಾರಣಗಮನೆಯೇ 2ಪ್ರಾಣೇಶ ವಿಠಲನ | ಧ್ಯಾನದೊಳಗಿರಿಸು ಮನ |ವಾಣೀ ಪದವೈದುವಳೇ |ಮಾನನಿನ್ನದೆಲೆ ||ಹೀನ ವಿಷಯಗಳೊಲ್ಲೆ | ನೀನೇ ಸ್ವಾಂತದಿ ನಿಲ್ಲೆ |ಕ್ಷೋಣಿಯೊಳಗತಿ ಮಾನೀ | ಜ್ಞಾನೀ ಅಹಿವೇಣೀ 3
--------------
ಪ್ರಾಣೇಶದಾಸರು
ಶರಣು ಮುನಿಪಮಣಿಯೆ ಸುಮತೀಂದ್ರಕರುಣಾಮೃತದ ಖಣಿಯೆಶರಣೆಂದವರಿಗೆ ವರಚಿಂತಾಮಣಿಯೆಧರೆಯ ಮೇಲಿನೊಬ್ಬ ದೊರೆ ನಿನಗೆಣೆಯೆ ಪ.ಸಂತತ ಸೇವಕ ಸಂತರಿಗೊಲಿದೀಗಸಂತತಿ ಸಂಪದವಿತ್ತೆ ಬೇಗಶಾಂತ ಶುಭಗುಣ ವಸಂತನೆಂಬೊ ಕೀರ್ತಿ ವಿಶ್ರಾಂತಿಯಮಿತ ದಿಗಂತಕೆ ವಾರ್ತಿ 1ತಾಳ ತಮ್ಮಟೆಕಂಬುಕಾಳೆ ಬಿರುದುಬುಧಮೇಳದಿಂ ಶಿಷ್ಯ ಜನಾಲಯಕೆ ಸಾಲದೀವಿಗೆಯೊಳು ಮಾಲಿಕೆ ಗ್ರಹಿಸಿ ಆಂದೋಳಿಕಿಳಿದು ಬಂದು ಪಾಲಿಪೆಅವರ2ಶ್ರೀಗುರು ಪ್ರಸನ್ನವೆಂಕಟಾಚಲವಾಸ ರಾಮನಪಾದನಿಶಿದಿನಾರ್ಚಿಸುವೆ ಸಂತೋಷಸಾಂದ್ರಋಷಿಯೋಗೀಂದ್ರರಕರಬಿಸಜಜ ಯೋಗೀಂದ್ರಸುಶರಧಿ ಸಂಭವಶಶಿಸುಮತೀಂದ್ರ3
--------------
ಪ್ರಸನ್ನವೆಂಕಟದಾಸರು
ಶರಣು ಶರಣು ಶರಣ್ಯವಂದಿತ ಶಂಖಚಕ್ರಗದಾಧರ |ಶರಣು ಸರ್ವೇಶ್ವರ ಅಹೋಬಲ ಶರಣ ಸಲಹೋ ನರಹರಿ ಪ.ಶೀಲದಲಿ ಶಿಶು ನಿನ್ನ ನೆನೆಯಲುಕಾಲಲೋತ್ತುತ ಖಳರನು |ಲೀಲೆಯಿಂದಲಿ ಚಿಟಿಲು ಭುಗಿಭುಗಿ -ಲೆನುತ ಉಕ್ಕಿನ ಕಂಬದಿ ||ಖೂಳದೈತ್ಯನ ತೋಳಿನಿಂದಲಿ ಸೀಳಿಹೊಟ್ಟೆಯ ಕರುಳನು ||ಮಾಲೆಯನು ಕೊರಳೊಳಗೆ ಧರಿಸಿದಜ್ವಾಲನರಸಿಂಹಮೂರ್ತಿಗೆ 1ಖಳಖಳಾ ಖಳನೆಂದು ಕೂಗಲು ಕೋಟಿ ಸಿಡಿಲಿನ ರಭಸದಿ ||ಜಲಧಿ ಗುಳಗುಳನೆದ್ದು ಉಕ್ಕಲು ಜ್ವಲಿತ ಕುಲಗಿರಿ ಉರುಳಲು ||ನೆಲನು ಬಳಬಳನೆಂದು ಬಿರಿಯಲು ಕೆಳಗೆ ದಿಗ್ಗಜ ನಡುಗಲು ||ಥಳ ಥಳಾ ಥಳ ಹೊಳೆವ ಮಿಂಚಿನೊಲ್ಹೊಳೆವ ನರಸಿಂಹ ಮೂರ್ತಿಗೆ 2ಕೋರೆ ಕೆಂಜೆಡೆ ಕಣ್ಣು ಕಿವಿ ತೆರೆ -ಬಾಯಿ ಮೂಗಿನ ಶ್ವಾಸದಿ||ಮೇರುಗಿರಿ ಮಿಗಿಮಿಗಿಲು ಮಿಕ್ಕುವ ತೋರ ಕಿಡಿಗಳ ಸೂಸುತ ||ಸಾರಿಸಾರಿಗೆ ಹೃದಯರಕುತವ ಸೂರೆ ಸುರಿಸುರಿದೆರಗುತಘೋರರೂಪಗಳಿಂದ ಮೆರೆಯುವ ಧೀರ ನರಹರಿಮೂರ್ತಿಗೆ3ಹರನು ವಾರಿಜಭವನು ಕರಗಳ ಮುಗಿದು ಜಯಜಯವೆನುತಿರೆ ||ತರಳ ಪ್ರಹ್ಲಾದನಿಗೆ ತಮ್ಮಯ ಶರಿರಬಾಧೆಯ ಪೇಳಲು ||ಕರುಣಿ ಎನ್ನನು ಕರುಣಿಸೆನ್ನಲು ತ್ವರದಲಭಯವನೀಡುತ ||ಸಿರಿಬರಲು ತೊಡೆಯಲ್ಲಿ ಧರಿಸಿದ ಶಾಂತ ನರಹರಿಮೂರ್ತಿಗೆ4ವರವ ಬೇಡಿ ದನಿರುವ ತಂದೆಯ ಪರಿಯನೆಲ್ಲವ ಬಣ್ಣಿಸಿ ||ನಿರುತದಲಿ ನಿನ್ನೆರಡು ತೊಡೆಯಲಿ ಶರೀರವಿರಲೆಂದೆನುತಲಿ ||ಸುರರು ಪುಷ್ಪದ ವೃಷ್ಟಿಗರೆಯಲು ಸರಸಿಜಾಕ್ಷನು ಶಾಂತದಿ ||ಸಿರಿಯ ಸುಖವನು ಮರೆದಹೋಬಲವರದ ಪುರಂದರವಿಠಲಗೆ 5
--------------
ಪುರಂದರದಾಸರು
ಶರಣು ಶರಣೂ ಪ.ಮಹಾದೇವರಾ ಗರ್ಭದಲಿ ಉದ್ಭವಿಸಿದಿಯೊ ನೀನುಸಾಧುಮಾತೆಯ ಶಾಪವನ್ನು ಕೈಗೊಂಡುಆದಿಪೂಜೆಗೆ ಅಭಿಮಾನಿದೇವತೆಯಾದಿಮಾಧವನಮ್ಮ ಹಯವದನನ್ನ ಪ್ರಿಯ1ಹಿಮಗಿರಿಗೆ ಮಗಳಾಗಿ ಜನಿಸಿ ತಪವನು ಗೈದುಕಮಲಸಂಭವಸುತನ ಒಲಿಸಬೇಕೆಂದುರಮಣಿ ರಾಮಮಂತ್ರ್ರ ದಿನಸಹಸ್ರವು ಜಪಿಸೆಕಮಲಾಕ್ಷನೆಮ್ಮ ಹಯವದನನ್ನ ಪ್ರಿಯೆ 2ಮಡದಿ ಹೋದಾಗ್ರಹಕೆ ಜಡೆಯ ಕಿತ್ತಪ್ಪಳಿಸಿಕಡುಘೋರ ತಪಗೈಯೆ ಮನ್ಮಥನು ಬರಲುಕಿಡಿಗಣ್ಣಿನಲಿ ಅವನ ಭಸ್ಮವನು ಮಾಡಿದಿಕಡಲೊಡೆಯ ನಮ್ಮ ಹಯವದನನ್ನ ಪ್ರಿಯ 3ಮತ್ಸ್ಯದೇಶಕೆ ಪೋಗಿ ಮನದ ಚಿಂತೆಯಲಿರಲುತುಚ್ಛರಕ್ಕಸನು ನಿಮ್ಮನು ಪಿಡಿಯ ಬರಲುಚಿತ್ತದೊಲ್ಲಭಗ್ಹೇಳಿ ಕೊಚ್ಚಿಸಿದಿ ಅವನ ಶಿರಅಚ್ಯುತನಮ್ಮ ಹಯವದನನ್ನ ಪ್ರಿಯೆ4ಕೇಸರಿಯ ಗರ್ಭದಲಿ ಉದ್ಭವಿಸಿದಿಯೊ ನೀನುತ್ರೇತೆಯಲಿ ರಾಮರ ಸೇವೆಯನು ಮಾಡಿಭೂತಳದೊಳು ಭೀಮ ಕಡೆಗೆ ಯತಿಯಾಗಿ ನೀಶ್ರೀಪತಿ ಹಯವದನ ದೂತ ಪ್ರಖ್ಯಾತ 5ಈರೇಳು ಲೋಕದ ಜನರ ನಾಲಗೆಯಲ್ಲಿಬೀಜವನು ಬಿತ್ತಿ ಅನ್ನವ ಕೊಡುವ ತಾಯೆವಾರಿಜಸಂಭವನ ಹಿರಿಯ ಪಟ್ಟದ ರಾಣಿನೀರಜಾಕ್ಷನಮ್ಮ ಹಯವದನನ್ನ ಪ್ರಿಯೆ6ಜನನಿಹುಟ್ಟಿದ ನಾಳದಲ್ಲಿ ಜನಿಸಿದಿ ನೀನುಜನರ ಸೃಷ್ಟಿ ಸ್ಥಿತಿಗೆ ಕಾರಣನೆಂದುಅನಿಮಿಷರೆಲ್ಲರೂ ಸ್ತುತಿಸಿ ಕೊಂಡಾಡಲುವನಜಾಕ್ಷ ನಮ್ಮ ಹಯವದನನ್ನ ಪ್ರಿಯ 7ಪದ್ಮದಲ್ಲುದ್ಭವಿಸಿ ರಾಮರ ಕೈಹಿಡಿದುಪದ್ಮಾಕ್ಷನ ರಥಕ್ಕೆ ಕೈ ನೀಡಿ ಬಂದೆಪದ್ಮಾವತಿ ಎಂದು ಖ್ಯಾತಿ ಮೂರ್ಲೋಕದೊಳುಪದ್ಮಾಕ್ಷ ನಮ್ಮ ಹಯವದನನ್ನ ಪ್ರಿಯೆ 8ಅನಂತ ನಾಟಕಾನಂತ ಸೂತ್ರಧಾರಿಅನಂತ ಚರಿತ ನಿತ್ಯಾನಂದಭರಿತಅನಂತಾಸನ ಶ್ವೇತದ್ವೀಪ ವೈಕುಂಠಅನಂತಗುಣಭರಿತ ಹಯವದನ ಚರಿತ 9ಶರಣುಮತ್ಸ್ಯಕೂರ್ಮವರಾಹನಾರಸಿಂಹಶರಣು ವಾಮನಭಾರ್ಗವರಾಮಚಂದ್ರಶರಣು ಕೃಷ್ಣ ಬೌದ್ಧ ಕಲ್ಕ್ಯಸ್ವರೂಪನೆಶರಣು ಹಯವದನನ್ನ ಚರಣಗಳ ನುತಿಪೆ 10
--------------
ವಾದಿರಾಜ
ಶರಣು ಶುಭಾಮಲಕಾಯ ಋಜುಗಣಾಭರಣಾನಂದ ಮುನಿರಾಯಹರಿಗುಣಗಣವಾರಿಧಿಮಗ್ನನೆ ಜಯಪರಮಪದಜÕನೆ ಜಯತು ಸದಾ ಜಯ ಪ.ಶುಕ್ಲರುಧಿರನಿರ್ಲಿಪ್ತ ಪರತತ್ವಕ್ಲುಪ್ತನೆ ತ್ರಿಜಗವ್ಯಾಪ್ತಅಕ್ಲೇಶಾನ್ವಿತ ಮಾಯಾಮನಹರಅಜÕಜನೋದ್ಧರ ಜಯತು ಸದಾ ಜಯ 1ಶಲ್ಯರಾಜನ ಭಟಹಾರಿ ಮಹಾವಾತ್ಸಲ್ಯಾಂಕಿತ ಸುಖಕಾರಿಬಾಲ್ಯತನದಿ ಜಗದ್ಗುರುವೆನಿಸಿದೆ ಕೈವಲ್ಯದಾಯಕ ಪ್ರಭು ಜಯತು ಸದಾ ಜಯ 2ಸೂತ್ರಾರ್ಥದ ಧೀ ಮಾತ್ರದೇಹಿ ವಿಧಾತೃ ಜನಕ ಪದಪ್ರೇಮಪಾತ್ರಪೌತ್ರ ಪ್ರಸನ್ನವೆಂಕಟಪತಿ ಪೂರ್ಣವೇತೃ ನಂಬಿದೆ ಜಯತು ಸದಾ ಜಯ 3
--------------
ಪ್ರಸನ್ನವೆಂಕಟದಾಸರು
ಶರಣು ಸಕಲ ಪ್ರಾಣನಾಥಸರಸಿಜಭವ ಪದವಿಭೋಕ್ತಮೂರವತಾರಿಮುಖ್ಯಪ್ರಾಣಹರಿಪರಾಯಣ ತೇ ನಮೊ ಪ.ತುತ್ತಿಸಿನನ ಬಿಸುಟು ಜಗದಕರ್ತರಘು ಪುಂಗವನ ಪದದಿಭಕ್ತಿ ಬಲಿದು ಇತರ ವಿಷಯಚಿತ್ತನಾಗದ ಸುಗುಣಧೀಹತ್ತು ಹೆಡಕಿನವನ ವನವಕಿತ್ತು ಸಭೆಯನುರುಹಿ ಭಯವಬಿತ್ತಿಜನನಿಕುಶಲ ಒಡೆಯಗಿತ್ತ ಹನುಮ ತೇ ನಮೊ 1ಮುಪ್ಪಿನವಳ ಮಗನನರಿದು ಕೃಷ್ಣಾರ್ಪಣವನೆ ಮಾಡಿನೃಪರಕಪ್ಪಹೊರಿಸಿ ತಂದು ಮಖಕೆಒಪ್ಪಿಸಿದ ಅಗ್ರಜಾತಗೆಭೂಪನಣ್ಣನ ಅಣುಗರನ್ನುಅಪ್ಪಳಿಸಿ ತಮಸಕೆ ಕಳುಹಿತಪ್ಪದೆಂದೂ ರಂಗ ಸೇವೆಯೊಳಿಪ್ಪ ಶ್ರೀಭೀಮ ತೇ ನಮೊ 2ವಿಷ್ಣುಭಟರ ಮತಿಗೆ ಕಲಿಯುವೇಷ್ಟಿಸಿರಲು ಬ್ರಹ್ಮಸೂತ್ರಸ್ಪಷ್ಟ ತಿಳುಹಿ ತಾತ್ವಿಕ ಜನಶ್ರೇಷ್ಠಿ ನೆರಹಿ ಮಿಥ್ಯರಭ್ರಷ್ಟವಚನ ನೀಕರಿಸಿ ನಿಜೇಷ್ಟಮತರ ಹೊರೆದೆ ಗುರುವರಿಷ್ಟ ಮಧ್ವಪ್ರಸನ್ನವೆಂಕಟಕೃಷ್ಣ ಮತ್ಯ ತೇ ನಮೊ 3
--------------
ಪ್ರಸನ್ನವೆಂಕಟದಾಸರು
ಶರಣು ಹರಿಯಶರಣಗ್ರೇಸರನೆ ಹನುಮ ಭೀಮ ಮಧ್ವಚಿನ್ನ ತಪುತಕಾಯ ನೊಸಲಲಿನ್ನು ಊಧ್ರ್ವಪುಂಡ್ರ ತುಲಸಿಚಿನ್ನದೊಂಟಿ ಚೌಕಳಿ ಮೋಹನ್ನಸರ ಕಿರೀಟಧಾರಿಮಧ್ಯಗೇಹ್ಯ ನೋಂಪಿ ಅಭಿವೃದ್ಧಿ ಆದದ್ದು ಕಂಡುಮೂರು ಅವತಾರದಲಿ ಮೂರು ಮೂರು ಭಕುತಿಯಿಂದ
--------------
ಗೋಪಾಲದಾಸರು
ಶರಣುಹರಿಆನತ ಜನಾಶ್ರಯದುರಿತಕರಿಕಂಠೀರವಶರಣುಸಿರಿಭೂವರಾಹದೇವನೆಶರಣು ವರಯಜ್ಞಾತ್ಮಕ ಪ.ಅನಿಮಿಷರುಸನಕಾದಿಮುನಿಗಳುಅನುದಿನದಿ ಸ್ತುತಿಗೈಯಲುದನುಜಹೇಮಾಂಬಕನ ಕೃತ್ಯಕವನಿ ಬಳಲಿ ಮೊರೆಯಿಡುತಿರೆಘನಕೃಪಾಂಬುಧಿ ಕ್ಷೀರವಾರಿಧಿಮನೆಯಲರಿದತಿ ವೇಗದಿವನಜಭವ ನಾಸಾಪುಟದಿ ನೀಜನಿಸಿದಗಣಿತ ಮಹಿಮನೆ 1ಲೀಲೆಯಿಂದಣುವಾಗಿ ಅಮರರಜಾಲಕಚ್ಚರಿಯಾಗಲುಮೇಲೆ ಗಿರಿಯಂತಾದೆ ಹರಿಯೆ ತಮಾಲ ವರ್ಣಾಂಕಿತ ಮುಖಬಾಲಚಂದ್ರಸಮಾನ ಕೋಡನೆ ವಿಶಾಲ ವಿಮಲ ಚರಿತ್ರನೆಬಾಲ ಸುಬ್ರಹ್ಮಣ್ಯ ದ್ವಿಜವರಶೀಲಪಾಲಿತ ಚರಣನೆ 2ವ್ಯಗ್ರ ಪ್ರಳಯಾಂಬುಗಿಳಿದುಘನಘರ್ಘರರ್ಘರ ಧ್ವನಿಗಳಿಂಶೀಘ್ರ ವೈರಿಯ ಸದೆದು ಕೋಡಾಗ್ರದಲಿಮಹಿನೆಗಹಿದೆಸ್ವರ್ಗಜನರಿಂದಮಿತ ಸ್ತುತಿಯನವಗ್ರಹಿಸಿ ವರಕರುಣದಿಉಗ್ರತೇಜ ಪ್ರಸನ್ವೆಂಕಟಗಗ್ರನಿಲಯ ನಮೊ ಹರೆ 3
--------------
ಪ್ರಸನ್ನವೆಂಕಟದಾಸರು
ಶಾರದಾಂಬೆಯೆ ನಾರಿ ಲಕುಮೀಸಾರಸಾಕ್ಷಿ ಮಹೇಶ್ವರಿಘೋರಮಹಿಷಿನಿಶುಂಭ ಮರ್ದಿನಿಧೀರ ಚಂಡಮುಂಡಾರ್ದನಿ ಜಯತು ಜಯತೂ ಪಜ್ವಾಲಿನೀ ಅಕ್ಷಾರ ಮಾಲಿನೀನೀಲಕುಂತಳೆ ಭಾರ್ಗವೀಶೂಲಿನೀ ಹರಿಲೋಲೆ ನೀಗುಣಶೀಲೆ ಗಾಯನ ರಾಣಿ ಜಯತು ಜಯತೂ 1ವಾರಿಜಾಲಯೆ ವೀಣಾಪಾಣಿಯೇಮಾರಹರನ ಅರ್ಧಾಂಗಿಯೇಕ್ಷೀರಸಾಗರಕನ್ಯೆ ಗಿರಿಸುತೆಕೀರವಾಣಿ ಸರಸ್ವತೀ ಜಯತು ಜಯತೂ 2ರಮೆಯೆ ರಕ್ಷಿಸು ಉಮೆಯೆಪಾಲಿಸುಕಮಲಸಂಭವನರಸಿಯೆಅಮಿತ ಮಂಗಲೆ ಅಮರ ದೈವವೆಕಮಲಮುಖಿ ವಾಗ್ದೇವಿಯೆ ಜಯತು ಜಯತೂ 3ಕರವಮುಗಿವೆ ಸ್ಮರಿಸಿ ನಿನ್ನನುಶಿರವ ಚಾಚುವೆ ಚರಣಕೆಕರುಣದಲಿ ಗೋವಿಂದದಾಸನಪರಸಿ ರಕ್ಷಿಸಬೇಹುದು ಜಯತು ಜಯತೂ 4
--------------
ಗೋವಿಂದದಾಸ
ಶಾರದೆ ಸರ್ವ ವಿಶಾರದೆ ಶ್ರೀ ಪ.ಋಜುಗಣಸ್ಥೆ ಪಂಕಜಭರಮಣಿತ್ರಿಜಗಜ್ಜನನಿ ಸುಖವಾರಿಧೆ 1ವಾಗಭಿಮಾನಿ ವಾಣಿ ಫಣಿವೇಣಿಯೋಗಿನಿ ಜ್ಞಾನಸೌಭಾಗ್ಯದೆ 2ಪ್ರಿಯ ಲಕ್ಷ್ಮೀನಾರಾಯಣಕಿಂಕರಿಶ್ರೇಯಸ್ಕರಿ ಸದ್ಭೂರಿದೆ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಶಿರಿರಮಣ ದಯದಿಂದ ಮಂತ್ರಾಘ್ರ್ಯ ಕೊಡುವ ಬಗೆ |ಪರಮೇಷ್ಠಿಗೊಲಿದು ಪೇಳಿದನು ಇಂತೂ ಪಅಷ್ಟಾಕ್ಷರದಿ ಮಂತ್ರಾಘ್ರ್ಯ ಸಾಲಗ್ರಾಮ |ವಿಟ್ಟು ಸದ್ ಭಕ್ತಿಯಲಿ ಶಂಖದಿಂದಾ ||ಕೊಟ್ಟವಗೆ ಸಂತುಷ್ಟನಾಗಿ ಎನ್ನಯ ಸದನದೋ- |ಳಿಟ್ಟು ಸಂತೈಸುವೆನು ಬ್ರಹ್ಮ ಕೇಳೂ 1ಸತ್ಯಭಾಮಾದಿ ಮಿಕ್ಕಾದ ಮಂತ್ರಾಘ್ರ್ಯವನು |ಮತ್ಪಾದ ಜಲದಿಂದ ಪಾತ್ರಿಯಲ್ಲೀ ||ಹಸ್ತದಿಂ ಕೊಡಬೇಕು ಎನ್ನ ಪ್ರೀತಿ ಎಲೊ ಇದು |ಸತ್ಯಲೋಕಾಧಿಪನೆ ಕೇಳು ಮುದದೀ 2ಎನ್ನ ಮಂತ್ರಾಘ್ರ್ಯ ಹಸ್ತದಲಿ ಪಾತ್ರಿಯೊಳೀಯೆ |ಅನ್ಯಾಯವೆಷ್ಟೆಂದು ಪೇಳಲೀಗಾ ||ವನ್ನಜಾಸನ ಎನಗರಕ್ತವೆರದಂತಹದೊ |ಮುನ್ನವರ ಕ್ಲೇಶಕ್ಕೆಎಣಿಕೆಇಲ್ಲಾ 3ಅದರಿಂದ ತಿಳಿದು ಸಾಲಗ್ರಾಮವಿಟ್ಟು ಶಂ- |ಖದಲಿ ಕೊಡಬೇಕು ಎನ್ನಘ್ರ್ನಗಳನೂ ||ವಿಧಿಕಾಷ್ಟಗತವಹ್ನಿಮಥಿಸೆ ತೋರ್ವಂತೆ ಸ- |ರ್ವದ ತೋರ್ವೆ ನಾನು ಸಾಲಗ್ರಾಮದೀ 4ಶ್ರೀ ನಾರಿ ಪ್ರಮುಖ ಮಂತ್ರಾಘ್ರ್ಯ ಶಂಖದಲಿ ಕೊಡೆ |ನಾನೊಪ್ಪೆನವರ ಭಂಗವ ಬಡಿಸುವೇ ||ವಾಣೀಶ ತಿಳಿಯಂದು ಸ್ಮಿತ ವದನದಿಂದ ಶ್ರೀ |ಪ್ರಾಣೇಶ ವಿಠಲ ನಿರೂಪಿಸಿದನೂ 5
--------------
ಪ್ರಾಣೇಶದಾಸರು
ಶಿವನೀ ಹ್ಯಾಗಲ್ಲ ಮನುಜಶಿವನೀಹ್ಯಾಗಲ್ಲಶಿವನೇ ಜೀವನು ಬ್ರಹ್ಮಾಂಡಪಿಂಡಾಂಡಪಶಿವಜೀವನು ತಿಳಿ ತಾನೊಬ್ಬಕಣ್ಣೇ ಸೂರ್ಯನು ಕಿವಿಯೇ ದಿಕ್ಕುಚೆನ್ನಾದ ಪ್ರಾಣವೆ ತಾವಶ್ವಿನಿ1ಜಿಹ್ವೆಯೇ ವರುಣತ್ವ ತ್ಪಕ್ಕುತಾವಾಯುವುಗುಹ್ಯವೇ ವಿಧಾತೃ ಉಪಸ್ಥವೇ ಮೃತ್ಯು2ವಾಕ್ಕುತಾನಗ್ನಿಪಾದಉಪೇಂದ್ರನುಚೊಕ್ಕೂಟದಿಂತಿಳಿ ಪಾಣಿಯೆ ಇಂದ್ರನು3ಮನವೆ ಚಂದ್ರನು ಬುದ್ಧಿಯೆ ಬ್ರಹ್ಮನುಘನಚಿತ್ತವು ತಾನದು ಕ್ಷೇತ್ರಜÕ4ಅಹಂಕಾರ ರುದ್ರನು ಜ್ಞಾತೃವೇ ಈಶ್ವರಶಂಕರ ಚಿದಾನಂದನೀ ಪರಮಾತ್ಮನು5
--------------
ಚಿದಾನಂದ ಅವಧೂತರು
ಶುಭನಾಮ ಶೋಭಿತಧಾಮಶ್ರೀ ಭೂಪ ಸಾರಸನಾಭ ವಿಭೋ ವಿಭೋ ಪ.ಅರ್ಭಕಪಾಲಕ ದರ್ಭಶಯನವಿಶ್ವಗರ್ಭ ವಿದಾರಿತ ದುರ್ಭಾಗ್ಯ ದನುಜ 1ದÀÀಂಡಿತ ರಕ್ಷ ಕೋದಂಡಮಂಡಿತಕರದÀಂಡಕಹರ ಕೋಟಿ ಚಂಡಕರಾಭಾ 2ಮರ್ದಿತದುಷ್ಟ ವಿವರ್ಧಿತ ಶಿಷ್ಟ ಕಪರ್ದಿ ವಿರಿಂಚಾಂತಧ್ರ್ಯಾನಚರಣ3ಅಂಜನಾತ್ಮಜ ಕೃತಾಂಜಲಿ ಪುಟಸೇವ್ಯಮಂಜುಳ ಸೂಕ್ತ ಪ್ರಭಂಜಿತಕಲುಷ4ಭದ್ರ ಚರಿತ್ರ ಲಸದ್ರತ್ನ ಭೂಷಣಚಿದ್ರೂಪ ಪ್ರಸನ್ವೆಂಕಟಾದ್ರೀಶಪಾಹಿ5
--------------
ಪ್ರಸನ್ನವೆಂಕಟದಾಸರು
ಶೇಷಾಚಲನಾಯಕ ಸಲಹಯ್ಯಾಶೇಷದುರಿತ ದೂರಕ ಪ.ಮಕರಾಲಯಸದನಮಾಧವಮಕರಕುಂಡಲಕರಣಮಕರಕೇತನತಾತಮಾಕಾಂತವಿಲಸಿತಮಕುಟಕೌಸ್ತುಭಭೂಷಿತ ಮುಕುಂದ1ಸ್ವಾಮಿಪುಷ್ಕರಿಣೀವಾಸ ಮುಕುಂದಸಾಮಗಾಯನ ವಿಲಾಸಸೋಮದ್ಯುಮಣಿನಯನಾಬ್ಜಕೊದರ್ವದಳಶ್ಯಾಮಸಿರಿಭೂಲೋಲ ಮುಕುಂದ2ಸನ್ಮಾರ್ಗವ ತೋರಿಸೊ ಸಂತರಸನ್ನಿದಲ್ಲಿರಿಸೊಶೂನ್ಯಭಾಗ್ಯವ ನೋಡಿ ಸಲಹಯ್ಯ ತಂದೆ ಪ್ರಸನ್ನವೆಂಕಟನಾಯಕ ಮುಕುಂದ 3
--------------
ಪ್ರಸನ್ನವೆಂಕಟದಾಸರು