ಒಟ್ಟು 15952 ಕಡೆಗಳಲ್ಲಿ , 137 ದಾಸರು , 7176 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬೆಳಗಾಯಿತೇಳಿರಯ್ಯಾ ಜನರೆ ಪ ಒಳಹೊರಗೆ ಅಂಧಕಾರವು ವ್ಯಾಪಿಸಿರೆ ರಾತ್ರಿ ಲಲನೆಯರ ತೆಕ್ಕೆಯಲಿ ನಿದ್ರಾಭರದಿ ಕಾಲ ತಳಮಳದೆ ತಮ್ಮ ಸ್ಥಳಗಳನು ಬಿಟ್ಟು ತಾವ್ ಕಲಕಲಧ್ವನಿಯಿಂದ ದೆಸೆದೆಸೆಗೆ ಪೋಗುತವೆ ಮಲಗಿರುವುದುಚಿತವಲ್ಲ ಜನರೆ 1 ಮರೆವೆಯನು ಬಿಟ್ಟು ಕಣ್ದೆರದು ಕೈಯುಜ್ಜಿ ಶ್ರೀ- ಹರಿಯ ಸಂಸ್ಮರಿಸಿ ಗುರುಹಿರಿಯರಡಿಗಳಿಗೆರಗಿ ದೊರೆಭಾಗ್ಯವಂತಗೋಸತಿಯರಿಗೆ ನಮಿಸಿ ದರ್ಪಣ ನೋಡಿನಿತ್ಯ ಕೃತ್ಯ ಹರುಷದಲಿ ನಿಮ್ಮ ನಿಮ್ಮನುಕೂಲದಂತೆ ಆ- ಸುಖಂಗಳ ಪಡಿಯಿರೈ 2 ವ್ಯರ್ಥಕಾಲಕ್ಷೇಪ ಮಾಡದಿರಿಯಿದರಿಂದ- ನರ್ಥ ಬರದಂತೆ ಯೋಚಿಸಿ ಈಗ ನಾವೇ ಕೃ- ಜನ್ಮವು ದುರ್ಲಭ ತೀರ್ಥಪಾದಗೆ ಸಮರ್ಪಣೆಗೈಯ್ಯೆಮನದಿಷ್ಟ ಸಜ್ಜನರು ಸಾಕ್ಷಿ 3 ನೆರೆಹೊರೆಯ ನೋಡುತಾಭರಣ ವಸ್ತ್ರಗಳು ಬಹು ದೊರೆತ ಮಟ್ಟಿಗೆ ಭೋಗ ಭಾಗ್ಯಗಳನನುಭವಿಸಿ ಪರಮಧರ್ಮವ ಘಳಿಸಿರೈ 4
--------------
ಗುರುರಾಮವಿಠಲ
ಬೆಳಗಿ ಆರತಿಯನೀಗ ಭಾಗ್ಯದಂಬಗೆ ಮುಂದೆಸುಳಿದು ಆರತಿಯನೆತ್ತಿ ಶೂರೆ ಅಂಬಗೆ ಪ ಮುತ್ತಿನೋಲೆ ಮೂಗುತಿಯ ಧರಿಸಿದಂಬಗೆಕತ್ತಿಯನ್ನು ಹಿಡಿದಿರುವ ಶೂರೆ ಅಂಬಗೆ 1 ಪದಕ ಕುಂಡಲಧಾರಿ ಪೂರ್ಣೆ ಅಂಬಗೆಬೆದರದಲೆ ಶತ್ರುಗಳನು ಕೊಂದ ಅಂಬಗೆ2 ಶರಣರ ದ್ವಾರ ಕಾಯುತಲಿಹ ವೀರೆ ಅಂಬಗೆಶರಧಿ ಕರುಣಿ ಚಿದಾನಂದ ಬಗಳಾಮುಖಿ ಅಂಬಗೆ 3
--------------
ಚಿದಾನಂದ ಅವಧೂತರು
ಬೆಳಗಿನ ಝಾವದಿ ಬಾರೊ ಹರಿಯೆ, ನಿನ್ನ ಪ ಚರಣ ತೊಳೆದು ಜಲಪಾನ ಮಾಡುವೆನೊಅ.ಪ. ನೀರೊಳು ನಿನ್ನನು ಕಾಂಬೆ ಗಿರಿ ಭಾರಪೊತ್ತರೆ ನಗುವಳೊ ನಿನ್ನ ರಂಭೆ ಮೋರೆ ತಗ್ಗಿಸಿದರೇನೆಂಬೆ ಅಲ್ಲಿ ನಾರಸಿಂಹನಾಗಿ ಪೂಜೆಯ ಗೊಂಬೆ 1 ಬಲಿಯದಾನವ ಬೇಡಿದ್ದೆಲ್ಲ ನೀ ಛಲದಿ ಕ್ಷತ್ರಿಯರ ಸಂಹಾರ ಮಾಡೆದ್ಯಲ್ಲ ಛಲವಂತ ನಿನಗೆದುರಿಲ್ಲ ನೀ ನೊಲಿದ್ಹನುಮನಿಗೆ ಅಜಪದವನಿತ್ಯೆಲ್ಲ 2 ರುಕ್ಮಿಣೀಶಗೆ ಸಮರಿಲ್ಲ ಕೃಷ್ಣ ಬಿಮ್ಮನೆ ತ್ರಿಪುರ ಸತಿಯರಪ್ಪಿದ್ಯೆಲ್ಲ ಬ್ರಹ್ಮಾದಿಗಳು ಸಮರಲ್ಲ ಬಲು ಹಮ್ಮಿಲಿ ಹಯವೇರಿ ವಿಜಯವಿಠ್ಠಲ 3
--------------
ವಿಜಯದಾಸ
ಬೆಳಗಿನೊಳು ಬೆಳಗಾಯಿತು ನೋಡಿ ಥಳಥಳಿಸುತ ಮನದೊಳಗೆ ಝಳಿಸುತಿಹದು ಜಗದೊಳಗೆ ಧ್ರುವ ಬೆಳಗಾಯಿತು ಎನ್ನೊಳಗೆ ಸುಳಿವು ದೋರಿದ ಸದ್ಗುರು ಕೃಪೆಯ ಹೇಳಲಿನ್ನೇನದರ ಖೂನ ತಿಳಿದೇನೆಂದರೆ ಎಳೆಯು ಸಿಲುಕದು ಬಲು ಸೂಕ್ಷ್ಮ ಸುಜ್ಞಾನ ಹೇಳಿ ಕಿತ್ಯಾಡುವ ಮರುಳರಿಗೆ ತಿಳಿಯದಿದರನುಸಂಧಾನ ಕಳೆಯದ ಕಲ್ಪನೆ ಅನುಮಾನಿಗಳಿಗೆ ತಿಳಿಯುವುದೆ ಸದ್ಗತಿ ಸಾಧನ 1 ಬೆಳಗಿ ಬೆಳಗು ಬೆರೆದವನೆ ತಾ ಕುಲಕೋಟಿಗಳು ಧನ್ಯ ಮಳೆಮಿಂಚಿನ ಕಳೆಕಾಂತಿಗಳಿಡುತದೋರಿದ ಸದ್ಗುರು ಪುಣ್ಯ ಗುಹ್ಯ ತಾರ್ಕಣ್ಯ ಬೆಳಗು ಬೈಗಿಲ್ಲದ ಬೆಳಗಿನ ಪ್ರಭೆ ತಿಳಿದವನೆ ಮೂಲೋಕದೊಳಗೆ ಮಾನ್ಯ 2 ಬೆಳಗಿನೊಳು ಬೆರಗಾದನು ಮಹಿಪತಿ ಅತಿ ಆಶ್ಚರ್ಯವ ನೋಡಿ ತೊಳಲಿ ಬಳಲುವ ನಿದ್ರೆಯಗಳೆದನು ತಾ ಈ ಡ್ಯಾಡಿ ನಿಜ ಒಡಮೂಡಿ ಭವ ಪಾದವ ಕೂಡಿ3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಬೆಳಗಿರಿ ಶ್ರೀಹರಿಗೆ ಆರುತಿಯಾ ನಾರಿಯರು ಪ ಇಂದುಬಿಂಬ ಮುಖಿಯರು | ಮದನಾರಿ ಸಖಗೆ ವೇದವೇದ್ಯ ಯದುಕುಲನಾಥಗೆ1 ಜಗದಾದಿ ಪತಿಗೆ ನಗಪಾಣಿಗೆ ಜಗದಾದಿ ಗಜವರ ಪಾಲಿಗೆ 2 ಶಾಮಸುಂದರ ವಿಠಲಗೆ ಬೇಗ ಕೋಮಲಾಂಗರಘುರಾಮ ಚಂದ್ರಗೆ 3
--------------
ಶಾಮಸುಂದರ ವಿಠಲ
ಬೆಳಗಿರೆ ಆರುತಿಯ ಶ್ರೀ ತುಳಸಿಗೆ ಪ ಬೆಳಗಿರೆ ಆರುತಿ ತುಳಸಿದೇವಿಗೆ ನಿತ್ಯ ಲಲನೆಯರೆಲ್ಲ ಮಂಗಳವೆಂದು ಪಾಡುತ ಅ.ಪ ಸುಧೆಯ ಕಲಶದೊಳು ಮಧುವೈರಿನಯನದ ಮುದ ಜಲಬೀಳಲು ಉದುಭವಿಸಿದಳೆಂದು 1 ದರುಶನ ಮಾತ್ರದಿ ದುರಿತಗಳೋಡಿಸಿ ಸ್ಥಿರವಾದ ಸೌಭಾಗ್ಯ ಕರುಣಿಸುವಳೆಂದು 2 ಇಳೆಯೊಳು ಕಾರ್ಪರ ನಿಲಯ ಶ್ರೀನರಹರಿ ಒಲುಮೆಯ ಪಡೆದ ಶ್ರೀ ತುಳಸಿದೇವಿಗೆ ಬೇಗ3
--------------
ಕಾರ್ಪರ ನರಹರಿದಾಸರು
ಬೆಳಗಿರೆ ಗೋಪಾಲ ಬಾಲಗೆ | ಬೆಳಗಿರೆ ಗೋಪಾಲಕೃಷ್ಣಗೆ ಆರುತಿ | ಬೆಳಗಿರೆ ಗೋಪಿಯ ಕಂದಗೆ ಪ ಗೋಪಿ ಮನೋಹರಗೆ ಗೋಪಾಲಕನಿಗೆ ಆಕಳಕಾಯ್ವನಿಗೆ 1 ನಂದಕುವರಗೆ ಶಿಂಧುಶಯನಗೆ ಇಂದೀವರಾನನಗೆ 2 ಶಾಮಸುಂದರಗೆ | ದಾಮೋದರಗೆ | ಪ್ರೇಮದಿಂದಲಿ ಕಮಲಾಕ್ಷಗೆ ಬೇಗ 3
--------------
ಶಾಮಸುಂದರ ವಿಠಲ
ಬೆಳಗಿರೆ ಹರುಷದಿ ಆರುತಿಬೇಗ | ಸತಿ ಮುದದಿ ಶಿರಿ ನಿಲಯನಿಗೀಗ ಪ ನಿರಂಜನ | ನಿರಾಮಯ | ನೀರೇರುಹದಳ ಲೋಚನ ನರಪ್ರಿಯ | ಸುಮಹಿತ ಸುಚರಿತ ಮರುತ ವಿನುತಗೆ 1 ದೀನಾಪ್ತಗೆ | ಶ್ರೀನಾಥಗೆ | ಆನಂದಾತಿಶಯದಲಿ ಸಭೆಯೊಳು ಮಾನಿನಿಯಳ ಅಭಿಮಾನ ಕಾಯ್ದವಗೆ 2 ಹೇಮಾಂಬರ | ಶ್ರೀಮಾವರ | ಪ್ರೇಮಾದರದಿ | ಸು ಶುಭಮೂರುತಿಗೀಗ ಆರುತಿ ಬೇಗ 3
--------------
ಶಾಮಸುಂದರ ವಿಠಲ
ಬೆಳಗಿರೇ ಆರತಿಯ ಮುತ್ತೈದೆರೆಲ್ಲರೂ ಕೂಡಿಬೆಳಗಿರೇಆರತಿಯ ಪ ಶ್ರೀ ಗುರು ಗಣಪತಿ ಚರಣಾರವಿಂದಕೆ ಬಾಗಿ ಮಣಿದು ಶಾರದಾಂಬಿಕೆ ಅಮ್ಮನ ಆಗಮೋಕ್ತದಿ ಪೂಜಿಸುವೆ ಚರಿತವನೀಗಳು ಕರುಣಿಸುತಿಹ ವಿಘ್ನರಾಜಗೆ ಮೊದಲ ಆರತಿಯ ಬೆಳಗಿರೆ 1 ಸರಸಿಜೋದ್ಭವನ ರಾಣಿ ಕಲ್ಯಾಣಿ ವಿದ್ಯೆಗಧಿಕಾರಿ ಸುರವಂದ್ಯೆ ಸುಪ್ರದಾಯಕಿ ಶಾರದಾಂಬಿಕೆಗೆ 2 ಶಾರದಾಂಬಿಕೆಗೆ ಹರಳಿನಾರತಿಯ ಬೆಳಗಿರೆ 3 ಬಿರು ಮುಗುಳಿನ ಚಂಪಕದಂತೆ ನಾಸಿಕ ಕದಪು ಕನ್ನಡಿಯವೇಲ್ ಲೋಕಮಾತೆಗೆ ಪರಿಮಳ ದಾರತಿ ಬೆಳಗಿರೆ 4 ಮರೆಯಲು ಗರಳಸ್ವರವು ಕೋಗಿಲೆಯಂತೆ ನಳಿದೋಳೆರಡು ಬೆರಳು ಸಂಪಿಗೆಯ ಸರಳಿರುವಂತೆ ಮೆರೆವ ಈ ಶಾರದಾಂಬಿಕೆಗೆ ಹವಳದಾರತಿ ಬೆಳಗಿರೆ 5 ಕಿರುಬಸುರಿನ ಸುಳಿನಾಭಿ ಇಟ್ಟ ವೋಲೆ ತ್ರಿವಳಿಯ ಹರಿಮಧ್ಯ ನಡುವಿಗೆ ಉಟ್ಟ ಪೀತಾಂಬರದ ಶ್ರೀ ಶಾರದಾಂಬಿಕೆಗೆ ಬಟ್ಟಲಾರತಿ ಬೆಳಗಿರೆ 6 ಮಂದಗಮನೆ ಜಗದ್ವಂದ್ಯೆಗೆರಗಿ ನಾ ಮುಂದೆ ಪೇಳುವ ಪರಿಪರಿ ವಸ್ತ್ರ ಭೂಷಣದಿಂದ ಮೆರೆವ ಮಣಿ ಮಕುಟ ಫಣಿಗೆ ಶ್ರೀಗಂಧ ಕುಂಕುಮವಿಟ್ಟ ಶಾರದಾಂಬಿಕೆಗೆ ಕುಂದಣ ದಾರತಿ ಬೆಳಗಿರೆ 7 ಪುತ್ಥಳಿ ಹಾರಹೀರಾವಳಿ ಮುತ್ತಿನಸರ ಚಿನ್ನದಸರ ಚಕ್ರಸರ ಜ್ವಲಿಸುತ್ತಲಿರುವ ಮೆರೆವ ಶ್ರೀ ಶಾರದಾಂಬಿಕೆಗೆ ಮುತ್ತಿನಾರತಿ ಬೆಳಗಿರೆ 8 ರತ್ನದಸರ ಪದಕದಸರವು ಏಕಾವಳಿಸರ ಕೊರಳೊಳಗಳ ನಳಿನ ದಾರತಿ ಬೆಳಗಿರೆ 9 ಹರಳು ಮೌಕ್ತಿಕದಿಂದ ಮೆರೆವ ಮೂಗುತಿ ಚಂದ್ರನ ಹರಳು ಚೌಲಿಯ ತುಂಬುಪರಿಮಳಿಸುವ ಪೂವು ಕರಿ ಮಣಿ ಹರಳಿನಾರತಿ ಬೆಳಗಿರೆ 10 ಮೆರೆವಚೂಡವು ಕೈ ಚಳಕಿಗೆ ಕೆತ್ತಿದ ಹರಳಿನ ವಡ್ಯಾಣ ನಡುವಿಗೆ ಅಳವಟ್ಟು ರೂಢಿಸಿ ಬಕುತರ ಪಾಲಿಪ ಶಾರದಾ ದೇವಿಗೆ ಆರತಿ ಬೆಳಗಿರೆ 11 ಥರಥರ ನವರತ್ನ ಖಚಿತದಿಂದೊಪ್ಪುವ ಕರವೆರಡರ ಭುಜ ಕೀರ್ತಿ ವಜ್ರದೊಳ್ ಬಿರಿದ ತೋಳ್ ಬಳೆವಾಲೆ ಶಾರದಾದೇವಿಗಾರತಿ ಬೆಳಗಿರೆ 12 ಚಿನ್ನದ ಕಿರುಗೆಜ್ಜೆ ಅಂದಿಗೆ ಗಿಲಿಗಿಲಿರೆನ್ನಲು ಹಾರ ಹೊಯ್ದೊಡರು ಬಿರಿಚೊಕ್ಕ ಚಿನ್ನದ ಸರಪಳಿ ಭಾರಿಗಳ ನೆಳೆವ ಸುಪ್ರಸಂಗನೆಗಾರತಿಯ ಬೆಳಗಿರೆ 13 ಪಿಲ್ಲಿಯುಕಿರು ಬೆರಳಲಿ ಮಿಂಚಿನಂತಿಹುದಿಲ್ಲಹರಳು ಮಂಚಿಕೆ ಕೊಡೆ ಹೊಳೆಯುವ ಚೆಲುವ ಕಾಲುಂಗರ ವರ ವೀರ ಮುದ್ರಿಕೆಯಲಿ ಒಪ್ಪುತಲಿಹ ಶಾರದಾಂಬಿಕೆಗೆ ಮಲ್ಲಿಗೆ ಯಾರತಿಯ ಬೆಳಗಿರೆ 14 ಭಾರಕೆ ಶಾರದೆ ಒಲಿಯುತ ದೇಹದ ಕಾಂತಿ ಯಿಂದ ದಿಕ್ಕನು ಮುತ್ತೀನಾರತಿಯ ಬೆಳಗಿರೆ 15 ಕರುಣಾಂಬೆ ಕಾಶ್ಮೀರ ಪುರವರಧೀಶ್ವರಿ ಪರಮಹಂಸವರ್ಯ ಪರಿ ಪರಿ ರುದ್ರನ ಪೋಲ್ವ ನಿಶದದುತಿ ಮೂರ್ತಿ ಪರಿಪರಿ ಆರತಿಯ ಬೆಳಗಿರೆ 16 ಪುಷ್ಪ ಧೂಪ ದೀಪಗಳಿಂದ ಸಡಗgದಿಂದಲಿ ಸಮರ್ಪಿಸಿ ಜಯ ಜಗದರೂಪೆ ರಕ್ಷಿಸು ಮಾತಾಯೆ ಕರುಣಿಸು ಎಂದು ಕಡು ಬೆಡಗಿನ ಆರತಿಯ ಬೆಳಗಿರೆ 17 ಕಡುಬು ಕಜ್ಜಾಯ ಪಾಯಸಕ್ಷೀರ ದಧಿಘೃತತಡೆಯಿಲ್ಲ ತುಂಬಿ ದೇವಿಗೆ ಕರಿಯ ಕಬ್ಬಿನ ಕೋಲು ಆರತಿಯ ಬೆಳಗಿರೆ 18 ಹರಿವಾಣ ನೇವೇದ್ಯಜಗನ್ಮಾತೆ ತಾಬೂಲವನಿತ್ತು ಶರಣೆಂದು ನೂತರದಾರತಿಯ ಬೆಳಗಿರೆ 19 ತಮ್ಮಟೆ ಭೇರಿ ಬುರುಗು ಶಂಖ ಮೃದಂಗವು ನೀಲದಾರತಿಯ ಬೆಳಗಿರೆ 20 ಭೋರಿಡುವವಾದ್ಯವು ಉಡುಕು ಕೊಳಲು ತಂಬೂರಿ ತಾಳಗಳಿಂದ ಸ್ವರವೆತ್ತಿಪಾಡಿ ಆರತಿಯ ಎತ್ತಿರೆ 21 ಬೇಡುತ ಪೂಮಳೆಗರೆಯುತ ಹೊಡೆದು ಕೊಂಡಾಡಿ ವಂದಿಸಿದರು ಶಾರದಾಂಬಿಕೆಗೆ ಹೂವಿನಾರತಿಯ ಎತ್ತಿರೆ 22 ವರದಾಂಬೆ ಶಾರದಾಂಬಿಕೆಯನು ಪೂಜಿಸಿದವರಿಗೆ ಪರಿಪರಿ ವಿದ್ಯವ ಕರುಣಿಸೆ ನರರಿಗೆ ಇಷ್ಟಾರ್ಥದ ವರವಿತ್ತು ಕೊಡುವಳು ಮರಕತದಾರತಿ ಬೆಳಗಿರೆ 23 ಹಿರಿಯಮಗನ ರಾಣಿ ಶಾರದಾಂಬಿಕೆಯ ಸುರಮುನಿ ಜನರಿಗಿಷ್ಟಾರ್ಥವ ವರವಿತ್ತು ಮಂಗಳಾರತಿಯ ಬೆಳಗಿರೆ 24
--------------
ಕವಿ ಪರಮದೇವದಾಸರು
ಬೆಳಗುಂಝಾವದಿ ಬಾರೊ ಹರಿಯೆ ಚರಣ ತೊಳೆದು ಜಲದಿ ತೀರ್ಥಪಾನ ಮಾಡುವೆನೊ ಪ. ನೀರ ಒಳಗೆ ನಿಂತುಕೊಂಡು ಬೆನ್ನ ಭಾರ ಪೊತ್ತು ನಿನ್ನವರ ಕಾದುಕೊಂಬೆ ಮೋರೆ ತಗ್ಗಿಸಿದರೇನೆಂಬೆ ಜಗದಿ ನಾರಸಿಂಹನಾಗಿ ಪೂಜೆಯಗೊಂಬೆ 1 ಬಲಿಯ ದಾನವ ಬೇಡಿದೆಲ್ಲೊ ಕ್ಷತ್ರಿ ಕುಲವ ಸವರಿ ಕೊಡಲಿಯ ಪಿಡಿದೆಲ್ಲೊ ಬಲವಂತ ನಿನಗಿದಿರಿಲ್ಲೊ ನಿನ್ನ ಲಲನೆಯ ತಂದು ರಾಜ್ಯವನ್ನಾಳಿದೆಲ್ಲೊ 2 ಗೋಕುಲದೊಳು ಪುಟ್ಟಿದೆಲ್ಲೊ ಲೋಕ ಪಾ(ಕಾ?) ಕು ಮಾಡಲು ಬುದ್ಧರೂಪನಾದೆಲ್ಲೊ ಯಾಕೆ ಹಯವನೇರಿದೆಲ್ಲೊ ನಮ್ಮ ಸಾಕುವ ಹಯವದನ ನೀನೆ ಬಲ್ಲೆಲ್ಲೊ 3
--------------
ವಾದಿರಾಜ
ಬೆಳಗುವಿರಿ ನೋಡೆ ದೇವಕುವರರಂತಿಹಿರಿ ಧೀರ ಗಂಭೀರತರ ಭಾವ ತೋರ್ಪುದು ಮುಖದಿ ನಾರು ವಸ್ತ್ರವ ಧರಿಸಿ ತಿರುಗುವಿರಿ ವನದಿ 1 ಕಂದರ್ಪನನು ಪೋಲ್ವ ಕಮನೀಯ ವಿಗ್ರಹರು ವೈರಿ ನಿಗ್ರಹರು | ಪುಟಕ್ಕಿಟ್ಟ ಚಿನ್ನದಂತೆ ಕಾಂತಿರಂಜಿತರು ಪಟುತರಂಗರು ಗಹನವಿಟದಿ ಪರಿವ್ರಾಜಕರು 2 ಆಜಾನುಬಾಹುಗಳು ಆಜಾನು ಜಂಘಗಳು ಆ ಜಟ ಮಂಡಲವು ರಾಜಿಸುತಲಿಹವು ದೃಢವಾದ ನಿಮ್ಮಡಿಗಳಿಡುವ ಧ್ವನಿಗಳ ಕೇಳಿ ಅಡವಿಯೊಡತನ ಪಡೆದ ಸಿಂಹಗಳು ನಡುಗುವುವು 3 ಧರೆಗಿಳಿದು ಬಂದಿರ್ಪ ರವಿ ಚಂದ್ರರಂದದಲಿ ನೆರೆ ಪ್ರಕಾಶಿಕರಾಗಿ ಕಂಗೊಳಿಸುತಿಹಿರಿ ಗುರುತರದ ಕಾರ್ಯತತ್ಪರರಾಗಿ ಬಂದಿರುವ ನರೆÉಭಾವ ತೋರುವುದು ಕರಿಗಿರೀಶನ ದಯದಿ 4
--------------
ವರಾವಾಣಿರಾಮರಾಯದಾಸರು
ಬೆಳಗೆ ಬೇಗ ಭ್ರಮರವೇಣಿ ನಳಿನನಾಭನಿಗಾರುತಿಯ ಪ ಪಾಲಿಸಿದ ಶ್ರೀಲೋಲನಾದ ವಾಲಿ ಮದವ ಭಂಜಗೆ 1 ಇಂದು ಮುಖದ ಸುರೇಂದ್ರವರದ ನವನೀತ ಚೋರ ನಂದಸುತ ಗೋವಿಂದಗೆ 2 ತಟಿತ ನಿಭ ವೆಂಕಟ ಗಿರೀಶ ಮೂರ್ತಿ ಶಾಮಸುಂದರ ವಿಠಲಗೆ 3
--------------
ಶಾಮಸುಂದರ ವಿಠಲ
ಬೆಳಗೋಣು ಹರಿಗೆ ಆರುತಿಯ | ಸಂಗೀತಹಾಡಿ ಪಾಡಿ ನಲುವಿಂದ ಬೇಗ ಬಾರೆ ನಳಿನಾಕ್ಷಿ ಬಾ ಪ ಬಾಲೆ ಶೀಲೆ ದ್ರೌಪದಿ ಭಕುತಿಲಿ ಧ್ಯಾನಿಸಿ ಧೇನಿಸಿ ಕೇಳಿ ಅಕ್ಷಯಶಾಲಿ ಗರೆದ ದೇವ ದೇವಗೆ || ಶೈಲವನೆತ್ತಿದಾತಗೆ | ಗೋಪಗೆ | ಬಹುರೂಪನಿಗೆ | ಶೃಂಗಾರ ಸುಗುಣಾಂಬುಧಿಗೆ ಜಯಶುಭ ಮಂಗಳೆಂದು 1 ದೀನೋದ್ಧಾರಿ ಧೇನುಕ ಮಾತುವೈರಿಗೆ | ಶೌರಿಗೆ | ವೇಣುನೂದುತ ಗೋವ್ಗಳ ಸಲುಹಿದಾತಗೆ ನಾಥಗೆ | ಮಂದರ ಕರುಣಾತರಗೆ 2 ಭಾಸುರ ಶಾಮಸುಂದರವಿಠಲ ಸ್ವಾಮಿಗೆ | ಪ್ರೇಮಿಗೆ | ವಾಸವಾತ್ಮಜಗೆ ಒಲಿದು ಧುರದೊಳು ಕಾಯ್ದಗೆ ಶ್ರೀದಗೆ || ವಾಸುಕಿತಲ್ವಶಾಯಿಗೆ | ಗೋಪಗೆ | ಬಹುರೂಪನಿಗೆ | ದಾಸರ ಒಡನಾಡುವಗೆ | ಜಯಶುಭ ಮಂಗಳೆಂದು 3
--------------
ಶಾಮಸುಂದರ ವಿಠಲ
ಬೆಳುದಿಂಗಳ ಪ್ರಭೆ ಬಲು ಕಾಂತಿಯಿರಲುಬಲವನು ದುರ್ಗುಣಕೆ ಹತ್ತಬಹುದೇಬೆಳಗುತ್ತ ಜ್ಞಾನದ ಚಂದ್ರನು ಹೊಳೆದಿರೆಬಳಿಕ ಜನನ ಮರಣ ಮುತ್ತಬಹುದೆ ಪ ಬಹು ಬೆಳಕು ಬೆಳಗಲು ಮನದ ಮರ್ಕಟವದುಮರವ ನೇರದೆ ಕೆಳಗೆ ನಿಲ ಬಲ್ಲುದೆಬಹು ಕಾಮವೆಂಬ ಕಾಗೆ ಕಣ್ಣುಡುಗಲುಗೂಡಿನಿಂದಾ ಹೊರಗೆ ಬರಬಲ್ಲದೆ1 ಚೆಲ್ಲಿರೆ ಕಾಂತಿಯು ಕಳ್ಳರಾರ್ವರ ತಲೆಚೆಂಡಾಡದೆ ತಾನು ಸುಮ್ಮನಿಹುದೆಫುಲ್ಲ ತಿಂಗಳ ಬೆಳಕು ಎಲ್ಲೆಡಗೆ ಹರಡಿರೆಪಂಚ ವಂಚಕರು ಓಡದಿಹರೆ2 ಒಲಿದರೆ ತೇಜವು ಅವಿದ್ಯದ ಕತ್ತಲೆಯುತಾನೋಡದೆ ಅಲ್ಲಿ ನಿಲಬಲ್ಲುದೆಬಲು ಕಳೆ ಚಿದಾನಂದಗುರು ತಾನು ಬೆಳಗುತಿರೆಬಹಳ ಜನ್ಮದ ಪಾಪ ಹರಿಯದಿಹುದೇ3
--------------
ಚಿದಾನಂದ ಅವಧೂತರು
ಬೆಳೆಗಿಂಝಾವದಿ ಬಾರೊ ಹರಿಯೆ ನಿನ್ನ ಕಳೆಕಳೆ ರೂಪ ನೋಡುವೆ ಮುಕುಂದ ಪ. ಭಕ್ತರ ಭಯ ನಿವಾರಣನೆ ಭಕ್ತಿಲಿ ಕರೆವೆ ಗೋವಿಂದ ನಿನ್ನನೆ ಭಕ್ತವತ್ಸಲ ನೀನಲ್ಲವೇ ಸ ದ್ಭಕ್ತರ ಸಲಹೆ ಕಂಕಣ ಧರಿಸಿಹನೆ 1 ಶ್ರೀ ತುಳಸಿಯ ವನಮಾಲ ಶ್ರೀ ಕೃಷ್ಣ ನಿನ್ನ ದರ್ಶನದ ಲಾಭ ಶ್ರೀಶನೆ ಬಯಸುವೆ ದೇವ ಶ್ರೀರಮೆಯರಸ ದಯಪಾಲಿಸೊ ಕೃಷ್ಣ 2 ಒಮ್ಮೆಯಾದರೂ ತೋರೊ ರೂಪ ಎನ್ನ ಕರ್ಮ ಖಂಡನವಹ ತೆರೆದೊಳು ಶ್ರೀಪ ಬೊಮ್ಮನೈಯ್ಯ ನಿನ್ನ ನೋಡ್ವೆ ಸುಮ್ಮಾನವ್ಯಾಕೊ ಶ್ರೀ ಶ್ರೀನಿವಾಸ 3
--------------
ಸರಸ್ವತಿ ಬಾಯಿ