ಒಟ್ಟು 8509 ಕಡೆಗಳಲ್ಲಿ , 134 ದಾಸರು , 5107 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವೆಂಕಟೇಶ ನೀನೆ ಧೊರೀ ಧೊರೀ ಪ ಸಂಕಟವೆಲ್ಲವ ಪರಿಹರಿಸುವಂಥ ಅ.ಪ. ಎತ್ತಿನ ಪೆಸರುಳ್ಳ ಮತ್ತ ರಕ್ಕಸನ್ನ ಕುತ್ತಿಗೆ ಕೊಡಲುತ್ತಮ ಪದವಿತ್ತೆ 1 ಅಂಜನೆಯೆಂಬೊ ಮಂಜುಕಿಸಾಲಿಯ [?] ಅಂಜದೆ ತಪಿಸಲು ಸಂಜೀವನವಿತ್ತೆ2 ಸಾಸಿರ ಮುಖವುಳ್ಳ ಶೇಷನಹಂಕಾರ ಸ್ವಸನನ ಕೈಯಿಂದ ನಾಶಮಾಡಿಸಿದಂಥ3 ಮಾಧವ ಮಾದಿಗ ಹಾದಿಯ ಮೆಟ್ಟಲು ಮಾಧವ ಅವನನ್ನು 4 ಶ್ರೀದವಿಠಲ ನಿನ್ನ ಪಾದಾಶ್ರಿತರ ಮೋದದಿ ಸಲಹೊ ಆದರಿಸೆನ್ನನು 5
--------------
ಶ್ರೀದವಿಠಲರು
ವೆಂಕಟೇಶನ ನಂಬಿರೊ ನೀವೆಲ್ಲರೂ | ವೆಂಕಟೇಶನ ನಂಬಿರೋ || ವೆಂಕಟೇಶನ ನಂಬಿ | ಮಂಕುಜನರೆ ನಿಮ್ಮ | ಸಂಕಟ ಪರಿಹರಿಸಿ ತ | ನ್ನಂಕಿತವ ನೀವ ಪ ಗುಣ ಒಂದು ನೋಡಿದಿಯಾ ಅಜಮಿಳ | ಗುಣವೇನು ಮಾಡಿದನು | ಗುಣ ಶಿರೋಮಣಿ ಮ | ರಣ ಬಂದಾಗ ಸ್ಮ | ರಣೆ ಇತ್ತು ಅವನ ನಿ | ರ್ವಾಣಕ್ಕೆ ಕರಿಸಿದಾ 1 ಕುಲದಲ್ಯಾತರವನು | ಕುಲಶಿಖಾಮಣಿ | ನಿಳಗೆ ಪೋಗಿ ಕುಡತಿ ಪಾಲಿಗೆ ಅವನಿಗೊಲಿದು ನಿ | ಶ್ಚಲ ಭಾಗ್ಯವನಿತ್ತ 2 ಗುಣ ಒಂದು ನೋಡಿದಿಯಾ | ವಾಲ್ಮೀಕಿ | ಗಣದ ಕೂಟದವನೆ | ಕ | ರುಣ ಮಾಡಿ ಅವಗೆ ಚ | ರಣವನ್ನು ತೋರಿ ಆ | ಕ್ಷಣದಲ್ಲಿ ಸಾಕೀದ 3 ಪತಿವ್ರತರ ನೋಡಿದಿಯಾ | ಗೋಪಿಯರು ಪತಿ ಧರ್ಮದಲ್ಲಿ ಇದ್ದರೇ | ಪತಿತಪಾವನ ಸಂಗತಿಯಲ್ಲಿ ಆ ನಾರಿಯರಿಗೆ | ಅತಿಶಯವಾದ ಸದ್ಗತಿಯ ಕರುಣಿಸಿದ4 ಗುಣಿ ಕುಲ ಗಣ ಮಿಕ್ಕಾದ ವ್ರತಂಗಳು | ದಣಿದು ಮಾಡಲಿಬೇಡಿರೊ | ಬಣಗುದೈವದ ಗಂಡ ವಿಜಯವಿಠ್ಠಲನ್ನ | ಮನದೊಳು ನೆನೆದರೆ ನೆನೆಸಿದ ಫಲನೀವಾ 5
--------------
ವಿಜಯದಾಸ
ವೆಂಕಟೇಶನೆ ಶ್ರೀ ವೆಂಕಟೇಶನೆ ಪ. ಶಂಖ ಚಕ್ರಗಳನೆ ಪಿಡಿದುಬಿಂಕದಿಂದ ಮೆರೆಯುತಿರುವ ಅ.ಪ. ಮೀನನಾಗಿ ಬಂದು ಘೋರ ದಾನವನೆ ಕೊಂದುಯನ್ನೇ ಎತ್ತಿದಂಥ ಜಾಣ ಕೂರ್ಮಾವತಾರ1 ಧರಣಿದೇವಿಯನ್ನು ಕದ್ದ ಹಿರಣ್ಯಾಕ್ಷನೆ ತರಿದುಕರುಳಮಾಲೆಯನ್ನೆ ಧರಿಸಿ ವರ ಪ್ರಹ್ಲಾದನ ಕಾಯ್ದ 2 ಬಲಿಯ ದಾನವನ್ನೆ ಬೇಡಿ ನೆಲವ ಮೂರಡಿ ಮಾಡಿಛಲದಿ ಕ್ಷತ್ರಿಯನಳಿದ ಚಲುವ ಪರಶುರಾಮ3 ಹತ್ತುರಥನ ತನಯನೆನಿಸಿ ಹತ್ತುಶಿರನ ಸಂಹರಿಸಿಮತ್ತೆ ಕಂಸಾದಿ ಖಳರ ಹತ್ಯಮಾಡಿದಂಥ ಶ್ರೀ 4 ಚಾರು ಬುದ್ಧರೂಪವಾಗಿ ನಾರಿಯರ ವ್ರತವ ಕೆಡಿಸಿತುರಗವೇರಿ ಚರಿಪ ತಂದೆವರದವಿಠಲ ಕಲ್ಕಿ 5
--------------
ಸಿರಿಗುರುತಂದೆವರದವಿಠಲರು
ವೇಣಿ ಮಾಧವನ ತೋರಿಸೆ ಜಾಣೆ ತ್ರಿವೇಣಿ ಕಾಣದೆ ನಿಲ್ಲಲಾರೆನೆ ಪ ಕಾಣುತ ಭಕುತರ ಕರುಣದಿ ಸಲಹುವ ಜಾಣೆ ತ್ರಿವೇಣಿ ಕಲ್ಯಾಣಿ ಸುಸನ್ನುತೆ ಅ.ಪ. ತರಣಿ ಒಂದು ಘಳಿಗೆ ನೀ ಹರಿಯ ಬಿಟ್ಟಿರಲಾರಿ ಮಂದಗಮನೆ ಎನ್ನ ಮುಂದಕ್ಕೆ ಕರೆಯೆ 1 ಕರುಣವಿಂದೆನ್ನ ಕರೆವುದು ಭವ ಸ್ಮರನಪಿತನ ಮುರಹರನ ಕರುಣದಿ 2 ಸುಜನರಿಗೆಲ್ಲ ದಾತಳೆ ಸುಶೀಲೆ ಕೇಳೆ ಕುಜನರ ಸಂಗದೂರಳೆ ನಿಜ ಪದವಿಯನಿತ್ತು ಸಲಹುವ ನಮ್ಮ ವಿಜಯವಿಠ್ಠಲ ನಿಜಪದ ತೋರಿಸೆ 3
--------------
ವಿಜಯದಾಸ
ವೇಣು ಗೋಪಾಲನು ಬರುವನಂತೆ ಪ ಜಾಣೆ ನಮ್ಮನೆಯಲಿ ಇರುವನಂತೆ ಅ.ಪ ಪರಮ ಸುಂದರ ನವತರುಣನಿವ ಸಖಿ ಅರಿತು ಭಜಿಪರಿಗೆ ಕರುಣಿ ಇವ ಸಖಿ ತೊರೆಯಬೇಕಭಿಮಾನ ಕ್ಷಣದಲಿ ಮರೆಯಬೇಕಿಹಲೋಕ ಬಂಧನ1 ಹೃದಯವ ಕದಿಯುವ ಚೋರನಿವ ಸಖಿ ಮದನನ ಜಗಕಿತ್ತ ಜಾರನಿವ ಸಖೀ ಕದನದಲಿ ಕಂಠೀರವನು ಶುಭ ವದನೆಯರ ಶೃಂಗಾರ ಜಲನಿಧಿ 2 ಘನತೆಯು ರುಚಿಸದು ಹುಡುಗನಿವ ಧನವನು ಬಯಸನು ಸಿರಿರಮಣ ತನುಮನಗಳರ್ಪಿಸಲು ಹರುಷದಿ ಕುಣಿಯುವನು ಕುಣಿಸುವ ಪ್ರಸನ್ನನು 3
--------------
ವಿದ್ಯಾಪ್ರಸನ್ನತೀರ್ಥರು
ವೇಣು ಗೋಪಾಲವಿಠ್ಠಲರೇಯ ನಿನ್ನ ಪದ ರೇಣು ನಂಬಿದ ಮಾನವ ಏನು ಅರಿಯದಲಿಪ್ಪ ನೀನೊಲಿದು ಕರುಣದಲಿ ಜ್ಞಾನ ಭಕುತಿಯ ಕೊಡುವುದು ಸ್ವಾಮಿ ಪ ಪರದೈವ ನೀನೆಂದು ಮೂಢಮತಿಯಾದವನು | ಪರಿಪೂರ್ಣವಾಗಿ ನಿರುತ | ನೆರೆ ನಂಬಿದೆನು ನಾನಾ ಪ್ರಕಾರದಲಿ ಸ್ಮರಣೆ ಮಾಡುತ ಮನದಲಿ | ತರತಮ್ಯ ಭಾವದಲಿ ಮಾರ್ಗವನೆ ತೋರಿ ವಿ ಸ್ತರ ಮಾಡು ಇವನ ಕೀರ್ತಿ ಕರುಣಾಕರನೆ ನಿನ್ನ ಮೊರೆಹೊಕ್ಕ ಶರಣನ್ನ ಕರಪಿಡಿದು ಪಾಲಿಸುವುದು ಸ್ವಾಮಿ1 ಲೌಕಿಕವೆಲ್ಲಿನಗೆ ವೈದಿಕವೆಂದೆನಿಸಿ | ಸಾಕುವುದು ಸಾಕಾರನೆ ನೂಕು ದುರಳದಿಂದ ಬಂದ ವಿಪತ್ತುಗಳ ತಾಕಗೊಡದಂತೆ ವೇಗ ಶುಭ | ವಾಕು ನೇಮಿಪುದು ಸತತ ನಾಕಜನ ಬಲವಾಗಿ ರಕ್ಷಿಸಲಿ ಸುರತರುವೆ ಶ್ರೀ ಕಾಂತ ನಿನ್ನಿಂದಲಿ ಸ್ವಾಮಿ 2 ಓರ್ವನ ಪೆಸರುಗೊಂಡು ಪೇಳಲೇತಕೆ ಇನ್ನು | ಸರ್ವರನು ಈ ವಿಧದಲಿ | ಊರ್ವಿಯೊಳಗೆ ಇಟ್ಟು ಉದ್ಧರಿಸಿ ಉರುಕಾಲ ನಿವ್ರ್ಯಾಜದವನ ಮಾಡಿ ಸರ್ವರಗೋಸುಗ ತುತಿಸುತಲಿ ಯೋಗ್ಯರಿಗೆ ಸರ್ವದಾ ಕೃಪೆಮಾಡು ಎಂಬೆ ಸಿರಿ ವಿಜಯವಿಠ್ಠಲ ನಿನ್ನ ಶರ್ವ ತುತಿಸಿ ಕಾಣ ನಾನೊಬ್ಬ ಪೊಗಳುವನೆ 3
--------------
ವಿಜಯದಾಸ
ವೇಣು ವಿನೋದ ವಿಠಲ | ನೀನೆ ಪೊರೆ ಇವನಾ ಪ ದೈನ್ಯದಲಿ ತವ ದಾಸ್ಯ | ಕಾಂಕ್ಷೆಯಲಿ ಹಯಮೊಗನೆಗಾನ ಮಾಡಲು ನಿನ್ನ | ಪಾಸು ಕೂಲಿಸಿದೇ ಅ.ಪ. ಖಂಡೀ ಭವದ್ ಬಹುಲ | ಡಿಂಡೀರ ಜೃಂಬಣಸುಚಂಡೀ ಕೃತೋ ಎಂಬ | ಶೌಂಡಪದಯತಿಯಿಂಗೊಂಡು ಸುಸ್ವಪ್ನದಲಿ | ದಂಡವತ್ತರಗಿ ಮುದ-ಗೊಂಡು ತವ ಪಾಪಗಳ | ಖಂಡಿಸೀದವನಾ 1 ತೀರ್ಥಾಭಿಷೇಕದಿ ಪು | ನೀತನಾದಗೆ ಭಾವಿವಾತಾತ್ಮ ಮಹಿಮೆಗಳ | ದ್ಯೋತಕ ಸುಗ್ರಂಥಾಪ್ರೀತಿಯಿಂ ಪಡೆದಿಹನೊ | ಮಾತುಳಾಂತಕ ಹರಿಯೆಆತು ಕೈಪಿಡಿ ಇವನ | ಧಾತಾಂಡದೊಡೆಯಾ 2 ಲೌಕೀಕವನ್ನೆಲ್ಲ ವೈಧೀಕವೆಂದೆನಿಸಿ ಈತೋಕನಿಗೆ ಸುಜ್ಞಾನ | ಭಕುತಿ ಸಂಪದನಾನೀ ಕರುಣದಿಂ ಕೊಟ್ಟು | ಪ್ರಾಕ್ಕುಕರ್ಮಾವಳಿಯನೀ ಕಳೆಯೊ ಕರುಣಾಳು | ನಾಕನದಿ ಪಿತನೆ 3 ಬೋಧ ಬೋಧ ಮೂರುತಿಯೇ 4 ಅದ್ವೈತ ಭವ | ನೋವ ಪರಿಹರಿಸಯ್ಯಗೋವಳ ಪ್ರೀಯ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ವೇಣುಗೋಪಾಲದಾಸರ ಸ್ತೋತ್ರ ಕರೆದು ಕೈ ಪಿಡಿಯೊ ಎನ್ನ ವೇಣುದಾಸದೊರೆಯೆ ಪತಿತ ಪಾವನ್ನ ಪ ಕರೆದು ಕೈ ಪಿಡಿಯೊ ನೀ ಕರಬಿಡದೆ ನಿನ್ನಚರಣವೆ ಗತಿಯೆಂದು ಮರೆ ಬಿದ್ದ ಮನುಜನ್ನ ಅ.ಪ. ಸುಜನ ಪಿನಾಕ ಜನರ ಕೂಡಾ ಸಾ-ಹಜ ಭಕುತಿಯಲಿ ಯಜಿಸಿ ಮೋಹವೃಜನ ದಾಟಿ ದ್ವಿಜವರಾಗ್ರಣಿ 1 ಸಂತರ ಸಲಹುವನೇ ಸಂಗಡಲೇ ನಿ-ಶ್ಚಿಂತರ ಮಾಡುವುದೇಎಂತು ಪೇಳಲು ಎನಗಂತು ತೋರದು ದುಷ್ಟಭ್ರಾಂತಿಯಿಂದಲಿ ಮಾಳ್ಪ ಕಂತುಗಳಿಗೆ ಲೇಶಅಂತ ಕಾಲಕ್ಕೆ ಚಿಂತಾಕಾಲಯಾಪಂಥ ಸಾರುವದಿಂತು ಸರಿ ಜಗ-ದಂತು ರಂಗನ ಮುಂತು ತಿಳಿವ-ದೆಂತುಪಾಯವು ಶಾಂತದಾತನೆ 2 ಅರಿದೇನು ಆಪ್ತ ಬಂಧು ಪಾಮರನ ಉ-ದ್ಧರಿಪದು ನಿನಗೆ ಇಂದುಸರಿಸಾ ದೂರದಿ ನಿನ್ನ ಸ್ಮರಣೆ ಮಾಡುವೆ ಆ-ಲ್ಪಿರಿದು ಬಾಯಿ ಬಿಡುವೆನೊ ಮರೆಯಲಾಗದು ತಂದೆದುರುಳ ವಿಷಯಕ್ಕೆರಗುವೆ ಅಂತಃ-ಕರುಣ ನಿಲಿಸಿ ಪೊರೆವ ಭಾರವುನಿರುತ ನಿನ್ನದು ವ್ಯಾಸವಿಠಲನಭರದಿ ಪೊಗಳುವ ಪರಮ ಧನ್ಯಾನೆ 3
--------------
ವ್ಯಾಸವಿಠ್ಠಲರು
ವೇಣುಧರ ವಿಠಲಾ | ನೀನೆ ಪೊರೆ ಇವಳಾ ಪ ಕಾಣೆ ನಿನ್ಹೊರತು ಕಾ | ರುಣ್ಯ ಮೂರುತಿಯೆ ಅ.ಪ. ಸ್ವಾಪದಲಿ ಗುರುರೂಪ | ರೂಪ ಸಮ್ಮುಖದಲ್ಲಿಗೋಪಕೃಷ್ಣಾಕೃತಿಯ | ಪಡೆದಿಹಳು ಇವಳುಶ್ರೀಪತಿಯೆ ನಿನ್ನೊಲಿಮೆ | ಆಪಾರವಿರುತಿರಲುಪ್ರಾಪಿಸುತ ಅಂಕಿತವ | ಒಪ್ಪಿಸಿಹೆ ನಿನಗೇ 1 ಪಥ ತೋರೋ ಹರಿಯೇ2 ಪತಿ ಸುತನೆ | ಕಾರುಣ್ಯ ತೋರಿ ಆ-ಪಾರ ದುಷ್ಕರ್ಮಗಳ | ಪಾರಗಾಣಿಪುದೋ |ಮಾರುತನ ಮತದಲ್ಲಿ | ಧೀರೆ ಎಂದೆನಿಸಿ ಸಂ-ಸಾರ ಸಾಗರವನ್ನು | ದಾಟಿಸೋ ಹರಿಯೇ 3 ಸೃಷ್ಟಿ ಸ್ಥಿತಿ ಲಯ ಕರ್ತ | ಕೃಷ್ಣಮಾರುತಿ ದೇವಅಷ್ಟಸೌಭಾಗ್ಯಗಳ | ಕೊಟ್ಟು ಕಾಪಾಡೋವಿಷ್ಟರಶ್ರವ ಹರಿಯೆ | ನಿಷ್ಠೆ ಆಚಾರದಲಿಕೊಟ್ಟು ಕೈಪಿಡಿ ಇವಳ | ಜಿಷ್ಣುಸಖ ಹರಿಯೇ 4 ಸರ್ವದಾ ತವ ಮಹಿಮೆ | ಶ್ರವಣ ಸುಖ ಸಾಧನವಹವಣೀಸಿ ತವನಾಮ | ವಜ್ರಾಂಗಿ ತೊಡಿಸೀಭವವನುತ್ತರಿಸತ್ಕಿ | ಬಿನೈಪೆ ಶ್ರೀ ಹರಿಯೆಸರ್ವ ಸುಂದರ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ವೇದನಿಧಿ ಹರಿ ವಿಠಲ | ಕಾದುಕೋ ಇವಳಾ ಪ ಮೋದತೀರ್ಥರ ಮತದಿ | ರಾಜಿಸುತ್ತಿಹಳಾ ಅ.ಪ. ವಾದೀಭ ಕೇಸರಿಯು | ವಾದಿರಾಜರು ಮತ್ತೆವೇದವೇದ್ಯರ ಕಂಡು | ಶುಭಸ್ವಪ್ನದೊಳಗೇಭೋದವಗದೆ ಸಾಗಿ | ವೇದನಿಧಿಗಳ ಹಸ್ತಸಾದರದಿ ಅಕ್ಷತೆಯು | ಪುಷ್ವ ಸ್ವೀಕಾರವು 1 ಯತಿವರೇಣ್ಯರ ಕರುಣಾ | ಸತತವಿರಲೀಕೇಗೇಪತಿಸುತರು ಹಿರಿಯಾ | ಹಿತಸೇವೆಯಲ್ಲೀಮತಿಯ ಕರುಣಿಸಿ ನಿನ್ನ | ವ್ಯಾಪ್ತತ್ವ ತಿಳಿಸೀಅತಿಶಯದ ಸೇವೆಯಿಂ | ಉದ್ದಿರಿಸೊ ಇವಳಾ 2 ಸುರರು ನರರೊಳಗೆಲ್ಲ | ತರತಮಾತ್ಮಕರೆಂಬ ವರಸುಜ್ಞಾನವ ಕೊಟ್ಟುಕಾಪಾಡೊ ಹರಿಯೇಗುರು ಭಕ್ತಿ ಹರಿಭಕ್ತಿ | ಪರಮ ಸಾದನವೆಂಬಅರಿವನೇ ನೀಡುವುದು | ಗರುಡ ಧ್ವಜಾತ್ಮ 3 ಧರ್ಮಮಾರ್ಗದಲಿರಿಸಿ | ಪೇರ್ಮೆಯಲಿ ಪೊರೆ ಇವಳಾಭರ್ಮಗರ್ಭನ ಪಿತನೆ | ನಿರ್ಮಾತೃ ಜಗಕೇನಿರ್ಮಮದ ಸಾದನೆಯ | ಮರ್ಮವನೆ ಅರುಹುತ್ತಕರ್ಮನಾಮಕ ಹರಿಯೆ | ಕಾಪಾಡೊ ಇವಳಾ 4 ಭವ ಪತಿ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ವೇದವ್ಯಾಸಾ ಶ್ರೀ ಹರೇ | ನಿನ್ನ ಶ್ರೀಪಾದಉದಕೇಜ - ತೋರಿಸೋ ಪ ಹರಣ ಪ್ರಬೋಧ ಮುದ್ರಾಂಕನ ಅ.ಪ. ಕಾಲ | ಸಕಲ ಸದ್ಗುಣಧಾಮ - ಶ್ರೀ ಭೂಮಿ ದುರ್ಗೆ ಲೋಲ ||ಧೃತ - ಕಾಮ ಜನಕ ನಿಸ್ಸೀಮ ಮಹಿಮ - ತ್ರಿಧಾಮದಲಿ ಭಕ್ತಸ್ತೋಮ ವಿರಿಸಿದೆ - ಶ್ರೀರಾಮಾ - ಸುಧಾಮ - ರಿಪು ಭೀಮಾ | ಸುರಸಾರ್ವಭೌಮ 1 ವಿಧಿ ಪುತ್ರಾನ್ವಿತಗೋತ್ರಾರಿ ಪ್ರಿಯ ಸತ್ಯಾವಲ್ಲಭಚಿತ್ರಾ - ಸುವಿಚಿತ್ರಾ - ಸಮಗಾತ್ರಾ | ತೋರಿಸುತವಗಾತ್ರ 2 ಚಿನುಮಯಗುಣ ವಪುಷಾ | ಅನಂತ ಶೀರ್ಷಾಅನಿಲ ಹೃದಯಾಂತರ್ಗತ ||ಧೃತ - ಮನಸಿಜ ಪಿತ ಗುರುಗೋವಿಂದ ವಿಠಲನೆತನುಮನಧನವೆಲ್ಲ ನಿನದಾಗಿರುವುದೊಮುನಿವಂದ್ಯಾ - ಮುಕುಂದ - ಗೋವಿಂದ | ಕೊಡು ಎನಗಾನಂದ3
--------------
ಗುರುಗೋವಿಂದವಿಠಲರು
ವೇಶ ನಿಜ ವಿಲಾಸ ಪ. ಭಾಸುರ ಮಣಿಗಣಭೂಷಣ ದಿತಿಸುತ- ಭೀಷಣ ಸಜ್ಜನಪೋಷಣ ಕಪಿವರ ಅ.ಪ. ಕಂಜಸಖೋಪಮ ಕಮಲಾನನಾನತ ಸಂಜೀವನ ಹನುಮಾ ಮಂಜುಳ ವಜ್ರಶರೀರ ವೀರ ಹರಿ- ರಂಜನಾಂಜನಾಸುತ ಸದ್ಗುಣಯುತ 1 ನಿಗಮಾಗಮ ಪಾರಂಗತ ರಾಮಾ- ನುಗ ಪಾವನರೂಪ ಭಗವಜ್ಜನ ಭಾಗ್ಯೋದಯ ಭಾರತಿ ದೃಗುಚಕೋರಚಂದ್ರಮ ತ್ರಿಗುಣಾತ್ಮಕ 2 ಅಜಪದನಿಯತ ಭೂಭುಜಪತಿ ಪಾಂಡುತ- ನುಜ ಸುರವ್ರಜವಿನುತ ಕುಜನಧ್ವಾಂತನೀರಜಸಖ ಗರುಡ- ಧ್ವಜಶರಣ್ಯ ಶಾಶ್ವತ ತ್ರಿಜಗನ್ಮಯ 3 ವರಕಾರ್ಕಳಪುರ ಗುರು ವೆಂಕಟಪತಿ ಚರಣಾಗ್ರೇ ವಿರಾಜ ಶರಣಭರಣಯುತ ಕರುಣಾಕರ 4
--------------
ತುಪಾಕಿ ವೆಂಕಟರಮಣಾಚಾರ್ಯ
ವೈಕುಂಠವಾಸಿ ನಾರಾಯಣಗೆ ನೀಲಕಂಠ ವಿಶ್ವೇಶ್ವರಗೆ ಭಾಳಲೋಚನ ಭವಹಾರಕಗೆ ಮಂಗಲಂ ಜಯ ಮಂಗಲಂ ಪ ವಾಸುಕಿ ಫಣಿವರ ಭೂಷಿತಗೆ ಶೇಷ ಪರೀಯಂಕ ವಾಸನಿಗೆ ಮಂಗಲಂ ಜಯ ಮಂಗಲಂ 1 ಗಿರಿವರ ಬಿರುಳಲಿ ನೆಗಹಿದಗೆ ತರಳೆಗಂಗಾ ಜಲಧಾರನಿಗೆ ಮಂಗಲಂ ಜಯ ಮಂಗಲಂ 2 ಗಜರಾಜನ ಕಾಯ್ದ ಗೋವಿಂದಗೆ ಅಜಪಿತನಾದ ನಾರಾಯಣಗೆ ಮಂಗಲಂ ಜಯ ಮಂಗಲಂ 3 ಶಂಖಚಕ್ರಧರ ಶಂಕರ ಪ್ರಿಯಗೆ ಪಂಕಜಾಂಬಕ ವಿಷ್ಣು ವಲ್ಲಭಗೆ ರಂಗರಕ್ಷಕ ಮಹಾಬಲೇಶ್ವರಗೆ ಮಂಗಲಂ ಜಯ ಮಂಗಲಂ 4
--------------
ಶಾಂತಿಬಾಯಿ
ವೈಚಾರಿಕತೆ ಆವ ಕರ್ಮವೊ ಇದು ಆವ ಧರ್ಮವೊಆವ ಕರ್ಮವೆಂದರಿಯೆ, ಹಾರುವರಿವರು ಬಲ್ಲರೆ ಪ ಸತ್ತವನು ಎತ್ತ ಪೋದಸತ್ತು ತನ್ನ ಜನ್ಮಕೆ ಪೋದಸತ್ತವನು ಉಣ್ಣುವನೆಂದುನಿತ್ಯ ಪಿಂಡವಿಕ್ಕುತೀರಿ1 ಎಳ್ಳು ದರ್ಭೆ ಕೈಲಿ ಪಿಡಿದುಪಿತರ ತೃಪ್ತಿ ಪಡಿಸುತೀರಿಎಳ್ಳು ಮೀನು ನುಂಗಿ ಹೋಯಿತುದರ್ಭೆ ನೀರೊಳು ಹರಿದು ಹೋಯಿತು 2 ಎಡಕೆ ಒಂದು ಬಲಕೆ ಒಂದುಎಡಕೆ ತೋರಿಸಿ ಬಲಕೆ ತೋರಿಸಿಕಡು ಧಾವಂತ ಪಡಿಸಿಕಟಿಯ ಹಸ್ತದೊಳಗೆ ಪಿಡಿಸುತೀರಿ 3 ಮಂತ್ರಾಕ್ಷತೆಯ ಕೈಗೆ ಕೊಟ್ಟುಮೋಕ್ಷವನ್ನು ಹಾರೈಸುವಿರಿಮಂತ್ರವೆಲ್ಲೊ ಅಕ್ಷತೆಯೆಲ್ಲೊಮೋಕ್ಷವೆಲ್ಲೊ ಮತ್ರ್ಯವೆಲ್ಲೊ4 ಹೇಳುವವನು ಅವಿವೇಕಿಕೇಳುವವನು ಅಜ್ಞಾನಿಹೇಳುವ ಕೇಳುವ ಇಬ್ಬರ ಸೊಲ್ಲಆದಿಕೇಶವಮೂರ್ತಿ ಬಲ್ಲ5
--------------
ಕನಕದಾಸ
ವೈದೇಹಿ ಪಾಲಿಸೆನ್ನಂ ನಂಬಿದೆ ನಿನ್ನಂ ಪ. ವೇದವಿದಿತೇ ತವಪಾದವ ಸ್ಮರಿಸುವ ಕರವ ಅ.ಪ. ಕಾಮಿತಾರ್ಥವ ನೀಡುವಳೆಂಬುವ ಬಿರುದಾಂಕಿತೆಯಾಗಿರುವ ಕಾಮಜನನೀ ನಿನ್ನ ನಾಮ ಮಂತ್ರಗಳನ್ನು ನೇಮನಿಷ್ಠೆಯೋಳ್ ಜಪಿಸುವಂದದಿ ಸು ಪ್ರೇಮದಿಂದಲಿ ವಿಮಲಮತಿಕೊಡು 1 ಜಾನಕಿನಾಮವ ಧರಿಸಿ ದಾನವಕುಲವೆಂಬ ಕಾನನಂಗಳಿಗಂತು ಹವ್ಯ ವಾಹನನೆನಿಪ ರಾಮನ ಕೈಯಪಿಡಿದ ಪರಮಪಾವನೆ 2 ಶಮದಮಾದಿಗಳಿಂದ ಮೆರೆಯುತಲಿರ್ಪ ಕ್ಷಮೆಗೆ ನೀ ನೆಲೆಯೆಂದು ಯಮಿಕುಲವರ್ಯರು ನಮಿಸಿ ಸ್ತುತಿಸುತ್ತಿಹರು ವಿಮಲ ಶೇಷಾದ್ರಿನಾಥನ ರಮಣಿ ನಿನ್ನಡಿ ಮಣಿದು ಬೇಡುವೆ 3
--------------
ನಂಜನಗೂಡು ತಿರುಮಲಾಂಬಾ