ಒಟ್ಟು 10607 ಕಡೆಗಳಲ್ಲಿ , 130 ದಾಸರು , 5708 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮುತ್ತಿ ಎನಗೆ ಬಡಿತವ್ವ ಹರಿ ಭಕ್ತರ ಮನಿಯನ ದೆವ್ವ ಪ ಅತ್ತಿತ್ತಮಾಡಿ ಬೆನ್ನ್ಹತ್ತಿ ಬಿಡದೆ ಎನ್ನ ನೆತ್ತಿಕೊಂಡು ಓಡ್ಹೋಯ್ತವ್ವ ಅ.ಪ ಬಿದ್ದರೆ ಬೀಳಗೊಡಲಿಲ್ಲವ್ವ ಸುಮ್ಮ ನಿದ್ದರೆ ಇರಗೊಡಲಿಲ್ಲವ್ವ ಬುದ್ಧಿಭ್ರಮಿಸಿ ಬಲುಗದ್ದಲಮಾಡೆನ್ನ ಮುದ್ದಿಟ್ಟೆಬ್ಬಿಸಿಕೊಂಡ್ಹೋಯ್ತವ್ವ 1 ಉಟ್ಟದಟ್ಟಬಿಡಿಸೊಗಿತವ್ವ ಬಂದ ಎರವು ಮಾಡಿತವ್ವ ವೊಷ್ಟು ಬಿಡಿಸಿ ಎನ್ನ ಗಟ್ಟ್ಯಪ್ಪಿ ತಿರುಗದ ಬೆಟ್ಟಕ್ಕೆ ಎಳಕೊಂಡ್ಹೋಯ್ತವ್ವ 2 ಭೋರಿಟ್ಟತ್ತರು ಎನ್ನ ಬಳಗವ್ವ ಸಮೀ ಪಾರನು ಬರಗೊಡಲಿಲ್ಲವ್ವ ಸಾರಸೌಖ್ಯಕ್ಕಾಧಾರ ಶ್ರೀರಾಮಪಾದ ಸೇರಿಸಾನಂದಪದವೇರಿಸಿತವ್ವ 3
--------------
ರಾಮದಾಸರು
ಮುತ್ತಿನ ಆರತಿಯ ತಂದೆತ್ತೀರೆ ಲಕ್ಷ್ಮಿಗೆ ಮುತ್ತೈದೆಯರು ಜಯ ಪ ರತ್ನಮಂಟಪದೊಳು ವರ ಮಹ- ಲಕ್ಷ್ಮಿಯ ಕುಳ್ಳಿರಿಸಿ ಮುತ್ತಿನ್ಹಾರಗಳ್ಹಾಕಿ ಮುತ್ತೈದೆಯರು ಜಯ 1 ಮಿತ್ರೆ ಮಹಲಕ್ಷುಮಿಯ ಬಹು ಸಿಸ್ತಿಲಿ ಶೃಂಗರಿಸಿ ಉತ್ತಮಾಂಗನೆಗೀಗ ಮುತ್ತೈದೆಯರು ಜಯ2 ಕರ್ತೃ ಶ್ರೀಹರಿ ಎನ್ನುತ ಕಮಲನಾಭ ವಿಠ್ಠಲನರಸಿಗೀಗ ಎತ್ತಿ ಚಾಮರ ಬೀಸಿ ಮುತ್ತೈದೆಯರು ಜಯ3
--------------
ನಿಡಗುರುಕಿ ಜೀವೂಬಾಯಿ
ಮುತ್ತಿನಾರತೀ ತಂದೆತ್ತಿಪಾಡುವೆ ಚಿತ್ತಜಾತ ಜನಕ ರಂಗನಾಥದೇವಗೆ ಪ. ಭೂಮಿಪಾಲಗೆ ಶ್ರೀ ಭಾಮೆಯರಸಗೆ ದಾತ ಮನೋ ಮೋಹನಾಂಗಗೆ 1 ಕಾಳೀಮಡುವನು ಕಲಕಿ ಬಂದಗೆ ಬಾಲನಾಗಿ ಗೋವುಗಳನು ಕಾಯ್ದ ಗೊಲ್ಲಗೆ 2 ಮುರವಿರೋಧಿಗೆ ಕರುಣವಾರ್ಧಿಗೆ ತರಳ ಧ್ರುವನಿಗೊಲಿದು ಬಂದ ವರದರಾಜಗೆ 3 ಶರಣರಕ್ಷಣೆ ಸರಸಿಜಾಕ್ಷಗೆ ಪರಮ ಪಾವನ ಶೇಷಶೈಲ ಶಿಖರ ಧಾಮಗೆ 4
--------------
ನಂಜನಗೂಡು ತಿರುಮಲಾಂಬಾ
ಮುತ್ತೈದೆ ಜಯ ಜಯ ಮುತ್ತೈದೆ ಜಯ ಜಯ ಮುತ್ತೈದೆಯರು ಪಾಡುತ ಜಯ ಜಯ ಮುತ್ತಿನಾರತಿ ಎತ್ತುತಾ ಪ ಪೃಥ್ವಿಗೊಡೆಯ ಪುರುಷೋತ್ತಮ ಹರಿಗೀಗ ಮುತ್ತಿನಾರತಿ ಎತ್ತುತಾ ಜಯ ಜಯ ಮುತ್ತೈದೆಯರು ಪಾಡುತಾ 1 ಮಿತ್ರೆ ರುಕ್ಮಿಣಿ ಸತ್ಯಭಾಮೆಯರರಸಗೆ ರತ್ನದಾರತಿ ಎತ್ತುತಾ ಜಯ ಜಯ ಮುತ್ತೈದೆಯರು ಪಾಡುತಾ 2 ಮಮತೆಯಿಂದಲಿ ಕಮಲನಾಭ ವಿಠ್ಠಲನಿಗೆ ಕನಕದಾರತಿ ಎತ್ತುತಾ ಜಯ ಜಯ ಮುತ್ತೈದೆಯರು ಪಾಡುತಾ3
--------------
ನಿಡಗುರುಕಿ ಜೀವೂಬಾಯಿ
ಮುದದಿ ನಕ್ರನ ಕೊಂದು ಸಲಹಿದ ಸದುಭಕುತರ ಬಂಧು 1 ನಾರಿಯು ತನ್ನ ಕರೆದಾ ಮಾತ್ರದಿ ಸೀರೆಯ ಮಳೆಗರೆದಾ ಕ್ರೂರ ಖಳರ ಮುರಿದಾ ಪಾಂಡವ- ರಾರಣ್ಯದಿ ಪೊರೆದಾ ನಾರಗೆ ಅಜಮಿಳ ನಾರಾಯಣನೆನೆ ಪಾರುಗಾಣಿಸಿದಪಾರಗುಣನಿಧಿಯಾ 2 ಒಂದು ಬಾರಿಗೆ ಶ್ರೀಶನ ನೆನೆದರೆ ದುರಿತ ನಾಶಾ ಬೆಂದದ್ದು ಬಹುಪಾಶಾ ಅವಗಿ- ನ್ನೆಂದಿಗಿಲ್ಲವೊ ಕ್ಲೇಶಾ ತಂದೆ ಕದರಂಡಲಗಿ ಹನುಮಯ್ಯನೊಡೆಯ ಗೋ- ವಿಂದನ ನೆನೆದವರೆಂದಿಗು ಧನ್ಯರು 3
--------------
ಕದರುಂಡಲಗಿ ಹನುಮಯ್ಯ
ಮುಂದೆನಗೆ ಗತಿಯೇನೋ ಇಂದಿರೇಶಾ ತಂದೆ ನೀನೆಂದೆನುತ ತಪ್ಪನೊಪ್ಪಿಸುವೇ ಪ ಶ್ರೀಕಾಂತನೇ ನಿನಗೆ ಅಭಿಷೇಕ ಮಾಡದೆಯೆ ನಾ ಕಂಠಪರಿಯಂತ ಕುಡಿದೆನೊ ಹಾಲ ಬೇಕೆಂದು ಹರಿವಾಸರಂಗಳಾಚರಿಸದೆಯೆ ಸಾಕೆಂಬವೊಲು ಸುಖವ ಸೂರೆಗೊಂಡೇ 1 ಅತಿಶಯದಿ ನಾನಿನ್ನ ಪೂಜೆಯನು ಮಾಡದೆಯೆ ಸತಿಸುತರೆ ಸರ್ವಸ್ವವೆಂದಿರ್ದೆನೋ ಹಿತಮಿತ್ರ ಬಾಂಧವರೊಳತಿ ವಂಚನೆಯಮಾಡಿ ಮತಿವಿಕಳನಾದೆನೋ ಪತಿತಪಾವನನೇ 2 ಕಲ್ಯಾಣ ಸಮಯದಲಿ ಕಲಹಗಳ ಹೂಡುತ್ತ ಉಲ್ಲಪದಿ ನಾಕುಳಿತು ನೋಡುತಿದ್ದೆ ಸಲ್ಲಲಿತ ವಾಕ್ಯಗಳನಾಡದೆಯೆ ಸರ್ವತ್ರ ಖುಲ್ಲುಮಾತುಗಳಾಡಿ ನೋಯಿಸಿದೆ ನರರ 3 ತಾರೆಂಬುದಕೆನಾನು ತೌರುಮನೆಯಾಗಿರುವೆ ಪಾರಮಾರ್ಥಕವಾಗಿ ಕೊಡುವುದರಿಯೆ ವೀರವೈಷ್ಣವರಲ್ಲಿ ವಂದಿಸದೆ ದೂಷಿಸುತ ಘೋರಪಾತಕಿಯಾಗಿ ಇರುವೆಯೀ ಜಗದಿ 4 ನರ್ಮದಾನದಿ ಸ್ನಾನ ನಿರ್ಮಲೋದಕಪಾನ ಧರ್ಮ ಮರ್ಮಗಳರಿತು ಮಾಡುವುದು ದಾನ ಪೆರ್ಮೆಯಂಶ್ರೀಹರಿಯ ಧ್ಯಾನ ನಿದಾನ ನೆಮ್ಮದಿಯ ಮಾರ್ಗದಿಂ ಪೊರೆ ನಾನು ದೀನ 5 ನಿತ್ಯ ಜೀವಿಸುವುದನ್ನು ಕಾಡದೆಯೆ ಕಡೆಯಲ್ಲಿ ಉಸಿರುಬಿಡುವುದನು ನೋಡುತ್ತ ಗುರುತರದ ಶ್ರೀಪತಿಯ ಪದಯುಗಕೆ ಗಾಢದಿಂ ಮುಡಿಯಿಕ್ಕಿ ಪಿಡಿವಂತೆ ಮಾಡು 6 ನೀನು ಒಲಿಯುವ ಪರಿಯದಾವುದನು ಮಾಡಿಲ್ಲ ಏನು ಮಾಡಲು ಎನಗೆ ಮನಸು ಬರದು ದೀನ ಪಾಲಕ ನಮ್ಮ ಹೆಜ್ಜಾಜಿ ಕೇಶವನೆ ಸಾನುರಾಗದಿ ನಿನ್ನ ಧ್ಯಾನಿಪುದ ನೀಡೈ7
--------------
ಶಾಮಶರ್ಮರು
ಮುದ್ದು ಕೃಷ್ಣ ಮುನಿ ಶರಣ ಉದ್ಧರಿಸು ನೀ ಉಡುಪಿ ರನ್ನ ಪ. ಮುದ್ದೆ ಬೆಣ್ಣೆ ಕೊಡುವೆ ಚೆನ್ನ ಮಧ್ವಮುನಿಯ ಮನ ಪ್ರಸನ್ನ ಅ.ಪ. ಲೀಲೆಯಿಂದ ಕೊಳಲನೂದಿ ಕಾಳಿಮಡುವ ಕಲಕಿ ನಿಂದ ಲೀಲೆ ಕೇಳೆ ಮನಕಾನಂದ 1 ನಿನ್ನ ಮಹಿಮೆ ಅಧಿಕವಾಗಿ ಎನ್ನ ಮನಕೆ ಹರುಷವಾಗಿ ಪನ್ನಗೇಂದ್ರಶಯನ ಸ್ವಾಮಿ ನಿನ್ನ ರೂಪ ತೋರೊ ಪ್ರೇಮಿ 2 ಪೊರೆ ಗೋಪಾಲಕೃಷ್ಣವಿಠ್ಠಲ ನಿರುತ ನಿನ್ನ ಚರಣ ಕಮಲ ಮೊರೆಯ ಹೊಕ್ಕೆ ಮರೆಯದೆನ್ನ ಕರುಣೆಯಿಂದ ಕಾಯೊ ಘನ್ನ 3
--------------
ಅಂಬಾಬಾಯಿ
ಮುದ್ದು ಕೃಷ್ಣನ್ನ ನೋಡ ಬನ್ನಿರೆಲ್ಲ ನಮ್ಮ ಸಿರಿ ಭೂಮಿ ನಲ್ಲ ಪ. ಪಂಚ ಪಂಚ ಉಷಃ ಕಾಲದಲಿ ಎದ್ದು ಯತಿವರರು ಪಂಚಬಾಣನ ಪಿತಗೆ ನಿರ್ಮಾಲ್ಯ ತೆಗೆದು ಪಂಚ ಗಂಗೋದಕದಿ ಸ್ನಾನಗೈಸುತ ಹರಿಗೆ ಪಂಚವಿಧ ಪಕ್ವಾನ್ನ ಉಣಿಸಿ ದಣಿಸಿಹರು 1 ಕಾಲ್ಕಡಗ ಗೆಜ್ಜೆ ಪೈಜಣ ಘಲ್ಲು ಘಲ್ಲೆನುತ ಮೇಲೆ ಉಡುದಾರ ಉಡುಗೆಜ್ಜೆ ನಡುವಿನಲಿ ಬಾಲಕೃಷ್ಣಗೆ ಅಸಲಿ ಹುಲಿ ಉಗುರು ಹೊನ್ನು ಸರ ತೋಳ ಬಾಪುರಿಗಡಗ ಉಂಗುರಗಳ್ಹೊಳೆಯೆ 2 ಮುದ್ದು ಮುಖಕೊಂದು ಮೂಗುತಿ ಕರ್ಣಕುಂಡಲವು ಕದ್ದು ಬೆಣ್ಣೆಯನು ಕಡಗೋಲ ಪಿಡಿದಿಹನು ತಿದ್ದಿದ ತಿಲುಕ ಮುಂಗುರುಳೂ ಮುತ್ತಿನ ಸಾಲು ಶುದ್ಧ ಚಿನ್ನದ ರತ್ನ ಮಕುಟ ಶಿರದಲ್ಲಿ 3 ರಮ್ಯವಾಗಿಪ್ಪ ವೈಕುಂಠಪುರಿಯನೆ ಬಿಟ್ಟು ಜನ್ಮಸ್ಥಳವಾದ ಗೋಕುಲವ ತ್ಯಜಿಸಿ ತಮ್ಮವರಿಗಾಗಿ ಕಟ್ಟಿದ ದ್ವಾರಕಿಯ ಕಳೆದು ಬ್ರಹ್ಮಾದಿ ವಂದ್ಯ ತಾನಿಲ್ಲಿ ನೆಲೆಸಿಹನು 4 ಅಪಾರ ಮಹಿಮನು ಆನಂದ ತೀರ್ಥರಿಗೊಲಿದು ಪಾಪಿ ಜನರುಗಳ ಉದ್ಧರಿಸಬೇಕೆಂದು ಶ್ರೀಪತಿಯು ತಾ ಪುಟ್ಟ ರೂಪಧಾರಕನಾಗಿ ಗೋಪಾಲಕೃಷ್ಣವಿಠ್ಠಲನಿಲ್ಲಿ ನಿಂತ 5
--------------
ಅಂಬಾಬಾಯಿ
ಮುದ್ದು ಮುಖದ ಲಕುಮಿ ಎನಗೆ ಶುದ್ಧ ಜ್ಞಾನವÀ ನೀಡೆ ಪ. ಬಿದ್ದಿಹೆ ನಿನ್ನ ಪದದಲಿ ನಿರುತ ಮದ್ಬಿಂಬನ ತೋರೆ ಅ.ಪ. ಹರಿಸರ್ವೋತ್ತಮ ಸುರರಕ್ಷಕನೆಂಬ ಖರೆಯ ಜ್ಞಾನವ ನೀಡೆ ಕರಕರೆಗೊಳಿಸದೆ ದುರ್ವಿಷಯದಲೆನ್ನ ಹರಿಯ ಧ್ಯಾನವನೀಡೆ 1 ನಗೆಮೊಗ ಚಲುವೆ ಖಗವಾಹನ ಪ್ರಿಯೆ ಜಗದೊಡೆಯನ ತೋರೆ ನಿತ್ಯ ಬಗೆ ಬಗೆ ಲೀಲೆಯ ಸುಗುಣವಂತೆ ತಿಳಿಸೆ 2 ಸೃಷ್ಟಿಕರ್ತಗೆ ಪಟ್ಟದ ನಾರಿಯೆ ದೃಷ್ಟ ಇಂದ್ರಿಯವಳಿಯೆ ಮುಟ್ಟಿ ಭಜಿಪೆ ನಿನ್ನ ಶ್ರೇಷ್ಠ ಶ್ರೀ ಗೋಪಾಲಕೃಷ್ಣವಿಠ್ಠಲ ಸತಿಯೆ 3
--------------
ಅಂಬಾಬಾಯಿ
ಮುದ್ದು ಮೋಹನ ಗುರುಗಳಂಘ್ರಿ | ಶ್ರದ್ಧಾ ಭಕುತೀಲಿಬುದ್ಧಿ ಪೂರ್ವಕ ಭಜಿಪ ಜನರ | ನ್ನುದ್ಧರೀಸುವಾ ಪ ಕರ್ಮ ನಿಷ್ಠಾತೃಸುಮ್ಮನಸ ವಿಜಯಗುರವ | ನಮ್ಮಿತುತಿಸುವ 1 ತೀರ್ಥಕ್ಷೇತ್ರ ಚರಿಸೂತ | ಮೂರ್ತಿದರ್ಶನಾಸಾರ್ಥಕವ ಮಾಡಿಕೊಂಡ | ತೀರ್ಥಪಾವನಾ |ಕಾರ್ತಸ್ವರೇತ್ಯಾದಿವಿತ್ತ | ಪಾರ್ಥಿವಸಮಾಶಾಸ್ತ್ರ ಪ್ರಾಕೃತಾದಿ ತಿಳಿಪ | ಹರಿ ಸರ್ವೋತ್ತಮ 2 ಶ್ರೀ ವರರಿಂದುಪದಿಷ್ಟ | ವಿಠಲ ಪ್ರತಿಷ್ಟಓ ವಿಸಾಧೀಸಲು ಹರಿಯೊಳ್ | ಪ್ರಾಯೋಪವಿಷ್ಟ |ಭಾವಿ ಬ್ರಹ್ಮನಲ್ಲಿ ಗುರು ಗೋವಿಂದ ವಿಠಲನಭಾವ ಅಷ್ಟ ಕುಸುಮದಿ | ಸೇವಿಸೀದನ 3
--------------
ಗುರುಗೋವಿಂದವಿಠಲರು
ಮುದ್ದು ಮೋಹನ ದಾಸ | ತಿದ್ದಿಯನ್ನಯ ದೋಷಉದ್ಧರಿಸೊ ಬುಧತೋಷ | ನಮಿಪೆ ನಿನ್ನನಿಶಾ ಪ ದಾಸ ದೀಕ್ಷೆಯ ವಹಿಸಿ | ಕ್ಲೇಶಗಳ ಬಹುದಹಿಸಿದೇಶ ದೇಶವ ಚರಿಸಿ | ಹರಿ ಪ್ರತಿಮೆಗಳ ಭಜಿಸಿ | ಮೀಸಲೆನಿಸಿದ ಮತವ | ವ್ಯಾಸರಿಗೆ ಸಮ್ಮತವದಾಸರಾಯರ ಮಾತ | ಬೀರಿರುವ ಖ್ಯಾತಾ1 ಕರಿಗಿರಿಯ ದುರ್ಗದಲಿ | ವರ ರಥೋತ್ಸವ ಸಮಯನರಸಿಪುರ ಶೇಷಪ್ಪ | ವರ ಕುವರ ನಾಗಾಖ್ಯಗೆಕರುಣಿಸುತ ಲಂಕಿತವ | ಪರಿಸರನ ಮತರಸವಒರೆದು ಸಲಹಿದೆ ಗುರುವೆ | ನೀ ಪರಮ ಗುರುವೇ 2 ಸುಜನ | ಆರ್ತರುದ್ಧರಣಾ 3 ತಂಬ್ರೂಹಿ ಎನುವಂಥ | ತಂಬೂರಿ ನೀ ಕೊಡುತತುಂಬಿ ದ್ವ್ಯೊಭವದಿಂದ | ಪೊರೆದೆ ಮುದದಿಂದಾ |ಉಂಬುಡುವುದೂ ಹರಿಗೆ | ಕೊಂಬ ಸರ್ವವ ಹರಿಗೆಎಂಬ ಜ್ಞಾನವನಿತ್ತು | ಸಂಭ್ರಮವ ಬಿತ್ತೂ 4 ಅಮಿತ ಗುಣ ಪೂರ್ಣಾ |ಸಿರಿಪತಿ ಶ್ರೀಗುರೂ | ಗೋವಿಂದ ವಿಠ್ಠಲನಉರುತರದಿ ಭಜಿಪಂಥ | ಕರುಣಿಸೆಲೊ ಪಂಥ 5
--------------
ಗುರುಗೋವಿಂದವಿಠಲರು
ಮುದ್ದು ಮೋಹನರೇಯ | ಅಸ್ಮದ್ಗುರೋರ್ಗುರುಮುದ್ದು ಮೋಹನ ಪ್ರೀಯ | ಲೋಕೈಕ ವಂದ್ಯನೆಮಧ್ವಮುನಿ ಸಂಪ್ರೀಯ | ಕಾಯಯ್ಯ ಜೀಯ ಪ ಉದರ ವಾಸಿತ ಸೃಜ್ಯ ಜೀವರ | ಸದಯದಿಂದಲಿ ಸೃಜಿಸಲೋಸುಗಮುದದಿ ಬಯಸುತ ಶ್ರೀಧರ ಹರಿ | ವದಗಿ ಚತುರ ವ್ಯೂಹ ರಚಿಸಿದ ಅ.ಪ. ಮಾಧವಗೆ ಪ್ರಿಯೆ ಅಂಭ್ರಣೀ | ಪ್ರಲಯಾಬ್ದಿ ಶಯನನಆದರದಿ ತ್ರಯಕಭಿಮಾನಿ | ತುತ್ತಿಸಲು ಜಗವನುಮೋದದಲಿ ಸೃಜಿಸುವ ಹವಣೀ | ಶ್ರೀಹರಿಯು ತಾನುಗೈದು ರೂಪ ಸುಧಾರಣೀ | ವಾಸುದೇವಭಿಧಾನಿ ||ಆದಿ ಸೃಷ್ಟಿಯ ಮಾಡಲೋಸುಗ | ಆದಿ ಮಾಯಾತ್ಮಿಕೆಯು ಲಕ್ಷ್ಮಿಯಮೋದದಿಂದಲಿ ಕೂಡುತಲೆ ತಾ | ಸಾಧಿಸಿದ ತಾರತಮ್ಯ ಸೃಷ್ಟಿಯ 1 ಕೃತಿ ಕೃತಿ ಶ್ರದ್ಧೆಯರಾಗ ಸೃಜಿಸಿದ 2 ಸೂತ್ರ ಶ್ರದ್ಧೆಯರಿಂದ | ಕಾಲಮಾನಿಯ ನಂದಗರುಡನ್ನ ಸೃಜಿಸುತ ನಂದ | ಬೆರೆದು ಶಾಂತಿಯಲಿಂದ ||ಧೀರ ಗುರು ಗೋವಿಂದ ವಿಠಲನು | ಶೂರ ಅನಿರುದ್ದಾಭಿಧಾನದಿನಾರ ವಾಣಿ ಬ್ರಹ್ಮರಿಂದಲಿ | ಮೂರು ವಂದರ ವ್ಯೂಹ ರಚಿಸಿದ 3
--------------
ಗುರುಗೋವಿಂದವಿಠಲರು
ಮುದ್ದು ಸುರಿಯುತಾನೆ ನೋಡಿ ಕೃಷ್ಣ ಪ ಮುದ್ದು ಸುರಿಯುತಾನೆ ಸಿದ್ಧ ಜನರ ವಂದ್ಯ ಮಧ್ವವಲ್ಲಭ ಕೃಷ್ಣ ಹೃದ್ವನಜದಲಿ ಬಲ್ ಅ.ಪ ತ್ರಿವಂಗಿ ಭಾವದಿ ಶ್ರೀ ವೇಣುಪಿಡಿದು ತಾ ಸಾವೇರಿ ಮೊದಲಾದ ರಾಗವ ಪಾಡುತ1 ಬಲದ ಪಾದದಿ ಚೆಲುವ ಎಡದ ಪಾದವನಿಟ್ಟು ನಳಿನಮುಖಿ ರುಕ್ಮಿಣಿ ಬಲ ಸತ್ಯಭಾಮೇರಿಂದ 2 ಧ್ವಜ ವಜ್ರಾಂಕುಶ ಚಕ್ರ ಕಂಜಚಿನ್ಹೆಗಳಿಂದ ತೇಜ ಮುಕುಟ ಶಿರಶ್ಚಕ್ರ ಶೋಭಿತಮುಖ 3 ಶ್ರೀ ಪಾದರಾಯರಿಗೆ ಸ್ವಪ್ನಲಬ್ಧನಾಗಿ ಶ್ರೀ ಪದ್ಮಭವಂದ್ಯ ಪ್ರತ್ಯಕ್ಷ ವ್ಯಾಸಮುನಿಗೆ 4 ಶ್ರೀ ನರಹರಿಯು ತಾ ನೆನೆಯುವರಿಗೆ ಭವ ಕಾನನದ ಭಯದ ಮನ ಶಂಕಿಸದಿರೆಂದು5
--------------
ಪ್ರದ್ಯುಮ್ನತೀರ್ಥರು
ಮುನಿದಳ್ಯಾತಕ ನೀರೇ ಪಾರ್ವತಿ ಮಾಡಸವರತಿ ಪ ತಾಪ ಮಿಡಿಯಲಿ ದೇಹ ಕೆಡುವ ದಿದೆಂದು | ಜಡಿಯಲ್ಲಿ ಗಂಗೆಯ ಭರಿಸಿದ | ನಾರು ಧರಿಸಿದ ಈ ದುಗುಡ ತಪ್ಪೇನಿಂದು 1 ಇಂದು ವದನೆಯನ್ನಾ ಪದಕನು | ಅದಾಶೇಷನು ಅವನ ಮುಂದಲೆಯೊಳು | ತಾನೊಂದು ಬಗೆದಳು |2 ಎನಗೆ ನಿನಗೆ ಎರಡ್ಯಾಕೆಂದು | ಆಲಿಂಗನಲಿಂದು | ಅರ್ಧ ತನುವನೆ ನೀಡಿ | ಸಾರಥಿ ಘನ ಕರುಣವ ಮಾಡೀ | 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮುನಿಯ ನೋಡಿರೊ ವಂದನಿಯ ಮಾಡಿರೊ ಕನಸಿನೊಳಗೆ ನೆನೆದ ವರವ ಕ್ಷಣದಲೀವ ಘನ ಸಮರ್ಥ ಪ ತೊಲಗದಿಪ್ಪ ಭೂತಪ್ರೇತ ನೆಲೆಯಾಗಿರಲು ಇವರ ಚರಣ ತೊಳೆದ ಜಲವು ಬೀಳಲಾಕ್ಷಣ ಹಲುಬಿಕೊಳುತಲಳಿದು ಪೋಗೋವು 1 ಹಿಂದೆ ವ್ಯಾಸ ಮುನಿಗಳಿಂದ ನೊಂದು ನಮಿತರಾಗಿ ಅವರಿಂದ ಭೇದವರಿತು ಗೋ ವಿಂದ ಒಡೆಯನೀತ 2 ಮೊದಲು ಹೇಮಕಶ್ಯಪಜನ ಬದಿಯಲಿದ್ದು ತತ್ವ ಜ್ಞಾನ ಮುದದಿ ತಿಳಿದು ಮಾಯಿ ಶಾಸ್ತ್ರ ವೊದೆದು ಕಳೆದ ನಿಜ ಸದಮಲ ಸಮರ್ಥ 3 ಮಧ್ವಮತಾಂಬುಧಿಯೊಳು ಪುಟ್ಟಿ ಅದ್ವೈತ ಮತವನೆಲ್ಲ ಸದದು ಸದ್ವೈಷ್ಣವರನ್ನ ಪಾಲಿಸಿ ಊಧ್ರ್ವ ಲೋಕದಲ್ಲಿ ಮೆರೆದ4 ವರಸತ್ಯಾಭಿನವತೀರ್ಥರ ಕರಕಂಜದಿಂದ ಜನಿಸಿ ವೇಲೂರ ಪುರಪಯೋನಿಧಿವಾಸ ಜಗದ ದೊರೆ ವಿಜಯವಿಠ್ಠಲನ್ನದಾಸ5
--------------
ವಿಜಯದಾಸ