ಒಟ್ಟು 5630 ಕಡೆಗಳಲ್ಲಿ , 130 ದಾಸರು , 3590 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಹಾದಾದಿದೇವ ನಮೋ ಮಹಾಮಹಿಮನೆ ನಮೋಪ್ರಹಲ್ಲಾದವರದ ಅಹೋಬಲ ನರಸಿಂಹ ಪ.ತರಣಿಗುಬ್ಬಸವಾಗೆ ತಾರಾಪತಿಯು ನಡುಗೆಸುರರು ಕಂಗೆಟ್ಟೋಡೆ ನಭವ ಬಿಟ್ಟು ||ತರುಗಿರಿಗಳಲ್ಲಾಡೆ ಶರಧಿಗಳು ಕುದಿದುಕ್ಕೆಉರಿಯನುಗುಳುತ ಉದ್ಭವಿಸಿದೆಯೊ ನರಸಿಂಹ 1ಸಿಡಿಲಂತೆ ಗರ್ಜಿಸುತೆ ಕುಡಿಯ ನಾಲಗೆ ಚಾಚಿಅಡಿಗಡಿಗೆ ಹುಂಕರಿಸಿ ಕಡುಕೋಪದಿಂದ ||ಮುಡಿವಿಡಿದು ರಕ್ಕಸನ ಕೆಡವಿ ನಖದಿಂದೊತ್ತಿಬಿಡದೊಡಲ ಬಗೆದ ಕಡುಗಲಿ ನಾರಸಿಂಹ 2ಸರಸಿಜೋದ್ಭವ ಹರ ಪುರಂದರಾದಿ ಸಮಸ್ತಸುರರು ಅಂಬರದಿ ಪೂಮಳೆಗರೆಯಲುಸಿರಿಸಹಿತ ಗರುಡಾದ್ರಿಯಲಿ ನಿಂತು ಭಕುತರನುಕರುಣಿಸುವ ಪುರಂದರವಿಠಲ ನಾರಸಿಂಹ 3
--------------
ಪುರಂದರದಾಸರು
ಮಹಾದೇವ ಶಿತಿಕಂಠ ದಾಸ ಕಲ್ಪಮಹೀಜ ಬಿನ್ನವಿಪೆ ನಿರ್ದೋಷ ||ಆಹಾ ||ಕುಹಕಾರಿ ಹರಿಪಾದ ಮಹಿಮೆ ಕೊಂಡಾಡಿಸೊ |ಗಹನವಿಕ್ರಮಭೀಮ ಮಹೀಧರಪ ಜಾಧವ ಪಸ್ಫಟಿಕಾಭ ಶ್ರೀಕಂಠ ದಕ್ಷ ಧ್ವಂಸಿ |ನಿಟಿಲಲೋಚನ ಸುರಪಕ್ಷ ಹೇ || ಧೂ |ರ್ಜಟ ಹೀನ ವಿಷಯಾಖ್ಯ ಕಕ್ಷವಹ್ನಿ|ಕುಟಿಲತ್ವ ಬಿಡಿಸತಿ ದಕ್ಷ ||ಆಹಾ||ಕಠಿಣ ಸಂಸಾರದಿತ್ರುಟಿಮಾತ್ರ ಸುಖ ಕಾಣೆ |ವಟುರೂಪಿ ಭಕುತರ ಕಟಕದೊಳಿರಿಸೆನ್ನ1ಇಳಿರಥ ನಗಶರಸೋಮಮೌಳಿ|ನಳನಂದಿನಿಪ ಸುತ ರಾಮ ನಾಮಾ |ನಲಿದು ಪಾಡುವ ಗುಣಧಾಮ ರೌಪ್ಯಾ |ಬಲಾವಾಸಾನಂಗ ವಿರಾಮಾ ||ಆಹಾ||ಹಲವರಾಶ್ರಯಿಸಿ ನಾ ಬಲು ನೊಂದೆನೋರ್ವರು ಕಾಯ್ವ |ಸುಳಿವು ಕಾಣೆನೋ ಹೇ ಗರಳಕಂಠ ಪೊರೆಯೆನ್ನ 2ಪಂಚ ಸುಸ್ಮಿತ ಯುಕ್ತ ವದನಾ ನಿಷ್ಪ್ರ |ಪಂಚ ಗಜಾಸುರ ಹನನಾ ಏಕಪಂಚಾಸ್ಯ ಜನಕ ಕೇಶವನಾ ಪ್ರೀತಿ |ಮಂಚ ನೀನಾಹೆ ಖಳರನಾ ||ಆಹಾ||ಹಿಂಚಾಗಿ ಅಳಿವಂಥ ಹಂಚಿಕೆಯಲಿವರ|ಮುಂಚೆ ಕರೆದು ಕೊಟ್ಟು ವಂಚಿಪೆ ಅತ್ರಿಜ 3ಅಹಂಕಾರಾಧೀಶ ನಭೇಶತಾತ|ಮಹಾ ಮುನಿ ವಂದ್ಯಾಮರಾಸ್ಯ ಚಂದ್ರ |ದಿನಪತೇಕ್ಷಣನೆ ಅಶೇಷಾಮೋದ|ಬಹುಮೋದಸಕ್ತಾಯನ್ನಾಶಾ ||ಆಹಾ||ದಹಿಸೊಜಠರಪೋಷ ವಹಿಸಿ ಬೆಂಡಾದೆನೊ |ಅಹಿಮಲಾಂಧಕಾಸುರ ಗುಹಹ ಅಶ್ವತ್ಥಾಮ 4ಶಕ್ರಾವರಜ ಶ್ರೀ ಪ್ರಾಣೇಶ ವಿಠ್ಠಲ |ನಕ್ರಾಹನಂಘ್ರಿಯನಿಶದಲ್ಲಿ |ವಕ್ರವಿಲ್ಲದೆ ಸೇವಿಪೀಶ ಹೇ ತ್ರಿ- |ವಿಕ್ರಮಕರವ್ಯೋಮಕೇಶ||ಆಹಾ||ಶುಕ್ರಪೂಜಿತಪಾದಅಕ್ರೂರಯನ್ನೊಳಿ |ದ್ದ ಕ್ರಮವೆಣಿಸದೆ ಸುಕೃತವೊದಗಿಸೊ5
--------------
ಪ್ರಾಣೇಶದಾಸರು
ಮಾಮಝ ಭಾಪುರೆ ಭಳಿರೆ ಹನುಮಂತರಾಮಪದ ಸೇವಿಪ ವೀರ ಹನುಮಂತ ಪಹುಟ್ಟುತಲೆ ಹೊನ್ನ ಕಚ್ಚುಟವ ಕುಂಡಲವೆರಸಿನಿಷ್ಠೆಯಲಿ ರಘುಪತಿಯ ಪಾದವನೆ ಕಂಡು ||ದಿಟ್ಟಿ ಹರಿದಾಡಿ ಮನಮುಟ್ಟಿ ಪೂಜಿಸಲಜನಪಟ್ಟಕನುವಾದ ಸಿರಿವಂತ ಹನುಮಂತ 1ಅಂಬರಕೆ ಪುಟನೆಗೆದು ಅಂಬುಧಿಯನೆರೆದಾಟಿಕುಂಭಿನಿಯ ಮಗಳಿಗುಂಗುರವನಿತ್ತು |ಬೆಂಬಿಡದೆ ಲಂಕೆಯನು ಸಂಭ್ರಮದಿ ಸಖಗಿತ್ತೆಗಂಭೀರ ವೀರಾಧಿವೀರ ಹನುಮಂತ 2ಅತಿದುರಳ ರಕ್ಕಸನು ರಥದ ಮೇಲಿರಲು ರಘು-ಪತಿಯು ಪದಚರಿಯಾಗಿ ನಿಂತಿರಲು ನೋಡಿ ||ಪೃಥವಿ- ಗಗನಕೆ ಬೆಳೆದು ರಥವಾದೆ ಒಡೆಯನಿಗೆಅತಿ ಭಯಂಕರ ಸತ್ತ್ವವಂತ ಹನುಮಂತ 3ಒಡೆಯ ಉಣಕರೆಯಲಂದಡಿಗಡಿಗೆ ಕೈಮುಗಿದುದೃಢಭಕ್ತಿಯಿಂದ ಮೌನದಿ ಕುಳಿತು ||ಎಡಿಯಕೊಂಡೆದ್ದೋಡಿ ಗಗನದಿ ಸುರರಿಗೆಕೊಡುತ ಸವಿದುಂಡ ಗುಣವಂತ ಹನುಮಂತ 4ಪ್ರಥಮದಲಿ ಹನುಮಂತ ದ್ವಿತೀಯದಲಿ ಕಲಿಭೀಮತೃತೀಯದಲಿಗುರುಮಧ್ವಮುನಿಯೆನಿಸೀ ||ಪ್ರತಿಯಿಲ್ಲದಲೆ ಮೆರೆದೆಪುರಂದರವಿಠಲನಸುತ್ತ ನಿನಗಾರು ಸರಿ -ವಿಜಯಹನುಮಂತ5
--------------
ಪುರಂದರದಾಸರು
ಮಾಮವ ಮಮ ಕುಲಸ್ವಾಮಿ ಗುಹನತಜನ ದುರಿತಾಪಹ ಪ.ಭೀಮವೀರ್ಯ ನಿಸ್ಸೀಮಪರಾಕ್ರಮಧೀಮತಾಂವರ ನಿರಾಮಯ ಜಯ ಜಯ ಅ.ಪ.ಜ್ಞಾನಶಕ್ತಿ ಶತಭಾನುಭಾಸುರ ಪ್ರಸನ್ನಪಾವನ್ನಮೀನಕೇತನಸಮಾನ ಸಹಜ ಲಾವಣ್ಯಗಾನಲೋಲ ಕರುಣಾನಿಧಿ ಸುಮನಸ-ಸೇನಾನಾಥ ಭಾವನಿಸುತ ಸುಹಿತ 1ಪಟುತರಶಕ್ತಿ ಕುಕ್ಕಟ ಕುಲಿಶಾಭಯಶಯ ನಿರಪಾಯನಿಟಿಲಾಕ್ಷತನಯ ನಿಗಮಜÕ ಬಾಹುಲೇಯಕುಟಿಲ ಹೃದಯ ಖಲಪಟಲವಿದಾರಣತಟಿತ್ಸಹಸ್ರೋತ್ಕಟರುಚಿರಮಕುಟ2ಪಾವಂಜಾಖ್ಯ ಪವಿತ್ರ ಕ್ಷೇತ್ರಾಧಿವಾಸ ಸರ್ವೇಶದೇವ ಲಕ್ಷ್ಮೀನಾರಾಯಣಸ್ಮರಣೋಲ್ಲಾಸಸೇವಕ ವಿಬುಧಜನಾವಳಿಪಾಲಕಕೇವಲ ಸುಖಸಂಜೀವ ಜೀವನದ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಮಾಮವ ಯತಿಕುಲೋತ್ತುಂಗ ಪಶ್ರೀಮನೋಹರ ರಘು - ರಾಮ ಪದದ್ವಯತಾಮರಸ- ಯುಗ-ಭೃಂಗಅ.ಪಭರ್ಜಿತ ದೋಷತರಂಗ1ಸಾಧಿತ ಹರಿಮತ - ಭೇದಿತಪÀರಮತಛೇದಿತ - ಮಾಯಿ - ಪತಂಗ 2ತೋಷಿತಯದುವರ - ಪೋಷಿತದ್ವಿಜಕುಲದೂೀಷಿತ - ದುರ್ಜನ - ಸಂಘ 3ಮೋದಿತಸುಜನಾ - ರಾಧಿತ ಸುರಗಣಾ -ಸಾದಿತ ಶ್ರೀಹರಿಯಂಗ 4ದಾತಗುರುಜಗ- ನ್ನಾಥವಿಠಲಪದಪಾಥೋದ್ಭವ ಯುಗ ಸಂಗಾ 5
--------------
ಗುರುಜಗನ್ನಾಥದಾಸರು
ಮಾಯಿ ಬಗಳಾಂಬ ಸತ್ಯ ಬ್ರಹ್ಮ ರುದ್ರರತಾಯಿ ನಿಜ ಮುಕ್ತಿ ದಾಯಿ ನಂಬಿದವರತಾಯಿ ಈ ಅಜಾಂಡಾನಂತ ಕೋಟಿಯನುಕಾಯ್ವ ಕೊಲ್ವ ತಾಯಿಪಹೆಚ್ಚೇ ಕೋಪವು ಅವಡುಗಚ್ಚೆ ಕೇವಲರೌದ್ರಮುಚ್ಚೆ ಖಡ್ಗವ ಒರೆಯಿಂ ಬಿಚ್ಚೆ ಶತ್ರುಗಳೆದೆಬಚ್ಚೆ ಸಚ್ಚರಿತಳು ತಾ ಸವರಿಯೆ ರಿಪುಗಳನುನುಚ್ಚು ನುಚ್ಚನೆ ಮಾಡಿ ನಲಿವಅಂಬ1ಬಿಗಿದೆ ಬತ್ತಳಿಕೆಯಿಂದಲುಗಿದೆ ಶರವನೆ ಕೆನ್ನೆಗೆತೆಗೆದೆ ಬಿಡಲಿಕೆ ತಟ್ಟುಗಿದೆ ಪ್ರಾಣಗಳೆಲ್ಲವ ಮುಗಿಸಿದೆತೆಗೆದಸುರರ ತೆಕ್ಕೆಯಲಪ್ಸರೆಯರುನೆಗೆ ನೆಗೆದು ಹಾರಲು ನಸುನಗುವಅಂಬ2ತ್ಯಾಗಿ ಸರ್ವಸಾಮ್ರಾಜ್ಯಭೋಗಿಅಮಿತ್ರರೆಂಬರನೀಗಿಸರ್ವ ಶಾಂತಿಯದಾಗಿ ಭಕ್ತರ ಭಯ ಹೋಗಿಯೋಗಿಎನಿಪ ಚಿದಾನಂದ ಬಗಳೆನೀಗಿದಳೀಪರಿ ದ್ವೇಷಿಗಳೆಂಬರ3
--------------
ಚಿದಾನಂದ ಅವಧೂತರು
ಮಾಯೆಯ ಮಹಾ ಸರೋವರದೊಳಗೆ ಕಡೆಹಾಯ್ವರೊಬ್ಬರನು ಕಾಣೆಪಹರಿತಾ ಮುಳುಗಿದ ಹರ ತಾ ಮುಳುಗಿದಹಂಸವಾಹನನು ಮುಳುಗಿದನುಸುರಪತಿಮುಳುಗಿದಶಿಖಿತಾ ಮುಳುಗಿದಸುರಾಸುರರು ತಾ ಮುಳುಗಿದರು1ಸೂರ್ಯನು ಸುಧಾಂಶುಮುಳುಗಿದ ನವಗ್ರಹರೆಲ್ಲ ಮುಳುಗಿದರುಶೂರನು ಮುಳುಗಿದ ಶುಂಠನು ಮುಳುಗಿದ ಸ-ಚರಾಚರರೆಲ್ಲ ಮುಳುಗಿದರು2ಭಾಗ್ಯನು ಮುಳುಗಿದ ಬಡವನು ಮುಳುಗಿದಬಹುದರಿದ್ರನೂ ಮುಳುಗಿದನುಯೋಗ್ಯರು ಚಿದಾನಂದ ಭಕ್ತರುತಾವು ಕಂಡು ಮಾತ್ರ ಮುಳಗಲಿಲ್ಲ3
--------------
ಚಿದಾನಂದ ಅವಧೂತರು
ಮುಟ್ಟು ಚಟ್ಟೆಂದು ನಗುವಯ್ಯನಿನ್ನ ತಿಳಿಯಯ್ಯಮುಟ್ಟು ಚಟ್ಟೆಂಬುದು ನಗುವಯ್ಯಮುಟ್ಟಿದು ಆದುದು ನಿನ್ನಿಂದಲೆಮುಟ್ಟಿಗೆ ಸಾಕ್ಷಿಯು ನೀಪರವಸ್ತುಪತಿಂಗಳು ತಿಂಗಳು ರಕ್ತಕಲಕು ಘಟ್ಟಾಗಿ ಬಲಿತುಇಂಗಾ ಇಂಗಡದ ವಯವ ಜಿಗಿತುಅಂಗಾಯಿತು ತೆರದಅಂಗವ ಮುಟ್ಟಿರಿ ಮುಟ್ಟಿರಿ ಎಂದುಮಂಗನ ತೆರದಲಿ ಕುಣಿವುದು ಮುಟ್ಟು1ಮೃಗಜಲದಂತೆಮಾಯೆಮುಟ್ಟುಆದುದು ಯಥೇಷ್ಟಬಗೆಬಗೆ ರೂಪಳವಟ್ಟುತೋರಿದವದುರಿಟ್ಟುನಗಸಾಗರನದಿ ನರಸುರ ಕ್ರಿಮಿಪಶುನಗಧರಹರವಿಧಿ ಲೋಕವೆ ಮುಟ್ಟು2ಮುಟ್ಟು ಭಟ್ಟರು ಹೇಳುವಂತಿಲ್ಲಬೆಳಗಿದುದು ಎಲ್ಲಅಷ್ಟಾಗಿ ಕಳೆಥಳಿಥಳಿಪುದೆಲ್ಲತನ್ನರಿದವ ಬಲ್ಲಶಿಷ್ಟ ಚಿದಾನಂದ ನೀನೆಂದು ಕಾಣಲುಮುಟ್ಟಿಗೆ ಜಾಗವಿಲ್ಲ ನೀಚರ ವಸ್ತು ನಿಜ ಬ್ರಹ್ಮ3
--------------
ಚಿದಾನಂದ ಅವಧೂತರು
ಮುದ್ದು ತಾರೊ-ಕೃಷ್ಣ-ಎದ್ದು ಬಾರೊ |ಶುದ್ಧವಾದ ಕರ್ಪುರದ ಕರಡಿಗೆಯ ಬಾಯಲೊಮ್ಮೆ ಪಕಡೆಯುವ ಸಮಯಕೆ ಬಂದು ಕಡೆವಸತಿಯ ಕೈಯಪಿಡಿದು |ಬಿಡದೆ ಹೊಸ ಹೊಸ ಬೆಣ್ಣೆಯನು ಒಡನೆಮೆಲುವ ಬಾಯಲೊಮ್ಮೆ 1ವಿಷವನುಣಿಸಲು ಬಂದ ಅಸುರೆ ಪೂತನಿಯ ಕೊಂದ |ವಶವಲ್ಲವೊ ಮಗನೆ ನಿನ್ನ ವಿಷವನುಂಡ ಬಾಯಲೊಮ್ಮೆ 2ಪುರಂದರವಿಠಲನೆ ತೊರವೆಯ ನಾರಸಿಂಹ |ಹರವಿಯ ಹಾಲ ಕುಡಿದು ಸುರಿವ ಜೊಲ್ಲ ಬಾಯಲೊಮ್ಮೆ 3
--------------
ಪುರಂದರದಾಸರು
ಮುಪ್ಪಿನ ಗಂಡನ ಒಲ್ಲೆನೆ |ತಪ್ಪದೆ ಪಡಿಪಾಟ ಪಡಲಾರೆನವ್ವ............ ಪ.ಉದಯದಲೇಳಬೇಕುಉದಕ ಕಾಸಲು ಬೇಕು |ಹದನಾಗಿ ಬಜೆಯನು ಅರೆದಿಡಬೇಕು ||ಬದಿಯಲಿ ಎಲೆ ಅಡಿಕೆ ಕುಟ್ಟಿಡಬೇಕು |ಬಿದಿರಕೋಲು ತಂದು ಮುಂದಿಡಬೇಕು 1ಪಿತ್ತವೋಕರಿಕೆ ಮುದುಕರಿಗೆ ವಿಶೇಷವು |ಹೊತ್ತುಹೊತ್ತಿಗೆ ಜೊಲ್ಲ ಚೆಲ್ಲಬೇಕು ||ಮೆತ್ತನವೆರಡು ಮುದ್ದಿಯ ಮಾಡಲುಬೇಕು |ಒತ್ತೊತ್ತಿ ಕೂಗಿ ಕರೆಯಲುಬೇಕು ....... 2ಜಾಡಿ ಹಾಸಬೇಕು ನೋಡಿ ಬಾಡಬೇಕು |ಅಡಗಡಿಗೆ ಕಣ್ಣೀರ ಸುರಿಸಬೇಕು ||ಒಡೆಯ ಶ್ರೀ ಪುರಂದರವಿಠಲನ ನೆನೆಯುತ |ಮಿಡಿಗೊಂಡು ಮೂಲೆಗೆ ಒರಗಬೇಕು 3
--------------
ಪುರಂದರದಾಸರು
ಮೋಸ ಹೋದೆನಲ್ಲ - ಸಕಲವು-|ವಾಸುದೇವಬಲ್ಲಪಭಾಸುರಂಗ ಶ್ರೀ ವಾಸುಕಿಶಯನನ |ಸಾಸಿರ ನಾಮವ ಲೇಸಾಗಿ ಪಠಿಸದೆ ಅ.ಪದುಷ್ಟಜನರ ಕೂಡಿ - ನಾನತಿ-|ಭ್ರಷ್ಟನಾದೆ ನೋಡಿ ||ಸೃಷ್ಟಿಗೊಡೆಯ ಮುರ-ಮುಷ್ಟಿಕ ವೈರಿಯ |ದೃಷ್ಠಿಯಿಂದ ನಾ ನಿಟ್ಟಿಸಿ ನೋಡದೆ 1ಕಾಯವು ಸ್ಥಿರವಲ್ಲ-ಎನ್ನೊಳು-|ಮಾಯೆತುಂಬಿತಲ್ಲ ||ಪ್ರಾಯ ಮದದಿ ಪರಸ್ತ್ರೀಯರ ಕೂಡುತೆ |ಕಾಯಜಜನಕನ ಧ್ಯಾನವ ಮಾಡದೆ2ಕಂಗಳಿಂದಲಿ ನೋಡೊ-ದೇವಾನಿ-|ನ್ನಂಗ ಸಂಗವ ನೀಡೋ ||ಮಂಗಳ ಮಹಿಮ ಶ್ರೀ ಪುರಂದರವಿಠಲ ನಿ-|ನ್ನಂಗದೊಳಿರುವಂತೆ ದಯವನು ಮಾಡೊ 3
--------------
ಪುರಂದರದಾಸರು
ಯಮದೂತರು ನರನನು ಎಳೆದೊಯ್ದುದನುಎಲ್ಲರಿಗೆ ಹೇಳುವೆನುಕುಮತಿಯಲಿ ಸದ್ಗುರು ಚರಣವ ಹೊಂದದಕೇಡಿಗಾಗುವ ಫಲಗಳನುಪಮುರಿದ ಮೀಸೆಯಲಿ ಮಸಿದೇಹದಲಿಉರಿಹೊಗೆ ಹೊರಡುವ ಉಸುರಿನಲಿಕರುಳು ಮಾಲೆಯಲಿ ಕೋರೆದಾಡೆಯಲಿಜರೆಮೈ ಹಸಿದೊಗಲುಡುಗೆಯಲಿ1ಝಡಿವ ಖಡುಗದಲಿ ಹೂಂಕಾರದಲಿಕಡಿದವಡೆಯಲಿ ಹುರಿಮೀಸೆಯಲಿಬಿಡಿಗೂದಲಲಿ ಕರದ ಪಾಶದಲಿಸಿಡಿಲ ತೆರೆದ ಬಿಡುಗಣ್ಣಿನಲಿ2ಮಿಡುಕುತ ಸತಿಸುತರನು ಆಪ್ತರನುಹಿಡಿದೊಪ್ಪಿಸುತಿಹ ವೇಳೆಯಲಿಕಡಿಯಿರಿ ಹೊಡಿಯಿರಿ ತಿನ್ನಿರಿ ಎನುತಲಿ ಧುಮುಕಲುಬಿಡುವನು ಪ್ರಾಣವ ಕಾಣುತಲಿ3ಯಾತನೆ ದೇಹವ ನಿರ್ಮಿಸಿ ಅದರೊಳುಪಾತಕಮನುಜನ ಹೊಗಿಸುತಲಿಘಾತಿಸುವ ನಾನಾಬಗೆ ಕೊಲೆಯಲಿಘನನುಚ್ಚು ಕಲ್ಲೊಳಗೆ ಎಳೆಯುತಲಿ4ಈ ತೆರವೈ ಈ ಧರ್ಮ ಶಾಸ್ತ್ರವನೀತಿಯ ತೆರದಲಿ ಮಾಡುತಲಿಪಾತಕವನು ಬಹುಪರಿ ಶಿಕ್ಷಿಪರುದಾತಚಿದಾನಂದನಾಜೆÕಯಲಿ5
--------------
ಚಿದಾನಂದ ಅವಧೂತರು
ಯಾಕೆ ನಿನ್ನ ಮನಕೆ ಬಾರೆ ಸಾಕೊ ನಿನ್ನ ಧ್ವರಿಯತನ ಪಕಾಕುಜನರ ಕಾಯ್ದು ಎನ್ನ ಸಾಕದಿರುವದೇನು ನ್ಯಾಯ ಅ.ಪಘನ್ನನೆನಿಸಿ ಪೊರೆದು ಎನ್ನಬನ್ನಬಡಿಸೋದು ನ್ಯಾಯವೇ1ನಾಚಿಕಿಲ್ಲದೆಂಜಲ್ಹಣ್ಣು ಯಾಚಿಸಿ ತಿಂದ್ಯಲ್ಲೊ 2ಮುಷ್ಟಿಯವಲಕ್ಕಿ ತಿಂದು ಅಷ್ಟೈಶ್ವರ್ಯ ಕೊಟ್ಟಿಯಲ್ಲೊ 3ಶÀಕ್ರಾದಿ ಸುರವಂದ್ಯ ತ್ರಿವಿಕ್ರಮನೆನಿಸಿ ತ್ರೀ -ವಕೆÀ್ರಗಂಧಕೆ ಒಲಿದು ಕುಬ್ಜೆಯ ಆಕ್ರತದಲಿ ಬೆರೆತಿಯಲ್ಲೊ 4ಉನ್ನತಾದ ಸುಖವಿತ್ತು ಚಿನ್ನನಾಗಿ ನಡೆದಿಯಲ್ಲೊ 5ಬಿಟ್ಟತನಯನೆಂದು ಕರುಣಾ ದೃಷ್ಟಿಯಿಂದ ಪೊರೆಯವಲ್ಯಾ 6ದಾತಗುರುಜಗನ್ನಾಥ ವಿಠಲ ನೀನುಪಾತಕಿಜನರ ಪೊರೆದ ರೀತಿ ಏನುನ್ಯಾಯವೋ7
--------------
ಗುರುಜಗನ್ನಾಥದಾಸರು
ಯಾಕೆ ಬೆಟ್ಟವನೇರಿ ನಿಂದೆಅವನಿವೈಕುಂಠವೆಂದೆ ಆವಿಧಿಸ್ಮರರ ತಂದೆಪ.ತಮನೆಂಬರಿಯ ತರಿದು ತರಿದು ನಿಗಮವ ತಂದುಕ್ರಮದಿ ಕಮಲೋದ್ಭವಗೆ ಕೊಡುವೆನೆಂದೇರಿದೆಯೊಕಮಲವ್ವೆ ಬರೆ ಕಂಡು ಕಲ್ಲ ಭಾರವನಿಳುಹಿಭ್ರಮಿಸಿರುವಭಾವತೋರಿದೆಯೊ ಖಳೋತ್ತಮನ ದಾಡೆಯಲರಿದು ಈ ತಾಣವೇರಿದೆಯೊ 1ಧೀರ ಶಿಶುವಿನಹಗೆವಿದಾರಿಸುತ ದಶದಿಶದಿಸಾರಿದ ನಿಜರ ನೋಡಿ ಸಲಹಲಿಲ್ಲೇರಿದೆಯೊಮೀರಿ ಮೆರೆವನ ತಲೆಯ ಮೆಟ್ಟಿ ಪಾತಾಳಕಿಳುಹಿತೋರಿದೆಯೊ ತ್ವತ್ಪಾದದಿರವ ಧರೆಯಪಾರುವರಿಗೊಲಿದಿತ್ತ ಪರಿಯಲೇರಿದೆಯೊ 2ಅಸುರ ನೊಯಿದರಸಿಯಳ ಅರಸ ತಂದೇರಿದೆಯೊಪಶುಗಾವಿ ಯೋಗಗಳ ಪುರವ ಪೊಗಲೇರಿದೆಯೊಹೊಸಧರ್ಮಹೊಲಬುತೋರಿದೆಯೊ ಇದರಪೆಸರರುಹಿ ಪೊರೆಯೆನ್ನ ಪ್ರಸನ್ವೆಂಕಟೇಶ 3
--------------
ಪ್ರಸನ್ನವೆಂಕಟದಾಸರು
ಯಾಕೆನ್ನೊಳು ಪಂಥಾ ಶ್ರೀಕಾಂತಾ ಪ.ಯಾಕೆ ಪಂಥ ಲೋಕೈಕನಾಥ ದಿ-ವಾಕರಕೋಟಿಪ್ರಭಾಕರ ತೇಜನೇ ಅ.ಪ.ಪೂರ್ವಾರ್ಜಿತ ಕರ್ಮದಿಂದಲಿಇರ್ವೆನು ನರಜನ್ಮ ಧರಿಸುತಗರ್ವದಿಂದ ಗಜರಾಜನಂತೆ ಮತಿಮರ್ವೆಯಾಯ್ತು ನಿನ್ನೋರ್ವನ ನಂಬದೆಗರ್ವಮದೋನ್ಮತ್ತದಿ ನಡೆದೆನುಉರ್ವಿಯೊಳೀ ತೆರದಿ ಇದ್ದೆನಾದರೂಸರ್ವಥಾ ಈಗ ನಿಗರ್ವಿಯಾದೆಯಹಪರ್ವತವಾಸ ಸುಪರ್ವಾಣ ವಂದಿತ 1ಯಾರಿಗಳವಲ್ಲಮಾಯಾಕಾರ ಮಮತೆ ಸಲ್ಲ ಸಂತತಸಾರಸಾಕ್ಷ ಸಂಸಾರಾರ್ಣವದಿಂದಪಾರಗೈದು ಕರುಣಾರಸ ಸುರಿವುದುಭಾರವಾಯ್ತೆ ನಿನಗೆನತಮಮಕಾರ ಹೋಯ್ತೆ ಕಡೆಗೆ ಏನಿದುಭಾರಿ ಭಾರಿಶ್ರುತಿಸಾರುವುದೈ ದಯವಾರಿಧಿನೀನಿರಲ್ಯಾರಿಗುಸುರುವುದು2ಬಾಲತ್ವದ ಬಲೆಗೆ ದ್ರವ್ಯದಶೀಲವಿತ್ತೆ ಎನಗೆ ಆದರೂಪಾಲಿಸುವರೆ ನಿನಗಾಲಸ್ಯವೆ ಕರು-ಣಾಳು ಶ್ರೀಲಕ್ಷ್ಮೀಲೋಲ ಮಮ ಮನಕೆಸಾಲದೆರಡು ಮೂರು ನಿನ್ನಯಮೂಲ ಸಹಿತ ತೋರು ಮುನಿಕುಲಪಾಲ ಶ್ರೀಲಕ್ಷ್ಮೀನಾರಾಯಣಗುಣಶೀಲ ಕಾರ್ಕಳ ನಗರಾಲಯವಾಸನೇ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ