ಒಟ್ಟು 1345 ಕಡೆಗಳಲ್ಲಿ , 105 ದಾಸರು , 1091 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಡವ ಮಾಡಲಿ ಬೇಡ ಹಡೆದವ್ವ ಎ ನ್ನೊಡೆಯನನು ಹುಡುಕಿ ತಾರೆ ಪಿಡಿವೆ ಪಾದವ ಪ ತಡವ ಮಾಡದೆ ಪೊಡವಿಯೊಳು ಕಡು ಸಡಗರಾರ್ಯನ ಹುಡುಕಿ ತಂದರೆ ಹಡೆದು ನಿನ್ನ್ಹೆಸರಿಸಿವುವೆನೆನ್ನವ್ವ ಸರಿಮಾಡ್ವೆನವ್ವ ಅ.ಪ ಜೀವದರಸನ ಹಂಬಲೆನಗವ್ವ ಅತ್ಯಧಿಕವಾಗಿ ಕಾಯಸೊರಗಿ ಕ್ಷೀಣವಾಯ್ತೆವ್ವ ಪ್ರಾಯಬಂದರೆ ಸುಮ್ಮನೆ ಹೋಗುತಾದವ್ವ ಪ್ರಾಯಕ್ಕೆ ತಕ್ಕ ಚಾಯಗಾರ ಕಂಡೇನ್ಹೇಗವ್ವ ಕಾಯರಹಿತ ಕಾರುಣ್ಯನಿಧಿ ಮಾಯತಿಳಿಯುವರಿಲ್ಲ ಆತನ ದಿವ್ಯಚರಿತ ನೆನೆದು ನೆನೆದು ಬಾಯ ಬಿಡುವೆನೆ ಆಯತಾಂಬಕಿ 1 ವಸ್ತೊಡೆವೈಷ್ಟಿರಲು ಏನವ್ವ ಅತಿಶೋಭೆಯೆನಿಪ ಮುತ್ತುಯಿಲ್ಲದ ಮೋರೆಯಾಕವ್ವ ಹತ್ತಿರಕೆ ಬರಗೊಡರವ್ವಾ ಮುತ್ತೈದೆರೆಲ್ಲರು ಅತ್ತ ಇತ್ತೆಂದೆಳೆಯುತಿಹ್ಯರವ್ವ ಮತ್ತೆ ಬೇಡಲು ದೊರೆಯದಂಥ ಹೊತ್ತು ಸುಮ್ಮನೆ ಹೋಗುತಿದೆ ಕರ್ತ ತುರ್ತು ದೊರೆಯದನಕ ಚಿತ್ತ ಸ್ವಸ್ಥವಾಗದವ್ವ 2 ಭೂಮಿತ್ರಯದೊಳಧಿಕ ಕೇಳವ್ವ ಆತನಹೆಸರು ಕಾಮಿತವನೀಗರಿತುಕೊಂಡೆನವ್ವ ನೇಮದಿಂದ ಭಜಿಸುತಿಹೆನವ್ವ ಎನ್ನಕಡೆಗಾತ ಪ್ರೇಮದಿಂದ ಸುಳಿಯದಿಹ್ಯನವ್ವ ಭಾಮೆಬಾರೆಂದು ಬದಿಲಿಕರೆದು ಪ್ರೇಮದಿಂದ ಅಪ್ಪಿ ನಿನ್ನಯ ಸ್ವಾಮಿ ಶ್ರೀ ರಾಮ ನಾನೆಂದ್ಹೇಳಲು ಕ್ಷೇಮ ಪಡೆದು ಬಾಳ್ವೆನವ್ವ 3
--------------
ರಾಮದಾಸರು
ತತ್ತೆ ್ವೀಶರಿಗೆ ನಮಸ್ಕಾರ ಪ ಸತ್ತ ್ವಗುಣಿಗಳಾದ ಸಾಧುಜನರಿಗೂ ಅ.ಪ ಮರತನುತ್ವಕ್ಕಿಗೆ ಶ್ರವಣದಿ ದಿಗ್ದೇ ವರು ಕಣ್ಣಲಿ ಭಾಸ್ಕರನಿರುವಾ ಕರ ಇಂದ್ರನು ಪದಕಿಂದ್ರಜ ವೈಶ್ವಾ ನರವಾಕ್ಕಿಗೆ ಗುಹ್ಯದಿ ಮನುಪತಿ1 ಗುದಕೆ ಮಿತ್ರ ರಸನದಿ ವರುಣನು ಘ್ರಾ ದಸ್ರರು ಯೀಪತ್ತು ಜನಂ ವಿದುಧರ ಹಂಕಾರದಿ ಮನಕಿಂದು ಮ ತಿದಾತ ಚಿತ್ತದೊಳುದಧಿಜೆ ಕರ್ತಳು 2 ಐದು ಭೂತದೊಳಗೈದುರೂಪ ಮ ತ್ತೈದು ವಿಷಯದೊಳು ತದ್ರೂಪ ವೈದುತಲಿಪ್ಪತ್ತೈದಕೆ ಸಾಕ್ಷಿಯು ಮೋದಮಯನು ಶ್ರೀಗುರುರಾಮ ವಿಠಲನು 3
--------------
ಗುರುರಾಮವಿಠಲ
ತತ್ತ್ವ ತಿಳಿಯದು ಅಹಂಮತ್ವ ಅಳಿಯದನಕ ಧ್ರುವ ವಿದೇಹ ಸುದೇಹಾಗದನಕ ಸಂದೇಹ ಸಂಶಯ ಸಂಕಲ್ಪ ಹೋಗದನಕ 1 ಪ್ರವೃತ್ತಿ ನಿವೃತ್ತಿ ಸುವೃತ್ಯಾಗಕನಕ ಸ್ವಪ್ನ ಸುಷಪ್ತಿ ಜಾಗ್ರ್ಯತ್ಯಾಗದನಕ 2 ದೃಷ್ಟ ಅದೃಷ್ಟ ಸದ್ರಷ್ಟಾಗದನಕ ದುಷ್ಟನಷ್ಟಗಳ ಸಂಕಷ್ಟೋಗದನಕ 3 ಲಬ್ಧ ಅಲಬ್ಧ ಪ್ರಾಲಬ್ಧಾಗದನಕ ಶಬ್ಧ ನಿಶ್ಯಬ್ಧ ಸುಶಬ್ದಾಗದನಕ 4 ಭಾವ ಅಭಾವ ಸ್ವಭಾವಾಗದನಕ ಮಾಯ ಮೋಹದ ಮನೆಯು ಮುಕ್ಕಾಗದನಕ 5 ಸದ್ಗುರು ದಯಕರುಣ ಕೃಪೆ ಅಗದನಕಮಹಿಪತಿ ನಿನ್ನೊಳು ನೀ ಬೆರಿಯತನಕ 6
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತತ್ವಮತವೇ ಮತವು ಸಾತ್ತಿ ್ವಕರಿಗೆ ಪ ನಿತ್ಯ ನಿರ್ಮಲರಾದ ಮುಕ್ತಿಜೀವರಿಗೇ ಅ.ಪ ಶ್ರೀವನಿತೆ ಮತಿಗೆ ವಾರಿಜಸಂಭವಾ ಆವಂಗಜರಿಪು ಮನಕೆ ಅಹಂಕಾರದಲಿ ಯೀವಿಧ ದಶೇಂದ್ರಿಯಕೆ ಸೂರ್ಯಾದಿಗಳು ಎಂಬೋ 1 ಪಂಚಭೇದವನು ತರತಮಗಳನು ತಿಳಿಯುತಂ ವಂಚನಾದಿಗಳಿಂದ ರಹಿತರಾಗಿ ಪಂಚ ಸಂಸ್ಕಾರದಿಂ ಪರಿಶುದ್ಧರಾಗುತೆ ಪ್ರ- ಪಂಚವನು ದಾಟಿರುವ ಪರಮ ಭಕ್ತರಿಗೆ 2 ವನ್ನು ಒಂದೇ ಬಗೆಯ ಗೈದು ಮುದದಿ ಪನ್ನಗಾದ್ರಿನಿವಾಸ ಗುರುರಾಮ ವಿಠಲನ ಅ- ಹರ್ನಿಶಿಯು ಬಿಡದೆ ಪೂಜಿಸುವ ಸುಜನರಿಗೆ 3
--------------
ಗುರುರಾಮವಿಠಲ
ತತ್ವೋಪದೇಶತೋರಿಸಬೇಕು ನಿನ್ನ ನಿಜವನು ಕಾರುಣ್ಯನಿಧಿ ಗುರುರಾಯ ನೀನು ಪತೋರುವ ತೋರಿಕೆಯನು 'ುೀರಿ 'ುಕ್ಕಿಹ ಪಾರಮಾರ್ಥಿಕ ಸಚ್ಚಿದಾನಂದ ರೂಪವ ಅ.ಪಕಾಯ ಬಂದಂದವೆನಗೆ ಕಾಣಿಸದು ಮಾಯಾಪಾಶದ ತೊಡರೆನ್ನ ಬಿಡದುಜಾಯಾಸುತಾದ್ಯರ ಬರಿಯ ಮೋಹದಲಾಯು ಬೀಯವಾಗುತಲಿದೆ ಬಿಡಿಸಿದ ಬೇಗದಿ 1ಪ್ರಕೃತಿಯೊಳ್ ಕೂಡಿ ಪ್ರಕೃತಿಧರ್ಮಗಳಾದ ಸುಕೃತ ದುಷ್ಕøತ ಫಲ ರೂಪವಾದ'ಕರಿಪ ಸುಖದುಃಖದನುಭವಕದಕೊಳಗಾಗದಕಳಂಕದಿರ'ದೆಂಬುದು ತೋರದಿದೆ ದೇವ 2ಆಕಾಶದೊಳು ದೀಪಪ್ರಕಾಶವು ಏಕವಾದಂತೆ ಚಿದಚಿತ್‍ಸಂಮೇಳವುಐಕ್ಯವಾಗಿರಲಚಿದ್ಭಾವವಳಿದು ಚಿತ್ತು ಏಕವಾಗಿಹ ನಿತ್ಯನಿರ್ಗುಣ ರೂಪವ 3ಅರಿ'ದ್ದೂ ಮರವೆಯೊಳರಿವರಿಯದೆ ಪಿರಿದಾಗಿ ಹಮ್ಮು 'ಹರಿಸುತಿಹುದುಮರವೆಯಹಂಭಾವ ತೋರದರಿ'ನೊಳು ಬೆರೆದು ಬೆರೆದ ಪರಿ ತೋರದಿರುವ ಹಾಗೆ4ಮೃತ್ತಿನಿಂದಾದ ಘಟಶರಾವಾದಿಗಳು ಮತ್ತೊಂದು ರೂಪವಾದ ತೆರದಲಿಚಿತ್ತೊಂದುಪಾಧಿುಂ ನಾನಾತ್ವವಾಗಿರೆ ಕೃತ್ರಿಮ'ದ ಕಡೆಗೊಳಿಸಿ ನಿಜದೊಳಿರಿಸಿ5ಬೀಜದಿಂದಾದ ತರು ಭಿನ್ನರೂಪಾಗಿ ಬೀಜದಾಕಾರ ಮಾಜಿದಂದದಲಿವ್ಯಾಜರ'ತ 'ಭ್ರಾಜಮಾನ ಬ್ರಹ್ಮಬೀಜದಿಂ ಮೂಜಗವಾದ ಬಗೆಯದೇನು 6ನಂಬಿದೆ ನಿನ್ನ ಚರಣಸರೋಜವ ಅಂಬುಜನಾಭ ಗುರು ವಾಸುದೇವನಂಬುಗೆಯನು ಕೊಟ್ಟು ಕರುಣವೆನ್ನೊಳಗಿಟ್ಟುುಂಬಿಟ್ಟು ಸಲ'ದ ವೆಂಕಟರಮಣ ನೀ7
--------------
ತಿಮ್ಮಪ್ಪದಾಸರು
ತಂದೆಯಿಂದಲಿ ತಾಯಿ ಗರ್ಭಕೆ ನೂಕಿದ್ವಂದ್ವ ಜನ್ಮಕೆ ಕರ್ತ ಇಂದ್ರ ರಕ್ಷಿಪುದೆಂದೋ ಜನ್ಮದಿಂದ |ಇಂದ್ರಾದಿ ಪ್ರಾವರ್ತಕನಿಂದು ಪ್ರಲಯಾದಲ್ಲಿನಂದಕರ ಮುಕ್ತರಿಗೆ ಮಂದಿರವು ಸಿತ ದ್ವೀಪ ಗುರು ಗೋ-ವಿಂದ ವಿಠಲಾತ್ಮಕ ಸಂಕ್ಷೇಪ್ತø ಶರಣು ||ಹರಣ ಹೋಗದ ಮುನ್ನ | ಹರಿ ನಿನ್ನ ಹಂಬಲನ್ನಕರುಣಿಸಿ ಕಾವುದೆನ್ನ | ಕರುಣಾನಿಧಿಯೆ ಘನ್ನಸ್ವರ್ಣ ಗರ್ಭನನಯ್ಯ | ಅರ್ಣ ಸಂಪ್ರತಿಪಾದ್ಯಕರ್ಣರಹಿತ ಶಯ್ಯ | ವರ್ಣಿಸೆ ನಿನ್ನನಯ್ಯಮರುತನ ಮತದಲ್ಲಿ | ಕರೆ ತಂದು ಎನ್ನನುತರತಮ ಜ್ಞಾನವನ್ನ | ಅರುಹುವುದೊಳಿತಲ್ಲೆಹರಿಯೆ ಸರ್ವೋತ್ತಮ | ಮರುತ ಜೀವೋತ್ತಮಹರ ವೈಷ್ಣವೋತ್ತಮ | ವರ ಜ್ಞಾನ ಪಾಲಿಸಿಪನ್ನಗಾಚಲವಾಸ ಪ್ರ | ಸನ್ನ ರಘನಾಶಘನ್ನ ಗುರು ಗೋವಿಂದ ವಿಠಲಾ ಗೋ ಪ್ರಸನ್ನ ||
--------------
ಗುರುಗೋವಿಂದವಿಠಲರು
ತನುಮನದಲ್ಲಿ ಯೋಚನೆ ಮಾಡೀ ಎಣಿಸಿ ಗುಣಿಸಿ ಮನಸಿಜನ್ನ ಜನಕನ ಲೀಲೆ ಪ ನರನಾರಾಯಣನೀತ ಕೃಷ್ಣ ಹರಿ ಹೃದ್ಭಾನು ಕಪಿಲನೀತ ಹರಿನಾರಾಯಣೇನೀತ ಯೋಗೀ ಶ್ವರ ತಾಪಸ ವೈಕುಂಠನೀತ ಹರನಸಖ ಸ್ವಧಾಮನೀತ ಕರುಣಿ ಸಾರ್ವಭೌಮನನೀತಾ 1 ಅಜಿತಯಜ್ಞನಾಮನೀತ ಅಜಗೆ ಪೇಳಿದ ಹಂಸನೀತ ಸುಜನಪಾಲ ವ್ಯಾಸ ವೀ ರಜ ಮಹಿದಾಸ ದತ್ತನೀತ ನಿಜ ಮಹಿಮ ಧನ್ವಂತ್ರಿ ಈತ ತ್ರಿಜಗವಳೆದುಪೇಂದ್ರನೀತ ಭಜಕರೊಡಿಯ ವಿಷಕ್ಸೇನ ಭುಜಗಶಾಯಿವಿಭುವೆ ಈತ 2 ಚಲುವ ಧರ್ಮಶೇತು ಈತ ಬಲುವುಳ್ಳ ಶಿಂಶುಮಾರನೀತ ಮತ್ಸ್ಯ ಕೂರ್ಮವರಹ ಲಲಿತನರಸಿಂಹನೀತ ಬಲಿಗೊಲಿದ ವಾಮನ್ನನೀತ ಕುಲವೈರಿ ರಘರಾಮನೀತ ಕಲಕಿ ರೂಪನಾದನೀತಾ 3 ವಾಸುದೇವ ಜಯಪತಿ ಸುಂ ದರ ಪ್ರದ್ಯುಮ್ನ ಈತ ನಿರಂತರ ಅನಿರುದ್ಧನೀತ ಚ ತುರ ವಿಂಶತಿ ಮೂರುತಿಯೇ ಈತ ಮೆರೆವ ಅಜಾದಿ ನಾಮಕನೀತ ವರ ಪಂಚಮೂರುತಿಯೇ ಈತಾ ಎರಡೈದು ಮೇಲೊಂದನೀತ 4 ಪರಿಪರಿ ರೂಪ ಉಳ್ಳನೀತ ಹೊರಗೆ ಒಳಗೆ ವ್ಯಾಪ್ತನಾಗಿ ಸರಿಸರಿ ಬಂದ ತೆರದಿ ಜಗವ ಸರಸದಲಿ ಆಡಿಪನೀತ ಸ್ಮರಣೆ ಮಾಡಲು ಸಕಲ ಇಷ್ಟವ ಕರೆÀದು ಕೊಡವನೀತ ಮರಣ ಜನನರಹಿತ ನೀತ 5
--------------
ವಿಜಯದಾಸ
ತನ್ನ ತಿಳಿದು ತಾನಾದಂಥ ಗುರುವಿನ ಪಾದವ ಹೊಂದುತನ್ನನರಿಯದ ಗುರುವ ಹೊಂದಬೇಡೆಂದೆಂದು ಪ ನಿನ್ನನು ದೇವನೆಂದೆನ್ನುವಗೆ ಈಗ ಶರಣು ಮಾಡೋಅನ್ಯ ದೇವರನೆಂದೆನ್ನುವನ ಹಾದಿ ಹೋಗಬೇಡೋ 1 ಕೋಟಿರವಿ ತೇಜವ ಕಣ್ಣಲಿ ನೋಡುಬೂಟಿಕ ಕಾಯಕಗಳ ದೂರಮಾಡು 2 ಸೋಹಂ ಮಂತ್ರವ ಹೇಳದವನ ಸೆರಗ ಬಿಟ್ಟು ನೀನುಊಹಿಸುವ ಬೇರೆ ಗುರುವನು ಉತ್ತಮ ಅವನು3 ವಾಸನೆ ಕಳೆದಾತಂಗೆ ಒಪ್ಪಿಸಯ್ಯ ತನುವಆಸೆ ಹಚ್ಚುವವನತ್ತ ಬಿಡಲಿ ಬೇಡ ಮನವ 4 ಚಿದಾನಂದ ಗುರುವ ಹೊಂದು ಚಿನ್ಮಾತ್ರನಹೆ ಮದಮುಖ ಗುರುವ ಹೊಂದದಿರು ತಿಳಿ ಮುಂದೆ ನೀನು ಕೆಡುವೆ 5
--------------
ಚಿದಾನಂದ ಅವಧೂತರು
ತಪ್ಪಲರಿಯದು ಬರೆದ ಬ್ರಹ್ಮನಿರ್ಮತವು ಒಪ್ಪುವದು ಯತಿ ಮುನಿ ಋಷಿಯ ಸಂತತಿಯು ಧ್ರುವ ಆನಿ ಮೊದಲಿರುವೆ ಕಡೆ ಅಣುಮಾತ್ರಾಕಾರವನು ಮುನ್ನ ಬರೆದಂತೆ ತಾನಡೆಯುತಿಹಂದು ಇನ್ನು ಮುತ್ತನ್ಯ ದೈವಕ ಬಯಸಿ ಬೇಡಿದರೆ ಮುನ್ನಿಗೆ ಕೊಡಬಲ್ಲವೆ ಬಿನಗುದೈವವು 1 ಭಿನ್ನವಿಲ್ಲದೆ ತನುವಿನೊಳು ಆನಂದ ಘನ ಉನ್ನತ ಮಹಿಮ ಪರಿಪೂರ್ಣವಿರಲು ಮೂರ್ತಿ ಶ್ರೀಪಾದವನು ಅನುದಿನ ಭಜಿಸಿ ಘನ ಸುಖವ ಪಡಿಯೊ ಮನವೆ 2 ಕಕ್ಕುಲಾತಿಯ ಬಟ್ಟು ಕಂಡವರ ಕಾಲ್ಗೆರಗಿ ಫಕ್ಕಸಾರಿಯ ಧರ್ಮ ಜರಿಯ ಬ್ಯಾಡ ಸಕಲ ಸಹಕಾರ ಮಹಿಪತಿಸ್ವಾಮಿ ನಿನಗಿರಲು ಭಕುತಿ ಮುಕುತಿಯ ಉಂಟು ಮೂಢ ಜನವೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತಪ್ಪು ತಪ್ಪು ತಪ್ಪು ತಪ್ಪಪರಾಧ ಕೋಟಿಯಸರ್ವಂ ತಪ್ಪನ್ನೆಲ್ಲಾ ಕ್ಷ'ುಸಿ ಒಪ್ಪಿಕೊಳ್ಳಯ್ಯ ಗುರುವೆ ಪದೇಹ ತನ್ನದೆಂಬ ಅಹಂಕಾರದ ತಪ್ಪು ತನ್ನಗೇಹ ಸತಿಸುತರ ಮಮತೆ ಪಾಶದ ತಪ್ಪುಮೋಹ ಮದ ಮಾತ್ಸರ್ಯವ ಭ್ರಮೆಗೊಂಬೊ ತಪ್ಪುಓಹೋ! ವ್ಯರ್ಥಕಾಲವ ಕಳೆದೆನಹುದಯ್ಯ 1ಬಕವೃತ್ತಿಯ ಸೇಮೆಂದ ಮುಕುತನೆಂಬೆನೋ ಹರಿ'ಕಳಮತಿಗಳ ಕೂಡಿ ಯೋಗ್ಯನೆಂಬೆನೋಸಕಲ 'ಷಯಸುಖವನುಂಡು ವೈರಾಗಿಯೆಂಬೆನೋ ಹರಿಭಕ್ತರ ಸಂಗವ ಬಿಟ್ಟು ಜ್ಞಾನಿಯೆಂಬೆನೋ 2ಬರಿಯ ಬ್ರಹ್ಮಜ್ಞಾನದಿಂದ ಮರುಳು ಮಾಡಿದೆಪರಿಪರಿಯ ಭಾವಭೇದಗಳನು ತೋರಿದೆಅರಿಯದ್ಹೋದೆನಯ್ಯ ಶ್ರೀಮದ್ಗುರುವೆ ವಾಸುದೇವಾರ್ಯ ನರಸಾರ್ಯ ಅಮರಗಿರಿನಿಲಯ ಸಕಲ ತಪ್ಪು ಮರೆಯಯ್ಯಾ * 3
--------------
ವೆಂಕಟದಾಸರು
ತಂಬೂರಿ ಹಿಡಿಸಿದನು ಪ ಅಂಬುಜಾಕ್ಷನು ದಯದಿ ಅ.ಪ ನಂಬೀದ ಜನರಿಗೆ ಬೆಂಬಲ ತಾನೆಂಬ ನಂಬಿಕೆ ಹೃದಯದಿ ತುಂಬುತ ತಾನೀಗ 1 ಆಶಾ ಪಾಶಕೆ ಸಿಲುಕಿ ಬೇಸತ್ತು ಬೆಂಡಾಗಿ ಮೋಸ ಹೋಗುತ್ತಲಿದ್ದೆ ಶ್ರೀಶ ದಯಾಂಬುಧಿ 2 ಹುಟ್ಟಿದ ದಿನದಿಂದ ಕಷ್ಟದಲ್ಲೇ ಬಂದೆ ಮುಟ್ಟಲಿದನು ಈಗ ಸಂತುಷ್ಟಿಯ ಕಂಡೆನು 3 ಕಾಡಿ ಬೇಡುವರಿಲ್ಲ ನಾಡೆಲ್ಲ ನಮ್ಮದೇನೆ ನೀಡುವ ದೊರೆ ಒಬ್ಬ ಈಡಿಲ್ಲದವನಾತ 4 ವಿಧಿ ವಿಸ್ಮರಣೆ ನಿಷೇಧ ಹರಿನಾಮ ಸುಧೆಯನ್ನು ಕರೆದು ಕರೆದು ಕುಡಿವೆ5 ತಂಬೂರಿ ಸಿಗುವುದು ತುಂಬ ಭಾಗ್ಯವು ಸತ್ಯ ಹಂಬಲಂಗಳ ಬಿಡಿಸಿ ತುಂಬುವ ಹರಿ ಮನದಿ6 ಪುಣ್ಯ ರಾಶಿಗಳೆಲ್ಲ ವದಗಿ ಬಂದವೊ ಏನೋ ಚಿನ್ಮಯ “ಶ್ರೀ ಕೃಷ್ಣವಿಠಲ”ನ ದಾಸನಾದೆ7
--------------
ಕೃಷ್ಣವಿಠಲದಾಸರು
ತವದಾಸೋಹಂ ದಾಶರಥೆ ಪ ಪಶುಪತಿ ಶಶಿರವಿನೇತ್ರಾ ದಾಶರಥೆ 1 ಕದನಪ್ರಚಂಡ ದಾಶರಥೆ 2 ಹಾಟಕವಸನಾ ದಾಶರಥೆ 3 ಮನುಜವಿಶೇಷ ದಾಶರಥೆ 4 ಕರಧೃತಗೋತ್ರ ದಾಶರಥೆ 5 ಶ್ರೀವಧೂರಮಣ ದಾಶರಥೆ 6 ಶಿಕ್ಷಿತಕಾಕ ದಾಶರಥೆ 7 ವ್ಯಾಘ್ರಾದ್ರಿಸದನ ದಾಶರಥೆ 8 ವರದಾರ್ಯವಿಠಲ ದಾಶರಥೆ 9
--------------
ವೆಂಕಟವರದಾರ್ಯರು
ತವದಾಸೋಹಂ ದಾಶರಥೆ ಪ ದಶರಥಪುತ್ರಾ-ಪಶುಪತಿಮಿತ್ರ-ಶಶಿರವಿನೇತ್ರಾ-ದಾಶರಥೆ1 ಕದನಪ್ರಚಂಡ ದಾಶರಥೆ 2 ತಾಟಕಾಹನನ ತಾಡಿತಕುಜನ ಹಾಟಕವಸನಾ-ದಾಶರಥೆ 3 ಮನಸಿಜವೇಷ ಮಂಜುಳಭಾಷ ಮನುಜವಿಶೇಷ ದಾಶರಥೆ4 ಶರದಾಭಗಾತ್ರ ಶರನಿಧಿಯಾತ್ರಾ ಕರಧೃತಗೋತ್ರ ದಾಶರಥೆ 5 ರಾವಣಹರಣ-ಪಾವನಚರಣ-ಶ್ರೀವಧೂರಮಣ-ದಾಶರಥೆ 6 ರಕ್ಷಿತಲೋಕ ರಚಿತಸು ಶ್ಲೋಕ ಶಿಕ್ಷಿತಕಾಕ ದಾಶರಥೆ 7 ವ್ಯಾಘ್ರಾಗಶಮನ-ವ್ಯಾಘ್ರಾರಿಗಮನ ವ್ಯಾಘ್ರಾದ್ರಿಸದನ ದಾಶರಥೆ 8 ಪರಿಹೃತ ಕುಟಿಲ-ಸರಸಿಜನಿಟಿಲ ವರದಾರ್ಯವಿಠಲ ದಾಶರಥೆ 9
--------------
ಸರಗೂರು ವೆಂಕಟವರದಾರ್ಯರು
ತಾಯಿ ಪಾಲಿಸು ಎನ್ನ ದಯದಿ ಗಾಯತ್ರಿದೇವಿ ಸಿದ್ಧಿಯನಿತ್ತು ಸಲಹಾ ಸಾವಿತ್ರಿ ಪ ಪಾವನ ಸುಚರಿತ್ರೆ ಮಾಯೆ ತ್ರಿಜಗಸ್ತೋತ್ರೆ ಕಾಯೆ ಸಿದ್ಧಿಸಿ ಎನ್ನ ಕಾಯಾ ಮಂಗಲಗಾತ್ರೆ ಅ.ಪ ಸಾರಸಾಕ್ಷಿಯೆ ದಯಾಪಾರಾವಾರಳೆ ನಿನ್ನ ಚಾರುಚರಿತಂಗಳು ಸಾರುವೆ ನಿಜಮಂತ್ರ ಮೂರುಲೋಕದ ಸೂತ್ರಧಾರಿ ನೀ ನಿಜ ಓಂ ಕಾರಿ ಕರುಣಿಸಿ ಸುತನ ಗಾರುಮಾಡದೆ ಪೊರೆ ಅ ಪಾರ ಮಹಿಮಳೆ ಬಾರಿಬಾರಿಗೆ ಸೇರಿ ನಿನ್ನಪಾದ ವಾರಿಜಕೆ ನಾ ಸಾರಿ ಬೇಡುವೆ ಧೀರಳೆ ಸುವಿ ಚಾರಿ ನಿಜಸುಖ ತೋರು ಬೇಗನೆ 1 ಮನುಮುನಿಗಳಿಗೊಲಿದು ಘನಸುಖಸಾಮ್ರಾಜ್ಯ ವನು ಕೊಟ್ಟು ಸಲಹಿದಿ ಕನಿಕರದೊಡನೆ ಮಿನುಗುವ ಶತಕೋಟಿದಿನ ಕರಪ್ರಭಾಮಯೆ ಅನುಪಮುನಿಜಜ್ಞಾನವನು ನೀಡು ಬೇಗನೆ ಚಿನುಮಯಾತ್ಮಳೆ ಘನಕೆ ಘನ ನಿನ್ನ ವರರುಹಂಘ್ರಿಯ ನೆನೆವೆನನುದಿನ ಜನನಿ ಅಣುಗನ ಕೊನೆಯಜಿಹ್ವೆಯೊಳ್ ಪ್ರಣಮ ಬರಿಯಮೈ ಮಣಿವೆ ಕಲ್ಯಾಣೆ 2 ಪನ್ನಂಗಧರ ಸುರಸನುತ ಶ್ರೀರಾಮ ಸುನ್ನತ ಮಹಿಮಂಗಳನ್ನು ಬಲ್ಲವಳೆ ಅನ್ನ ಪೂರ್ಣೆಯೆ ಉಮೆ ಪನ್ನಂಗವೇಣಿಯೆ ಮನ್ನಿಸು ಬಡವನ ಬಿನ್ನಪ ಕರುಣೆ ಭಿನ್ನವಿಲ್ಲದೆ ನಿನ್ನ ಬೇಡುವೆ ಉನ್ನತೋನ್ನತ ಪದವನಿತ್ತು ಧನ್ಯನೆನಿಸೌ ಎನ್ನ ಮನದಿಷ್ಟವನ್ನು ಪಾಲಿಸಿ ವಿಮಲ್ಹøದಯೆ 3
--------------
ರಾಮದಾಸರು
ತಾಳಲಾರೆ ರಂಗಯ್ಯ ನಾ ತಾಳಲಾರೆ ತಾಳಲಾರೆ ಕರುಣಾಳು ರಾಜೇಂದ್ರನೆ ಖೂಳ ಜನರು ಕೂಡಿ ಪೇಳುವ ನುಡಿಯನ್ನು ಪ. ದೇವ ನಿನ್ನ ಪಾದಾಂಬುಜ ಸೇವೆಯನ್ನು ಭಾವಶುದ್ಧದಿ ಮಾಳ್ವ ಭಾಗ್ಯ ಪೊಂದಿರಲು ಮೂ- ದೇವಿ ಎಂದೆನ್ನನು ಮೂದಲಿಸುವ ಮಾತ 1 ಹೇಡಿ ಜನರು ಮನಕೆ ಬಂದಂ- ತಾಡುತ್ತಿಹರು ರೂಢಿಪ ಮುಖದಿ ನೀ ಮಾಡುವ ಕೃತ್ಯದ ಪ್ರೌಢಿಮೆಯರಿಯದೆ ಮೂಢ ಜನರ ಮಾತ 2 ಹೆತ್ತ ಮಗನು ಹಸ್ತಕನಾಗಿ ಹತ್ತಲಿರಲು ಉತ್ತಮ ಪದವಿಯ ತೊತ್ತಿನ ಕುವರರಿಗಿತ್ತದು ಸರಿಯೆ ಸ- ರ್ವೋತ್ತಮ ದೊರೆಯೆ ನಾ 3 ತೋರೊ ಸೂಕ್ತಿ ತಾತ್ಸಾರವ್ಯಾಕ- ಪಾರ ಯುಕ್ತಿ ಕ್ರೂರ ಮಾನವರಹಂ- ಕಾರ ಖಂಡಿಸಿ ಮುಖ್ಯ ಧಾರುಣಿ ಪರೊಳಂತ:ಪ್ರೇರಿಸುವುದು ಶಕ್ತಿ 4 ಲೋಕನಾಥ ನೀನಹುದೆಂಬ- ದ್ಯಾಕೆ ಗಾಥಾ ಈ ಕಪಟದ ಕೃತ್ಯ ಯಿಕ್ಕಡಿವುತ ಬೇಗ ಸಾಕೆನ್ನ ಭಕ್ತ ಪ- ರಾಕು ವೆಂಕಟನಾಥ 5
--------------
ತುಪಾಕಿ ವೆಂಕಟರಮಣಾಚಾರ್ಯ