ಒಟ್ಟು 575 ಕಡೆಗಳಲ್ಲಿ , 72 ದಾಸರು , 317 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರಿನಾಮದರಗಿಣಿಯು ಹಾರುತಿದೆ ಜಗದಿ|ಪರಮಭಾಗವತರು ಬಲೆಯ ಬೀಸುವರು ಪಕೋಪವೆಂಬ ಮಾರ್ಜಾಲವು ಕಂಡರೆ ನುಂಗುವುದು |ತಾಪವೆಂಬ ಹುಲಿಯು ಕೊಂಡೊಯ್ವುದದನು ||ಕಾಪಾಡಿರದನು ಹೃದಯದೊಳಗಿಂಬಿಟ್ಟು |ಅಪತ್ತಿಗೊದಗುವುದು ಈ ಮುದ್ದು ಗಿಣಿಯು 1ದಾರಿಯ ನಡೆವಾಗ ಚೋರರ ಭಯವಿಲ್ಲ |ಮಾರಿಬಂದರದನು ಹೊಡೆದು ನೂಕುವುದು ||ಕ್ರೂರ ಯಮಭಟರನು ಮೂಗು ರೆಕ್ಕೆಯಲಿ ಬಡಿದು |ದಾರಿ ತೋರುವುದು ಮುರಾರಿಯ ಪಟ್ಟಣಕೆ 2ಎಷ್ಟೆಂದು ವರ್ಣಿಸಲಿ ಈ ಮುದ್ದು ಅರಗಿಣಿಯು |ಹೊಟ್ಟೆಯೊಳೀರೇಳು ಜಗವನಿಂಬಿಟ್ಟ ||ಸೃಷ್ಟೀಶ ಪುರಂದರವಿಠಲನ ನೆನೆ ನೆನೆದು |ಮುಟ್ಟಿ ಭಜಿಸುವುದು ಈ ಮುದ್ದು ಗಿಣಿಯು 3ಹರಿಯೆ................................................ ಪಹರಿನಿನ್ನ ಕೃಪೆಯೆನಗೆ ಚಂದ್ರ - ತಾರಾಬಲವು |ಹರಿನಿನ್ನ ಕರುಣವೇ ರವಿಯ ಬಲವು ||ಹರಿನಿನ್ನೊಲುಮೆಯೆನಗೆ ಗುರುಬಲವು ಭೃಗುಬಲವು |ಹರಿನಿನ್ನ ಮೋಹವೇ ಶನಿಯ ಬಲವು 1ಮಂಗಳಾತ್ಮಕ ನಿನ್ನ ಅಂಗದರುಶನವೆನಗೆ |ಮಂಗಳನ ಬಲವು ಎನ್ನಂಗಕೀಗ ||ರಂಗಯ್ಯ ನಿನ್ನ ಚರಣಾರವಿಂದವ ನೋಡೆ |ಹಿಂಗಿ ಪೋಪುದು ಅಘವು ಸೌಮ್ಯಬಲವು 2ಆದಿಪುರುಷನೆ ನಿನ್ನ ಅರಿಪುದೇ ಕೇತುಬಲ |ಅದಿಮೂಲನೆ ನಿನ್ನಗುಣಕಥನವ ||ಆದರಿಸಿ ಕೊಂಡಾಡುವುದೆ ಎನಗೆ ರಾಹುಬಲ |ಆದಿಮೂರುತಿ ಬ್ರಹ್ಮಪುರಂದರವಿಠಲ 3
--------------
ಪುರಂದರದಾಸರು
ಹ್ಯಾಂಗೆ ಶೋಭಿಸುವ ನೋಡೆ ಯಾದವ ಕೃಷ್ಣಹ್ಯಾಂಗೆ ಶೋಭಿಸುವ ನೋಡೆ ಪಮಂಗಳ ಮಹಿಮ ಶ್ರೀರಂಗ ತನ್ನವರಿಗೆ ಅ.ಪಘಲುಘಲು ಘಲುರೆನ್ನುತ ಕಾಲ್ಗಡಗ ನೂ-ಪುರಗೆಜ್ಜೆ ಸರಪಣಿಯುಸರಿಗೆಳೆಯರ ಕೂಡಿ ಮುರಳಿಯ ಧರಿಸುತಹರುಷದಿಂದಲಿ ಸಪ್ತಸ್ವರಗಳ ನುಡಿಸುತ್ತ 1ಉಟ್ಟ ಪೀತಾಂಬರವು ನಡುವಿಗೆ ಜರದಪಟ್ಟೆಯ ಚಲ್ಲಣವುಗಟ್ಟಿ ಕಂಕಣ ಕೈಗಳಿಟ್ಟು ಕಟಿಯ ಮೇಲೆಭಕ್ತವತ್ಸಲ ಸ್ವಾಮಿ ಸೃಷ್ಟಿಪಾಲಕ ಕೃಷ್ಣ 2ಎಳೆ ತುಳಸಿಯ ಮಾಲೆಯು ಕಂಠದಿ ಮೆರೆವಪದಕಕೌಸ್ತುಭಮಣಿಯುನಳಿನಲೋಚನೆಯ ಉರದಲ್ಲಿ ಧರಿಸಿಕೊಂಡುಚಲುವ ಚನ್ನಿಗನಾಗಿ ಹೊಳೆಯುವ ದೇವನು 3ಕೋಟಿ ಸೂರ್ಯರ ಸೋಲಿಪ ಮುಖಕಾಂತಿಯಸಾಟಿಯಾರುಂಟವಗೆನೀಟಾಗಿ ಕರ್ನಕುಂಡಲ ಕಿರೀಟವು ಹೊಳೆಯೆಲಲಾಟದಿ ಕಸ್ತೂರಿ ತಿಲುಕವು ಹೊಳೆಯುತ್ತ 4ಕಂಗಳ ಕುಡಿನೋಟದಿ ಸಜ್ಜನರ ಪಾ-ಪಂಗಳ ಪರಿಹರಿಸಿಮಂಗಳ ಮಹಿಮ ಶ್ರೀರಂಗ ಮೂರುತಿ ಸಾಧುಸಂಗ ವಂದಿತಸಿರಿಕಮಲನಾಭ ವಿಠ್ಠಲ5
--------------
ನಿಡಗುರುಕಿ ಜೀವೂಬಾಯಿ