ಒಟ್ಟು 9830 ಕಡೆಗಳಲ್ಲಿ , 132 ದಾಸರು , 5659 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮರೆತಿರಲಾರೆ ಪ್ರಿಯನ ಮಾರನಯ್ಯನ ಪ ಇರುಳು ಹಗಲು ಅನುಸರಿಸಿ ತಿರುಗುತಲಿ ಸುರತ ವಾರ್ತೆಗಳನಾಡಿಸುತ ನಲಿಸುತಿಹನ ಅ.ಪ ಎನಗೆ ಬೇಕಾದುದ ತನಗೆ ತಾ ಕೊಡುತಲಿ ಮನಕೆ ಹರುಷವ ಕೊಡುವನ ತ್ರಿಲೋಕ ಸುಂದರನ 1 ಎನ್ನ ನೋಡುತಲಿ ಹಿಗ್ಗುತಲಿರುವನ ಕಣ್ಣಲಿ ಕಾಣದ ಘಳಿಗೆ ಯುಗವಾಗಿರುವುದೆಲೆ 2 ಪ್ರೇಮದಿ ಬಿಗಿದಪ್ಪುತ ಮುದ್ದಿಸಿ ಲಾಲಿಪನ 3 ಚದುರನ ಸರಸವು ವಿಧ ವಿಧ ಲೀಲೆಗಳ 4 ಜನುಮ ಜನುಮಕು ಇವನೆ ಪ್ರಿಯನಾಗಿರ- ಅನುದಿನ 5 ಅವನಿಲ್ಲದ ಸೌಖ್ಯವು ನರಕಕ್ಕೆ ಸಮ ಸವಿಯಾಗದು ಅಮೃತವು ವಿಷವಾಗುವುದೆಲೆ ಮನಕೆ 6 ಬೆರೆವ ಸುಖಕೆ ಇನ್ನು ಸರಿಯಾವುದೆ ಜಗದೊಳು 7
--------------
ಗುರುರಾಮವಿಠಲ
ಮರೆತಿರಲಾರೆ ಮನಸಾರೇ ಹರೇ ಪ ಮರೆತಿರಲಾರೆ ನಾ ಮಹಿತಚಾರಿತ್ರನ ಸರಸಿಜಪತ್ರ ನೇತ್ರನ ಅ.ಪ ಬಗೆಬಗೆ ರತಿಯಲಿ ಜಗವನು ಮೋಹಿಪ ಸುಗುಣನ ಜಗತ್ಪ್ರಾಣನ 1 ಚೇತನರಿಗೆ ಸುಖದಾತನ ದುಃಖ ವಿ ಘಾತನ ಲಕ್ಷ್ಮೀನಾರಾಯಣನ 2 ದಾಸರ ಹೃದಯನಿವಾಸನ ದೋಷನಿರಾಸನ ಶ್ರೀನಿವಾಸನ 3 ವೆಂಕಟರಮಣನ ಕಿಂಕರಶರಣನ ಸಂಕಟಹರ ನಿಷ್ಕಳಂಕನ 4 ಮಾನಿನಿಯ ಅಭಿಮಾನವ ಕಾಯ್ದನ ದೀನರ ಹರ್ಷನಿಧಾನನ 5 ರಾಮನ ದೈತ್ಯವಿರಾಮನ ಪಾವನ ನಾಮನ ಹೃದಯಾರಾಮನ 6 ಧರೆಯೊಳುತ್ತಮಪುಲಿಗಿರಿಯೊಳು ನೆಲಸಿಹ ವರದ ವಿಠಲವರದನ ದೇವನ 7
--------------
ವೆಂಕಟವರದಾರ್ಯರು
ಮರೆತಿರಲಾರೇ-ಮನಸಾರೇ ಹರೇ ಪ ಸರಸಿಜ ಪತ್ರನೆತ್ರನ ಅ.ಪ. ಬಗೆ ಬಗೆರತಿಯಲ್ಲಿ ಜಗವನ್ನುಮೋಹಿಪ ಸುಗುಣನ ಜಗತ್ಪ್ರಾಣನ 1 ಚೇತನರಿಗೆ ಸುಖದಾತನ ದುಃಖ ವಿಘಾತನ ಲಕ್ಷ್ಮೀನಾಥನ 2 ದಾಸರ ಹೃದಯ ನಿವಾಸನ ದೋಷನಿರಾಸನ ಶ್ರೀನಿವಾಸನ3 ವೆಂಕಟರಮಣನ ಕಿಂಕರಶರಣನ ಸಂಕಟಹರ ನಿಷ್ಕಲಂಕನ 4 ಮಾನಿನಿಯ ಅಭಿಮಾನವ ಕಾಯ್ದನ ದೀನರ ಹರ್ಷನಿಧಾನನ5 ರಾಮನ ದೈತ್ಯವಿರಾಮನ ಪಾವನ ನಾಮನ ಹೃದಯಾರಾಮನ 6 ಧರೆಯೊಳುತ್ತಮ ಪುಲಿಗಿರಿಯೊಳು ನೆಲಸಿಹ ವರದ ವಿಠಲವರದನ ದೇವನ7
--------------
ಸರಗೂರು ವೆಂಕಟವರದಾರ್ಯರು
ಮರೆತು ಇರುವರೆ ಸರ್ವಜ್ಞನೆನಿಸಿ ಪ ಮರೆತು ಇರುವರೇನೋ ಕರುಣಾ ವಾರಿಧಿ ನರಹರಿಯೆ ಬಾಲನ ದುರುಳತನಗಳೆಣಿಸಿದೊಡೆ ನೀ ಕರೆದು ಮುಂದಕೆ ಪೊರೆವರ್ಯಾರು 1 ಕಲ್ಲು ಕೊಟ್ಟ ಬಿಲ್ಲಿಲಿಟ್ಟ ಕ್ಷುಲ್ಲಕ ಮಾತಾಡಿ ಬಿಟ್ಟ ಕಳ್ಳ ಸುಳ್ಳ ಜಾರನೆಂದ ಗೊಲ್ಲತಿಯರನೆಲ್ಲ ಪೊರೆದಿ 2 ತರಳ ನಿನ್ನ ಪೂಜಿಸಲಾರದೆ ಕರವ ಶಿರದಿ ಇರಿಸೆ ಕೂತು ಕರದಿ ಗುಂಜವಿರಿಸಿ ಸಿರಿಯ ಮರೆತು ಇರುವವರಂತೆ 3 ವರ ಸುಮೌನೀಗಣಕೆ ಬಲ ನಾ ನರಿಯಿರೆಂದು ಬೀರಿ ಚರಣ ಚರಣದರ ಮನೆಯೊಳಿರಿಸಿ ಪೊರೆವಿ ತರಳನ ನೀ ಜರಿವರೇನೊ 4 ಧರಣಿಯೊಳಗೆ ಇರುವ ಕ್ಷೇತ್ರದಿ ವರ ಸುಕ್ಷೇತ್ರವಿದೆಂದು ಅರುಹಿ ಬರುವ ಸಜ್ಜನರನು ಪೊರೆವಿ ಭಾರ ನಾನೊಬ್ಬನೇ ಪೇಳೋ 5 ಶ್ರೀ ನರಹರಿಯೆ ಇನಿತು ಜ್ಞಾನ ಶೂನ್ಯನ ಮಾಡಿ ನಿನ್ನ ಕಾಣಿಸುವರೊಡನೆ ಮಾಧವ 6
--------------
ಪ್ರದ್ಯುಮ್ನತೀರ್ಥರು
ಮರೆತು ಬಿಡುವರೇ ಸ್ವಾಮಿ ಪ ಕರಪಿಡಿದೆನ್ನನು ಕಾಯೊ ಮಾರುತಿಅ.ಪ. ಸೀತೆಗೋಸುಗ ಪೋಗೀ ಶಿರಧಿಯದಾಟಿ ನೀ ಮೋದ ಪಾತಕಿ ರಾವಣನಾ ಪುರದ ದಹಿಸಿ ಬಂದು ಚೂಡಾಮಣಿಯ ತಂದು ಶ್ರೀ ರಾಮರಿ ಗರ್ಪಿಸಿದೇ 1 ಪರಮಾತ್ಮಾ ಶ್ರೀ ಕೃಷ್ಣಗರ್ಪಣೆ ಮಾಡಿದೆ 2 ಮಧ್ವರಾಯರೆಂಬೊ ಪೆಸರಿನಿಂದಾ ಅದ್ವೈತವಾದಿಗಳ ಖಂಡಿಸಿ ಮೆರೆದೇ ಅದ್ಭುತ ಮಹಿಮ ವೇಂಕಟವಿಠಲನ ಪಾದ ಪದ್ಮಂಗಳ ನಿರುತ ಸೇವಿಸುತಿರಾ 3
--------------
ರಾಧಾಬಾಯಿ
ಮರೆತು ಹೋದೆನೊ ದೇವ ರಂಗಯ್ಯ ರಂಗ ಸಿರಿದೇವಿ ರಮಣನೆ ಪರನೆಂದು ತಿಳಿಯದೆ ಪ ನೀರೊಳು ಮುಳುಗುತ್ತ ಮೀನಮತ್ಸ್ಯನು ಎಂದು ವೇದವ ತಂದಿತ್ತೆ ದೇವೇಶನೆ ವಾರಿಧಿಶಯನನೆ ವಾರಿಜಾಕ್ಷನು ಎಂದು ಸಾರಸಾಕ್ಷನ ಗುಣ ಸ್ಮರಿಸದೇ ಮನದಲಿ 1 ಬೆಟ್ಟ ಬೆನ್ನಿಲಿ ಪೊತ್ತು ಪೊಕ್ಕು ನೀರೊಳು ಬೇಗ ಭಕ್ತರನುದ್ಧರಿಸಿದ ದೇವನ ಪೃಥ್ವಿಯ ಕೋರೆಯಿಂದೆತ್ತಿ ಅಸುರನ ಕೊಂದ ಸಿಸ್ತು ತೋರಿದ ಪರವಸ್ತುವ ಸ್ಮರಿಸದೆ 2 ಘುಡು ಘುಡಿಸುತ ಬಂದು ಒಡಲ ಸೀಳಲು ಖಳನ ಅಡವಿ ಮೃಗವು ಎಂದು ಬೆರಗಾದೆನೊ ಹುಡುಗನಂದದಿ ಪೋಗಿ ಪೊಡವಿಪಾಲಕನ ಬೇಡಿ ಕೊಡಲಿಯ ಪಿಡಿಯುತ್ತ ತಾಯತರಿದನ ಸ್ಮರಿಸದೆ 3 ನಾರಿಯನರಸುತ ವನವ ಚರಿಸಿದಿ ನಾರಿಚೋರನ ಕೊಂದೆ ವಾನರ ಸಹಿತ ನವನೀತ ಚೋರನೆ ಮನೆಮನೆಗಳ ಪೊಕ್ಕು ಗಾರು ಮಾಡಿದ ಕೃಷ್ಣ ಹರಿಯೆಂದು ಸ್ಮರಿಸದೆ 4 ಬೆತ್ತಲೆ ನಿಂತರು ಉತ್ತಮ ನೆನಿಸಿದಿ ಸತ್ಯಮೂರುತಿ ಪುರುಷೋತ್ತಮನೆ ಕತ್ತಿ ಕಯ್ಯಲಿ ಪಿಡಿದು ಮತ್ತೆರಾವುತನಾಗಿ ಸುತ್ತಿ ಸುತ್ತಿದ ಸರ್ವೋತ್ತಮನರಿಯದೆ 5 ಭಕ್ತವತ್ಸಲಸ್ವಾಮಿ ಭಯನಿವಾರಣನೆಂದು ಭೃತ್ಯರು ನೃತ್ಯದಿ ಕುಣಿಯುವರೊ ಸತ್ಯ ಸಂಕಲ್ಪನೆ ಸತ್ಯಭಾಮೆಯ ಪ್ರಿಯ ಭಕ್ತರೊಡೆಯ ಪರವಸ್ತುವ ಸ್ಮರಿಸದೆ6 ಕರುಣವಾರಿಧಿಯೆಂದು ಸ್ಮರಿಸುವ ಭಕುತರ ಪರಿ ಅಘಗಳು ಪರಿಹಾರವೊ ಪತಿ ಕಮಲನಾಭ ವಿಠ್ಠಲ ಸ್ಮರಿಸದೆ ಅಪರಾಧ ಸಲಹೆಂದು ಸ್ಮರಿಸದೆ 7
--------------
ನಿಡಗುರುಕಿ ಜೀವೂಬಾಯಿ
ಮರೆತೆಯೆನೋ ರಂಗಾ ಮಂಗಳಾಂಗತುರು-ಕರ ಕಾಯ್ವಲ್ಲಿ ತೊಂಡನಾಗಿದ್ದೆನ್ನ ಪ ಕೋಲು ಕೈಯಲ್ಲಿ ಕೊಳಲು ಜೋಲುಗಂಬಳಿ ಹೆಗಲಮ್ಯಾಲೆ ಕಲ್ಲಿ ಚೀಲ ಕೊಂಕಳಲ್ಲಿಕಾಲಕಡಗವನಿಟ್ಟು ಕಾಡೊಳಿಹ ಪಶುಹಿಂಡಲಾಲಿಸುವ ಬಾಲಕರ ಮ್ಯಾಳದೊಳಗಿದ್ದೆನ್ನ1 ಮಣಿ ಕÀವಡÉಯನು ಕಾಡೊಳಿಹ ಗುಲಗಂಜಿಸಲ್ಲದೊಡವೆಯ ನೀನು ಸರ್ವಾಂಗಕೆಅಲ್ಲೆಸೆಯೆ ಧರಿಸಿ ನವಿಲಗರಿಗಳ ಗೊಂಡೆಅಲ್ಲಿ ಗೊಲ್ಲರ ಕೂಡ ಚೆಲ್ಲಾಟ ಮಾಡುತಲಿ 2 ಸಿರಿದೇವಿ ಬಂದು ಸೇರಿದ ಬಳಿಕ ಲೋಕದಲಿಸಿರಿ ಅರಸನೆಂದು ಸೇವಕರರಿವರೋಶರಣಾಗತರ ಪೊರೆವ ಶ್ರೀರಂಗವಿಠಲಯ್ಯನರಸಿಂಗ ನೀನಿರುವ ಪರಿಯು ಮುಂದಿನ ಸಿರಿಯು3
--------------
ಶ್ರೀಪಾದರಾಜರು
ಮರೆಯ ಮಾಡುವರೆ ರಂಗಯ್ಯ ತೆರೆಯ ಹಾಕುವರೆ ವರದನು ಜಗಕೆಂದು ಎನಿಸಿದ ಬಳಿಕ ಪ ಕುರುಹ ನಾನರಿಯೆ ನಿನ್ನಯ ರಂಗಯ್ಯ ಸುರತವ ಬಲ್ಲೆ ಪರಿ ಮಾಡಿ ತೋರಿದೆ 1 ಗುರುತುಯೆಂದರಿಯಾ ಸರ್ವದಾ ಎನ್ನ ದೊರೆಯು ನೀನಲ್ಲೆ ತೆರೆಯು ನಿನ್ನದು ಲೋಕ ಪರಿಪಂಥಿಯಾಹುದೆ 2 ದುರಿತವು ಮೊದಲೆ ಪೋದವು ವಾಸುದೇವವಿಠಲನೆ ಪೊರೆಯೊ ದಯವು ನಿನ್ನ ಸಹಜ ಪೋಗುವುದೇ 3
--------------
ವ್ಯಾಸತತ್ವಜ್ಞದಾಸರು
ಮರೆಯದ ಭಾವಗೋಚರವಾುತಯ್ಯಾಕರುಣಿ ವೆಂಕಟದಾಸವರ್ಯ ಸದ್ಗುರುವೆ ಪಸನ್ನಿಕರ್ಷವನಾದರಣ ಹೇತು ಮಾನವರಿಗೆನ್ನುತಾನಂದ ರಸರುಚಿ ದೋರಿಸಿನಿನ್ನನೆ ತೊಳಲಿ ಬಳಲುತ ನಿನ್ನೊಳೆರಗುವಂತುನ್ನತರ ಮಾಡಲಂತರ್ಧಾನವಡೆವೆ 1ಗೋಪಿನಾರಿಯರಿಗಾನಂದ ರೂಪವ ತೋರಿತಾಪಬಡುವಂತಗಲಿ ುದ್ಧವರ ಮುಖದಿಸೋಪಾಯವಚನದಿಂ ತಿಳು'ದರ್ಥವ ನೆನೆಯಲೀ ಪರಿಯ ತೋರಿತೆನಗೆಲೆ ದಯಾನಿಧಿಯೆ 2ನೆರೆಧನ್ಯರಾದೆವಾ'ಲ್ಲ ಸಂದೇಹ ಗುರುವರ ವಾಸುದೇವಾರ್ಯ ಚಿಕನಾಗಪುರದೀಪರತತ್ವವರುಪಿ ವೆಂಕಟದಾಸ ವೇಷದಿಂಮರಳಿ ನಿಜದೊಳು ನಿಂದೆ ಕರುಣಾಸಮುದ್ರಾ 3
--------------
ತಿಮ್ಮಪ್ಪದಾಸರು
ಮರೆಯದಿರು ಪದಾಂಬುಜ ಮರೆಯದೋಳು ಪದವಾ ಪ ಧಾರುಣಿಯನೆ ಅಳೆದೀರಡಿ ಮಾಡಿದ ಘನಪದವಾ ಮುಕಾರಿಯು ತಳ್ತ ವಾರಿಯ ಪಡದನುಪಮ ಪದವಾ 1 ಕಾಲಿಡುತಲೆ ಕಲ್ಲನು ಬಾಲೆ ಮಾಡಿದ ಪದವಾ ಕಾಳುರಗನ ಪೆಡೆಯಲಿ ಲೀಲೆಯಾಡಿದತುಳ ಪದವಾ 2 ವರಶರಣರ ನಾಲಿಗೆ ನಿರುತದಿ ನುತಿಸುವ ಪದವಾ ಉರೆ ದುರಿತವದುರಿಪ ನರಸಿಂಹವಿಠ್ಠಲನ ಪದವಾ 3
--------------
ನರಸಿಂಹವಿಠಲರು
ಮರೆಯದಿರು ಭವಶರಧಿ ಕೊನೆದೋರದು ಹರಿಯ ಮರೆತರೆ ಮನವೆ ಗತಿಯೇನು ಇಹುದು ಪ ಪಿಂತೆ ಧೃತರಾಷ್ಟ್ರ ನಿಶ್ಚಿಂತೆಯಲಿ ಸುತರಿಂದ ಎಂಥ ಸಿರಿವಂತನೆಂದೆನಿಸಿ ಮೆರೆದಾ ಕಂತುಪಿತನನು ಸುತರು ಪಂಥದಲಿ ನೆನೆಯದಿರೆ ಎಂಥವನ ಪಾಡಾದುದರಿಯೆ ನೀ ಮರುಳೇ 1 ತಾನೆ ಪರಬ್ರಹ್ಮನೆಂದರಿದಾ ಹಿರಣ್ಯಕಶು- ಪಾನೆಯೆಂದರಿದು ಮೆರೆಯೆ ಹರಿವೈರದಿ ಸೂನು ಪ್ರಲ್ಹಾದನಾನತನಾಗಿ ಮೊರೆವೋಗಲು ಹೀನ ರಕ್ಕಸನ ಪರಿಸರಿ ಏನಾಯಿತು 2 ಸತಿಸುತರ ಮುದದಿಂದ ಹಿತವಂತ ಬಳಿಗದಿಂ- ದತಿ ತೃಪ್ತವಾಗಿ ನಾನಿರುತಿರಲು ನಿನ್ನ ಧೃತಿಗುಂದಿ ಪವಡಿಸಿರೆ ಗೆಜ್ಜೆಪಾದವ ಕಂಡು ನುತಿಸುವೆನನವರತ ನರಸಿಂಹವಿಠಲರಾಯಾ 3
--------------
ನರಸಿಂಹವಿಠಲರು
ಮರೆಯದಿರು ಮರೆಯದಿರು ಮನುಜಾನಾರಾಯಣನ ಸ್ಮರಣೆಯನು ಮಾಡು ಮನುಜಾ ಪ ಸತಿ ಬಣಗು ಹೆಣ್ಣುಗಳೇಕೆಮಂಗಳಾತ್ಮಕನಿರಲಿಕ್ಕೆ ಪರದೈವವೇಕೆ 1 ಹಾಲು ಹಳ್ಳವಿರಲಿಕ್ಕೆ ವಾಳಿಯವ ತರಲೇಕೆಮೇಲು ನಾಮವಿರಲಿಕ್ಕೆ ಕಟುಕು ಇನ್ನೇಕೆಬಾಲ ಹನುಮನಿರಲಿಕ್ಕೆ ಹುಲು ಕಪಿಗಳೇಕೆಒಳ್ಳೆ ತುಳಸಿ ಇರಲಿಕ್ಕೆ ಕಗ್ಗೊರಲೆಯೇಕೆ 2 ಚಿನ್ನದ ಗಿರಿಯಿರಲಿಕ್ಕೆ ಕಬ್ಬಿಣದ ಮೊರಡಿಯೇಕೆರನ್ನ ಮಾಣಿಕವಿರಲಿಕ್ಕೆ ಕಾಜಿನ ಹರಳೇಕೆಅನ್ನ ತುಪ್ಪವಿರಲಿಕ್ಕೆ ಮದ್ಯಪಾನಗಳೇಕೆಚೆನ್ನಾದಿಕೇಶವನಿರೆ ಬಿನುಗು ದೈವಗಳೇಕೆ3
--------------
ಕನಕದಾಸ
ಮರೆಯದಿರು ಮರೆಯದಿರು ಹರಿಯನು ಪಾಪಿ ಪ ಮರೆಯದಿರೆ ನೀ ಮೈಕುಂಠಕೆ ಪೋಪಿಅ.ಪ. ಮೂರು ದಿನ ಬಾಳ್ವ ಸಂಸಾರವ ನೋಡಿ ಬಾರಿ ಹರುಷಿಸದಿರು ನೀನೆಲೊ ಖೋಡಿ 1 ಮತಿವಂತನಾದರೆ ಹರಿಪುರಕೆ ಪೋದಿ ಸತಿಸುತರ ನಂಬೆ ನಿನ ಬಾಯಲಿ ಬೂದಿ 2 ಸಿರಿಯ ನಂಬಿದ ದುರ್ಯೋಧನ ಬಿದ್ದ ಹರಿಯ ನಂಬಿದ ಭೀಮಸೇನನು ಗೆದ್ದ 3 ಆನೆ ಕುದುರೆ ರಥ ಭಂಡಾರವು ನಿಂದೆ ಪ್ರಾಣ ಹೋಗುವಾಗವು ಬಾರವು ಹಿಂದೆ 4 ರಂಗೇಶವಿಠಲನ ನಂಬಿದವ ಜಾಣ ಅಂಗನೆಯರ ನಂಬಿದ ಮನುಜನೆ ಕೋಣ 5
--------------
ರಂಗೇಶವಿಠಲದಾಸರು
ಮರೆಯದಿರು ಮಹಾಮಾಯೆ ಮಾರುತನ ತಾಯೆ ಕರುಣಿಕರಕಮಲವನು ಶಿರದೊಳಿರಿಸುತ ಕಾಯೆ ಪ. ಪುಷ್ಟಿಕರಿ ನೀ ಪೂರ್ಣ ದೃಷ್ಟಿಯಿಡಲೀಗಖಿಳ ಕಷ್ಟ ಪರಿಹಾರಗೈವುತಿಷ್ಟಾಪೂರ್ತಿಗಳು ಸ್ಪಷ್ಟವಾಗುವವು ಸಕಲೇಷ್ಟದಾಯಕ ನಮ್ಮ ವಿಠ್ಠಲನ ಸೇವೆಗುತ್ಕøಷ್ಟ ಸನ್ನಹವಹದು 1 ಲೋಕನಾಯಕಿಯೆ ಕರುಣಾಕಟಾಕ್ಷವನಿರಿಸು ಭೀಕರಿಸುತಿಹ ಮನದ ವ್ಯಾಕುಲವ ಹರಿಸು ಪಾಕ ಶಾಸನ ಪೂಜೈ ಪದಕಂಜ ಭಕ್ತಜನ ಶೋಕಸಾಗರ ಶೋಷಣೈಕ ನಿಧಿ ಹರಿಸಹಿತ 2 ಹಿಂದೆ ಬಹು ಥರದಿ ನಾನೊಂದ ಪರಿಯನು ಮನಕೆ ತಂದು ದಯದೋರಿ ನೀ ಬಂದಿರುವಿ ಮನೆಗೆ ಮುಂದೆನ್ನ ಬಿಡದೆ ಗೋವಿಂದ ವೆಂಕಟಪತಿಯ ಹೊಂದಿರುವನಲಿ ಮಮತೆಯಿಂದಿಲ್ಲಿ ನೆಲೆಯಾಗು 3
--------------
ತುಪಾಕಿ ವೆಂಕಟರಮಣಾಚಾರ್ಯ
ಮರೆಯದಿರು ಹರಿಯಮರೆವರೆ ಮೂರು ಲೋಕದ ದೊರಿಯ ಪ ಮದಗಜ ಹರಿಯೆಂದು ಕರೆಯಲುಒದಗಿ ಆಕ್ಷಣ ಬಂದುಮುದದಿ ನಕ್ರನ ಕೊಂದು ಸಲ-ಹಿದ ಸದ್ಭಕ್ತರ ಬಂಧುಹದುಳ ಪ್ರಹ್ಲಾದನ ಹೆದರಿಸಿದಸುರನಉದರವ ಬಗೆದಂಥದುಭುತ ಮಹಿಮನ1 ನಾರಿಯು ತನ್ನ ಕರೆದ ಮಾತ್ರದಿಸೀರೆಯ ಮಳೆಗರೆದಕ್ರೂರ ಖಳನ ತರಿದು ಆ ಪಾಂಡವರಆರಣ್ಯದಿ ಪೊರೆದಗಾರಾದಜಮಿಳ ನಾರಗ ಎನಲುಪಾರಗಾಣಿಸಿದಪಾರ ಗುಣನಿಧಿಯ 2 ದುರಿತ ಭವ ಪಾಶಾ - ಅವಗೆಂದೆಂದಿಗಿಲ್ಲ ಕ್ಷೇಶಾತಂದೆ ಕದರುಂಡಲಗಿ ಹನುಮಯ್ಯನೊಡೆಯಚಂದಾದಿಕೇಶವನ ನೆನೆದವರೆಂದಿಗು ಧನ್ಯರು3
--------------
ಕನಕದಾಸ