ಒಟ್ಟು 527 ಕಡೆಗಳಲ್ಲಿ , 76 ದಾಸರು , 465 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಿಷ್ಣುಚಿತ್ತ ಸುಕುಮಾರಿ ಕೃಷ್ಣ ಕಥಾಂಬರ ಧಾರಿ ಪ ಕೃಷ್ಣ ಸುಖಂಕರಿ ಕರುಣಾಲಹರಿ ಪಾತಕ ಪರಿಹಾರಿ ಅ.ಪ [ಸೇವೆಗೆ ಕಟ್ಟಿದ ದೇವರ ಮಾಲೆಯಾ ಕಾವೊಳೋ]ಪಾದಿ ಮುಡಿ[ದಿ]ತ್ತವಳೇ ಮಣಿ ಪಾ ದಾವನು ಚೆಂಗಳೆ ಸೇರಿದಳೇ 1 ತವ ಪಾದಾಂಬುಜವೇ ಗತಿಯು ತವ ವಚನಾಮೃತವೇ ಮತಿಯು ತವ ಸಂಸ್ಮರಣವೆ ಪರಮಸುಖ [ತವ] ಮಾಂಗಿರಿರಂಗೇಶ ಸನ್ನಿಧಿಯೂ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ವಿಷ್ಣುಪಾದವ ನೋಡಿದೆ ಎನ್ನ ಮನ- ದಿಷ್ಟ ಫಲಗಳ ಬೇಡಿದೆ ವಿಷ್ಣು ಪಾದವ ನೋಡ್ಯಭೀಷ್ಟ ಫಲಗಳ ಬೇಡಿ ಶ್ರೇಷ್ಠಪಾದಕೆ ಶಿರವ ಮುಟ್ಟಿಸ್ವಂದನೆ ಮಾಡಿ ಪ ಪಾದ ಇದು ನೋಡೆ ಗಯನ ಮೆಟ್ಟಿದ್ದ ಪಾದ ತಂಗಿ ದ್ರೌಪದಿದೇವಿಪತಿಗೆ ಸಾರಥಿಯಾಗಿ ಪಾದ 1 ಪಾದ ಶಂಖವು ಚಕ್ರಪದ್ಮರೇಖ್ಯುಳ್ಳ ಪಾದ ಮಧುರೆಯಲಿ ಮಾವನ ಮಂಚಿಕೆಯಲ್ಹಾರಿ ಪಾದ 2 ಬಲಿಯ ಶಿರ ತುಳಿದ ಪಾದ ನೆಲನ ಮೂರಡಿಯ ಮಾಡಿದ್ದ ಪಾದ ಶಿಲೆಯಾದಹಲ್ಯೆಯ ಉದ್ಧಾರವನು ಮಾಡಿ ಪಾದ 3 ಪಾದ ಕಾಳಿಫಣ ಜಿಗಿದು ತುಳಿದಂಥ ಪಾದ ಕೇಸರಿ ಪಾದ ಕಾ- ಪಾದ 4 ಪಾದ ಈ ಗಯದಿ ಸಾಕ್ಷಾತ ಹರಿಯ ಪಾದ ಕುಕ್ಷಿಯಲಿ ತ್ರಿಜಗವಿಟ್ಟು ರಕ್ಷಿಸುವಂಥ ಪಾದ 5
--------------
ಹರಪನಹಳ್ಳಿಭೀಮವ್ವ
ವಿಸ್ಫುರಿತಾನನ ಪಂಕೇಜಲೋಚನ ಪ ಶರನಿಧಿ ಶಯನ ಸಿರಿಸತಿ ಸದನ ತ್ರಿಭುವನ ಮೋಹನ ನಿಶಾಚರ ದಹನ ಅ.ಪ ಶೌರಿ ಮುರಾರೀ ರಾಧಾ ಮನೋಹಾರಿ ಶಂಖ ಚಕ್ರಧಾರಿ ನಿಶಾಚರಾರಿ ಜನೋಪಕಾರಿ ಕರುಣಾಲಹರಿ ಶ್ರೀಹರಿ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ವ್ಯರ್ಥ ದೂರುವರೀಶನಾ ವ್ಯರ್ಥದೂರುವರೈಯ್ಯಾ ಮರ್ತು ತಮ್ಮವಗುಣ ಮರ್ತ್ಯಲಾಭಾ ಲಾಭಾ ಕರ್ತ ಮಾಡುವೆನೆಂದು ಪ ಕಣ್ಣು ಕಿವಿ ನಾಲಿಗಿನ್ನು ನಾಶಿಕಕೊಟ್ಟು ಸನ್ನುತ ಹರಿಕಥೆ ಕೇಳು ಯನ್ನಸ್ತುತಿ ಸುನಿರ್ಮಾಲ್ಲ್ಯುನ್ನತ ತುಳಸಿ ವಾಸನಾಘ್ರಾಣಿಸೆಂದು ಮುನ್ನೆಂದನಲ್ಲದೇ ಆನ್ಯದೈವ ನೋಡೆಂದನೇ ಪಿಶುನರ ಅನ್ಯಾಯವ ಕೇಳೆಂದನೇ ಉದರಕಾಗಿ ಮಾನವ ಹೊಗಳೆಂದನೇ ಭೋಗದ ತನ್ನಗೋಸುಗ ದ್ರವ್ಯ ಆಘ್ರಾಣಿಸೆಂದನೆ 1 ಮಂಡಿತ ಸಿರಸದೋರ್ದಂಡ ಕರಚರಣ ಚಂಡ ಮನಗಳಿಂದಾ ಖಂಡ ನಮಿಸಿ ಸೇವೆ ಪುಂಡಲೀಕದ ಪರಿಗಂಡು ನೃತ್ಯಾದಿಯ ಬೋಧ ಮನನ ಪಂಡುಂಡ ಮಾಡೆಂದ ಮಂಡಿ ಬಿಗಿದರೆಂದನೇ ಜನರಿಗು ದ್ವಂದದಿ ಹೊಡಿಯಂದನೇ ಧನಿಕರ ಕಂಡು ಭ್ರಾಂತಿಗೆ ಬಿದ್ದು ಚಿಂತಿಸುಯಂದನೆ 2 ನಿತ್ಯ ವರಿತು ಸತ್ಯಜ್ಞಾನೌಷದ ಉತ್ತಮ ರಸಾಯನ ಅತ್ತಿತ್ತಲಾಗದೇ ಕೊಂಡು ಇತ್ತ ಭವರೋಗ ವಿಪತ್ತದ ಕಳೆಯೆಂದ ಮತ್ತ ಮಹಿಪತಿ ಸುತ ಹೃತ್ತಾಪಹಾರಿ ಕು ಚಿತ್ತ ನೀನಾಗೆಂದನೇ ಸತ್ಸಂಗ ನಿತ್ಯ ಮಾಡಿರೆಂದನೇ ಬರಿದೆನೀ ಮೃತ್ಯು ದೇವತೆ ಬಾಯ ತುತ್ತಾಗುಯಂದನೆ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶರಣಾಗ್ರಣಿ ರಾಮ ಚರಣಾಂಬುಜ ಬಿಡೆ ನಳಿನ ಷಟ್ ಚರಣ ಬಿಡ ಬಲ್ಲದೆ ಪ ಹನುಮನ ಭಜನೆಂಬ ಘನವಾರಿ ಪೂರಿತ ಮನ ಸರೋವರ ಅಯನವಾಗಿಪ್ಪಾ ಜನಕಸುತೆ ಹಂಸಿ ಮನಸಾಪ ಹಾರಿ ದಿನಕರನ್ವಯದಿಂದ ವಿನುತವಾಗಿಪ್ಪ 1 ಅಮರರೋತ್ತಮರೆಂಬ ಭ್ರಮರರಾ ರವಗಳ ಸಮಯೋಚಿತ ಸಾಮಭಿ ಸೇವಿತ ವಿಮಲಾತಮದಿಂದ ಸಾಂದ್ರ ಶಮಲಾತಿ ದೂರ ಪಾದ 2 ಶಿಲೆಯ ಬಾಲೆಯ ಮಾಡಿ ಮಲವಳಿದು ಮುನಿ ಕುಲವಗೆಡಿಸಿ ಸತ್ಕುಲನೆನಿಸಿದೆ ಜಲಧಿಯೊಳಗೆ ಸೇತು ನಿಲಿಸಿ ಸಜ್ಜನರಿಗೆ ನೆಲೆ ವಾಸುದೇವವಿಠಲದೇವ ಪಾದಪದುಮ3
--------------
ವ್ಯಾಸತತ್ವಜ್ಞದಾಸರು
ಶರಣು ಚಿನ್ಮಯರೂಪ ಅತ್ರಿಮುನಿ ಕುಲದೀಪ ಶರಣು ವಿಶ್ವಂಭರನೇ ದತ್ತ ದಿಗಂಬರನೆ ಶರಣು ನೆನುವರ ಸಾರಿ ಸುಳಿದು ಹೊರೆವ ಉದಾರಿ ಶರಣು ದುರಿತಾಪಹಾರಿ ಶರಣು ಸಿಂಹಾದ್ರೀಶ ಯೋಗ ಮಾರ್ಗ ಪ್ರಕಾಶ ಶರಣು ಸರ್ವರ ಗುರುವೆ ಎನಿಸಿ ಲೋಕದಿ ಮೆರೆವೆ ಶರಣು ಮಹಿಪತಿ ನಂದನನ ನೋಡದವೆ ಕುಂದಾ ಸಲಹು ಪದ ದೋರಿ ದ್ವಂದ್ವಾ 1
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶರಣು ಶರಣು ಹರ ಸುಂದರ ಶಂಕರ | ಹೊರೆಯೋ ನಾ ನಿಮ್ಮ ಬಾಲನು ಪ ಪತಿ - ಧರ | ಸರ್ವ ಜನರ ಸಹಕಾರೀ || ಅಘ ಕುಲಿಶ ನೆ | ಪರ್ವತ ಸುತೆ ಮನೋಹಾರಿ 1 ಭವ ಭ್ರಮ | ಪಂಚಾಕ್ಷರ ಸುಖದಾತಾ || ವಂಚನಿಲ್ಲವದರ ವಾಂಛಿತ ಪೂರಿತ | ಅಂಚೆ ಗಮನೆ ಸನ್ಮತಾ 2 ಮಹಿತಳ ವ್ಯಾಪಕ ಮಹಿಮನು - ಪಮ್ಯನೆ | ಮಹಿಪತಿ ನಂದನ ಪ್ರಭೋ | ಅಹಿಯಾ ಭರಣನೆ ಅಹವರಾನಳವಿದು | ವಿಹಿತಾಂಬಕ ತೃಯ ಶಂಭೋ || 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶಿವಕನ್ಯೇ ಗುಣರನ್ನೇ ಪ ತವಪದ ಪದುಮವ | ಜವದಲೆ ತೋರಿಸುಅ.ಪ. ಕಾಲಕೆ ಮಾನಿಯೆ | ಓಲೈಸುವೆ ಪದಕೀಲಾಲಜವನು | ಪಾಲಿಸು ಎನಗೇ 1 ಪವನ ಮತಾನುಗ | ರವನೆಂದೆನಿಪಗೆಭವ ಪರಿಹಾರಿಕ | ನವ ಭಕುತಿಪ್ರದೆ 2 ಮುಕುತಿಗೆ ಮಾರ್ಗವ | ಭಕುತಿಗೆ ಆಕರೆವ್ಯಕುತಿಯಗೈ ಹರಿ | ಭಕುತಿಗಳೆನ್ನಲಿ 3 ಸ್ತವ ಪ್ರಿಯ ನರಹರಿ | ಸ್ತವನವ ಗೈಯ್ಯುವಹವಣೆಯ ತೋರಿಸು | ಭವನಿಗೆ ಜನನಿಯೆ 4 ಗೋವ ಕಾವ ಗುರು | ಗೋವಿಂದ ವಿಠಲನಭಾವದಿ ತೋರಿಸು | ನೀ ಒಲಿದೆನಗೆ 5
--------------
ಗುರುಗೋವಿಂದವಿಠಲರು
ಶಿಶುಗಳಪರಾಧಕೆ ಶಿಕ್ಷೆ ಕಣ್ಣೀಲಲ್ಲದೇ ಯಶವ ಬಡಿಗೋಲವನು ಎತ್ತುವರೇ ರಂಗಾ ಪ ಇಲಿಗೆ ಹೆಬ್ಬುಲಿಯಾಕೆ|ಮೊಲಕೆ ಮದಗಜವ್ಯಾಕೆ| ಕಳೆತ ಹಣ್ಣಿಗೆ ಮತ್ತೆ ಕರಗಸ್ಯಾಕೆ| ಕಲೆ ಬಿದ್ದ ಕನ್ನಡಿಗೆ ಗುದ್ದಲಿಯ ತರಲೇಕೆ| ಗುಳಲಿ ಕಾಯಿಗೆ ಹೊತ್ತಗಲ್ಲ ವ್ಯಾಕೆ 1 ಹಳ್ಳಗೆ ಹಡಗವ್ಯಾಕೆ|ಕೊಳ್ಳಿಗೆ ಕೊಡ ಜಲವ್ಯಾಕೆ| ಮುಳ್ಳು ಮುರಿದುದಕ ಮೊನೆ ಹಾರಿ ಯಾಕೆ| ಮಲ್ಲಿಗೆ ಹೋವಿಗೆ ಬಂಧ ಹಗ್ಗದಲ್ಯಾಕೆ| ಹಲ್ಲಿ ಬೆದರಿಸೆ ಹೊಡೆವ ಭೇರಿಯಾಕೆ 2 ಜ್ಞಾನಹೀನರ ನಮ್ಮ ತಪ್ಪನೆಣಿಸಿದುರಿತ| ಮೊನೆಗಾಣಿಸುತ ಬನ್ನಿ ಬಡಿಸುವುದುಚಿತವೇ| ದೀನವತ್ಸಲ ತಂದೆ ಮಹಿಪತಿ ಸುತ ಪ್ರಭುವೇ| ನ್ಯೂನಾರಿಸದೇ ನಿನ್ನವನೆಂದು ಸಲಹೋ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶುದ್ಧ ಸನ್ಮಾರ್ಗ ಸರ್ವರಿಗಿದು ಒಂದೆ ಬುದ್ಧಿವಂತರು ತಿಳಿದರು ಇದರಿಂದೆ 1 ಇದರಿಂದೇವೆಂಬುದು ನಿರ್ವಾಣ ಒದರುತಲಿಹುದು ವೇದಪುರಾಣ 2 ಪುರಾಣ ಪುಣ್ಯದ ಹಾದಿಯು ನಿಜ ಸುರಮುನಿಗಳಿಗಿದು ಹೊಳೆವದು ಸಹಜ 3 ಸಹಜಾನಂದದ ಸುಖಸಾಗರ ಬಾಹ್ಯಾಂತ್ರ ಸದೋತಿತ ಸಹಕಾರ 4 ಸಹಕಾರವು ಚಿನ್ಮಯ ಚಿದ್ರೂಪ ಸೋಹ್ಯದೋರುವ ಶ್ರೀ ಗುರುಸ್ವರೂಪ 5 ಸ್ವರೂಪವೆ ಸದ್ಗೈಸುವ ಹಾದಿ ಪರಮ ವೈಷ್ಣವರ ಮೂಲಾಗ್ರದ ಆದಿ 6 ಅಧಿವೆಂಬುದು ನಿಜನಿರ್ಧಾರ ಸಾಧಿಸುದವರಿಗೆ ಸಾಕ್ಷಾತಾರ 7 ಸಾಕ್ಷಾತ್ಕಾರವೆ ಮೋಕ್ಷದಮನೆಯು ಅಕ್ಷಯ ಪದ ಅದ್ವೈತದ ಖಣಿಯ 8 ಅದ್ವೈತವೆ ಆಧ್ಮಾತ್ಮ ಸುವಿದ್ಯ ಸಿದ್ದಸಾಧಕರಿಗೆ ಆಗುವ ಸಾಧ್ಯ 9 ಸಾಧ್ಯವೆಂಬುದು ನಿಜಸಿದ್ಧಾಂತ ಭೇದಿಸಿದವರಿಗೆ ಇದು ಸನ್ಮತ 10 ಸನ್ಮತವೆ ಮತ ಸರ್ವರಿಗೆಲ್ಲ ಉನ್ಮನಲೀಹ ಮಹಾಯೋಗಿಯು ಬಲ್ಲ 11 ಬಲ್ಲೆವೆಂಬುದು ಬಲು ಅಗಾಧ ಸೊಲ್ಲಿಗೆ ಸಿಲುಕದು ಗುರುನಿಜಭೋದ 12 ಬೋಧವೆ ಸದ್ಗುರುವಿನ ದಯಕರುಣ ಸದ್ಗತಿಸುಖ ಸಾಧನದ ಸ್ಫುರಣ 13 ಸ್ಫುರಣವೆ ಬ್ರಹ್ಮಾನಂದದ ಹರುಷ ತರಣೋಪಾಯದ ಮಹಾ ಉಪದೇಶ 14 ಉಪದೇಶವೆ ನಿಜ ಉಪನಿಷದ್ವಾಕ್ಯ ಒಪ್ಪಿಡುವದು ಭೂಸ್ವರ್ಗತ್ರೈಲೋಕ್ಯ 15 ತ್ರೈಲೋಕ್ಯಕೆ ಇದು ನಿಜನಿಧಾನ ಭಯವಿಲ್ಲದ ಮಹಾಸುಖಸಾಧನ 16 ಸಾಧನದಿಂದ ಸದ್ಗತಿ ಸಂಪೂರ್ಣ ಸಾಧು ಸಜ್ಜನರಿಗೆ ಸಕಲಾಭರಣ 17 ಸಕಲಾಭರಣ ಸದ್ಗುರು ನಿಜ ಅಭಯವು ಶುಕಾದಿ ಮುನಿಗು ಕೂಡಿದ ಪ್ರಭೆಯು 18 ಪ್ರಭೆಗಾಣಲು ತೋರದು ನೆಲೆನಿಭವು ನಿಭವೆ ಮಹಾಮಂಗಳಕರ ಶುಭವು 19 ಶುಭದೋರುದು ಸದ್ಗುರು ಕೃಪೆಯಿಂದ ಭ್ರಮೆಹಾರಿತು ಮಾಯೆ ಇದರಿಂದ 20 ಇದರಿಂದೆ ಇದರಿಟ್ಟಿತು ಪುಣ್ಯ ಒದಗಿ ಕೈಗೂಡಿತು ಬಂತು ತಾರ್ಕಣ್ಯ 21 ತಾರ್ಕಣ್ಯವು ಬಂತೆನ್ನೊಳು ಪೂರ್ಣ ಸರ್ಕನೆ ದೊರೆಯಿತು ಸದ್ಗುರುಖೂನ 22 ಖೂನವೆ ಎನ್ನೊಳಗಾಯಿತು ಧ್ಯಾನ ಘನಸುಖದೋರುವ ಅನುಸಂಧಾನ 23 ಅನುಕೂಲಾದ ನಮ್ಮಯ್ಯ ಪ್ರಸಿದ್ಧ 24 ಪ್ರಸಿದ್ಧವೆ ಪ್ರತ್ಯಕ್ಷ ಪ್ರಮಾಣ ಭಾಸುತಿಹುದು ಶ್ರೀಗುರು ಶ್ರೀಚರಣ 25 ಶ್ರೀಚರಣಕೆ ಎರಗಿಹ ಮಹಿಪತಿಯು ಸೂಚನೆ ಮಾತ್ರ ಕೊಂಡಾಡಿದ ಸ್ತುತಿಯು 26
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಶುಭ ಮಂಗಲಂ |ಮಂಜುಕರ ಲಾಲಿತ ಕುರಂಗಗೆ ||ಮಂಗಲ ಮೌನಿ ಮಾನಸ ಸಂಗಗೆ |ಮಂಗಲಂ ಮಂದಿರೀಕೃತ ಶೈಲಶೃಂಗಗೆಮಂಗಲಂ ಮಲ್ಲಿಕಾರ್ಜುನ ಲಿಂಗಗೆ ಪ ಚಾರು ಕಪರ್ದಿಗೆ ಗುಹ ಗಣಾಧಿಪ ಗುರುಗೆ | ಗೋರಾಜ ವಾಹನಗೆ |ಗಿರಿಜಾಂತರಂಗ ವಾರಿಜಭೃಂಗಗೆ 1 ಕರ್ಪೂರ ಗೌರಗೆ ಕಲ್ಪಾಂತವೀರಗೆ | ಕಾಲಾಗ್ನಿ ಕಿಲಕಾಲಿತ ಮಾರಗೆ |ಕಾಕೋಲ ಕಂಧರಗೆ ಕಾಶೀ ವಿಹಾರಗೆ |ಕಾಕೋದರಾಭರಣ ಕಮನೀಯಗೆ 2 ವಿಧು ಶಕಲಾಧಾರಿಗೆ ವಿಶ್ವಹಿತಕಾರಿಗೆ ವಿಯದಟನ ವಿಕಟ ಪುರ ಸಂಹಾರಿಗೆ | ವಿಮಲ ವಿದ್ಯಾನಿಧಿಗೆ |ವಿಧಿವಂದ್ಯ ರುಕ್ಮ ಪಾಡುಕ ಪಾದಗೆ 3 ಮಾಧವ |ಮಂಗಳ ಕರತರಂಗನ | ಅರಿತತಿ ಭಂಗವ ಬಿಡಿಸುತಕಂಗಳ ಸದೋದಿತ ರುಕ್ಮ 4
--------------
ರುಕ್ಮಾಂಗದರು
ಶೇಷ ಪರ್ಯಂಕ ಶಯನ ವಿಠಲ ಪೊರೆ ಇವಳ ಪ ವಾಸುದೇವನೆ ನಿನ್ನ | ದಾಸಿ ಎಂದೆನಿಸಿ ಭವಪಾಶವನೆ ಕಳೆಯೊ ಸುವಿ | ಶೇಷ ಹರಿಯೇ ಅ.ಪ. ಪತಿಸುತರು ಹಿತರಲ್ಲಿ | ವಿತತವಾಗಿರುವಂಥಅತಿಶಯದ ತವರೂಪ | ಸತತ ಚಿಂತಸುವಾ |ಮತಿಯನೇ ಕರುಣಿಸುತ | ಕೃತ ಕಾರ್ಯಳೆಂದೆನಿಸೊಕ್ಷಿತಿರಮಣ ಭಿನ್ನವಿಪೆ | ಪತಿಕರಿಸೊ ಇದನಾ 1 ಬುದ್ಧಿಯಲಿ ಸನ್ನಿಹಿತ | ವೃದ್ಧಿಗೈಸಿವಳಲ್ಲಿಮಧ್ವಮತ ಸಿದ್ಧಾಂತ | ಪದ್ಧತಿಗಳಾಅಧ್ವರೇಡ್ಯನೆ ಅನಿ | ರುದ್ಧ ಮೂರುತಿ ಹರಿಯೇಕೃದ್ಧಖಳ ಸಂಹಾರಿ | ಪದ್ಮನಾಭಾ 2 ಕೀಚಕಾರಿ ಪ್ರಿಯನೆ | ಮೋಚಕೇಚ್ಛೆಯ ಮಾಡಿಪ್ರಾಚೀನ ಕರ್ಮದಿಂ | ಮೋಚನವ ಗೈಸೋ |ಯಾಚಿಸುವೆನೋ ಸವ್ಯ | ಸಾಚಿಸಖ ನೀನೆಂದುಈಕ್ಷಿಪುದು ಕರುಣ ಕಟಾಕ್ಷದಲಿ ಹರಿಯೇ 3 ಸಾರ ಸುಖಸಾಂದ್ರಾ 4 ಕಾವ ಕರುಣಿಗಳರಸ | ಭಾಮಕರ ಪರಿಪಾಲಾಓವಿತವ ಸಂಸ್ಮರಣೆ | ಸಾರ್ವಕಾಲಿದಲೀಈವುದಿವಳಿಗೆ ಎಂದು | ಭಾವದಲಿ ಭಿನ್ನವಿಪೆಗೋವಿದಾಂ ಪತಿಯೆ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಶೋಭಾನವೆನ್ನಿರೆ ಸ್ವರ್ಗಾರೋಹಿಣಿಗೆ | ಶೋಭಾನವೆನ್ನಿ ಶುಭವೆನ್ನಿ ಪ ಹರಿಪಾದ ನಖದಿಂದ ಬ್ರಹ್ಮಾಂಡವ ಶೀಳಲು | ಭರದಿಂದ ಇಳಿದು ಸತ್ಯಲೋಕ || ಭರದಿಂದ ಇಳಿದು ಸತ್ಯಲೋಕಕೆ ಬಂದ | ವಿರಜೆಗಾರುತಿಯ ಬೆಳಗಿರೇ 1 ಸರಸಿಜಾಸನ ನಮ್ಮ ಹರಿಪಾದ ತೊಳಿಯಲು | ಸರಸ ಸದ್ಗುಣ ಸುರಲೋಕ | ಸರಸ ಸದ್ಗುಣದಿ ಸುರಲೋಕಕೈದಿದಾ | ಸ್ವರ್ಣೆಗಾರುತಿಯ ಬೆಳಗಿರೇ 2 ಇಂದ್ರಲೋಕವ ಸಾರಿ ಧ್ರುವನ ಮಂಡಲಕಿಳಿದು | ಚಂದದಿಂದಲಿ ಮೇರುಗಿರಿಗೆ | ಚಂದದಿಂದಲಿ ಮೇರುಗಿರಿಗೆ ಬಂದಾ | ಸಿಂಧುವಿಗಾರುತಿಯ ಬೆಳಗಿರೇ 3 ಶತಕೋಟಿ ಎಂತೆಂಬ ಅಜನ ಮಂದಿರ ಪೊಕ್ಕು | ಚತುರ್ಭಾಗವಾಗಿ ಕರೆಸಿದ | ಚತುರ್ಭಾಗವಾಗಿ ಕರೆಸಿದ ಶ್ರೀ ಭೋಗ | ವತಿಗಾರುತಿಯ ಬೆಳಗಿರೇ4 ಇಂದ್ರ ದಿಕ್ಕಿಗೆ ಸಿತಾ ಚಕ್ಷು ಪಶ್ಚಿಮ ದಿಕ್ಕು | ಚಂದ್ರ ಯಮ ದಿಕ್ಕಿಗೆ ಭದ್ರದೇವಿ | ಚಂದ್ರ ಯಮ ದಿಕ್ಕಿಗೆ ಭದ್ರದೇವಿ ಅಳಕ | ನಂದಿನಿಗಾರುತಿಯ ಬೆಳಗಿರೇ 5 ಕುಂದ ಮಂದರೆ ಇಳಿದು ಗಂಧ ಮಾದನಗಿರಿಗೆ | ಹಿಂಗದೆ ಪುಟಿದು ವಾರಿನಿಧಿಯ | ಹಿಂಗದೆ ಪುಟಿದು ವಾರಿನಿಧಿಯ ನೆರದ | ಗಂಗೆಗಾರುತಿಯ ಬೆಳಗಿರೇ 6 ಗಿರಿಜೆ ಸೂಪಾರಶ್ವಕೆ ಧುಮುಕಿ ಮಾಲ್ಯವಂತಕೆ ಜಿಗಿದು | ಪರಿದಂಬುಧಿಯ ಕೂಡಿ ಮೆರದು | ಪರಿದಂಬುಧಿಯ ಕೂಡಿ ಮೆರದಾ | ತ್ರಿದಶೇಶ್ವರಿಗಾರುತಿ ಬೆಳಗಿರೇ7 ಕುಮುದಾದ್ರಿಗೆ ಇಳಿದು ನಲಾ ಶತ ಶೃಂಗ | ವನಧಿ | ವನಧಿ ಕೂಡಿದಾ | ಸುಮತಿಗಾರುತಿಯ ಬೆಳಗಿರೇ 8 ಮೇರು ಮಂದರಕಿಳಿದು ನಿಷಿಧ ಕಾಂಚನ ಕೂಟ | ಮೀರಿ ಹಿಮಗಿರಿಗೆ ಹಾರಿ ಬದರಿಗೆ | ಮೀರಿ ಹಿಮಗಿರಿಗೆ ಹಾರಿ ಬದರಿಗೆ ಬಂದಾ | ನಾರಿಗಾರುತಿಯ ಬೆಳಗಿರೇ 9 ಕ್ಷಿತಿಪ ಭಗೀರಥನಂದು ತಪವ ಒಲಿದು| ಅತಿಶಯವಾಗಿ ಧರೆಗಿಳಿದು | ಅತಿಶಯವಾಗಿ ಧರೆಗಳಿದು ಬಂದಾ | ಭಾಗೀರಥಿಗಾರುತಿಯ ಬೆಳಗಿರೇ10 ಮುನಿ ಜನ್ಹು ಮುದದಿಂದ ಆಪೋಶನವ ಮಾಡೆ | ಜನನಿ ಜಾನ್ಹವಿ ಎನಿಸಿದಾ| ಜನನಿ ಜಾನ್ಹವಿ ಎನಿಸಿದಾ ಮೂಜಗದ | ಜನನಿಗಾರುತಿಯ ಬೆಳಗಿರೇ 11 ವಿಷ್ಣು ಪ್ರಜಾಪತಿ ಕ್ಲೇತ್ರದಲ್ಲಿ ನಿಂದು | ಇಷ್ಟಾರ್ಥ ನಮಗೆ ಕೊಡುವಳು ಸತತ | ಇಷ್ಟಾರ್ಥ ನಮಗೆ ಕೊಡುವಳು ಸತತ ಸಂ | ತುಷ್ಟಿಗಾರುತಿಯ ಬೆಳಗಿರೇ 12 ಕ್ರಮದಿಂದ ಬಂದು ನಲಿವುತ ಸರಸ್ವತಿ | ಯಮುನೇರ ನೆರೆದು ತ್ರಿವೇಣಿ | ಯಮುನೇರ ನೆರೆದು ತ್ರಿವೇಣಿ ಎನಿಸಿದಾ | ವಿಮಲೆಗಾರುತಿ ಬೆಳಗಿರೇ13 ತ್ರಿವಿಧ ಜೀವರು ಬರಲು | ಅತ್ಯಂತವಾಗಿ ಅವರವರ | ಅತ್ಯಂತವಾಗಿ ಅವರವರ ಗತಿ ಕೊಡುವ | ಮಿತ್ರೆಗಾರುತಿ ಬೆಳಗಿರೇ 14 ಪತಿಯ ಸಂಗತಿಯಿಂದ ನಡೆತಂದು ಭಕುತಿಲಿ | ಸತಿಯಲ್ಲಿ ವೇಣಿಕೊಡಲಾಗಿ | ಸತಿಯಲ್ಲಿ ವೇಣಿ ಕೊಡಲಾಗಿ ಕಾವ ಮಹಾ | ಪ್ರತಿಗಾರುತಿ ಬೆಳಗಿರೇ 15 ವೇಣಿಯ ಕೊಟ್ಟಂಥ ನಾರಿಯ ಭಾಗ್ಯವು | ಪಡಿಗಾಣೆ | ಪಡಿಗಾಣೆ ಸುಖವೀವ | ಕಲ್ಯಾಣಿಗಾರುತಿಯ ಬೆಳಗಿರೇ 16 ಒಂದು ಜನ್ಮದಲಿ ವೇಣಿಯಿತ್ತವಳಿಗೆ | ಎಂದೆಂದು ಬಿಡದೆ ಐದೆತನವ | ಎಂದೆಂದು ಬಿಡದೆ ಐದೆತನವೀವ ಸುಖ | ಸಾಂದ್ರೆಗಾರುತಿಯ ಬೆಳಗಿರೇ 17 ವಾಚಾಮಗೋಚರೆ ವರುಣನರ್ಧಾಂಗಿನಿ | ಪ್ರಾಚೀನ ಕರ್ಮಾವಳಿ ಹಾರಿ | ಮಕರ | ವಾಚಳಿಗಾರುತಿಯ ಬೆಳಗಿರೇ 18 ಅಂತರ ಬಾಹಿರ ಪಾಪ ಅನೇಕವಾಗಿರೆ | ಸಂತೋಷದಿಂದಲಿ ಭಜಿಸಲು | ಸಂತೋಷದಿಂದಲಿ ಭಜಿಸಲು ಪೊರೆವ ಮಹಾ | ಕಾಂತೆಗಾರುತಿಯ ಬೆಳಗಿರೇ 19 ಗುರುಭಕುತಿ ತಾರತಮ್ಯ ಇಹಪರದಲ್ಲಿ ತಿಳಿದು | ಹರಿ ಪರನೆಂದು ಪೊಗಳುವರ | ಹರಿ ಪರನೆಂದು ಪೊಗಳುವರ ಪೊರೆವ | ಕರುಣಿಗಾರುತಿಯ ಬೆಳಗಿರೇ20 ಜಗದೊಳು ಪ್ರಯಾಗ ಕ್ಷೇತ್ರದಲ್ಲಿ ನಿಂದು | ಬಗೆ ಬಗೆ ಶುಭವ ಕೊಡುವಳು | ಬಗೆ ಬಗೆಯ ಶುಭವ ಕೊಡುವ ವಿಜಯವಿಠ್ಠಲನ | ಮಗಳಿಗಾರುತಿಯ ಬೆಳಗಿರೇ ಶೋಭಾನೆ 21
--------------
ವಿಜಯದಾಸ
ಶೌರಿ ವಿಮಲಾಂಬರಧರ ಪಾಹಿ ಮುರಾರಿ ಪ ಸುಮನಸನುತ ಪದದನುಜ ಸಂಹಾರಿ ಅ.ಪ ಸರಸಿಜಲೋಚನ ಶರಣಸಂಜೀವನ ಸುರಮುನಿಸೇವನ ಕರುಣಾಸದನ ಅರವಿಂದಾನನ ವರಮಣಿರದನ ದುರಿತವಿಮೋಚನ ನಿರುಪಮ ಗಾನ 1 ಪುರಹರ ವಿನಮಿತ ಪಾವನಚರಿತ ಧರಣಿರಮಾಯುತ ಸುರಮುನಿವಿನುತ ಫಣಿ ಫಣಿಭೂಷಿತ ಮುರಳೀಧರ ಮಾಂಗಿರಿ ಶೃಂಗಸ್ಥಿತ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಶ್ರೀ ಕೃಷ್ಣ ಸ್ತುತಿಗಳು ಅದೋ ಬರುವ ರಂಗ ಅದೋ ಬರುವ ಇದೋ ನಲಿವರಂಗ | ಇದೋ ನಗುವ ಪ ಇನಬಿಂಬವದನಾ | ಭ್ರಮರಕುಂತಲ ಘನ ಜನಮನರಂಜನ ಅದೋ ಬರುವ ಅ.ಪ ಶರನಿಧಿಮಂದಿರ ಭುವನಮನೋಹರ ಶರಣರಮಂದಾರ | ಅದೋ ಬರುವ ಮಾಧವ | ಅದೋ ಬರುವ 1 ಪರಿಮಳ ಹೂಹಾರ ಮೆರೆವ ಮಾಣಿಕಸರ ಪರಿಪರಿ ಮಣಿಹಾರ ಧರಿಸಿರುವ ಶರಣರಭೀಷ್ಟವ ಸಲಿಸುವೆನೆನ್ನುವ ಮುರಳಿಯನೂದುವ | ಅದೊ ಬರುವ 2 ಕುಣಿ ಕುಣಿದಾರೈವ ತರುಣಿ ರಾಧೆಯತವ ಮಣಿಯೆನಿಸುವ ದೇವ ಅದೋ ಬರುವ ವೇಣುವನೂದುವ ಜಾಣನ ಪಾದವ ಕಾಣುವ ಭಾಗ್ಯವ ನೆರೆ ಪಡೆವ 3 ಕಂಸಾರಿ ಇವನೆ ಭಕ್ತರ ಸಿರಿ ಇವನೆಲೆ ದುರುಳಾರಿ ವರನೃಹರಿ ಇವನೆಲೆ ಮಾಂಗಿರಿಶೃಂಗವಿಹಾರಿ ಇವನಹುದೆಮ್ಮಯ ಅಮಿತಸಿರಿ 4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್