ಒಟ್ಟು 354 ಕಡೆಗಳಲ್ಲಿ , 75 ದಾಸರು , 304 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸುರತಸುಖಕೆ ಅಂಗನೆಯರ ಮೇಳದಲಿಇಹಗೆ ಆಧ್ಯಾತ್ಮದಗೊಡವೆಏತಕೆಪಭಂಗಿ ಮಧ್ಯದಿ ಕೂಡಿ ಇಹಗೆ ಭಜನೆ ಸಾಧನೆಗಳೇತಕೆರಂಗುರಾಗದಿ ಮುಳುಗುವವನಿಗೆ ರೇಚಕ ವಿದ್ಯೆಯಾತಕೆಶೃಂಗಾರದ ಪದವಿಡಿದ ಮನುಜಗೆ ಸುಷುಮ್ನದ ಮಾರ್ಗವಿದೇತಕೆ1ನಲ್ಲೆಯರ ನುಡಿಯಿಂದ ಕೇಳುವಗೆ ನಾದಧ್ವನಿ ತಂಪೇತಕೆಚೆಲ್ಲೆಗಣ್ಣರ ಕುಚದಲೊರಗುವಗೆ ಚಿತ್ಕಳ ವಿಷಯವೇತಕೆಜೊಲ್ಲು ಕುಡಿಯುತಲಿಹ ಜಡನಿಗೆ ಜ್ವಲಿಸುತಿಹ ಅಮೃತವದೇತಕೆಹಲ್ಲು ತೆರೆವಹೊತ್ತಿಲಿರುವನಿಗೆ ಹಂಸದ ಕೂಟವದೇತಕೆ2ಭಾಮಿನಿಯರ ಸಭೆಯಲಿದ್ದವನಿಗೆ ಭ್ರೂಮಧ್ಯದ ಸದರೇತಕೆವಾಮಲೋಚನೆಯ ಅಂಗಸಂಗಗೆ ಹೃನ್ಮನ ಚಿಂತನವೇತಕೆಕಾಮಿನಿಯ ಕಣ್ಬಲೆಗೆ ಬಿದ್ದವಗೆ ಕಡೆಹಾಯುವ ಚಿಂತನೆಯೇತಕೆಸ್ವಾಮಿ ಚಿದಾನಂದ ಗುರುವಿನ ಸ್ಮರಣೆಯದು ಅವಗೇತಕೆ3
--------------
ಚಿದಾನಂದ ಅವಧೂತರು
ಸುಲಭವಲ್ಲವೊ ಮಹಾನಂದ ತ -ನ್ನೊಳಗೆ ತಿಳಿಯಬೇಕುಗುರುದಯದಿಂದಪ.ಬೆಕ್ಕನು ಇಲಿ ನುಂಗುವನಕ - ಕಡು -ರಕ್ಕಸಿಯನು ಕಂಡು ಗಿಣಿ ನುಂಗುವನಕ ||ಮಕ್ಕಳ ಭಕ್ಷಿಸುವನಕ - ಮದ -ಸೊಕ್ಕಿದ ಗಜವನು ನರಿ ನುಂಗುವನಕ 1ಇಬ್ಬರೊಡನೆ ಕೊಡುವನಕ - ಮೂರು -ಹಬ್ಬಿದ ಬೆಟ್ಟವ ನೊಣ ನುಂಗುವನಕ ||ಒಬ್ಬರೊಡನೆ ಸೇರುವನಕ - ಕೆಟ್ಟ -ಗುಬ್ಬಿಯ ರಾಜಹಂಸವು ನುಂಗುವನಕ 2ಒಳ ಹೊರಗೊಂದಾಗುವನಕ - ತಾನು -ತಿಳಿದೆನೆಂಬಭಾವ ಬಯಲಾಗುವನಕ ||ಬೆಳಕಿನೊಳಗೆ ಕಾಣುವನಕ ನಮ್ಮ -ಚೆಲುವ ಪುರಂದರವಿಠಲನ ದಯವಾಗುವನಕ 3
--------------
ಪುರಂದರದಾಸರು
ಸುಳಾದಿಧ್ರುವತಾಳರಾಮ ರಘುಕುಲ ಸಾರ್ವಭೌಮ ಪೂರಣಕಾಮಜೀಮೂತಶಾಮ ಶ್ರೀಮೂಲರಾಮಕೋಮಲ ಶರೀರ ಸೀತಾ ಮುಖಾಂಬುಜಭ್ರಮರಪ್ರೇಮಸಾಗರ ಭಕ್ತಜನ ಮನೋಹರಸಾಮಜಾತಿಹರ ಸಾಮಗಾನಾದರ ನಿಸ್ಸೀಮ ಗುಣಗಂಭೀರ ಏಕವೀರಸ್ವಾಮಿ ಮಠದರಸ ಮುನಿಸ್ತೋಮ ಮಾನಸಹಂಸನೀ ಮನ್ನಿಸು ಪ್ರಸನ್ನವೆಂಕಟಾದ್ರೀಶ ರಘುರಾಮ 1ಮಠ್ಯತಾಳಪಿಂತೆ ಸಮೀರಜನ ಸೇವೆಗೆ ಮೆಚ್ಚತ್ಯಂತ ಪ್ರಸನ್ನನಾಗ್ಯವನ ಶುಭಕರಸಂತತಿಗಭಯವನಿತ್ತಪೆನೆಂದೀಶನಿಂತಿಹೆ ಪ್ರಸನ್ನವೆಂಕಟಪತಿರಾಮಕಂತುಜನಕನಿತ್ಯಾನಂದನೆ ನಿನ್ನಂತವರಿಯೆ ನಿಗಮಾಗಮಕಳವೆ 2ತ್ರಿಪುಟತಾಳನಿರುತ ವೈಕುಂಠ ಮಂದಿರವಿದ್ದುಪರಣ ಕುಟೀರವನಾಶ್ರಯಿಸುವ ಘನತೆಯೆತ್ತವರಪೀತಾಂಬರ ದಾಮವನು ಬಿಟ್ಟುವಲ್ಕಲಧರಿಸಿ ಕಾನನದಿ ಸಂಚರಿಪೋದೆತ್ತನರಲೀಲೆಗಿದು ಶ್ಲಾಘ್ಯವೆಂದು ತೋರಿದೆ ಜಗದೆರೆಯ ಪ್ರಸನ್ನವೆಂಕಟಾದ್ರಿ ರಘುರಾಮ 3ಅಟ್ಟತಾಳಹರವರದಲಿ ಬಲು ಮತ್ತಾದ ರಜನೀಚರವರ ಲಂಕೆಯಲಿ ಬಲಿದು ಗರ್ವದಿಸುರವರರನುರೆ ಬಾಧಿಸಲವರನುಪೊರೆವರು ದಾರಯ್ಯ ನಿನ್ನಿಂದಸ್ಥಿರವರದಾಯಕ ಪ್ರಸನ್ವೆಂಕಟಗಿರಿವರನಿಲಯ ಕೌಸಲ್ಯೆಯ ಕಂದ 4ಆದಿತಾಳಅಕಳಂಕ ಅಕುತೋತಂಕ ಅಕಳಂಕಮಕುಟಕುಂಡಲಕೌಸ್ತುಭಕೇಯೂರ ವಲಯಾಂಕಿತಕೋದಂಡಕಾರ್ಮುಕಪಾಣಿಅಕಳಂಕ ಸುಖತೀರ್ಥವಂದಿತ ಪಾದಕಮಲ ವಿಧಿನುತ ಮಖಪಾಲಕ ಪ್ರಸನ್ನವೆಂಕಟಾಧಿಪ ಅಕಳಂಕ 5ಜತೆಅಂದು ನರಹರಿಯತಿಗೆ ಅಂದದಲ್ಲೊಲಿದಿಲ್ಲಿಬಂದು ನೀನಿಂತೆ ನಿಜರಮಣಿಯೊಡನೆಎಂದೆಂದು ಸತ್ಯಾನಭಿವ ತೀರ್ಥಗುರುಹೃದಯಮಂದಿರನೆ ಪ್ರಸನ್ನವೆಂಕಟವರದ ರಾಮ
--------------
ಪ್ರಸನ್ನವೆಂಕಟದಾಸರು
ಹೊರಿಯೊ ವಿಪಗಮನ ಮಂಗಳಶರಧಿಜಾರಮಣ ಪ.ಸುರಕಾರ್ಯಕೆ ಪಕ್ಷ ಶಾರ್ವರಿಚರವರ ಶಿಕ್ಷಧರಣಿಜ ಹರ ಸತ್ರಾಜಿತಜಾವರಶರಣಾಗತಭಟದುರಿತವಿದೂರ1ಪೌಂಡ್ರಕವೈರಿ ನಿಜ ಕೃಷ್ಣಪಾಂಡವರ ತಾರಿಶುಂಡಾಲಚಾಣೂರ ಸಂಹಾರಿಖಾಂಡವವನ ದಹಕಾರಿ 2ವಿದುರೋದ್ಧವ ಪೋಷಸುಖತೀರ್ಥಹೃದಮಾನಸ ಹಂಸಪದುಮನಾಭ ಪ್ರಸನ್ವೆಂಕಟೇಶಪಾಹಿಸದಮಲಸದನ ಕ್ಷೀರಾರ್ಣವಶಾಯಿ 3
--------------
ಪ್ರಸನ್ನವೆಂಕಟದಾಸರು