ಏಕ ಬÁಣ ಬಿಟ್ಟನು ಜಾಣ ಪ ಏಕ ಸಂಕಲ್ಪದಿ ಏಕ ವಾಕ್ಯವನು ಅ.ಪ. ಏಕ ದೈವ ಲೋಕೈಕ ಮಹಿಮ ಜಗ- ದೇಕ ಕಾರಣ ಭಕ್ತ ಶೋಕ ನಿವಾರಣ ಶ್ರೀಕರ ಶುಭಗುಣ ಸೀತಾರಮಣ ಪೂರ್ಣ ರಾಕೇಂದು ವದನ ದಿವಾಕರ ಕುಲಭೂಷಣ 1 ಕಾಕುಜನರ ಬಲು ಶೋಕಕಾರಣ ಕರು ಣಾಕರ ಶರಣಾಗತ ಜನ ರಕ್ಷಣ ಶ್ರೀಕಮಲೇಕ್ಷಣ ಲೋಕ ವಿಲಕ್ಷಣ ಲೋಕವಿನುತ ಶ್ರೀ ಕರಿಗಿರಿ ನಿಕೇತನ 2
ಏಕಾಂತದಲಿ ಬಂದು ಮಾತು ನುಡಿದೆ ಶ್ರೀ | ಕಾಂತ ನಿನಗಿದು ಸುಲಭವಾಗಿದೆ ನೋಡು ಪ ಪರಧನವನಪಹರಿಸಿಕೊಂಡು ಬೆಳೆದು ಇದ್ದ | ವರ ಮನೆಯೊಳಗಡಲೇತÀಕೆ | ನಿರುತ ಎನ್ನ | ಹೃದಯವೆಂಬೊ ಗಾಡಾಂಧಕಾರ | ಭರಿತವಾಗಿದೆ ಇಲ್ಲಿ ಅಡಗಬಾರದೆ ಬಂದು 1 ಕೇವಲ ಹಕ್ಕಲದ ವನದೊಳು ಪೊಕ್ಕು ಬೇಟೆ | ಕಾವಲಾರಣ್ಯ ಇಲ್ಲಿ ವಿಂಡೂ ತುಂಬಿದೆ | ಸಾವಧಾನದಿ ಬೇಟೆ ಆಡÀಬಾರದೆ ಬಂದು 2 ವೈಕುಂಠ ಮೂರು ಸ್ಥಾನದಲಿ ಮುಕ್ತರಿಗೆ | ಬೇಕಾದದೀಯಾಬೇಕು ಕಡಿಮೆ ಇಲ್ಲಾ | ನೀ ಕೇಳು ಎನ್ನಲ್ಲಿ ಸರಿ ಬಂದಂತೆಯಲ್ಲದೆ | ವಾಕು ಪೇಳುವೆ ನಿಲ್ಲು ವಿಜಯವಿಠ್ಠಲ ಬಂದು3
ಏನಿದು ಬಯಲ ಪಾಶ ನೋಡಿದರಿಲ್ಲಿ ಏನು ಹುರುಡುಗಾಣೆನೊ ನಾನಾಜನ್ಮದಿ ಬಂದು ಹೊಂದಲಾರೆನು ನಿನ್ನ ಧ್ಯಾನವ ಕೊಡೊ ಅಭಿಮಾನದೊಡೆಯ ರಂಗ ಪ. ನೀರಬೊಬ್ಬುಳಿಯಂದದ ದೇಹವ ನೆಚ್ಚಿ ದೂರ ಹೊತ್ತೆನು ಹರಿಯೆ ಯಾರು ಎನಗೆ ಸರಿಯಿಲ್ಲೆಂಬಹಂ- ಕಾರ ಪ್ರಪಂಚದ ಬಂಧನದೊಳು ಸಿಲುಕಿ ನೊಂದೆನೊ ಸದ್ಗತಿ ತೋರೊ 1 ಬಡವರಾಧಾರಿ ಕೇಳೊ ಸಂಸಾರದ ಮಡುವಿನೊಳಗೆ ಧುಮುಕಿ ಕಡೆಹಾಯಿಸೊ ಕೈಪಿಡಿದು ಕೃಪೆಯೊಳೆನ್ನ ದಡವ ಸೆÉೀರಿಸೊ ಜಗದೊಡೆಯ ಶ್ರಿರಂಗಯ್ಯ 2 ಸುತ್ತೆಲ್ಲ ಬಂಧು ಬಳಗ ನವಮಾಸದಿ ಹೊತ್ತು ಪಡೆದ ಜನನಿ ಪುತ್ರ ಸಹೋದರರ ಘಳಿಗ್ಯಗಲಲಾರದೆ ಮತ್ತೆ ಯಮನವರೊಯ್ವಾಗ ಯಾರು ಸಂಗಡ ಇಲ್ಲ 3 ಆಸೆಯೆಂಬುದು ಬಿಡದು ಈ ಭುವನದೊಳ್ ಲೇಸುಗಾಣೆನು ಹರಿಯೆ ಭಾಷೆಯ ಕೊಡು ಮುಂದೆ ಜನುಮಬಾರದ ಹಾಗೆ ಈಶಸನ್ನುತ ಹೆಳವನಕಟ್ಟೆರಂಗಯ್ಯ 4
ಏನು ಇಲ್ಲದ ಎರಡು ದಿನದ ಸಂಸಾರಜ್ಞಾನದಲಿ ದಾನಧರ್ಮವ ಮಾಡಿರಯ್ಯ ಪ ಹಸಿದು ಬಂದವರಿಗೆ ಅಶನವೀಯಲು ಬೇಕುಶಿಶುವಿಗೆ ಪಾಲ್ಬೆಣ್ಣೆಯನುಣಿಸಬೇಕುಹಸನಾದ ಭೂಮಿಯನು ಧಾರೆಯೆರೆಯಲು ಬೇಕುಪುಸಿಯಾಡದಲೆ ಭಾಷೆ ನಡೆಸಲೇ ಬೇಕು1 ಹೊರೆಯಲು ಬೇಡಕುಳ್ಳಿರ್ದ ಸಭೆಯೊಳಗೆ ಕುತ್ಸಿತವು ಬೇಡಒಳ್ಳೆಯವ ನಾನೆಂದು ಬಲು ಹೆಮ್ಮೆಪಡಬೇಡಬಾಳ್ವೆ ಸ್ಥಿರವೆಂದು ನೀ ನಂಬಿ ಕೆಡಬೇಡ 2 ದೊರೆತನವು ಬಂದಾಗ ಕೆಟ್ಟುದ ನುಡಿಯಬೇಡಸಿರಿ ಬಂದ ಕಾಲಕ್ಕೆ ಬಲು ಮೆರೆಯಬೇಡಸಿರಿವಂತ ಶ್ರೀ ಕಾಗಿನೆಲೆಯಾದಿಕೇಶವನಚರಣ ಕಮಲವ ಸೇರಿ ಸುಖಿಯಾಗು ಮನುಜ 3 * ಕೀರ್ತನೆ ಪುರಂದರದಾಸರ ಅಂಕಿತದಲ್ಲೂ ದೊರೆತಿದೆ.
ಏನು ಕಾರಣ ಕೃಷ್ಣಾ ಏನು ಕಾರಣ ಪ ಏನು ಕಾರಣ ಎನ್ನ ಕಣ್ಣಿಗೆ ನೀನು ತೋರದಿರುವುದು ಇದು ಅ.ಪ ಖಗ ಮೃಗಾದಿಗಳಿಗೆ ನೀನು ರಘು ಕುಲೇಶ ದರ್ಶನವಿತ್ತೆಸೊಗಸು ಮೋಕ್ಷವಿತ್ತೆ ಅದಕುಖಗವರೂಢ ಕಡಿಮೆಯೇನು 1 ಶಬರಿ ಎಂಜಲುಂಡು ವನದಿಅಬುಜ ಶಯನ ದರುಶವಿತ್ತೆಕುಬುಜೆ ಕೂಡಿದೆಲ್ಲೊ ಅದಕುವಿಬುಧ ವಂದ್ಯ ಕಡಮೆನೋವಾ 2 ಮುರಲಿನೂದಿ ವನದಿ ಹರಿಯುತರುಲತಾದಿಗಳಿಗೆ ದರ್ಶನವಿತ್ತು ಕಾಯ್ದುಅದಕು ಪರಮ ಪುರುಷ ಕಡಿಮೆ ನೋವಾ3 ಹಾದಿಲ್ಹೋಗೋ ಕೀಟನಿಗೆವೇದನಾಥ ದರುಶನಿತ್ತಿಆದಿ ವರ್ಣದವನು ಅದಕುಬಾದರಾಯಣ ಕಡಿಮೆ ಏನೋ 4 ಎಷ್ಟು ಎಷ್ಟು ಜನರಿಗೀಗಭೆಟ್ಟಿ ನೀಡಿ ಸುಖವನಿತ್ತೆಶ್ರೇಷ್ಠನೆಂದು ಸ್ತುತಿಪೆ ನಿನ್ನ ಕೃಷ್ಣ ಕರುಣಿ ಬೇಗನೆ ಬಾ 5 ಇಂಥಾ ಜನುಮದಲ್ಲಿ ನಿನ್ನಕಂತು ಪಿತನೆ ಕಾಣದಿರಲುಪಂಥಗಾಣೆ ಮುಂದಿನ ತನುಎಂಥದಾಗುವುದೋ ತಿಳಿಯೆ 6 ಇಂದಿರೇಶ ಮುರಲಿ ಶೋಭಿತಇಂದು ಬಿಂಬ ವಿಜಯ ವದನತಂದು ತೋರಿಸೆನ್ನ ಮನಕಾ-ನಂದಿಸೀಗ ನಂದನಸುತ 7