ಒಟ್ಟು 536 ಕಡೆಗಳಲ್ಲಿ , 47 ದಾಸರು , 437 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶುಭ ಮಂಗಳ ಸುಜನಾಂಬುಧಿ ಚಂದ್ರಗೆ ಪ ಶ್ರೀ ಸುಧೀಂದ್ರ ಕುಮಾರಗೆ ಮಂಗಳ ಭೂಸುರನುತ ಮಹಿಮಗೆ ಮಂಗಳ ದೇಶಿಕ ಕುಲವನ ಜಾತನಿಗೆ ಮಂಗಳ ಭಾಸುರ ಕೀರ್ತಿಯ ಪಡೆದವಗೆ 1 ವೃಂದಾವನ ದಿವಿಯೊಳಗೆ ಸುರದ್ರುಮ ದಂದದಿ ರಾಜಿಸುವವಗೆ ಮಂಗಳ ಅಂಧ ಪಂಗು ಮೂಕ ಬಧಿರರೀಪ್ಸಿತ ಸಂದೋಹ ಸಲಿಸುವ ಮುನಿಗೆ 2 ವಿಪಿನ ಭಯ ವೀತಿಹೋತ್ರನಿಗೆ ಮಂಗಳ ವಾತ ಜನಕ ಜಗನ್ನಾಥ ವಿಠ್ಠಲನ ದೂತರ ಸಲಹುವ ದಾತನಿಗೆ 3
--------------
ಜಗನ್ನಾಥದಾಸರು
ಶೇಷ ಅತಿ ಶೋಭಿಸುತಿದೆ ಶ್ರೀಪತಿವಾಹನ ಪ ಚತುರದಶ ಲೋಕದಲಿ ಅಪ್ರತಿವಾಹನ ಅ.ಪ. ವಿನುತಕಶ್ಯಪ ಮುನಿಗೆ ತನಯನೆನಿಸಿದ ವಾಹನ ಅನುಜರನು ಕದ್ದೊಯ್ದ ಅತ್ಯಾಢ್ಯ ವಾಹನ ವನಧಿ ಮಧ್ಯಧಿ ನಾವಿಕರ ಭಕ್ಷಿಸಿದ ವಾಹನ ಜನಪನಾಜ್ಞದಿ ಕೂರ್ಮಾಗಜರ ನುಂಗಿದ ವಾಹನ1 ಕುಲಿಶಪಾಣಿಯ ಕೂಡೆ ಕಲಹ ಮಾಡಿದ ವಾಹನ ಒಳಹೊಕ್ಕು ಪೀಯೂಷ ತಂದ ವಾಹನ ಮಲತಾಯಿ ಮಕ್ಕಳನು ಮರುಳುಗೊಳಿಸಿದ ವಾಹನ ವಾಹನ 2 ಕಾಲನಾಮಕನಾಗಿ ಕಮಲಭವನಲಿ ಜನಿಸಿ ಕಾಲಾತ್ಮಹರಿಯ ಸೇವಿಪ ವಾಹನ ಕಾಳಗದಿ ಕಪಿವರರ ಕಟ್ಟುಬಿಡಿಸಿದ ವಾಹನ ವಾಲಖಿಲ್ಲರ ಪಿಡಿದ ವರವಾಹನ 3 ವಾಹನ ನಿಜ ರೂಪದಿ ಹರಿಸೇವೆಗೈವ ವಾಹನ ಆ ಪಿತೃಗಳಿಗಮೃತ ಪ್ರಾಪ್ತಿಸಿದ ವಾಹನ ವಾಹನ 4 ಪನ್ನಗಾಶನವಾಹನ ಪತಿತ ಪಾವನ ವಾಹನ ಸನ್ನುತಿಪ ಭಕ್ತರನು ಸಲಹುವ ವಾಹನ ಪನ್ನಗಾದ್ರಿನಿವಾಸ ಜಗನ್ನಾಥ ವಿಠ್ಠಲಗೆ ಉನ್ನತ ಪ್ರಿಯವಾದ ಶ್ರೀ ಗುರುಡವಾಹನ 5
--------------
ಜಗನ್ನಾಥದಾಸರು
ಶೋಭಾನವೆನ್ನಿರೆ ಸಕಲ ಗುಣನಿಧಿಗೆ ಶೋಭಾನವೆನ್ನಿ ಸಮೀರ ಪಿತನಿಗೆ ಶೋಭಾನವೆನ್ನಿ ಸರೋಜಸದನ ಮನೋಭಿರಾಮನಿಗೆ ಶೋಭಾನವೆನ್ನಿ ಪ ಕಪಟ ಕಮಠಗೆ ತಪ ನಿಯಾಂಬಕನಸುಪರಿಹರಿಸಿದಗೆ ಕೃಪಣ ಪ್ರಹ್ಲಾದನ ವಿಪತ್ತು ಕಳೆದವಗೆ ಚಪಲಾಕ್ಷಿಯರಾರುತಿ ಬೆಳಗಿರೆ 1 ಕೊಡಲಿ ಕೋದಂಡವ ಪಿಡಿವ ಪಂಡಿತಗೆ ಕಡಲ ಕಟ್ಟಿಸಿ ಖಳರೊಡಲ ಬಗೆದಗೆ ಫಣಿ ಮೃಡನ ಗೆಲಿಸಿ ಕೀರ್ತಿ ಒಡನೆ ತಂದಿತ್ತಗೆ ಮಡದೇರಾರುತಿಯ ಬೆಳಗೀರೆ 2 ಹರಿಗಿ ಸುರಿಗಿ ಪಿಡಿದರವಿಂದಾಂಬಕಗೆ ಶರಧಿಯೊಳಾಡ್ದಗೆ ಗಿರಿಮಹಿಧರಗೆ ನರಹರಿ ರೂಪಗೆ ಧರಣಿಯಾಳ್ದಗೆ ಧುರದೊಳು ರಾಯರ ತರಿದ ಸಮರ್ಥಗೆ ಗರತೇರಾರುತಿಯ ಬೆಳಗೀರೆ3 ದಶರಥ ತನಯಗೆ ವಸುದೇವ ಸುತಗೆ ಕೂರ್ಮ ರೂಪಗೆ ವಸುಧಿ ವಾಹಕಗೆ ಮಿಸುನಿ ಕಶ್ಯಪಗೆ ಹೆಬ್ಬಸಿರ ಬಗೆದವಗೆ ಶಶಿಮುಖಿಯರಾರುತಿ ಬೆಳಗೀರೆ 4 ವಟು ಭೃಗುರಾಮಗೆ ಜಟಲ ಮಸ್ತಕಗೆ ಕಠಿಣ ಕಂಸನ ತಳ ಪಟವ ಮಾಡಿದಗೆ ಕಪಟ ಭೀಕರಗೆ ವಟಪತ್ರಶಯನ ನಿಷ್ಕುಟಿಲ ಜಗನ್ನಾಥ ವಿಠಲಗಾರುತಿಯ ಬೆಳಗೀರೆ 5
--------------
ಜಗನ್ನಾಥದಾಸರು
ಶ್ರೀ ಕೃಷ್ಣವೇಣಿ ಕಲ್ಯಾಣೀ ಪಂಕಜಾಸನ ಸ್ವೀಕೃತ ಬುಧ ಶ್ರೇಣೀ ನೀ ಕೃಪೆÉಯಿಂದ ಮಹಾಕೃತು ಹರಿಯ ನಿ ಜಾಕೃತಿ ತೋರ್ದೂರಿಕೃತ ದುರಿತೇ ಪ ಸುಜನ ಮಾತೆ ಶಮಲ ಸಂಕೂಲ ನರ್ಧೂತೆ ಸುಮನಸ ಜನ ಸನ್ನುತೆ ಸನ್ಮೋದ ದಾತೆ ವಿಮಲ ಸದ್ಗುಣ ಸಂಭೃತೆ ನಮಿಸುವೆ ತ್ವತ್ಪದÀ ಕಮಲಯುಗಳಿಗನು ಪಮ ಸುಂದರೆ ಭ್ರಮೆಗೊಳಿಸುವ ದುರ್ಮಮ ಕಳೆದು |ಸೋ ತ್ತಮರ ಪದಾಬ್ಜಕೆ ಭ್ರಮರನೆನಿಸಿ ಮಾರಮಣನ ದುಹಿತ್ರೆ 1 ಮದಗಜಯಾನೆ ಪಿಕಗಾನೆ ಉಭಯಾನೆ ಮಾನಿನಿ ಮದನಾರಿ ಜಟಜಸೊನೆ ಪಾಪೌಘದಹನೆ ಮುದವ ಕೊಡು ಎಮಗೆ ನಿ ೀನೆ ಮದಡನರನು ಒಂದು ದಿನ ಮಜ್ಜನವ ವಿಧಿಸೆ ಶರೀರದಿ ಹುದುಗಿದ ಪಾಪಗಳುದುರಿಸಿ ಕಾಲನ ಸದನವ ಹೋಗಗೊಡದುದಧಿ ಮಥನ ಪದ ಪದುಮವ ತೋರ್ಪೆ 2 ನೀಲ ಪುನತ ಹೃತ್ಕುಮುದಾ ಭೇಶೇ ಅನುದಿನ ಪೂರೈಸೇ ಜನನಿಯೆನ್ನ ದುರ್ಗುಣವೆಣಿಸದೆ | ಮಾ ತನು ಲಾಲಿಸು ಸುಹೃದ್ವನರುಹದಲಿ ಶ್ರೀ ವನತೆಯರಸ ಜಗನ್ನಾಥ ವಿಠಲನ ಅನವರತ ನಿಲಿಸು ಘನ ಮಾಂಗಲ್ಯೇ 3
--------------
ಜಗನ್ನಾಥದಾಸರು
ಶ್ರೀ ಗುರು ಜಗನ್ನಾಥಾರ್ಯ ಕರುಣಿಸಯ್ಯ ಮೊರೆಹೊಕ್ಕೆ ತ್ವತ್ವದಕೆÉ ಮರಿಯದಲೆ ಪಿಡಿ ಕೈಯ್ಯ ಪ ಪ್ರಹ್ಲಾದನನುಗ್ರವು ಎಲ್ಲ ಕಾಲದಲಿ ನಿ ನ್ನಲ್ಲಿ ಸಂಪೂರ್ಣವಾಗಿರುವದೆಂಬ ಸೊಲ್ಲು ಲಾಲಿಸಿ ನಿನ್ನ ಪಲ್ಲಾವಾಂಘ್ರಿಗೆ ನಮಿಪೆ ಬಲ್ಲಿದನೆ ಹರಿಧ್ಯಾನದಲ್ಲಿ ನಿಲ್ಲಿಸು ಮನವ 1 ಜನಕಾಗ್ರಜಾತಾರ್ಯ | ನರನಿಸಿ ಜನಿಸುತ ಮಂತ್ರಮುನಿ ನಿಲಯ ಮುನಿವರ್ಯ ಶ್ರೀ ರಾಯರ ಗುಣಸ್ತವನ ವಿರಚಿಸುತ ಪ್ರಣತರಿಗೆ ಪಠಿಸುತ್ತ ಮನದಿಚ್ಛೆ ಪಡೆವುದರೆ ಅನುಕೂಲಿಸಿದ ಜ್ಞಾನಿ 2 ಶ್ರೀಶಾಮಸುಂದರನ ದಾಸವರ್ಯರ ಉಪ ದೇಶವನು ಕೊಂಡು ಉಪಾಸನೆಯನು ಲೇಸಾಗಿ ಬಿಡದೆ ಪ್ರತಿವಾಸರದಿ ಗೈದಂಥ ಭೂಸುರಾಗ್ರಣಿಯಾದ ಪ್ರತಿವಾಸರದಿ ಗೈದಂಥ ಭೂಸುರಾಗ್ರಣಿಯಾದ ಕೋಸಿಗೆ ವಾಸ 3
--------------
ಶಾಮಸುಂದರ ವಿಠಲ
ಶ್ರೀ ಗೋಪಾಲದಾಸರು ನಿನ್ನ ದಯದಿಂದಲೇ ಎನ್ನ ಜೀವನವು ಘನ್ನ ಗೋಪಾಲ ವಿಠ್ಠಲ ದಾಸರಾಯ ಪ ತುಂಗೆ ಕೃಷ್ಣೆ ಮಧ್ಯರಂಗ ಕ್ಷೇತ್ರದಿ ಮುದದಿ ತುಂಗ ವಿಜಯಾರ್ಯರ ಪದಂಗಳಿಗೆ ಎರಗಿ ಗಂಗೆಪಿತ ಮಾತಂಗ ವರದನಾಮನ ಅಂತ ರಂಗದಿ ನೋಡಿ ಗುಣಗಳನು ಪಾಡಿದೆಯೊ 1 ಅನುಜರಿಗು ಅಚಲ ಮಾತೆಗು ಶರಣು ಸುಜನರಿಗು ಮೌನಿ ಪಂಡಿತರಿಗೂ ಎನ್ನಂಥ ಪಾಮರಗು ಜ್ಞಾನ ಸುತತ್ವ ಸನ್ಮಾರ್ಗ ಬೋಧಿಸಿ ಜಗ ನ್ನಾಥನ ಮನಸಿನ ಅನುಭವಕೆ ತಂದೆ 2 ಬೇಸರದಿ ನಾ ಸೀತಾಪತಿಪಲ್ಲಿಯಲಿ ಮಲಗೆ ಏಸು ಕರುಣವೊ ದಾಸರಾಜ ನೀ ಬಂದು ವ್ಯಾಸಮುನಿಮಠ ಗುರುಪೂಜೆಗೆ ಕರೆದೊಯ್ದು ದಶಪ್ರಮತಿ ಭಾಷ್ಯಪಠನಾರ್ಚನೆಯ ತೋರಿಸಿದೆ 3 ಗೋ ಎನಲು ಗರುಡವಾಹನ ಪೀಡೆ ಪರಿಹರಿಪ ಪಾ ಎನಲು ಪರಮಪೂರುಷ ಪಾಲಿಸುವ ಲ ಎನಲು ಲಕ್ಷ್ಮೀಶ ನಿಖಿಳೇಷ್ಟಗಳನೀವ ಅನವರತ ಗೋಪಾಲದಾಸರಿಗೆ ಶರಣು 4 ಆನಂದಮುನಿಹೃಸ್ಥ ವನಜಸಂಭವಪಿತ ಪ್ರ ಸನ್ನ ಶ್ರೀನಿವಾಸ ಜಗನ್ನಾಥ ನಿನ್ನ ಪಾದ ಸಂಸ್ಮರಿಸುವ ಸುಜನರನು ಅನವರತ ಪಾಲಿಸುವ ಸಂದೇಹವಿಲ್ಲ 5
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ಜಗನ್ನಾಥತೀರ್ಥರ ದಿವ್ಯ ಮಹಿಮೆಯನು ರಾಜಿಸುವ ಹೈಮಲಿಪಿಯಲ್ಲಿ ಬರೆಯಲಿ ಬೇಕು ಪ ಸುಜನ ಸುರಭೂಜರಾಗಿಹ ಮಹಾ ಕರ ಸಂಜಾತ ಅ.ಪ ಉದ್ಭವಿಸಿದರು ಗಾಲವರು ಜಗದೊಳೆಂಬಂಶ ವೇದ್ಯವಾಯಿತು ಆಪ್ತಜನವೃಂದಕೆ ಮಧ್ವಮತ ತತ್ವಗಳನುದ್ಧಾರವನೆಗೈದ ದಿಗ್ಧಂತಿಗಳತಿ ಪ್ರಸಿದ್ಧ ಸ್ಥಾನವ ಪಡೆದ 1 ಸಕಲ ಶಾಸ್ತ್ರಾರ್ಥ ನಿರ್ಣಯಗೈವ ಪರಸೂತ್ರ ನಿಕರಗಳಿಗಲವಬೋಧರ ಭಾಷ್ಯವ ಸುಖದಿಂದಲರಿಯಲುಪಕೃತಿಗೈದ ಯತಿಕುಲ ತಿಲಕ ಭಾಷ್ಯಾದೀಪಿಕಾಚಾರ್ಯರೆಂದತಿ ಖ್ಯಾತ 2 ಸರ್ವಗುಣ ಗುಣಪೂರ್ಣ ಸರ್ವತ್ರ ವ್ಯಾಪ್ತ ಹರಿ ಸರ್ವಭಕ್ತ ಪ್ರಸನ್ನನೆಂದರುಹಲು ಉರ್ವನುಗ್ರಹ ಪಡೆದ ಸರ್ವತಂತ್ರ ಸ್ವತಂತ್ರ 3
--------------
ವಿದ್ಯಾಪ್ರಸನ್ನತೀರ್ಥರು
ಶ್ರೀ ಜಗನ್ನಾಥದಾಸ ನಮಿಪೆ ಗುರುರಾಜ ಸಾತ್ವಿಕವಪುಷ ಪ ಈ ಜಗದೊಳು ನಿಮಗೆಣೆಗಾಣೆ ಸತತ ನಿ - ವ್ರ್ಯಾಜದಿ ಹರಿಯ ಗುಣೋಪಾಸನೆ ಮಾಳ್ಪ ಅ.ಪ. ಹರಿದಾಸ ಕುಲವರ್ಯರೆನಿಸಿ ಕಲ್ಪತರುವಂದದಿ ಚರ್ಯ ಚರಿಸುತ ಧರೆಯೊಳು ಮೆರೆವ ಮಹಾತ್ಮರ ಚರಣೇಂದ್ರೀವರಯುಗ್ಮ ದರುಶನ ಮಾಳ್ಪರ ದುರಿತರಾಶಿಗಳಿರಗೊಡದೆ ನೆರೆ ಪರಮಮುಕ್ತಿಯ ದಾರಿ ತೋರುತ ಸಿರಿಸಹಿತ ಹರಿ ತೋರುವಂದದಿ ಕರುಣ ಮಾಳ್ಪ ಸುಗಣಮಹೋದಧಿ 1 ರವಿಯು ಸಂಚರಿಸುವಂತೆ ಭೂವಲಯದಿ ಕವಿಶ್ರೇಷ್ಠ ಚರಿಸಿದೆಯೋ ಅವಿರುದ್ಧ ತ್ರಯಿಜ್ಞಾನ ಪ್ರವಹಂಗದಲಿ ಭುವನೈಕ ವೇದವದ್ಯನ ಶ್ರವಣಭಕುತಿಯಿಂದ ದಿವಸ ದಿವಸದಿ ಪ್ರೀತಿ ಬಡಿಸುತ ಧ್ರುವವರನಂಘ್ರಿಗಳಿಗರ್ಪಿಸಿ ಭುವನ ಪಾವನ ಮಾಡಲೋಸುಗ ಅವನಿ ತಳದಿ ವಿಹರಿಸುತಿಹ ಗುರು 2 ಅಹೋ ರಾತ್ರಿ ಕ್ಷಣ ಬಿಡದೆ ಸನ್ಮನ ಹೃ - ದ್ಗುಹಾಧೀಶನನು ಬಿಡದೆ ಅನುದಿನ ಸ್ಮರಿಸುತ ಸಹನದಿ ಶಮದಮಯತು ನಿಯಮಗಳನ್ನು ವಹಿಸಿ ಶ್ರೀದವಿಠಲನಂಘ್ರಿಯ ಮಹಿಮೆ ತೋರುತ ಪೂಜಿಸುತ ಬಲು ಮಹಿತಪೂರ್ಣಾನಂದತೀರ್ಥರ ವಿಹಿತ ಶಾಸ್ತ್ರಗಳರಿತು ಬೋಧಿಪ 3
--------------
ಶ್ರೀದವಿಠಲರು
ಶ್ರೀ ಜಗನ್ನಾಥದಾಸರ ಸ್ತೋತ್ರ ರಾಯರ ನೋಡಿರೈ ದಾಸರಾಯರ ಪಾಡಿರೈ |ಮಾಯ ರಮಣಪ್ರಿಯಾ |ಇವರ ಮನದೊಳಗೆ ಸುಳಿದಾ | ಶ್ರೀರಂಗವಲಿದ ಪ ಮೋದ |ಕಾಣಿಸುವದು ಜಗದೊಳಗೆ, ಇವರಿಗೆ ಕೀರುತಿಯ |ಪುಣ್ಯ ಮೂರುತಿಯು |ಧೇನಿಸಿ ಎರಡನೆ ಜನ್ಮದಿ, ಈತನೆ ಶಲ್ಯಾ |ತತ್ವವ ಬಲ್ಲಾ 1 ಮೂರನೆ ಜನ್ಮದಿ ಕೊಂಡಪ್ಪ, ರಾಜನದೂತ | ಸುಪ್ರಖ್ಯಾತಾ |ಸಾರ ಜನರ ಪ್ರಿಯ ಶ್ರಿ ಪುರಂದರದಾಸಾರ್ಯ |ಸುತ ಆಶ್ಚರ್ಯ |ತೋರುವ ಐದನೆ ಜನ್ಮದಿ ಶ್ರೀಹರಿದೂತ |ಗುರು, ಜಗನ್ನಾಥ 2 ನರಹರಿಯ ತುತಿಪ ವಂದಂಶದಿ ಸಾಂಶರೆಂದುಖಂಬದಿ ನಿಂದು |ಮೆರೆವರು ಊಧ್ರ್ವಪುಂಢವು ತುಲಸಿಯಮಾಲಾ |ಅಕ್ಷ ಸುಶೀಲಾ |ಪರಿಪರಿ ಸೇವಿಪ ಜನರಿಗಭೀಷ್ಟವ ಗೆರೆವಾ |ದುರಿತವ ತರಿವಾ 3 ದೇಶದೇಶವ ಜನರುಗಳೆಲ್ಲರು ಬಂದು |ನೋಡಲು ನಿಂದು |ಸೋಸಿಲಿ ದರುಶನಕೊಳಲವರಿಗೆ ಆನಂದ |ವಾಹುದು ಛಂದ |ಮೀಸಲಹುದು ಮನ, ಕೈಸೇರುವ ಶ್ರೀಪತಿಯೂ |ಹರ ಅಘತತಿಯು 4 ಎಷ್ಟು ಪೇಳಲಿ ಇವರ ಮಹಿಮೆ ತುತಿಸಲ್ಕೆ |ವಶವಲ್ಲ ಮನಕೆ |ನಿಷ್ಠಿಯಿಂದಿವರನು ತುತಿಸಲು ಶ್ರೀವರತುಷ್ಟಾ |ಪಾಪವು ನಷ್ಟಾ |ಸೃಷ್ಟಿಯೊಳಗೆ ಶ್ರೀಶ ಪ್ರಾಣೇಶವಿಠಲನ ದಾಸ |ದಾಸೋತ್ತಂಸ 5
--------------
ಶ್ರೀಶಪ್ರಾಣೇಶವಿಠಲರು
ಶ್ರೀ ಜಗನ್ನಾಥದಾಸರು ನಮೋ ದಾಸವರ್ಯ ಪೂತಾತ್ಮ ಪದ ನಮೋ ದೇವತಾತ್ಮ || ಪ ರಮಾ ರಮಣಪದ ಅಮಲ ಭಜನೆ ಕೊಡುನಮೋ ನಮೋ ಭವ್ಯಾತ್ಮ ಅ.ಪ. ನಾರಸಿಂಹ ಸತ್ಪೋರನೆಡರ ಪರಿಹಾರ ಪದದಿ ದೀಕ್ಷಪಾರುಮಾಳ್ಪಕೂಪಾರ ಭವವ ಸತ್ಸರಾಮೃತ ಕೃತದಕ್ಷ |ಭಾರ ನಿನ್ನದಾಪಾರ ಕೃಪೆಯ ನೀತೋರ್ವುದೆಂಬ ಮಹರಕ್ಷಬಾರಿ ಬಾರಿ ನಿರ್ಧಾರ ಮನದಿ ಹಾರೈಸುತಿಹೆನೂ ಹರಿಪಕ್ಷ 1 ಮಾನವೀಶ ಪ್ರಾಣೇಶ ದಾಸನುತ ಆನತೇಷ್ಟ ತೋಷಗಾನಲೋಲ ಮೌನೀಶ ಪದಾಂಬುಜ ಆನಮಿಪರ ಆಶೇಷ |ಹೀನವೆನಿಪ ಕುಯೋನಿ ನಿವಾರಕ ಧ್ಯಾನಗಮ್ಯ ಸುವಿಶೇಷಪ್ರಾಣನಾಥ ಮಹಿಮೋನ್ನತಿ ಗಾನದಿ ಕಳೆದೆ ದೋಷ 2 ಪಾದ ಮೂರ್ತಿ ಪಾದ ತೋರೊ ದೇವ 3
--------------
ಗುರುಗೋವಿಂದವಿಠಲರು
ಶ್ರೀ ಪ್ರಾಣೇಶ ದಾಸರಾಯರ ಸ್ತೋತ್ರ ಸಾನುರಾಗದಲಿ ಸ್ಮರಿಸುವರ ಭಕುತಿಯನ್ನು ಕೊಡುತಿಹರು ಪ ವರಕಾಶ್ಯೊಪಸದ್ಗೋತ್ರದಿ ಲಿಂಗಸು - ಗುರು ಕರಣಿಕರಲಿ ಸಂಜನಿಸಿ ತಿರುಕಾರ್ಯರ ಪರತನುಭವಯೋಗೀಂ - ದ್ರರು ಯಂಬ ಸುನಾಮದಿ ಕರಿಸಿ 1 ಕೆಲವುಕಾಲ ಲೌಕಿಕವನುಸರಿಸುತ ಲಲನೆ ತರಳರಿಂದೊಡಗೂಡಿ ಬಲು ವಿನಯದಿ ಸಾಧುಗಳರ್ಚಿಸಿ ನಿ - ರ್ಮಲ ವೈರಾಗ್ಯ ಮನದಿ ಕೂಡಿ2 ಮೂಜಗದೊಳು ಪ್ರಖ್ಯಾತರೆನಿಸಿದ ಶ್ರೀ ಜಗನ್ನಾಥಾರ್ಯರ ಪಾದಾಂ - ಭೋಜ ಭಜಿಸಿ ಪ್ರಾಣೇಶಾಂಕಿತವನು ತಾಜವದಿಂದವರಲಿಪಡೆದ 3 ಶ್ರೀಶಪಾದಯುಗ್ಮಗಳಲಿ ಸದ್ರತಿ ದಾಸಜನಗಳಲಿ ಸದ್ಭಕುತಿ ಹೇಸಿಭವದ ಸುಖದಾಸೆ ಜರಿದು ಸಂ - ತೋಷದಿ ಧರಿಸಿಹ ಸುವಿರಕುತಿ 4 ನೇಮದಿ ಯಮನಿಯಮವ ವಹಿಸಿ ತಾ ಮುದದಲಿ ನಲಿಯುತ ಕೀರ್ತಿಸುತಿಹ ಶ್ರೀ ಮನೋಹರನ ಸುಗುಣರಾಶಿ 5 ಪರಿಪರಿ ಹರಿಕಥೆವರ ಪ್ರಮೇಯಗಳ ಸರ್ವಜ್ಞ್ಞರ ಉಕ್ತ್ಯನುಸರಿಸಿ ವಿರಚಿಸಿ ಹರಿಮಂದಿರದ ಸುಪಥ ಪಾ - ಮರರಿಗೆ ಸೌಕರ್ಯವಗೈಸಿ 6 ವರದೆಂದ್ರರ ಪದಸರಸಿಜ ಸೇವಿಸಿ ಹರುಷದಲವರ ಕರುಣ ಪಡೆದ ವರವೃಂದಾವನ ಸಂಸ್ಥಾಪಿಸಿ ಪರಿಪರಿಯಿಂದಲಿಯಾರಾಧಿಸಿದ7 ಜ್ಞಾನದಿಲಯವನು ಚಿಂತಿಸುತಾ ಚಿತ್ರ ಬಾನುಸಪ್ತಮಿ ಯಾಶ್ವಿಜಶುದ್ಧ ಜಾನಕಿ ಪತಿಪದ ಧೇನಿಸಿಹರಿಪುರ ಕೀನರ ದೇಹ ಜರಿದು ಸಾರ್ದ 8 ಪರಮಭಾಗವತರೆನಿಸುವರಿವರನ ವರ ತನದ ಸುಮಾಲಿಕೆ ಸತತ ಸ್ಮರಿಸುವ ಭಕುತರ ಪುರುಷಾರ್ಥಗಳನು ವರದೇಶವಿಠಲನ ಕೊಡುವ ತ್ವರಿತ 9
--------------
ವರದೇಶವಿಠಲ
ಶ್ರೀ ಪ್ರಾಣೇಶದಾಸಾರ್ಯರ ಸ್ತುತಿ ತೆರಳಿದರು ಪರಮ ತೋಷದಲಿ ಹರಿಪರಕೆ |ಹರಿಪ್ರೀಯರಾದ ಪ್ರಾಣೇಶದಾಸರು ತ್ವರದಿ ಪ ನಿರುತದಲಿ ಹರಿಪೂಜೆ |ಮರಿಯದಲಿ ಮಾಡಿ ಬಲು |ಸ್ಥಿರ ಬುದ್ಧಿ ಪೂರ್ವಕದಲಿ |ಗುರುಗಳಲಿ ಸರ್ವಜ್ಞರಾಯರಿಂದಧಿಕ ಮ ||ತ್ತಿರಲುಂಟೆ ಎಂದು ತಿಳುಹಿ |ದುರುಳ ಜನರನುಸರಿಸದಲೆ ಕವಿಗಳೊಡನಾಡಿ |ಚರಿಸಿ ದೇಶಗಳಲ್ಲಿ ಮೆರೆದು ಖ್ಯಾತಿಯ ಪಡದು 1 ಭಾಗವತ ಶ್ರೇಷ್ಟ ಜಗನ್ನಾಥ ದಾಸಾಖ್ಯರಡಿ |ಜಾಗುಮಾಡದಲರ್ಚಿಸಿ |ಭೋಗಿವರ ಶಯನ ಪ್ರಾಣೇಶವಿಠಲಾಂಕಿತವ ||ಆ ಗುರುಗಳಿಂದ ಕೊಂಡು |ರಾಗದ್ವೇಷಗಳೆಂಬ ಅರಿಗಳನು ಸಂಹರಿಸಿ |ರಾಗದಲಿ ಹರಿಕಥನ ಕವನ ರೂಪದಿ ಪೇಳಿ2 ಪ್ರಾಣಮತವನನುಸರಿಸಿ ಆಚರಣಿಯನು ಮಾಡಿ |ಪ್ರಾಣಿಗಳಿಗೆ ತಿಳಿಸದೆ |ಕ್ಷೋಣಿಯೊಳಗಿನ್ನು ಇರಸಾಕೆಂದು ಆ |ಚಿತ್ರಭಾನು ಆಶ್ವಯುಜ ಶುದ್ಧ ಸಪ್ತಮಿಯಲಿ ||ಜ್ಞಾನಪೂರ್ವಕ ಲಯ ಚಿಂತನೆಯ ಮಾಡಿ ಗುರು |ಪ್ರಾಣೇಶ ವಿಠಲನಿದ್ದಾ ಪುರಕೆ ಜವದಿಂದ3
--------------
ಗುರುಪ್ರಾಣೇಶವಿಠಲರು
ಶ್ರೀ ಮಾರುತಾತ್ಮ ಸಂಭೂತ ಹನುಮ ಭೀಮ ಮಧ್ವಾಖ್ಯ ಯತಿನಾಥ | ಮೂಲ ರಾಮಕೃಷ್ಣಾರ್ಪಿತ ಸುಚೇತಾ | ಮಮ ಸ್ವಾಮಿ ಚಿತ್ತೈಸೆನ್ನ ಮಾತಾ 1 ಅಂಜನಾದೇವಿ ಸುಕುಮಾರ |ಎಮ್ಮ ನಂಜಿಸುವ ಘೋರ ಸಂಸಾರ |ಹೇ ಪ್ರ ನಿಗಮ ಸಂಚಾರ | ಕ್ಲೇಶ ಭಂಜಿಸಿ ಸಲಹೋ ಗುಣೋದಾರ 2 ಕುಂತಿ ಜಠರದಲುದಿಸೆ ಬಂದೆ | ಮಾ ಹೊಂತ ಕೌರವರ ನೀ ಕೊಂದೆ | ಅನಾ ದ್ಯಂತ ಕಾಲದಿ ಎಮ್ಮ ತಂದೆ | ನೀನೆ ಸಂತೈಸಬೇಕೆಂದು ನಿಂದೆ 3 ಮಧ್ಯ ಗೇಹಾಖ್ಯ ದ್ವಿಜಸದನ | ದೊಳಗೆ ಉದ್ಭವಿಸಿ ಮೆರೆದೆ ಜಿತಮದನ | ಧರ್ಮ ಪದ್ಧತಿಗಳ ಪ್ರಸನ್ನವದನಾ | ತಿಳಿಸಿ ಉದ್ಧರಿಸೋ ದನುಜಕುಲ ನಿಧನ4 ಶ್ರೀ ಪೂರ್ಣಬೋಧ ಯತಿರಾಯ | ಎಮ್ಮ ತಾಪತ್ರಯಗಳಿಂದ ನೋಯ | ಗೊಡದೆ ನಿಕಾಯ | ಕೃಷ್ಣ ದ್ವೈಪಾಯನಗೆ ನೀನೆ ಪ್ರೀಯ 5 ಬದರಿಕಾಶ್ರಮಕೆ ನೀ ಪೋಗಿ | ಲಕ್ಷ್ಮೀ ಹೃದಯ ವಾಸನ ಪದಕೆ ಬಾಗಿ | ಭಾಷ್ಯ ಮುದದಿಂದ ಪೇಳ್ದೆ ಚೆನ್ನಾಗಿ | ಎನಗೆ ಅದರ ಭಾವವ ತಿಳಿಸೋ ಯೋಗಿ6 ತಾಪ ಭಾರ ತೀರಮಣ ಮಹಪಾಪ ವೆಣಿಸಿ ದೂರ ನೋಳ್ಪರೆ ಸುಪ್ರತಾಪ ಪರಮ ಕಾರುಣಿಕ ತೋರೋ ತವರೂಪ 7 ಭಕ್ತರಿಗೊಲಿದು ಭವದಿಂದ ನೀ ಮುಕ್ತರನÀ ಮಾಡು ದಯದಿಂದ ನೀನೆ ಶಕ್ತನಹುದೆಂದು ವೇದವೃಂದದೊಳಗೆ ಉಕ್ತವಾಗಿದೆ ನಿಮ್ಮಾನಂದಾ8 ಜೀವಕೋಟಿಯೊಳು ನೀನೆ ಪಿರಿಯ ಎಮ್ಮ ನೋವು ಸುಖಗಳನು ನೀನೆ ಅರಿಯ ಈಗ ನೀವೊಲಿಯದಿರೆ ಹರಿ ನಮ್ಮ ಪೊರೆಯಾ ಜಗವ ಕಾಯ್ವ ಗುರುವರ ನೀನೆ ಖರೆಯ 9 ಶ್ರೀ ಜಗನ್ನಾಥ ವಿಠ್ಠಲಯ್ಯ ನಂಘ್ರಿ ಪೂಜಿಸುವ ಸಜ್ಜನರ ಕೈಯಾ ಪಿಡಿದು ನೀ ಜೋಕೆ ಮಾಡುವುದು ಜೀಯಾ ನೀನೆ ಈ ಜಗತ್ರಯ [ಕೆ] ಗುರುವರ್ಯಾ 10
--------------
ಜಗನ್ನಾಥದಾಸರು
ಶ್ರೀ ಯತಿವರ ಗುರುರಾಘವೇಂದ್ರರನ್ನಾ ಪ ಶರಣ-ಜನ-ಸುರ-ಪಾದಪನೆ ತವ ಚರಣಯುಗಳತೆ ಮೊರೆಯ ಪೊಕ್ಕೆನೊ ಕರುಣಿಸೆನ್ನನು ದೂರ ನೋಡದೆ ಕರುಣಸಾಗರನೆ ನೀ ಅ.ಪ ಆರು ಕಾಯ್ವರೊ ಪೇಳೋ ಎನ್ನ - ನೀ ದೂರ ನೋಡುವದೇನು ಘನ್ನ ಸಾರಿದವರಿಗಿಷ್ಟವನ್ನ - ಬೀರುವನೆಂಬೋ ಬಿರುದು ಪೋಗಿಹದೋ ನಿನ್ನ ಪಾದ - ಪದುಮ ಸೌರಭ ಸ್ವೀಕರಿಪ ಜನರೊಳು ಸೇರಿಸೆನ್ನನು ದೂರ ನೋಡದೆ ಭೂರಿ ಕರುಣಾಕರನೆ ನೀ 1 ದುರುಳು ಭವಾಂಬುಧಿ ಬಾಧಾ - ಎನ್ನ ಮೀರಿ ಪೋಗಿಹÀ್ಯದು ಅಗಾಧಾ ಮದನ - ಶರ - ಬಂಧಾ - ದಿಂದ ದೂರಾಗಿಹದೋ ನಿನ್ನ ಸಂಭಂಧ ಪರಮ ಪಾಮರನಾದ ಎನ್ನಯ ಮರುಳು ಮತಿಯನು ಬಿಡಿಸಿ ನಿನ್ನ - ವರೊಡನೆ ಸೇರಿಸೊ ಪರಮ ಕರುಣಿಯೆ ಚಾರತರನಾದ ಎನ್ನಾ 2 ದುಷ್ಟಜನರ ಸಂಗದಿಂದ ನಿನ್ನಯ ಪಾದ ಮುಟ್ಟ ಭಜಿಸದರಿಂದ ಸೃಷ್ಟಿಯೊಳಗೆ ಮತಿಮಂದಾ ನಾಗೀ ಪುಟ್ಟಿ ಬಂದೆನೊ ವೇಗದಿಂದಾ ಕಷ್ಟಹರ ಗುರು ಜಗನ್ನಾಥ ಪಾದ ಪದುಮಕೆ ಘಟ್ಟದೋಪಮ ನೆನಿಸಿ ಎನ್ನಾ ಪುಟ್ಟಿ ಬರದಂತೆ ಮಾಡೊ ನೀ 3
--------------
ಗುರುಜಗನ್ನಾಥದಾಸರು
ಶ್ರೀ ರಾಘವೇಂದ್ರಾರ್ಯ ಬಾರೋ ಕಾರುಣ್ಯ ವಾರಿಧಿಯೆ ಬಾರೋ ಆರಾಧಿಪ ಭಕ್ತರಿಷ್ಟಾ ಪೂರೈಸುವ ಪ್ರಭುವೆ ಬಾರೋ ಪ ಪಾದ ರಾಜೀವ ಭೃಂಗನೆ ಬಾರೋ ರಾಜಾಧಿರಾಜರೊಳು ವಿ ರಾಜಿಸುವ ಚೆಲುವ ಬಾರೋ 1 ಕ್ಲೇಶ ಶ್ರೀ ಸುಧೀಂದ್ರ ಕರಸಂಜಾತ ವಾಸು ದೇವಾರ್ಚಕನೆ ಧೀರ ಬಾರೋ 2 ಸನ್ನುತ ಸದ್ಗುಣನೆ ಬಾರೋ ಮಾನ್ಯ ಜಗನ್ನಾಥವಿಠಲಾಪನ್ನ ಜನರ ಪ್ರೀಯಾ ಬಾರೋ 3
--------------
ಜಗನ್ನಾಥದಾಸರು