ಒಟ್ಟು 4691 ಕಡೆಗಳಲ್ಲಿ , 124 ದಾಸರು , 3091 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸದ್ದು ಮಾಡಲು ಬೇಡವೊ _ ನಿನ್ನ ಕಾಲಿಗೆ |ಬಿದ್ದು ನಾ ಬೇಡಿಕೊಂಬೆ ಪನಿದ್ದೆಗೆಯ್ಯವರೆಲ್ಲ ಎದ್ದರೆ ನೀನು ಬಂ-|ದಿದ್ದದ್ದು ಕಂಡರೇನೆಂಬುವರೊ ರಂಗ ಅ.ಪಬಳೆ ಘಲ್ಲುಕೆನ್ನದೇನೊ-ಕೈಯ ಪಿಡಿದು |ಎಳೆಯದಿರೊ ಸುಮ್ಮನೆ ||ಮೊಲೆಗಳ ಮೇಲಿನ ಸೆರಗನೆಳೆಯಲು ಕೊ-|ರಳ ಪದಕಂಗಳು ಧ್ವನಿಗೆಯ್ಯವುವೊ ರಂಗ 1ನಿರುಗೆಯ ಪಿಡಿಯದಿರೊ - ಕಾಂಚಿಯದಾಮ|ಕಿರುಗಂಟೆ ಧ್ವನಿಗೆಯ್ಯದೆ? ||ಕಿರುದುಟಿಗಳ ನೀನು ಸವಿದು ಚಪ್ಪರಿಸಲು |ತರವಲ್ಲಗಂಡಮತ್ಸರವ ತಾಳುವನಲ್ಲ2ನಾಡ ಮಾತುಗಳೇತಕೊ - ಸಂಗೀತವ |ಪಾಡುವ ಸಮಯವೇನೊ ||ಗಾಡಿಕಾರಶ್ರೀ ಪುರಂದರವಿಠಲನೆ |ಪಾಡು ಪಂಥಗಳೆ ಒಡಗೂಡುವ ಸಮಯದಿ 3
--------------
ಪುರಂದರದಾಸರು
ಸರಸಿಜಾಲಯೆ ನಿಲಯೆ ಪಸ್ಥಳದಲ್ಲಿ ನೆಲಸಿ ಸಜ್ಜನರ ರಕ್ಷಕಳೆಂದು ಅ.ಪಕ್ಷೀರಸಾಗರಜಾತೆ ಮಾರನಯ್ಯನ ಪ್ರೀತೆಸಾರಸದಳನೇತ್ರೆಮಾರಮಣನ ಮನಸಾರ ಸೇವಿಪ ಮುದ್ದುಕೀರವಾಣಿಯ ಭಕ್ತಸ್ತೋಮ ರಕ್ಷಕಳೆಂದು 1ಅಂಬುಧಿಶಯನ ಪೀತಾಂಬರಧಾರಿಯಶಂಖು ಚಕ್ರಾಂಕಿತಹರಿಶೌರಿಯಶಂಭರಾರಿಯ ಪಿತನ ನಂಬಿಸೇವಿಪ ಜಗ-ದಂಬ ನಿನ್ನಯ ಪಾದಾಂಬುಜಕ್ಕೆರಗುತ 2ಪದ್ಮನಾಭನ ರಾಣಿ ಪದ್ಮ ಸಂಭವೆ ದೇವಿಪದ್ಮಾಕ್ಷಿ ಪದ್ಮ ಪಾಣಿಯೆ ಸುಂದರಿಪದ್ಮಾಸನನ ಮಾತೆ ಪದ್ಮಮುಖಿಯೆ ಹೃ-ತ್ಪದ್ಮದಿ ಹರಿಪಾದ ಪದ್ಮವ ತೋರೆಂದು 3ಸಾರಸಾಕ್ಷಿಯೆ ಹರಿಯ ಆರಾಧಿಸುವ ಜನರ-ಪಾರದು:ಖವನೀಗಿಪೊರೆವೆಯೆಂದುಬಾರಿಬಾರಿಗು ನಿನ್ನಚಾರುದರ್ಶನವಿತ್ತುಕೋರಿದ ವರಗಳ ಬೀರಿ ಭಕ್ತರ ಕಾಯೆ 4ಕರುಣದಿ ಭಕುತರ ಕರೆದು ಕಾಪಾಡುವಬಿರುದು ನಿನ್ನದು ತಾಯೆ ತ್ವರಿತದಿ ಕಾಯೆಕರುಣಿಸೆ ಕಮಲನಾಭ ವಿಠ್ಠಲನ ರಾಣಿಮರೆಯದೆ ಹರಿಯ ಧ್ಯಾನವ ಕೊಟ್ಟು ಸಲಹೆಂದು 5
--------------
ನಿಡಗುರುಕಿ ಜೀವೂಬಾಯಿ
ಸರಸ್ವತಿಸ್ತುತಿಪಾಹಿಸರಸ್ವತೇ ಪಾಲಿಸೆನ್ನ ಮಾತೆ ಪಪಾಹಿಲೋಕದಾತೇಪಾಹಿಶೋಕಘಾತೆಪಾಹಿಧರ್ಮ ಪ್ರೀತೆ |ಪಾಹಿಕರ್ಮರಹಿತೆ 1ಪಂಕಜೌಘಕೋಟಿ | ಸಂಕಾಶೆ ಪದ್ಮಾಕ್ಷಿಕಿಂಕರನ್ನ ರಕ್ಷಿಸಂಕದಿ ನಿರೀಕ್ಷಿಸಿ 2ಕುಂದಸಮರದನೇ ಮಂದಗಜಗಮನೇಚಂದದಿ ಗೋವಿಂzÀ | ದಾಸನೊಂದ್ಯಚರಣೆ 3
--------------
ಗೋವಿಂದದಾಸ
ಸರಸ್ವತೀ ಶ್ರೀ ಗಾಯತ್ರೀ | ಪರಮೇಷ್ಟಿಜೆ ಸಾವಿತ್ರಿ ||ಸರುವ ವೇದಾತ್ಮಿಕೆ ಪ್ರೀತಿ | ಸರಸ್ವತಾ ದೇವೀ ಪವಾಣೀ ದೇವೀ ಸುವೀಣಾಪಾಣಿ ಕಾಯೆ |ಬ್ರಹ್ಮನ ರಾಣಿ ಗರುಡಾರಾದ್ಯಾರಾಧಿತೇ ||ಜಾಣೆ ತವ ಪದ ಕಂಜಾರೇಣು ಸೇವಿಪೆನಿತ್ಯಪೋಣಿಸಾಬೇಕೆ ಸನ್ಮತಿಯಾ 1ಹಂಸ ವರೂಢೆ ಮಾತೆಕಂಸಾರಿನಿಜದೂತೆಸಂಸೇವಿಸುವರ ದಾತೆ ||ದೋಷರಹಿತೆ ಯನ್ನಾ ಆಶಿ ಪೂರ್ತಿಸೆ ನಿನ್ನಾನಾ ಸೇವಿಸೂವೇನೆಯೆಮ್ಮಾ 2ಶಿರಿ ಪ್ರಾಣೇಶ ವಿಠಲನ ಚರಣಾಂಬುಜ ಷಟ್ಟಾದೆಕರವಮುಗಿದು ಬಿನ್ನೈಸುವೆ ||ಬರವ ನುಡಿಗೆ ವಿಘ್ನತೆ ಬರದಂತೆಪಾಲಿಸವ್ವಾ ಕರಣಾ ಸಾಗರೆ ಪವಿತ್ರೆ3
--------------
ಪ್ರಾಣೇಶದಾಸರು
ಸರ್ವಂ ಬ್ರಹ್ಮಮಯಂ ತಿಳಿವಡೆಸರ್ವ ಬ್ರಹ್ಮಮಯಂಪಮತಿಗತಿ ಬ್ರಹ್ಮಮಯಂ ಮಹಾಕೃತು ಜಪ ಬ್ರಹ್ಮಮಯಂಸತಿಸುತ ಬ್ರಹ್ಮಮಯಂ ಶಾಂತವು ಖತಿಯು ಬ್ರಹ್ಮಮಯಂ1ಪಶುಧನ ಬ್ರಹ್ಮಮಯಂ ಪಟ್ಟಣಸುಧೆಯು ಬ್ರಹ್ಮಮಯಂಶಿಶುಗಳು ಬ್ರಹ್ಮಮಯಂ ಸಮಸ್ತದಸೆಗಳು ಬ್ರಹ್ಮಮಯಂ2ಯುಗತಿಥಿ ಬ್ರಹ್ಮಮಯಂ ನಾನಾ ಖಗಮೃಗ ಬ್ರಹ್ಮಮಯಂನವನಧಿ ಬ್ರಹ್ಮಮಯಂ ಚಿದಾನಂದ ಬಗಳೆ ಬ್ರಹ್ಮಮಯಂ3
--------------
ಚಿದಾನಂದ ಅವಧೂತರು
ಸಲಹು ಸಲಹು ಗುರುರಾಯನೆ ನನ್ನಾಲಸದೆ ಪಾವನ್ನಕಾಯನೆ ನಾನುಹಲವು ದಿವಸ ನಿನ್ನ ನಂಬಿರೆದ್ವಿಜಕುಲಮಣಿ ಜನಾರ್ದನಾಚಾರ್ಯನೆ ಪ.ನಿನ್ನ ಶರಣು ಹೊಕ್ಕ ಭೃತ್ಯರು ತತ್ವಪೂರ್ಣರಾದರು ಪೂತರಾದರುನನ್ನ ಮನ್ನಿಸಲಾಗದೆ ದಾತನೆ ವಿದ್ಯೋನ್ನತ ವಿಶ್ವಕೆ ಪ್ರೀತನೆ 1ಆ ಬಾಲ್ಯದೊಳು ರಘುಪತಿಪಾದಭಜನಾದರ ನಿನಗುಂಟುಕೋವಿದಈ ಮೇದಿನಿಯಲಿ ಸುಧಾಸುರಸದಬಹು ಸ್ವಾದವ ಬಲ್ಲ ಇಷ್ಟಾರ್ಥದ 2ಅಜ್ಞಾನ ಕತ್ತಲೆ ಕವಿದಿದೆ ಅಭಿಜÕನ ಮಾಡಲಿ ಬಾರದೆ ನಿನ್ನಪ್ರಜÕತನದ ಪ್ರಸವನಿತ್ಯಆಜ್ಞಾಧಾರಕಗೀಯೊ ಜ್ಞಾನವ 3ಭಕ್ತಿ ವೈರಾಗ್ಯ ಸುಜ್ಞಾನ ಸಂಯುಕ್ತ ಮಂಗಳ ಗುಣಾಲಂಕೃತಯುಕ್ತಿ ಸಾಲದು ಹರಿಸೇವೆಗೆ ಸ್ವಪ್ನವ್ಯಕ್ತ ಬೋಧಿಸೆನಗೆ 4ತಂದೆ ತಾಯಿ ಆಪ್ತಮಿತ್ರ ನೀಗತಿಹೊಂದಿಪ ದುರಿತಘಹರ್ತ ನೀ ಗೋವಿಂದ ಪ್ರಸನ್ವೆಂಕಟೇಶನ ಹೃದಯಮಂದಿರದೊಳು ಪೂಜಾಶೀಲನೆ 5
--------------
ಪ್ರಸನ್ನವೆಂಕಟದಾಸರು
ಸಂಸಾರ ಕನಸಣ್ಣ ಸಕಲರಿಗೆ ಹೇಳುವೆನಣ್ಣಸಂಸಾರ ಸತ್ಯವೆಂಬುವನ ಬಾಯಲ್ಲಿ ಹೊರೆ ಮಣ್ಣಣ್ಣಪಹೆಂಡತಿಯು ಕನಸಣ್ಣ ಗಂಡನೂ ಕನಸಣ್ಣಗಂಡು ಮಗ ಸೊಸೆ ಸಹೋದರರು ಬಂಧುಗಳು ಕನಸಣ್ಣ1ದನಕರು ಕನಸಣ್ಣ ದವಲತ್ತು ಕನಸಣ್ಣಮನೆ ಮದುವೆ ಮಂಟಪ ಮಹಾಲಕ್ಷ್ಮೀ ಕನಸಣ್ಣ2ವೈಯ್ಯಾರ ಕನಸಣ್ಣ ವಸ್ತುಗಳು ಕನಸಣ್ಣಮೈಯಲ್ಲಿಹ ಬಲವದು ಮತ್ತೆ ಮುರಿ ಮೀಸೆ ಕನಸಣ್ಣ3ನಾನಿಹುದು ಕನಸಣ್ಣ ನೀನಿಹುದು ಕನಸಣ್ಣಶಾಣೆತನ ಮಾನಾಪಮಾನಗಳು ಸೈನ್ಯ ಕನಸಣ್ಣ4ಸಂಸಾರ ಮಾಡಿದರಣ್ಣ ಸಾಕ್ಷಿಯಾಗಿರಬೇಕಣ್ಣಹಂಸ ಚಿದಾನಂದ ಸದ್ಗುರು ಹೊಂದಲು ಸರಿವುದು ಜನನವಣ್ಣ 5
--------------
ಚಿದಾನಂದ ಅವಧೂತರು
ಸಂಸಾರ ಸಂಸಾರವೆಂಬೆರಿ ಸರ್ವದಿವಾರಾತ್ರಿಯಲಿಸಂಸಾರ ಎನಗೊಂದೆ ಅಲ್ಲದೆ ಸಂಸಾರ ಎನಗುಂಟೇನಯ್ಯಪಸತ್ಯವೆಂಬುದೆನ್ನಸತಿಯು ಶಾಂತವೆಂಬುದೆನ್ನಸುತನುಸತ್ಯವೆಂಬುದೆನ್ನ ಸೊಸೆಯು ನಿಜವಿದೀಗಅತ್ಯಧಿಕ ಗುಣಿಯೆಂಬ ಅಗಣಿತದ ಪಿತನಿರಲುಮಿಥ್ಯವಾದ ಸಂಸಾರದಲಿ ಮಗ್ನರಹರೇ1ಬುದ್ಧಿ ಎಂಬುದೆನ್ನಭ್ರಾತೃ ಭಾವನೆ ಎಂಬುದೆನ್ನಭಾವಅದ್ವೈತವೆಂಬ ಅತ್ತೆ ಅಂತಃಕರಣವೆಂಬ ಮಾವಶುದ್ಧಾತ್ಮವೆಂಬ ಬಂಧು ಸಂಬಂಧವೆನಗಿರಲಾಗಿಈ ದ್ವೈತಸಂಸಾರದಲ್ಲಿ ಮಗ್ನರಹರೇ2ಇಂತು ಸಂಸಾರ ಸುಖ ನಿಜದೊಳಗೆನಗಿರಲುಭ್ರಾಂತದಲ್ಲವೆ ನಿಮ್ಮ ಮಾತಿದೆಲ್ಲಚಿಂತಯಕ ಚಿದಾನಂದ ಚಿನ್ಮಯನೆ ತಾ ಬಲ್ಲಅಂತರಂಗದ ಮಾಟಕೆ ಅವನೆ ಸಾಕ್ಷಿ3
--------------
ಚಿದಾನಂದ ಅವಧೂತರು
ಸಂಸಾರ ಸುಖವಿಲ್ಲವದು ಖ್ಯಾಲ ಮೇಲಾಸಂಸಾರಗಳ ನಂಬಿದವ ಕಾಳಮೂಳಪಸತಿಎಂಬ ಕೆಸರೊಳಗೆ ಸುತರಹರು ಜೊಂಡು ಬೆಂಡುಮಿತಿಯಿಲ್ಲದಾಸೆಯಲಿ ಇಳಿದಡೆ ಮೇಲೆ ಬರಲಾರೆ ಮೂಳ1ಮಂದಿರವು ಸೆರೆಮನೆ ತಂದೆ ತಾಯಿ ಕಾವಲರುಬಂಧು ಬಳಗ ಗುಂಗಾಡು ತಾಪತ್ರಯ ಚೇಳುಗಳು2ಸಂಸಾರವೆ ಸುಖವೆಂದು ಸಂಸಾರಮಾಡಲಾಗದುಸಂಸಾರವೆ ಅದು ಘಾತುಕ ಚಿದಾನಂದ ಸುಖಕೆ ಹಾನಿ3
--------------
ಚಿದಾನಂದ ಅವಧೂತರು
ಸಾಕು ಮಾಡಿರವ್ವ ರಂಗನ | ಏಕೆ ದೂರುವಿರೆ? ಪಬೆಟ್ಟು ಬಾಯೊಳಗಿಟ್ಟರೆ ರಂಗ - ಕಚ್ಚಲರಿಯನೆ |ಕಟ್ಟಿರುವೆಯನು ಕಂಡರೆ ಬವ್ವೆಂದು - ಚಿಟ್ಟನೆ ಚೀರುವನೆ ||ರಟ್ಟೆಯ ಹಿಡಿದು ನಡಸಲು ರಂಗ -ದಟ್ಟಡಿಇಕ್ಕುವನೆ |ಭ್ರಷ್ಟ ಮಾತುಗಳನೆಷ್ಟೋ ಕಲ್ಪಿಸಿ |ಪಟ್ಟ ಪಟ್ಟಿಗೆ ರಟ್ಟು ಮಾಡುವುದು 1ಅರಿಯದಂತೆ ನೊರೆಹಾಲನು ಕುಡಿವನೆ -ಕರೆಕರೆಮಾಡುವನೆ |ಇರಲು ಮನೆಯೊಳಗೆ ಬರುತ ನಿಮ್ಮ ಮನೆ - ಮೊಸರನು--------------------ಸುರಿಯವನೆ ||ಸರಸಿಜಾಕ್ಷಿಯರೆ ಪರಿಪರಿಯಿಂದಲಿ |ಹರಲಿ ಮಾಡುವುದಿದು ತರವೇನಮ್ಮ 2ಚಿಕ್ಕ ಚಿಕ್ಕ ಗೋವಕ್ಕಳ ಕೂಡ ಚೆಂಡನಾಡುವಾಗ |----------------------------------------ಸಿಕ್ಕಿತೆನುತ ಬಹು ಚಕ್ಕಂದಾಡುತ |ಗಕ್ಕನೆ ಹೋಗಿ ಕೈಯಿಕ್ಕಿ ತೆಗೆದನೆ 3ಮಾಲೆಗಂಬದೋಪಾದಿಯಲಿ ನೀವು ಬಹಳ ಬೆಳೆದಿರೀಗ |ನೀಲಕುಂತಳೆಯೆ ದಧಿಶೋಧಿಸಿ ಓಲಾಡುತ ಕಡೆವಾಗ ||ಬಾಲಕೃಷ್ಣನಿಗೆ ಜೋಲುವ ಕುಚಗಳು |ನಿಲುಕುವ ಬಗೆ ಹೇಗೆ? ||ಖೂಳಸೆಟವಿಯರು ಕಾಳವಾಗಿಹರು |ಕೇಳಿಕೇಳಿ ಬೇಸತ್ತಿಹೆನಮ್ಮ 4ಫುಲ್ಲನಾಭನಿವ ಒಲ್ಲದನಾದರೆ ಎಲ್ಲ ಒಯ್ದಿಡಬೇಕೆ? |ಖುಲ್ಲತನದಿ ನೀವ್ ನಿಲ್ಲಗೊಡದಿಹಿರಿ ಗುಲ್ಲುತನವು ಸಾಕೆ ||--------------------ಸಲ್ಲದು ಈ ನುಡಿ ಪುರಂದರವಿಠಲಗೆ |ಹಲ್ಲೊಳಗಾತನ ಇಟ್ಟಿರಬೇಡಿ 5
--------------
ಪುರಂದರದಾಸರು
ಸಾಕು ಸಾಕಿನ್ನು ಸಂಸಾರಸುಖವು |ಶ್ರೀಕಾಂತ ನೀನೊಲಿದು ಕರುಣಿಸೈ ಹರಿಯೆ ಪಉದಿಸಿದುವು ಪಂಚಭೂತಗಳಿಂದ ಔಷಧಿಗ-|ಳುದಿಸಿದುವು ಔಷಧಿಗಳಿಂದನ್ನವು ||ಉದಿಸಿದುವು ಅನ್ನದಿಂ ಶುಕ್ಲ-ಶೋಣಿತವೆರಡು |ಉದಿಸಿದುವು ಸ್ತ್ರೀ-ಪುರುಷರಲ್ಲಿ ಹರಿಯೆ 1ಸತಿಪುರುಷರೊಂದಾಗಿ ರತಿಕ್ರೀಡೆಗಳ ಮಾಡೆ |ಪತನವಾದಿಂದ್ರಿಯವು ಹೊಲೆ-ರುಧಿರವು ||ಸುದತಿಯುದರದೊಳೆರಡು ಏಕದಲಿ ಸಂಧಿಸಲು |ಬುದಬುದನೆ ಮಾಸಪರ್ಯಂತರದಿ ಹರಿಯೆ 2ಮಾಸವೆರಡರಲಿ ಶಿರಮಾಸಮೂರರಲಂಗ |ಮಾಸನಾಲ್ಕರಲಿ ಚರ್ಮದ ಹೊದಿಕೆಯು ||ಮಾಸವೈದರೊಳುನಖರೋಮ ನವ ರಂಧ್ರಗಳು |ಮಾಸವೇಳಲಿ ಧಾತು ಹಸಿವು ತೃಷೆಯು 3ತಿಂಗಳೆಂಟರಲಿ ಪೂರ್ವಾನುಭವ ಕರ್ಮಗಳ |ಭಂಗವನು ಪಡಲಾರೆ ಭವಭವದೊಳು ||ಅಂಗನೆಯ ಉದರಕಿನ್ನೆಂದಿಗೂ ಬರೆನೆಂದು |ಹಿಂಗದಲೆ ಧ್ಯಾನಿಸುತ ಕಳೆದೆನೈ ದಿನವ 4ಇನಿತು ಗರ್ಭದೊಳು ನವಮಾಸ ಪರಿಯಂತರದಿ |ತನು ಸಿಲುಕಿ ನರಕದಲಿ ಆಯಾಸಗೊಂಡು ||ಘನಮರುತವೇಗದಿಂ ಅರುಹನಲ್ಲಿಯೆ ಮರೆತುಜನಿಸುವಲಿ ಮೃತಭಾವದೊಳು ನೊಂದೆ ಹರಿಯೆ 5ಧರೆಯಮೇಲುದಿಸಿ ಬಹು ವಿಷ್ಣುಮಾಯೆಗೆ ಸಿಲುಕಿ |ಪರವಶದೊಳಿರಲು ನೀರಡಿಸಲಾಗ ||ಹೊರಳಿ ಗೋಳಿಡುತ ಕಣ್ದೆರೆಯ ಹರಿಯನು ಮರೆವ |ದುರಿತರೂಪದ ತನುವ ಧರಿಸಿದೆನೊ ಹರಿಯೆ 6ಶಿಶುತನದೊಳಿರಲು ನೊಣ ಮುಸುಕಲಂದದಕಳಲು |ಹಸಿದನಿವನೆಂದು ಹಾಲನೆ ಎರೆವರು ||ಹಸು-ತೃಕ್ಷೆಗಳಿಂದಳಲು ಹಾಡಿ ತೂಗುವರಾಗ |ಪಶುವಂತೆ ಶಿಶುತನದೊಳಿರಲಾರೆ ಹರಿಯೆ 7ನಡೆಯಲರಿಯದ ದುಃಖ ಮನಸಿನೊಳು ಬಯಸಿದುದ |ನುಡಿಯಲರಿಯದ ದುಃಖ ವಿಷಮದಿಂದ ||ಅಡಿಯಿಡುತ ಮೆಲ್ಲನೇಳುತ ಬೀಳುತಲಿ ತೊದಲು-|ನುಡಿಯೊಳಿಹ ಬಾಲ್ಯದೊಳಗಿಲಾರೆ ಹರಿಯೆ 8ಬಾಲ್ಯದೊಳು ಕೆಲವು ದಿನ ಬರಿದೆ ಹೋಯಿತು ಹೊತ್ತು |ಗೋಳಿಡುತವಿದ್ಯೆಕರ್ಮಗಳ ಕಲಿತು ||ಮೇಲೆ ಯೌವನದುಬ್ಬಿನೊಳು ಮದುವೆಯಾಗಿ ನಾಬಾಲೆಯರ ಬಯಸಿ ಬಹು ಮರಳಾದೆ ಹರಿಯೆ | 9ಜ್ವರದ ಮೇಲತಿಸಾರ ಬಂದಂತೆ ಯೌವನದಿ |ತರುಣಿಯೊಡನಾಡಿಕೂಡಿದವಿಷಯದಿ ||ತರುಣಿ-ಸುತರ್ಗನ್ನ ವಸ್ತ್ರಾಭರಣವೆಂದೆನುತ |ಪರರ ಸೇವೆಯಲಿ ನಾ ಕಡುನೊಂದೆ ಹರಿಯೆ 10ನೆತ್ತರವು ತೊಗಲು ಮಾಂಸದ ಹುತ್ತು ಜೊತ್ತುಗಳ |ಹತ್ತು ಇಂದ್ರಿಯದ ಬಹುರೋಗದಿಂದ ||ಮತ್ತೆ ಕಾಲನ ಬಾಯತುತ್ತು ಬಹುವಿಧ ಕರ್ಮ-||ಕತ್ತಲೆಯೊಳೀ ದೇಹ ಕರಕಾಯ್ತು ಹರಿಯೆ 11ದಿಟ್ಟತನದಲಿ ಗಳಿಸಿ ತರುವಾಗ ಸತಿಸುತರು |ಕಟ್ಟಿಕಾದಿಹರು ಮುಪ್ಪಡಸಲಾಗ ||ತಟ್ಟನೇ ಕೆಟ್ಟನುಡಿಗಳ ಬಯ್ಯುತಳಲುವರು |ಮುಟ್ಟಿನೋಡರು ಸರಕುಮಾಡರೈ ಹರಿಯೆ 12ಎಷ್ಟವಜೆÕಯ ಮಾಡೆ ಮತ್ತವನಿಗಳಲುತಿರೆ |ಕಟ್ಟಳೆಯ ದಿನತುಂಬಿಮೃತನಾಗಲು ||ಕುಟ್ಟಿಕೊಂಡಳುತ ಹೋಯೆನುತ ಬಂಧುಗಳೆಲ್ಲ |ಮುಟ್ಟದಲೆ ಹೆಣನೆಂದು ದೂರದೊಳಗಿಹರು 13ಸತ್ತ ಹೆಣಕಳಲೇತಕೆಂದು ಬಂಧುಗಳೆಲ್ಲ |ಸುತ್ತಿರ್ದು ಹೊತ್ತು ಹೋಯಿತು ಎನ್ನುತ ||ಹೊತ್ತು ಕೊಂಡಗ್ನಿಯಲಿ ತನುವ ಬೀಸಾಡುವರು |ಮತ್ತೆ ಧರಣಿಯಲಿ ನಾ ಜನಿಸಬೇಡವೊ ಹರಿಯೆ 14ಇನ್ನು ಈ ಪರಿಪರಿಯ ಯೋನಿಮುಖದಲಿ ಬಂದು |ಬನ್ನವನು ಪಡಲರೆ ಭವಭವದೊಳು ||ಜನ್ಮ-ಮರಣಾದಿ ಕ್ಲೇಶಗಳನ್ನು ಪರಿಹರಿಸಿ |ಸನ್ಮತಿಯೊಳಿರಿಸೆನ್ನ ಪುರಂದರವಿಠಲ 15
--------------
ಪುರಂದರದಾಸರು
ಸಾಧು ಸಾಧುಗಳೆಂದು ಎಂಬರೆ ನಿಮ್ಮನುಸಾಧುಗಳೇ ನೀವು ಸಾಧುಗಳೇಸಾಧುಗಳಾದರೆ ವಂದಿಸೆ ಎಲ್ಲರುಸಾಧುಗಳೇ ನೀವು ಸಾಧುಗಳೇಪನೀಚನು ಮೇಲಕೆ ಹೊಲಸನೆಸದರೂಚಲಿತನಾಗದವ ಸಾಧುಇನ್ನು ಕೃತಾರ್ಥನು ಪಾವನನಾದೆನುಎನ್ನುತಲಿರುವನೆ ಸಾಧು1ತಾಯಿ ಹತ್ಯವ ಮಾಡೆ ತಾನು ಕಣ್ಣಲ್ಲಿನೋಡೆತಳ್ಳಿಹೋಗದಿಹನೆ ಸಾಧುರಾಯ ಸದ್ಗುರು ಲೀಲೆಯಿದೆನ್ನುತಶಾಂತನಾಗಿರೆ ಸಾಧು2ತನ್ನ ಸತಿಯಳು ತನ್ನಯ ಮುಂದೆ ರಮಿಸಲುತಯಾರಾಗಿಹನವ ಸಾಧುಇನ್ನು ನಾ ಪುರುಷಲ್ಲಸ್ತ್ರೀಯು ತಾನಲ್ಲೆಂದುಸುಮ್ಮನಿರುವನೆ ಸಾಧು3ದೇಹವ ಕೊಯಿದು ಕೊಡೆಂದೆನೆದೇಹವ ಕೊಯ್ದಿಕ್ಕುವನೆ ಸಾಧುಮಹಾ ಸದ್ಗುರುನಾಥನು ದೃಢವನೋಡುವೆನೆಂದು ಮನಮಿಸುಕದಿಹನೆ ಸಾಧು4ಎತ್ತೆತ್ತ ಏಕೋ ದೇವನು ಆಗಿನೋಡುವನು ಸಾಧುಸತ್ಯ ಚಿದಾನಂದ ಸಾಕ್ಷಾತ್ಕಾರಾಗಿಹೆಸತ್ಯದಿಂದಿರುತಿಹ ಸಾಧು5
--------------
ಚಿದಾನಂದ ಅವಧೂತರು
ಸಾಧ್ಯವಲ್ಲವು ಮುಕುತಿ ಸಾಧ್ಯವಲ್ಲವುಶುದ್ಧ ಸಾತ್ವಿಕನಾಗಿ ತತ್ವಸಿದ್ಧ ಶೀಲರವೆರಸದಿರಲು ಪ.ಇಷುಭೇದವ ತಾನರಿತು ಸಂತತವಿಷ್ವಕ್ಸೇನನ ಅಂಕವಿಧದೊಳೆಸೆವ ಶ್ರದ್ಧೆಯ ತೋರಿ ಋತುಗಳಗಸಣೆಗಂಜದೆ ಶಶಿಮತನಾಗದೆ 1ಕಕುಭಬದ್ಧನೆನಿಸಿ ಹರಿವಿನಾನಿಖಿಳವಿಷಯಂಗಳ ಮನ್ನಿಸದಖಿಳ ರಾಮಕರ ತತ್ವವ ಜಪಿಸಿಅಕಳಂಕಮತ ಗುಣಧಿಯ ನಂ¨ದೆ 2ಪರನಾರಿಯರಿಗೊಮ್ಮೆ ಮನಸೋತಿರದೆ ಚಿತ್ತದ ಹರಿಯಂ ಮುರಿದುಗುರುಪೂರ್ಣಜ್ಞಾಜÕದಿ ಪ್ರಸನ್ನವೆಂಕಟಅರಸನ ಚರಣವ ಸ್ಮರಿಸದೆ ಬರಿದೆ 3
--------------
ಪ್ರಸನ್ನವೆಂಕಟದಾಸರು
ಸಾಮಜಗಮನೆ ಕೇಳೀ ಮನ ನಿಲ್ಲದುಸ್ವಾಮಿಯ ಕರೆತಾರೆ ನೀರೆ ಪ.ಯಾತರ ಜನುಮ ಇನ್ಯಾತರ ಬಾಳುವೆಪ್ರೀತಿಯಿಲ್ಲವೆ ಎನ್ನಲ್ಲಿ ಅಗಲಿಧಾತುಗುಂದಿಹ್ಯದು ಮತ್ಯಾತಕೆ ಸಲ್ಲವಮ್ಮನಾಥನಿದಿರಿನಲ್ಲಾಸೆ ಉದಿಸೆ 1ಕಣ್ಣಕಜ್ಜಲನಿಲ್ಲದಿನ್ನೇನು ತರವಮ್ಮರನ್ನದುಡುಗೆಭಾರತೋರಪನ್ನಗವಾದವು ಎನ್ನ ಹೂವಿನಹಾರಮನ್ನಿಸಿ ಬರಲೊಲ್ಲನೆ ಎನ್ನೊಲ್ಲನೆ 2ಕೂಡಿದವಳ ಹೀಗೆ ಕಾಡಬಹುದೇನಕ್ಕಬ್ಯಾಡ ಕಠಿಣ ಮನಸುಮುನಿಸುನೋಡೆ ಪ್ರಸನ್ನವೆಂಕಟ ಗಾಡಿಕಾರನು ನೆರದುಆಡಿದನೆ ಕಾಂತೆ ಏಕಾಂತ 3
--------------
ಪ್ರಸನ್ನವೆಂಕಟದಾಸರು
ಸಾರಿಗೆಯ ಮಾಡೋಣ ಸಜ್ಜನರು ಬನ್ನಿರೋನಾರಾಯಣನ ದಿವ್ಯನಾಮ ಭಾರಿ ಕೊಂಬ ಬನ್ನಿರೋ ಪ.ಹೃದಯವೆಂಬ ಚೀಲದೊಳಗೆ ಹರಿಯ ನಾಮ ಹೊನ್ನಹಾಕಿತುದಿ ನಾಲಿಗೆಯಿಂದ ತೆಗದು ವೆಚ್ಚವನ್ನು ಮಾಡಿರೊ 1ಙ್ಞÕನವೆಂಬ ಎತ್ತಿನಲ್ಲಿ ಕರುಣವೆಂಬ ಗೋಣಿಹಾಕಿದಾನ - ಧರ್ಮವೆಂಬ ದವಸ ಸರಕುಗಳ ತುಂಬಿರೊ 2ನೇಮ - ನಿತ್ಯವೆಂಬ ಗಟ್ಟಿ ನಡುವಿನಲ್ಲಿ ಬಿಗಿದು ಸುತ್ತಿಪ್ರೇಮವೆಂಬ ಚೊಕ್ಕ ಬುತ್ತಿ ಸೆರಗಿನಲ್ಲಿ ಕಟ್ಟಿರೋ 3ಕಾವಲಿಗರೈವರನ್ನು ಕಾಣದಂತೆ ಟಕ್ಕುದೋರಿಭಾವವೆಂಬ ಮಾರ್ಗದಲ್ಲಿ ಬೇಗ ಬೇಗ ಬನ್ನಿರೊ 4
--------------
ಪುರಂದರದಾಸರು