ಒಟ್ಟು 16359 ಕಡೆಗಳಲ್ಲಿ , 135 ದಾಸರು , 7416 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪರಮಪಾವನ್ನನಾಮ ಭಳಿರೆ ಸಂಗರ ಭೀಮ ಸರಸಗುಣಾಭಿರಾಮ ತರಣಿವಂಶ ಲಲಾಮ ತಾರಾನಂದನ ಪ್ರೇಮ ಪರಿಪೂರ್ಣಧಾಮ ಪಟ್ಟಾಭಿರಾಮ ಪ. ಚಿಕ್ಕಪ್ರಾಯದಲಿ ಬಲುರಕ್ಕಸಿಯನು ಸೀಳಿ ತಾಕಲದೆ ಕಾಲ್ಪೆಣ್ಗೈದು ರಾಜಮೌಳಿಯ ಬಿಲ್ಲ ಗಕ್ಕನೆ ಖಂಡ್ರಿಸಿ ಕೈವಿಡಿದು ಸೊಬಗನುಕ್ಕುವ ಜಾನಕಿಯ ಧಿಕ್ಕರಿಸುತ ಪೋಗಿ ದಿತಿಯ ಕೈಕೆಯ ಮಾತು ದಕ್ಕಲೆನುತ ಪೋಗಿ ದಂಡಕಾರಣ್ಯವ ಭೂರಿ ದಾನವಹಿಂಡ ಚಕ್ಕಂದದಲಿ ಕೊಂದ ಜಾಣ ನೀನಹುದೊ 1 ಭುವನೇಶ ಶಬರಿಯ ಪೂಜೆಯ ಕೈಕೊಂಡು ಪವನಾತ್ಮಜನ ಕಂಡು ಬರಹೇಳಿ ರವಿಯ ಸೂನನ ಕಾಣಿಸಿಕೊಂಡು ತವಕದಿಂ ವಾಲಿಯ ಹವಣರಿಯದಸುವ ಕೊಂದು ಪ್ಲವಗ ಬಲವನು ಕೂಡಿ ಬಲು ಸಮುದ್ರವ ಬಂಧ- ನವ ಮಾಡಿ ಕುಂಭಕರ್ಣ ರಾವಣನ ಸಂಹಾರ ಮಾಡಿ ಲಂಕಾರಾ ಜ್ಯ ವಿಭೀಷಣಗಿತ್ತು ಅವನಿಜೆಸಹ ಪುಷ್ಪಕವನೇರಿ ನಡೆದೆ 2 ಸುರರೆಲ್ಲ ಪೂಮಳೆಗರೆಯೆ ಸುಗ್ರೀವಾದಿ ವರರಾವಣರ ಸೇನೆ ಬೈಲಾಗಿ ನೀ ನಡೆಯೆ ಶೃಂ- ಗಾರವಾದ ಸಾಕೇತಪುರಕೆ ಭರದಿ ಬಂದು ನಿರುತ ಸೌಖ್ಯದಲಿ ನಿಂದು ಸಿರನೆಲೆವಿನಯದಿ ಚಿನ್ಮಯನಾ ಗಿರಿಯ ಶುಭಕರ್ಣವೊ(?) ಸೀತಾಲಕ್ಷ್ಮಣ ಭರತಶತ್ರುಘ್ನಯಿರೆ ಹನುಮನ ಸೇವೆ ದಿವ್ಯಸಿಂಹಾಸನವೇರಿ ಧರೆ ಆಳಿದ ಪರಿಣಾಮದಿ ಹಯವದನ ರಾಮ3
--------------
ವಾದಿರಾಜ
ಪರಮಪುರುಷ ಪಾಲಿಪುದೈ ಸರಸಿಜಾಕ್ಷ ಸರ್ವರಕ್ಷ ಪ ಮಗುವಾದ ಧ್ರುವನು ಅಗಣಿತಗುಣ ನಿನ್ನನು ಹಗಲಿರುಳೂ ಮೃದುಪದವಂ ಬಿಗಿದಪ್ಪುತ ಧ್ಯಾನಿಸೆ 1 ಯೋಗಿಜನಾನಂದಕನೆ ಬೇಗದಿ ಮೈದೋರುತಲಿ ಭಾಗವತಪ್ರಿಯಪದವಂ ರಾಗದಿತ್ತೆ ಜಾಜೀಶ 2
--------------
ಶಾಮಶರ್ಮರು
ಪರಮಪುರುಷ ಶ್ರೀ ರಾಮನ ಪದಯುಗ ಸಿರಿರಮಣ ನಿಜದಾಸನೆಂದೆನಿಸಿದ ವರ ಕದರುಂಡಲಿ ಹನುಮಂತ ಪ. ಒಂದೇ ಮನದಲಿ ತಂದೆ ನಿನ್ನಡಿಗಳ ಪೊಂದಿದೆ ಸಲಹೈ ಹನುಮಂತ ಕುಂದುಗಳೆಣಿಸದೆ ಕಂದನ ತೆರದಲಿ ಎಂದೆಂದಿಗು ಪೊರೆ ಹನುಮಂತ 1 ವಾರಿಧಿ ದಾಟುತ ಸೇರುತ ಅರಿಪುರ ಧಾರುಣಿಜೆಯ ಕಂಡೆ ಹನುಮಂತ ನಾರಿಚೋರನಪುರ ಸೇರಿಸಿ ಅನಲಗೆ ಸೇರಿದೆ ರಾಮನ ಹನುಮಂತ 2 ಕೃಷ್ಣನ ಸೇವಿಸಿ ದುಷ್ಟರ ಕೊಲ್ಲುತ ಮೆಟ್ಟಿದೆ ಖಳರನು ಹನುಮಂತ ದಿಟ್ಟತನದಿ ಸಾಮ್ರಾಜ್ಯವಾಳಿ ಜಗ- ಜಟ್ಟಿ ಎಂದೆನಿಸಿದೆ ಹನುಮಂತ 3 ಮಿತಿಯಿಲ್ಲದ ಅತಿಖತಿ ಮತಗಳನು ಹತಗೈಸುತ ನೀ ಹನುಮಂತ ಪ್ರತಿ ಗ್ರಂಥಗಳನ್ನು ಸ್ಥಾಪಿಸಿ ಸುರರಿಗೆ ಅತಿ ಹಿತ ತೋರಿದೆ ಹನುಮಂತ 4 ಇಷ್ಟ ಫಲಪ್ರದ ತುಷ್ಟಿಬಡಿಸೊ ನೀ ಕೊಟ್ಟೀಗಭಯವ ಹನುಮಂತ ದಿಟ್ಟ ನಿನ್ನಡಿಗಳ ಭಜಿಸುವೆ ಗೋಪಾಲ ಕೃಷ್ಣವಿಠ್ಠಲ ಪ್ರಿಯ ಹನುಮಂತ5
--------------
ಅಂಬಾಬಾಯಿ
ಪರಮಪುರುಷಪರೇಶಪಾವನಪರಮಮುನಿಜನಪಾಲನ ಶರಧಿಶಯನ ವಿಹಂಗವಾಹನ ಶಾರದಾಂಬುಜಲೋಚನ 1 ವಾಸುದೇವ ವಿರಂಚಿವಂದಿತ ವಾಸವಾದಿ ಸುರಾರ್ಚಿತ ವಾಸುಕಿಪ್ರಿಯ ಭೂಷಭಾವಿತ ವಾಸರೇಶಕುಲೋದಿತ 2 ಶರಣಜನರಘಹರಣ ಸೌಖ್ಯವಿತರಣ ಶುಭಸಾಗರ ವರದ ಪುಲಿಗಿರಿವಾಸ ವೆಂಕಟವಿಠಲ ದಯಾಕರ 3
--------------
ವೆಂಕಟವರದಾರ್ಯರು
ಪರಮಪ್ರೀಯಾ ದಾಸರಾಯಾ | ಸತ್ಕವಿಜನಗೇಯಾ ಪ ಸುರತರು | ಕರಿಗಿರಿ ನಿಲಯನೆಉರುಗಾಯನ ಸಂದರುಶನ ಕೊಡಿಸಯ್ಯ ಅ.ಪ. ಆರ್ಮೂರೇಳು ನಾಲ್ಕೆಂಟು ಗ್ರಂಥ | ಅವುಗಳ ಸಾರಾರ್ಥಸಾರುತ್ತ ಭಕುತರಿಗೆ ಪುರುಷಾರ್ಥ | ಮಾರ್ಗವ ತೋರುತ್ತ ||ಚಾರು ಚರಿತ ಶ್ರೀರಮಾರಮಣನಗುಣವಾರಿಧಿಯೊಳು ಬಹು ಈಸಿದ ನಿಪುಣ 1 ಪಥ ಪುನರುದ್ಧರಿಸಿದ 2 ಪರತತ್ವ ಸಾರಾಂಬುಧಿ ಬೆಳಗುವನ ಪರಿಪರಿಕಲೆಯವನಶರಣರ ಹೃತ್ತಾಪವ ಹರಿಸುವನ | ನಿರತೈಕರೂಪನನಪರಮಾರ್ಥೇಂದು ವರೋದಯ ಕರುಣಿಸಿಧರಣಿಯ ಸುರರನು ಪೊರದೆಯೊ ಗುರುವೆ 3 ಅಂಕೀತವಿಲ್ಲದ ದೇಹಗಳೊಂದು | ನಿಷಿದ್ಧವೆಂದೂಪಂಕಜಾಕ್ಷನ ನಾಮಗಳೊಂದೊಂದು | ಬಳಸುತ ನೀನಂದೂ ಅಂಕನ ಗೈಧರಿ ಲೆಂಕತನವನಿತ್ತುಬಿಂಕದಿ ಜನ ಹೃತ್ಸಂಕಟ ಕಳೆದೀ 4 ಬಿಂಬೋಪದೇಶವೆ ತಾರಕವೆಂದೂ | ನಿಸ್ಸಂಶಯವೆಂದೂಹಂಬಾಲ ಹಚ್ಚುತ ಶರಣರಿಗೆಂದೆಂದೂ | ಕರುಣಾ ಸಿಂಧೂಬಿಂಬನು ಗುರುಗೋವಿಂದ ವಿಠಲ ಪಾದಾಂಬುಜದಲ್ಯನ ಹಂಬಲವಿರಿಸಿದೆ 5
--------------
ಗುರುಗೋವಿಂದವಿಠಲರು
ಪರಮಮಂಗಳ ಧಾಮಾ ಶ್ರೀರಾಮಾ ಪ ಕರುಣಾಮೃತ ಸಾಗರ ನಿಸ್ಸೀಮಾಚರಣಕೆರಗುವೆ ಸಾಸಿರನಾಮಾ 1 ಶರಣಾಗತರನು ಕರವಿಡಿವುದು ನೇಮಾಶರಣುಬಂದೆನಯ್ಯ ರಘುಕುಲ ಸೋಮಾ 2 ವಚನವ ಪಾಲಿಪ ಸುಚರಿತವೈ ನಿಮ್ಮಅಚಲ ಭಕ್ತಿಕೊಡು ಮೇಘಶ್ಯಾಮಾ 3 ಗದುಗಿನ ವೀರನಾರಾಯಣ ಪ್ರೇಮ ವೊದಗಿಸಿ ಕಾಯೋ ವೀರ ಲಲಾಮಾ 4
--------------
ವೀರನಾರಾಯಣ
ಪರಮಯೋಗಿಯ ನೋಡಿರೊ ನೀವೆಲ್ಲರು | ಪರಮಯೋಗಿಯ ನೋಡಿರೊ || ಪರಮಯೋಗಿಯ ನೋಡಿ ಪ್ರೀತಿವಂತರಾಗಿ | ನಿರಯವ ಕಳೆದು ಆನಂದ ಬೇಡುವರೆಲ್ಲ ಪ ವಾನರ ವೇಷವಾಗಿ ಪರ್ವತ ಸೇರಿದಾ | ಭಾನುನಂದನ ಮನೋಬಯಕಿಯ ಸಲ್ಲಿಸಿ || ಏನೆಂಬೆ ಬಲು ಒಂದು ರೂಪವಾಗಿ ತೋರಿ | ತಾನೆ ತನ್ನೊಳಗೆದ್ದು ದುರುಳರ ಮೋಹಿಸಿದಾ 1 ವಿಷವನುಂಡು ಮೂರು ಲೋಕದೊಳಗೆ ಮೆರೆದು | ಅಸುರ ಬಕನ ಸೀಳಿ ಧರಿಗೆ ಬಿಸುಟು | ಶಶಿಮುಖಿಯಳ ಪ್ರೀತಿಬಡಿಸಿ ಅರ್ಜುನಗೊಲಿದು | ಶಶಿಕುಲದಲಿ ಪುಟ್ಟಿ ದುರ್ಜನ ಸಂತಾಪಬಡಿಸಿ2 ಯತಿಯಾಗಿ ಜನಿಸಿ ಸುವಾಕ್ಯವ ಬಯಸಿ | ಮತಿಹೀನ ಜನರ ಶಾಸ್ತ್ರವ ಖಂಡಿಸಿ || ತುತಿಸಿದ ಭಕ್ತರ್ಗೆ ಗತಿಯ ಕೊಡುವ ಪ್ರಾಣ- ನಿತ್ಯ ಪರಮ 3
--------------
ವಿಜಯದಾಸ
ಪರಮಾತ್ಮನ ನೆನೆಯಲು ಬೇಕು ಪರತರಸುಖವನು ಪಡೆಯುವನಿದರಿಂ ದುರಿತಗಳೆಲ್ಲವ ನೀಗಲು ತಾ ಪ ಮೊದಲನೆ ಕಾರ್ಯವು ಜೀವರೆಲ್ಲರಿಗೆ ಇದು ಬಲು ಸುಲಭವು ಸಾಧನಗಳಲೀ ಪದುಮನಾಭನನು ನೆನೆಯದಿರುವವ ಅಧಮನು ಜಗದಿ ವ್ಯರ್ಥ ಜೀವಿಸುವ 1 ಎಲ್ಲ ವೇದಗಳು ಎಲ್ಲ ಶಾಸ್ತ್ರಗಳು ಎಲ್ಲ ಸಾಧನೆಗಳು ಆತನ ಪ್ರಾಪ್ತಿಗೆ ಬಲ್ಲವರಿಂದಲಿ ತಿಳಿದು ವಿಚಾರಿಸಿ ನಿಲ್ಲದೆ ಸಾಧನೆ ಕೈಕೊಳ್ಳುವುದು 2 ಕೇಳುವದೈ ಪರಮಾತ್ಮನ ತತ್ವವ ತಿಳಿವುದು ತನ್ನೊಳು ತಾನೇ ನಿರುತಾ ಪೇಳಲೇನು ಧ್ಯಾನಿಸುವುದಾತನ ಮೇಳವಿಸುವದೈ ಜೀವನ್ಮುಕುತಿ 3 ನಾರಾಯಣನೇ ಪರಮಗತಿಯು ಈ ನರಜನ್ಮಕೆ ಬಂದಿರೆ ಲಾಭವಿದೇ ಅರಿತು ಇದನು ತಾ ಸಾಧನೆ ಮಾಳ್ಪುದು ಗುರುಶಂಕರನಾ ಬೋಧಸಾರವಿದು 4
--------------
ಶಂಕರಭಟ್ಟ ಅಗ್ನಿಹೋತ್ರಿ
ಪರಮಾತ್ಮನೆ ಪರಿಪೂರ್ಣನೆ ವರವೇಂಕಟರಮಣನೆ ರಾಮ ಪ ಪೊರೆಯೋ ಸದಾ ಭಕ್ತ ಸುಪ್ರೇಮ ಅ.ಪ ನಿತ್ಯತೃಪ್ತ ನಿರ್ಮಲಾತ್ಮ ಸತ್ಯಮೂರ್ತಿ ಷಡ್ಗುಣಭರಿತ ಭೃತ್ಯವರ್ಗ ಸಂರಕ್ಷಣ ಶಕ್ತ ಪ್ರತ್ಯಕ್ಷ ಪಾವನ ಚರಿತ 1 ನಿನ್ನ ಮಹಿಮೆಯನ್ನು ಪೊಗಳೆ ಪನ್ನಗೇಶನಿಂದಲಸದಳ ಇನ್ನು ನಾನು ಪೊಗಳಲಪ್ಪನೆ ಸನ್ನುತಾಂಗ ಸದಯರಂಗ2 ಮುನಿಗಳಿಂದ ಪೂಜೆಗೊಂಬ ಘನಗುಣಾತ್ಮ ನಿನ್ನ ಯಾಜಿಪೆ ಅಣುಗನಿಂದಲಾಗಲಹುದೆ ತನುಮನ ಪೊರೆ ಆನಂದ3 ಉಣ್ಣಲಿಡಲಿದೆಲ್ಲ ನಿನ್ನದೊ ಇನ್ನದೇನ ತಂದು ಕೊಡಲೊ ಮನ್ನಿಸುವುದೊ ಹೆಜ್ಜಾಜಿಯ ಚನ್ನಕೇಶವ 4
--------------
ಶಾಮಶರ್ಮರು
ಪರಮಾತ್ಮನೇ ಪಾಲಿಸೊ ಬೇಗ ನೀ ಪ ಕರಸುದರ್ಶನನೆ ನೀರಜಾರಿಪ್ರಿಯ ನಾರಸಿಂಹನ್ಯಾರೊ ನಾಗಶಯನ ಬಾರೊ 1 ಅಂತರಾತ್ಮನ್ಯಾರೋ ಇಂತು ಬೇಗ ಬಾರೊ ಕಂತುಜನಕನ್ಯಾರೋ ಕಾಮನಯ್ಯ ಬಾರೊ 2 ಆದಿರೂಪನ್ಯಾರೊ ಅಚ್ಚುತ ನೀ ಬಾರೊ ವಾದಿಭೀಕರನಾದಾ ವೆಂಕಟೇಶನೆಂಬೊ 3 ವಾಸವ ವಿನುತಾ ಹಾಸನದೊಳಿಪ್ಪ ದೇಶಿಕಾ ನೀ ತುಲಶೀರಾಮದಾಸನಾದ 4
--------------
ಚನ್ನಪಟ್ಟಣದ ಅಹೋಬಲದಾಸರು
ಪರಮಾನಂದ ಕರುಣಾಸಿಂಧು ವರವ ನೀಡಲು ಭಕುತಬಂಧು ಪ ಪರಮಚರಿತ ದುರಿತರಹಿತ ಪೊರೆಯೊ ಪ್ರಥಮಜನರ ಪ್ರೀತ ಸ್ಮರಿಪೆ ನಿರುತ ಸುರಗಣನುತ ಮೊರೆಯೊ ಕೇಳೆಲೊ ವರಪ್ರದಾತ 1 ಉರಗಭೂಷ ಭಜಕಪೋಷ ದುರಿತನಾಶ ಸುಜನವಾಸ ವರಮಹೇಶ ತ್ರಿ ಜಗದೀಶ ಪೊರೆ ಪ್ರಕಾಶ ತ್ರಿಪುರನಾಶ 2 ನಿಗಮವಿನುತ ಭಗವದ್ಭಕ್ತ ಸುಗುಣವಿಖ್ಯಾತ ಜಗನ್ನಾಥ ಜಗಜೀವಿತ ಶ್ರೀರಾಮ ಪ್ರೀತ ಈಗೆನ್ನಂತರಂಗ ಪಾಲಿಸೊ 3
--------------
ರಾಮದಾಸರು
ಪರಮಾನುಗ್ರಹ ಮಾಡು -ಈ ತರಳನ ದಯದಿಂ ನೋಡು ಪ ನರಹರಿ ನೀನಲ್ಲವೆ ಕರುಣಾಳು ಅ.ಪ ಅನ್ನ ಸೇರಲಿಲ್ಲವಂತೆ -ಮಲಗಿ ನಿನ್ನಿಂದಲಿ ಹೀಗಿಹನಂತೆ ಘನ್ನಮಹಿಮ ನಿನ್ನವರಿಗೆಲ್ಲ -ಈ ಬನ್ನ ನ್ಯಾಯವೆ ಪ್ರಸನ್ನ ನೃಸಿಂಹ 1 ತುಡುಗಾಟಗಳಾಡಿ ಬಳಲಿ -ಈ ಹುಡುಗ ಮನೆ ಮನೆಯ ತೊಳಲಿ ಕಡುಭೀತಿಯ ಹೊಂದಿರುವ ನಾವು ನಿ- ನ್ನೊಡವೆಯಲ್ಲವೆ ಒಡೆಯ ನರಹರಿಯೆ 2 ಔಷಧ ಪಥ್ಯಗಳೇಕೆ -ನಿ ರ್ದೋಷ ನೀನೊಳಗಿರಲಿಕ್ಕೆ ಶೇಷಶಯನ ಗುರುರಾಮವಿಠಲ ಪÉೂೀಷಿಸುವನು ನೀನೆ ನೀನೆ ನಿಜ3
--------------
ಗುರುರಾಮವಿಠಲ
ಪರಮೇಶ್ವರ ಪೂರ್ಣ ತುಂಬ್ಯಾನ ಪರಾಮರಿಸಿ ನಿಮ್ಮೊಳಗೆ ಪರದೆ ಇಲ್ಲದೆ ಪರವಸ್ತುದೋರುವ ಕರುಣಿಸಿ ನಿಮಿಷದೊಳಗೆ ಸದ್ಗುರು ಜಗದೊಳಗೆ ಎರಡಿಲ್ಲದೆ ಗುರುಚರಣಕ ಮನಬೆರೆದನುಭವಿಸುವದಾವಾಗೆ ತ್ರಾಹಿ ತ್ರಾಹಿ 1 ನಿಜಮಾಡುವದೆಲ್ಲ ಡಾಂಭಿಕ ಮಾಡದು ತಾ ನಿಜಸುಖ ಕೂಡಲು ಪುಣ್ಯೊದಗ್ಯಾಗಲು ಗುರುಕೃಪೆ ನೋಡುದು ಕೌತುಕ ಗೂಡಿನೊಳನೇದಾ ತ್ರಾಹಿ ತ್ರಾಹಿ 2 ರಾಜಿಸುತಿಹ್ಯ ಶ್ರೀಪಾದ ಅನುದಿನ ತಾ ಸೇವಿಸಬೇಕು ಸುಬೋಧ ಮಾಜದೆ ಗುರುಚರಣಕ್ಕೆ ತನುಮನಧನ ಭಜಿಸಬೇಕು ಸರ್ವದಾ ರಾಜಯೋಗಪ್ರಸಾದ ತ್ರಾಹಿ ತ್ರಾಹಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಪರಮೇಶ್ವರಾ ಕರುಣಾಕರಾ ಗಿರಿಜಾಪ್ರಿಯ ಸೋಮಶೇಖರಾ ಪ ಸಾರ ಶರನಿಧಿ ಗಂಭೀರ ಸ್ಮರಹರಾ ಉದಾರ, ಪಾಹಿಶಂಕರ ಅ.ಪ ಕಮಲಾಕ್ಷ ಮಿತ್ರ ಕಮನೀಯಗಾತ್ರ ಅಮರಾರಿ ವೇತ್ರ ವಿಮಲಾ ತ್ರೀನೇತ್ರಾ ರಮಣೀಯ ಚಾರಿತ್ರ ಹಿಮಶೈಲಜಾಪಾತ್ರ ಅಮರೇಂದ್ರನುತ ಗೋತ್ರ ಶರಣಾತಪತ್ರ 1 ಉರಗ ವಿಭೂಷಣ ಪರಿಜನ ತೋಷಣ ಸುರನದಿ ರಮಣಾ ಭವಭಯ ಭೀಷಣ ದುರಿತ ನಿವಾರಣ ಪರಮ ಕೃಪಾಗುಣ ಪರಶಿವ ಮಾಂಗಿರಿಶೃಂಗಾಭರಣಾ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಪರಮೇಷ್ಠಿ ನಿರುತನಿಷ್ಠಿ ಮಾಣದೆ ಕೊಡು ಮನಮುಟ್ಟಿ ಪ ನಾನಾ ನಾಡಿನೊಳು ನೀನೆ ಪಿರಿಯನೆಂದು ಆನಂದ ಮತಿಯಿಂದ ಗಾನವ ಮಾಡುವೆ ಅ.ಪ. ಪುರುಷನಾಮಕ ವಿಧಾತ ಹಂಸವರೂಥ ಸರಸಿಜ ಗರ್ಭ ಶಿವತಾತ ಪರಮ ಗುರುವೆ ವಿಖ್ಯಾತ ಪೂರ್ವ ಮಾರುತ ತಾರತಮ್ಯದೊಳುನ್ನತ ಸಿರಿ ಪರಮಾಣು ಪ್ರದೇಶ ವರ ಶಬ್ದ ಪಿಡಿದು ಪರಿ ಪರಿಯಿಂದಲಿ ಶತಾನಂದ 1 ಜಗವÀ ಪುಟ್ಟಿಸುವ ಮಹಾಧೀರ ತತ್ವಶರೀರ ಮಗುಳೆ ಅನಿರುದ್ಧಕುಮಾರ ಝಗಿಝಗಿಪ ಮಕುಟಧರ ಜೀವನೋದ್ಧಾರ ನಿಗಭಿಮಾನಿ ಚತುರ-ಮೊಗನೆ ಪ್ರಬಲ ಅಹಿಗರುಡಾದ್ಯರಿಗೆಲ್ಲ ಅಗಣಿತ ವಾಕ್ಯನೆ ಹಗಲಿರುಳು ಮನಸಿಗೆ ಸುಖವಾಗುವ ಬಗೆ ಕರುಣಿಸು ನಮ್ಹಗೆಗಳ ಕಳೆದು 2 ವಾರಿಜಾಸನ ಲೋಕೇಶ ಭಕುತಿವಿಲಾಸ ಚಾರುಸತ್ಯ ಲೋಕಾಧೀಶ ಸಾರಹೃದಯ ವಿಶೇಷ ಮಹಿಮನೆ ದೋಷ ದೂರ ನಿರ್ಮಲ ಪ್ರಕಾಶ ಧಾರುಣಿಯೊಳಗವತಾರ ಮಾಡದ ದೇವ ಸಾರಿದೆ ನಿನ್ನಂಘ್ರಿವಾರಿಜಯುಗಳವ ಸಾರಿಸಾರಿ ವಿಜಯವಿಠ್ಠಲನ್ನ ಆರಾಧಿಪುದಕೆ ಚಾರುಮತಿಯ ಕೊಡು 3
--------------
ವಿಜಯದಾಸ