ಒಟ್ಟು 39871 ಕಡೆಗಳಲ್ಲಿ , 136 ದಾಸರು , 11580 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಛೀ ಛೀ ಛೀ ಛೀ ಪ ಬಿಟ್ಟು ಕೊಡೋ ನೀ ಸಂಸಾರ ಭ್ರಾಂತಿ | ಎಷ್ಟು ಸೋಸುವಿ ದುಃಖದ ಪಂಥಿ | ಅಷ್ಟು ಪಾಶದೀ ಬಿಗಿದಿಹ ಗ್ರಂಥಿ | ಕಷ್ಟ ಪಟ್ಟಿನ್ನು ಮಾಡುವಿ ಚಿಂತಿ 1 ಸತಿ ಸುತರೆಲ್ಲಾ | ಘನ್ನಸ್ನೇಹವ ಮಾಡುವರಲ್ಲಾ | ಧನ ಯೌವನ ಕೊರತ್ಯಾಗಿ ಸೊಲ್ಲಾ | ತೃಣ ಸಮಮಾಡಿ ಬಗೆವರು ಖುಳ್ಳಾ 2 ಹಳೆದಾಯಿತು ತಾಳಿದ ಕಂಥೀ | ಬಲವಿಂದ್ರಿಯ-ವಾದವು ಶಾಂತಿ | ಬಲು ನೆರೆಯಿತು ರೋಗದ ಸಂತಿ | ಕೆಳಗಾಯಿತು ಪೌರುಷ ಖಂತಿ 3 ಹಿರಿಕಿರಿಯರು ಸರಿಕರು ನಿನ್ನಾ | ಸರಿದ್ಹೋಗುದು ಕಾಣಲಿಲ್ಲÁ ಕಣ್ಣÁ | ಅರಿತು ವಿವೇಕವ ಪಡಿಯದೆ ಘನ್ನಾ | ಮರೆದಾಗುರೆ ನೀ ಮಸಿಮಣ್ಣಾ 4 ಒಂದಾಗಲು ಮತ್ತೊಂದಾಶೆ | ಸಂಧಿಸುವದು ವಾಸನೆ ಸೂಶಿ | ತಂದೆ ಮಹಿಪತಿ ನಂದನು ಹೇಸಿ | ಇಂದು ಸಾರಿದಾ ಹರಿನಾಮ ಸ್ಮರಿಸಿ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಛೀ ಛೀ ಛೀ ಛೀ ಮೂಳಿ ನಾಚಿಕೆ ಇಲ್ಲದ ಹಾಳಿನೀಚ ಮನುಜರೊಡನೆ ಆಡಲುಬಂತು ಮೂರ್ಖೆ ಮೂಳಿ ಪ ಸುಕೃತ ಮಾರ್ಗವ ಸುಟ್ಟೆ 1 ಎಲ್ಲಿ ಸತಿಯು ಸುತರು, ಮತ್ತೆಲ್ಲಿ ಪತಿಯು ಪಿತರುಯಮನು ವೈಯ್ಯುವಾಗ ಬಹರೆ ಸರ್ವಹಿತರುಗುರುವಿನ ಪಾದವ ಹೊಂದು ನೀ 2 ಮರೆಯದಿರು ಮಾತೆಂದೂಗುರು ಚಿದಾನಂದನು ತಾನೆ ಎನಲು ಹೋಹುದು ಭವವುಹಿಂದು 3
--------------
ಚಿದಾನಂದ ಅವಧೂತರು
ಛೀ ಛೀ ಬಿಡು ಸಂಸಾರಾಬ್ಧಿಯ ದಾಂಟಲು ನಾವೆಯಚಾಚು ಛೂ ಛೂ ಎಂದರು ಸರ್ವನು ಒಂದಿಷ್ಟು ನಾಚಿಕೆಯಿಲ್ಲ ಈಸು ಪ ಬಿಡುವುದೆ ಲೇಸು ಗಾದಿಯು ತಿಳಿಯದು ಈಸು ಪ್ರಾಚೀನ ಕರ್ಮವಿ ದೀಸು ತಾರಕ ಮಂತ್ರವ ಸೂಸು 1 ಹೊನ್ನಿನ ಬಳಿಯಲಿ ಸರ್ವಾಭರಣವು ಚಿನ್ನವು ಎನಿಸದ ಹಾಗೆ ಚೆನ್ನಾಗಿ ತೋರುವಹಾಗೆ ಕಣ್ಣಲಿ ಕಾಣುವುದೆಲ್ಲ ಕಡೆಯಲಿ ನುಣ್ಣಗೆ ಲಯವಾದಹಾಗೆ ರೂಪನು ತಾನಾದ ಹಾಗೆ 2 ರೇಚಕ ಪೊರಕ ಕುಂಭಕವಿರವನು ಸಾಧಿಸು ನಿನಗದು ಊಚು ಗೋಚರ ದೊಳು ಲಘುತೋಚು 3
--------------
ಕವಿ ಪರಮದೇವದಾಸರು
ಛೀ ಛೀ ಮನವೆ ನಾಚದ ತನುವೆನೀಚವೃತ್ತಿಯ ಬಿಟ್ಟುನೆನೆ ಕಂಡ್ಯ ಹರಿಯ ಪ. ಕಿವಿಗೊಟ್ಟು ಗಂಟೆಯ ನಾದಕ್ಕೆ ಹುಲ್ಲೆಯನಿವಹ ಬಲೆಗೆ ಸಿಕ್ಕಿ ಬಿದ್ದುದನರಿಯನವ ಯೌವನೆಯರ ಕೋಕಿಲಾಲಾಪದಸವಿನುಡಿಗೇಳದಚ್ಯುತನ ಕಥೆ ಕೇಳೊ 1 ಪಣ್ಣೆಂದು ಭ್ರಮಿಸಿ ಪತಂಗ ದೀಪದಿ ಬಿದ್ದುಉಣ್ಣದುರಿವುದ ನೀ ಕಂಡು ಕಂಡರಿಯಬಣ್ಣದಬಲೆಯರ ರೂಪಿಗೆ ಮರುಳಾಗಿಮಣ್ಣ ತಿನ್ನದೆ ಮಾಧವನ್ನ ನೀ ಸ್ಮರಿಸೋ 2 ಗಾಣದ ತುದಿಯ ಮಾಂಸವ ಮೆಲ್ಲುವ ಮತ್ಸ್ಯಪ್ರಾಣವ ಬಿಡುವುದಂಗನೆಯರಧರವಮಾಣದೆ ಬಯಸಿ ಕೆಡದೆ ಶ್ರೀಮನ್ನಾರಾ-ಯಣ ನಾಮಾಮೃತಸವಿ ಎಲೆ ಮನವೆ 3 ಕರಿ ಕರಿಣಿಯ ಸ್ಪರುಶಕೆ ಪೋಗಿಕುಳಿಯ ಬಿದ್ದುದ ನೀ ಕಂಡು ಕಂಡರಿಯಲಲನೆಯರಾಲಿಂಗನಕೆÀಳೆಸದೆ ಸಿರಿ-ಲಲನೇಶನಂಘ್ರಿಯ ಅಪ್ಪಿಕೋ ಮನವೆ 4 ಅಳಿ ಪರಿಮಳಕ್ಕಾಗಿ ನಳಿನದೊಳಗೆ ಸಿಕ್ಕಿಅಳಿವಂತಂಗನೆಯ ಮೈಗಂಧವ ಬಯಸಿಬಳಲದೆ ವರದ ಶ್ರೀಕೃಷ್ಣನಂಘ್ರಿಯೊಳಿಪ್ಪತುಳಸಿಯನಾಘ್ರಾಣಿಸು ಕಂಡ್ಯಮನವೆ 5
--------------
ವ್ಯಾಸರಾಯರು
ಛೀ ನಿನ್ನ ಮೋರೆ ಮೇಲೆ - ಠೊಣ್ಯಛೀ ನಿನ್ನ ಮೋರೆ ಮೇಲೆ ಪ ನಿತ್ಯ ಪರಿ ಆಯುಷ್ಯವ ವ್ಯರ್ಥ ಕಳೆಯುತಿದ್ದೆ ಠೊಣ್ಯ 1 ಕಂಡ ಕಂಡಲ್ಲಿಗೆ ಪೋಗಿ ಧನಂಗಳ ಕೊಂಡು ಬರುತ್ತಲಿದ್ದೆಹೆಂಡಿರು ಮಕ್ಕಳು ಹಿತದವರೆಂದು ಕೊಂಡಾಡುತಲಿದ್ದೆಖೋಡಿ ಮಾತುಗಳನು ಹೇಳಿ ಮಂದಿಯ ಕುಂಡೆ ಚಿವುಟುತಿದ್ದೆಭಂಡ ಬಾಳು ಇದು ರಂಡೆ ಗಂಡ ಕಂಡ್ಯ ಯಮನ ಬಾಧೆ ಠೊಣ್ಯ2 ಮಾನವ ಜನ್ಮಕೆ ಬಂದು ಪುಣ್ಯ ಮತ್ತೇನೂ ಮಾಡದೆ ಹೋದೆದಾನವಾಂತ ಸತ್ಪಾತ್ರರಿಗೆ ನೀ ದೀನತ್ವವ ಪಡೆದೆಜ್ಞಾನಶೂನ್ಯ ಮದವೇರಿದ ಸೊಕ್ಕಿದ ಕೋಣಕೆ ಹುಟ್ಟಿದ್ದೆದೀನರಕ್ಷಕಾದಿಕೇಶವ ವಿಠಲಂಗೆ ನೀನತಿ ದೂರಾದೆ ಠೊಣ್ಯ 3
--------------
ಕನಕದಾಸ
ಛೀ ಯಾತರ ಜನ್ಮಾ | ನಾಯಿಗಿಂದತ್ತಾಧಮ ಪ ಛೀ ಯಾತರ ಜನ್ಮಾ ನಾಯಿ ಹಿಂದತ್ತಾಧಮ ಬಾಯಿ ಬಡಕನಾಗಿ ಮಯ್ಯ ಮರೆವರೇ ನಿಮ್ಮಾ ಅ.ಪ ಸಾಧುರಾನುಸರಿಸಿ | ಬೋಧನಾಮೃತ ಸೇವಿಸಿ | ಹಾದಿವಿಡಿದು ಗತಿ ಸಾಧಿಸಿ | ಘಾಸಿ 1 ಬುದ್ಧಿ ತನಗ ಇಲ್ಲಾ | ತಿದ್ದಿದರ ಕೇಳಲಿಲ್ಲಾ | ಇದ್ದೆರಡಾದಿನದೊಳು | ಸದ್ಯ ಸೌಖ್ಯ ಕಳೆದೆಲ್ಲಾ | 2 ಕಲ್ಲು ಕಟೆಯ ಬಹುದು | ಬಿಲ್ಲು ಮಣಿಸಬಹುದು | ನಿಲ್ಲದೇ ವನಕಿ ತುಂಡಾ | ಸಲ್ಲದಂತೆ ನೀನಾಗುದು 3 ಮರಹುಟ್ಟಿ ಮರ ಬಿದ್ದಾ | ತೆರನಾದೋ ಅಪ್ರಬುದ್ಧಾ | ತಿರುಗಿ ನೋಡಿನ್ನಾರೆ | ಚ್ಚರಿತು ನೀ ಮದದಿಂದ 4 ಗುರು ಮಹೀಪತಿಜನಾ ಧರಿಸಿರೋ ಸದ್ವಚನಾ ಸರಿಕರ ಕಂಡು ಹ್ಯಾವಾ ವರಿಸದೆ ಇಹುದೇನಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಛೀ ಯಾತರ ಬುದ್ಧಿ | ಸೊಕ್ಕಿನ ಮಾತಿಲಿ ಬಲು ನÉೂಂದಿ ಪ ಗುರುಹಿರಯರ ಅನುಸರಿಸದೇ | ಹರಿಚರಣವ ಕೊಂಡಾಡದೇ | ಬರಡಾ ನಾಲಿಗೆ ಮಾಡಿದಿ ಬರಿದೇ 1 ವಳ್ಹವ ಹೊಲ್ಲವರಿಯದೇ | ಯಳ್ಳಿನಿತು ನೀ ವಿಚಾರಿಸದೇ | ನಿಲ್ಲದೇ ಮಾಡುವಿ ಬಗಳುವದೇ 2 ಕೆಂಡವ ಕಂಡು ನೆರೆ | ಮಂಡಿಯಾ ತುರಿಸುವರೆ | ತುಂಡತನ ಗುಣ ಬಿಡು ಇನ್ನಾರೆ 3 ಪೊಡವಿ ದೇವತೆಯ ಕೋಣಾ | ಯಡಬಲ ನೋಡದಿರಲೇನು | ಕಡೆಯಲಿ ಕೆಡುವರು ಒಂದಿನಾ 4 ಮಹಿಪತಿಸುತ ಪ್ರಭು ದಾಸರ ಕೈ | ಅಹುದೆನಿಸಿಕೊಂಬುದೆ ಸ್ವರ್ಗಯ್ಯ | ವಿಹಿತಲ್ಲೆಂಬುದೇ ನರ್ಕದಾಶ್ರಯಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಛೀ ಹಳಿ ಥೂ ಖೋಡಿ ಪಾಪಿ ಮನವೆ, ನಿನ್ನ ಪ ಕುಹಕ ಬುದ್ಧಿಗಳೆಲ್ಲ ಬಿಡು ಕಂಡ್ಯ ಮನವೆಅ.ಪ ಬಣ್ಣದ ಬೀಸಣೆಗ್ಯಂತೆ ಹೆಣ್ಣು ತಿರುಗೋದ ಕಂಡು ಕಣ್ಣು ಸನ್ನೆಯಮಾಡಿ ಕೈ ಹೊನ್ನು ತೋರಿ ತಣ್ಣೀರು ಹೊಯಿದ ಹೊಸ ಸುಣ್ಣದಂತೆ ಕುದಿದು ನಿನ್ನ ಕಣ್ಣಿಗೆ ಮಣ್ಣು ಚೆಲ್ಲಿಕೊಂಬರೆ ಮನವೆ 1 ನೆರೆಹೊರೆ ಮನೆಗಳಲಿ ಪ್ರಸ್ಥವನ್ನು ಮಾಡಿದರೆ ಕರೆಯದೆಲೆ ಮೊದಲ್ಹೋಗಿ ಹಾಳು ಹರಟೆ ಬಡಿಗಂಟು ಸುದ್ದಿ ನೂರಾರು ಹೇಳಿ ಅವರ ಹಿರಿಯ ಮಗನಂತೆ ಉದರವ ಪೊರೆವೆ ಮನವೆ 2 ಉತ್ತಮಾನ್ನವ ನೀಡೆ ಮುಸುರೆ ಬಯಸುವಂತೆ ಚಿತ್ತದೊಲ್ಲಭನ ಸಂಗಡದಿ ನಲಿದು ಮತ್ತೆ ಉಪರತಿಗೆ ಪರಪುರುಷನ ಬಯಸುವ ತೊತ್ತು ಬುದ್ಧಿಯನೆಲ್ಲ ಬಿಡು ಕಂಡ್ಯ ಮನವೆ 3 ಪಗಡೆ ಚದುರಂಗ ಕವಡೆಯನಾಡÀ ಕರೆದರೆ ನಿಗುರುವುವು ಕರ್ಣಗಳು ಮೊಚ್ಚೆಯಂತೆ ಜಗದೀಶನ ದಿನದಿ ಜಾಗರಕೆ ಕರೆದರೆ ಮುಗಿಲ್ಹರಿದು ಬಿದ್ದಂತೆ ಧರೆಗಿಳಿವೆ ಮನವೆ 4 ವಾಸುದೇವನ ಪೂಜೆಯೊಮ್ಮೆ ಮಾಡೆಂದರೆ ಬೇಸತ್ತು ತಲೆಯ ಚಿಟ್ಟಿಕ್ಕಿ ಕುಳಿತೆ ಆ ಸಮಯದೊಳಗೊಬ್ಬ ಕಾಸು ಕೊಟ್ಟೇನೆನಲು ದಾಸಿ ಮಗನಂತೆ ಬೆನ್ನಟ್ಟಿ ಪೋದೆ ಮನವೆ 5 ಕುಳ್ಳಿರುವ ಸ್ಥಳವೆಷ್ಟು ಕೂಳು ತಿಂಬುವುದೆಷ್ಟು ಉಳ್ಳನಕ ಕೀರ್ತಿಯಪಕೀರ್ತಿಯೆಷ್ಟು ಗುಳ್ಳೆಯಂದದ ದೇಹನೆಚ್ಚಿ ನೀ ಕೆಡಬೇಡ ಉಳ್ಳಿಪÀರೆ ಸುಲಿದರೆ ಹುರುಳಿಲ್ಲ ಮನವೆ 6 ಬಿಂದು ಮಾತ್ರವೊ ಸುಖವು ದು:ಖ ಪರ್ವತದಷ್ಟು ಸಂದೇಹವಿಲ್ಲವಿದು ಶಾಸ್ತ್ರಸಿದ್ಧ ಎಂದೆಂದು ಸಿರಿಯರಸ ವಿಜಯವಿಠ್ಠಲನಂಘ್ರಿ ಕುಂದದೆ ಹೃದಯದೊಳು ನೆನೆಕಂಡ್ಯ ಮನವೆ 7
--------------
ವಿಜಯದಾಸ
ಜÉೂೀಜೋ ಜೋಜೋ ಜೋ ಮುಖ್ಯಪ್ರಾಣ ಜÉೂೀಜೋ [ಮಲೆವರ] ಗಂಟಲಗಾಣ ಪ. ಜÉೂೀಜೋ ರಾಕ್ಷಸಶಿಕ್ಷ ಕಲ್ಯಾಣ ಜÉೂೀಜೋ ಸಕಲವಿದ್ಯಾ ಪ್ರವೀಣ ಅ.ಪ. ಆ ಜಗದಲಿ ನೀ ಬಾಲಬ್ರಹ್ಮಚಾರಿ ಸೋಜಿಗದಲಿ ಕಪಿ ರಾಜ್ಯವನಾಳಿ ತೇಜಮುತ್ತಿನ ಕವಚಕುಂಡಲಧಾರಿ ಪೂಜಿಪರ ಪಾಲಿಪೆ ಸುಜನರುಪಕಾರಿ 1 ಭೂಮಿ ಭಾರವನಿಳಿಸಿದ ಭೀಮ ಕಾಮಿ ಕೀಚಕನ ಕುಟ್ಟಿ ರಣಧಾಮ ಭಾಮಿನಿ ದ್ರೌಪದಿ ಕಷ್ಟ ನಿರ್ಧೂಮ ಕಾಮಿತಾರ್ಥವನೀವÀ ಕಲ್ಪತರು ಭೀಮ 2 ಸೌಂದರ್ಯರೂಪದ ಶ್ರೀಮದಾನಂದ ತಂದೆ ಹಯವದನನ ಮೋಹದ ಕಂದ ಬಂದು ಉಡುಪಿಯಲಿ ನೆಲೆಯಾಗಿ ನಿಂದ ವಂದಿಸುವೆ ನಿದ್ರ್ರೆಗೈ ಹರಿಧ್ಯಾನದಿಂದ 3
--------------
ವಾದಿರಾಜ
ಜಗಕೆ ಶಾಂತಿಯನೀವ ಜಗನ್ನಾಥನೇ | ನಿನ್ನ ಬಗೆಯರಿತ ಸುಜನರಿಗೆ ಕ್ಲೇಶವಿನ್ನುಂಟೇ ಪ. ನಾನಾ ಇಂದ್ರಿಯಗಳಿಗೆÀ ನೀನೇ ಪ್ರೇರಕನಾಗಿ ನಾನಾ ವಿಧ ಸುಖದುಃಖ ತಗಲಿಸುತ ಮನಕೇ ಜ್ಞಾನವಂತರ ಹೃದಯ ವಾಸನಾಗಿರುತಿರ್ದು ಮಾನಿತರ ಬಳಲಿಸುವ ಕಾರಣವದೇನೈ 1 ಭೂಸುರÀರ ಮನಕ್ಲೇಶ ನಾಶಗೈಸುತ ಸತತ ಪೋಷಿಸೆಲೊ ಸ್ವಾಮಿ ಸಂತೋಷವಿತ್ತು ನಾಶರಹಿತನೆ ಭಕ್ತರಾಶೆ ಪೂರೈಪ ಗುಣ ರಾಶಿ ನಿನ್ಹೊರತಿಲ್ಲ ಅಬುಜಜಾಂಡದೊಳೂ2 ಮನಕೆ ಶಾಂತಿಯ ನೀಡೋ ಮಾಧವನೆ ಮಮತೆಯಲಿ ಮನದ ಅಭಿಮಾನಿಗಂತರ್ಯಾಮಿ ಸ್ವಾಮಿ ಚಿನುಮಯನೆ ಗೋಪಾಲಕೃಷ್ಣವಿಠ್ಠಲ ಪ್ರೇಮಿ ಘನ ಗುರುಗಳಂತರ್ಯಾಮಿಯೆ ಮಧ್ವನಾಥಾ3
--------------
ಅಂಬಾಬಾಯಿ
ಜಗಜಗಿಸುವ ಈ ಸೊಗಸಿನ ಪೀಠಕೆ ನಗುನಗುತ ಬಾರೊ ದೇವ ಪ ಗಗನರಾಯನಿಗೆ ಮಗಳೆಂದೆನಿಸಿದ ಜಗಕೆ ಜನನಿ ಕೈಮುಗಿದು ಪ್ರಾರ್ಥಿಸುವಳು ಅ.ಪ ಅಂಗನೆಯರು ಶ್ರವಣಂಗಳ ತುಂಬುವ ಸಂಗೀತದ ಸಾರಂಗಳರ್ಪಿಸುವರೊ 1 ನಾದಸ್ವರದ ಸೊಗಸಾದ ಧ್ವನಿಗಳಲಿ ನಾದ ಬ್ರಹ್ಮನು ತಾ ಕಾದು ನೋಡುತಲಿಹ 2 ಪರಿಮಳ ಪುಷ್ಪದ ಸುರಿಮಳೆ ನೋಟವು ಸ್ಮರಣೆಗೆ ತರುವುದು ಸಿರಿಯ ವಿವಾಹವ 3 ಭೂಸುರರೆಲ್ಲರು ಆಶೀರ್ವಚನವ ಶ್ರೀಶ ನಿನ್ನಯ ಸಂತೋಷಕೆ ನುಡಿವರು 4 ಸುಖ ಸಂತೋಷವು ಮುಖ ಮುಖದಲಿಹುದು ತವ ಸುಖಾಗಮನದಿಂ ಲಕುಮೀ ಪ್ರಸನ್ನನೇ 5
--------------
ವಿದ್ಯಾಪ್ರಸನ್ನತೀರ್ಥರು
ಜಗಜೀವನಾ ಪ ಶಾಮಸುಂದರ ಮುನಿಜನ ಮಾನಸ ಪಂಕಜ ಲೋಚನಾ ದಾಮೋದರ ಗೋಪೀಜನ ಮೋಹನಾ ಅಹಿಲ್ಯಾ ಶಾಪ ವಿಮೋಚನಾ 1 ಮಾಧವ ಹರಿ ಶ್ರೀ ವತ್ಸಾಂಕ ಜನಾರ್ಧನಾ ಯಶೋದಾ ನಂದನ ಯದುಕುಲ ಮಂಡಲಾ ಕಂಸ ಚಾಣೂರ ಮರ್ದನಾ2 ಸರಸಿಜ ಭವಭೆವ ಸುರಪತಿ ಪೂಜಿತ ಗುರುವರ ಮಹಿಪತಿ ನಂದನ ಸಾರಥಿ ಭವ ಭಂಜನಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಜಗತ್ಪಾಲಾ ಸದ್ಗುಣಶೀಲಾ ರಮಾಲೋಲಾ ಪ ನಿತ್ಯ ವಿಮಲಾ ಬಹುಗುಣ ಶೀಲಾ ಪಾಹಿ ಕೃಪಾಲಾ1 ನಿತ್ಯಾನಂದಾ ದೇವಕಿಕಂದಾ ಕಂಸನ ಕೊಂದಾ ಬಾಲ ಗೋವಿಂದ ನೀ ದಯದಿಂದಾ ಪಾಹಿ ಮುಕುಂದಾ 2 ಅಮರಾಧೀಶಾ ಅಸುರನಾಶಾ ಪರಮ ಪ್ರಕಾಶಾ ಗೋಕುಲವಾಸಾ ಭಕ್ತಪೋಷಾ ಶ್ರೀಹನುಮೇಶವಿಠಲ 3
--------------
ಹನುಮೇಶವಿಠಲ
ಜಗತ್ಸಾರ ವಿಠಲ | ನೀನಿವಳ ಸಲಹೊ ಪ ಬಗೆಬಗೆಯಲಿಂ ನಿನ್ನ | ದಾಸ್ಯಕಾಂಕ್ಷಿಪಳಅ.ಪ. ಭಯದೋರಿ ಸ್ವಪ್ನದಲಿ | ಜಯದೇವಿಸುತ ಪ್ರಾಣದಯೆ ಪಡೆಯಲನುವಾಗ್ಯೆ | ಭಯವನು ತೋರ್ದೇಹಯಮೊಗನೆ ನಿನ್ನಂಥ | ದಯೆ ಪೂರ್ಣರಿನ್ನುಂಟೆನಯವಿನಯ ದಿಂದಿರ್ಪ | ಕನ್ಯೆಯನು ಸಲಹೊ 1 ವ್ಯಾಜ ಕರುಣೇಗೋಜು ಸಂಸøತಿಯಳಿಯೆ | ಬಾಜಿಸುತ ಮನದಲ್ಲಿನೈಜರೂಪವ ತೋರೊ | ಹೇ ಜನಾರ್ದನನೇ 2 ನೂಕಿ ಸಂತಾಪಗಳ | ಲೌಕಿಕ ಸುಭೋಗ ವೈದೀಕ ವೆನಿಸೋ ಹೇ ಕೃ | ಪಾಕರನೇ ದೇವಾಜೋಕೆಯಿಂದಿವಳ ನೀ ಸಾಕಬೇಕೆಂದೆಂಬವಾಕು ಮನ್ನಿಸಿ ಕಾಯೊ | ಶ್ರೀ ಕರಾರ್ಚಿತನೇ 3 ನೀಚೋಚ್ಚ ತರತಮದ | ಸೂಕ್ಷ್ಮ ಸುಜ್ಞಾನಗಳವಾಚಿಸಿವಳಲಿ ನಿಂತು | ಕೀಚಕಾಂತಕನುತಪ್ರಾಚೀನ ಕರ್ಮಗಳ | ಮೋಚಕನು ನೀ ಸವ್ಯಸಾಚಿ ಸಖನೇ ಇವಳ | ಪೇಕ್ಷೆಗಳ ನೀಯೋ 4 ದೇವವರ ಭವ್ಯಾತ್ಮ | ಪಾವನವು ತವ ಸ್ಮøತಿಯನೀ ವೊಲಿದು ಸರ್ವತ್ರ | ಸರ್ವ ಕಾಲದಲೀಈ ವುದನೆ ಬಿನ್ನವಿಪೆ | ಬಾವಜ್ಞ ಸಲಿಸುವುದುಕಾವ ಕರುಣಾಳು ಗುರು | ಗೋವಿಂದ ವಿಠಲಾ5
--------------
ಗುರುಗೋವಿಂದವಿಠಲರು
ಜಗದ ಜೀವರನುದರದಲಿಟ್ಟು ಕರುಣಾಮೃತದಿ | ಬಗೆಬಗೆಲಿ ಸಲಹುಲೇಹ ತಾಯಿ ನೀನೇ | ಮಗುಳೆ ಮೂಲ ಪ್ರಕೃತಿಯಲಿ ಬೀಜವಿಟ್ಟು ಮೂ | ಜಗವ ಪುಟ್ಟಸುತಿಹ ತಂದೆ ನೀನೇ | ಮಿಗಿಲಾಗಿ ಬಂದ ದುರಿತಂಗಳ ನಿವಾರಿಸುವ | ಭಾಗವತರಿಗೆ ಅನಿಮಿತ್ತ ಬಂಧು ನೀನೇ 1 ಸುಗಮದಧಿ ದೈವತಾ ರೂಪದಲ್ಲಿ ಕರಣೇಂದ್ರಿ- ನಿಗಮಾಗ ಮಗಳಿಂದ ಸ್ತುತಿಸುತ ಸುಜ್ಞಾನ | ದುಗಮದಿರುವ ಗುರುರೂಪ ನೀನೇ | ಭಕುತಿಯಲಿ ವಿಧಿಮರುತ ಶಿವಗರುಡ ಫಣಿಪೇಂದ್ರಾ | ದಿಗಳು ಪೂಜಿಪ ಕುಲದೈವ ನೀನೇ 2 ಹಲವು ಜನುಮದಿ ಸಂಗಡಿಗನಾಗಿ ಸಮತೆಯಲಿ | ಸಲಿಸಿ ಬಯಕೆಯ ಕಾವ ಗೆಳೆಯ ನೀನೇ | ಒಲಿದನ್ನ ವಸ್ತ್ರ ಸಂಪದ ಸಕಲವರ ಪುಣ್ಯ | ಫಲದಂತೆ ನೀಡುತಿಹ ಸ್ವಾಮಿನೀನೇ | ಜಲಜಾಕ್ಷ ಅದುಕಾರಣ ಎನಗೆ ಸಕಲವು ನೀನೇ | ಸಲಹು ಭಕುತಿಯನಿತ್ತು ಗುರು ಮಹಿಪತಿ ಪ್ರಭು3
--------------
ಕಾಖಂಡಕಿ ಶ್ರೀ ಕೃಷ್ಣದಾಸರು