ಒಟ್ಟು 409 ಕಡೆಗಳಲ್ಲಿ , 67 ದಾಸರು , 367 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀಕಾಂತ ನಿನ್ನ ನಂಬಿದೆ ನಾಕೇಶವಂದ್ಯ ಪ ಹರಣ ಅ.ಪ. ಪಂಕ್ತಿಸ್ಯಂದನ ಚಿತ್ತ ಪಂಕೇರುಹಾರ್ಕರೂಪ ಹರಣ ನಾಕೇಶವಂದ್ಯ 1 ಸೀತಾ ಹೃದಯಪ್ರಿಯ ವಾತತನಯ ಸೇವ್ಯ ನಾಕೇಶ ವಂದ್ಯ 2 ಅಂಗಜಪಿತ ಹರೇ ಭಂಜನ ನಾಕೇಶವಂದ್ಯ 3 ಕೋದಂಡ ಖಂಡಿತಾರೇ ಭೇದ ವಿವರ್ಜಿತ ನಾಕೇಶ ವಂದ್ಯ 4 ಧೇನುನಗರಪತಿಯೆ ನಾಕೇಶವಂದ್ಯ 5
--------------
ಬೇಟೆರಾಯ ದೀಕ್ಷಿತರು
ಶ್ರೀಗದಾಧರ ಪಾಹಿಮಾಂ ಹರೆ ಭೋಗಿಶಯನ ಶೌರೇ ಪ ಯಾಗ ಯೋಗ ಗಮ್ಯ ನೃಹರೆ ತ್ಯಾಗಶೀಲ ಭೋ ಮುರಾರೆ ಅ.ಪ ಮೃತಮಾನವ ಸುಗತಿ ದಾತಾ ಪತಿತಾನತ ದಿವ್ಯ ನೀತ ಹರಣ ಖ್ಯಾತಾ ತಾಪ ಸನ್ನುತ ಚರಿತಾ 1 ಶೃತಿ ಪುರಾಣ ಭರಿತ ವಿದಿತ ರಥಾಂಗ ಮಣಿರಂಜಿತ ವಿನುತ ನಮಿತ ಖ್ಯಾತಮಾಂಗಿರಿ ವರೂಥ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಶ್ರೀಧವ ಮಾಮವ ಪ್ರಣತ ಜಾನರ್ತಿ ಹರಭೋ ಭೂಧರಜಾವರನುತಪದ ಪ ಸಾದರದಲಿ ನಿನ್ನಾ ಪಾದವ ಭಜಿಸುವೆ ನಾ ಮೋದವ ಕೊಡು ಕರುಣಾಂಬೋಧಿಯೆ ಮಧು ಮಥನಾ ಸದಾಮಲಾಚರಿತನೆ ಒದಗಿಸುತವ ಪದದಲಿ ಮನ 1 ನತಜನ ಕೃತ ಕರುಣಾ ಶ್ರೀತಜನರಘಹರಣ ಶೃತಿಗಣನುತ ಶರಣಾಗತ ಜನವತ್ಸಲನ ನತಿಸುವೆ ಸತತದಿ ರತಿಪತಿ ಪಿತಕರ ಪಿಡಿವದು 2 ಧರಿ ಸುರ ಜನ ಪ್ರಿಯಾ ಕರುಣದಿ ಭವಮಾಯಾ ಪರಿಹರಿಸೆಲೊ ಜೀಯಾ ವರಕಾರ್ಪರ ನಿಲಯಾ ನರಹರಿ ವಿಠಲನೆ ವರಪಿಪ್ಪಲತರು ಸಂಸ್ಥಿತ 3
--------------
ಕಾರ್ಪರ ನರಹರಿದಾಸರು
ಶ್ರೀನಿವಾಸ ಮುನಿಮಾನಸ ಹಂಸ ಮಹಾನು ಭಾವ ದೇವ ಪ ಖಗ ವಾಸುದೇವ ಅ.ಪ. ಸೃಷಿಕರ್ತ ಸಂತುಷ್ಟಹೃದಯ ಪರಮೇಷ್ಠಿಜನ್ಮಮಾಲಾ ಅಷ್ಟಭೂತಿದರಕಷ್ಟಹರಣ ವಿಬುಧೇಷ್ಟ ದಿವ್ಯಲೀಲಾ 1 ದೇವ ದೇವ ಭೂದೇವ ವಂದ್ಯ ವಸುದೇವ ಜಲಧಿಸೋಮ ವೈರಿ ಜನಿತ ಕಾಮ 2 ರಾಮ ರಾಮ ಕರುಣ ಮಹೋದಧೆ ಶ್ರೀ ಮನೋಭಿರಾಮ ಧಾಮ ಪುಣ್ಯತಮನಾಮ ಪೂರ್ಣಕಾಮ 3 ಕಿಂಕರ ಜನಗತ ಸಂಕಟಹರ ಧೃತ ಶಂಖಚಕ್ರ ಪದ್ಮ ಪಂಕಜಲೋಚನ ಪಂಕವಿಮೋಚನ ಪಂಕಜಹಿತ ಸದ್ಮಾ 4 ದಿವ್ಯರೂಪಸುರಸೇವ್ಯ ಚರಣ ಮುನಿ ಭಾವ್ಯಮಾನಚರಿತ ಅವ್ಯಯಾತ್ಮಬಹು ಭವ್ಯ ಸುಗುಣ ಮಾಂಡವ್ಯ ಪುಣ್ಯಭರಿತ 5 ಪಾಹಿಮಾಮನಘದೇಹಿ ಭಕ್ತಿಮಪಿಮೇ ಹಿತೋಸಿ ನಿತ್ಯಂ ಕಾಹಿಮೇಗತಿರ್ಮಾಹಿಸತ್ಯ ತಾಂಬ್ರೂಹಿ ದೇವ ಸತ್ಯಂ6 ಭವ ತರಣಿ ಧಿಷಣಯಾಹಂ ಕರುಣಯಾವ ಶ್ರೀ ವರದ ವಿಠಲ ಸುಖಕರಣ ವಿಗತಮೋಹಂ7
--------------
ಸರಗೂರು ವೆಂಕಟವರದಾರ್ಯರು
ಶ್ರೀನಿವಾಸ ಮುನಿಮಾನಸಹಂಸ ಮಹಾನುಭಾವ ದೇವ ಪ ವಾಸುದೇವ ಅ.ಪ ಪರಮೇಷ್ಠಿ ಜನ್ಮಮಾಲಾ ಅಷ್ಟಭೂತಿವರ ಕಷ್ಟಹರಣ ವಿಬುಧೇಷ್ಟ ದಿವ್ಯಲೀಲಾ1 ದೇವದೇವ ಭೂದೇವ ವಂದ್ಯ ವಸುದೇವ ಜಲಧಿಸೋಮ ದೇವವೈರಿವನದಾವ ಸುಂದರೀ ಭಾವಜನಿತ ಕಾಮ2 ರಾಮರಾಮ ಕರುಣಾಮಹೋದಧೆ ಶ್ರೀ ಮನೋಭಿರಾಮ ರಾಮಣೀಯ ಸುಗುಣಧಾಮ ಪುಣ್ಯತಮನಾಮ ಪೂರ್ಣಕಾಮ3 ಕಿಂಕರಜನಗತ ಸಂಕಟಹರ ಧೃತ ಶಂಖಚಕ್ರಪದ್ಮ ಪಂಕಜಲೋಚನ ಪಂಕವಿಮೋಚನ ಪಂಕಜಹಿತ ಸದ್ಮಾ 4 ದಿವ್ಯ ರೂಪಸುರಸೇವ್ಯ ಚರಣಮುನಿಭಾವ್ಯಮಾನಚರಿತ ಅವ್ಯಯಾತ್ಮ ಬಹುಭವ್ಯಸುಗುಣಮಾಂಡವ್ಯಪುಣ್ಯಭರಿತ 5 ಪಾಹಿಮಾಮನಘದೇಹಿ ಭಕ್ತಿಮಪಿ ಮೇ ಹಿತೋಸಿ ನಿತ್ಯಂ ಕಾಹಿಮೇಗತಿರ್ಮೋಹಿತಸ್ಯತಾಂಬ್ರೂಹಿ ದೇವ ಸತ್ಯಂ 6 ಚರಣಯುಗಳಮಿಹ ಚರಣಮೇಹಿ ಭವತರಣಿದಿಷಣಯಾಹಂ ಕರುಣಯಾವ ಶ್ರೀವರದವಿಠಲ ಸುಖಕರಣ ವಿಗತಮೋಹಂ7
--------------
ವೆಂಕಟವರದಾರ್ಯರು
ಶ್ರೀನಿವಾಸ ಸಲಹೋ ನಮ್ಮ ಶ್ರೀನಿಧಾನ ಚರಣನೆ ಪ ಧ್ಯಾನ ನಿರತ ಮೌನಿ ಜನರ ಮಾನಸಾಬ್ಜಹಂಸನೆ ಅ.ಪ ನಕ್ರಮುಖದಿ ಸಿಕ್ಕಿದಿಭನನಕ್ಕಿರಿಂದ ಪೊರೆದನೆ ಚಕ್ರಧರ ತ್ರಿವಿಕ್ರಮಾದಿ ಚಕ್ರಭೋಗಿ ಶಯನನೆ 1 ಬಿಟ್ಟು ನಿನ್ನ ಭ್ರಷ್ಟನಾಗಿ ಕೆಟ್ಟ ಜನ್ಮ ಜನ್ಮದೆ ಹುಟ್ಟಿ ಹುಟ್ಟಿ ಕಷ್ಟಪಟ್ಟಿ ಕೃಷ್ಣ ನಿನ್ನ ನಂಬಿದೆ 2 ಶರಣಜನರ ಪೊರೆವನೆಂಬ ಬಿರುದು ಧರಿಪನಲ್ಲೆಲಾ ಹರಿಣ ಹರಣಧರದೊಳಿರುವ ಕರುಣಿ ವರದ ವಿಠಲ 3
--------------
ವೆಂಕಟವರದಾರ್ಯರು
ಶ್ರೀಮಹಾಲಕ್ಷಮಿತಾಯೇ | ಶ್ರೀ ಮಹಾಮಾಯೆ | ಹೇಮಾಯಾ ಕರುಣಾಬ್ದಿಯೇ | ಕಾಮಿತ ಫಲನೀಯೇ | ಸಾಮಜಗಮನಿಯೇ | ಹೇಮಾಯಾ ಕೋಟಿ ಸಮಕಾಯೇ | ಶುಭಚರಿಯ | ಬಹುಪರಿಯೇ | ಹರಿಪ್ರೀಯೇ | ಅರಿಯೇ ಪ ಶರಧಿಸುತವನೇ | ಸರಸಿಜಸದನೆ | ಸುರಚಿರದವರಾನೆ | ಕರಿಸರ್ಪವೇಣೆ | ದುರಿತಾದೌಘಪಹರಣೆ | ಕರುಣದಾಗಾರೆ ಶರಣೆ | ನೆರೆನಿನ್ನನಂಬಿದೆನೆ ಮಾತೆ | ಅದ್ಭುತೆ | ರವಿನಮಿತೆ | ಪ್ರಖ್ಯಾತೆ | ದಾತೆ 1 ಹೊಳೆವ ಸೌಂದರ್ಯ ಸಲಹೆ | ಸಲೆಕುಲದೈವೆ | ಸುಜನ ಸೇವೆ | ಮಲಿನರ ಭಾವೆ | ಹಲವು ಮಾತೇನು ಫಲವೇ | ಬಲುನಾಹಂಬಲಿಸುವೆ | ಒಲಿದು ಕರುಣಿಸು ಭಾಗ್ಯವಂತೆ | ಗುಣವಂತೆ | ಬಹುಶಾಂತೆ | ದಯವಂತೆ ಕಾಂತೆ 2 ಕರವೀರ ಪುರಧೀಶೆ | ಶರಣರುಲ್ಹಾಸೆ | ಸುರಮುನಿಜನತೋಷೆ | ಶಿರಸ್ವಪ್ರಕಾಶೆ | ಪರತರ ಸುವಿಲಾಸೆ | ಗುರುಕೃಷ್ಣಸುತನೀಶೆ | ವರಕೊಲ್ಹಾಸುರನ ವಿನಾಸ | ಜಗದೀಶೆ | ಮೃದುಭಾಷೆ | ಅವಿನಾಶೆ | ಈಶೆ 3 ಅಂಕಿತ-ಗುರುಕೃಷ್ಣಸುತ
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶ್ರೀಮುರಳೀಧರ ಕೃಪಾಕರ ಜೀಮೂತನೀಲಾಂಗ ಶೃಂಗಾರ ಪ ಸಾಮಜಭಯಪರಿಹಾರ ಕಾಮಿತ ಫಲದಾತಾರ ಸಾಮದಾನಾದಿ ಚತುರ ಪರಾತ್ಪರಾ ಶುಭಂಕರಾ ಅ.ಪ ಶಾಂತಿ ಸುಗುಣ ಪೂರಣ ಭವತರಣ ಆಂತರ್ಯ ಸಂಚಾರಣ ಭಯಹರಣ ಪೂತನೀ ಪ್ರಾಣಹರಣ ಪಾಂಡುಪುತ್ರಸಮೀಕ್ಷಣ ನೀತಿ ನಿಯಮ ಸಂತ್ರಾಣ ಮಾಂಗಿರೀಶ ಚರಣ ವಿಹರಣ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಶ್ರೀರಂಗನಾಥನ ಸೇವೆಯ ಮಾಡಿರೈ ಸದಾ ಪ ಅಡಿಗಳ ಭಜಿಪರ ಎಡರು ಕಳೆವುದಕೆ ವಡವಾಟಲಿ ತಾ ಬಿಡದೆ ನೆಲೆಸಿಹನ 1 ಶರಣುಪೊಕ್ಕವರ | ಕರುಣದಿಂದ ಲಘು | ಹರಣಗೈವ ರಥ | ಚರಣಧಾರಿ ಪದ 2 ಕಷ್ಟ ಕಳೆದು ಸುಖ | ಕೊಟ್ಟು ಪೊರೆವ ಹರಿ 3 ಪ್ರಥಮಮಾಸದಲಿ | ಶಿತ ಸುಪಕ್ಷದಲಿ ತಿಥಿ ದಶಮಿಯಲಿ | ರಥವೇರಿ ಬರುವಹರಿ 4 ನೇಮದಿ ತನ್ನಯ | ನಾಮಧ್ಯಾನಿಪರ ಕಾಮಿತಗರೆಯುವ | ಶಾಮಸುಂದರ 5
--------------
ಶಾಮಸುಂದರ ವಿಠಲ
ಶ್ರೀರಾಮ ಮಂಗಳಂ ಘೋರಾಘಮರ್ದನ ಪ ಸ್ಮರ ಕೋಟಿ ಲಾವಣ್ಯ ವಾನರ ಪರಿ- ಪಾಲನ ಅಂಡಜ ವಾಹನ ಕುಂಡಲೀ ಶಯನ ರಿಪು ಮಂಡಲವಿ- ಖಂಡನ ಬ್ರಂಹ್ಮಾಂಡ ನಾಯಕ 1 ವೆಂಕಟ ರಮಣ ಸಂಕಟ ಹರಣ ಪಂಕಜ ನಯನ ಬಿರುದಾಂಕ ಹರಿ ಶಂಖಧರ ಕಿಂಕರ ಪ್ರಿಯ 2 ಗುರುರಾಮ ವಿಠಲ ಶುಭಚರಿತ 3
--------------
ಗುರುರಾಮವಿಠಲ
ಶ್ರೀರಾಮೇಶ ಪೊರೆವುದೆನ್ನ ನೀರವ ಮುನಿವಿನುತ ಚೆನ್ನ ಪ ಧ್ಯಾನ ಜಪತಪಗಳನರಿಯೆ ಹೀನ ಮನುಜ ನಾನು ಹರಿಯೆ ಧೀನಬಂಧುವಾದ ನಿನ್ನ ನಾನು ನೋಡೆ ತೋರೊ ಮುನ್ನ 1 ಸುಲಭನಾದ ನಿನ್ನ ಮರೆತು ಕಲಿಯ ದೋಷದೊಳಗೆ ಬೆರೆದೆ ಕಲುಷಹರಣ ಭಕ್ತಪ್ರಾಣ ನಿಲುಕಿಸೆನಗೆ ನಿನ್ನ ಚರಣ 2 ಜಾಜೀಶನೆ ನಿನ್ನಯಪದ ರಾಜೀವದ ದಾಸನೆನಿಸಿ ಪೂಜೆಮಾಡಿ ನಲಿಯುವಂತೆ ರಾಜಿಪ ಪದವೀಯೋ ಶಾಂತ 3
--------------
ಶಾಮಶರ್ಮರು
ಶ್ರೀವರ ಸುಖಕರ ಸುಂದರ ಶ್ಯಾಮ ಶಿವಸುತ ಶುಭನಾಮ ಮಂಗಳ ಗುಣಧಾಮ ಪ. ಪಾರಾವಾರತನಯಾರಾಮಾ ಮುರಮದಹರಣ ಸರೋಜಪತ್ರಾಯತೇಕ್ಷಣ ಮಂಗಳ ಗುಣಧಾಮ 1 [ಶ್ರೀಕರ] ಪರಂಧಾಮ ಮಂಗಳಗುಣಧಾಮ 2 ವಿಶ್ವಾಧೀಶ ಸುಗುಣಾವೇಶ ಭಾಸ್ಕರಕೋಟಿವಿಭಾಸ ಶೇಷಾದ್ರೀಶ ಶಶಿಸುಹಾಸ ಚಿದ್ವಿಲಾಸ ಮಂಗಳಗುಣಧಾಮ3
--------------
ನಂಜನಗೂಡು ತಿರುಮಲಾಂಬಾ
ಶ್ರೀವೆಂಕಟೇಶ ಪಾಹಿ ತಾವಕ ಭಕ್ತಿಂ ದೇಹಿ ಪ ವಾರಿಜನೇತ್ರಾ ವಾರಿದಗಾತ್ರಾ ನಾರದಸನ್ನುತಪಾತ್ರ ನರಮಿತ್ರ ಸುಚರಿತ್ರ 1 ಅಂಡಜಯಾನ ಕುಂಡಲಿಶಯನ ಖಂಡಪರಶು ಪರಿಪಾಲನ ಮುನಿಲಾಲನ ಸುರಖೇಲನ 2 ಪಂಕಜ ಚರಣ ಸಂಕಟಮೋಚನ ಕಾರಣ ಭವತಾರಣ ಗುಣಪೂರಣ 3 ದಶರಥಬಾಲಾ ದಶಮುಖಕಾಲ ದಶಶತಲೋಚನಪಾಲಾ ಭೂಪಾಲಾ ಸುರಮುನಿಲೋಲ4 ನವನೀತ ಚೋರ ಬೃಂದಾವನವಿಹಾರ ಬಹುದಾರಾ ಧುರಧೀರ 5 ಅಜನುತಪಾದ ಅಪಹೃತ ಖೇದ ಕಲುಷ ನಿರ್ಭೇದ ನುತವೇದ ಸುರಮೋದ 6 ವರವ್ಯಾಘ್ರಾಚಲ ವಿಹರಣ ಶೀಲ ವರದವಿಠಲ ಗೋಪಾಲ ಶ್ರೀಲೋಲ ಬಹುಲೀಲಾ 7
--------------
ವೆಂಕಟವರದಾರ್ಯರು
ಶ್ರೀಶ್ರೀನಿವಾಸ ಶ್ರೀಭೂವಿಲಾಸ ಶ್ರೀತಜನ ಪೋಷ ಪಾಹಿ ಸುವೇಷ ಪ ಪಚ್ಚಿನ್ಮನೋರಥ ನಿಶ್ಚಿತ ಪಾಹಿ 1 ರಂತ ವಿಕ್ರಮ ದನುಜಾಂತಕ ಪಾಹಿ2 ಮೋವೃಂದ ಪೋಷಿತ ಗೋಬೃಂದ 3 ಗೀಶಸನ್ನುತ ಕೋಶ ಮಾಂ ಪಾಹಿ 4 ಸುರವಾರ ಮಾಂಪಾಹಿ 5 ಮಂದರಧರ ಮುಚುಕುಂದ ವರದ ಆ ಸದನ ಗೋವಿಂದ ಮಾಂಪಾಹಿ 6 ಜಿಷ್ಣು ಸುರುಜಿಷ್ಣೋ ಮಾಂ ಪಾಹಿ 7 ವಿಧ ಬೇಧನ ನುತಬುಧಜನ ಪಾಹಿ 8 ಶಕ್ರಸಹಜ ತ್ರಿವಿಕ್ರಂ ಪಾಹಿ9 ಕಾವನ ಮುನಿಜನರ ಪ್ರೇಮ ಮಾಂಪಾಹಿ10 ಕೌಸ್ತುಭ ಕಂಧರ ಪಾಹಿ 11 ಯಾಕಾಶ ಗೋಚರಾಕೇಂದು ಪಾಹಿ 12 ಪದ್ಮಗೋಚರ ಪದಪದ್ಮಮಾಂಪಾಹಿ 13 ಕಾಮೋದಕ ಜಿತಕಾಮ ಮಾಂಪಾಹಿ 14 ಪೋಷ ಸಂತೋಷಿತ ಶೇಷಮಾಂ ಪಾಹಿ 15 ವಾಸುಕಿಶಯನ ವಿಕಾಶ ಕಮಲನಯ ನಾಸುರಮದನ ಶರಾಸನ ಪಾಹಿ 16 ದುಷ್ಟಮರ್ಧನ ಜಗದಿಷ್ಟುವರ್ಧನ ಸುರ ಕಷ್ಟ ಕೃಂತನ ಪರಿತುಷ್ಟ ಮಾಂ ಪಾಹಿ 17 ವರದವಿಠಲ ವ್ಯಾಘ್ರ ಧರಣೀಧರಾಗ್ರ ವಿ ಹರಣ ಸಕಲ ಗುಣಾಭರಣ ಮಾಂ ಪಾಹಿ 18
--------------
ವೆಂಕಟವರದಾರ್ಯರು
ಶ್ರೀಸತ್ಯವ್ರತರು ಶಿರಿ ಸತ್ಯವ್ರತಸುರ ತರುವೆ ನಿಮ್ಮಯಪಾದವರಶತ ಪತ್ರಕ್ಕೆಭಿನಮಿಪೇ ಪ ಪರಮ ದುರ್ಮತದ್ವಾಂತ ಭಾಸ್ಕರವರಸುಜ್ಞಾನಾಕಾಂಕ್ಷಿಯಾಗಿಹೆನಿರತ ಶ್ರೀ ಮದಾನಂದ ತೀರ್ಥರವರಸು ಭಾಷ್ಯಾಮೃತವ ನುಣಿಸೋ ಅ.ಪ. ಪೊಗಳಲೆನ್ನಳವೆ ನಿಮ್ಮಗಣಿತ ಮಹಿಮೆಯಜನದಿ ವಿಖ್ಯಾತರೆ ಗುರುವೇ |ಸುಗುಣಿತವ ಭಕ್ತರ್ಗೆ ಕಾಡುವವಿಗಡ ಅಪಸ್ಮಾರ ಕುಷ್ಠವುಮಿಗಿಲು ರೋಗಾದಿಗಳ ಕಳೆಯುತಬಗೆ ಬಗೆಂದಲಿ ಸ್ತುತ್ಯರಾಗಿಹ 1 ಸರಿತು ಪ್ರವಹದಿ ಎರಡೆರಡು ಸುತರ್ಗಳಹರಣ ಪೋಗಲು ಖೇದದೀ |ವರದ್ವಿಜನು ರಘುನಾಥಾಖ್ಯ ಭಕ್ತಿಲಿಶಿರಿಸತ್ಯವ್ರತರನು ಸೇವೆಗೈಯ್ಯುಲುಅರಿತು ಸಂತಾನಾಷ್ಟ ಕಂಗಳತ್ವರಿತ ಕರುಣಿಸಿ ಪೊರೆದಗುರುವರ2 ಶಿರಿಸತ್ಯ ಸಮಧರೀ ವೃಂದಾವನದ ಬಳಿಶಿರಿಮನ್ಯಾಯಾಸುಧೆ ಪಠಿಸೇ |ಗುರುವರರು ಸಂತುಷ್ಟ ಪಡುತಲಿಶಿರವತೂಗಲು ಅಂತರಂಗದಿವರಸುವೃಂದಾವನವು ತನ್ನಯಶಿರವ ತೂಗುತ ತೋರಿತಚ್ಛರಿ 3 ವಾದಿಭಹರ್ಯಕ್ಷ ಮೇಧಾವಿ ವಿಭುಧೇಡ್ಯಸುಧಾಪಿವೃತಿ ಕರ್ತಾರ |ಮೇಧಿನಿಯ ಸಂಚರಿಸಿದುರ್ವಾದಿಗಳ ಬಲು ಖಂಡಿಸುತಭೋಧಿಸುತ ತತ್ವಗಳ ಸುಜನಕೆಹಾದಿಮೋಕ್ಷಕೆ ತೋರ್ದ ಯತಿವರ 4 ವೇದವಿದ್ಯಾಖ್ಯ ಸತ್ಕರಜರೆಂದೆನಿಸುತ್ತಮೋದ ತೀರ್ಥರ ಸೇವೆಗೈದೂ |ಹಾದಿ ಚರಿಸುತ ಸಾಂಗ್ಲಿಕ್ಷೇತ್ರದಿಆದರದಿ ವೃಂದಾವನವ ಪೊಕ್ಕುನಾದಗುರು ಗೋವಿಂದ ವಿಠಲನಮೋದ ಧ್ಯಾನಾಸಕ್ತ ಗುರುವರ 5
--------------
ಗುರುಗೋವಿಂದವಿಠಲರು