ಒಟ್ಟು 572 ಕಡೆಗಳಲ್ಲಿ , 70 ದಾಸರು , 484 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಂದೇ ವಂದೇ ವಂದೇ ನಾರಾಯಣ ಗುರುದೇವಾ ವಂದೇ ವಂದೇ ವಂದೇ ಪರಿಪೂರ್ಣ ಬ್ರಹ್ಮರೂಪ ಪರಮಾತ್ಮ ಜ್ಞಾನದೀಪ ತಾಪ ಪರಿಹರಿಪ ಜ್ಞಾನಿ ಭೂಪ ಶಿರವಿಡುವೆ ಚರಣಯುಗದೀ ಗುರುದೇವ ಎನ್ನಮನದಿ ಪರತತ್ವ ತಿಳಿವ ತೆರದಿ ಕರುಣಿಪುದು ನೀನೇ ಮುದದಿ ಜಾಗರಣ ಕನಸು ನಿದ್ರಾ ಆಗುಗಳನರಿಯುತಿರ್ದಾ ಈ ಗತಿಗಳೆಲ್ಲ ಮೀರ್ದಾ ಆ ಘನವೆ ನಿರ್ವಿಕಲ್ಪ ಅದೇ ನೀನು ಎಂದು ಪೇಳ್ದೀ ಇದು ಎಲ್ಲ ಮಿಥ್ಯವೆಂದಿ ಇದೊ ಮರಣಭಯವ ಕಳೆದಿ ನಿಜಬೋಧವಚನ ಬಲದಿ ಮರೆದಿರ್ದ ತತ್ವವಿದನು ಪರತತ್ವ ಶೋಧಕರನು ಬೊಧಿಸುತ ನೀ ನಿಜವನು ತೋರಿಸುತ ಕಾಯುವವನು ವರಜ್ಞಾನ ಜಗದಲೆಲ್ಲಾ ಮರೆದಾಡಿ ತಮವನೆಲ್ಲಾ ಪರಿಹರಿಸಲೆಂದು ನೀನೇ ಗುರುಶಂಕರನಿಗೆ ಪೇಳ್ದೀ ವಂದೇ ಶಂಕರಾ ಗುರುದೇವಾ ವಂದೇ ಶಂಕರ ಗುರುದೇವಾ ಪಾವನಚರಣಾ ತೋರೈ ಕರುಣಾ ಜ್ಞಾನಾಂಬುಧಿ ಪೂರ್ಣಾ ವಂದೇ
--------------
ಶಂಕರಭಟ್ಟ ಅಗ್ನಿಹೋತ್ರಿ
ವಂದೇ ಶಂಕರ ಗುರುದೇವಾ ವಂದೇ ಶಂಕರ ಗುರುದೇವಾ ಪಾವನ ಚರಣಾ ತೋರೈ ಕರುಣಾ ಜ್ಞಾನಾಂಬುಧಿ ಪೂರ್ಣಾ ವಂದೇ ನಿರಂಜನ ಸತ್ಯ ಸ್ವರೂಪಾ ಪ್ರತ್ಯಗಾತ್ಮನೇ ಆನಂದರೂಪಾ ನೀಡೈ ಘನಜ್ಞಾನಾ ಬೋಧಾ ಬೇಡುವೆ ನಿನ್ನೊಳ್ ಗುರುವೇ ವಂದೇ ಆತ್ಮಸ್ವರೂಪವ ಬೋಧಿಸಿ ಎನ್ನ ಮುಕ್ತ ಮಾಡುನೀ ಶ್ರೀ ಗುರುದೇವಾ ನಾರಾಯಣಪದದಾ ಜ್ಞಾನಾ ಸಾರಿದ ಶಂಕರ ಗುರುವೇ ವಂದೇ
--------------
ಶಂಕರಭಟ್ಟ ಅಗ್ನಿಹೋತ್ರಿ
ವಂದೇ ಶ್ರೀ ಗೌರಿನಂದನ ಸುರನರ ವೃಂದವಂದಿತಚರಣ ಗಜಾನನ ಪ. ಶಂಕರೋಲ್ಲಾಸ ಪಾಶಾಂಕುಶಧರ ಕರ ಪಂಕಜ ಸುವಿರಾಜ ರವಿತೇಜ 1 ಜಂಭಾರಿಸಂನುತ ಜಾಹ್ನವೀಧರಸುತ ಲಂಬೋದರ ಸುಂದರ ಕೃಪಾಕರ 2 ಸುಕ್ಷೇಮಧಾಮ ಶ್ರೀ ಲಕ್ಷ್ಮೀನಾರಾಯಣನ ಪಕ್ಷೈಕಪಾವನ ಸುಧೀಷಣ 3
--------------
ತುಪಾಕಿ ವೆಂಕಟರಮಣಾಚಾರ್ಯ
ವರದವಿಠಲ ದೇವನ ಪೊರೆಯವುದಾನರನ ಪ ಬಂದ ವಿಭೀಷಣನ ಚಂದದಿ ಸಲಹಿದನು 1 ಅಜಮಿಳಗೊಲಿದನ ಕುಜನರ ತರಿದನ ಸುಜನರನಾಳಿದನ ವಿಜಯನ ರಥಸೂತನ 2 ಗಂಗೆಯ ಪಡೆದವನ ರಥಾಂಗವ ಪಿಡಿದವನ 3 ಖ್ಯಾತ ಪಾದಾಂಬುಜನ ಸೇತುವಿಧಾತನ 4 ರಾಮನ ಜಗದಭಿರಾಮನ ದೈತ್ಯ ವಿ ರಾಮನ ಭಜಕನಾ ರಾಮನ ದಶರಥ ರಾಮನ ಸೀತಾ ರಾಮನ ಗುಣಧಾಮನ 5 ಪಂಕಜನೇತ್ರನ ಪರಮ ಪವಿತ್ರನ ಶಂಕರ ನುತಿ ಪಾತ್ರನ ವೆಂಕಟರಮಣನ ಕಿಂಕರ ಶರಣನ ಸಂಕಟಹರ ನಾಮನ6
--------------
ವೆಂಕಟವರದಾರ್ಯರು
ವರೇಣ್ಯ ಪ ಶಂಕರಾಭರಣಾದ್ರಿ ವೆಂಕಟ | ಪಂಕಜಾಸನ ವಂದಿತಾಂಘ್ರಿಯೆಶಂಕೆ ಇಲ್ಲದೆ ಭಜಿಪ ಭಕುತರ | ಪಂಕಕಳೆ ಅಕಳಂಕ ಮೂರುತಿ ಅ.ಪ. ನೀರಜ ಮಂದರ ಧೃತ | ಸಿಂಧುಗತ ಹಿರಣ್ಯಾಕ್ಷ ಸಂಹೃತಕಂದನನು ಪಿತನಿಂದ ಸಲಹಿದ | ಇಂದ್ರಗವರಚುಪೇಂದ್ರ ಹರಿಯೇ ||ತಂದೆ ವಚನಕೆ ತಾಯ ಕಡಿದನೆ | ತಂದೆ ನುಡಿಗಡವಿಯನೆ ಸೇರ್ದನೆತಂದೆ ತಾಯ್ಗಳ ಬಂಧಹರ ಮುದ | ದಿಂದ ಮೋಹಕ ತುರಗವೇರ್ದ 1 ಸಿರಿ ಕಾಲ ಕರ್ಮ ಪಾದ ಪಲ್ಲವ | ಓಲೈಪ ಭಾಗ್ಯವ ಪಾಲಿಸೂವುದು 2 ಭವ ಕೂಪಾರ ದಾಟಿಪಧೀರ ಗುರು ಗೋವಿಂದ ವಿಠಲನ | ಅಪಾರ ಕರುಣವ ತುತಿಸಲಾಪನೆ 3
--------------
ಗುರುಗೋವಿಂದವಿಠಲರು
ವಾಯುದೇವರ ಪ್ರಾರ್ಥನೆ ಪ್ರಾಣಪತೇ ಪರಿಪಾಲಯ ಮಾಂಪ್ರಾಣಪತೇ ಪರಿಪಾಲಯ ಮಾಂ ಕಮಲಾಲಯ ಕರುಣೈಕಾಲಯ ಭೂಮನ್ಯೆ ಪ. ಋಜುಗಣನಾಯಕ ಭುಜಗಭೂಷಣ ದ್ವಿಜರಾಜಾಹಿಪರಾಜಾ 1 ಭಾರತೀಶ ಕರುಣಾರಸ ಭೂಷಣ ವಾರಿಜಾಸನ ಸಮಾಂಶಾ 2 ಕಪಿವರ ನೃಪವರ ಯತಿವರ ರೂಪ ದುರಿತ ಸುರೂಪ 3 ರಾಮಕೃಷ್ಣ ವ್ಯಾಸಾಮಲ ಮಂಗಲ ನಾಮಕ ಶ್ರೀಪತಿ ದೂತ 4 ವೆಂಕಟೇಶ ಚರಣಾಂಬುಜ ಮಧುಪ ವಿ- ಶಂಕ ಶಂಕರಾತಂಕ ನಿವಾರಣ 5
--------------
ತುಪಾಕಿ ವೆಂಕಟರಮಣಾಚಾರ್ಯ
ವಾಸುದೇವ ವಾರಿಜಾಕ್ಷನಾ ಸ್ತುತಿಸು ಮನದಿ ಪ ಸಾಸಿರನಾಮದೊಡೆಯ ಸಕಲಲೋಕಕರ್ತನಾದ ಸುಜನ ಪೋಷಕ ಭಕ್ತವಿಲಾಸ ಅ.ಪ ಪಂಕಜೋದರ ಪರಮ ಪಾವನ ಸರ್ವಜಗವ ಬಿಂಕದಿಂದ ಪೊರೆವ ದೇವನಾ ಶಂಕೆಯಿಲ್ಲದ ದನುಜ ಮರ್ದನನಾದ ತನ್ನ ಕಿಂಕರರÀನು ಬಿಡದೆ ಕಾಯುವಾ ವೆಂಕಟಾದ್ರಿ----ದ ವೇಣುನಾದದಲಿ ಬುಧವಂದ್ಯ ಶಂಕರಾದಿ ದೇವ ದೇವ ಶರಧಿಶಯನ ಶಾಶ್ವತನಾದ 1 -----ಶ್ವ ರೂಪನಾ ಎಂದು ಎಂದಾನಂದ ದಿಂದ ಅನುದಿನ ಚಂದದಿಂದ ---ಸನಾ |----ಭವ ಬಂಧಕವನೆ ಪರಿಹರಿಸುವನಾ ಕಂದ ಕೂಗಲು ಕಂಭದಿಂದಾ ಬಂದ ನಾರಸಿಂಹನ ಮೂರ್ತಿ 2 ----------ಮಹಾನುಭಾವ ಕಂಡ ಮುನಿಗಳಂತರ್ಭಾವನಾ ಕುಂಡಲೀಶÀ ಭೂಷಣ ಪ್ರೀಯನಾಕರ ಘನಾ ಕೋದಂಡಧರ ಶ್ರೀರಾಮನಾದನಾ ಪುಂಡಲೀಕ ವರದಹರಿ-----ತನಾದ ವೇದವೇದ್ಯ ಅಂಡಜನ--------ಹರಿ 'ಹೊನ್ನಯ್ಯ ವಿಠ್ಠಲ’ ನಾದ 3
--------------
ಹೆನ್ನೆರಂಗದಾಸರು
ವಿವಿಧ ದೈವ ಸ್ತುತಿ ಜಲರುಹ ಮೋಹನ ವಿಶಾಲ ನೇತ್ರ ಪ ಗಾನಾನಂದ ಲೋಲ ಬಂಧುರ ಗಾನಾನಂದ ಲೋಲಾ ಗೋಪಾಲ ವನಮಾಲ ಗೋಕುಲ ಗೋಪಾಲ ವನಮಾಲ ಅ.ಪ ದಶರಥ ನಂದನ ವಿಶಾಲಹೃದಯ ಸತ್ಯಧರ್ಮಶೀಲ ರಾಘವ ಸತ್ಯಧರ್ಮಶೀಲ ಖಲಾಳಿಕುಲಶೂಲ ರಾಘವ ಖಲಾಳಿಕುಲಶೂಲಾ 1 ಪುರಹರ ಶಂಕರ ಕೃಪಾ ಸಮುದ್ರ ನಾಟ್ಯನಾದ ಚತುರ ಶ್ರೀಕರ ನಾಟ್ಯನಾದ ಚತುರ ಪಿನಾಕ ಶಶಿಶೇಖರ 2 [ಶ್ರೀರಾಮಪ್ರಿಯ ಭಕ್ತಾಗ್ರೇಸರ] ಪವನಾತ್ಮಜ ಶೂರ ಹನುಮಾನ್ ಪವನಾತ್ಮಜ ಶೂರ ಮರಕತ ಮಣಿಹಾರ ಮಾರುತಿ ಮರಕತ ಮಣಿಹಾರ 3 ಶರಣ ಜನಾನುತ ಗಿರೀಶ ಸದೃಶ ಸತ್ಯಸಾಯಿಬಾಬ ಪಾಲಯ ಸತ್ಯಸಾಯಿಬಾಬ ಪರಮದಯಾಹೃದಯಾ ಸವಿನಯ ಪರಮದಯಾಹೃದಯ 4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ವಿಷಯ ಸುಖ ಕ್ಷಣಭಂಗುರ ಕೊನೆಯಲಿಯಿದು ದುಃಖರೂಪ ಪೂರ್ಣಶಾಂತಿ ದೊರಕದು ಈ ಪ ಮೋಹದಿಂದ ಬಯಸುತಿರುವ ಇಹಪರಲೋಕಗಳ ಸುಖವು ನಾಶವಂತ ಕೊನೆಯಲೊಮ್ಮೆ ಕ್ಲೇಶದಾಯಕವು ತಿಳಿಯೈ 1 ಪರಮಸೌಖ್ಯ ಆತ್ಮರೂಪ ಅರಿತುಕೊಂಡು ನಿನ್ನೊಳಗೆ ಮರುಳಾಗದೆ ವಿಷಯಸುಖಕೆ ಗುರುಶಂಕರನಡಿ ಸೇವಿಸು 2
--------------
ಶಂಕರಭಟ್ಟ ಅಗ್ನಿಹೋತ್ರಿ
ವೆಂಕಟಪತೇಧೀರ | ಮಾಡೋಯನ್ನ ಸಂಕಟ ಪರಿಹಾರ || ಶಂಕರನ ವರ ಬಿಂಕರಕ್ಕಸಂ ಕಳೆದು ನಿ:ಶ್ಯಂಕನಾದ ಪ ನಿಜಾಂಕ ಗುಣಪೂರ್ಣಾಂಕ ನಿನ್ನಯ ಕಿಂಕರರ ಕಿಂಕರನು ನಾನು | ವರದ ಕೋಮಲ ಶುಭಾಂಗ| ಪಾವನಗಂಗ | ಬೆರಳಲಿಪಡೆದರಂಗ ಉರಗಾದ್ರಿ ಸ್ಥಿರನಿವಾಸ || ಶಿರೆಯೆರಗುತಿರುವರು ಮಹಿಮ ನಿನ್ನದು 1 ಅಂಡಜವಾಹನ ಧೋರೆ | ಪುಂಡಲೀಕವರದನೆ | ಗೋಪಾಲನೇ | ಪಾಂಡವರಕ್ಷಕನೆ | ಹಿಂಡು ದೈವರ ಗಂಡ | ವೀರ ಪ್ರಚಂಡ | ಜಗದುದ್ದಂಡ ಮಂಡಲಾಧಿಪ ದೇವ ದೇವ 2 ಪಾಲಸಾಗರ ಶಯನ | ಪಾವನ್ನ | ಪಾಲಿಸೋ ದಾಸರನ್ನ | ಜ್ವಾಲಾ ಹೆನ್ನೆವಿಠಲ | ಭಕ್ತವತ್ಸಲ | ಲಾಲಿತ ಗುಣಶೀಲ | ಪಾಲಿತಾಮರ ಲÉೂೀಲಗೋಪಿ ಬಾಲಾ ಲೀಲಾ ವಿಶಾಲನಾಯಕ | ಮಂಗಮನೋಹರ3
--------------
ಹೆನ್ನೆರಂಗದಾಸರು
ವೆಂಕಟಾಚಲನೆ ಬಾರೊ ಶಂಕರಾಭರಣ ಶಾಯಿ | ಕಿಂಕರರಿಗೊಲಿದ ನಿಃಶಂಕ ಬಾರೊ ಪ ಇಂದಿರೆ ಕೂಡ | ಚಂದದಿಂದಲೊಪ್ಪುತಿಹ ಇಂದುವದನಾ || ಮಂದರೋದ್ಧಾರನೆ ಮಹನಂದ ಮೂರುತಿ | ವೃಂದಾರಕ ವಂದ್ಯಪಾಲ ವಂದಿಪೆ ನಿಂದು 1 ಲೌಕಿಕ ವಿಲಕ್ಷಣ ಅನೇಕ ಏಕಾ | ಸಾಕಾರ ವಿಗ್ರಹ ಪುಣ್ಯಶ್ಲೋಕ ವಿಭುವೆ || ಪ್ರಾಕೃತ ರಹಿತಗಾತ್ರ ಲೋಕಪಾವನ | ಶೋಕ ಮೂಲನಾಶನ ಅಶೋಕ ಜನಕಾ 2 ಮಣಿ ಅಗಣಿತ ಬಂಧು | ಆಗನಾಗಧಾರಕನೆ ನಾಗ ಭಂಜನಾ || ಆಕಾಶ ಗಂಗೆಯ ಅಂಗುಷ್ಟದಿ ಪೆತ್ತನೆ | ಆಗಲೀಗಲೆನ್ನದಲೆ ಸಾಗಿ ವೇಗದಿ 3 ಅಂಗ ಅಂಗಿ ಭಾವದಿಂದ ಅಂಗದೊಳಿದ್ದು | ಸಂಗಡ ತಿರುಗುವ ನೀಲಾಂಗ ನಿಃಸಂಗಾ || ಭೃಂಗ ಜಗದಂತ | ರಂಗ ರಂಗರಾಜ ಸುಖಸಂಗ ನಿಸ್ಸಂಗಾ 4 ಆಪ್ತಕಾಮಿ ಅಮೃತಾಂಗ ಗುಪ್ತ ಮಹಿಮ | ತಪ್ತ ಕಾಂಚನ ಸನ್ನಿಭ ವ್ಯಾಪ್ತ ನಿತ್ಯಾ || ತೃಪ್ತ ತೃಣ ಬೊಮ್ಮದಿ ನಿರ್ಲಿಪ್ತ ವ್ಯಾಪ್ತಾ | ಸಪ್ತ ಸಪ್ತ ಲೋಕೇಶ ಅತೃಪ್ತ ಲೀಲಾ 5 ನಿರ್ದೋಷ ವಸ್ತುವಿನಿಂದ ನಿರ್ಧರ ಮಾಡೆ | ಪೊಂದಿಪ್ಪವು ನಿನ್ನಲಿ ನಾಲ್ಕು ನಿರ್ದೋಷಂಗಳೂ || ಭದ್ರ ಫಲದಾಯಕ ಸಮುದ್ರಶಯನಾ | ಮಧ್ಯಜೀವಿ ವಂದ್ಯ ಸುಪ್ರಸಿದ್ಧ ಮೋಹನ 6 ಜೀವಾಭಿಮಾನಿ ಗಿರೀಶ ದೇವ ದೇವೇಶಾ | ಜೀವ ರಾಶಿಗಳ ಸ್ವಭಾವ ಪ್ರೇರಕಾ || ಜೀವನವಾಗಿ ನಮ್ಮನು ಕಾವುತಿಪ್ಪ | ರಾಜೀವ ನಯನ ವಿಜಯವಿಠ್ಠಲ ಪೂರ್ಣಾ 7
--------------
ವಿಜಯದಾಸ
ವೆಂಕಟಾಚಲವಾಸ ಪಂಕಜಪ್ರಿಯಭಾಸ ಶಂಕರಾರ್ಚಿತ ಚರಣ ಪಂಕಜಾಸನ ಪಿತ ಪಂಕಜಲೋಚನ ಕಿಂಕರಜನ ಶರಣ ಪ ಪರಮಾತ್ಮ ನಿನ್ನ ಶ್ರೀಪದಸೇವಕನಾಗಿಪರರನನುಸರಿಸುವೆನೆ ಸಿರಿರಮಣನೆ ನಿನ್ನ ಕರುಣೆಯುಳ್ಳೆ ಪರಸಿರಿಯ ಬಯಸುವೆನೆ 1 ಧರಣಿಯನಾಳುವ ದೊರೆಯ ಕುಮಾರನು ತಿರಿಕೆಯ ಬೇಡುವನೆ ಸುರತರುವಿನ ತಂಪುನೆರಳೊಳು ಕುಳಿತು ತಾ ಗರಿಕೆಯನರಸುವನೆ 2 ಸಾರನಿಗಮ ವಿಚಾರವುಳ್ಳವ ನಿಸ್ಸಾರದಿ ಬೆರೆಯುವನೆ ವಾರಿಧಿಲಂಘಿಪಧೀರನುಕೊಳಚೆಯನೀರಿಗೆಜರಿಯುವನೆ 3 ಕ್ಷೀರಾಬ್ಧಿ ಮಥಿಸಿದ ಶೂರನಿನ್ನವನಿಗೆ ನೀರು ಮಜ್ಜಿಗೆ ಗಣನೆ ನಾರಸಿಂಹನ ಪದ ಸಾರಿದರವನು ಮದವಾರಣಕ್ಕಂಜುವನೆ 4 ಗರುಡಗಮನ ನಿನ್ನ ಶರಣಾದವನಿಗೆ ತರಳನ ಹಾವಳಿಯೆ ನರಕಾಂತಕ ನಿನ್ನ ಸ್ಮರಿಸುವ ನರನಿಗೆ ದುರಿತಂಗಳಟ್ಟುಳಿಯೆ 5 ಹೊಳೆಯೊಳು ನೆನೆಯದ ಬಲುಗಟ್ಟಿಕಲ್ಲು ತಾ ಮಳೆಯೊಳು ನೆನೆಯುವದೆ ಇಳೆಯೊಳು ಪುಲಿಗಿರಿನಿಲಯನ ದಾಸರ ಬಲುಹು ಕುಂದಕವಹುದೆ 6 ಇಷ್ಟದಿ ಮನೆಯೊಳು ಮೃಷ್ಟಾನ್ನವುಂಡವ ಪಿಷ್ಟವ ಬಯಸುವನೆ ಸೃಷ್ಟೀಶ ನಿನ್ನೊಳಗಿಟ್ಟು ದುರ್ದೈವದ ದೃಷ್ಟಿಯನರಸುವನೆ 7 ನಿಗಮಗೋಚರ ಕೇಳು ಜಗವ ತೂಗುವನಿಗೆ ಮಗುವತಿ ಘನವಹುದೆ ಜಗದಘಹರಣ ಎನ್ನಘವ ನೀಗಲು ನಿನ್ನ ಬಗೆಗೆ ದುರ್ಘಟವಹುದೆ 8 ಪರಮಾತ್ಮ ಪರಿಪೂರ್ಣ ಪರವಸ್ತು ನೀನೆಂದು ಮರೆಹೊಕ್ಕೆ ಕಾಯೊ ಎನ್ನ ವರಸುಗುಣಾಕರವರದವಿಠಲಪುಲಿಗಿರಿದೊರೆಸುಪ್ರಸನ್ನಾ 9
--------------
ವೆಂಕಟವರದಾರ್ಯರು
ವೆಂಕಟಾಚಲವಾಸ-ಪಂಕಜಪ್ರಿಯ ಭಾಸ ಶಂಕರಾರ್ಚಿತ ಚರಣ ಪಂಕಜಾಸನ ಪಿತ ಪಂಕಜಲೋಚನ-ಕಿಂಕರ ಜನ ಶರಣ ಪ ಪರಮಾತ್ಮ ನಿನ್ನ ಶ್ರೀಪದಸೇವಕನಾಗಿ ಪರರನುಸರಿಸುವನೆ ಪರ ಸಿರಿಯ ಬಯಸುವನೆ 1 ತಿರುಕೆಯಬೇಡುವನೆ ಸುರತರುವಿನತಂಪು ನೆರಳೊಳು ಕುಳಿತುತಾ ಗರಿಕೆಯನರಸುವನೆ 2 ನಿಗಮ ವಿಚಾರವುಳ್ಳವ ನಿಸ್ಸಾರದಿ ಬೆರೆಯುವನೆ ವಾರಿಧಿಲಂಘಿಪ ಧೀರನು ಕೊಳಚೆಯ ನೀರಿಗೆ ಜರಿಯುವನೆ 3 ಕ್ಷೀರಾಬ್ಧಿಮಥಿಸಿದ ಶೂರನಿನ್ನವನಿಗೆ ನೀರುಮಜ್ಜಿಗೆ ಗಣನೆ ನಾರಸಿಂಹನ ಪದ ಸಾರಿದವನು ಮದವಾರಣಕ್ಕಂಜುವನೆ 4 ಗರುಡಗಮನ ನಿನ್ನ ಶರಣನಾದವನಿಗೆ ತರಳನ ಹಾವಳಿಯೆ ನರಕಾಂತಕ ನಿನ್ನ ಸ್ಮರಿಸುವನರಗೆ ದುರಿತಂಗಳಟ್ಟುಳಿಯೆ 5 ಹೊಳೆಯೊಳು ನೆನೆಯದ ಬಲುಗಟ್ಟಿಕಲ್ಲುತಾಮಳೆ ಯೊಳುನೆನೆಯುವುದೆ ಬಲುಹುಕುಂದಕವಹುದೆ 6 ಇಷ್ಟದಿ ಮನೆಯೊಳು ಮೃಷ್ಟಾನ್ನವುಂಡವ ಪಿಷ್ಟವ ಬಯಸುವನೆ ಸೃಷ್ಟೀಶನಿನ್ನೊಳಗಿಟ್ಟು ದುರ್ದೈವದ ದೃಷ್ಟಿಯನರಸುವನೆ 7 ನಿಗೆಮಗುವತಿ ಘನವಹುದೆ ದುರ್ಘಟವಹುದೆ 8 ಮೊರೆಹೊಕ್ಕೆ ಕಾಯೊ ಯನ್ನ ವರಸುಗಣಾಕರ ವರದವಿಠಲ ಪುಲಿಗಿರಿ ದೊರೆ ಸುಪ್ರಸನ್ನಾ 9
--------------
ಸರಗೂರು ವೆಂಕಟವರದಾರ್ಯರು
ವೆಂಕಟೇಶ ಕಾಯೋ ಕಿಂಕರರವನೆಂದು ಪ ಪಂಕಜಾಸನ ಶಂಕರರಾರ್ಚಿತ ಶಂಬಸುದರ್ಶನಾಂಕಿತ ಅ.ಪ. ವಾಸುದೇವ ನೀನೆ ಶ್ರೀ ಸರಸಿಜಭವ ವೀಶ ಫಣಿಪ ವಹೇಶ ವಾಸವರಾಶೆ ಪೂರೈಸಿ ಪೋಷಿಸುವ ಜಗದೀಶ ಜೀವನದ ವಾ ರಾಶಿಜಾಧಿಪ ಭೇಶ ರವಿ ಸಂಕಾಶ ಕರಿವರಕ್ಲೇಶ ಹಾ 1 ಸ್ವರಮಣ ಭಕುತರ ಕಾಮಿತಪ್ರದ ಕೈರವದಳಶ್ಯಾಮ ಸುಂದರನೆ ಹೇಮ ಶೃಂಗೀವರಧಾಮ ದೀನಬಂಧು ಸನ್ನುತ ಸೋಮಧರ ಸುತ್ರಾಮ ಮುಖ ಸುರಸ್ತೋಮನಾ 2 ತ್ರಿಗುಣಾತೀತ ನರಮೃಗರೂಪ ನಾನಿನ್ನ ಪೊಗಳಬಲ್ಲೆನೆ ನಿಗಮವೇದ್ಯನೆ ಜಗನ್ನಾಥ ವಿಠಲ ಸ್ವಗತಭೇದ ಶೂನ್ಯನೆ ಮುಗಿವೆ ಕರಗಳ ಪನ್ನಗನಗಾಧಿಪ ಪೊಗರೊಗುವ ನಗೆಮೊಗವ ಸೊಬಗಿನ ಸುಗುಣನೆ 3
--------------
ಜಗನ್ನಾಥದಾಸರು
ವೈಕುಂಠವಾಸಿ ನಾರಾಯಣಗೆ ನೀಲಕಂಠ ವಿಶ್ವೇಶ್ವರಗೆ ಭಾಳಲೋಚನ ಭವಹಾರಕಗೆ ಮಂಗಲಂ ಜಯ ಮಂಗಲಂ ಪ ವಾಸುಕಿ ಫಣಿವರ ಭೂಷಿತಗೆ ಶೇಷ ಪರೀಯಂಕ ವಾಸನಿಗೆ ಮಂಗಲಂ ಜಯ ಮಂಗಲಂ 1 ಗಿರಿವರ ಬಿರುಳಲಿ ನೆಗಹಿದಗೆ ತರಳೆಗಂಗಾ ಜಲಧಾರನಿಗೆ ಮಂಗಲಂ ಜಯ ಮಂಗಲಂ 2 ಗಜರಾಜನ ಕಾಯ್ದ ಗೋವಿಂದಗೆ ಅಜಪಿತನಾದ ನಾರಾಯಣಗೆ ಮಂಗಲಂ ಜಯ ಮಂಗಲಂ 3 ಶಂಖಚಕ್ರಧರ ಶಂಕರ ಪ್ರಿಯಗೆ ಪಂಕಜಾಂಬಕ ವಿಷ್ಣು ವಲ್ಲಭಗೆ ರಂಗರಕ್ಷಕ ಮಹಾಬಲೇಶ್ವರಗೆ ಮಂಗಲಂ ಜಯ ಮಂಗಲಂ 4
--------------
ಶಾಂತಿಬಾಯಿ