ಒಟ್ಟು 796 ಕಡೆಗಳಲ್ಲಿ , 81 ದಾಸರು , 727 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿಂದೆಯಾಡಬೇಡೋ ಪರ ನಿಂದೆ ಮಾಡಬೇಡೋ ಪ ಇಂದಿರೇಶನಪಾದಗ್ಹೊಂದಿ ಭಜಿಪರಿ ಗೊಂದನೆ ಮಾಡೋ ಅ.ಪ ಕುಂದುವರಿಯಬೇಡೋ ಮನಸೇ ಮಂದನಾಗಬೇಡೋ ಎಂದಿಗಾದರು ಒಂದಿನ ಈ ಜಗ ಕುಂದಿಪೋಗುವ ಭವಬಂಧಕ್ಕೀಡಾಗಬೇಡೋ 1 ಕೋಪಗೊಳ್ಳಬೇಡೋ ಮನಸೇ ಪಾಪಕ್ಹೋಗಬೇಡೋ ಗೌಪ್ಯವಳಿಯಬೇಡೋ ಶಾಪಕೊಳ್ಳಬೇಡೋ ಆ ಪರಬ್ರಹ್ಮನ ಶ್ರೀಪಾದಪಾಡೋ 2 ಸೊಕ್ಕು ಮಾಡಬೇಡೋ ಯಮನ ಲೋಕಕ್ಹೋಗಬೇಡೋ ಏಕಚಿತ್ತದಿ ಲೋಕೈಕ ಶ್ರೀರಾಮನ ಭಕುತಿಂ ಭಜಿಸಿ ಮುಕುತಿಯ ಕೂಡೋ 3
--------------
ರಾಮದಾಸರು
ನಿನ್ನ ಕಂಡೆನು ದೇವ ನಿನ್ನ ಕಂಡೆ ಘನ್ನ ಮಹಿಮನೆ ಮತ್ತುರೇಶಾ ಕುಂಚೂರವಾಸಾ- ಪ ಪನ್ನೀರಿನಿಂದ ನಿನ್ನಂಗವನು ತೊಳೆದು ಬಲು ಚನ್ನಸಿರಿಗಂಧದ ಪನ್ನೆರಡು ನಾಮ ಚೆಲು ವನ್ನಿರಿಸಿ ಪಣೆಗೂಧ್ರ್ವ ಪುಂಡ್ರ ರಕ್ತಾಕ್ಷತೆಯನು ಎನ್ನ ಕೈಯಿಂದಲೇ ಇಡುವಂತೆ ನೀನೆ ಮಾಡು 1 ಒಪ್ಪಿಹುದು ಕೊರಳಲ್ಲಿ ಶ್ರೀ ತುಳಸಿ ಮಾಲೆ ನ- ಕುಸುಮ ನಿಕರ ತಪ್ಪದಲಿ ಓರಂತೆ ಇಪ್ಪ ಭೂಷಣ ನೋಡಿ ಒಪ್ಪ ನಿನ್ನೋಜೆಯನ್ನೆಷ್ಟು ಪೊಗಳಲಿ ಹಾಡಿ2 ಮಾನವನು ನಾಮವು ಜ್ಞಾನಿ ಪವಮಾನನೇ ಮಾನ್ಯವಾಯಿತೆ ನಿನಗೆ ಆಶ್ಚರ್ಯವೋ ಮಾನ ರಕ್ಷಕ ಸ್ವಾಮಿ ನರಸಿಂಹ ವಿಠ್ಠಲನೇ ಪ್ರಾಣದೇವಾನೆಂಬ ನಾಮವಿಟ್ಟಿಹನೋ 3
--------------
ನರಸಿಂಹವಿಠಲರು
ನಿರಂಜನ ಶರಧಿಜಕಂಜಕರದಿ ಸುರಸ ಭುಂಜಿಸೋ ದೇವ ಪ ಜಂಬು ನೀರಲ ಸುಗೋಡಂಬಿ ಪಲಸು ದಾ-ಳಿಂಬ ಸುರಸ ಇಕ್ಷುರಂಭೆ ಫಲಗಳಾ 1 ನಾರಿಕೇಳವು ದ್ರಾಕ್ಷಿ ಪೇರು ಖರ್ಜೂರ ಕವಳಿಭೂರಿ ಕಿತ್ತಳೆ ಚೂತಕೇರು ಫಲಗಳು2 ಕಾಯಿಸಿದಾ ಪಾಯಸ ದೋಸೆ ಮೊಸರುಬೆಣ್ಣೆದೋಸೆ ಕೊಡುವೆ ಇಂದಿರೇಶ ಯಾದವಗೆ3
--------------
ಇಂದಿರೇಶರು
ನಿರುತದಿ ಭಜಿಪೆನಾ ಭರತನ ರಾಣಿಯೇ ಭಾರತಿಯೇ ಪ ಗುರುವರಂತರ್ಗತ ಹರಿಭಕ್ತಿ ಪಾಲಿಸೇ ಭಾರತಿಯೇ ಅ.ಪ ಕಾವೋದು ಬಾಲನ ಸೇವೆ ನೀಕರಿಸದೆ ಭಾರತಿಯೇ ಶಿವಮುಖ ಸುರ ಸಂಸ್ತವಕೆ ಸುಪ್ರೀತಳೆ ಭಾರತಿಯೇ 1 ಕಾಳೀದ್ರೌಪದಿ ಶಿವಕನ್ಯಳೆಂದೆನಿಸಿ ಭಾರತಿಯೇ ನಳನಂದಿನಿ ಮನ ಕೊಳೆಯ ತೊಳೆಯಬೇಕೇ ಭಾರತಿಯೇ 2 ವಂದಿಪೆ ನಿನಗಿಂದ್ರೇಶನಳೆಂದೆನಿಸಿದಿ ಭಾರತಿಯೇ ಕಂದನ ಕುಂದುಗಳೊಂದೆಣಿಸದೆ ಕಾಯೇ ಭಾರತಿಯೇ 3 ಕಾಲಾಭಿಮಾನಿಯೆ ಶೈಲಜೆ ಶ್ಯಾಮಲ ಭಾರತಿಯೇ ವಾಲಗ ಕೈಕೊಂಬೆ ಭಾರತಿಯೇ 4 ಹರಿಯ ಹಿರಿಯ ಸೊಸಿ ಪರಮ ಪದಕೆ ಬರುವಿ ಭಾರತಿಯೇ ಕರುಣಾದಿ ಭಾರತಾದ್ಯರ್ಥವರುಹೆ ನಿತ್ಯಾ ಭಾರತಿಯೇ 5 ಯೋಗಿ ವಿನುತ ಚರಣಳೆ ಎನ್ನ ಭಾರತಿಯೇ ಹೀನ ಬುದ್ಧಿಯ ಕಳಿ ಜ್ಞಾನಮಾರ್ಗವ ತೋರೆ ಭಾರತಿಯೇ6 ಮಾನಾಭಿಮಾನ ನಿನ್ನಾಧೀನ ಎನಗೆ ನೀ ಭಾರತಿಯೇ ಪಾದ ಮನದಿ ತೋರಿಸೇ ನಿತ್ಯಾ ಭಾರತಿಯೇ 7
--------------
ಪ್ರದ್ಯುಮ್ನತೀರ್ಥರು
ನಿಲ್ಲ ಬಾ ನಿಲ್ಲ ಬಾ ಮೆಲ್ಲಮೆಲ್ಲನೆ ಹೆಜ್ಜೆನಿಟ್ಟುನಿಲ್ಲ ಬಾರೋ ಕೃಷ್ಣಾ ನಿಲ್ಲ ಬಾರೋ ಪ ದುಷ್ಟ ಪೂತನಿಯ ದೊಡ್ಡ ಹೊಟ್ಟೆಯೊಳಾಡಿದಿ ಮಂದಿದೃಷ್ಟಿ ತಾಕಿಹುದೊ ರಕ್ಷೆನಿಟ್ಟು ಮುದ್ದಿಸುವೆ 1 ಆಲಯದಂಗಳದೊಳು ಲೀಲೆ ಮಾಡುವಿಯೊ ಕೆಟ್ಟಬಾಲೆಯರ ಗಾಳಿ ಸೋಕಿಹುದೋ ಹಣ್ಣು ನಿವಾಳಿಸಿಒಗೆವೆ ಕೃಷ್ಣ 2 ಇಂದಿರೇಶ ನಿನ್ನ ಬಹುಮಂದಿ ನೋಡುವರೋ ದೃಷ್ಟಿಇಂದು ಆಗಿಹುದೊ ಮಾಳ್ಪೆ ಕದಲಾರತಿಯ ಕೂಸೆ 3
--------------
ಇಂದಿರೇಶರು
ನೀ ಬಾರದಿರೆ ಬಾರನು ಶ್ರೀ ನರಹರಿ ಪ ನೀ ಬಾರದಿರೆ ಬಾರ ನೀರಜಾಕ್ಷನು ಹರಿನಾನು ನಂಬಿದೆ ನಿಮ್ಮ ನೀವು ಪಾಲಿಸಬೇಕು ಅ.ಪ. ನೀನು ಆತನ ಕಾಯ್ದಿ ತಾನು ಆತನ ಕಾಯ್ದನೀನು ಬಿಡಲು ಬಿಟ್ಟ ಭಾನುಸುತನ ಕೃಷ್ಣ 1 ನಿಮ್ಮ ಮಾತುಗಳನ್ನು ಒಮ್ಮೆ ಮೀರನು ಹರಿನಮ್ಮ ಬಿಡುವುದ್ಯಾಕೊ ಬ್ರಹ್ಮ ಪದಾರ್ಹನೆ 2 ಇಂದು ನಾಳೆನ್ನದೆ ಆನಂದತೀರ್ಥರೆ ನಮ-ಗಿಂದು ತೋರಿಸು ಹರಿಯ ಇಂದಿರೇಶನ ಪ್ರೀಯ 3
--------------
ಇಂದಿರೇಶರು
ನೀ ಮನಒಲಿಯುತೆ ಬಾರಮ್ಮ ಪ ನಲಿನಲಿದಾಡುತ | ಒಲುಮೆಯದೋರುತ | ನಲವಿನಿಂದ ಸ | ಜ್ಜನರಿಗೊಲಿವಳೇ ಅ.ಪ ಖಳಕುಲವಳಿಸುತಲಿ | ಶರಣರಿಗೊಲಿಯುತ ಹರುಷದಲಿ || ಇಳೆಯೊಳು ಮೆರೆಯುವ | ನಂದಿನಿ ನದಿಯೊಳು | ನೆಲೆಯಾಗಿರುತಿಹ | ಜಲದುರ್ಗಾಂಬಿಕೆ1 ಕರುಣವ ಬೀರುತಲಿ | ತವ ಪದ | ಶರಣರ ಪೊರೆಯುತಲಿ || ಪರಿಪರಿವಿಧದಲಿ | ಧರಣಿಯ ಭಾರವ | ಪರಿಹರಿಸಿದ ಶ್ರೀ | ಪರಮೇಶ್ವರಿಯೆ2 ಅಂಬುಜದಳನಯನೆ | ನಿನ್ನನು | ನಂಬಿದೆ ಗುಣಸದನೆ || ಶಂಭುಮನೋಹರೆ | ಶಾಂಭವಿ ಶಂಕರಿ | ನಂಬಿದ ಭಕುತರಿ | ಗಿಂಬು ಗೊಡಲು ನೀ 3 ದೇಶ ದೇಶದೆಲ್ಲ | ನಿನ್ನಾ | ಶ್ರೈಸುವ ಜನಕೆಲ್ಲ || ತೋಷವ ಪಡಿಸುತ | ಆಸೆಯ ನೀವೆ | ನ್ನಾಸೆಯ ಸಲ್ಲಿಸು | ಕಟಿಲಪುರೇಶ್ವರಿ4
--------------
ವೆಂಕಟ್‍ರಾವ್
ನೀನೆ ಕೃಪಾಳು ಶ್ರೀ ಚನ್ನಕೇಶವನೇ ಜ್ಞಾನಿಗಳನ್ನು ಕಾವ ಸನಕವಂದಿತನೆ ಪ ಶರಣರ ಪೊರೆಯುವ ಪ್ರಣವ ಸ್ವರೂಪನೆ ಸ್ಮರಿಸುವ ದಾಸರ ಮರೆಯ ಬೇಡಯ್ಯ ಅ.ಪ. ದೀನರ ಸಲಹುವ ಭಕ್ರವತ್ಸಲನೇ ಮಾನಿನಿ ದ್ರೌಪದಿ ಮಾನ ಕಾಯ್ದವನೇ ಮೌನದಿಂದಲಿ ನಿಂನ ಧ್ಯಾನ ತತ್ವರನಾದೇ ಪನ್ನಗಶಯನನೇ ಸಲಹೊ ಕರುಣದಲೀ1 ಸನ್ನುತ ಹರಿ ನಿಂನ ಕೀರ್ತನೆ ಪಾಡುವೆ ಜಾನ್ಹಕಿ ರಮಣ ಶ್ರೀ ಕಾಕುತ್ಸ್ಥರಾಮಾ ಹೀನನ ಮಾತನ್ನು ನಲಿಯುತ್ತ ಕೇಳಿ ನೀ ಸಾನುರಾಗದಿ ಕಾಯಾ ಧೇನು ಪಾಲಕನೇ2 ಪಂಕಜನೇತ್ರ ಶ್ರೀ ಪರಮ ಪಾವನನೇ ಲಂಕೇಶನಿಗೆ ಯಮನಾದ ಶ್ರೀಧರನೇ ಶಂಕೆಯಿಲ್ಲದೆ ಕಾಯೊ ದೂರ್ವಾಪುರೇಶನೆ ಅಮಿತ ಸದ್ಗುಣಿಯೇ 3
--------------
ಕರ್ಕಿ ಕೇಶವದಾಸ
ನೀನೆ ದಯಮಾಡಲು ನಾನುದ್ಧಾರಾಗುವೆನು ಏನೇನು ಪರಲೋಕ ನಾನರಿಯೆ ಶ್ರೀಹರಿಯೆ ಪ ಹೀನಸಂಸಾರದೊಳಗೆ ಮುಳುಗಿ ಶ್ವಾನನಂದದಿ ಕರಗಿ ಕೊರಗಿ ಜ್ಞಾನಶೂನ್ಯನಾಗಿ ಬಳಲುವೆ ಜ್ಞಾನಮೂರುತಿ ಅಭಯ ಪಾಲಿಸು ಅ.ಪ ಉದಯದಲ್ಲೇಳುತ ಸದಮಲ ತವಪಾದ ಮುದದಿಂದ ನೆನೆಯದೆ ಅಧಮತನದಿ ವಿಧವಿಧದಿ ಅಧಮಜನರ ಸುದ್ದಿ ವದನದಿಂದಾಡುತ ಮುದಿಕೋಣನಂದದಿ ಮದಮುಚ್ಚಿ ನಡೆದೆ ಎಡಬಿಡದೆ ಕುದಿದೆನನುದಿನ ಪರರ ಮನೆ ಸಂ ಪದವ ನೋಡಿ ಸಹಿಸದವರ ಸದನ ಮುರಿಯುವ ಬುದ್ಧಿ ಹುಡುಕಿದೆ ಪದುಮನಾಭಪರಾಧ ಕ್ಷಮಿಸಿ1 ಒಂದು ನಾನರಿಯದೆ ಮುಂದೆ ಭಲಾಯೆಂದು ಹಿಂದೆ ನಿಂದಿಸಿ ನಕ್ಕೆ ದ್ವಂದ್ವಕರ ಬಡಿದು ಬಲು ಜರಿದು ಹಂದ್ಯಮೇದ್ಯಕಂಡಾನಂದಿಪತೆರದನ್ಯ ಸುಂದರಿಯರ ನಯನದಿಂದ ನೋಡಿದೆ ಎವೆಯಿಕ್ಕದೆ ಇಂದಿರೇಶನೆ ನಿಮ್ಮ ಪಾದವ ಒಂದೆ ಮನದಿಂ ಭಜಿಸದೆ ಭವ ದಂದುಗದಲಿ ಬಿದ್ದು ನೊಂದವ ಕಂದನೊಳು ಕೃಪಾದೃಷ್ಟಿಯಿತ್ತು 2 ದಾಸಜನರ ಆವಾಸ ನಾ ಬಯಸದೆ ಈಷಣ ಪ್ರಪಂಚದ್ವಾಸನದಲ್ಲಿ ಬಹು ತೊಳಲಿ ಆಸೆಯೆಂಬುವ ಮಹಪಾಶದಬಲೆಯೊಳು ಘಾಸಿಯಾಗುವೆ ಸಿಲ್ಕಿ ಸೋಸಿ ನೋಡದಲೆ ಮರೆ ಮೋಸದಲಿ ದಾಸ ಬುದ್ಧಿಯಿಂದ ಮಾಡಿದ ಬಲು ದೋಷರಾಶಿಗಳೆಲ್ಲ ನಾಶಿಸಿ ಶ್ರೀಶ ಶ್ರೀರಾಮ ನಿಮ್ಮ ಪಾದ ದಾಸನಿಗೆ ನಿಜಧ್ಯಾಸ ನಿಲ್ಲಿಸು 3
--------------
ರಾಮದಾಸರು
ನೀರಜಾಕ್ಷನೆ ಚಾರುರೂಪನೆಸೇರಿ ಚಿತ್ತದೊಳು ಮೋರೆ ತೋರಿಸೀಗಾ ಪ ಎಷ್ಟು ಭಕ್ತರಾಭೀಷ್ಟ ನೀಡಿದಿವೃಷ್ಣಿವರ್ಯನೆ ಭೆಟ್ಟಿ ಪಾಲಿಸೀಗಾ 1 ಮುಷ್ಠಿ ಅವಲಿಯಾ ಕೊಟ್ಟ ವಿಪ್ರಗೆ ಕೊಟ್ಟೆ ಸಂಪದವಾಭೀಷ್ಟದಾಯಕನೆ 2 ಇಂದಿರೇಶನೆ ಬಂಧ ಮೋಚನೆ ಗೈದು ಬಂದು ಕಾಯೋ ನಂದ ಬಾಲಕನೇ 3
--------------
ಇಂದಿರೇಶರು
ನೀರೇರುಹಾನಯನ | ವಾರನಿಧಿ ನಡುಶಯನತೋರೆನಗೆ ತವ ಚರಣ | ಸುಗುಣ ಗಣ ಪೂರ್ಣ ಪ ಅಮಿತ ಕ್ಲೇಶ ಗೊಳಿಸದಂತೆನೀ ಸಲಹೋ ಎನ್ನ | ಶೇಷಾದ್ರಿ ವಾಸಾ ಪರೇಶಾ1 ಭವ | ಸಂಗದೊಳಗಿರಿಸೀಭಂಗ ಪಡಿಸುವಿ ದೊರೆಯೆ | ಶೃಂಗಾರ ನಿಧಿಯೇ |ಸಂಗ ವಿಷಯದಿ ಹರಿಸಿ ನಿ | ಸ್ಸಂಗನೆಂದೆನಿಸಿಲಿಂಗಾಂಗ ಕಳೆಯೊ ಹರಿ | ರಂಗ ಭವಹಾರಿ2 ಸಾಮಸನ್ನುತ ಚರಣ | ಭೂಮಗುಣಿ ಸುಸ್ತವನಪ್ರೇಮದಲಿ ಗೈವ ಮನ | ನೇಮವೀಯೆಲೊ ವಾಮನ |ಈ ಮಹಾ ಕಲಿಯುಗದಿ | ನಾಮ ನಿಸನ್ನದೆ ಗತಿಯೆಶ್ರೀಮಹೀ ಸೇವಿತನೆ | ರಾಮ ಗುಣಧಾಮ 3 ಭವ | ರೋಗ ವೈದ್ಯನೆ ಎನ್ನರೋಗ ಹರಿಸುವುದರಿದೆ | ಇದು ನಿನ್ನ ಬಿರುದೇ4 ನಿರವದ್ಯ ಆದ್ಯಾಅರುಹಲೇನಿಹುದಿನ್ನು | ಸರ್ವಜ್ಞ ನೀನಿನ್ನು ಒರೆವೆನೆಂಬಪರಾಧ | ಮರೆದು ಪಾಲಿಸು ಶ್ರೀಶ 5
--------------
ಗುರುಗೋವಿಂದವಿಠಲರು
ನೆನೆಯೋ ನೀ ಎನ್ನ ಮನವೇ| ಅನುಪಮ್ಯ ಶ್ರೀ ಮುಕುಂದನಾ| ಚಕೋರ ಸುನಕ್ಷತ್ರೇಶ ಗೋಪಾಲನಾ| ಶ್ರೀಲೊಲನಾ ನಂದಬಾಲನಾ ಪ ವರಭಕ್ತ ಧೃವಗ ಸ್ಥಿರಪದ ವಿತ್ತನಾ| ಧರಣಿಯ ಭಯಹರ ಪುರುಷೋತ್ತಮನಾ| ಉರಗ ತುಳಿದವನಾ| ಉರಗಶಯನುರಗಾ ಭರಣನ ಸಖನಾ| ಸುನಖನ ಅಬ್ಬ ಮುಖನಾ 1 ದುರಿತ ನಿವಾರಕನಾ| ಕರುಣಾದೀ ಅಹಲ್ಯಯ ನುದ್ಧರಿಸಿದನಾ ಸರಸಿಜ ಸಮಪದ ಸರಸಿಜನಾಭನಾ| ಸರಿಸಿಜ ಪಾಣಿಯ ಸರಸಿಜ ನೇತ್ರನಾ 2 ಸುಚರಿತ್ರನಾ ಮುನಿಸ್ತೋತ್ರನಾ| ಗುರುವರ ಮಹಿಪತಿ ನಂದನ ಜೀವನಾ| ಗಿರಿವರಧಾರನಾ ಕಂಸಾಸುರ ಮರ್ಧನಾ| ಶರಧಿ ನಿವಾಸನಾ| ಹರಿಶತ ಕಿರಣ ಹರಿಸುತ ಪ್ರೀಯನಾ| ಸ್ಮರಸೈಯ್ಯನಾ ಕೃಷ್ಣರೇಯನಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೇತ್ರ - ತ್ರಯನೇ | ಅಹಿಪದ ಪಾತ್ರಾ ||ಗೋತ್ರಾರಿ ಪಂಕೇರುಹ ಮಿತ್ರಾ | ಸ್ತೋತ್ರ ಪಾತ್ರ ಶತಪತ್ರ ಪ ಚಿತ್ರ ಚರಣ ಭುವನತ್ರಯ ದೊಳಹಂತತ್ವ ವ್ಯಾಪ್ತ ಗೌರವ ಗಾತ್ರಾ ಅ.ಪ. ಸ್ಥಾಣು ವೃಷಭೇಕ್ಷಣ ನೀರಕ್ಷ 1 ಪಾವಕ ಶ್ವೇತ ಗಿರೀಶ ಉಗ್ರೇಶ 2 ಸಿರಿ ಲೋಲನ ತೋರ್ವುದು3
--------------
ಗುರುಗೋವಿಂದವಿಠಲರು
ನೇಮದಿಂದ ಹರಿಯಭಜಿಸಿ ಪ್ರೀತಿಯಿಂದಲಿ ಕಾಮಿತಾರ್ಥ ಫಲಗಳೀವ ಕರುಣದಿಂದಲಿ ಪ ಜಲದಿ ಬಂಧಿಸಿ ಲಲನೆ ತಂದ ಜಾನಕೀಪತಿ ಜಲಧಿಶಯನನಾದ ನಮ್ಮ ವಿಷ್ಣು ಮೂರುತಿ ನಳಿನನಾಭನಾದ ರಕ್ಷಕನಾದ ಶ್ರೀಪತಿ ಒಲಿದು ಮನದಿ ಸ್ಮರಿಸುವರಿಗರಂದೆ ಸದ್ಗತಿ 1 ಇಂದಿರೇಶ ವಿಬುಧ ವಂದ್ಯ ವಿಶ್ವಕುಟುಂಬಿ ಮಂದರಾದ್ರಿ ಗಿರಿಯ ಪೊತ್ತ ಮಹಿಮನೇನೆಂಬೆ ಕುಂದು ಇಲ್ಲದ ಹೃದಯದಲ್ಲಿ ಕೃಷ್ಣನ ನೇನೆಂಬೆ ಕೈವಲ್ಯ ಕೈಕೊಂಬಿ 2 ಅಖಿಲ ಲೋಗಳನೆ ಆಳುವ ಅಧಿಕ ಸಂಪನ್ನಾ ಮುಕುತಿದಾಯಕ -----ಮೋಕ್ಷದಾತನಾ ನಿಖರವಾಗಿ `ಹೆನ್ನ ವಿಠ್ಠಲ' ನೆಂದು ತಿಳದಿನ್ನುಭಕುತಿಯಿಂದ ಹಾಡಿ ಪಾಡುವ ಭಕ್ತರಾಧೀನಾ 3
--------------
ಹೆನ್ನೆರಂಗದಾಸರು
ನೊಂದು ಬಂದೆನೊ ಕಾಂತೇಶ | ಕೈಯನೆ ಪಿಡಿಯೊ ಮಂದಭಾಗ್ಯಳ ಜೀವೇಶ ಪ. ಅಂದು ಶ್ರೀ ರಾಮರ ಸಂದೇಶವನ್ನೆ ಭೂ- ನಿಂದನೆಗೆ ಅರುಹುತಲಿ ಬಹು ಆನಂದಪಡಿಸಿದ ವಾನರೇಶ ಅ.ಪ. ಶೌರಿ | ಭಕ್ತರ ಕಾಯ್ವ ದುರಿತದೂರನೆ ಉದಾರಿ ಚರಣಕ್ಕೆ ನಮಿಸುವೆ ಹರಿಗೆ ಪರಮಾಪ್ತನೆ ದುರಿತ ತರಿಯುತ ಪೊರೆಯೊ ಗುರುವರ ರಾಮಕಿಂಕರ 1 ಗುರುಕರುಣದ ಬಲದಿ | ಅರಿತೆನೊ ನಿನ್ನ ಚರಣ ನಂಬಿದೆ ಮನದಿ ಪರಿ ಭವಕ್ಲೇಶ ಪರಿಯ ಬಣ್ಣಿಸಲಾರೆ ಹರಿವರನೆ ದಯಮಾಡು ಶ್ರೀ ಹರಿ ದರುಶನವನನವರವಿತ್ತು 2 ಕಾಂತನ ಅಗಲಿರಲು | ಚಿಂತೆಯಲಿ ಭೂ ಕಾಂತೆ ವನದೊಳಗಿರಲು ಸಂತೋಷದಿಂ ರಾಮನಂತರಂಗವನರುಹಿ ಸಂತಸವಪಡಿಸುತಲವನಿಸುತೆಯ ನಿಂತೆ ರಾಮರಿಗ್ಹರುಷ ತೋರಿ 3 ದ್ರುಪದ ಸುತೆಯಳ ಕೀಚಕ | ದುರ್ಮನದಲಿ ಅಪಮಾನಪಡಿಸೆ ದುಃಖ ತಪಿಸಿ ನಿನ್ನನು ಬೇಡೆ ಆ ಪತಿವ್ರತೆ ಸತಿ ಕುಪಿತದಿಂದಲಿ ಖಳನ ಕೊಂದೆ ಅಪರಿಮಿತ ಬಲಭೀಮ ಪ್ರೇಮ 4 ಮಿಥ್ಯಾವಾದದ ಭಾಷ್ಯಕೆ | ಸುಜ್ಞಾನಿಗಳ್ ಅತ್ಯಂತ ತಪಿಸುತಿರೆ ವಾತಜನಕನಾಜ್ಞೆ ಪ್ರೀತಿಯಿಂದಲಿ ತಾಳಿ ಘಾತುಕರ ಮತ ಮುರಿದ ಮಧ್ವನೆ ಖ್ಯಾತಿ ಪಡೆದೆÀ ಸಿದ್ಧಾಂತ ಸ್ಥಾಪಿಸಿ 5 ಪ್ರಾಣಪಾನವ್ಯಾನ | ಉದಾನ ಸ ಮಾನ ಭಾರತಿ ಕಾಂತನೆ ಜ್ಞಾನಿಗಳಿಗೆ ಪ್ರೀತ ಜ್ಞಾನ ಭಕ್ತಿಪ್ರದಾತ ದೀನಜನ ಮಂದಾರ ಕಾಯೊ ದೀನಳಾಗಿಹೆ ಕೈಯ ಮುಗಿವೆ 6 ನೋಯಲಾರೆನೊ ಭವದಿ | ಬೇಗನೆ ತೋರೊ ಧ್ಯೇಯ ವಸ್ತುವ ದಯದಿ ವಾಯುನಂದನ ನಿನ್ನ ಪ್ರಿಯದಿಂ ನಂಬಿದೆ ಕಮಲ ದ- ಳಾಯತಾಕ್ಷನ ಮನದಿ ತೋರಿ7 ಹರಣ ನಿನಗೊಪ್ಪಿಸಿದೆ | ಸುರವಂದಿತ ಕರೆದು ಮನ್ನಿಸಿ ಕಾಪಾಡೊ ಸಿರಿವರನನು ಹೃತ್ಸರಸಿಜದಲಿ ತೋರೊ ಧರೆಯ ವಸ್ತುಗಳ್ ಮಮತೆ ತೊರೆಸು ಹರಿಯ ನಾಮಾಮೃತವನುಣಿಸು 8 ಈ ಪರಿಬಂದೆ ಅನಿಲ | ನಿನ್ನೊಳು ವಾಸ ಗೋಪಾಲಕೃಷ್ಣವಿಠ್ಠಲ ಶ್ರೀಪತಿ ಕೃಪೆಯಿಂದ ನೀ ಪ್ರೀತನಾಗುತ ಕೈಪಿಡಿದು ಸಂತೈಸು ಕರುಣದಿ ಭಾಪುರೇ ಕದರುಂಡಲೀಶ 9
--------------
ಅಂಬಾಬಾಯಿ