ಒಟ್ಟು 587 ಕಡೆಗಳಲ್ಲಿ , 83 ದಾಸರು , 512 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಟಮಾಯ ಮಟಮಾಯ ದಿಟ್ಟಿಸಿ ನೋಡೆಲೊ ಪ ದುಷ್ಟ ಸಂಸಾರವ ಕುಟ್ಟಿಕುಟ್ಟಿಕೊಂ ದೆಷ್ಟು ಮಾಡಿದರು ಕಟ್ಟಕಡೆಗೆಯಿದು ಅ.ಪ ಕೋಟಿಧನವ ನೀಟಾಗಿ ಗಳಿಸಲೇನು ಸಾಟಿಯಿಲ್ಲದ ಸಂಪತ್ತು ಇರ್ದರೇನು ಕಾಟುಮಾಡಿ ಯಮಗೂಟ ಒದಗಲಾಗ ದಾಟಿ ಹೋಗಬೇಕು ಅಷ್ಟು ಸಂಪದ ಬಿಟ್ಟು 1 ಆನೆಕುದುರೆ ಒಂಟೆ ವಾಹನವಿರಲು ಏನು ನಾನಾಸಿರಿಯು ಮಾನ್ಯ ಮಿರಾಸಿಗಿರಲೇನು ತ್ರಾಣಗುಂಡಿಸಿ ಯಮ ಪ್ರಾಣ ಸೆಳೆಯುವಾಗ ನಾನಾಭಾಗ್ಯ ಬಿಟ್ಟು ತಾನೆ ಹೋಗಬೇಕು 2 ಮಾನಪಾನದಿ ತಾನೆ ಹಿರಿಯನೆನಿಸಲೇನು ನಾನಾಪೊಡವಿಗೋರ್ವ ದಣಿಯಾಗಾಳಿದರೇನು ಪ್ರಾಣೇಶ ಶ್ರೀರಾಮಧ್ಯಾನವೊಂದಿಲ್ಲದಿರೆ ಏನು ಗಳಿಸಿದ್ದೆಲ್ಲ ಹಾನಿಯೆನಿಪುದೆಲೋ 3
--------------
ರಾಮದಾಸರು
ಮಡದಿ ಭಾಗ್ಯ ಎಂಬುವಿಯಾಕೊ ರಂಗಯ್ಯನಿನ್ನ ಬಡಿವಾರವ ಹೇಳಿಕೊಂಬೆ ಸಾಕೊ ಕೃಷ್ಣಯ್ಯ ಪ. ಬಿಡು ಬಿಡು ಸಣ್ಣ ಮಾರಿಯನ್ನು ನೀ ಮಾಡಬ್ಯಾಡ ಬಡಿವಾರವ ಹೇಳಿಕೊಂಬುವುದೇನೊಕಡುಭಾಗ್ಯ ಪುರುಷನಾಗೊ ನೀನು ಎತ್ತಿಕೊಂಡ್ಹೋಗಿ ಮಡುವು ಸೇರಿಕೊಂಡಿ ಮತ್ತೇನೊ1 ದೊರೆತನ ಹೇಳಿಕೊಂಬೆ ಸಾಕೊ ರಂಗಯ್ಯನಿನ್ನ ಕರಕರ ಹಲ್ಲು ತಿಂಬೊ ಸಿಟ್ಟು ಕೃಷ್ಣಯ್ಯಬಿರುಗಣ್ಣು ಬಿಡವೋದ್ಯಾಕಿಷ್ಟು ರಂಗಯ್ಯನಿನ್ನ ಉರಿಮಾರಿಗೆ ಅಂಜೋರೆಲ್ಲೊ ಅಷ್ಟು 2 ಧರೆ ಮ್ಯಾಲೆ ರಾಜ್ಯ ಹ್ಯಾಂಗ ರಂಗಯ್ಯನಿನ್ನ ತಗಿ ತಗಿ ಬಲುಲೀಲಾ ಕೈಯ್ಯ ಕೃಷ್ಣಯ್ಯಸುಗುಣನೆಂತೆಂಬೊ ಮತಿಯಾದುದಕ್ಕೆಜನರು ನಗದೆ ಸೈ ಸೈ ಎಂದಾರು ಬರಿಯ ಕೃಷ್ಣಯ್ಯ3 ಧೀರ ಧನವಂತನಲ್ಲೊ ಸಾಕೊ ರಂಗಯ್ಯಆದರೆ ವನದಿನಾರು ವಸ್ತ್ರವನುಟ್ಟುಕೊಂಡಿ ಯಾಕೊ ಕೃಷ್ಣಯ್ಯಚೋರನಂತಾಡಿಕೊಂಬಿ ಸಾಕೊ ರಂಗಯ್ಯಇದ ಕೇಳಿದ ವೀರರೆಂಬವರು ನಗತಾರೊ ಕೃಷ್ಣಯ್ಯ 4 ವಸ್ತ್ರವಿಲ್ಲೆಂಬೊ ಎಚ್ಚರಿಕಿಲ್ಲೊ ರಂಗಯ್ಯತೇಜಿ ಹತ್ತೇನು ಎಂದು ಬರುವಿಯಲ್ಲೊ ಕೃಷ್ಣಯ್ಯಕತ್ತಿ ಕೈ ಶೂರನೆಂಬೊದೆಲ್ಲೊ ರಂಗಯ್ಯರಾಮೇಶ ನಿನ್ನ ಹತ್ತಿಲ್ಲಿದ್ದರೆಲ್ಲ ನಗುವರೊ ಕೃಷ್ಣಯ್ಯ5
--------------
ಗಲಗಲಿಅವ್ವನವರು
ಮದ ಮತ್ಸರವ ಬಿಡದನಕಾ ವಿಧ ವಿಧದ ಸಾಧನವ ಮಾಡಲೇನೋ ಪ ವೇದ ಶಾಸ್ತ್ರಗಳೋದಲೇನು ಗಂಗಾ ಗೋದಾವರಿಯಲಿ ಸ್ನಾನವ ಮಾಡಲೇನು ಸಾಧು ಕರ್ಮವಾಚರಿಸೇನು ವಿಷ್ಣು ಪಾದದಿ ಪಿಂಡ ದಾನವ ಮಾಡಲೇನು 1 ಸನ್ಯಾಸಾಶ್ರಮ ಧರಿಸಲೇನೂ ಗೋಹಿ ರಣ್ಯಾದಿಗಳಲಿ ಮಮತೆ ಬಿಟ್ಟರೇನು ಪುಣ್ಯ ಕ್ಷೇತ್ರಕೆ ಪೋಗಲೇನು ಅನ್ನ ಕನ್ಯಾದಿ ದ್ರವ್ಯದಾನವ ಮಾಡಲೇನು 2 ಪಾಪ ಕರ್ಮವ ತೊರೆದರೇನೊ ಲಕ್ಷ ದೀಪಾರಾಧನೆ ದಿನ ದಿನ ಮಾಡಲೇನು ಶಾಪಾನುಗ್ರಹ ಶಕ್ತಿ ಇದ್ದೇನು ಪೂಜಾ ಸೋಪಸ್ಕರ ಬಹುತರವಿರಲೇನು 3 ಶ್ವಾಸ ನಿರೋಧಿಸಲೇನು ಪಕ್ಷ ಮಾಸೋಕ್ತ ಧರ್ಮ ಕರ್ಮವ ಮಾಡಲೇನು ಆಸನ ಜಯ ಸಂಪಾದಿಸಲೇನು ಉಪ ವಾಸ ವ್ರತದಿ ದೇಹ ಬಳಲಿಸಲೇನು 4 ಜ್ಯೋತಿಷ್ಟೋಮ ಮಾಡಲೇನು ಲಕ್ಷ ಶ್ರೀ ತುಳಸಿ ಅರ್ಪಿಸಲೇನು ಭೂತದಯವು ಇದ್ದರೇನು ಜಗ ನ್ನಾಥ ವಿಠಲನಂಘ್ರಿ ಪೊಂದಿದ್ದವರೊಳು 5
--------------
ಜಗನ್ನಾಥದಾಸರು
ಮದಕರಿಯ ಕವಳವಾದೆನೆಲೆ ದೇವ ಮದನಪಿತನುಳುಹದಿರೆ ಗತಿ ಯಾರು ಎನಗೆ ಪ ಪೃಥ್ವಿಯೊಳು ನೀ ಸಲಹಿದವರನನವರತ ಮತ್ತೆ ನಾನಿಂದು ಗಜದೊಡನೆ ಕಂಗೆಡುತಿರೆ ವಿ ಪತ್ತಕಡೆಗಾಣಿಸಲಶಕ್ಯವೇನಯ್ಯಾ 1 ದುರುಳಖಳ ಪ್ರಹ್ಲಾದನನಲೆಬಡಿಸುತಿರಲದನು ಪರಿಹರಿಸಲೆಲ್ಲಿಂದ ಬಂದೊದಗಿದೆ ಮೊರೆ ಇಡಲು ಕರಿಯ ಧ್ವನಿ ನಿನಗೆಂತು ಕೇಳಿತು ಶರಣಜನಬಂಧುವೇ ಬಂಧನವ ಪರಿಹರಿಸೋ 2 ಆದೊಡೇನಾಯ್ತು ನಿನ್ನಂಘ್ರಿನಂಬಿರಲು ನೀದಯದಿ ನಿನ್ನೊಳಿಂಬಿಡುವ ನೆವದೀ ಮಾಧವನೆ ಗಜವಾಗಿ ಬಂದೊದಗಿದೆಯೋ ನಾಧನ್ಯ ವೈಕುಂಠಪತಿ ಚೆನ್ನರಾಯ 3
--------------
ಬೇಲೂರು ವೈಕುಂಠದಾಸರು
ಮದನಮೋಹನ ಮಾಮನೋಹರ ಶ್ರೀದೇವ ಸಾಧುಪಾಲನಕಾಗಿ ಬಂದು ಮೇದಿನಿಯ ಭಾರಿಳುಹಿದೆ ಧ್ರುವ ಬಂದು ಯದುಕುಲದಲಿ ಜನಿಸಿದೆ ಶ್ರೀ ಕೃಷ್ಣನು ಪೂತಣಿ ನಂದಗೋಕುಲಲ್ಯಾಡಿದೆ ಮಂದರಧರ ಸುಂದರರೂಪ ಮುಕುಂದ ವೃಂದಗೋಪರ ನಂದದಲಿ ಕೂಡಿ ಚಂದ ಚಂದದಲ್ಯಾಡಿದೆ1 ದೇವಕೀ ಕಂದ ದೇವಾಧಿದೇವ ಗೋವಿಂದ ಹಾವನ್ಹಿಡಿದಿ ನೀ ಮೆಟ್ಟಿ ಫಣಿಯಲಿ ಮಾವನ ಮರ್ದಿಸಿದೆ ಸಾವಿರನಾಮ ಪಡೆದ ನೀ ಪೂರ್ಣ ಶ್ರೀಹರಿ ದೇವ ಇಂದ್ರನು ಮಳಿಯಗರೆ ಗೋವರ್ಧನವ ನೀನೆತ್ತಿದೆ 2 ವಿದುರವಂದ್ಯ ಸದಾ ಪಾಂಡವಪಕ್ಷ ಶ್ರೀಧರ ನಿರ್ಮಿಸಿ ಮಡುಹಿದೆ ವಾಸುದೇವ ನಮ್ಮಯ್ಯ ಮಹಿಪತಿಯ ಘನಸುಖದಾಯಕ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮಂದಿರವೆಲ್ಲೆ ಹೇ ಲಲನೆ ಬಂಧನವೆಲ್ಲೆ ಪ ಅಂದು ಬಯಸಿದೆ ಇಂದು ಬಂದು ಪೇಳಿದಾ 1 ಸೃಷ್ಟಿಗೊಡೆಯಾ ಶಿಷ್ಟವಿಜಯಾ ನಿಷ್ಠೆಯನ್ನೇ ಪೂರೈಸಿ ಕಷ್ಟಹರನೆಂಬ ಬಿರುದನು ಆಂತು ಶ್ರೇಷ್ಠ ದೂತನ ಕಳುಹಿಕೊಟ್ಟನು 2 ಜ್ಞಾನ ಬುದ್ಧಿಯನಿತ್ತು ಶ್ರೀ ಪವಮಾನಪಿತ ನರಸಿಂಹವಿಠಲನು ಕೊಟ್ಟು ಸಲಹುವಾ 3
--------------
ನರಸಿಂಹವಿಠಲರು
ಮಧ್ವಮುನಿಯೇ ಎನ್ನ ಹೃತ್ಕುಮುದ ಚಂದ್ರ ಪ ಅದ್ವೈತಮತಾರಣ್ಯ ದಹನ ಗುಣಸಾಂದ್ರ ಅ.ಪ. ನೊಂದೆ ಎಂಭತ್ನಾಲ್ಕು ಲಕ್ಷಯೋನಿಗಳಲ್ಲಿ ಒಂದೇ ಪ್ರಕಾರ ಸಂಚgಣೆಯಿಂದ ಒಂದೊಂದು ಕರ್ಮಗಳನರಸಿ ನೋಡಲು ಅದ- ರಿಂದ ಭವಾಬ್ಧಿಗೆ ಬಂದುಪಾಯವ ಕಾಣೆ 1 ನೀರು ಚಳಪಳಕಾಸಿ ಆರಲಿಟ್ಟು ಹೆಪ್ಪು ನೀರಿನಿಂದಲಿ ಕೊಡಲು ಬಪ್ಪುದೇನೊ ಮಾರುತೀ ನಿನ್ನ ಕೃಪೆ ಪಡೆಯದಲೆ ಉಳಿದವರ ಕಾರುಣ್ಯವಾಗಲು ಮೋಕ್ಷಸಾಧನವಿಲ್ಲ2 ಹರಿಸಿರಿಗೆ ಎರಗುವ ಸತ್ವ ಶರೀರನೆ ನಿರುತ ಎನ್ನೊಳಗಿಪ್ಪ ಮೂಲಗುರುವೆ ನೆರೆ ನಂಬಿದೆನೊ ಸ್ವಾಮಿ ವಿಜಯವಿಠ್ಠಲರೇಯನಚರಣದಲ್ಲಿರುವಂತೆ ಸಾಧ್ಯವಾಗಲಿ ಮನಸು 3
--------------
ವಿಜಯದಾಸ
ಮಧ್ವವರದಾ ಕೃಷ್ಣಾ ವಿಠಲ ಪೊರೆಯಿವಳ ಪ ಅಧ್ವರೇಡ್ಯನೆ | ದೇವ ಕಾರುಣ್ಯ ಮೂರ್ತೇ ಅ.ಪ. ಸುಸ್ತೇಶ ಸೂಚಿಸಿದ ಕ್ಲುಪ್ತಿಯನ್ನನುಸರಿಸಿಇತ್ತಿಹೆನು ಉಪದೇಶ ಚಿತ್ತಜನಪಿತನೆಅರ್ಥಿಯಲಿ ಮನ್ನಿಸುತ ಚಿತ್ತೈಸು ಬಿನ್ನಪವಕೃತ್ತಿವಾಸನ ತಾತ ಸ್ತುತ್ಯ ಸರ್ವೇಶ 1 ಸನ್ನುತ ಚರಣ ಸೀಮೆ ಮೀರಿದ ಮಹಿಮಭಾಮಿನಿಯ ಪೊರೆಯೆಂದು ಪ್ರಾರ್ಥಿಸುವೆ ಹರಿಯೇ2 ತರತಮದ ಸುಜ್ಞಾನ ಎರಡು ಮೂರ್ಭೇದಗಳುಅರಿವನೇ ಇತ್ತಿವಳ ಪೊರೆವುದೈ ಹರಿಯೆಮರುತ ಮತದಲ್ಲಿಹಳ ನಿರುತ ಕಾಯಲಿ ಬೇಕುಕರಿವರದ ಧೃವವರದ ತರಳೆಹಲ್ಯಯ ವರದ 3 ಪತಿಸೇವೆ ಹಿತದಿಂದ ಕೃತನಾಗಿಯಿವಳಿಂದಗತಿಗೆ ಸಾಧನವೆನಿಸೋ ಮರುತಾಂತರಾತ್ಮಹಿತ ವಹಿತವೆರಡರಲಿ ರತಿ ಸಮತೆ ಪ್ರದನಾಗಿಕೃತ ಕೃತ್ಯಳೆಂದೆನಿಸೊ | ಕೃತಿರಮಣದೇವ 4 ಜೀವ ಅಸ್ವಾತಂತ್ರ ದೇವ ನಿಜ ಸ್ವಾತಂತ್ರಜೀವ ಜಡರೂ ದೇವರಾಧೀನ ವೆಂಬಭಾವನೆ ತಿಳಿಸು ಗುರುಗೋವಿಂದ ವಿಠಲಯ್ಯಸಾವಧಾನದಿಯಿವಳ ಕೈಯನೇ ಪಿಡಿಯೋ 5
--------------
ಗುರುಗೋವಿಂದವಿಠಲರು
ಮನವ ಶೋಧಿಸದೆಲೆ ಡಂಭದಿ ದಿನದಿನದಲಿ ಕರ್ಮಮಾಡೆ ತನುವಿಗೆ ಬಲು ಕ್ಲೇಶವಲ್ಲದೆ ಅನುಕೂಲವೇನು ಪ ಕಾಮಕ್ರೋಧ ಲೋಭಮೋಹ ಮದ ಮತ್ಸರಗಳನು ಬಿಡದೆ ನಾಮಗಳನು ಬಳೆದು ಮರೆದರೆ ಶ್ರೀ ರಾಮನರಿಯನೆ 1 ಈಶ ಸೇವೆಗೆಂದು ಬಹಳ ಮೋಸದಿಂದ ಧನವ ಗಳಿಸಿ ಈಶನನ್ನು ಮರೆವ ನರನನು ಜಗದೀಶನರಿಯನೆ 2 ಪರಸತಿಯರ ಸರಸಗಳಿಗೆ ಜರಿದು ಮನವ ಮರುಳು ಮಾಡೆ ಸರಳತನದಿ ದಾನ ಮಾಡಲು ನರಹರಿಯು ಅರಿಯನೆ3 ಒಡಲು ಪೊರೆಯೆ ಸಡಗರದಲಿ ಮಡಿ ಮಡಿಯೆಂದು ನುಡಿವ ಮೂಢನ ಪೊಡವೀಶನರಿಯನೆ4 ಪನ್ನಗಾರಿವಾಹನ ಪ್ರಸನ್ನವದನ ಕೃಷ್ಣಮೂರ್ತಿಯ ಉನ್ನತ ಮಹಿಮೆಗಳನರಿತಗೆ ಇನ್ನೇನು ಬೇಕು 5
--------------
ವಿದ್ಯಾಪ್ರಸನ್ನತೀರ್ಥರು
ಮನವೆ ನಿನಗೇಕಿನ್ನು ಲಜ್ಜೆದೋರದು ಬಳಿಕಕನಲಿ ನಿಂದಿಸುವೆ ಜನರನಿತರಾ ಪಘನಘೋರಮಲಜನಿತ ತನುವಿನೊಳುನೀನಿರುತಲನವರತ ತೊಳಲಬಹುದೇ ಬರಿದೆ ಅ.ಪಓದಿ ಗ್ರಂಥಗಳನು ಪಠಿಸಿಯದರರ್ಥವನುಬೋಧಿಸುವೆ ಪರರಿಗೆಲ್ಲಾ ಸೊಲ್ಲಾಸಾದರದಿ ತನ್ನಿಷ್ಠೆಯಲಿ ನಡೆಯುತನುಭವವನೀದಿನಕು ತಂದುದಿಲ್ಲವಲ್ಲಾಬೋಧೆವಡದಿಹ ಯೋಗಿಗಳ ಜರೆವ ಬಗೆಯಲ್ಲಿನೀ ದೊಡ್ಡ ಜಾಣನಲ್ಲಾ ಬಲ್ಲಸಾಧಿಸಿದ ವಿದ್ಯವನು ವಾದದಲಿ ನೀಗಾಡಿಬೀದಿಯಲಿ ನಿಂತೆಯಲ್ಲಾ ನಲ್ಲಾ 1ಧನಧಾನ್ಯ ದಾಸ ಕತಿಯೊಳಗೊಂದಿಕೊಂದಿರುವಜನರಲವಿವೇಕ ವಿಡಿದೂ ಜರಿದೂತನು ಪಾಶ ಬದ್ದದಲಿ ನರಕ ಭಾಜನರಾಗಿದಿನವ ಕಳೆಯುತ್ತಲಿಹರೂ ುವರೂಎನುತಲನುತಾಪದಲಿ ನೀ ಮತ್ತೆಯನವರತಧನಿಕರಿದ್ದೆಡೆಗೆ ಬಂದೂ ನಿಂದೂಧನವ ಕೊಡಿ ಸತ್ಪಾತ್ರನಾನೆಂದು ವೊಂದುವರೆಹಣವ ಕೈಯೊಡ್ಡಿ ಕೊಂಡೂ ಉಂಡೂ2ತೋರುವ ಜಗತ್ತಿದುವೆ ಪರಮಾತ್ಮನಿಂದಲೆತೋರುವದು ಭ್ರಮೆಗೆ ಹಲವೂ ಕೆಲವೂತೋರದಡಗದ ನಿತ್ಯ ವಸ್ತುವೆ ತಾನೆÀಂದುಧೀರತನದಿಂದಲಿರವೂ ಅರಿವೂಈ ರೀತಿಯಲಿ ತಿಳಿದು ಮುಕ್ತನಾಗದೆ ಬರಿಯಕ್ರೂರ ಬುದ್ದಿಯಲಿ ುರವೂ ಮರವೂದಾರಿಗಾಣದೆ ನಿನ್ನ ಅನುಭವವ ನೀ ಮತ್ತೆಹೊರುವುದೆ ನಿನಗೆ ಮತವೂ ದೃಢವೂ 3ಇಂದ್ರಿಯಂಗಳ ಸುಖವನೆ ಮೆಚ್ಚಿ ನೀನವರಹಿಂದುಗೊಂಡೆರಗಿ ಬಿಡದೆ ಪಡೆದೆಸಂದ ಭೋಗದ ಸವಿಯನೆನನೆನದು ಮತ್ತದನುಮುಂದು ಬೇಕೆಂದು ಹೊರೆದೆ ಬೆರೆದೆಕಂದಿ ಕಾಮಕ್ರೋಧದಗ್ನಿಯಲಿ ನೀ ಬೆಂದುಹೊಂದಿ ನೀಂ ಜನ್ಮಪಿಡಿದೆ ಮರೆದೆಹಿಂದುಗಳೆವಾತ್ಮನನು ಹಿತವೆಂದು ಮಿಥ್ಯವನುನೊಂ[ದು] ನೋಡದೆ ಬರಿದೆ 4ಚದುರ ವಿದ್ಯವ ಕಲಿತೆನೆಂಬುದೊಂದೇ ಘನತೆಸುದತಿ ಸಂಪತ್ತಿನಲ್ಲೆ ರಮತೆಒದಗಿ ಬಹಳೋದ್ಯೋಗಗಳ ಮಾಡಿ ಬಹುದಿವಸಬದುಕಿದವ ನೆಂಬುದರಲೆ ುರತೆಇದ ನಾನು ಸಂಪಾದಿಸಿದೆನೆನ್ನ ಶೌರ್ಯತೆಗೆಇದಿರಿಲ್ಲವೆಂದು ಇದಕೆ ಬೆರತೆಮುದದಿ ಗುರು ವಾಸುದೇವಾರ್ಯವೆಂಕಟರಮಣನೊಡಮೂಡದಿತರ ನಡತೆ ಜಡಕೆ 5
--------------
ತಿಮ್ಮಪ್ಪದಾಸರು
ಮನವೇ ನೀನೆಚ್ಚರಿಕೆ ಬಿಡದಿರು ಅನುದಿನವು ಹರಿಧ್ಯಾನದೊಳಗಿರು ಪ ವನಿತೆ ಧನಧಾರಿಣಿಯ ನೆಚ್ಚಿ ತನುವೆ ತಾನೆಂಬುದನುಚಿತವು ಅ.ಪ ಬರಿಯಕೈಯಲಿ ಭೂಮಿಗಳಿಸಿದೆ ದುರಿತಭಾರವ ಧರಿಸಿರ್ಪೆ ನರರೆ ಹರಿಸುವರಾರೋ ಕಾಣಿರ ಅರಿತುಕೊಂಡಿರೆ ತಿಳಿಸಿರೈ 1 ಕಾಯವಸ್ಥಿರ ಹೇಮಸಂಸ್ಕøತಿ ಮಾಯಾಪಾಶದ ಬಲೆಗೆ ಸಿಲ್ಕಿ ನಾಯಿನರಿಯಂದದಲಿ ತೊಳಲಿ ಸಾಯವರ ಕಂಡಳುವದೇಕೋ 2 ಜಾತಿಧನವಧಿಕಾರ ಖ್ಯಾತಿಗೆ ಆತುರದೊಳಭಿಮಾನ ಪಡುವೇ ಪಾತಕರೆ ಹಿಂಜರಿಯದಂತೇ ಪ್ರೀತಿಯಿಂ ಪರಪೀಡೆಗೈವೇ 3 ಪೊಡವಿಯೊಳ್ ಪೆಣ್ ಬಾಲ ವೃದ್ಧರು ಬಡವರಾರ್ತರು ಕುಂಟಕುರುಡರು ಎಡೆಯ ಜೀವಿಗಳನ್ನು ಕರುಣದಿ ಕಾಣೆಲೋ ಕಡುಜಾಣನೇ 4 ಸತ್ತಮೇಲೇನೆಂದು ಯೋಚಿಸು ಮುತ್ತಿ ಕತ್ತಿಯೊಳಿರಿವರೈ [ಮ]ತ್ತಕ್ಷಣದ ಫಲಕಾಶೆಪಡದಿರು ಸತ್ಯವಂ ಪಿಡಿ ನಿತ್ಯವೂ 5 ಯಮುನೆ ಹೊಕ್ಕರು ಯಮನು ಬಿಡನೂ ಅಮಮ ನರಕದೊಳಿಳಿಪರೈ ರಮಾರಮಣನ ಒಲುಮೆಗಾಗಿ ಶ್ರಮಿಸಿ ಪರರುಪಕಾರಿಯಾಗೋ6 ಪತಿತಪಾವನ ಜಾಜಿಕೇಶವ ನತಿಶಯದಿ ತಾ ಜಗವ ಪಾಲಿಪ ಚತುರ್ವೇದ ಶ್ರುತಿ ಪ್ರಮಾಣವ ಮತಿಯುತರು ಮೀರುವರೆ ಮರುಳೇ 7
--------------
ಶಾಮಶರ್ಮರು
ಮನವೇ ಮರೆವರೇನೊ ಹರಿಯಾ ಪ ಬಹು ಜನುಮಗಳಲ್ಲಿ ಬಟ್ಟ ಬವಣಿಗಳರಿಯಾ ಅ.ಪ. ವಿಷಯ ಚಿಂತನೆ ಮಾಡಸಲ್ಲ ಮೇಷ ವೃಷನನಾದನು ಹಿಂದೆ ಪೌಲೋಮಿ ನಲ್ಲ ಝಷ ಕೇತುವಿನ ಮ್ಯಾಳ ಹೊಲ್ಲ ನಿರಾ ಶಿಷನಾಗು ಯಮರಾಯನೆಂದೆಂದೂ ಕೊಲ್ಲ 1 ಧನವೆ ಜೀವನವೆಂಬಿ ನಿನಗೆ ಸುಯೋ ಧನ ನೋಡು ಧನದಿಂದ ಏನಾದ ಕೊನೆಗೆ ಅನಿರುದ್ಧ ದೇವನ ಮನೆಗೆ ಪೋಪ ಘನ ವಿಜ್ಞಾನವನೆ ಸಂಪಾದಿಸು ಕೊನೆಗೆ 2 ಹರಿದಾಸನಾಗಿ ಬಾಳೋ ಗುರು ಹಿರಿಯರ ಪಾದಕಮಲಕೆ ನೀ ಬೀಳೋ ನರರ ನಿಂದಾಸ್ತುತಿ ತಾಳೋ ದೇಹ ಸ್ಥಿರವಲ್ಲ ಸಂಸಾರ ಬಹು ಹೇಯ ಕೇಳೋ 3 ಹಲವು ತೀರ್ಥಗಳಲ್ಲಿ ಸ್ನಾನ ಮಾಡೆ ಮಲ ಪೋಯಿತಲ್ಲದೆ ನಿರ್ಮಲ ಜ್ಞಾನ ಫಲಿಸದೆಂದಿಗು ಹೀನ ಬುದ್ಧಿ ಕಳೆದು ಸೇವಿಸು ಸಾಧುಗಳನನುದಿನ 4 ಜಿತವಾಗಿ ಪೇಳುವೆ ಸೊಲ್ಲಾ ಹರಿ ಕಥೆಯಲ್ಲಿ ನಿರತನಾಗಿರು ಲೋಹ ಕಲ್ಲಾ ಪ್ರತಿಮೆ ಪೂಜಿಸಿದರೇ ನಿಲ್ಲ ಪರೀ ಕ್ಷಿತನೆಂಬ ರಾಯ ಈ ಮಹಿಮೆಯ ಬಲ್ಲಾ 5 ಜ್ಞಾನೇಚ್ಛಾ ಕ್ರಿಯಾ ಶಕ್ತಿ ತ್ರಯವಾ ತಿಳಿ ದಾನಂದ ಪಡು ಬಯಸದಿರುಭಯವಾ ಸಾನುರಾಗದಿ ಬೇಡು ದಯವಾ ನೀ ಮ ದ್ದಾನೆಯಂದದಿ ಚರಿಸು ಬಿಟ್ಟು ಭಯವಾ 6 ಭಾವ ಕ್ರಿಯಾ ದ್ರವ್ಯಾದ್ವೈತ ತ್ರಯ ಆವಾಗ ಚಿಂತಿಸು ಭೂಮ್ಯಾದಿ ಭೂತಾ ಜೀವಿಗಳೊಳು ಜಗನ್ನಾಥ ವಿಠಲ ಗಾವಾಸ ಯೋಗ್ಯವೆಂದರಿಯೋ ಸಂತತಾ 7
--------------
ಜಗನ್ನಾಥದಾಸರು
ಮನಸಿನನುತಾಪವನು _ ಪರಿಹರಿಸು _ ಹರಿಯೇ ಪ ವನಜ ನಾಭನು ನೀನೇ ಮನದ ಪ್ರೇರಕನಲ್ಲವೇ ಅ.ಪ. ಅನುದಿನದಿ ಧನವನಿತೆ _ ಎಂತೆಂಬ ಕಾನನದಿ ಮನಸು ಮಾಡೀ ಬಹಳ _ ಶ್ವಾನನಂದದಿ ತಿರಿದೇ ಕನಸಿಲಾದರು ನಿನ್ನ _ ಧ್ಯಾನವನು ಮಾಡದೆಲೆ ಮನುಜ ಪಶುವೆನಿಸಿದೆನು _ ದೀನವತ್ಸಲ ಸ್ವಾಮಿ 1 ಸಂಸಾರ ವೆಂಬುವುದು _ ಹಿಂಸೆರೂಪವೆಸಿದ್ಧ ಹಂಸರೂಪಿಯ ಮರೆತ _ ಸಂಶಯಾತತಜನಕೆ ಧ್ವಂಸ ಗೈಸಿ ವಿಷಯ _ ವಾಸನೆಯ ತರಣಿಯನು ಶೌರಿ _ ದಾಸನೆನ್ನನು ಮಾಡಿ2 ಜ್ಞಾನ ತಿರುಳನು ತಿಳುಹಿ _ ಧ್ಯಾನಬಗೆಯನು ಅರುಹಿ ಮಾನಾಭಿಮಾನವನು _ ನಿನಗೆ ಸಮರ್ಪಿಸಿ ಸು ಜ್ಞಾನಿಗಳ ಸಹ ಶ್ರೀ ಕೃಷ್ಣವಿಠಲನ ನಿತ್ಯ ಗಾನದಲಿ ಮೆಚ್ಚಿಸುವ ಭಾಗ್ಯ ಶೀಲನ ಮಾಡೀ 3
--------------
ಕೃಷ್ಣವಿಠಲದಾಸರು
ಮನುಜಶರೀರವು ವರವೊ ದುರ್ಲಭವೊ ಪ ಭವಸಾಗರವನು ದಾಂಟಲು ನೌಕೆಯಿದೊ ಭವಭಾಧೆಯ ನೀಗಲು ಇದು ಸಾಧನವೊ ಪಾವನಸ್ವರೂಪಜ್ಞಾನವನರಿಯಲು ದೇವನೆ ತಾನೆನಿಸುವನೊ ಆ ನರನು 1 ತಿಳಿ ನೀನೀಗಲೆ ನಾನಾರೆಂಬುದ ಮನುಜಾ ಅಳಿವೀ ದೇಹದೊಳೇ ತಿಳಿಯಲುಬಹುದಿದನಾ ಉಳಿದ ದೇಹಗಳು ಹಲವಾರಿರುತಿರೆ ಫಲವೇನೈ ತಿಳಿವಿರದೇ ತಿಳಿ ಭರದೇ 2 ಪಾಪಿ ಜನ್ಮವು ಎಂದು ಶಪಿಸಲು ಬೇಡಾ ತಾಪನೀಗಲು ಇದೇ ದಾರಿಯೈ ನೋಡಾ ಭವ ಕಡಿಯೇ 3
--------------
ಶಂಕರಭಟ್ಟ ಅಗ್ನಿಹೋತ್ರಿ
ಮನೆಗೆ ಬಾರೋ ರಂಗ ಮನಸಿಜಯ್ಯನೆ ನೆನವು ಬಿಡದು ಎನ್ನ ಕಣ್ಣಿನೊಳಗೂ ನಿನ್ನ ಪ ಮನಗೆ ಬಾರೋ ರಂಗ ಮನೆಗೆ ಬಾರೋ ಕೃಷ್ಣ ಮನಗೆ ಬಾರೋ ರಾಮ ಅ.ಪ ಮನಗೆ ಬಂದರೆ ನಿನ್ನ ಮಹಿಮೆಯ ಪಾಡುತ ಮನ ದಣಿವಂದದಿ ಕುಣಿದೇನೊ ರಂಗಯ್ಯ 1 ಮನೆಯು ನಿನ್ನದು ಎನ್ನ ತನುವು ನಿನ್ನದು ಮುನ್ನ ಧನವು ನಿನ್ನದು ಎನ್ನ ಘನವು ನಿನ್ನದು ರನ್ನ 2 ದರಹತಿತಾನನ ಸರಸಿಜನಯನ ವರದವಿಠಲ ಪುಲಿಗಿರಿ ವರಸದನ 3
--------------
ವೆಂಕಟವರದಾರ್ಯರು