ಈ ತನು ನೀನಲ್ಲಾ ನೀನಲ್ಲಾ |ತನುವಿನ ಗುಣವು ಇದುವೆ ಎಲ್ಲಾ ಪ
ರೂಪಕ ಬಂದಿತು ಸ್ಥೂಲ ಸೂಕ್ಷ್ಮ |ರೂಪವು ಒಂದೇ ಬೀಜದ ಮೂಲಾ 1
ಕಾರಣ ದೇಹದೊಳಗೆ ಒಂದೇ | ಮಹಾ ಕಾರಣದಲಿ ನೋಡಿಂದೇ 2
ತನುಮನ ಧರ್ಮದ ಜ್ಞಾನವ ಬಿಟ್ಟು |ಉನ್ಮನದಿ ನೀ ಲಕ್ಷಿಸು ಲಕ್ಷಿಟ್ಟು 3
ತನುಮನ ಕರಣಗಳ್ ನಿನಗೆ ಬ್ಯಾರೆ |ತನುಮನ ನಿನಗಿಹುದೆಂದೆನಲಾರೆ 4
ಗುರುಭವತಾರಕ ದೇವನು ಒಲಿದರೆ |ತೋರುವನರಿವಿನ ನಿಜ ಭಾವಾ 5