ಒಟ್ಟು 538 ಕಡೆಗಳಲ್ಲಿ , 72 ದಾಸರು , 489 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪರಮಾನಂದದೊಳಿರುವ ಪರಿಯನರಿ ಗರುವ ಬೇಡ ಹೇ ಮನಸಾ ಪ ಸಿರಿವರ ನಾರಾಯಣ ನಾಮಾಮೃತ ನರಘಳಿಗೆಯು ಮರೆಯದೆ ನೆನೆ ಮನಸಾಅ.ಪ ಇಂದಿರೆಯರಸನ ಸುಂದರ ಚರಣಗ ಳಂದದ ಶ್ರೀ ತುಳಸಿಯ ದಳದಿ ಚಂದದೊಳರ್ಚಿಸಿ ಕುಂದದ ಭಕುತಿಯೊಳಾ ನಂದದೊಳಿರು ಹೇ ಮನಸಾ 1 ಸಿರಿ ರಾಮನ ಮಂಗಳ ಮೂರ್ತಿಯ ಘನ ಕೊರಳೊಳು ಹಾರಗಳರ್ಪಿಸುತ ಪರಿಪರಿ ಪರಿಮಳ ಪುಷ್ಪಗಳಿಂದಲಿ ಕರುಣಾಕರನನರ್ಚಿಸು ಮನಸಾ2 ಸರ್ವಾಂತರ್ಗತ ಜಗದುದರನ ನೀ ನಿರ್ಮಲ ಪೀಠದಿ ಕುಳ್ಳಿರಿಸಿ ಸರ್ವಷಡ್ರಸೋಪೇತ ಸುಭೋಜನ ಸರ್ವಾತ್ಮನಿಗರ್ಪಿಸು ಮನಸಾ 3 ಸುಫಲ ಕ್ಷೀರ ತಾಂಬೂಲಗಳರ್ಪಿಸಿ ಸಫಲಗೊಳಿಸು ಜನ್ಮವ ಮನಸಾ ಅಪಾರಮಹಿಮನ ಗುಣಗಳ ಕೀರ್ತಿಸಿ ಕೃಪಾನಿಧಿಯ ನಮಿಸೆಲೊ ಮನಸಾ 4 ಅಗಣಿತ ಮಹಿಮನಿಗಾರ್ತಿಗಳರ್ಪಿಸಿ ಮಿಗೆ ಭಕ್ತಿಲಿ ನಮಿಸೆಲೊ ಮನಸಾ ಸುಗುಣಮಣಿಯು ರಘುರಾಮವಿಠಲ ನಿ ನ್ನಗಲದೆ ಹೃದಯದಲಿಹ ಮನಸಾ5
--------------
ರಘುರಾಮವಿಠಲದಾಸರು
ಪರಾಕು ಮಹಾಸ್ವಾಮಿ ಸಜ್ಜನಪ್ರೇಮಿಪ. ಕ್ಷೀರಸಾಗರಶಯನ ನಿವಾಸಾಪಾರಗುಣಗಣಾಶ್ರಯ ಚಾರು ಪದಾಬ್ಜದ್ವಯ ದನು- ಜಾರಿ ಧನಂಜಯಪ್ರಿಯ ಮದವಾರಣಕೃತನಿರ್ಭಯ ನಮ್ಮ ದೂರನು ಲಾಲಿಸು ಚಿನ್ಮಯ ಜಯ1 ದುಷ್ಟ ನಿಶಾಚರರಟ್ಟುಳಿ ಘನ ಕಂಗೆಟ್ಟುದು ಸುರಮುನಿಗಣ ಆ ಭ್ರಷ್ಟರು ಮಾಡುವ ನಿಷ್ಠುರಕೆ ಮೈಗೊಟ್ಟೆವು ಸಂಕರ್ಷಣ ನಾವಿ- ನ್ನೆಷ್ಟೆಂಬುದು ದುರ್ಗುಣವಶ ಬಿಟ್ಟೆವು ಸುರಪಟ್ಟಣ ನಮ್ಮ ಕಷ್ಟವು ಪದಕರ್ಪಣ ಪರಾಯಣ 2 ಅಂತರಂಗ ಬಹಿರಂಗ ಭ್ರಷ್ಟದನುಸಂತತಿ ಸಂತತಿ ಭಾರಿ ಬಲು ಧುರೀಣರ್ಸಂತಾಪಿಪರು ಮುರಾರಿ ನಮ್ಮ ಶೌರಿ ಜಗ- ದಂತ ವಿಹಾರಿ ನಿರಂತ ಪರಂತಪ3 ಚೆನ್ನಕೇಶವ ಚರಾಚರಾತ್ಮ ಚೈತನ್ಯರೂಪ ಶ್ರೀರಂಗ ನಮ್ಮ ಸನ್ನುತ ಶುಭಾಂಗ ಸ- ತಿಮಿರ ಪತಂಗ ಸುಪ್ರ ವಿಹಂಗ ತುರಂಗ4 ಕಾಲನಿಯಾಮಕ ಪ್ರಾಣ ನಿ ನ್ನೋಲಗ ಸೇವಕರಾಳಿಯೂಳಿಗವ ಕೇಳು ತ್ರಿಲೋಕತ್ರಾಣ ನತ ಪಾಲ ಪರೇಶ ಪುರಾಣ ಶ್ರೀಲೋಲ ವಿಗತ ಪರಿಮಾಣ ಹೃದ- ಯಾಲಯಮಣಿ ಲಕ್ಷ್ಮೀನಾರಾಯಣ 5
--------------
ತುಪಾಕಿ ವೆಂಕಟರಮಣಾಚಾರ್ಯ
ಪರಿಪಾಲಿಸು ದಯದಿ ನಿರುತ ದಾಸಪುರಂದರ ಗುರುವೆ ಧರ್ಮಪಥವನು ತೋರಿ ಉದಾರಿ ಪ ಸುರಮೌನಿಯೆ ಮುದದಿ ಹರಿನಾಮವಾ ಘನ ಬೀರುತಾ ನಿರಯಾ ಪಾತ್ರರ ಸಲಹಿದಿನೀ 1 ಬಾಣಾಲಕ್ಷಕೆ ಪಾದನ್ಯೂನ ಕವನ ನೀ ವಿರಚಿಸುತಾ ವನಜನಾಭನ ಸ್ತಪಿಸಿದ ನೀ 2 ಶಿರಿಶಾಮಸುಂದರನಾ ಚರಣಾಬ್ಜಕಾರಡಿಯಂದದಿ ಚರಿಪ ಜ್ಞಾನಿಯೆ ನಮಿಸುವೆನು 3
--------------
ಶಾಮಸುಂದರ ವಿಠಲ
ಪಾದ ಧ್ರುವ ಸಕಲಾತ್ಮನೆಂದು ಶ್ರುತಿ ಪ್ರಕಟಿಸಿ ಪೇಳುತಿದೆ ವಿಕಟಿತಗೊಂಬುದೇನು ಕಾಕ ಬುದ್ಧಿಂದ 1 ಚೆನ್ನಾಗಿ ಸಾರುತಿದೆ ನಾನ್ಯ:ಪಂಥವೆಂಬ ಮಂತ್ರ ಭಿನ್ನವಿಲ್ಲದೆ ನೋಡು ನಿನ್ನೊಳಗೀಗ 2 ಸರ್ಕನೆ ಮಾಡಿಕೊಂಬುದು ಆರ್ತಿ ಉಳ್ಳವರ ಸಂಗತಿ ಬ್ಯಾಗ ತರ್ಕಿಸಬ್ಯಾಡಿತರ ಕೂಡ ಮರ್ಕಟ ಬುದ್ಧಿಂದ 3 ಇಡಿದು ತುಂಬಿಹ್ಯ ವಸ್ತು ಪಡಕೋ ಗುರುಕೃಪೆಯಿಂದ ಎಡಬಲ ನೋಡದೆ ಈಗ ಕೂಡು ನೀ ಬ್ಯಾಗೆ 4 ಪಾದ ಭೇದಿಸೊ ನೀ ಬ್ರಹ್ಮಬೋಧ ಸಾಧುಸದ್ಗೈಸುವದಾ ಸದ್ವಸ್ತುದ 5 ಎಲ್ಲಾರೊಳಿಹ ನಮ್ಮ ಫುಲ್ಲಲೋಚನ ಶ್ರೀಕೃಷ್ಣ ಸುಲಭವಾಗಿಹ ಬಲ್ಲವರಿಗೆ 6 ಬಾಹ್ಯಾಂತ್ರ ಪರಿಪೂರ್ಣ ಮಹಿಪತಿ ಗುರುನಿಧಾನ ಇಹಪರಾನಂದ ಘನ ಸಾಯೋಜ್ಯ ಘನ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಪಾದ ನೆನೆವ ದಾಸರ ಕಾಮಧೇನು ನೀನಹುದೊ ಪ ಎಂದು ಕಾಂಬೆನು ನಿನ್ನ ಸುಂದರ ಮೂರುತಿಯ ನೆಂದು ಬಯಸುತಲಿರ್ದೆ ಸಂಧಿಸಿತಿಂದಿಗೆ 1 ಕಮಲನಾಭನೆ ನಿನ್ನಯ ಅಮರ ಮಹಿಮೆ ಕಾಣ್ವ ಭ್ರಮೆಯಪಡುತಲಿರ್ದೆ ಕ್ರಮದಿ ಸಾಧಿಸಿತಿಂದು 2 ಚಿನುಮಯ ಶ್ರೀರಾಮ ಘನ ಮಂದಮತಿ ನಾನು ನೆನವು ಮರೆದೆ ಕ್ಷಮಿಸಿ ಕನಿಕರದಿ ಕಾಯೊ 3
--------------
ರಾಮದಾಸರು
ಪಾದ ಸನ್ನುತ ರೂಪಕಾರಣಾನಂತ ಪುಣ್ಯಾ ಸತ್ಪಥಾಚಾರ ಸಜ್ಜನ ಶರಣ್ಯಾ ಕೀರ್ತಿವಿಸ್ತಾರ ಶೋಭಿತವರೇಣ್ಯಾ ನನ್ಯಾ 1ಸಂತತಾನಂದ ಘನ ಸಮಸ್ಯನಿದಾನಚಿಂತಿತಾರ್ಥದ ಶೀಲ ಚಿತ್ತಶುದ್ಧಿಯ ಲೀಲಶಾಂತ ಸದ್ಗುಣ ಭೂಪ ಸುಲಲಿತಾಮೃತ ಭಾಷಕಂತುಮದ ಪರಿಹಾರಕಾ ಆದಿಮಧ್ಯಾಂತ ರಹಿತಾಕಾರಕಾ ಆಶ್ರಿತಸ್ವಾಂತ ಸಂಸ್ಕøತಿ ತಾರಕಾಲೋಕಾ 2ತಾಪಸ ಜನೋತ್ತುಂಗ ತಾರತಮ್ಯ ವಿಭಂಗತಾಪತ್ರಯಾಳಿ ಹರ ದಳಿತ ಲಿಂಗ ಶರೀರಸ್ವಾಪಾದಿ ಕುಲದೂರಸ್ವಾಶ್ರಿತ ಜನೋದ್ಧಾರಧೀಪದಸ್ಫುರಣ ದೀಪ ಗೋಪಾಲತಾಪ ಸಮುದಯವಿಲಾಪ ದೇಶಿಕ ಪರೋಪಕೃತಿ ಕೃತ್ಪ್ರತಾಪಾಲೇಪ 3
--------------
ಗೋಪಾಲಾರ್ಯರು
ಪಾರ್ವತಿಪತಿ ಆರ್ವರಾಭಿಷ್ಟಿಯ ಸರ್ವಪೂರಿಸಿ ತನ್ನಿಜಪದ ಸೇವಕನಿಗೆ ಕರುಣವ ಬೀರ್ವನಿಗೆ ಚರಿತ ಆ ಪೂರ್ವನಿಗಾರತಿಯಾ ಬೆಳಗಿರೇ ಸೋ 1 ತಾರ್ಕು ಪದೇಶಿತಾ ಸರ್ಕನೆ ಕರ್ಕಶ ಮಾರ್ಗವ ಬಿಡಿಸುವ ಅತಕ್ರ್ಯನಿಗೆ ಅಘತಮರ್ಕನಿಗೆ ಸುರಸ ಪರ್ಕನಿಗಾರತಿಯಾ ಬೆಳಗೀರೇ ಸೋ 2 ಅಂಬುಶಶಿಬಿಂಬಾಂಕಿತ ಜಟೆ ಅಂಬಕತ್ರಯ ಶಾಂಭವ ವಾಸೆ ಚಿದಂಬರಗೆ ಗಜಚರ್ಮಾಂಬರಗೆ ಹರಸಿ ಶ್ವಂಭರಗಾರತಿಯ ಬೆಳಗಿರೇ ಸೋ3 ಕರ್ಪುರ ಗೌರವತನು ತೋರ್ಪುವ ಸರ್ಪಾಭರಣಗಳಲಿ ಶೋಭಿಸುತಿರ್ಪನಿಗೆ ಹತ ಕಂರ್ದಪನಿಗೆ ಸುಜ್ಞಾನ ದರ್ಪಣೆಗಾರತಿಯಾ ಬೆಳಗೀರೆ ಸೋ 4 ಕುಂದದಿ ಆನಂದದಿ ಮಹೀಪತಿ ನಂದನ ಸಲಹುವ ಘನ ಅಶಿತ ಕಂದರಿಗೆ ಪೂಜಿತ ಇಂದರಗೆ ಸದ್ಗುಣ ಸಾಂದರ ಗಾರತಿಯಾಬೆಳಗೀರೆ ಸೋ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಪಾಲಿಸಯ್ಯ ಪೂರ್ಣ ಲೋಲ ಲಕ್ಷುಮಿರಮಣ ಧ್ರುವ ಮುನಿವರ ಪಾಲಕ ಘನ ಸುಖದಾಯಕ ಕನಕಾಂಬರಧರ ಕಸ್ತೂರಿ ತಿಲಕ ಅನಾಥ ಬಂಧು ಅರ್ತ ರಕ್ಷಕ 1 ಸಮಸ್ತಕೆ ನೀ ದಾತ ವಿಮಳ ವಿರಾಜಿತ ಕಮಲ ಸಂಭವಸುತ ಸೋಮಜು ವರಪ್ರಿಯ ಕಾಮಪೂರಿತ 2 ಅನಂಗಜನಕ ಅಣುರೇಣುವ್ಯಾಪಕ ದೀನ ಮಹಿಪತಿಗೆ ನೀ ಬೀರೊ ಸ್ವಾನಂದಸುಖ ಅನಂತಕೋಟಿ ಬ್ರಹ್ಮಾಂಡನಾಯಕ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಪಾಲಿಸೇ ಪದ್ಮಾಲಯೇ ಪಾಲಿಸೆ ಪ. ಪಾಲಿಸು ನಿನ್ನನೆ ಓಲೈಸಿತಿರುವೀ ಬಾಲೆಯರಭಿಮತ ಪಾಲಿಸುತೊಲವಿಂಅ.ಪ. ಅಂಬುಜನಾಭನ ರಾಣಿ ನಿನ್ನ ನಂಬಿದೆ ಪಲ್ಲವರಾಣಿ ಚನ್ನೆ ಕಂಬುಕಂಧರೆ ಫಣಿವೇಣಿ ಎನ್ನ ಬೆಂಬಿಡದಿರು ಕಲ್ಯಾಣಿ ಜನನೀ ಜಂಭಾರಿ ಪೂಜಿತೆ ಶಂಬರಾರಿಯಮಾತೆ ಶಂಭುವಂದಿತ ಪಾದಾಂಬುಜಕ್ಕೆರಗುವೆ 1 ಘನ ಸತ್ಯವ್ರತ ಪಿಡಿದರಿಯೆ ತಾಯೇ ಮತ್ತೇಭಗಾಮಿನಿ ಮರೆಹೊಕ್ಕೆ ನಿನ್ನನೇ ನಿತ್ಯಸತ್ಯದಿ ನಿನ್ನ ಭಜಿಸುವೆ ಜನನೀ 2 ಘೋರ ಋಣದ ಭಾದೆ ಕಳೆದು ಎನ್ನ ಪಾರುಗಾಣಿಸು ಮೋದವಡೆದು ಮುನ್ನ ದುರಿತವಿದೆನ್ನನು ಬಿಡದು ತಾಯೆ ವರಶೇಷಗಿರಿ ದೊರೆಯರಸಿ ನಿನ್ನಡಿತಾವರೆಗೆನ್ನನಾರಡಿಯೆನಿಸೆಂದು ಬೇಡುವೆ3
--------------
ನಂಜನಗೂಡು ತಿರುಮಲಾಂಬಾ
ಪಾಲಿಸೈ ಗೋಪಾಲರಾಯಾ ಶೀಲ ಭಕುತಿ ಜ್ಞಾನವ ನಿತ್ಯ ಸಲಿಸುತ ಪ್ರಸನ್ನನಾಗಿ ಪ ಓಡಿಸಿ ವಿಷ್ಣುವ ನೀಡು ವೈರಾಗ್ಯವ ಬೇಡುವೆ ನಾ ಕೃಪೆ ಮಾಡಿ ಗತಿ 1 ಆರ್ತರಭೀಷ್ಟೆಯ ಪೂರ್ತಿಪದಾನಿ ಶುಭ ಮೂರ್ತಿಸದಾ 2 ಶಾಮಸುಂದರ ಸ್ವಾಮಿಯ ನಿಜ ದಾಸ ಮೌನಿಯ ಘನ ಪ್ರೇಮಾನಿಸ್ವಿತಾ 3
--------------
ಶಾಮಸುಂದರ ವಿಠಲ
ಪಾಹಿ ಶ್ರೀ ಗುರುರಾಘವೇಂದ್ರ ಅಮಿತಗುಣ ಸಾಂದ್ರ ಯತೀಂದ್ರ ಪ ಶ್ರೀದ ಮೋದತೀರ್ಥ ಮತವಾರಿಧಿ ವಿಧು ವಸುಧಾ ಸುವಿಬುಧಾ 1 ಅಮಿತ ಮಹಿಮಾಲಂಕೃತಾಂಗ ಕುಮತ ಗಜಸಿಂಗ ಶುಭಾಂಗ 2 ಶರಣು ಜನ ಮಂದಾರ ಕರುಣಾ ದುರಿತ ಘನ ಸುಪವನಾ3 ತ್ರಾಲಯಾ ನಿಲಯಾ ಸುಕೃಪಯಾ 4 ಚಾರು ಪದಕಮಲ ಸುಲೋಲ 5
--------------
ಕಾರ್ಪರ ನರಹರಿದಾಸರು
ಪುರಂದರ ದಾಸರಾಯಾ | ನಮಿಸೆ ನಿಮ್ಮಚರಣ ಸರಸೀರುಹವಾ ಪ ಮೊರೆಹೊಕ್ಕ ಜನರ ನೀ | ಪೊರೆಯದೆ ಬಿಡುವರೆವರಪ್ರಹ್ಲಾದ್ ಗರುಹಿದಂ | ತರುಹು ಮಂತ್ರಾರ್ಥಿವ ಅ.ಪ. ದ್ವಾರಕ ಪುರದೊಳಗೆ | ನರ್ತನ ಗೈಯ್ಯೆವಾರ ಕಾಂತೆಯರೆಲ್ಲರೂ |ಭೋರಿಟ್ಟು ಮೊರೆಯುವ | ಸ್ವರಕೇಳಿ ಸುರರೆಲ್ಲಹರಿಯ ಓಲಗವಾರು | ಹೊಗುವರು ಎಂದರು1 ಓಲಗ ಸೇರ್ದ 2 ಷೋಡಶದ್ವಯ ಸ್ವರದಿ | ಮೈ ಮರೆಯುತ್ತಪಾಡಿ ಪೊಗಳಿ ಮುದದೀ |ಮೃಡವಂದ್ಯ ಹರಿಯವನ | ಕಡುಭಕುತಿಗೆ ಮೆಚ್ಚಿನೀಡುವೆ ವರವ ನೀ | ಬೇಡು ಬೇಡನೆ ಪೇಳ್ದ3 ಎಚ್ಚತ್ತು ಮುನಿ ನೋಡಿದ | ನಗುತಿರ್ಪಅಚ್ಚ್ಯುತನ್ನಾ ಬೇಡಿದ |ಸಚ್ಛಾರಿತ್ರನೆ ಕೇಳು | ನಿಚ್ಚಾಟೆನ್ನಯ ಕೂಡೆಪೆಚ್ಚ ಪೇರ್ಮಲಿ ಆಡು | ಲಕ್ಷಣಾಗ್ರಜನೇ 4 ಪುರಂದರ | ಗಡದಲ್ಲುದೀಸಿದ 5 ಚಿನಿವಾರ ವರದನಲ್ಲೀ | ಜನಿಸುತ್ತಧನ ನವಕೋಟಿಯ ಗಳಿಸೀ |ಘನ ಲೋಭಿ ದ್ವಿಜನ | ಜ್ಞಾನೋದಯ ಮಾಡುತಘನಗುಣ ಸಿರಿಪತಿ | ಅಣುಗನ್ನ ಪೊರೆದ 6 ಪುರಂದರ ದಾಸರ 7 ಹಿರಿಯ ವೈರಾಗ್ಯ ಪೊಂದಿ | ಸಕಲವನ್ನುಸಿರಿಕೃಷ್ಣಗರ್ಪಣೆಂದೀ |ಗುರು ವ್ಯಾಸರಲಿ ಪುರಂ | ದರನೆಂಬಂಕಿತ ಪೊಂದಿಪರಿಸರ ಮತ ಸರ್ವೋತ್ತಮವೆಂದು ಬರೆದಂಥ8 ಸಾರ ವಿಸ್ತಾರದಿವೇದ ಗಮ್ಯಾನಂದ | ಮಯನ ಬೋಧಿಸಿದ 9ನಾಲ್ಕಾರು ಜನ ಶಿಷ್ಯರ | ಜ್ಞಾನೀಗಳ ಲೋಕೋದ್ದಾರಕೆ ಈಯುತೆ ಕಾಕು ಮಾಯ್ಮತಗಳ | ಸಾಕಷ್ಟು ಖಂಡಿಸಿಮಾಕಳತ್ರನ ಮಹಿಮೆ | ಮನೆಮನೆ ಬೀರಿದ 10 ಮಾಸ ಪುಷ್ಯವದ್ಯದೀ | ಪರಮೋತ್ತಮಶಶಿ ರವಿಗಳ ಮೇಳದೀ |ರಸೆಯ ತ್ಯಜಿಸಿ ಗುರು ಗೋವಿಂದ ವಿಠಲನಎಸೆವ ಪಾದಗಳ್ಬಿಸಜ | ಸೇರುತ ಮೆರೆದಾ 11
--------------
ಗುರುಗೋವಿಂದವಿಠಲರು
ಪೇಳಲಳವಲ್ಲ ನಮ್ಮಯ್ಯನಾಟ ತಿಳಿವರಾರಿಲ್ಲ ಪ ಪೇಳೇನೆಂದರೆ ನಿಲುಕೊ ಮಾತಲ್ಲ ಹೇಳಿಕೆ ಕೇಳಿಕೆಗೆ ಮೀರಿದ ಮೇಲುಮಹಿಮನ ಲೀಲಾಜಾಲವ ಅ.ಪ ಸಾಧ್ಯ ಮಾತಲ್ಲ ಜಗಸೂತ್ರನಾಟಕೆ ಆದಿ ಅಂತಿಲ್ಲ ಜಗಮೂರರೊಳಗೆ ಸಾಧನಿಕರೆಲ್ಲ ನಿಜಭೇದ ತಿಳಿದಿಲ್ಲ ಸಾಧನಿಟ್ಟು ಆವಕಾಲದಿಂ ನಾದ ತಡೆಯದೆ ವೇದಗಳ ಬಿಡ ದೋದಿ ದಣಿದು ಇನ್ನು ಆದಿಮಹಿಮನ ಪಾದಕಾಣವು 1 ಬಾಗಿ ಅನುಗಾಲ ನಿಜತತ್ವಭೇದಿಸಿ ನೀಗಿ ಭವಮಾಲ ಜಡವಾದ ದುರ್ಭವ ರೋಗಗಳುಯೆಲ್ಲ ಪಾರಾಗಿ ನಿರ್ಮಲ ರಾಗಿ ಪರಮಯೋಗ ಒಲಿಸಿ ಯೋಗಿಗಳು ಮಹ ಉಗ್ರತಪದಿಂ ಯೋಗಬೆಳಗಿನೊಳಗೆ ನೋಡಲು ನಾಗಶಯನ ಮಹಿಮೆ ತಿಳಿಯದು 2 ಸಾನಂದಾದಿಗಳು ಮಹ ಭೃಗು ಗಾರ್ಗೇಯ ಮನು ಮುನ್ಯಾದಿಗಳು ದೇವರ್ಷಿ ನಾರದ ಶೌನಕಾದಿಗಳು ಘನ ಸಪ್ತಋಷಿಗಳು ಅನಂತಾನಂತ ಪ್ರಳಯದಿಂದ ಜ್ಞಾನ ಬೆಳಗಿನೋಳ್ನಿಂತು ನೋಡಿ ಕಾಣದೆ ಶ್ರೀರಾಮಪಾದ ಮೌನದೋಳ್ಮುಳುಗೇಳುತಿಹರು 3
--------------
ರಾಮದಾಸರು
ಪೊಂದಿದ ಭಕುತರ ತ್ವರದಿ ಪೊರೆಯುವವನಿಗೆ | ನಂದಕಂದ ವಂದಿಸಿ ಕರುಣದಿ || ಇಂದು ಮುಖಿಯರು ಶಿಂಧುಶಯನಾಗೆ | ಮಂದಿರದೊಳಗೆ ಆನಂದದಿಂದ ಶ್ರೀ || ಶಾಮಸುಂದರಗೆ | ಘನ ಮೋದದಿಂದ | ಜಯ ಮಂಗಳವೆಂದು ಪಾಡಿರೆ ||
--------------
ಶಾಮಸುಂದರ ವಿಠಲ
ಪೊರಿಯದಲಿರುವರೇನು ಶ್ರೀಹರಿ ನೀನು ಪ ನಿರುತ ನಿನ್ನನಾನು ಸ್ಮರಿಸುತಲಿರುವೆನು ಕೌಸ್ತುಭ ಭೂಷಾ ಹರುಷದಿ ಮಂಜುಭಾಷಾ 1 ಭವಾರ್ಣವ ಪಾರಗಾಣಿಸೋ ದೇವಾ ಸಾರಸದಲನೇತ್ರ ನೀರದ ನಿಭಗಾತ್ರ 2 ದಿನಕರ ಕೋಟಿ ತೇಜ ಘನ ಗರುಡಧ್ವಜ ವನಧಿ ಕನ್ಯಾಧವ 3 ವರಗಿರಿಧರ ಕರುಣಾಕರ ಶುಭವದನ ಶರಣರ ಕಾಯುವಂತಹ ಬಿರುದು ನಿನ್ನದೊ ಅನಂತ 4 ಪರಮ ಪಾವನನಾದ ತರುಳ ಪ್ರಹ್ಲಾದಗೊಲಿದ ನರಹರಿ `ಹೆನ್ನೆಯ ಪುರನಿಲಯ ಪ್ರಮೇಯ 5
--------------
ಹೆನ್ನೆರಂಗದಾಸರು