ನೊಂದು ಬಳಲಿದೆ ದೇವ ಇಂದಿರೇಶ ಸರ್ವೇಶ ಶ್ರೀಶ
ತಂದೆ ರಕ್ಷಿಸಿ ಸಲಹೊ ಶ್ರೀನಿವಾಸ ಪ
ಕಂದರ್ಪಜನಕ ಕಾರುಣ್ಯವಾರಿಧಿ ದೇವ
ಕಂಸಾರಿ ಶೌರಿ ಅ.ಪ
ಸ್ನಾನಜಪತಪವ ನೇಮಗಳ ಬಿಟ್ಟೆ
ಮೌನವನು ಬಿಟ್ಟೆ ದಾನಧರ್ಮವ ಕೊಡದೆ ಕೈಬಿಟ್ಟೆ
ಶ್ರೀನಿವಾಸನ ಪೂಜೆನೇಮ ನಿಷ್ಠೆ ಮಾಡದಲೆ ಬಿಟ್ಟೆ
ಶ್ವಾನ ಸೂಕರನಂತೆ ಹೊರೆದೆ ಹೊಟ್ಟೆ
ಏನ ಪೇಳಲಿ ಪರರ ದ್ರವ್ಯಪಹರಿಸುತಿಹ
ಹೀನ ಜನರ ಸಂಗಮಾಡಿ ಬಳಲಿ ಬರಿದೆ 1
ಹಿಂದಿನ ಪಾಪ ದುಷ್ಕರ್ಮ ಫಲವೋ ಇದು ನಿನ್ನ ಒಲವೊ
ಸುಂದರಾಂಗನೆ ರಕ್ಷಿಸೆನ್ನ ಸಲಹೊ
ಭವ ಕರೆ ಕರೆಯೋ ಭವಬಂಧ ಸೆರೆಯೊ
ಇಂದಿರಾರಮಣ ಬಿಡಿಸೆನ್ನ ಪೊರೆಯೊ
ಹಿಂದೆ ಮುಂದೆನಗೆ ಗತಿ ನೀನೆಂದು ನಂಬಿದೆ ದೇವ
ಮಂದರೋದ್ಧಾರಿ ಮುಚುಕುಂದ ವರದನೆ ಸ್ವಾಮಿ 2
ಬಿಡುತಿಹೆನು ಬಾಯ
ಸುಮನಸರವೊಡೆಯ ಬಿಡು ನಿನ್ನ ಮಾಯ
ಕಮಲಸಂಭವ ಜನಕ ಬಿಡದೆ ಕಯ್ಯ ಪೊರೆಯುವದು ಶ್ರೇಯ
ಕಮಲಾಕ್ಷ ನಮಿಸಿ ಮುಗಿಯುವೆನು ಕಯ್ಯ
ಕಮಲ ಪತ್ರಾಕ್ಷ ಸುಜನರ ಕಲ್ಪತರುವೆ ಹೃ-
ತ್ಕಮಲದಿ ಪೊಳೆವ ಶ್ರೀ ಕಮಲನಾಭ ವಿಠ್ಠಲ 3