ಒಟ್ಟು 23 ಕಡೆಗಳಲ್ಲಿ , 12 ದಾಸರು , 23 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಿಡು ಬಿಡು ವಣಮಾತಿನ ಸೊಗಸು | ಕುಡಿ ಸ್ವಾನಂದ ಬಳ್ಳಿಯ ಚಿಗಿಸು ಪ ಶೃತಿ ಶಾಸ್ತ್ರಜ್ಞಾನವ ಪಡೆದು | ಕ್ಷಿತಿಯೊಳು ಹೆಮ್ಮೆಯ ಮದ ಜಡಿದು | ಪ್ರತಿಯನಗಿಲ್ಲೆನುತಲಿ ನುಡಿದು | ಮತವಾದಕ ನಿಲುವರೆ ನಡದು 1 ಅಂಜನಿಲ್ಲದ ಉಪಕರಣದಂತೆ | ವ್ಯಂಜನಿಲ್ಲದ ಪಾಕಗಳಂತೆ | ರಂಜನಿಗನುಭವ ದೂರಂತೆ | ಕಂಜನಾಭನ ನೆನೆವಂತೆ 2 ತನ್ನೊಳು ನಿಜಘನದಾವರತಾ | ಮುನ್ನಾದನು ಶಬ್ದಕ ಹೊರತಾ | ಇನ್ನಾರ ಬೆರಿ ಸಂತರ ತ್ವರಿತಾ | ಮನ್ನಿಸಿ ಮಹಿಪತಿಜನಗುರುತಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಭಾಗ್ಯ ಬೇಕೈ ಗುರುವೇ ಬೋಧವ ಕೇಳೆ ಭಾಗ್ಯ ಬೇಕೈ ಜೀವಿಗೆ ಭಾಗ್ಯದ ಹೊರತಾಗಿ ಬೋಧ ಭೋಗಲಂಪಟ ಭವ ರೋಗಿಗೆ ದೊರಕೀತೆ ಪ ಮಾನವಜನ್ಮವ ತಾಳೆ ಬೇಕೆಲೋ ಭಾಗ್ಯ ಹೀನಬಾಳುವೆ ಬೇಸರಾಗೆ ಬೇಕೆಲೋ ಭಾಗ್ಯ ಜ್ಞಾನಿಯ ದರುಶನವಾಗೆ ಬೇಕೆಲೋ ಭಾಗ್ಯ ತಾನು ತನ್ನಯ ನಿಜವ ತಿಳಿಯೆ ಪರಮ ಭಾಗ್ಯ 1 ಬಾಳಿನ ಸುಖಕಾಗಿ ಆಳಾಗಿ ದುಡಿವಂಗೆ ಕೀಳುತನದಿ ಜ್ಞಾನವಲ್ಲಗಳೆಯುವಗೆ ಮೇಲು ತಾನೆಂದು ತಿಳಿದೋಡಾಡುವವನಿಗೆ ಕಾಲನಂಜಿಕೆ ಕಳೆವ ಬೋಧವು ತಿಳಿವೊಡೆ 2 ಏನಾದೊಡೇನಯ್ಯ ಎನ್ನ ಪೂರ್ವದಭಾಗ್ಯ ನಾನಾದೆ ದೇವನು ಗುರು ನೀನೇ ಯೋಗ್ಯ ಹೀನರ ಕೊಂಡೇನು ನಾನೊಂದು ಪಾರಾದೆ ಜ್ಞಾನಿಶಂಕರನೆ ನಾನಾದೆ ಎನ್ನಯ ಭಾಗ್ಯ 3
--------------
ಶಂಕರಭಟ್ಟ ಅಗ್ನಿಹೋತ್ರಿ
ಮಾನವ ಜನುಮ ನಾನು ಯಾರೆಂಬ ಖೂನವಿಲ್ಲದೆ ಪ ಕಾಲನಾಜ್ಞೆಯನ್ನು ಪಡೆದು ಸೂಳ ಎಣಿಸಿ ಜಗಕಿಳಿದು ಜಾಲಹಾಕಿ ಜವನಗೊಲಿದು ಶೂಲಕ್ಹಾಕುವ ಮಾರಿಗೊಲಿದು 1 ತಂದ ಪುಣ್ಯವನ್ನು ಕೆಡಿಸಿ ಮಂದಿಮಕ್ಕಳನ್ನು ಬಿಡಿಸಿ ಮಂದನೆನಿಸಿ ಕುಂದುಹೊರೆಗೆ ಬಂಧಕ್ಕೆಳೆವ ರಂಡೆನ್ಹೊರೆಸಿ2 ಜನನಿಜನಕರನ್ನು ಜರೆದಿ ಮನೆಯ ಹೆಂಡಿರ ಮಾನ ಕಳೆದಿ ಬಿನುಗು ಸೂಳೆಗೆ ವಶನಾದಿ ಬಿನುಗರೊಳಗೆ ಬಿನುಗನಾದಿ 3 ನೀಗಿದಿ ಕುಲಶೀಲತೆ ಮುದಿ ಗೂಗೆಯಂದದಿ ದಿನಗಳೆದಿ ಭಾಗವತದ ಭಾಗ್ಯ ಮರೆದಿ ಕಾಗೆನುಂಗಿದ ಹೊಲೆಯನಾದಿ 4 ಸಾಧು ಸುಜನಬೋಧ ಜರೆದಿ ವೇದವಾಕ್ಯ ಮೀರಿ ನಡೆದಿ ಶೋಧಿಸಿ ಸಮಯ ತಿಳಿಯದ್ಹೋದಿ ಆದಿ ಶ್ರೀರಾಮಗ್ಹೊರತಾದಿ 5
--------------
ರಾಮದಾಸರು
ಮಾನವನಾದ ಮ್ಯಾಲ ತಾನಾರೆಂದರಿಯಬೇಕು ಪ ಅನುಭವಿಗಳ ಕಂಡೆರಗಲಿಬೇಕು | ತನುಮನದಲಿ ನಿಷ್ಠೆಯು ಬಂದಿರಬೇಕು | ತನು ಧನ ಮದದಲಿ ಹೊರತಾಗಿರಬೇಕು | ಉಣಲುಡುವಲಿ ಹರಿಯಚ್ಚರಬೇಕು 1 ಎಲ್ಲಿಂದ ಧರೆಯೊಳು ಜನ್ಮಕ ಬಂದೇ | ಇಲ್ಲ್ಲಿಂದ ಪಯಣವು ಎಲ್ಲಿಗೆ ಮುಂದೇ | ಎಲ್ಲ ವಿಚಾರಿಸು ಗುರು ಮುಖದಿಂದಾ | ಫುಲ್ಲನಾಭನೆ ಸೇರಿ ಬದುಕಬೇಕೆಂದ 2 ತನ್ನ ತಾ ಮರೆದು ನೀ ತಿರುಗಲಿ ಬೇಡಾ | ಅನ್ಯರ ನಿಂದ್ಯಪಸ್ತುತಿ ಮಾಡಬೇಡಾ | ಚನ್ನಾಗಿ ಶಾಂತಿಯ ನೆಲೆಬಲಿ ಬೇಡಾ | ಕಣ್ಣಿದ್ದು ಕುರುಡ ನೀನಾಗಲಿ ಬೇಡಾ 3 ಏನು ತೋರುವದೆಲ್ಲಾ ಹರಿಯಾಜ್ಞೆದೆಂದು | ನಾನೇನು ಕರ್ತನಲ್ಲಿದಕೆಂದು | ಅನುಭವದಲಿ ಸಮದೃಷ್ಠಿಗೆ ಬಂದು | ಘನ ಗುರು ಪಾದಕ ಭಾವದಿ ಹೊಂದು 4 ಹೊತ್ತು ಹೋಗದ ಮಾತ ನಾಡಲೀ ಬೇಡಾ | ಮುತ್ತಿನಂಥಾ ಜನ್ಮ ದೊರಿಯದುಗಡಾ | ಸತ್ಯಜ್ಞಾನಾಮೃತ ನುಂಡವ ಪ್ರೌಢಾ | ಕರ್ತ ಮಹಿಪತಿ ಸುತ ಸುರಿದ ನೋಡಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಯಾರ ಭಯವೇನಿಹುದು ಶ್ರೀವೇಂಕಟೇಶ ನೀನೆ ದಯವಾದ ಮೇಲ್ಯಾರ ಹಂಗೇನು ಪ ಪೊಡವಿಯಾಳುವ ದೊರೆಯು ಒಡವೆವೊಯ್ದರೆಯೇನು ಅಡವಿಯೊಳು ಮೃಗಬಂದು ತಡೆದರೇನು ತೊಡೆಯನೇರುವ ಮಗನ ಅಡವಿಗಟ್ಟಿದರೇನು ನೆಗಳು ಕಾಲ್ಪಿಡಿದರೇನು 1 ವ್ಯಾಳ ಬಹುರೋಷದಲಿ ಕಾಲು ಸುತ್ತಿದರೇನು ಕಾಳ ರಾಕ್ಷಸ ಕೈಯ ಪಿಡಿದರೇನು ಜ್ವಾಲೆ ನಾಲ್ದೆಸೆಯಿಂದ ಮೇಲೆ ಮುಸುಕಿದರೇನು ಹಗೆ ತನಗೆ ವಿಷವಿಕ್ಕಲೇನು 2 ಯಾಗಕೋಸುಗ ಮೃಗವ ಹೋಗಿ ತರುವೆನುಯೆಂದು ರಾಗದೊಳು ಬಲವಂತ ಕರೆಯಲಾಗಿ ಮೃಗ ಬಂದು ಬಾಗಿಲೊಳು ಕಾಲ್ಪಿಡಿಯೆ ಆಗ ಬಿಡಿಸಿದವರಾರು ನಾಗಗಿರಿವಾಸ 3 ಕಡುಗಲಿಯು ದ್ರೌಪದಿಯ ಉಡಿಮಡಿಯ ಸೆಳೆವಂದು ಒಡೆಯ ರಕ್ಷಿಸುಯೆಂದು ನಡುಗುತಿರಲು ಮಡದಿಗಕ್ಷಯವಿತ್ತು ನುಡಿದ ಭಾಷೆಯ ಸಲಿಸಿ ಕೊಡಲಿಲ್ಲವೆ ನೀನು ಒಡೆಯ ಗಿರಿವಾಸ 4 ಕೆಡೆನುಡಿದು ಬಾಲಕನ ಅಡವಿಗಟ್ಟಲು ಪಿತನು ಸಡಗರದ ಮಡದಿಯಳ ಮಾತ ಕೇಳಿ ಒಡೆಯ ನೀನೆಯೆಂದು ಕಡುತಪವನರ್ಚಿಸಲು ಉಡುಗಣಕೆ ಮೇಲಾದ ಪದವ ತೋರಿದೆಲಾ 5 ಮೃಗ ಜಲದ ಹೊಂಡದೊಳಗಾಡುತಿರೆ ಕಂಡು ಕಡು ರೋಷದಲಿ ಕಾಲ್ಪಿಡಿಯಲು ಪುಂಡರಿಕಾಕ್ಷನನು ಭಯಗೊಂಡು ಕರೆದರೆ ತುಂಡಿಸಿದೆ ಚಕ್ರದೊಳು ನೆಗಳ ಗಂಟಲನು 6 ಒಬ್ಬನೆ ಪಥದೊಳಗೆ ಸರ್ಬಬಲನೈದುತಿರೆ ಹೆಬ್ಬಾವು ಆತನನು ಮೈಸುತ್ತಲು ಗರ್ಭದೊಳು ನಡುನಡುಗಿ ಉಬ್ಬಸವ ಬಿಡುತಿರಲು ಎಬ್ಬಿಸಿದರಾರಲ್ಲಿ ನಿರ್ಭಯವ ತೋರಿ 7 ದುರುಳ ದೈತ್ಯನು ತನ್ನ ಕುವರನನು ಕೊಲುವುತಿರೆ ಭರದಿಂದ ಕಂಬದೊಳು ಹೊರಟು ಬಂದು ನರಹರಿಯ ರೂಪದಲಿ ಕರುಳ ಮಾಲೆಯ ಧರಿಸಿ ತರಳನನು ಕಾಯಿದವರಾರು ಶ್ರೀಹರಿಯೆ 8 ಉರಿಯ ಮನೆಯಂದರಿಯದರಸರೈವರ ಹೊಗಲು ಇರಿಸಿರ್ದ ಬಾಗಿಲೊಳು ಉರಿ ಮುಸುಕಲು ಬೆರಸಿರ್ದ ನಿದ್ರೆಯೊಳು ಇರಿಸಿ ಕಾಯಿದವರಾರು ಕರೆಸಿ ದ್ರೌಪದಿಯನ್ನು ಕೊಡಿಸಿದವರಾರು 9 ಚಂದ್ರಹಾಸನು ವಿಷವ ತಿಂದು ಸಾಯಲಿಯೆಂದು ತಂದೆ ಬರೆದಿಹ ಲಿಖಿತ ನಂದನನು ನೋಡಿ ಮಂದಗಮನೆಯ ಕೊಟ್ಟು ಚಂದ್ರಹಾಸನ ನಿಲಿಸಾ ನಂದಳಿದ ಮಾಯವೇನೆಂದು ಹೇಳಯ್ಯ 10 ಕಾಯ ಭಯ ಹೊರತಾಗಿ ಮೀರಿದಾಪತ್ತಿನಲಿ ಕಡೆ ಸೇರಿಸೊ ಭೂರಮಣ ವರಾಹತಿಮ್ಮಪ್ಪ ಚರಣವನು ಕುಲಿಶ ನೀನಾಗು 11
--------------
ವರಹತಿಮ್ಮಪ್ಪ
ಸೂಳಿನ್ನ ಪೊಗುವವ ಏನಾದೆಂತಾ ಹಾಳಾದಬಳಿಕ ಪುಣ್ಯ ಮೂಳನಾಯಾದ ಪ ಮೂತ್ರದ್ವಾರಕೆ ಮೆಚ್ಚಿ ಮಾತಾಪಿತರ್ವೈರ್ಯಾಗಿ ಪಾತ್ರಾಪಾತ್ರೆನದೆ ಕುಲಗೋತ್ರ ಧರ್ಮಳಿದ ಮಾತೃ ಭೂಮಾತೆಯ ಯಾತ್ರ ಸುದ್ದರಿಯದೆ ಧಾತ್ರಿಯೊಳ್ ಕೈಸೂತ್ರಗೊಂಬ್ಯಾದ1 ಸುಲಭದಿಂ ತನ್ನಯ ಕುಲನಾಶಗೆ ಅನ್ಯ ಕುಲಕೆ ಹವಣಿಪ ಮಾರಿಬಲೆಗೆ ಒಳಪಟ್ಟು ಕುಲ ವಿಧವಿಧ ಭಕ್ತಿಗಳನಗಲಿ ಬಲುಪಾಪಕೊಳಗಾಗಂಕತನ ಮಹ ಕೊಲೆಗೆ ಈಡಾದ 2 ಉತ್ತಮರ ಲಕ್ಷಿಸದೆ ಸತ್ಯಕ್ಕೆ ಮನಗೊಡದೆ ಮೃತ್ಯುರೂಪಿಣಿಮಾತೇ ಅತ್ಯಧಿಕವೆನುತ ಮರ್ತು ತನ್ನಯ ಸುಖವ ತೊತ್ತಾಗಿ ಪಾತಕಿಗೆ ನಿತ್ಯ ಮೈಲಿಗೆಹೊರುವ ಕತ್ತೆಯಂತಾದ 3 ಸಾರುತಿಹ್ಯವೇದ ಸುವಿಚಾರವಾದಗಳೆಲ್ಲ ತೂರಿ ಅಡಿವಿಗೆ ಅಟ್ಟಿ ಮೀರಿ ಮಹವಾಕ್ಯ ಘೋರನರಕಕೊಯ್ದು ಸೇರಿಸುವವತಾರಿ ಮಕ್ಕ ಮಾರಿ ಜಾರೆಗೆ ಬಿಡದೆ ಸೆರೆಯಾಳು ಆದ 4 ಮನ ಅವಳಿಗರ್ಪಿಸಿ ತನು ಅವಳಿಗೊಪ್ಪಿಸಿ ಧನವನಿತು ಅವಳ ಅಧೀನದಲ್ಲಿರಿಸಿ ಬಿನುಗರೊಳುಬಿನುಗೆನಿಸಿ ಕುಣಿಕುಣಿದು ಕಡೆಗೆ ಮಮ ಜನಕ ಶ್ರೀರಾಮನಡಿ ಕನಿಕರಕ್ಹೊರತಾದ 5
--------------
ರಾಮದಾಸರು
ಹರಿಹರಿ ಕೊಡು ನಿನ್ನಯಚ್ಚರನು ಶರಣವಾ ಧೃಡದಲಿ ಬಂದೆನಾನು ಪ ಅವಿದ್ಯೆಮಬ್ಬಿನಲಿ ಹರಿಬಂದ ಹಾವಿನ ಪರಿಯಾಗಿ ವಿವೇಕ ಯವಿಮುಚ್ಚಿಕಂಗಾಣದೆ ಸೇವೆಗೆ ಹೊರತಾದೆ 1 ನ್ಯೂನವ ನಾಲಿಸಲು ತಪ್ಪಿಗೆ ತಾನೆಣಿಕೆಗಳಿಲ್ಲಾ ಏನರಿಯದ ಮೂಢಾ ಇವನೆಂದು ನಿನುದ್ಧರಿಸೆನ್ನಾ 2 ಎಂದೆಂದು ಪ್ರೇಮದಲಿಂದಾ ಗೆಳೆತನಾ ಛೆಂದವೆನಗ ನಿನಗ | ಎಂದೇ ಮನೆಯೊಳಿದ್ದು ಮಾತಾಡದೇ ನಿಂದುದುಚಿತವಲ್ಲ 3 ಕಡೆಗಣ್ಣಿಲಿ ನೋಡೋ ಉದಾಸೀನ ನುಡಿಯ ಮಾಡಲಿಬೇಡ | ಒಡೆಯಾ ನಿನ್ನಂಘ್ರಿಮದಾ ದಾಸರಾ ಅಡಿಗಳಾಶ್ರಯದಲಿಡೋ 4 ಕಾಲಬಿದ್ದರವು ರಾಕುಡುವರು ಕೆಳೆಲೋ ಗಾದಿಯನು ಪಾಲಿಸೋಮಹಿಪತಿ ಸುತ ಪ್ರಭು ಒಲುಮೆಯಾ ಸುಖನೀಡೋ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹೀಂಗರಿದವ ಜ್ಞಾನಿ ಪ ಅವ್ಯಕ್ತದಲುದಿಸುದು ಪ್ರತಿಮೆಗಳು | ವ್ಯಕ್ತದಲಡಗುವದೀ ಸಕಲು | ಈ ವ್ಯವಹಾರದ ಭ್ರಮೆ ಮಾತುಗಳು 1 ಥೆರೆ ನೆರೆ ಬೊಬ್ಬುಳಿ ತಾ ದಿಟವಲ್ಲಾ | ತೋರಿಕರಿಗಿದರೇನು ಯಲ್ಲಾ | ನೀರಿಗೆ ಜನ್ಮ ಮರಣವಿಲ್ಲಾ 2 ಕಿರಣದಿ ದೋರಿತು ನದಿಗಡ ಪೂರಾ | ಹೊರತಾಗಿರದು ಕಿರಣಕ ದೂರಾ | ಕಿರಣೇ ಆಯಿತು ತಾ ಮೃಗನೀರಾ 3 ಕದಳಿಯ ಗಿಡರೂಪದ ಪದರೆಲ್ಲಾ | ಬಿದರಿಸಿ ನೋಡಲು ಏನುಳಿಲಿಲ್ಲಾ | ಪರಿ ಪ್ರಪಂಚದ ಸೊಲ್ಲಾ 4 ಗುರುವರ ಮಹಿಪತಿಸ್ವಾಮಿಯ ಕಂಡು | ಅರ್ಹವಿಕೆ ಮಾತ್ರವನೇ ಪಡಕೊಂಡು | ಚರಿಸುವಾ ಅನುಭವ ನೆಲೆಗೊಂಡು 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು