ಒಟ್ಟು 21 ಕಡೆಗಳಲ್ಲಿ , 12 ದಾಸರು , 20 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸೈಯೆ ಸೈಯೆ ಸೈಯೆ ಸೈಯೆ ರುಕ್ಮಿಣಿ ಕೈ ಹೊಯಿದು ಇದಕೆ ನಗುವರೊಸೈಯೆ ಸೈಯೆ ಸತ್ಯಭಾಮೆ ಧ್ಯನನೀವೆ ನೀತಿ ಸೈಯೆ ಪ. ಮಂದ ಗಮನೆಯರ ಮಾತು ಒಂದೊಂದು ಬಲರಾಮ ಕೇಳಿ ಬಂದನು ಭಾಳ ನಗುತಲೆ ಬಂದನು ಭಾಳ ನಗುತಲೆಭಾಳೆ ಪುಣ್ಯ ಬಂದೊದಗಿತೆಂದು ಕೈ ಹೊಯಿದು ಸೈಯೆ ಸೈಯೆ 1 ಎಷ್ಟು ಉಪವಾಸ ಮಾಡಿ ಇಷ್ಟು ಸಿದ್ಧಿ ಪಡೆದೆಕಷ್ಟ ಬಟ್ಟಿದ್ದೆ ಬಹುಕಾಲ ಕಷ್ಟ ಬಟ್ಟಿದ್ದೆ ಬಹುಕಾಲ ಭೀಷ್ಮನ ಹೊಟ್ಟಿಯ ಪುಣ್ಯ ಒದಗಿತು ಸೈಯೆ ಸೈಯೆ 2 ಸತ್ಯ ಭಾಮೆಯ ಪುಣ್ಯ ಅತ್ಯಂತ ಒದಗಿತುಹಿತ್ತಲಿನ ತುಳಸಿ ಬಲು ತಾಳಹಿತ್ತಲಿನ ತುಳಸಿ ಬಲು ತಾಳ ಇದರಮ್ಯಾಲೆ ಹೆತ್ತವರ ಪುಣ್ಯ ಒದಗಿತ ಸೈಯೆ ಸೈಯೆ3 ಅರಸರ ಮಕ್ಕಳು ನಿಮಗೆ ಬಿರುಸು ಮಾತುಗಳೆಷ್ಟುಸರಸಾಡೊ ಬಗೆಯ ಅರಿಯದೆ ಸರಸಾಡೊ ಬಗೆಯ ಅರಿಯದೆ ಸಭೆಯೊಳು ಸುರಿಸೋರೆ ಇಂಥ ವಚನವ ಸೈಯೆ ಸೈಯೆ 4 ಸೊಲ್ಲು ಕೇಳರಿಯಳು ಎಲ್ಲ ವಿದ್ಯೆಯಲಿ ಕುಶಲರೆಎಲ್ಲ ವಿದ್ಯೆಯಲೆ ಕುಶಲರೆ ನೀವು ಬಲ್ಲಿರೆ ಇದರ ಬಗೆಯಲ್ಲ ಸೈಯೆ ಸೈಯೆ 5 ಬಿಡದೆ ಕೂಗುವದೆಷ್ಟು ಹೊಡೆಯೊ ಭೇರಿಗಳೆಷ್ಟುಇಂಥನುಡಿಯ ಸುಭದ್ರೆ ಅರಿಯಳುಇಂಥನುಡಿಯ ಸುಭದ್ರೆ ಅರಿಯಳುಸಭೆಯೊಳು ನುಡಿವರೆ ಇಂಥ ವಚನವ ಸೈಯೆ ಸೈಯೆ 6 ಜಾತಿಗಾರರಂತೆ ಮಾತಿಲೆ ಕುಶಲರು ಭೂತಳದೊಳಗೆ ಪ್ರತಿಯಿಲ್ಲಭೂತಳದೊಳಗೆ ಪ್ರತಿಯಿಲ್ಲ ರಾಮೇಶನ ಪ್ರೀತಿಯ ಮಡದಿಯರು ಹೌಂದ ಹೌಂದ ಸೈಯೆ ಸೈಯೆ7
--------------
ಗಲಗಲಿಅವ್ವನವರು
ಹೆದರಿಕೆ ಬರುತದೆಲೋ ಪದುಮಾಕ್ಷ ನಿನ್ನ ಮುಂದೆ ಹೇಳಿಕೊಳ್ಳಲು ಎನಗೆ ಪ ಹೆದರಿಕೆ ಬರುತಿದೆ ಜಗದ ಜನರು ನಿನಗೆ ವಿಧವಿಧದಾಡುವ ಸುದ್ದಿಯ ಪೇಳಲು ಅ.ಪ ಹಳಿವರು ಹೆಳವನೆಂದು ಅಂಜದೆ ನಿನಗೆ ತಲೆಯಿಲ್ಲದವನೆನುವರು ಇಲ್ಲದೆ ಹೊಟ್ಟಿಗೆ ಹುಲ್ಲುಮೆದ್ದವನೆಂದು ಹಲವು ಬಗೆಯಲಿ ಹೀಯಾಳಿಪುದ್ಹೇಳಲು 1 ದೃಢದಿ ಭಕುತಜನರು ಬೇಡಿದ ವರವು ಕೊಡಬೇಕಾಗುವುದೆನುತ ಓಡಿ ಹಾವಿನಮೇಲೆ ಪವಡಿಸಿದ ಮಹ ಕಡುಲೋಭಿಯೆಂದೆಂಬ ನುಡಿನಿನ್ನೊಳ್ಪೇಳಲು 2 ಒದೆಸಿಕೊಂಡ್ವೊಯ್ಕುಂಠದಿ ಶೇಷಾಚಲದಿ ಸದನಗೈದನುಯೆಂಬರು ಇದು ಅಲ್ಲದತಿ ವಿಧವಿಧ ಲೋಕ ಸುಲಿದರ್ಥ ನಿಧಿಗಳಿಸಿದ ಚಿನಿವಾರೆಂಬದ್ಹೇಳಲು 3 ಕುದುರೆಮಾವುತನೆಂಬರು ಎಲವೋ ರಂಗ ಕದನಗಡಕನೆನುವರು ಹದಿನಾರು ಸಾವಿರ ಸುದತಿಯರೊಶನಾದ ಸುಧೆಗಳಜಾರನೆಂಬ ವಿಧಿಯನ್ನು ಪೇಳಲು 4 ವಿಪಿನವಾಸಿಕನೆನುವರು ನಿಷ್ಕರುಣದಿ ನೀ ಕಪಿವರನ ತರಿದೆನುವರು ಕಪಟ ತಿಳಿಯುವರಾರು ಅಪರೂಪಮಹಿಮನೆ ಕೃಪಾನಿಧಿ ಶ್ರೀರಾಮ 5
--------------
ರಾಮದಾಸರು
ಹೊಟ್ಟಿಗೆ ಹಿಟ್ಟಿಲ್ಲ ನಿನ್ನಯ ಜುಟ್ಟಿಗೆ ಮಲ್ಲಿಗೆಯು ಪ ಉಟ್ಟಿರುವುದು ಶತಛಿದ್ರದ ವಸ್ತ್ರವು ತೊಟ್ಟಿರುವುದು ಜರತಾರಿಯ ಅಂಗಿಯುಅ.ಪ ಮಾತೆಯ ಗರ್ಭದಲಿ ವಿಧ ವಿಧ ಯಾತನೆಯನನುಭವಿಸಿ ಭೂತಲದಲಿ ಮದಮತ್ಸರ ಲೋಭಕೆ ಸೋತು ಮನವ ನಿರ್ಭೀತಿಯಿಂದಿರುವೆಯೊ 1 ದಿನಗಳು ಕಳೆಯುತಿರೆ ಲೋಕದ ಪ್ರಣಯವು ಹೆಚ್ಚುತಿದೆ ತನಯ ತರುಣಿ ಮನೆ ಕನಕಗಳೆಲ್ಲವು ಕನಸಿನ ತೆರದಲಿ ಕ್ಷಣಿಕವೆಂದರಿಯದೆ 2 ಇದು ನನ್ನದೆಂಬ ಅನುಭವ ಮಂಗನ ಹಿಗ್ಗಟೆಯು ಇಂದಿರೆಯರಸನ ಪರಮ ಪ್ರಸನ್ನತೆ ಪೊಂದಿದ ಪುರುಷನೆ ಜೀವನ್ಮುಕ್ತನು 3
--------------
ವಿದ್ಯಾಪ್ರಸನ್ನತೀರ್ಥರು
ಕಣ್ಣು ಮುಚ್ಚೆನ್ನಾ ಆಡಿಸೆಸಣ್ಣವರನ್ನು ಹೊರಗಡಗಿಸೆ ಪಗಟ್ಟಿ ಹುಡುಗರು ಅವರೆಲ್ಲಮಟ್ಟ ಮಾಯಾಗಿ ಹೋದರು ||ಥಟ್ಟನೆದ್ದು ಯನ್ನ ಕೈಯವರಮುಟ್ಟಿಸದಿರೆ ಬಿಡೆ ನಿನ್ನ 1ಪಾಯಿಸ ಹೋಳಿಗೆ ಮಾಡಿಬಾಯಿಗೆ ಕೈದೋರೆಗೋಪಿ||ನಾಯೆರುವಿನೆ ನಿನ್ನ ತಲೆಗೆನೀ ಯೆರಕೊಳ್ಳ ಒಲ್ಲೆನೆನ್ನೆ 2ಅಣ್ಣನ ರಂಬಿಸಿ ಕರೆದುಹಣ್ಣುಗಳವಗೆ ಕೊಡಬೇಡೆ ||ಚಿನ್ನದ ಗೊಂಬೆ ಬಾ ಎಂದುಬಣ್ಣ ಬಣ್ಣದಲೆನ್ನ ಕರೆಯ 3ನೀ ಹಾರ ಮಗನೆಂದುಕೇಳಿಮೇದಿನಿಯೊಳು ನಾ ಹೆಚ್ಚೆನ್ನೆ ||ಹೋದಬಾರಿಹೊಟ್ಟಿಗೆಮಾರಿಹೋದಳೂ ನಿಮ್ಮಮ್ಮನೆನೆ 4ಯನಗೆ ಪಾಪ ನೀನಾಗಿತಿನಲಿಕ್ಕಪ್ಪಚ್ಚಿ ಬೇಡೇ ||ಮಣಿಗುಂಡೆನಗೆ ಕೊಡುಯೆಂದುಮುನಸುಗುಟ್ಟೆನ್ನನು ಕಾಡೇ 5ದೃಷ್ಟಿ ತಾಕಿತು ಮಗಗೆಂದುಕಟ್ಟಿಸೆ ಯಂತ್ರ ಇನ್ನೊಮ್ಮೆ ||ಕೊಟ್ಟು ಅಮ್ಮಿಯ ರಂಬಿಸಿತೊಟ್ಟಿಲೊಳಗಿಟ್ಟು ತೂಗೇ 6ಏನು ಪುಣ್ಯ ಮಾಡಿದೆನೋಕ್ಷೋಣಿಗೆ ಹತಾರ್ಥವಾಗಿ ||ಪ್ರಾಣೇಶ ವಿಠಲನು ನಿನ್ನತಾನೇ ಕೊಟ್ಟನು ಯನಗೆನ್ನ 7
--------------
ಪ್ರಾಣೇಶದಾಸರು
ಪುರಾಣ ಮೂಲದಹರಿಸ್ತುತಿಅಕೊ ಹಾಗಿಹನೆ ಇಕೊ ಹೀಗಿಹನೆ ಪಕಾಲಿಲ್ಲದೆ ನಡಸುವ ಕೈಯಿಲ್ಲದೆ ಹಿಡಿಸುವಹಲ್ಲಿಲ್ಲದೆ ತಿನ್ನಿಸುವ ಹೊಟ್ಟಿಯಿಲ್ಲದೆ ಉಣಿಸುವ1ಕಣ್ಣಿಲ್ಲದೆ ಕಾಣಿಸುವ ಕಿವಿಯಿಲ್ಲದೆ ಕೇಳಿಸುವಕಾಣಿಸಿಕೊಳ್ಳನೀತ ಒಳಗೆ ಹೊರಗೆ ತಿರುಗುವ 2ಶ್ವೇತದ್ವೀಪದಲ್ಲಿ ನಿಂತು ಅನಂತಾಸನದಲಿ ಮಲಗಿನಿತ್ಯವೈಕುಂಠ ವಾಸ ಪುರಂದರವಿಠಲ 3
--------------
ಪುರಂದರದಾಸರು