ಒಟ್ಟು 26 ಕಡೆಗಳಲ್ಲಿ , 22 ದಾಸರು , 26 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾನವರೊಳು ಮಾನ ಹೀನನಾದೆನಗೆ ಸುಜ್ಞಾನವ ಕರುಣಿಸಿ ಸಲಹೋ ದಯಾಳೋ ಪ ಶರಧಿ ಗಂಭೀರ ಉ - ಧಾರ ವೈಯ್ಯಾರ ನೀಧೀರ 1 ಮೂಷಕ ವಾಹನನೆ ಕರದಿ ಪಾಶಾಂಕುಶ ವಿಡಿದಿಹನೆ ದೇಶಿಕರನು ನೆರೆ ಪೋಷಿಸಿ ದುರಿತ ರಾಶಿಯ ನಾಶಿಸುವ ಗುಣ ನಿಧಿಯೇ 2 ಕಿನ್ನರ ಸೇವಿತ ನಾಗ ವೈರಿಯ ಸುತ ನಾಗಶಯನ ನುತ ನೀನೆ ರಕ್ಷಿಸುಎನ್ನ 3 ಇಕ್ಷು ಪಣ್ ಫಲಗಳನು ನಾನಾ ಭಕ್ಷ್ಯ ಭೋಜ್ಯಂಗಳನು ಭಕ್ಷಿಸಿ ಕುಜನರ ಶಿಕ್ಷಿಸಿ ಸುಜನರ ರಕ್ಷಿಪೆ ನಿರುತ ನೀ ದಕ್ಷ ಮುಖಾರಿ ಸುತನೆ 4 ಹಿಂಡು ದಿವಿಜರೊಡನೆ ಪೂಜಿಸಿ ಕೊಂಡು ಹಿಗ್ಗುತಲಿಹನೆ ದ್ದಂಡ ವಿಘ್ನವ ಪರಿಖಂಡನೆಗೈದು 5
--------------
ಕವಿ ಪರಮದೇವದಾಸರು
ಮಾನಹೀನನಿಗೆ ಇಲ್ಲದ ಅಭಿಮಾನವ್ಯಾತಕೋ ನಾನೇ ಬ್ರಹ್ಮನೆನ್ವನ ಮುಖ ನೊಡ್ವದ್ಯಾತಕೋ ಪ ಹರಿಯೇ ಸರ್ವಪರಾ ಎನ್ನದವನ ಜ್ಞಾನವ್ಯಾತಕೋ ತಾರತಮ್ಯವರಿಯದವನಾಚಾರ್ಯವ್ಯಾತಕೋ 1 ಆಶೆಯನು ಬಿಡದವಗೆ ಸನ್ಯಾಸವ್ಯಾತಕೋ ಭಾಷೆ ಹೀನನಾದವನ ವಿಶ್ವಾಸವ್ಯಾತಕೋ 2 ವರದ ಶ್ರೀ ಹನುಮೇಶ ವಿಠಲ ಒಲಿವನ್ಯಾತಕೋ 3
--------------
ಹನುಮೇಶವಿಠಲ
ವರದೇಂದ್ರವಿಠಲರ ಹಾಡು ಆಶೆಯ ಬಿಡಿಸಯ್ಯಾ | ಶ್ರೀಶ ಪ್ರಾ |ಣೇಶ ದಾಸರಾಯಾ ||ವಾಸುದೇವನ ಕಥೆ ಸೋಸಿಲಿ ಪಾಡುವ |ಲೇಸು ಭಕುತಿ ನೀಡೋ | ನೋಡೋ ಪ ಹರಿ ಗುರುಗಳ ಪ್ರಿಯಾ ನೆನಿಸೀ |ಮೆರೆದಿಯೊ ಗುರುರಾಯಾ ||ಸರುವದ ಶ್ರೀ ಹರಿ ಸ್ಮರಣೆಯ ಮಾಡುತ |ಧರೆಯೊಳು ಚರಿಸಿದ | ಭರದಿ 1 ಜ್ಞಾನ ಶೂನ್ಯನಾಗೀ ಜಗದಿ |ಮಾನವರಿಗೆ ಬಾಗಿ |ದಾನವಾ ಧ್ಯಾನ ಮಾಡದೇ |ಹೀನನಾದೆನು ನಾನು | ಇನ್ನೇನು 2 ವರದೇಂದ್ರರ ಸದನಾ | ಬಳಿಯಾ |ಇರುತಿಹ್ಯ ಜಿತ ಮದನಾ ||ಮರುತ ಮತದ ಸದ್ಗ್ರಂಥದ ಸಾರವ |ತ್ಪರಿತದಿಂ ಪೇಳ್ದಿ | ಬಾಳ್ದಿ 3 ಕಂದನೆಂದುಯೆನ್ನ | ಕಾಯ್ವದು |ಸುಂದರ ಗುರು ಮುನ್ನಾ ||ನಂದ ಕಂದನ ಅಂದ ಪಾದವಾ |ಚಂದದಿ ತೋರೋ | ಬಾರೋ 4 ಭಾಗವತ ಪದಧೂಳಿಯಲಿ |ಪೊರಳಾಡಿಸೋ ಯಂದೇ | ತಂದೇ 5
--------------
ಶ್ರೀಶಪ್ರಾಣೇಶವಿಠಲರು
ಶ್ರೀ ರಾಘವೇಂದ್ರರು ದಿನಕರನುದಿಸಿದನು ಧರೆಯೊಳಗೆದಿನಕರನುದಿಸಿದನು ದಾನವ ಕುಲದಲಿ ಕ್ಷೋಣಿಯೊಳಗೆ ಪ ಪ್ರಥಮ ಪ್ರಲ್ಹಾದನಾಗಿ ಅವತಾರ ಮಾಡಿಸತತ ಹರಿಯ ನುತಿಸಿಮತಿ ಹೀನನಾದ ತಂದೆಗೆ ನರಹರಿರೂಪರತಿಯಿಂದ ತೋರಿದ ಪ್ರಲ್ಹಾದರಾಯರೆಂಬ 1 ವ್ಯಾಸಮುನಿಯ ಎನಿಸಿ ಸೋಸಿಲಿಂಗವಾಸವನುತನ ಭಜಿಸಿದಾಸನೆಂದು ಮೆರೆದಿ ನವ ವೃಂದಾವನದಿಸೋಸಿಲಿ ಕರೆದರೆ ವಾಸ ಮಾಡುವುದಕ್ಕೆ 2 ತುಂಗಭದ್ರೆಯ ತೀರದಿ ಮಂಗಳಮರ ಮಂತ್ರಾಲಯ ಸ್ಥಳದಿಅಂಗಜ ಪಿತ ನಮ್ಮ ಐಹೊಳೆವೆಂಕಟನಕಂಗಳಿಂದ ಕಂಡೆ ಗುರು ರಾಘವೇಂದ್ರನೆಂಬ 3
--------------
ಐಹೊಳೆ ವೆಂಕಟೇಶ
ಶ್ರೀನಿವಾಸ ಸುಜನೋದ್ಧಾರ ಏನು ತಾತ್ಸಾರ ನಾನು ನಿನ್ನ ದಾಸನೆಂದು ಮಾನವರು ನುಡಿದ ಮೇಲೆ ಪ. ಪುಟ್ಟಿದಾಕ್ಷಣಾದಿಯಾಗಿ ದುಷ್ಟಸಂಗಕೊಳಗಾಗಿ ನಷ್ಟಪ್ರಜ್ಞೆಯಿಂದ ಬಹು ಕಷ್ಟಿಯಾದೆನು ಕೃಷ್ಣ ಶಬ್ದ ವಾಚ್ಯಪರಮೇಷ್ಠಿ ಜನಕ ನಿನ್ನ ಮನ ಮುಟ್ಟಿ ಭಜಿಸದೆ ಬಯಲೆಷ್ಟವ ಬಯಸುವೆನಲ್ಲೊ 1 ದಾನಧರ್ಮ ಜಪತಪ ಮೌನ ಮೊದಲಾದ ಸ- ತ್ಸಾಧನ ಹೀನನಾದರು ನಿನ್ನಾನುರಾಗದಿ ಮನಮುಟ್ಟಿ ಕ್ಞಣವಾದರು ಧ್ಯಾನಿಸಲು ಸಕಲವಂದ್ಯ ಮುನಿಗಮ್ಯ ಪದವನೀವಾತನು ನೀನೆಂದೊಂದೆ ತಿಳಿದೆ 2 ಮನವಚನ ಕಾಯಕಾದನುದಿನ ಕೃತವಾದ ಘನ ಪಾಪಂಗಳಿಗೆ ನಾ ಕೊನೆಗಾಣೆನು ದನುಜಾರಿ ರಾಮ ಅನಿಮಿತ್ತಬಂಧು ಎಂಬ ಘನತೆ ತೋರಿಸಿ ನಿನ್ನ ತನಯನೆಂದೆಂನ ಸಲಹೊ 3 ವೀರವೇದೋದ್ಧಾರ ವರಮಂದರಧರ ನರ ಹರಿಕುಬ್ಜಾಕಾರ ಪೃಥ್ವೀಭಾರವಾರಕ ವಾರುಧಿ ಬಂಧಕಯದು ವೀರ ತ್ರಿಪುರ ಸ್ಮರ ಹರನಿಂದ ತರಿಸಿದ ತುರಗವೇರಿದ ಧೀರ 4 ಮಂದಮತಿಯಾದ ಎನ್ನ ಬಂಧುವಾಗಿ ಕೈಯ ಪಿಡಿದು ಮುಂದು ಗಾಣಿಸುವೆನೆಂದು ಹಿಂದೆ ರಕ್ಷಿಸಿ ಇಂದು ಎನ್ನ ಕುಂದನೆಣಿಸಿ ತಂದೆ ನೀನುಪೇಕ್ಷಿಸಲು ಮುಂದೆ ಕಾಯ್ವರಾರೊ ಕರುಣಾಸಿಂಧು ಅನಿಮಿತ್ತ ಬಂಧು 5 ಮಾನಗೇಡಿನಿಂದ ದ್ವೇಷಿ ಮಾನವಾಧಮರ ಮುಂದೆ ಶ್ವಾನಕಿಂತ ಕಡೆಯಾಗಿನ್ನೇನು ಮಾಡಲೊ ನೀನೆ ಗತಿಯೆಂಬ ಮನೋಧ್ಯಾನದಿಂದ ಬಂದೆ ನಿಂದು ಕಾನನದ ಶಿಶುವಿದೆಂದು ಮಾನಿಸಿ ರಕ್ಷಿಸೊ ತಂದೆ 6 ಘಾಸಿಗೊಳಿಸುತೀ ಆಶಾಪಾಶದಿಂದ ಎನ್ನ ಬಿಡಿಸಿ ದಾಸರ ದಾಸ್ಯವನಿತ್ತು ಪೋಷಿಸೆನ್ನುತ ಮೀಸಲಾಗಿಹೆನು ಶ್ರೀನಿವಾಸ ಬೇಗ ಸಲಹೊ ಬಂದು 7
--------------
ತುಪಾಕಿ ವೆಂಕಟರಮಣಾಚಾರ್ಯ
ಹನುಮಂತ ನೀ ಬಲು ಜಯವಂತನಯ್ಯ ಪ. ಅನುಮಾನವಿಲ್ಲವೊ ಆನಂದತೀರ್ಥಾರ್ಯ ಅ.ಪ. ರಾಮಸೇವಕನಾಗಿ ರಾವಣನ ಪುರವ ನಿ-ರ್ಧೂಮಮಾಡಿದ್ಯೊ ನಿಮಿಷದೊಳಗೆಭೂಮಿಪುತ್ರಿಗೆ ಮುದ್ರೆಯುಂಗುರವನಿತ್ತು ನೀಪ್ರೇಮಕುಶಲವ ರಾಮಪಾದÀಕÀರ್ಪಿಸಿದೆ 1 ಕೃಷ್ಣಾವತಾರದಲ್ಲಿ ಭೀಮನಾಗ್ಯವತರಿಸಿದುಷ್ಟ ದೈತ್ಯರನ್ನೆಲ್ಲ ಸಂಹರಿಸಿದೆದೃಷ್ಟಿಹೀನನಾದ ಧೃತರಾಷ್ಟ್ರವಂಶವನ್ನುಕಷ್ಟವಿಲ್ಲದೆ ಕೊಂದು ಶ್ರೀಕೃಷ್ಣಗರ್ಪಿಸಿದೆ 2 ಪತಿತ ಸಂಕರ ಪುಟ್ಟಿ ಮತವೆಲ್ಲ ಕೆಡಿಸಲುಮತಿಹೀನರಾಗೆ ಸಜ್ಜನರೆಲ್ಲಅತಿ ವೇಗದಲಿ ಮಧ್ವಯತಿಯಾಗಿ ಅವತರಿಸಿಗತಿಯ ತೋರಿಸಿದೆ ಹಯವದನ ನಿಜದಾಸ 3
--------------
ವಾದಿರಾಜ
ತಪ್ಪುಗಳನೆಲ್ಲ ನೀನೊಪ್ಪಿಕೊಳ್ಳೊ - ನ-|ಮ್ಮಪ್ಪ ಕಾಯಬೇಕುತಿಮ್ಮಪ್ಪನೀನೆಪಸತಿ-ಸುತ ಸಂಸಾರಗಳಿಗೆ |ಮತಿ ಹೀನನಾದೆನು ವ್ಯರ್ಥ ||ಮಿತಿಗಾಣೆನಯ್ಯ ಎನ್ನ ಪಾಪಗಳಿಗೆ |ಗತಿಯದಾವುದು ಪೇಳೊ ಮುಂದೆನಗೆ 1ಬಿಸಿಲು ಬಿರುಮಳೆ ಗಾಳಿಯೊಳಗೆ-ಬಲು-|ದೆಸೆಗೆಟ್ಟು ದೇವ ತಿರುಗಿದೆ ||ಹಸಿವು-ತೃಷೆಗಳು ಬಹು ಬಾಧಿಸಲು |ಹುಸಿಯಾಡಿದೆನಯ್ಯ ಹುಟ್ಟು ಮೊದಲು 2ಸ್ನಾನ-ಸಂಧ್ಯಾವಂದನವರಿಯೆ-ನಾನಾ-|ದಾನ-ಧರ್ಮದ ಗುರುತುಗಳಿಯೆ ||ಹೀನಜನರ ಸಂಗವ ಮರೆಯೆ-ಸು-|ಙ್ಞÕನಿಗಳನು ಬಾಯೆಂದು ಕರೆಯೆ 3ಗಂಗೆ ಅಗ್ರೋದಕಗಳ ತಂದು - ನಾ-|ಮಂಗಳಮಜ್ಜನಮಾಡಲಿಲ್ಲವೆಂದೂ ||ಹೊಂಗೇದಗೆ ಪುಷ್ಪವನೊಂದು ಶ್ರೀ-|ರಂಗಗರ್ಪಿಸಲಿಲ್ಲ ಕಾಯೊ ಬಂದು 4ಪೀತಾಂಬರದಿ ವಸ್ತ್ರಗಳಿಂದ -ದಿವ್ಯ-|ನೂತನವಾದ ಆಭರಣದಿಂದ ||ಪ್ರೀತಿಪಡಿಸಲಿಲ್ಲಾದರದಿಂದ-ಹೇ-|ಸೀತಾಪತೆ ಕೃಷ್ಣ ಹರಿಮುಕುಂದ 5ಗಂಧಾಕ್ಷತೆ ಪುಷ್ಪಗಳಿಂದ -ಬರಿ-|ಒಂದುದಳಶ್ರೀ ತುಳಸಿಯಿಂದ ||ಇಂದಿರೇಶನ ಅರ್ಚಿಸದರಿಂದ -ಬಹು-|ನೊಂದು ದೂರಾದೆ ಸದ್ಗತಿಯಿಂದ 6ಏಕಾರತಿ ದೂಪಾರತಿಯ -ಎಂದು-|ಶ್ರೀಕಾಂತ ನಿನಗೆ ನಾ ಮಾಡಲಿಲ್ಲ ||ವ್ಯಾಕುಲದಲಿ ಹೋಯಿತು ಹೊತ್ತು -ಬಂದು-|ನೀ ಕರುಣಿಸು ಲಕ್ಷ್ಮೀರಮಣ 7ಪಾಯಸ ಪಂಚಭಕ್ಷ್ಯಗಳಿಂದ -ಬಲು-|ಆಯತವಾದ ಶಾಕಗಳಿಂದ ||ತೋಯೆ ಶಾಲ್ಯನ್ನ ಸದ್ಘøತದಿಂದ -ಶ್ರೀ-|ಮಾಯಾಪತಿಗೆ ಅರ್ಪಿಸಲಿಲ್ಲ 8ಮಂಗಳಾರತಿಯ ನಾ ಮಾಡಲಿಲ್ಲ-ಜಯ-|ಮಂಗಳವೆನ್ನುತ ಪಾಡಲಿಲ್ಲ ||ಕಂಗಳ ನೋಟದಿ ನೋಡಲಿಲ್ಲ -ನರ-|ಸಿಂಗನೀ ಬಾಯೆಂದು ಕರೆಯಲಿಲ್ಲ9ಹರಿಯ ಪಾದಕೆ ಬಿದ್ದವನಲ್ಲ -ನರ-|ಹರಿಗೆ ಪ್ರದಕ್ಷಿಣೆ ಮಾಡಲಿಲ್ಲ ||ಹರಿದಿನದುಪವಾಸ ವ್ರತವು ಇಲ್ಲ -ಬಲು-|ಹರಿಯ ದಾಸರ ಸಂಗ ಎನಗಿಲ್ಲ 10ಹೋಮಾರ್ಚನೆ ಔಪಾಸನವೆಲ್ಲ |ನೇಮದಿಂದಲಿ ನಾ ಮಾಡಲಿಲ್ಲ ||ಕಾಮಾತುರನಾಗಿ ಕಂಡಕಂಡ ಕಡೆ |ಸ್ವಾಮಿಯ ಕಾಣದೆ ತಿರುಗಿದೆನೊ 11ಅತಿಥಿಗಳ್ ಬಂದರೆ ಮನೆಗೆ -ಅಂದೆ-|ಗತಿಯಿಲ್ಲವಯ್ಯ ಕೊಡುವುದಕೆ ||ಯತಿಯ ಕಂಡರೆ ನಿಂದಿಸಿದೆ-ಶ್ರೀ-|ರತಿಪತಿ ಪಿತ ನೀ ದಯ ಮಾಡೊ 12ಎಷ್ಟು ಹೇಳಲಿ ಎನ್ನವಗುಣವ -ಅವು-|ಅಷ್ಟು ಇಷ್ಟೆಂದು ಎಣಿಕೆಯಿಲ್ಲ ||ದೃಷ್ಟಿಯಿಂದ ನೋಡಿ ದಯ ಮಾಡೊ -ಶ್ರೀ-|ಬೆಟ್ಟದ ವೆಂಕಟ ಪುರಂದರವಿಠಲ 13
--------------
ಪುರಂದರದಾಸರು
ನಿನ್ನ ಕೃಪೆಯಿರೆ ಬಲುಸುಖ ಈ ಸಂಸಾರನಿನ್ನ ಕೃಪೆಯಗಲಿದರೆ ಘನಗೋಳು ಹರಿಯೆ ಪಅಲ್ಲ ಅಹುದಾಗುವುದು ಸುಳ್ಳೆ ಖರೆಯಾಗುವುದುಎಲ್ಲಸಿರಿ ಒದಗುವುದು ಒಲ್ಲೆನಲು ಬಿಡದೆಪುಲ್ಲನಾಭನ ಒಲುಮೆವುಳ್ಳ ಮಾನವರಿಗೆಕಲ್ಲಿನೊಳು ಜಲಪುಟ್ಟಿ ಹೊಳೆಯಾಗಿ ಹರಿಯುವುದು 1ಹೀನನಾದರು ಬಹುಮಾನ ಸಿಗುವುದು ಗೊಡ್ಡುಧೇನುಗಳೆಲ್ಲ ಬಿಡದೆ ಹೈನಗರೆಯುವುವುದೀನನಾಥನು ಒಲಿಯೆ ನಾನಾ ಸಿರಿಸೌಭಾಗ್ಯತಾನೆ ಬರುವುದು ತೆಂಗಿನೊಳುದಕದಂತೆ 2ವಿಷವೆ ಅಮೃತವಹುದು ಕಸವೆ ಕರ್ಪುರವಹುದುವಿಷಮ ವಿಷಯದ ಎಡರು ಹಸನಹುದು ನಿಖಿಲವಸುದೆಗಧಿಕ ನಮ್ಮ ಬಿಸಜಾಕ್ಷ ಶ್ರೀರಾಮನೊಶವಾದ ಬಳಿಕ ನಿಜ ಅಸಮ ಮುಕ್ತಿಹುದು 3
--------------
ರಾಮದಾಸರು
ಪಾಲಿಸೋ ವೆಂಕಟಗಿರಿ ರಾಯಾ ಲಕ್ಷ್ಮೀ |ಲೋಲನೀಲಾಂಬುದ ಸಮ ಕಾಯಾ ಪಮಾಕಮಲಾಸನವಾಸವ- ಸುರ |ನೀಶ ಕರಾಧ್ಯ ಕೇಶವ ||ಲೋಕೇಶ ಯನ್ನಲ್ಲಿ ವಾಸವ-ಮಾಡಿನೂಕು ತುಚ್ಛತರ ಕ್ಲೇಶವ 1ಹಿಂದಿನ ಜನುಮಗಳೆಣಿಕಿಲ್ಲ - ದಯಾ |ಸಿಂಧುಸಾಧನವೀಗಲಿನಿತೆಲ್ಲಾ ||ಮುಂದಿನ ಗತಿಯೇನೋ ತಿಳಿದಿಲ್ಲ - ಇದ |ರಿಂದಲಂಜುವೆ ಜಾಂಬವತೀ ನಲ್ಲ 2ಬಾಲಕನಾದೆ ಕೆಲವು ದಿನ - ಪ್ರಾಯ |ಕಾಲವೊದಗಲು ಪರಾಂಗನಾ ||ಮೇಲೆ ಅಭಕ್ಷಣೆಯಲಿ ಮನವಿಟ್ಟೆ - ಹೇ |ಳಲೊಂದೆರಡೇ ಯನ್ನವಗುಣ 3ಉದಯ ಸ್ನಾನವು ಸಂಧ್ಯಾವಂದನೆ - ಅಘ್ರ್ಯ |ವಿಧಿಗುರುಹಿರಿಯರ ವಂದನೆ |ಮೊದಲಾಗಿ ಪಿತರಾರಾಧನೆ ಬಿಟ್ಟೆ |ಮದದಿಂದ ಹೀನನೆಂಬುವ ನಾನೇ4ಅನ್ಯರ ಮನೆ ದ್ವಾರ ಕಾಯ್ವೆನೋ - ಸ್ವಾಮಿ |ನಿನ್ನ ಸ್ಮರಣೆಯ ಕ್ಷಣ ಮಾಡೆನೋ ||ಅನ್ನಕ್ಕೆ ಬಹುದೂರ ಪೋಪೆನೋ - ಸಾರೆ |ಪುಣ್ಯಕ್ಷೇತ್ರಗಳಿರೆ ನೋಡೆನೋ 5ಧನಹೀನನಾದ ಕಾರಣದಿಂದ -ಸತಿ|ಮನೆ ಹೊಂದಿಸಳೋ ಪರಮಾನಂದ ||ತನುಜರಶನ ವಸನಗಳಿಂದ ಕಾಡು |ವಣು ಮಾತ್ರ ಸುಖವಿಲ್ಲ ಇದರಿಂದ6ಏಸುಹೇಳಲಿ ಮಾತ ಲಾಲಿಸೋ - ಶ್ರೀ ಪ್ರಾ- |ಣೇಶ ವಿಠ್ಠಲ ನೀನೇ ತಾರಿಸೋ ||ಆ ಸತ್ಕರ್ಮದಿ ಮನ ಪ್ರೇರಿಸೋ - ನಿನ್ನ |ದಾಸವರ್ಗದೊಳೆನ್ನ ಕೂಡಿಸೋ 7
--------------
ಪ್ರಾಣೇಶದಾಸರು
ರಾಮ ಮಂತ್ರವ ಜಪಿಸೊ - ಏ ಮನುಜಾ ಶ್ರೀರಾಮ ಮಂತ್ರವ ಜಪಿಸೊ ಪಆ ಮಂತ್ರ ಈ ಮಂತ್ರ ನೆಚ್ಚಿ ಕೆಡಲು ಬೇಡಸೋಮಶೇಖರಗಿದು ಭಜಿಸಿ ಬಾಳುವ ಮಂತ್ರ ಅಪಕುಲಹೀನನಾದರೂ ಕೂಗಿ ಜಪಿಸುವ ಮಂತ್ರಛಲದಿ ಬೀದಿಯೊಳು ಉಚ್ಚರಿಪ ಮಂತ್ರ ||ಹಲವು ಪಾತಕಗಳ ಹಸನಗೆಡಿಸುವ ಮಂತ್ರಸುಲಭದಿಂದಲಿ ಸ್ವರ್ಗ ಸೂರೆಗೊಂಬುವ ಮಂತ್ರ 1ಸನುಮುನಿಗಳಿಗೆಲ್ಲ ಸುಲುಗೆಯಾಗಿಹ ಮಂತ್ರಮನುಮುನಿಗಳಿಗೆಲ್ಲ ಮೌನ ಮಂತ್ರ ||ಹೀನಗುಣಗಳೆಲ್ಲ ಹಿಂಗಿ ಹೋಗುವ ಮಂತ್ರಏನೆಂಬೆ ಧ್ರುವನಿಗೆ ಪಟ್ಟಗಟ್ಟಿದ ಮಂತ್ರ 2ಸಕಲ ವೇದಗಳಿಗೆ ಸಾರವಾಗಿಹ ಮಂತ್ರಮುಕುತಿ ಪಢಕೆ ಇದು ಮೂಲ ಮಂತ್ರ ||ಶಕುತ ಪರಕೆ ಇದು ಬಟ್ಟೆದೋರುವ ಮಂತ್ರಸುಖನಿಧಿ ಪುರಂದರವಿಠಲ ಮಹಾಮಂತ್ರ 3
--------------
ಪುರಂದರದಾಸರು
ರಾಮನೆನ್ನಿ ರಾಮನೆನ್ನಿವ್ಯೋಮಕೇಶಗೆ ದಿವ್ಯನಾಮಾಮೃತವಿತ್ತ ಪ.ಪಾತಕವನು ಮಾಡಿ ಪಾತಕರೊಡನಾಡಿಸೂತಕಾಗಿ ವಿಪ್ರಘಾತಕಾಗಿಜಾತಿಬಾಹಿರನಾಗಿ ಧಾತುಗೆಟ್ಟವಗೆ ಶ್ರೀಸೀತಾಕಾಂತನ ನಾಮಪೂತಕಾರಣ 1ಕದ್ದು ಬಂಗಾರವ ಮೆದ್ದು ಅಭಕ್ಷಣಒದ್ದು ದುರ್ಬಲರ ಸೊಕ್ಕಿದ್ದುನಿತ್ಯಶ್ರದ್ಧಾವಿಹೀನನಾದ ಮದÀ್ಯಪ್ರಾಶನಿಯಾದಶುದ್ಧಾತ್ಮಕನಿಗೆ ಶುದ್ಧಕರನು ಮೂಲ 2ಪರಪತ್ನಿ ಗಮಿಸಿ ಭೂಸುರವೃತ್ತಿ ಭೇದಿಸಿಪರತಾಪೇಕ್ಷಿಸದೆ ಪಾಮರನಾಗಿಹನರಗೆ ಪಶ್ಚಾತ್ತಾಪ ಬರಿಸುವ ಪ್ರಸನ್ವೆಂಕಟರಸನೆ ತುದಿಯಲಿಹೊರೆವಬಿಡದೆ ರಘು3
--------------
ಪ್ರಸನ್ನವೆಂಕಟದಾಸರು