ಒಟ್ಟು 27 ಕಡೆಗಳಲ್ಲಿ , 14 ದಾಸರು , 27 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪ್ರಾಯಶ್ಚಿತ್ತವು ಎನಗೆ ಇಲ್ಲವಯ್ಯಾ ಪ ನಾಯಿಯಂತೆ ಕಂಡ ಕಂಡಲ್ಲಿ ತಿಂಬುವಗೆ ಅ.ಪ ಮಾನಸದಿ ತ-ದೇಕ ಧ್ಯಾನದಲ್ಲೇ ಕುಳಿತು ಜ್ಞಾನಿಗಳ ಸಹವಾಸ ಮಾಡದಲೆ ಹೀನರಾಶ್ರೈಸೆ ನಾಲಿಗ್ಯೆ ಹಿತವನೆ ಬಯಸಿ ಮೀನು ಗಾಣಕೆ ಬಿದ್ದು ಮಿಡುಕುವಂದದಲಿ 1 ಸರಸರನೆ ಕಂಠವನು ಗರಗಸದಿ ಕೊಯ್ದರೂ ತರಹರಿಸದೇ ಪರರ ಮನೆಯನ್ನವನ್ನು ಕರದಲಿ ಸ್ಪರ್ಶ ಸಲ್ಲದು ಎಂದು ಪೇಳುತಿರೆ ಹಿರಿದಾಗಿ ಕುಳಿತು ಭುಂಜಿಸುವ ಪಾತಕಿಗೆ2 ಪರರಿತ್ತ ಕೂಳಿನಲಿ ಅವರ ಕುಲಕೋಟಿ ಸಾ- ವಿರ ಜನುಮದಲಿ ಅರ್ಜಿಸಿದ ಪಾಪ ಬೆರೆತಿಹುದು ಎಂದ್ಹೇಳಿ ಕೇಳಿ ಕೇಳಿ ನಗುತ ಹರುಷದಿಂ ಕುಳಿತು ವಿಷವುಂಬ ಪಾತಕಿಗೆ 3 ಯಾತ್ರೆಯ ಪೋಪಲ್ಲಿ ತಿಥಿ ಮತಿ ಹವ್ಯದಲಿ ಮತ್ತೆ ಕುಲಹೀನದಲಿ ಅನ್ನ ತಿಂದು ನಿತ್ಯ ಹಿಂಗದಲೆ ಈ ನೀಚ ಒಡಲನು ಹೊರೆವ ತೊತ್ತು ಬಡುಕಗೆ ಪುಣ್ಯವೆತ್ತ ದೊರಕುವುದೊ 4 ಕ್ಷಿಪ್ರ ಪ್ರಾಯಶ್ಚಿತ್ತ ಪೊಂದಿಹುದು ಕೇಳಯ್ಯಾ ಈ ಪೃಥ್ವಿಯೊಳಗೆಲ್ಲ ನಿನ್ನ ನಾಮ ಕಾಯ ವಿಜಯವಿಠ್ಠಲರೇಯ ಸುಪ್ರಸಾದವನಿತ್ತು ಶುದ್ಧಾತ್ಮನನು ಮಾಡು 5
--------------
ವಿಜಯದಾಸ
ಫಾಲನಯನ ನುತ ಪಾಲಿಸು ಸತತ ಪಾಲಿಸು ಸುರನರ ಜಾಲಸುಚರಿತ ಪ ಲೀಲಾನಟನ ಫಣಿಶೈಲನಿಳಯ ಭಕ್ತ ಪಾಲವಿಧೃತ ವನಮಾಲ ಶ್ರೀಲೋಲ 1 ಬಾಲತನದಿ ನಿಜ ಲೀಲಾ ಚರಿತಗುಣ ಜಾಲವಿಮೋಹಿತ ಬಾಲಾನುಕೂಲ 2 ಧಾರಾಧರಾಭ ಶರೀರ ತಿರಸ್ಕøತ ಮಾರ ವಿಹಗಸಂಚಾರ ಉದಾರ 3 ಸುಜನ ಪರಿ ನಿಗಮ ವಿಚಾರ ವಿಹಾರ 4 ಕರುಣಾವರಣ ನಿಜಶರಣಾಭರಣ ಭಯ ಹರಣ ಸಕಲ ಸುಖಕರಣ ಶ್ರೀರಮಣ 5 ಶೇಷಶಯನ ಕಲಿದೋಷದಮನ ಮೃದು ಭಾಷ ಮನೋಹರಭೂಷ ಸುವೇಷ 6 ಹರಿದಾಸರನು ಬಲು ಹಿರಿದಾಗಿ ಮೆರೆಸುವ ದ್ವಿರದ ವರದ ಶ್ರೀವರದವಿಠಲ 7
--------------
ವೆಂಕಟವರದಾರ್ಯರು
ಭವ ಮುಖ್ಯ ಸುರಗಣ ಮುನಿನಿಕರ ಸಿದ್ಧ ಪರಿವಾರವು 1 ಸರಿತು ಪ್ರವಾಹದಂತೆ ವಾಗ್ವೈಖರಿಯಿಂದ ನಿರುತ ತೃಪ್ತಿಪಡಿಸಲಾರರು ಇನ್ನು 2 ಉರು ಉಗ್ರಜಾತಿ ಅಸುರ ಕುಲದಿ ಪುಟ್ಟಿದ ನಾನು ನೆರೆ ತುತಿಸಿ ತೃಪ್ತಿಪಡಿಸಲಾಪೆನೆ ನಿನ್ನ 3 ಆದೊಡೆ ಕುಲ ರೂಪ ವಯಸ್ಸು ವಿದ್ಯೆಗೆ ನೀನು ಮೋದಪಡುವನಲ್ಲ ಭಕ್ತಿಯೊಂದಕೆ ನಲಿವೆ 4 ಕರಿರಾಜನೇ ಸಾಕ್ಷಿ ಕರುಣಾಮಯನೇ ನಿನ ಗಿರುವುದೇ ವೈಷಮ್ಯ ? ಭಕ್ತಗೆ ವಶ ನೀನು 5 ಅರವಿಂದನಾಭ ನಿನ್ನ ಚರಣಾರವಿಂದವನು ನಿರುತ ಭಜಿಸುವ ಉತ್ತಮನೆನಿಸುವ 6 ಸರುವ ಸ್ವತಂತ್ರ ಪೂರ್ಣಕಾಮ ನಿನ್ನನು ನಾವು ಹಿರಿದಾಗಿ ಆರಾಧಿಸಿ ತೃಪ್ತಿಪಡಿಸುವುದೇನೊ 7 ನಾವು ಮಾಡುವ ಕರ್ಮಸಾಧನದಿಂದ ನಿನಗೆ ಯಾವ ಫಲವೂ ಇಲ್ಲ ! ಫಲವೆಲ್ಲ ನಮಗಯ್ಯಾ 8 ಬಿಂಬವನಲಂಕರಿಸೆ ಕನ್ನಡಿಯೊಳಗೆ ಪ್ರತಿ ಬಿಂಬಕೆ ಅಲಂಕಾರ ಕಾಣುವ ಪರಿಯಲಿ 9 ತರಳನ ಮೊರೆಯನು ಲಾಲಿಸಿ ಪಾಲಿಸೊ 10 ನಮ್ಮ ಸಾಧನೆಗಾಗಿ ನಿನ್ನ ಆರಾಧಿಪೆವು ಬೊಮ್ಮನಯ್ಯನೆ ನಿನ್ನ ಆನುಗ್ರಹದಿಂದಲಿ 11 ಬ್ರಹ್ಮಾದಿ ಸುರರೆಲ್ಲ ನಿನ್ನ ಸೇವಕರಯ್ಯಾ ಹಮ್ಮು ಮತ್ಯಾತಕಯ್ಯಾ ನಮ್ಮಂಥವರಿಗೆಲ್ಲ 12 ನಿನ್ನ ಕೋಪಕೆ ಅಂಜಿ ನಡುಗದವರುಂಟೆ ಮನ್ನಿಸಿ ಕೋಪವ ಉಪಶಮ ಮಾಡೋ ಸ್ವಾಮಿ 13 ನಿನ್ನ ಈ ಉಗ್ರರೂಪ ಧ್ಯಾನವು ಜನರಿಗೆ ಘನ ಭಯವ ಕಳೆಯೆ ಸಾಧನವಾಗಲಿ 14 ದಿಗಿಲು ಪುಟ್ಟಿಸುವಂಥ ಈ ನಿನ್ನ ಮುಖ ಜಿಹ್ವೆ ಭೃಕುಟಿ ಕರಾಳ ದಂಷ್ಟ್ರ 15 ಕೊರಳಲ್ಲಿ ಧರಿಸಿಹ ಕರುಳ ಮಾಲಿಕೆ ರಕ್ತ ಬೆರದ ಕೇಸರ ಮತ್ತೆ ನಿಗುರಿದ ಕರ್ಣಗಳು 16 ಲೋಕ ಭಯಂಕರವಾಗಿವೆ ಆಂದೊಡೆ ಶ್ರೀಕರ ನಿನ್ನ ಕೃಪೆಯಲಿ ನಾನವಕೆ 17 ಅಂಜುವನಲ್ಲ ಕೇಳು ಕಂಜನಾಭನೆಯಿನ್ನು ಅಂಜುವೆನೊಂದಕೆ ಸಂಸಾರ ಚಕ್ರಕೆ 18 ತೊಳಲಿಸÀುವುದು ಜನ ದುಃಖದಿ ಸಂಸಾರ ಬಲು ಪರಿಯಲಿ ಅದು ದುಃಖದಿ ಸಾಗರ 19 ಇಷ್ಟವಾದದ್ದು ಕೊಡದೆ ಇಷ್ಟವಿಲ್ಲದ್ದುಣಿಸಿ ಭವ 20 ಸಂಸಾರ ಸಾಗರ ದಾಟಿಸೋ ಮಹಾಮಹಿಮ ಸಂಶಯವಿಲ್ಲದೆ ಸೇರಿಸೋ ನಿನ್ನ ಬಳಿ 21 ಕರುಣಾಸಾಗರ ನಮ್ಮ ಕರಿಗಿರೀಶನೆ ಸ್ವಾಮಿ ತರಳನ ಮೊರೆಯನು ಲಾಲಿಸಿ ಪಾಲಿಸೊ 22 ( ಪ್ರಹ್ಲಾದ ನರಹರಿಯನ್ನು ಸ್ತುತಿಸಿದ್ದು )
--------------
ವರಾವಾಣಿರಾಮರಾಯದಾಸರು
ಮದನ ಜನಕ ಹೃದಯ ನಿಲಯಕೆ ಮುರವÀುಥನ ಪ ಆದರದಲಿ ಉಪಚರಿಸುವೆನು ಕಲಿ ಬಾಧೆಯ ಪರಿಹರಿಸೋ ಮಧುಸೂದನ ಅ.ಪ ಪೂರ್ಣಸದಾಗಣಿತೇಡ್ಯಗುಣಾನುಭ ವೈಕಶರೀರ ಕಲುಷದೂರ ಚೀರ್ಣ ಪುಣ್ಯಚಯದಿಂದ ಕರೆಯಲು ತ್ರಾಣವಿಹುದು ಮನ್ಮನದಲಿ ನೆಲಿಸೊ 1 ಶಮದಮಗಳನುಗ್ರಹಿಸುತ ಸಜ್ಜನ ಸಮಿತಿಯ ಸಹವಾಸವ ನೀಡೋ ಅಮಿತಪ್ರಮತಿಗಳ ಶಾಸ್ತ್ರಪ್ರವಚನದಿ ಮಮತೆಯ ಸ್ಥಿರಪಡಿಸೊ ಶೃತಿಪತೇ 2 ಗುರುಕರಣವು ನಿನ್ನನರಿಯಲು ಕಾರಣ ಶರಣಂಭವ ಸಂತತ ಹಿರಿಯರು ಮಾಡಿದ ಸಾಧನಗಳಿಗಿದು ಹಿರಿದಾಗುವುದೇ ಪ್ರಣತ ಪ್ರಸನ್ನ 3
--------------
ವಿದ್ಯಾಪ್ರಸನ್ನತೀರ್ಥರು
ಯಾಕೆನ್ನ ಎದುರಲಿ ನಿಲ್ಲುವುದಿಲ್ಲೋ ಯಾಕೆನ್ನಯ ಕರೆ ಕೇಳುವುದಿಲ್ಲೋ ಪ ಯಾಕೆನ್ನ ಅರ್ಚನೆಗೊಲಿಯುವುದಿಲ್ಲೋ ಯಾಕೆನ್ನೊಳು ದಯಮಾಡುವುದಿಲ್ಲೋ ಅ.ಪ ತರಳ ಧೃವನ ಮೊರೆ ಕೇಳಿಸಿತಲ್ಲ ಕರಿ ಎತ್ತಿದ ಸುಮ ಕಾಣಿಸಿತಲ್ಲ ಅರಿ ಅನುಜನ ಸೇವೆ ಹಿರಿದಾಯ್ತಲ್ಲಾ ಕರುಣ ಎನ್ನೊಳಗೇಕೆ ಬರದೋ ಕೃಷ್ಣಯ್ಯ 1 ಅಗಣಿತ ಗೋಪಿಯರೆಡೆಯಲಿ ನಲಿದೆ ನಗಧರನಾಗಿ ಗೋಪಾಲರ ಪೊರೆದೆ ಖಗನಿದ್ದೆಡೆಗೇ ಭರದಲಿ ನಡೆದೆ ನಗುಮೊಗದರಸ ಮಾಂಗಿರಿಯ ರಂಗಯ್ಯ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ವಂದನೆಯ ಮಾಡುವೆ ಶ್ರೀಗುರುವಿಗೆ- ವಂದನೆಯ ಮಾಡುವೆÀ ಪ ವಂದನೆ ಮಾಡುವೆನಿಂದು ಯದುಶೈಲದೋಳ್ ಚಂದದೊಳಿರುತಿಹ ತಂದೆ ನಾರಾಯಣಗೆ ಅ.ಪ ಹರುಷದಿಂದಲಿ ಇನ್ನು ಹರಸಿ ಸಜ್ಜನರಿಗೆ ವರಗಳ ಕೊಡುತಿಹ ವರಲಕ್ಷ್ಮಿ ತಾಯಿಗೆ 1 ಹಿರಿದಾದ ದೈತ್ಯನ ಸೀಳಿ ಸಂತೋಷದಿ ಮೊರೆಹೊಕ್ಕ ಕಂದನ ಪೊರೆದ ನರಸಿಂಹಗೆ 2 ಪಾವನತರಮಾದ ದೇವಸಮೂಹವ ಕಾವ ಕೃಪಾನಿಧಿ ಕಲ್ಯಾಣಮ್ಮಗೆ 3 ವಿಸ್ಫುರಿತದಲ್ಲಿರ್ಪ ವೈರ್ಮುಡಿ ತಿರುಮಣ್ಣು ಸರ್ಪಶಯನಗರ್ಪಿಸಿದಂತ ಗರುಡಗೆ 4 ಶ್ರೀಲೋಲನಡಿಗಳ ಲೀಲಾಮೃತಗಳ ಶೀಲರಾಗಿ ಕುಡಿದ ಶ್ರೇಷ್ಠ ಆಳ್ವಾರ್ರಿಗೆ 5 ವರದವಿಠಲನ ಒಲಿದು ತಾ ಬಂದಿನ್ನು ಗಿರಿಯೊಳು ನೆಲೆಸಿದ ವರ ಗುರುಪೀಠಕೆ 6 ಪಂಕಜಾಕ್ಷನಪಾದಪಂಕಜ ನಂಬಿಹ ವೆಂಕಟಪುರದೊಳಗಿರುವ ವೈಷ್ಣವರಿಗೆ 7 ವಿಷ್ಣುವಿನಂಶದಿ ಪುಟ್ಟಿ ಸಂತೋಷದಿ ಸೃಷ್ಟಿಯನಾಳ್ವ ಶ್ರೀ ಕೃಷ್ಣಭೂಪಾಲಗೆ8 ಮರೆಯದೆ ಭಕ್ತರ ಕರುಣದಿಂದಲಿ ಕಾಯ್ವ ವರಮಹದೇವನ ಪುರದಶ್ರೀರಂಗಗೆ 9
--------------
ರಂಗದಾಸರು
ಶೋಕವಾಗುವುದು ಯಾತಕೆ ಎಲಾ | ಕಾಕುಲಾತೀ ಸಲ್ಲ ಕರಣಶುದ್ಧನಾಗು ಪ ಜೀವಕ್ಕೆ ಎಂಬೆನೆ ಆನಂತಕಲ್ಪಕ್ಕೆ ಜೀವನಿತ್ಯ ಸುಖೀ ಎಲ್ಲಿದ್ದರೂ ಸಾವೆ ಹುಟ್ಟೀಯಲ್ಲಿ ಸತತದಲಿ ಚರಿಸಿದರು ಕ್ಲೇಶ 1 ಶರೀರಕೆಂಬೆನೆ ಚೇತನ ತಪ್ಪಿದರೆ ಇರುವುದು ಜಡವಾಗಿ ಬಿದ್ದುಕೊಂಡು ಹಿರಿದಾಗಿ ತಿಳಿವುದು ಜಡಕೆ ಲೇಪನವುಂಟೆ ಚರಾಚರದಲಿ ಇದೆ ಸಿದ್ಧವಾಗಿಪ್ಪಯಾ 2 ಪರಿ ಜ್ಞಾನದಲಿದು ಸಾರ ಕಾಣಿಸದು ಸಂಸಾರದೊಳಗೆ ಮಾರಜನಕ ನಮ್ಮ ವಿಜಯವಿಠ್ಠಲ ಹರಿಯ ಸಾರದಲೆ ಅಭಿಮಾನ ಬಿಡದವಗೆ ಇದೆ ಉಂಟು 3
--------------
ವಿಜಯದಾಸ
ಸರಸಿಜನಾಭಾ ದಕ್ಷಿಣ ಶರಧಿನಿವಾಸಾ ಪ ಹಿರಣ್ಯಕಶ್ಯಪು ತಾ ಪ್ರಹ್ಲಾದನಾ ಬಾಧಿಸಲು ಪರಿಯ ದೈವವೆ ಮೊರೆಯೋಗಲೂ ಹಿರಿದಾಗಿ ಕೇಳಿ ಹಿತದಲಿ ಬಂದು ಬೊಬ್ಬಿಡಲು ಹಿರಣ್ಯಗರ್ಭಾದಿಗಳು ಹಿರಿದು ಚಿಂತಿಸಲೂ 1 ಭುಗಿಲೆನೆ ಧಿಗಿಲೆನೆ ದಿಕ್ಕಿನೆಲಿ ಪ್ರತಿ ಶಬ್ದ ಪುಟ್ಟಿತಿರೆ ಝಗಝಗಿಪ ಬೆಳಗು ಕವಿದದು ಮೂರು ಲೋಕಕ್ಕೆ ಉಗುರು ಕೊನೆ ಪೊಗಳಿ ವೇದಗಳು ಬೆರಗಾಗಿ 2 ರಕ್ಕಸ ನೋಡಲು ಬಗೆದು ಕರುಳು ಕೊರಳಿಗೆ ಮಾಲೆ ಇಕ್ಕಿ ಭಕ್ತಗೆ ಮೆಚ್ಚಿ ವರವನಿತ್ತಾ ಕಕ್ಕಸದ ದೈವ ಅನಂತ ಪದುಮನಾಭ ಮುಕ್ತಿದಾಯಕ ವಿಜಯವಿಠ್ಠಲ ಮಹದಾ3
--------------
ವಿಜಯದಾಸ
ಕೊಡಬಹುದೇ ಮಗಳ - ಸಮುದ್ರರಾಜಕೊಡಬಹುದೇ ಮಗಳ ಪನಡೆದರೆ ಬಡವಹಳೆಂಬ ಕುಮಾರಿಯ |ಹಿಡಿಬಿಟ್ಟಿ ಮಾಡಿ ಹರಿಗೆ ಸಿಂಧುರಾಜನುಅ.ಪಕುರುಹಬಲ್ಲವರಾರು, ಕುಲಗೋತ್ರವಾವುದೊ |ಅರಿತ ರಾಯರೊಳಗೆ ಆರ ಮಗನೊ ಇವ |ವರುಶಭಾಂಗಿಗೆ ತಕ್ಕ ವರನಹುದೆ ಇವ |ಹಿರಿಯರೆಂಬುದ ನೆರೆಹೊರೆಯೂ ಕಾಣದನಿವ |ಪರಿಪಂಥಿಜನಕೆಲ್ಲ ಪ್ರಾಣಘಾತಕನಿವ |ನಿರುತ ಮೇಘವ ಪೋಲ್ವ ನೀಲಮೆಯ್ಯವನಿವ,ಹಿರಿದಾದ ನಾಲ್ಕು ಹಸ್ತಗಳುಳ್ಳವನಿವ |ಅರುಣಚ್ಛಾಯೆಯ ರೇಖೆ ಅರಳಿಸಿಹಾರುವ ||ಗರುಡಹಕ್ಕಿಯ ನೆಚ್ಚಿದ - ಎದೆಯ ಮೇಲೆ |ಭರದಿ ಒದೆಯ ಮೆಚ್ಚಿದ - ಘೋರರೂಪ |ಧರಿಸಿ ಕೋಪದಿ ಹೆಚ್ಚಿದ - ಕರೆವ ಗೋವ |ಕರುಗಳ ಕೊರಳುಚ್ಚಿದ - ಸಂಸಾರದೊಳ್ |ಇರುತಿಹ ನಾರಿಯರ ಮನವೆಲ್ಲ ಬಿಚ್ಚಿದ 1ಅಡಿಗಡಿಗೆ ಹತ್ತು ಅವತಾರವ ಮಾಡಿದ |ಕಡುಕಪತಿಯಲ್ಲದೆ ಭಾರಿ ಗುಣದವನಲ್ಲ |ಗಿಡದ ಮರೆಯಲಿದ್ದು ಕಪಿಯ ಕೊಂದನುಹೊಲ್ಲ |ನಡತೆಯಲಿ ಸಲೆ ಜನಲಜ್ಜೆ ಇವನಿಗಿಲ್ಲ |ಹಿಡಿದು ಪೂತನಿ ಮೊಲೆಯುಂಡ ಚೌಪಟಮಲ್ಲ |ಮಡುಹಿದ ಮಾವನ ಮಧುರೆಯೊಳಗೆಖುಲ್ಲ |ಕೊಡೆಮಾಡಿ ಬೆಟ್ಟವ ಗೋಕುಲದೊಳಗೆಲ್ಲ |ಮಡದಿಯರುಡುಗೆಯ ಕದ್ದದ್ದು ಹುಸಿಯಲ್ಲ ||ಕಡಹದ ಮರವೇರಿದ -ಅವರಮಾನ - |ಕೆಡಿಸಿ ಭಂಡರ ಮಾಡಿದ - ದಧಿಕ್ಷೀರ - |ಗಡಿಗೆ ಸೂರೆಯ ಮಾಡಿದ - ಕಾಳಿಂಗನ - |ಮಡುವ ಕಲಕಿ ನೋಡಿದ - ಸ್ಯಂದನವನು |ನಡೆಸುವ ಕಾರಣ ನರಗೆ ಸಾರಥಿಯಾದ 2ಊದುತ ಕೊಳಲನರಣ್ಯದೊಳ್ ಗೋಗಳ |ಕಾದು ಕುಂಚಿಗೆ ಮಾಡಿ ಕಂಬಳಿ ಪೊದೆವನು |ಓದನವನು ಬೇಡಿ ಹೊಟ್ಟೆಯ ಹೊರೆದನು |ಯಾದವರೊಳಗಾಡಿ ಎಂಜಲನುಂಡನು |ಕ್ರೋಧದಿಂದ ಸುರರ ಕೊಂದು - ಕೊಂದಿಡುವನು |ಪಾದರಿ ಪೆಣ್ಣುಗಳೊಳಗಿರುತಿಪ್ಪನುಆದಿಯೆ ಇವಗಿಲ್ಲ ಎಂದೆಂದಿಗಿಪ್ಪನು |ಭೂದಿವಿಜರ ಕೂಡ ಬಿಕ್ಷಕೆ ಪೋಪನು ||ಮೇದಿನಿಯೊಳಗಿರುವ - ಮಸ್ತಕವು ಬೋ - |ಳಾದವರೊಳಗಿರುವ - ನೋಡಲು ಭೇದಾ - |ಭೇದದಂದದಿ ತೋರುವ - ಸಭೆಯೊಳಗೆ |ಬೈದರೆ ಮೈದೋರುವ ಶೇಷಶಾಯಿ - |ಯಾದಂಥಪುರಂದರ ವಿಠಲನೆಂದರಿಯದೆ3
--------------
ಪುರಂದರದಾಸರು
ಗೋಕುಲದ ಗೋಪಿಯರದೆಷ್ಟು ಧನ್ಯರೋ |ಶ್ರೀಕಾಂತನನುರಾಗದಲಿ ಪಾಡುತಿಹರೊ ಪಕುಳಿತು ಕರೆವಾಗ ನಿಂತು ಕಳವೆಗಳ ಕುಟ್ಟುವಾಗ |ತಳಿಸಾರಣಿ ಸಮ್ಮಾರ್ಜಿಸುವಾಗ ||ಅಳುವ ಮಕ್ಕಳ ತೊಟ್ಟಿಲೊಳಿಟ್ಟು ತೂಗುವಾಗ |ಬೆಳಗುಜಾವದಿ ಮೊಸರ ಕಡೆವಾಗಲು 1ನಡೆವಾಗ ನುಡಿವಾಗ ಭೋಜನವ ಮಾಡುವಾಗ |ಉಡುವಾಗ ಆಭರಣ ಇಡುವಾಗಲು ||ಮುಡಿವಾಗ ಮಲ್ಲಿಗೆ ಉಯ್ಯಲೆಯನಾಡುವಾಗ |ಅಡಿಗಡಿಗೆ ತಾಂಬೂಲ ಮೆಲುವಾಗಲು 2ಪರಿಪರಿ ರಾಗದಿಂದಲಿ ಪರಿಪರಿ ಮಾತಿನಿಂದ |ಪರಿಪರಿ ಗೀತಪ್ರಸಂಗದಿಂದ ||ಪರಿಪೂರ್ಣನಾದ ಶ್ರೀ ಪುರಂದರವಿಠಲನ |ಹಿರಿದಾಗಿ ಮನದೊಳಗೆ ಸ್ಮರಿಸುತಿಹರು 3
--------------
ಪುರಂದರದಾಸರು
ನೀಚ ಮಾನವರಿಗೆಸಿರಿ ಬಂದರೇನು<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಈಚಲ ಮರ ದಟ್ಟ ನೆರಳಾದರೇನು ಪ.ನಾಚಿಕಿಲ್ಲದ ನರರು ಬಾಗಿದರೇನುಹೀಚಿನೊಳಿಹ ಫಲ ಹಣ್ಣಾದರೇನು ಅಪಹೊಲೆಯರೊಳು ಪದುಮಿನಿ ಹೆಣ್ಣು ಹುಟ್ಟಿದÀರೇನುಮೊಲೆಯ ತೊರೆಯದ ನಾಯಿ ಈದರೇನುಕಳಹೀನ ಕಾಮಿನಿಗೆ ಕಾಂತಿ ಹೆಚ್ಚಿದರೇನುಬಿಲದೊಳಗೆ ಸರ್ಪ ಹೆಡೆಯೆತ್ತಿದರೇನು ? 1ಕೋತಿಯ ಮೈಯೊಳುಭಾಂಡ ತುಳಕಲೇನುಹೋತಿನ ಗಡ್ಡವು ಹಿರಿದಾದರೇನುಯಾತಕೂ ಬಾರದ ಬದುಕು ಬಾಳಿದ್ದರೇನುರೀತಿಯಿಲ್ಲದ ನೆರೆಯ ಸ್ನೇಹವಿನ್ನೇನು 2ರಕ್ಷಣೆಯಿಲ್ಲದ ರಾಜ ರಾಜಿಸಲೇನುಭಿಕ್ಷೆ ಹುಟ್ಟದ ಊರು ತುಂಬಿದ್ದರೇನುಲಕ್ಷ್ಯವಿಲ್ಲದವಗೆ ಲಕ್ಷ್ಯ ಬಂದರೇನುಪಕ್ಷಪಾತವಿಲ್ಲದವನ ಅಶ್ರಯವಿನ್ನೇನು 3ಫಣಿಯ ಮಸ್ತಕದ ಮೇಲೆ ಮಣಿಯ ಮಿಂತಲೇನುಉಣಿಸಿ ದಣಿಸದ ಧನಿಯಿದ್ದರೇನುಋಣಗೇಡಿ ಮಕ್ಕಳ ರಟ್ಟೆ ಬಲಿತರೇನುಕ್ಷಣಚಿತ್ತವಿಲ್ಲದವನ ಸ್ಮರಣೆಯು ಇನ್ನೇನು 4ಸಾಕಲಾರದಾತನ ಸತಿಯ ಮೋಹವೇನುಜೊತೆ ಮಾಡದಾ ಹಣ ಗಳಿಸದರೇನುಕಾಕುಮಾನವರ ಸೇವೆ ಮಾಡಿದರೇನುಬೇಕೆಂದು ಭಜಿಸಿರೋ ಪುರಂದರವಿಠಲನ 5
--------------
ಪುರಂದರದಾಸರು
ವರುಷ ಕಾರಣವಿಲ್ಲ ಹರಿಭಜನೆಗೆ |ಅರಿತ ಸಜ್ಜನರೆಲ್ಲಕೇಳಿಸಮ್ಮುದದಿಪ.ತರಳತನದಲಿ ಕಂಡ ಹರಿಯ ಧ್ರುವರಾಯನು |ಹಿರಿಯ ತಾನವನಯ್ಯ ಕಂಡನೇನೂ ? ||ತರಳ ಪ್ರಹ್ಲಾದ ನರಹರಿಯನು ತಾ ಕಂಡ |ಹಿರಿಯನವನಪ್ಪ ತಾ ಮರೆಯಲಿಲ್ಲವೇನೊ ? 1ಹಿರಿದಾಗಿ ಬಹುಕಾಲ ಮರದ ಮೇಲ್ಬಾಳುವ |ಇರುಳು ಗಣ್ಣಿನ ಗೂಗೆ ತಾ ದೊಡ್ಡದೆ ? ||ಮರೆಯಾದ ಅರಗಿಣಿ ಹರಿಕೃಷ್ಣ ಎಂದೊದರೆ |ಮರಿ ದೊಡ್ಡದೆಂತೆಂದು ಪೇಳುವರು ಬುಧರು 2ಸುರುವದಾ ಒದರುವರು ಅರಣ್ಯವಾಸಿಗಳು |ಮರದಡಿಗೆ ಬಿದ್ದ ಎಲೆಗಳ ತಿನ್ನುತ ||ಪರಮಪಾತಕಿ ಅಜಾಮಿಳನು ನಾರಗ ಎನಲು |ಭರದಿಂದ ಸಲುಹಿದನು ಪುರಂದರವಿಠಲ 3
--------------
ಪುರಂದರದಾಸರು