ಒಟ್ಟು 23 ಕಡೆಗಳಲ್ಲಿ , 17 ದಾಸರು , 23 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸರುವದ ಪಠಿಸಿರೊ ಚತುರವಿಂಶತಿನಾಮ ಸಿರಿವಿರಿಂಚಾದಿಗಳಿಗೇ ಪ್ರಿಯಕರ ನಾಮ ಪ ಮಾಧವ ಗೋವಿಂದನ ಶ್ರೀಶ ವಿಷ್ಣು ಮಧುಸೂಧನ ತ್ರಿವಿಕ್ರಮನ 1 ವಾಮನ ಶ್ರೀಧರ ಹೃಷಿಕೇಶ ಪದುಮನಾಭ ದಾಮೋದರ ಸಂಕರುಷಣ ವಾಸುದೇವನ 2 ಅನಿರುದ್ಧ ಪುರುಷೋತ್ತಮ ದೇವನ ಅಧೋಕ್ಷಜ ನಾರಸಿಂಹ ಅಚ್ಯುತರಾಯನ 3 ಜನಾರ್ಧನ ಉಪೇಂದ್ರ ಹರಿ ಶ್ರೀ ಕೃಷ್ಣಸ್ವಾಮಿಯ ಜನನ ಮರಣ ರಹಿತನಾದ ಶ್ರೀನಿವಾಸನ 4 ಈ ಮಹಾನಾಮಂಗಳ ಪ್ರೇಮದಿಂ ಪಾಡಲು ಕಾಮಿತಾರ್ಥವೀವ ಶ್ರೀ ರಂಗೇಶವಿಠಲ 5
--------------
ರಂಗೇಶವಿಠಲದಾಸರು
ಸಾಕು ಜನ್ಮದ ಸುಖವು ಸಾಕಿನ್ನು ಹರಿಯೇ ಪ ಅನೇಕ ಜನ್ಮದ ಸುಖ ಬೇಡ ಹರಿಯೇ ಅ.ಪ ಹದಿನೆಂಟು ಸಾಸಿರ ವಿಧವಿಧ ಜನ್ಮವ ಮೊದಲು ಕಳೆಯುತಲೀಗ ನರನಾಗಿ ಜನಿಸೀ ಕ್ರೋಧ ಲೋಭಗಳಿಂದ ಮದ ಮಾತ್ಸರ್ಯಗಳಿಂದ ಅಧಿಕ ಮೋಹಿತನಾದೆ ಪದುಮಾಕ್ಷ ಪರಂಧಾಮಾ 1 ನರಜನ್ಮ ಹಿರಿದೆಂದು ಅರಿತವÀರು ಪೇಳ್ವರು ಹರಿ ನಿನ್ನ ನುತಿಸಿ ಪಾಡುವ ಭಕ್ತ ಜನಕೆ ಪರಮಪಾತಕ ಗೈದು ನರಕಕೆ ಪೋಪೆನ್ನ ಮರಳಿ ಕಳುಹಲಿಬೇಡ ಧರಣಿಗೆ ದೇವ ದೇವ 2 ನರಕದೆ ಸುಖವುಂಟು ಧರೆಯಲ್ಲಿ ಸುಖವಿಲ್ಲ ಕರುಣಾಕರ ದೇವ ಸಿರಿಕಾಂತನೇ ಧರೆಯೊಳು ನಾನಿಹೆ ಅರೆಘಳಿಗೇ ನಿನ್ನ ಪರಮನಾಮಾವಳಿಯ ಸ್ಮರಣೆಯ ಕೊಡುಸಾಕು 3 ಗಂಗೆಯ ಜನಕನೆ ಮಂಗಳ ಮೂರುತಿ ಮಾಂಗಿರಿವರವಾಸ ಶ್ರೀಶ್ರೀನಿವಾಸ ಅಂಗಜಾತನ ತಾತ ಶೃಂಗಾರ ಪೂರಿತ ಭಂಗ ಮಾಡಿಸಬೇಡ ರಂಗೇಶ ಭವಬೇಡ 4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಹ್ಯಾಗೆ ಕಾಂಬೆನು ಹಂಸಯೋಗಗಮ್ಯನೆ ನಿನ್ನ ವಾಗೀಶಪಿತ ದಯವಾಗೋ ಮೋಹನ ಪ. ಮನವು ನಿನ್ನಯ ಸೇವೆಗನುವಾಗಿ ನಿಲದು ಸ- ಜ್ಜನ ಸಂಗ ಸಲ್ಲಾಪವನು ಮಾಡಗೊಡದು ಘನಮೋಹಕೊಳಗಾದ ತನುವ ಪಿಡಿವುದು ಶ್ರೀ- ವನಿತೆಯರಸ ನಿನ್ನ ನೆನವೆಂತು ಬಹುದೊ 1 ಹಂಚಿ ದುರ್ವಿಷಯಕ್ಕೆ ವಂಚನೆಗೊಳಿಸಿ ಪ್ರಪಂಚದೋಳಿರಿಸಿ ಪಂಚಬಾಣನ ಶುಕಚುಂಚುವೇದದಿ ತ್ವಂಚ ಹಂಚಗೊಳಿಸಿ ಮೋಹ ಮಿಂಚಿಕೊಂಡಿಹುದೊ 2 ದೀರ್ಘಾದಿ ಸಹಿತಾದಿ ವರ್ಗಗಳನು ಗೆಲುವ ಮಾರ್ಗ ಕಾಣದೆ ದುಸ್ಸಂಸರ್ಗದಿ ಸಿಲುಕಿ ಭರ್ಗ ವಂದ್ಯನೆ ಗುಣಸರ್ಗದ ಬಲೆಯಿಂದ ನಿರ್ಗಮಗೊಂಡಪವರ್ಗವೆಂತಹುದೊ 3 ದಿನದಿನದೊಳಗಾಹತನುವ ನೋಡಲು ಮುಂದಿ ನನುಭವವನು ಕಾಂಬದನು ನಾನೇನರಿಯೆ ಜನರ ರಕ್ಷಾದಿಕರ್ತನೆ ನೀನೆ ಬಲ್ಲಿ ಮುಂ- ದಿನ ಕಾರ್ಯವಹದೆಂತೊ ವನಜಲೋಚನನೆ 4 ಸತಿ ಸುತಾದಿಗಳೆಲ್ಲ ಹಿತರೆಂದು ಗ್ರಹಿಸುವ ಮತಿಹೀನ ಜನಕೆ ದುರ್ಗತಿಯು ತಪ್ಪುವದೆ ಅತುಳ ಮಹಿಮ ಭಕ್ತಹಿತನಾದ ವೆಂಕಟ ಪತಿ ನೀನೆ ಎನಗೆ ಸದ್ಗತಿ ತೋರೊ ಹರಿಯೆ 5
--------------
ತುಪಾಕಿ ವೆಂಕಟರಮಣಾಚಾರ್ಯ
ಎನ್ನ ಮನದ ಡೊಂಕ ತಿದ್ದಿ-ಚರಣದಲ್ಲಿ ಸೇರಿಸೋ |ನಿನ್ನ ಸೇವಕನಾದ ಮೇಲೆಇನ್ನು ಸಂಶಯವೇಕೆ ಕೃಷ್ಣ ಪಉದಯವಾದರೆ ಊಟದ ಚಿಂತೆ ಅದರ ಮೇಲೆ ಭೋಗದ ಚಿಂತೆ |ಹದಿನಾಲ್ಕು ಲೋಕಂಗಳನಾಳಬೇಕೆಂಬ ಚಿಂತೆ ||ಇದು ಪುಣ್ಯ ಪಾಪವೆಂದು ಹೃದಯದಲಿ ಭಯವಿಲ್ಲದಲೆ |ಮದ ಮೋಹಿತನಾದೆ ನಿನ್ನ ಪದವ ನಂಬದೆ-ದಯಾಳೊ 1ನೆರೆಮನೆಗಳ ಭಾಗ್ಯವ ನೋಡಿ-ತರಹರಿಸುತ ಅಸೊಯೆಯಿಂದ |ಹರಿಯ ಸ್ಮರಣೆಗೆ ವಿಮುಖನಾದೆ - ನರರಸ್ತುತಿಯ ನಾ ಮಾಡಿದೆ ||ಪರರ ಸತಿಗೆ ಪರರನ್ನಕೆ ತಿರುಗಿ ತಿರುಗಿ ಚಪಲನು ಆದೆ |ಗುರುಹಿರಿಯರ ದೂಷಿಸುತಲಿ ಮರುಳನಾದೆ ದೀನಶರಣ್ಯ 2ಅಗಣಿತಸುಖ ಬಂದರೆ ನಾನು -ಅಗಣಿತದುಃಖಕೆ ಹರಿಯೆನ್ನುವೆನು |ಜಗದೊಳಾವ ಲಾಭವು ಬಂದರು ಧನಿಯು ನಾನೆ ಎಂಬೆ ||ಮಿಗೆ ಹಾನಿಗೆ ಹರಿಯನು ದೂಷಿಸಿನೆಗೆದು ಪತಂಗವು ಕಿಚ್ಚಲಿ ಬೀಳುವ |ಬಗೆ ನಾನಾದೆನುಪುರಂದರವಿಠಲನಖಗರಾಜಸುವಾಹನ ಶ್ರೀ ಕೃಷ್ಣ 3
--------------
ಪುರಂದರದಾಸರು
ಏನು ಧನ್ಯಳೋ - ಲಕುಮಿ - ಎಂಥ ಮಾನ್ಯಳೋ ಪಸಾನುರಾಗದಿಂದ ಹರಿಯ ತಾನೆ ಸೇವೆ ಮಾಡುತಿಹಳೊ ಅ.ಪಕೋಟಿ ಕೋಟಿ ಭೃತ್ಯರಿರಲು ಹಾಟಕಾಂಬರನ ಸೇವೆ |ಸಾಟಿಯಿಲ್ಲದೆ ಪೂರ್ಣಗುಣಳು ಸರ್ವಕಾಲ ಮಾಡುತಿಹಳು 1ಛತ್ರ ಚಾಮರವ್ಯಜನಪರ್ಯಂಕ ಪಾತ್ರರೂಪದಲ್ಲಿ ನಿಂತು |ಚಿತ್ರಚರಿತನಾದ ಹರಿಯ ನಿತ್ಯಸೇವೆ ಮಾಡುತಿಹಳು 2ಸರುವಸ್ಥಳದಿ ವ್ಯಾಪ್ತನಾದ | ಸರುವದೋಷರಹಿತನಾದ |ಗರುಡಗಮನನಾದ ಪುರಂದರವಿಠಲನ ಸೇವಿಸುವಳೋ 3
--------------
ಪುರಂದರದಾಸರು
ನಿನ್ನ ನಂಬಿದೆನೊ ನೀಯೆನ್ನ ಸಲಹಯ್ಯಎನ್ನ ಗುಣದೋಷಗಳ ಎಣಿಸಬೇಡಯ್ಯ ಪಬಾಲ್ಯದಲಿ ಕೆಲವು ದಿನ ಬಿರಿದೆ ಹೋಯಿತು ಹೊತ್ತುಮೇಲೆ ಯೌವನಮದದಿ ಮುಂದರಿಯದೆ ||ಸ್ಥೂಲ ಸಂಸಾರದಲಿ ಸಿಲುಕಿ ಬಳಲಿದೆ ನಾನುಪಾಲಿಸೈ ಪರಮಾತ್ಮ ಭಕುತಿಯನು ಕೊಟ್ಟು 1ಆಸೆಯೆಂಬುದು ಅಜನ ಲೋಕ ಮುಟ್ಟುತಲಿದೆಬೇಸರದೆ ಸ್ತ್ರೀಯರಲಿ ಬುದ್ದಿಯೆನಗೆ ||ವಾಸುದೇವನೆ ನಿನ್ನ ಪೂಜೆಗೆಯ್ದವನಲ್ಲಕೇಶವನೆ ಕ್ಲೇಶವನು ನಾಶ ಮಾಡಯ್ಯ 2ಈ ತೆರದಿ ಕಾಲವನು ಕಳೆದೆ ನಾನಿಂದಿರೇಶಭೀತಿ ಮೋಹದಿ ಙ್ಞÕನರಹಿತನಾದೆ ||ಮಾತೆ ಶಿಶುವನು ಕರೆದು ಮನ್ನಿಸುವ ತೆರನಂತೆದಾತಶ್ರೀಪುರಂದರವಿಠಲ ದಯಮಾಡೈ3
--------------
ಪುರಂದರದಾಸರು
ರೂಪತೋರೆನಗೆ ಗುರುವೆರೂಪತೋರೆನಗೆರೂಪನಾಮಕೆ ವಿರಹಿತನಾದ ದೇವನೆರೂಪತೋರೆನಗೆಪಬ್ರಹ್ಮಾಂಡ ತಂಡಗಳೊಳು ಹೊರಗಾವರಸಿಕೊಂಡುಬ್ರಹ್ಮಾಂಡ ಖಂಡಗಳ ಬೆಳಗುವೆ ವಿರೂಪವೆಡೆಗೊಂಡು1ನಿನ್ನ ತೇಜಸ್ಸಿನಿಂದ ತೋರ್ಪುದು ತೋರ್ಪ ಜಗವೆಲ್ಲನಿನ್ನನುಳಿದೇ ಬೇರೆ ತೋರೆನಲವಕಾಶವ ಇಲ್ಲ2ನಾದ ಬಿಂದುಕಳೆ ನೀನೆಂಬೆನೆ ದೃಶ್ಯವು ಇವು ಎಲ್ಲನಾದ ಬಿಂದುಕಳೆ ಸಾಧಕಗಳು ವಸ್ತು ನಿಜವಲ್ಲ3ಬೋಧಾನಂದ ತುರೀಯಗಳೆಂಬೆನೆ ಆ ಅವಸ್ಥೆಗಳೆಲ್ಲಬೋಧಾನಂದ ತುರೀಯದಿ ನೋಡಲು ಎದುರಿದ್ದವು ಎಲ್ಲ4ನಿರ್ವಿಕಾರ ನಿರ್ಗುಣ ನಿರವಯನಿರಂಜನಸ್ಪೂರ್ತಿ ಪರಮಗುರು ಪರಬ್ರಹ್ಮ ಚಿದಾನಂದಮೂರ್ತಿ5
--------------
ಚಿದಾನಂದ ಅವಧೂತರು
ಶ್ರೀ ಶುಕ್ರಾಚಾರ್ಯ ಸ್ತೋತ್ರ93ಶ್ರೀಶಪ್ರಿಯ ಭೃಗುವಂಶಜಾತ ಶುಕ್ರಾಚಾರ್ಯನೀ ಸಲಹೋ ಎನ್ನನ್ನ ನಮೋ ನಮೋ ನಮಸ್ತೇ ಪಶ್ರೀ ಪದ್ಮನಾಭಜನು ಸುಪವಿತ್ರ ವಿಧಿಸುತಭೃಗು ಅಪತ್ಯನುಕವಿತತ್ಪುತ್ರರತ್ನನು ಶುಕ್ರಈ ಪುಣ್ಯ ಶ್ಲೋಕ ಶುಕ್ರಾಚಾರ್ಯ ಉಷನ ಶ್ರೀಪಪ್ರಿಯನಿಗೆ ನಮೋ ಮಂತ್ರ ತಂತ್ರ ಮಹಾಕವಿಗೆ 1ದೈತ್ಯಮಂತ್ರಿಯೇ ಸರ್ವಶಾಸ್ತ್ರ ಪ್ರವಾರ್ತಾರದೈತ್ಯಾನಂ ಪರಮಂ ಗುರುಂ ಪ್ರಭುಸ್ತಾರಾ ಗಣಾನಾಂಮಹಾದ್ಯುತಿಯೇ ನಮೋ ಎನ್ನ ಪೀಡೆಗಳ ಪರಿಹರಿಸಿದಯದಿಪಾಲಿಸೆನ್ನನ್ನು ಹರಿಭಕ್ತ್ಯಾದಿಗಳಿತ್ತು 2ಅಕಳಂಕಅಜಪಿತಪ್ರಸನ್ನ ಶ್ರೀನಿವಾಸನುಶುಕ್ರನೆಂದೆಣಿಸುವನುಶೋಕರಹಿತನಾದ್ದರಿಂದಶ್ರೀಕರಾರ್ಚಿತ ಈ ಶುಕ್ರ ನಿನ್ನೋಳ್ ಪ್ರಕಾಶಿಪನುಶುಕ್ರನ್ನ ಒಲಿಸೆನಗೆ ಶುಕ್ರಾಭಿದ ಮಹಾಯಶನೇ 3 ಪ
--------------
ಪ್ರಸನ್ನ ಶ್ರೀನಿವಾಸದಾಸರು