ಒಟ್ಟು 23 ಕಡೆಗಳಲ್ಲಿ , 16 ದಾಸರು , 21 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹೇ ದಯಾಸಾಗರ ಸ್ವಾಮಿ ವೇದ ಮಾಧವ ಮುಕುಂದ ಮನುಮುನಿ ಪ್ರೇಮಿ ಪ ವೇದಗೋಚರ ಸಾಧುಸನ್ನುತ ನಾದಪ್ರಿಯ ಭವಬಾಧೆರಹಿತ ಭೇದಹರ ಜಗ ಪಾದ ಭಜಿಸುವೆ ಪಾಲಿಸೆನ್ನ ಅ.ಪ ಮದಗಜ ಮುದದಿಂದ ಪೊರೆದಿ ಪ್ರಭುವೆ ಮದಗಜಗಮನೆಯ ಮಾನದಿಂ ಕಾಯ್ದೆ ಪದುಮವದನೆಶಾಪ ಕಳೆದೆ ಕರುಣಿ ಸದಮಲಬಾಲನ ತಪಕೆ ನೀನೊಲಿದಿ ಸುದಯಹೃದಯ ಸುಸದನಪಾಲ್ಸಿದಿ ಸದಮಲಾಂಗನೆ ಪದುಮವದನ ಮುದದಿ ನಿಮ್ಮಡಿ ಪದುಮಗಳು ಎ ನ್ಹøದಯ ಮಂದಿರದಿರಿಸಿ ರಕ್ಷಿಸು 1 ಗರುಡಂಗೆ ವರಮೋಕ್ಷ ನೀಡ್ದಿ ನಿನ್ನ ಸ್ಮರಿಪರಿಗೆ ದರುಶನಕೊಡುತಲಿ ನಡೆದಿ ತರುಣಿಯ ಎಂಜಲ ಸವಿದಿ ವನ ಚರನಿಗೆ ವಶನಾಗಿ ಅಭಯ ಪಾಲಿಸಿದಿ ಭರದಿ ದಕ್ಷಿಣಶರಧಿ ಹೂಳಿಸಿ ಮೆರೆವ ಲಂಕಾಪುರವ ಮುತ್ತಿದಿ ದುರುಳರ್ಹಾವಳಿ ದೂರಮಾಡಿ ಧರೆಯ ಭಾರವ ನಿಳುಹಿದಯ್ಯ 2 ನುಡಿಸಿದರೆನ್ನಿಂದಲಾವ ವಚನ ನುಡಿಸಿದ ಬಳಿಕದನು ನಡೆಸಿಕೊಡಭವ ನುಡಿಯಂತೆ ನಡೆಯೆನಗೆ ಸ್ಥಿರವ ಕೊಟ್ಟೆ ನ್ನೊಡಲೊಳಗದಂತೆಯಿರು ಅನುದಿನವು ಪೊಡವಿ ಮೂರನು ಒಡಲೊಳಿಟ್ಟಿಡೆ ಬಿಡದೆ ಆಳುವ ಒಡೆಯ ಶ್ರೀರಾಮ ದೃಢದಿ ನಿಮ್ಮಯ ಅಡಿಯ ನಂಬಿದೆ ಬಿಡಿಸು ಎನ್ನಯ ಮಂದಜ್ಞಾನವ 3
--------------
ರಾಮದಾಸರು
ಇಂಥಾ ದೂರುವುದೊಳಿತಲ್ಲವರೆಮ್ಮ ರಂಗಯ್ಯನು, ಹಾವಳಿ |ಅಂಥಾದು ಏನು ಮಾಡಿದನಮ್ಮ ಎಂದೆಂದಿಗು ನಮ್ಮ ||ಸಂತತಿಯೊಳು ಗುಣವಂತರೇ ಕೃಷ್ಣ ನಿ-ರಂತರ ಬಡವರನೆಂತು ದಣಿಸುವ ಪಕಣ್ಣೇ ಬಿಡುವನು ಬೆದರಿಸೆ ಮಾತರಿಯ ವನದೊಳಗಡಗಿಹ |ಮಣ್ಣು ತಿಂಬುವ ಬಾಯ್ದೆರೆವನಾರ್ಯ ಹಿತಕರ್ಮಗಳರಿಯ ||ಅನ್ನ ತಿನ್ನಲರಿಯ ಬೆಣ್ಣೆ ಮೆಲುವ ಬಲು |ಹೆಣ್ಣು ನೆರೆದು ಮತ್ತನ್ಯರೊಳು ಕಲಹೆ 1ಎಲ್ಲ್ಯಾಡೊದು ದುರ್ಗಂಧವು ಕಠಿಣಾಂಗ ನೆಲಗೆದರುವ ಶ್ರಿಂಗ |ರಿಲ್ಲದೆ ರಹದೆರೆವರ್ಭಕ ರಂಗ ಪಾಪವರಿಯ, ಮಂಗ- ||ರೊಲ್ಲಭ ಅಹಿಫಣೆಯಲ್ಲಿ ಕುಣಿದು ವಸ- |ನಿಲ್ಲದೆ ತಿರುಗುವಗೆಲ್ಲಿದೊ ವಾಚಿ2ಮೀನ ಕೂರ್ಮದಂತ್ಯುದಕದೊಳಗೆ ಆಡುವ ಕೆಸರೊಳಗೆ |ಶ್ರೀನಾರಸಿಂಹ ಸಣ್ಣವರೊಳಗೆ ಆಡುವ ತನ್ನೊಳಗೆ ||ತಾನೇ ಅಗ್ನಿಯ ನುಂಗಿ ನಭಕೇಶಗೆಮಾನವಕೊಟ್ಟಾನೆ ಪ್ರಾಣೇಶ ವಿಠಲನ 3
--------------
ಪ್ರಾಣೇಶದಾಸರು
ಎಲ್ಲಿ ಬೆಣ್ಣೆಯ ಬಚ್ಚಿಡುವೆನಾ-ಈ |ಕಳ್ಳ ಕೃಷ್ಣನ ಹಾವಳಿ ಘನವಾಯಿತು ಪನೆಲುವು ನಿಲುಕದೆಂದಿಡುವೆನೆ-ನೋಡೆ |ಬೆಳೆಯಬಲ್ಲನಿವ ಬ್ರಹ್ಮಾಂಡಕೆ ||ತಿಳಿಸದೆ ಕತ್ತಲೊರೆಳಿಡುವೆನೆ-ಅಕ್ಕ |ಬೆಳಕೆಲ್ಲವೀತನ ಕಂಗಳ ಢಾಳ 1ಎವೆಯಿಕ್ಕದಲ್ಲಿ ಕಾದಿಡುವೆನೆ-ನೋಡೆ |ದಿವಿಜರೆಲ್ಲ ಈತನಮಾಯೆ||ಅವರಬಳಿಗೆ ಮೊರೆಯಿಡುವೆನೆ-ಅಕ್ಕ |ಇವನಿಟ್ಟ ಬಂಟರಿಂದ್ರಾದಿಗಳೆಲ್ಲರು 2ಈಗಲೆ ಇಂತು ಮಾಡುವನು-ಮುಂದೆ |ಅಗಲಿಸುವನು ನಮ್ಮ ಒಗೆತನವಮ್ಮ ||ಕೂಗಿ ಹೇಳಲು ಮತ್ತೆ ಕೇಡಮ್ಮ-ಮುಂದೆ |ಹೇಗೆ ಪುರಂದರವಿಠಲನಟ್ಟುಳಿಗೆ? 3
--------------
ಪುರಂದರದಾಸರು
ನಿನ್ನ ಸಮಾನ ದೇವರುಂಟೇನೋ ಎನ್ನಯ್ಯ ರಂಗ ಪನಿನ್ನ ಸಮಾನ ದೇವರುಂಟೇ ಇನ್ನೀ ಭುವನಭವಾಂಡದೊಳಗೆಬನ್ನಬಡಿಸದೆ ದಾಸಜನರ ನಿನ್ನ ಪ್ರಾಣಸಮಮಾಡಿ ಪೊರೆಯುವಿ ಅ.ಪಸೋಮಕಾಸುರ ದೈತ್ಯನ್ನ ವಧಿಸಿ ವೇದವನು ತಂದುನೇಮದಿಂ ಮತ್ತೀ ಸೃಷ್ಟಿ ನಿಲ್ಲಿಸಿ ಸಾಗರವ ಮಥಿಸಿಪ್ರೇಮದಮೃತ ಸುರರಿಗುಣಬಡಿಸಿ ನಿಸ್ಸೀಮನೆನಿಸಿಸೋಮಶೇಖರನಮಿತ ಕಷ್ಟವ ಪ್ರೇಮ ದೃಷ್ಟಿಯಿಂ ದೂರ ಮಾಡಿಭೂಮಿತ್ರಯಕೆ ಕ್ಷೇಮ ನೀಡಿದಿ ಕಾಮಿತ ಭಕ್ತರ್ವರಪ್ರದಾತ 1ಎರಡೆ ಅಡಿಗಿಡಿಭುವನವನು ತುಳಿದಿ ಅಮಿತಮಹಿಮಪರಮಉಗ್ರರೂಪ ಧರಿಸಿದಿ ಭಕುತಗಾಗಿಅರಮನೆಯ ಸ್ತಂಭೊಡೆದು (ಮೂ) ಡಿದಿ ಪರಮದಯಾನಿಧಿಚರಣದಾಸರ ಪೊರೆಯುಲೋಸುಗ ನರನ ರೂಪದಿನಿರುತ ವಿಪಿನಕೆ ತೆರಳಿ ದಕ್ಷಿಣಶರಧಿ ಹೂಳಿಸಿದುರಳರ್ಹಾವಳಿ ದೂರ ಮಾಡಿದಿ 2ದ್ವಾರಕೆಂಬ ಪುರವ ನಿರ್ಮಿಸಿ ಅದಕೊಡೆಯನೆನಿಸಿಸಾರಭಕುತರ ಇಷ್ಟಪೂರೈಸಿ ಮಹಲೀಲೆ ನಡೆಸಿಪರಮಕಂಟಕರನ್ನು ನಾಶಿಸಿ ಧರೆಭಾರಮಿಳಿಸಿಪರಮಸುರಗಣಕ್ಹರುಷವಿತ್ತು ಧಾರುಣಿಯನು ಪರಿಶುದ್ಧಮಾಡಿಕರುಣದಾಳುವಿ ಭುವನತ್ರಯವನು ಶರಣಜನಪ್ರಿಯವರದ ಶ್ರೀರಾಮ 3
--------------
ರಾಮದಾಸರು
ನಿಲ್ಲು ರಂಗ ನಿಲ್ಲು ರಂಗ ನಿಲ್ಲೆಲೊ ರಂಗನಿಲ್ಲು ಮಜ್ಜಿಗೆಯನೆಲ್ಲ ಚೆಲ್ಲಿ ಬೆಣ್ಣೆ ಮೆದ್ದ ಕಳ್ಳ ಪ.ಜಾವ ಜಾವಕೆ ಕಾಡುವೆ ನಾವು ಕಟ್ಟಿದರೋಡುವೆಹಾವಳಿಗಾರೆವೊ ನಿನ್ನ ದೇವಕಿ ಚಿನ್ನಗೋವಳೆಗಾರ್ತಿರ ಚಿತ್ತವ ಆವಾಗೆ ಗೆದ್ಯೊಮಾಧವದೇವಿ ಗೋಪಿಗೆ ಹೇಳುತೈದೆವೊ ನಡೆ ಯಾಕೊ ಪಿಂತೆ 1ಬಾಲ ಬಾಲ ಬಾಲನೆಂದು ತಾಳಬೇಕೆಷ್ಟು ದಿನೆಂದುಮೇಲೆ ಬಲ್ಲಿದರ ಮಗ ನೀಲಮೇಘಾಂಗಕಾಲಿಗೆರಗುವೆವಿನ್ನು ಪಾಲಿಸೊ ನಮ್ಮನು ನೀನುನಾಲಿಗೇಲಿ ನಿಮ್ಮ ಗುಣಂಗಳ ಹೇಳೋದು ಕಠಿಣ 2ಬಿಟ್ಟು ಕೆಟ್ಟೆವೊ ಪಾದವ ಕಟ್ಟೆವೊ ಬಾರೊ ದೇವಸಿಟ್ಟಲಿ ಯಶೋದೆ ಮೇಲೆ ಅಟ್ಟಿ ಬಿಡಲುಗಟ್ಟಿ ಮೊಸರು ಹಾಲನು ಅಷ್ಟು ಕುಡಿದಧಿಕನೊದಿಟ್ಟ ಪ್ರಸನ್ನವೆಂಕಟ ಕೃಷ್ಣ ನಿಮ್ಮಮ್ಮನಾಣಿಟ್ಟೆ 3
--------------
ಪ್ರಸನ್ನವೆಂಕಟದಾಸರು
ಸಾರ್ವಭೂಪಾಲನ ಸೂನುವೆನಿಸಿಕೊಂಡುಸೋರೆ ಕೂಳಿನ ತಿರುಕೆ ||ನಾರಿ ಲಕ್ಷ್ಮೀಕಾಂತ ನಿನ್ನ ನಂಬಿದವಗೆದಾರಿದ್ರ್ಯದಂಜಿಕೆಯೆ? 2ಸುರನದಿಯಲಿ ಮಿಂದು ಶುಚಿಯಾದ ಬಳಿಕಿನ್ನುತೀರ್ಥದ ಅಟ್ಟುಳಿಯೇ ||ಕರುಣಾನಿಧಿಯೆಂದು ಮೊರೆಹೊಕ್ಕ ದಾಸಗೆದುರಿತದ ದುಷ್ಫಲವೆ? 3ಗರುಡನ ಮಂತ್ರವ ಕಲಿತು ಜಪಿಸುವಂಗೆಉರಗನ ಹಾವಳಿಯೆ ||ಹರಿಯ ಪಕ್ಕದೊಳು ಮನೆ ಕಟ್ಟಿದಾತಂಗೆಕರಿಗಳ ಭೀತಿಯುಂಟೆ?4ಪರಮಪುರುಷ ಸುಗುಣಾತ್ಮಕ ನೀನೆಂದುಮೊರೆಹೊಕ್ಕೆ ಕಾಯೊ ಎನ್ನ ||ಉರಗಾದ್ರಿವಾಸ ಶ್ರೀ ಪುರಂದರವಿಠಲನೆಪರಬ್ರಹ್ಮ ನಾರಾಯಣ 5
--------------
ಪುರಂದರದಾಸರು