ಒಟ್ಟು 25 ಕಡೆಗಳಲ್ಲಿ , 10 ದಾಸರು , 20 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸರ್ವಾಮಯ ಹರ ವಿಠಲನೇ | ಸರ್ವದಾನೀನಿವರ ಸಲಹ ಬೇಕೊ ಪ ಶರ್ವಾದಿ ಸುರವಂದ್ಯ ಸಾರ್ವಭೌಮ ಸ್ವಾಮೀಅ.ಪ. ತ್ರಿವಿಧ ಭವ ಹಾರೀ 1 ಸರ್ವಸೃಷ್ಟೀಶನೇ ಸರ್ವಪಾಲಕ ಹರಿಯೇಸರ್ವ ಸಂಹಾರಕನೇ ಸರ್ವೋತ್ತಮಾಸರ್ವಾಂತರಾತ್ಮ ಶ್ರೀ ವೆಂಕಟೇಶನೆ ನಿನ್ನಸರ್ವದಾ ಭಜಿಸುವಗೆ ಸರ್ವಮಂಗಳವೀಯೋ 2 ಭಾವಿಮರುತಲೀತ | ಭಾವ ಭಕುತಿಗಳಿಂದಸೇವಿಸುವ ಹಯಮೊಗನ | ತವ ದಿವ್ಯ ರೂಪಾಆವ ತನುಕರಣ ಮನ | ಸರ್ವಾರ್ಪಣೆಂಬ ಮತಿಓವಿನೀನಿವಗಿತ್ತು | ಪಾವನವಗೈಯ್ಯೊ 3 ಪಂಚಬೇಧದ ಜ್ಞಾನ | ಸಂಚಿಂತನೇ ಇತ್ತುಅಂಚೆವಹ ಮತ್ತೆ ಹರಿ | ಮಂಚವಿಪಗೇಂದ್ರಾ |ಮುಂಚೆ ತರತಮ ತಿಳಿಸಿ | ವಾಂಛಿತಾರ್ಥದ ನಿನ್ನಸಂಚಿಂತನೆಯಲೇ ಇರಿಸೊ ಪಂಚಾಸ್ಯ ಪ್ರಿಯನೆ 4 ಅದ್ವೈತ ಚಿಂತನೆಯನೀವೊಲಿದು ಇವಗಿತ್ತು | ಭಾವದಲಿ ತೋರೊ ತವರೂಪ |ಈ ವಿಧದಿ ಬಿನೈಪೆ ಪವನಾಂತರಾತ್ಮ ಗುರುಗೋವಿಂದ ವಿಠಲಯ್ಯ ಪಾಲಿಸೋ ಜೀಯಾ 5
--------------
ಗುರುಗೋವಿಂದವಿಠಲರು
ಸುಂದರ ಕಾಂಡ ರಾಮಾಯಣ ಸಿರಿ ಸಿರಿ ಹನುಮನಾ ||ಮೆರೆವ ಸಚ್ಚರಿತೆ ಮಮ | ಗುರುವೆ ನುಡಿಸೀದಷ್ಟುಒರೆವೆ ಕೇಳ್ಪುದು ಸಜ್ಜನಾ ಪ ಗೃಹ ಮೇಧಿ ಇರುವ ಬಗೆ | ಬಹು ಪರೀಯಲಿ ತೋರಿಗುಹ ವನಂಗಳನೆ ಚರಿಸೀ |ಗೃಹಿಣಿಯನು ಕಾಣದಲೆ | ಬಹು ನಟಸಿ ನರರಂತೆಮಹ ಮಹಿಮ ರಾಮ ಬರಲೂ 1 ಪತಿ ದಶರಥನ | ಸುತನ ಕಂಡೆರಗಿ ರವಿಸುತಗೆ ರಾಜ್ಯವನೆ ಕೊಡಿಸೀ 2 ರಾಮನಾಣತಿ ಪೊತ್ತು | ಭೂಮಿಜೆಯ ವಾರ್ತೆಯನುನೇಮದಲಿ ತರುವೆ ನೆನುತಾ ||ಆ ಮಹಾ ಶರಧಿಯನು | ಧೀಮಂತ ಲಂಘಿಸುತಭೂಮಿಜೆಯ ಕಂಡು ಎರಗೀ 3 ಪತಿ | ರಾಮನ್ನ ಕಂಡ ಪರಿಆಮೋದದಲ್ಲಿರುತಿರೇ 4 ಶ್ರೀ ಲೋಲ ರಾಮನಿಗೆ | ಆಳಾಗಿ ಇರಲೊಂದುವಾಲುಳ್ಳ ಕಪಿಯು ಬಂದೂ ||ಕೇಳುವರು ಇಲ್ಲದಲೆ | ಪೋಲಾಗಿ ಹೋಯ್ತೆಂಬಕೀಳು ನುಡಿಗವಕಾಶ ಕೊಡದೇ 5 ವಂದೆರಡು ಹಣ್ಣಾನು | ತಿಂದ್ಹೋಗುವೇನೆಂದುಇಂದೀವರಾಕ್ಷಿಯ ಬೇಡುತಾ ||ನಂದೀಸಿ ಅಶೋಕ | ನಂದನ ವನವ ಮದಸಿಂಧೂರ ನಂತೆಸಗಿದೇ 6 ಕೋಟ್ಯಶೀತಿಯು ನಿ | ಶಾಟ ಯೂಥಪ ಸಹಸಾಷ್ಟ ಕಾಯುತ ಮುಖ್ಯರಾ ||ಖೇಟ ರಾವಣ ಸೇನೆ | ಕೂಟ ಮೂರರಲೊಂದುರೋಟಿಸುತ ನೀ ಮೆರೆದೆಯೋ 7 ಅಕ್ಷೋಹ್ಣಿ ಬಲ ಸಹಿತ | ರಾಕ್ಷಸಾಧಿಪ ಸುತನುಅಕ್ಷಯ್ಯ ಕುವರ ಬರಲೂ ||ಪಕ್ಷೀಂದ್ರ ತೆರ ಪಿಡಿದು | ಈ ಕ್ಷಿತಿಗೆ ಅಪ್ಪಳಿಸೆತಕ್ಷಣದಲಸು ನೀಗಿದಾ 8 ಮಂದಜಾಸನ ವರದಿ | ಇಂದ್ರಜಿತು ಮದವೇರಿಬಂದೆಸೆಯೆ ಬ್ರಹ್ಮಾಸ್ತ್ರವಾ ||ಛಂದದಲ್ಯೋಚಿಸುತ | ಬಂಧನಕೆ ನೀನಾಗಿನಂದದ ಲ್ವೊಳಗಾದೆಯೋ 9 ತೆತ್ತೀಸ ಕೋಟಿ ದೇ | ವತ್ತೀಗಳಿಗೆಲ್ಲಾಉತ್ತೂಮನಾದ ನೀನೂ ||ಸುತ್ತೀಸಿ ಬಾಲವನು | ಹತ್ತೂತಲೆಯವನನೆತ್ತೀಯ ಮೇಲ್ ಕುಳಿತೆಯೋ 10 ನಾರೀಯ ಚೋರ ನಿ | ನ್ನಾರೆಂದು ಕೇಳಾಲುಮಾರುತ್ತರವಿತ್ತು ಜರಿದೇ ||ಮಾರೀಚ ಮೊದಲಾದ | ನೂರಾರು ರಕ್ಕಸರದೂರೋಡಿಸೀದವನ ದೂತಾ 11 ಕೋಟಲೆಗಳ ಕೊಟ್ಟ | ತಾಟಕಾದೀ ದೈತ್ಯಕೂಟಗಳ ಸಂಹರಿಸಿದಾ ||ಕೂಟಸ್ಥ ಲೋಕಗಳ | ನೋಟದಲಿ ದಹಿಪ ವೈರಾಟ ಪ್ರಭುವಿನಾಳೂ 12 ಕೇಳೆಲೋ ರಾವಣನೇ ತಿಳಿಯಯಾ ನೀನು ನಿನ್‍ಹುಳುವೆಂದು ನಿಜ ಬಾಲದೀ |ಸಿಲುಕಿಸಿ ಜಲನಿಧಿ | ನಾಲಕ್ಕು ಮುಳುಗಿದವಾಲಿ ಪೆಸರನು ಮರೆತೆಯಾ 13 ತಾಲಮರಗಳ ಶೀಳಿ | ವಾಲೀಯನೆ ಕೊಂದರ್ಕಬಾಲಗೇ ರಾಜ್ಯ ಕೊಡಿಸೀ ||ಕೋಲಿನಿಂ ನಿಮ್ಮೆಲ್ಲ | ಹೂಳುವ ರಾಮನಆಳು ನಾನೆಂದು ತಿಳಿಯೋ 14 ರಕ್ಕಸ ಪತಿಯಾಜ್ಞೆ | ಇಕ್ಕಿ ತಲೆಯಾ ಮೇಲೆರಕ್ಕಸರೆಲ್ಲ ತವ ಪುಚ್ಛ ||ಕಿಕ್ಕಲೂ ಉರಿ ಲಂಕೆ | ಪೊಕ್ಕು ಪುರವನೆ ದಹಿಸಿಅಕ್ಕರದಿ ವನದಿ ಹಾರೀ 15 ಕಾಯ ಸಹಿತರ ನೋಡಿಪ್ರೀಯ ದ್ವಾರ್ತೆಯ ನರುಹಲೂ ||ಗೇಯ ಹನುಮನ ತುತಿಸಿ || ರಾಯಗೆರಗುವ ವನದಿಕಾಯ ಕುಪ್ಪಳಿಸುತಿರಲೂ 16 ಕಾತುರತೆಯ ಕಪಿ | ಜಾತೆಗಳ ಸಂತೈಸಿಪ್ರೀತಿಯಿಂ ಮಧುವನವನಳಿದ ||ಸೀತೆಯನು ಕಂಡಂಥ | ವಾರ್ತೆಯನು ಪೇಳೆ ರಘುಜಾತ ನಿನ್ನನು | ಅಪ್ಪಿದಾ 17 ಎರಡೇಳು ಭುವನದೊಳು | ಇರುವರೇ ನಿನ್ಹೊರತುಹರಿಗೆ ಪ್ರೀತ್ಯಾಸ್ಪದನು ಎನಿಸೀ ||ಮೆರೆವ ಭಕ್ತಾಗ್ರಣಿಯೆ | ಎರಗುವೆನು ತ್ವತ್ವದಕೆಹರಿಭಕ್ತಿ ಕರುಣಿಸಯ್ಯಾ 18 ಉದಯಕಾಲದಲೆದ್ದು | ಮುದದಿಂದಲೀ ಪದವಸದಯ ಹೃದಯರು ಪಠಿಸಲೂ ||ಬದಿಗ ಗುರು ಗೋವಿಂದ | ವಿಠಲನೋಳ್ ಸದ್ಭಕ್ತಿವದಗಿ ಪಾಲಿಪ ಹನುಮನೂ 19
--------------
ಗುರುಗೋವಿಂದವಿಠಲರು
ಸ್ವಾಮಿ ನಿನಗೆ ಶರಣನೆಂಬೆ ಸೋಮನಾಥಾ ಸಕಲ ಕಾಮಿತಾರ್ಥವಿತ್ತು ಸಲಹೊ ಸೋಮನಾಥಾ ಪ. ಹರಿಯ ಕರುಣಾ ಬಲದಿ ನೀನು ಸೋಮನಾಥಾ ಸರ್ವ ಸುರರಿಗೆಲ್ಲ ಧೊರೆಯಾಗಿರುವಿ ಸೋಮನಾಥ ಪಾದ ನಂಬಿ ಸೋಮನಾಥ ಮೊರೆಯ ಹೊಕ್ಕೆ ನಿಂದು ಬಂದು ಸೋಮನಾಥ 1 ವಿಘ್ನರಾಜ ನಿನ್ನ ಮಗನು ಸೋಮನಾಥಾ ಬೇಗ ಭಸ್ಮಗೈಸು ವೈರಿಗಳನು ಸೋಮನಾಥಾ ಮಗ್ನನಾದೆ ಮಹಾಂಬುಧಿಯೊಳ್ ಸೋಮನಾಥಾ ಸರ್ವ ವಿಘ್ನವೋಡಿಸೈ ಕೃಪಾಳೊ ಸೋಮನಾಥ 2 ಶಂಕರ ಕೈಪಿಡಿಯೊ ತ್ರಿಪುರ ಬಿಂಕವಾರಿ ಶ್ರೀ- ವೆಂಕಟಾದ್ರಿನಾಥನ ಮನೋನುಸಾರೀ ಕಿಂಕರನೆಂದೆನಿಸೆನ್ನ ಮೃಗಾಂಕಧಾರೀ ಪಾದ- ಪಂಕಜವ ನೀಡು ಸರ್ವಾತಂಕಹಾರೀ 3
--------------
ತುಪಾಕಿ ವೆಂಕಟರಮಣಾಚಾರ್ಯ
ಹರಿ ಗೋವಿಂದ ವಿಠಲ | ಪೊರೆಯ ಬೇಕಿವಳಾ ಪ ನಿರುತ ಹರಿ ಗುರುದಾಸ್ಯ | ಅರ್ಥಿಸುತ್ತಿಹಳಾ ಅ.ಪ. ಸುಪ್ತೀಶತೋರ್ದಪರಿ | ಪ್ರಾಪ್ತಿ ಪ್ರಾಣನ ವಶವುಕ್ಲಪ್ತವಾಯ್ತಿವಳೀಗೆ | ಮುಕ್ತಿ ಸಾಧನಕೆ |ಎತ್ತ ನೋಡಿದರತ್ತ | ಆಪ್ತಮುಖ್ಯ ಪ್ರಾಣಪೊತ್ತಿಹನು ಸರ್ವತ್ರ | ವ್ಯಾಪ್ತಿ ಮೂರುತಿಯೇ 1 ಭವ ಹಾರೀ 2 ಭುವನ ಪಾವನ ನಿನ್ನ | ಸ್ತವನ ವೈಭವ ಕೇಳೆಸರ್ವದಾ ಸರ್ವತ್ರ | ಶ್ರವಣ ಸುಖದಲ್ಲೀನಿರ್ವಿಕಾರದ ತಿರಗಲೀಕೆಯ ಮನಸುಸರ್ವಾಂತರಾತ್ಮಕನೆ | ಸಾರ್ವಭೌಮ 3 ತಾಪ ಭಯಅಧ್ಯಕ್ಷ ಶ್ರೀಹರಿಯೆ ನೀನಾಗಿ ಕಳೆದೂ |ಮಧ್ವಾಂತರಾತ್ಮಕನ | ಹೃದ್ಗುಹದಿ ತೋರೆಂದುಬುದ್ಧಿ ಪೂರ್ವಕ ಬೇಡ್ವೆ | ಪದ್ಮನಾಭಾ 4 ಸಾಧನದ ಜೀವಿಗಳ | ಸಾಧನದ ಪ್ರತಿಭಂಧಸಾದರದಿ ವಾರಿಸುತ | ಮೋದಮನ ನೀಯೋ |ಮೋದಮುನಿ ವಂದ್ಯ ಗುರು | ಗೋವಿಂದ ವಿಠಲನೆನೀದಯದಿ ಪೊರೆ ಇವಳ | ಪ್ರಹ್ಲಾದ ವರದಾ 5
--------------
ಗುರುಗೋವಿಂದವಿಠಲರು
ಶಂಕರ ಶಂಭು ಮಹೇಶ ದಿಗಂಬರ |ಕಿಂಕರನುತಿಪಾತ್ರಾ || ಸತ್ಪಾತ್ರಾ ||ಶಂಕರ ಅಂಬಾ ಮನೋಹರ ಶುಭಕರವೆಂಕಟಪತಿಮಿತ್ರಾ | ವಿಚಿತ್ರಾ 1ನಿತ್ಯಾನಂದ ನಿರಾಮಯ ನಿರುಪಮ |ಮೃತ್ಯುಂಜಯಮೂರ್ತಿ|| ಸುಮೂರ್ತಿ ||ನಿತ್ಯತೃಪ್ತ ನಿರಾಶ್ರಯ ನಿರ್ಮಲ |ಸತ್ಯಂ ಜಯಕೀರ್ತಿ | ಸುಕೀರ್ತಿ 2ಹಿಮಕರ ಶೈಲ ನಿವಾಸ ಸುರಾಸುರ |ನಮಿತ ಶೋಕಹಾರೀ ||ಉದಾರಿ||ಪ್ರಮಥಾಧಿಪ ಪರಮೇಶಪರಾತ್ಪರ|ಡಮರು ಬಾಲಧಾರಿ | ಪುರಾರಿ 3ಚಂದಿರಧರ ಅಘವೃಂದ ವಿನಾಶನ |ವಂದಿಸುವೆನು ದೇವಾ || ಮಹದೇವಾ ||ಮಂದರಧರಗೋವಿಂದನ ದಾಸಗೆ |ಚಂದದಿ ವರವೀವಾ | ಸಂಜೀವಾ 4
--------------
ಗೋವಿಂದದಾಸ