ಒಟ್ಟು 66 ಕಡೆಗಳಲ್ಲಿ , 18 ದಾಸರು , 34 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಘುನಂದನ ಬಾರೈ ಹಸೆಗೆ ನಿಗಮಾಗಮಾ ವಳಿಸನ್ನುತ ಪ ಶ್ರೀ ಜಾನಕಿ ಸಹಿತ ಅ.ಪ. ವೈರಿ ಕುಲಭಂಜನ ಪರಮೇಶವರ ಚಾಪಖಂಡನ ಕರುಣಾಕರ ಖರದೂಷಣಾದಿ ಹರನಾಶ್ರಿತ ವರ ಲೋಕಪಾಲ 1 ನವನೀರದಾಭ ನವಸುಂದರ ನವಮೀ ಸಂಜಾತ 2 ಶರಣಾಗತ ಭರಣಾಧೃತ ವರ ರಾಮಚಂದ್ರ 3
--------------
ಬೇಟೆರಾಯ ದೀಕ್ಷಿತರು
ಶ್ರೀ ರಮಣಿವರ ಹರಿಯೆ ಬಾ ಸಮೀರಣ ಮಂತ್ರಿಯ ದೊರೆಯೆ ಬಾ ವಾರುಧಿಶಯನ ವರಾಭವ ಕಂಬ್ವರಿಧಾರಿಬಾ ವೈರಿ ಬಾ ದೈತ್ಯ ವಿದಾರಿ ಬಾರೆಂದು ಹಸೆಗೆ ಕರೆವೆನು ಶೋಭಾನೆ 1 ಭಕ್ತಾಭಿಲಷಿತದಾಯಿ ಬಾ ಮುಕ್ತಾಶ್ರಯ ಫಣಿಶಾಯಿ ಬಾ ಯುಕ್ತಿಯಿಂದ ದುರ್ವೃತ್ತನ ಮೂಲೆಯೊಳೊತ್ತಿದ ಬಾ ವರ ಸಂಪತ್ತಿದ ಬಾ ವಿವಿಧ ಶುಭಾತಿದ ಬಾರೆಂದು ಹಸೆಗೆ ಕರೆವೆನು ಶೋಭಾನೆ 2 ದುಷ್ಟಜನಾಟವಿ ಕಾಲನ ಬಾ ಪಾಲನ ಬಾ ಪತಿ ಬೆಟ್ಟದೊಡೆಯ ಸಂ- ದೃಷ್ಟಾ ಬಾ ನೃತ್ಯವರಕಾಷ್ಠ ಬಾ ಹೂಣನ ಮೆಟ್ಟುತ ಬಾ ಹಸೆಯ ಜಗುಲಿಗೆ ಶೋಭಾನೆ 3
--------------
ತುಪಾಕಿ ವೆಂಕಟರಮಣಾಚಾರ್ಯ
ಶ್ರೀ ವಲ್ಲಭ ಸರ್ವೇಶ್ವರ ಬಾ ಪಾವನ ಚರಿತ ಪರಾತ್ಪರ ಬಾ ಸೇವಕ ಜನರಿಗೆ ಸಕಲಾನಂದಗಳೀವ ಬಾ ರುಕ್ಮನ ಭಾವಾ ಬಾ ಸೃತಿನವನಾವ ಬಾ ನಮ್ಮನು ಕಾವನೆ ಬಾ ಎಂದು ಹಸೆಗೆ ಕರೆವೆನು ಶೋಭಾನೆ 1 ಅರಿದರ ಪದ್ಮ ಗದಾಧರ ಬಾ ನರಪತಿಗಳೊಳಿಹ ಶ್ರೀಧರ ಬಾ ಶರಣಾಗತ ಪರಿಪಾಲನೆಂಬ ಬಿರುದಿರುವನೆ ಬಾ ಸಂಪತ್ಕರನೆ ಬಾ ಸಾಮಜವರದನೆ ಬಾ ಶ್ರೀ ನರಹರಿಯೆ ಬಾರೆಂದು ಹಸೆಗೆ ಕರೆವೆನು ಶೋಭಾನೆ 2 ಮಂದರಧರ ಮಧುಸೂದನ ಬಾ ಇಂದಿರೆಯಳನೊಡಗೂಡುತ ಬಾ ಸುಂದರ ತರ ಹರಿ ಚಂದನ ರೂಪದಿನಿಂದಿವ ಬಾ ಕರುಣಾ ಸಿಂಧುವೆ ಬಾ ಆಪದ್ಬಾಂಧವ ಬಾ ಪಾಂಡವ ಬಂಧುವೆ ಬಾ ವೆಂಕಟ ಮಂದಿರ ಬಾರೆಂದು ಹಸೆಗೆ ಕರೆವೆನು ಶೋಭಾನೆ 3
--------------
ತುಪಾಕಿ ವೆಂಕಟರಮಣಾಚಾರ್ಯ
ಶ್ರೀಗಣಪತಿಗೆರಗಿ ಶಾರದೆಯನುರಾಗದಿಂದಲಿ ಸ್ಮರಿಸಿ ಶ್ರೀಗಿರಿಜಾತೆಯಲೋಕೈಕ ಮಾತೆಯ ಬೇಗದಿ ಹಸೆಗೆ ಕರೆದ ಸುಪದಂಗಳಾ ರಾಗದಿ ಪಾಡಿ ಪೊಗಳುವೆ 1 ಮಿಸುನಿಯ ಮಂಟಪದಿ ರಾರಾಜಿಪಪೊಸಪಸೆವಣೆಯನಿಟ್ಟು ಪೊಸದೇವಾಂಗವ ಮೇಲೆಪಸರಿಸಿ ಹಾಕುತ ಶಶಿಮುಖಿಯರು ನೆರೆದೊಂದಾಗಿ ಪಾಡುತ ಕುಶಲದಿ ಹಸೆಗೆ ಕರೆದರು 2 ಕಡೆಯಾಣಿಯ ಚಿನ್ನದ ಜಗಜ್ಯೋತಿಯಎಡಬಲದೊಳಗಿಟ್ಟು ಉಡುರಾಜಮುಖಿಯರುಮೃಗರಾಜಕಟಿಯರು ಕಡುಬೆಡಗಿಂದಪಾಡುತ ನಲಿದಾಡುತ ಮೃಡನರಸಿಯ ಹಸೆಗೆ ಕರೆದರು 3 ಚಿನ್ನದಪಿಲ್ಲಿಮಿಂಚು ಉಂಗುರಗಳುರನ್ನದಲ್ಲಣಿವೆಟ್ಟು ಉನ್ನತವಾದ ಕಾಲ್ಗಡಗಸರ್ಪಣಿಗೆಜ್ಜೆಯನ್ನು ತಳೆದ ಪಾದಪದುಮದಿಂದೊಮೈವ ಪೂರ್ಣೇಂದು ಮುಖಿಯರು || ಹ 4 ವರರತ್ನಖಚಿತವಾದ ಗೆಜ್ಜೆಮೊಗ್ಗೆಯಸರವೊಡ್ಯಾಣವು ಡಾಬು ಮಿರುಪಮಂಡೆಳೆಯುಡುದಾರ ಕಿಂಕಿಣಿಗಳ ಸರಫಲಿರೆನೆ ಚೆಂಗಾವಿಸೀರೆಯನುಟ್ಟು ಗಿರಿರಾಜತನುಜೆ || ಹ 5 ಚಳಿಕೆ ಹಿಂಬಳೆದೊರೆಯ ಚೂಡಾಕಟ್ಟುಬಳೆಕಂಕಣ ಕಡಗ ಪೊಳೆವ ಮುಂಗೈಯಮುರಾರಿ ಮುತ್ತಿನದಂಡೆ ಥಳಥಳಿಸುವಬೆರಳುಂಗುರಗಳನಿಟ್ಟು ಲಲಿತಾಂಗಿ ಬೇಗ | ಹಸೆಗೇಳು 6 ವರನಕ್ಷತ್ರದ ಸರವು ಏಕಾವಳಿ ಸರಗುಂಡಿನಸರವು ಮಿರುಪಬಿಲ್ಸರ ಚಳ್ಯಸರ ಚಕ್ರಸರಗೋಧಿಸರ ಮೋಹನಮುತ್ತಿನ ಸರಗಳನಿಟ್ಟವರಕಂಬುಕಂಠಿ ಬೇಗ | ಹಸೆಗೇಳು 7 ಅಣಿ ಮುತ್ತಿನ ಮೂಗುತಿ ಐದೆಳೆಯ ಕ-ಟ್ಟಾಣಿ ಕಾಶಿಯ ತಾಳಿ ಮಾಣಿಕಮಯಬತಿಮಲಕು ಅಡ್ಡಿಕೆ ಮಲಕಾಣಿ ಮುತ್ತಿನಬಟ್ಟುಮಲಕು ಸರಿಗೆಯಿಟ್ಟ ಏಣಾಕ್ಷಿ ಬೇಗ | ಹ 8 ತೊಳಪ ಮುತ್ತಿನಮಾಲೆ ಸರ್ಪಣಿಯಂಥಳಥಳಿಪ ವಜ್ರದವಾಲೆ ಚಳತುಂಬು ಮೀನ ಬಾ-ವಲಿ ಹಂಸೆಗಿಳಿಯ ಬಾವಲಿಯು ಹೊನ್ನೂಲುಕುಪ್ಪಿನವೆಂಟ್ಟೆಯವಿಟ್ಟ ಕಲಹಂಸಗಮನೆ | ಹ9
--------------
ಕೆಳದಿ ವೆಂಕಣ್ಣ ಕವಿ
ಶ್ರೀನಿಕೇತನ ಸರ್ವಪತಿಯು ಸಕಲ ಸಜ್ಜನಾನಂದ ಕರುಣಾ ಮೂರುತಿಯ ಕಂಠೇಧೃತ ಸತಿಯ ಮಣಿ ಮಯ ಪೀಠದಿ ಧ್ಯಾನಿಸಿ ಪರಮಾನುರಾಗದಿ ಪಾಡುತ ಮಾನಿಸಿ ಕರೆವೆ ಮುದದಿಂದ ಶೋಭಾನೆ 1 ಸಕಲ ಲೋಕಾಧಿನಾಥ ದೇವಾ ವಿಧಿ ನಾವ ವಿಕಸಿತ ಮುಖ ಕಂಜಭಾವ ಭಕ್ತರ ಸಂಜೀವ ಕುಂಡಲ ಶುಭ ಮುರುವಿಲಾಸಿತ ಕಪೋಲ ಸುಶೋಭಿತ ಕರುಣದಿ ಭಕುತಿಯನಿತ್ತು ದಯವಾಗು 2 ಕಂಧರಲಂಬಿ ವನಮಾಲಾ ಮಧ್ಯಸ್ಥ ಕೌಸ್ತುಭೇಂದಿರಾಸಕ್ತ ವಕ್ಷೋಲೀಲ ಕರುಣಾಲವಾಲ ಬಂದಹರಾರಿದ ರೆಂದಿವರ ಶುಭಾನಂದ ಕಾದಿದರ ಸುಂದರ ಶುಭಕರ ನಿಂದೀ ಮಂಟಪಕೆ ದಯವಾಗು 3 ವಿಧಿಯಾಸನಾದ ಕಂಜನೆ ಗದಾ ಗಂಭೀರ ವೃತ್ತ ನಾಭ ವಾಸಃ ಶೋಭ ಕರ ಭೋರ್ವಬ್ದಾಭ ಶುಭ ಪದಯುಗ ಕಂಜವ ಹೃದಯದಿ ತೋರುತ ಸದಯದೊಳಗರಿಗಳ ಸದೆವುತ ಹಸೆಗೆ ದಯವಾಗು 4 ಮೂರ್ತಿ ಸುರವರ ನುತಕೀರ್ತಿ ಶ್ರೀನಿಧಿ ಪರಿಹರಿಸಾರ್ತಿ ಪರಿಪೂರಿಸುತರ್ಥಿ ದೀನ ಬಂಧು ಸ್ವಜನಾನುಕಂಪ ಕರ್ಣಾನುಜಸಾರಥಿ ಶೇಷ ಗಿರೀಶ ಸುಮ್ಮಾನವ್ಯಾಕಿನ್ನು ಹಸೆಗೇಳು 5
--------------
ತುಪಾಕಿ ವೆಂಕಟರಮಣಾಚಾರ್ಯ
ಸಂಪ್ರದಾಯ ಶೃಂಗಾರದಂಥ ಶುಭಾಂಗಿ ನೀ ಏಳು ಕಂಗಳ ನೋಟದ ಕಡು ಚೆಲ್ವೆ ನಿನ್ನ ಪಾ- ದಂಗಳಿಗೆರಗುವೆ ಎನುತ ಮಾಲಕ್ಷುಮಿ(ಯ?) ಅಂಗನೆಯರ್ಹಸೆಗೆ ಕರೆದರು 1 ಅಜನಜನಕನರಗಿಳಿಯೆ ನೀ ಏಳು ಪದಮನಾಭನ ಪಟ್ಟದರಸಿ ನೀ ಏಳು ತ್ರಿಜಗಭೂಷಿತನೆದೆ ಮ್ಯಾಲೆ ಹೊಂದಿರುವಂಥ ಮದಗಜಗಮನೆ ಮಾಲಕ್ಷ್ಮಿ ಬಾರೆನುತಲಿ ಮುದದಿಂದಲಿ ಹಸೆಗೆ ಕರೆದರು 2 ಸೋಮವದನೆ ಸುಗುಣೆ ಜಾಣೆ ನೀ ಏಳು ಕೋಮಲ ಕೋಕಿಲವಾಣಿ ನೀ ಏಳು ಹೇಮಮಾಣಿಕ್ಯ ನಾಗವೇಣಿಯೆ ನಮ್ಮ ಭೀಮೇಶಕೃಷ್ಣನ ನಿಜರಾಣಿ ಮಾಲಕ್ಷುಮಿ ಪಟ್ಟದರಾಣಿ ಬಾ ಹಸೆಗೆ ಕರೆದರು 3
--------------
ಹರಪನಹಳ್ಳಿಭೀಮವ್ವ
ಸೋಬಾನವೆನ್ನಿರೆ ಶ್ರೀದೇವಿ ಅರಸಗೆ ನಾಭಿಯಲೆ ಅಜನ ಪಡೆದವಗೆ ಪ. ಬರಿಯ ಮಾಣಿಕದ ಹಸೆಗೆ ಕಿರಿಯ ಚನ್ನಿಗ ಬಾರೊಸರಿಯವರು ನೋಡಿ ನಗುವಂತೆ ಸರಿಯವರು ನೋಡಿ ನಗುವಂತೆ ಎನುತಲೆ ದೊರೆಗಳು ನುಡಿದು ಕರೆದರು1 ಮುತ್ತು ಮಾಣಿಕದ ಹಸೆಗೆ ಭಕ್ತವತ್ಸಲ ಬಾರೋಹತ್ತು ದಿಕ್ಕುಗಳ ಬೆಳಗುತ ಹತ್ತು ದಿಕ್ಕುಗಳ ಬೆಳಗುತ ಎನುತಲಿಮಿತ್ರಿ ಸುಭದ್ರಾ ಕರೆದಳು2 ಚದುರ ರಾಮೇಶನ ಮುದಿಮಾರಿವನಿತೆಯರು ಬದಿಯಲಿ ಬನ್ನಿ ಹಸೆಮ್ಯಾಲೆ ಬದಿಯಲಿ ಬನ್ನಿ ಹಸೆಮ್ಯಾಲೆ ಎನುತಲಿ ಸುದತೆÉ ಸುಭದ್ರಾ ಕರೆದಳು3
--------------
ಗಲಗಲಿಅವ್ವನವರು
ಹಸೆಗೆ ಕರೆಯುವ ಹಾಡು ಇಂದಿರಾ ದೇವಿಯ ರಮಣ ಬಾವೃಂದಾರಕ ಮುನಿ ವಂದ್ಯ ಬಾ ಶೋಭಾನೇ ಪ ಸಿಂಧು ಶಯನ ಗೋವಿಂದ ಸದÀಮಲಾನಂದ ಬಾತಂದೆಯ ಕಂದ ಬಾ ಮಾವನಾ ಕೊಂದ ಬಾ ಗೋಪಿಯಕಂದ ಬಾ ಹಸೆಯ ಜಗುಲಿಗೇ ಅ.ಪ. ಕೃಷ್ಣವೇಣಿಯ ಪಡೆದವನೆ ಬಾಕೃಷ್ಣನ ರಥ ಹೊಡೆದವನೆ ಬಾಕೃಷ್ಣೆಯ ಕಷ್ಟವ ನಷ್ಟವ ಮಾಡಿದ ಕೃಷ್ಣನೆ ಬಾ ||ಯದುಕುಲ ಶ್ರೇಷ್ಠ ಬಾಸತತ ಸಂತುಷ್ಟನೆ ಬಾಉಡುಪೀಯ ಕೃಷ್ಣ ಬಾ ಹಸೆಯ ಜಗುಲಿಗೇ 1 ನಾಗಾರಿ ಮಧ್ಯಳೆ ಹೊಂತಕಾರಿ ಬಾ ||ಬಲು ದುರಿತಾರಿ ಬಾಬಹು ವೈಯ್ಯಾರಿ ಬಾಸುಂದರ ನಾರೀ ಬಾ ಹಸೆಯ ಜಗುಲಿಗೇ 2 ಮಣಿ ಖಣಿಯೇ ಬಾಸೌಭಾಗ್ಯದ ಪನ್ನಗವೇಣಿ ಬಾ ||ಪರಮ ಕಲ್ಯಾಣಿ ಬಾನಿಗಮಾಭಿಮಾನೀ ಬಾಭಾಗ್ಯದ ನಿಧಿಯೇ ಬಾ ಹಸೆಯ ಜಗುಲಿಗೇ 3 ಸಿರಿ ಮೋಹನ ವಿಠಲನ ಸತಿಯೇ ಬಾವೇದಾವತಿಯೇ ಬಾಬಲು ಪತಿವ್ರತೆಯೇ ಬಾ ಹಸೆಯ ಜಗುಲಿಗೇ 4
--------------
ಮೋಹನದಾಸರು
ಹಸೆಗೆ ಬಾರಯ್ಯ ಹದಿನಾಲ್ಕು ಲೋಕದೊಡೆಯ ಪ ಕುಸುಮಾಸ್ತ್ರನೈಯ್ಯ ಕೋರಿ ಪ್ರಾರ್ಥಿಪೆ ಜೀಯಾ ಅ.ಪ ಪಕ್ಷಿಗಮನ ದುಷ್ಟ ರಾಕ್ಷಾಸಾಂತಕ ನೀನು- ಪೇಕ್ಷೆಮಾಡದೆ ನಿರಪೇಕ್ಷ ಸೌಖ್ಯವೀಯಲು 1 ಪದುಮೆಯೊಡನೆ ಹೃದಯಪದುಮ ಪೀಠದಿ ಕುಳಿತು ಸದಮಲ ಜ್ಞಾನ ವದಗಿಸುವದಕೀಗ 2 ಪ್ರೇಮಾದಿ ಸುಜನರಿಗೆ ಕಾಮಿತ ಫಲವೀವ ಸ್ವಾಮಿ ನೀನೆ ಶ್ರೀಗುರುರಾಮ ವಿಠಲ ವಲಿದು 3
--------------
ಗುರುರಾಮವಿಠಲ
ಹಸೆಗೆ ಬಾರೆ ಶುಭಾಂಗಿವಿಭಾವ ಪ ಸಿರಿ ಅ.ಪ ಜೀವರ ಸ್ವಭಾವಗಳಂತೆಯೆ ಮಾನಿನಿ ಜನನಿಯೆ ಬೇಗದಿ 1 ಭಾಸುರಾಂಗಿಯೇ ಬಾರೇ ರಮಾ ನೀ ಸಲಹಬೇಕು ನಮ್ಮಮ್ಮ ವಂದಿಸುವೆನೂ 2 ಗುರುರಾಮ ವಿಠಲನ ಪ್ರಿಯೆ ಕರುಣಾಬ್ಧಿಯೆ ಕಾಯೆ ಮಾಯೆ ವರಗಳ ನೀ ಕೊಡು ತಾಯೆ ಮಹಾಲಕ್ಷ್ಮಿಯೇ 3
--------------
ಗುರುರಾಮವಿಠಲ
ಹಸೆಗೆ ಬಾರೆ ಸುಂದರಿ ಓ ಪ ಬಿಸಜಾಲಯೆ ಜನಕ ಕುಮಾರಿ ಅ.ಪ ಮುತ್ತು ಮಾಣಿಕದ ಪೀಠವಂ ಭಕ್ತಿಯಿಂದ ಅಲಂಕರಿಸಿ ಮಿತ್ರೆಯರೆಲ್ಲರು ಕರೆವರು 1 ಸುತ್ತ ಜ್ಯೋತಿಯು ಬೆಳಗಲು ಮತ್ತೆ ಮೆಲ್ಲಡಿಯಿಡುತಲಿ ಓ ಬಿಸಜಾಲಯೆ 2 ಭೂಮಿಜೆ ಲೋಕಮಾತೆಯೆ ಕಾಮಿತಪ್ರದೆ ಶ್ರೀ ಗುರುರಾಮ ವಿಠಲನರಸಿಯೆ 3
--------------
ಗುರುರಾಮವಿಠಲ
ಹಸೆಗೆ ಬಾರೈ ಶ್ರೀರಾಮ ಹನುಮ ಪ್ರೇಮ ಪ ದಶರಥ ಕುಮಾರ ದಶವಿಧ ಶರೀರ ಅ.ಪ ಪರಮಾತ್ಮ ಶುಭಚರಿತ ಸೂರ್ಯವಂಶಾ ಶರಧೀಗೆ ಚಂದ್ರಮನೆ ಕರುಣದಿ ಬೇಗನೆ 1 ಅಗಣಿತ ಚಿತ್ಸುಖಾಪ್ರದಾತ ಜಾನಕೀ ಸಮೇತಾ 2 ದುರಿತಾನಲಸಲಿಲ ದೈತ್ಯನಿಕರ ಕಾಲ ತರಣಿಜ ಪಾಲ 3
--------------
ಗುರುರಾಮವಿಠಲ
ಹಸೆಗೆ ಬಾರೈರಾಮಾ ಪ ಬಿಸಜಾಪ್ತ ವಂಶಲಲಾಮ ಅ.ಪ ಮಾನಸ ಪೀಠಕೆ ಜಾನಕಿದೇವಿ ಸಹಿತಾ ಆನತರಿಗೆ ಸೌಖ್ಯವ ಬೀರುತಲಿ 1 ಬ್ರಹ್ಮಮಹೇಶ್ವರ ಸುಮ್ಮಾನದಿ ಕೈಕೊಡಲು ಧರ್ಮಸ್ಥಾಪಿಸೆ ಧರಣಿ ಮಂಡಲದಿ 2 ಹನುಮಂತ ಜಾಂಬವ ಇನತನಯಾಂಗದಾದಿ ಘನಕಪಿವೀರರು ಕಾದುಕೊಂಡಿರುವರು 3 ನೀಮನವಲಿದನುಗ್ರಹಿಸಿ ಬೇಗದಿ4 ಅಂತಃಕರುಣಾಸಿದ್ಧಿಯಂ ತವಕದಿ ಕೊಟ್ಟು ಅಂತರಾತ್ಮಕ ಗುರುರಾಮ ವಿಠಲನೆ 5
--------------
ಗುರುರಾಮವಿಠಲ
ಹಸೆಗೆ ಬಾರೊ ಹರುಷಬೀರೊ ಬಿಸಜನಾಭನೇ ಪ ಶಶಿಯ ಸೋದರಿ ಸಹಿತವಾಗಿ ಶಾಮಲಾಂಗನೇ ಅ.ಪ ರತ್ನಖಚಿತ ಪೀಠವಿರಿಸಿ ರಮಣಿ ಮಣಿಯರೂ ಕುತ್ನಿ ಪಟ್ಟಾವಳಿಯ ಹಾಸಿ ಕೋರಿ ಪ್ರಾರ್ಥಿಪರೂ 1 ಭೇರಿ ಮೃದಂಗ ನಾಗಸ್ವರ ನಗಾರಿ ಕಹಳೆಗಳ್ ಧಾರುಣಿ ಸುರವೇದ ಘೋಷ ವಿಸ್ತಾರವಾಗಿರಲ್ 2 ಹಳದಿ ಕುಂಕುಮಾಕ್ಷತೆ ಗಂಧ ಕಳಶ ಕನ್ನಡಿ ಹೊಳೆಯೆ ತಟ್ಟಿಯೋಳ್ ಸುತ್ತ ಜ್ಯೋತಿ ಬೆಳಗುವುದು 3 ಮುದದಿ ನಸು ನಗುತ ಬಲದ ಪದವು ಮುಂದಾಗಿ 4 ಶರಣ ಜನರಭೀಷ್ಟಗಳನು ಸಲಿಸುವಾತನೇ ಗುರುರಾಮವಿಠಲ ಸರ್ವೇಶ ಪುರುಷೋತ್ತಮನೆ 5
--------------
ಗುರುರಾಮವಿಠಲ
ಕೆಟ್ಟು ನೆಂಟರ ಸೇರುವುದು ಬಹಳ ಕಷ್ಟಹುಟ್ಟೇಳು ಜನ್ಮಕ್ಕೆ ಇದು ಬೇಡ ಹರಿಯೆ ಪ.ಹರಿಯನಪ್ಪಲುಬಹುದು ಉರಿಯ ಮುಕ್ಕಲುಬಹುದುಉರುವ ಮಾರಿಗೆ ಗ್ರಾಸವಾಗಬಹುದುಸುರಿವ ಕೆಂಡದ ಮನೆಗೆ ಬರಿಮೈಯೊಳಿರಬಹುದುಧರೆಯೊಳಗೆ ದಾರಿದ್ರವಾರಿಗೂ ಬೇಡವೋ 1ವಿಷಯ ಕುಡಿಯಲುಬಹುದು ಇರಿದುಕೊಳ್ಳಲುಬಹುದುಹಸಿದ ಹುಲಿಬಾಯಿ ತುತ್ತಾಗಬಹುದುಹಸೆಗೆಟ್ಟು ಹೋದ ನಂಟಿರಲಿ ತಾ ಬಾಯನ್ನುಕಿಸಿಯಲಾಗದು ಕೊರಳ ಹಿಸುಕಿಕೊಳಬಹುದು 2ಕುಡುಗೋಲು ಪಿಡಿದು ಕೂಟಿಯಮಾಡಿ ಉಣಬಹುದುಒಡಲಾಸೆಗೊಲ್ಬುರಾಳಾಗಬಹುದುಒಡೆಯ ಶ್ರೀ ಪುರಂದರವಿಠ¯ ಸ್ಮರಣೆಯಲಿಬಡವನಾಗಿಯೇ ಬೇಡಿ ಉಣ್ಣಬಹುದು 3
--------------
ಪುರಂದರದಾಸರು