ಒಟ್ಟು 19 ಕಡೆಗಳಲ್ಲಿ , 17 ದಾಸರು , 19 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಅ) ಶ್ರೀಹರಿಸ್ತುತಿ87ಎಷ್ಟು ಆನಂದವೊ ಶ್ರೀಹರಿಯ ಭಜನೆ ಪದುಷ್ಟತರ ದೋಷಗಳು ಬಳಲುವಕಷ್ಟಗಳ ಪರಿಹರಿಸಿ ಸರ್ವೋತ್ಕøಷ್ಟ ಪದವಿಯ ಕೊಡುವ ಲಕ್ಷ್ಮೀಇಷ್ಟನಾರಾಯಣನ ಭಜನೆ 1ಪದ್ಮದಳನಯನ ಪ್ರತಿಷ್ಠೆಯಪದ್ಮಶಾಲಿಯ ಭಕ್ತರೆಲ್ಲರುಪದ್ಮನಾಭನ ಪ್ರೀತಿಮಾಡಿ ಸುಭದ್ರಸಂಪದ್ಯುಕ್ತರಾದರು 2ಮಂದಿರವು ಕಟ್ಟಿಸಿಯು ಪರಮಾನಂದದಿಂ ಉತ್ಸವವು ನಡಿಸಿದರೆಂದು ಕೇಳಿದ ಭಾಗ್ಯಶಾಲಿಗಳುಇಂದಿರೇಶನ ಕೃಪೆಯ ಪಡೆದರು 3ಅಂಬುಜೋದರದಾಸರೆಲ್ಲರುತಂಬುರೆಯು ಕರತಾಳವಾದ್ಯವಿಜೃಂಭಿಸಿ ಹರಿಸ್ಮರಣೆಯ ಮಾಡುತಸಂಭ್ರಮದಿ ಬಂದವರು ನೋಡಲು 4ವಾಸುಕೀನಗರೇಶ ದಾಸರದಾಸರಾಗಿಯು ತುಲಸಿರಾಮದಾಸ ಪರಮೋಲ್ಲಾಸದಿಂ ಶ್ರೀವಾಸುದೇವನ ಚರಣನಂಬಿದೆ 5
--------------
ತುಳಸೀರಾಮದಾಸರು
ನಂಬದಿರು ಈ ದೇಹ ನಿತ್ಯವಲ್ಲ |ಅಂಬುಜಾಕ್ಷನ ಭಜಿಸಿ ಸುಖಿಯಾಗು ಮನವೇ ಪ.ಎಲು ರಕ್ತ ಮಾಂಸಗಳ ಮೇಲೆ ಚರ್ಮದ ಹೊದಿಕೆ |ಮಲಮೂತ್ರ ಒಳಗೆ ಕ್ರಿಮಿರಾಶಿಯಿಹವು ||ಹಲವು ವ್ಯಾಧಿಯ ಬೀಡು ಪಂಚಭೂತದ ನಾಡು |ಹುಲುದೇಹವನು ನೆಚ್ಚಿ ಕೆಡಬೇಡ ಮನವೆ 1ಸತಿಸುತರು ಹಿತರೆಂದು ಮತಿಮರೆತು ಮಮತೆಯಲಿ |ಅತಿಕಾಂಕ್ಷಿಯಿಂದ ದುರ್ವಿಷಯ ಬಲಿದು ||ಸತತ ಲಕ್ಷ್ಮೀಪತಿಯ ಶರಣೆನದೆ ಇಹಪರದ |ಗತಿಶೂನ್ಯನಾಗಿ ಕೆಡಬೇಡ ಮನವೆ 2ಪರರ ನಿಂದಿಸದೆ ಪರವಧಗಳನು ಬಯಸದೆ |ಗುರು - ವಿಪ್ರಸೇವೆಯನುಮಾಡು ಬಿಡದೆ ||ಹರಿಸ್ತುತಿಯ ನೀ ಕೇಳು ಹರಿಕೀರ್ತನೆಯ ಪಾಡು |ಪರಮಪುರಂದರವಿಠಲನೊಲಿದು ಪಾಲಿಸುವ3
--------------
ಪುರಂದರದಾಸರು
ನಿನ್ನನಾಶ್ರಯಿಸುವೆ - ನಿಗಮಗೋಚರನಿತ್ಯಬೆನ್ನ ಬಿಡದಲೆ ಕಾಯೊ ಮನದಿಷ್ಟವೀಯೋ ಪಕುಂದಣದ ಆಶ್ರಯವು ನವರತ್ನಗಳಿಗೆಲ್ಲಚಂದಿರನ ಆಶ್ರಯ ಚಕೋರಗಳಿಗೆ ||ಕಂದರ್ಪನಾಶ್ರಯ ವಸಂತ ಕಾಲಕ್ಕೆ ಗೋವಿಂದ ನಿನ್ನಾಶ್ರಯವು ಮರಣಕಾಲದೊಳು 1ಹಣ್ಣುಳ್ಳ ಮರಗಳು ಪಕ್ಷಿಗಳಿಗಾಶ್ರಯವುಪುಣ್ಯನದಿಗಳು ಋಷಿಗಳಿಂಗೆ ಆಶ್ರಯವು ||ಕಣ್ಣಿಲ್ಲದಾತನಿಗೆ ಕೈಗೋಲಿನಾಶ್ರಯವುಎನ್ನಿಷ್ಟ ಪಡೆಯುವರೆ ನಿನ್ನ ಆಶ್ರಯವು 2ಪತಿವ್ರತಾವನಿತೆಗೆ ಪತಿಯೊಂದೆ ಆಶ್ರಯವುಯತಿಗಳಿಗನುಶ್ರುತದಿ ಪ್ರಣವದಾಶ್ರಯವು ||ಮತಿವಂತನಿಗೆಹರಿಸ್ತುತಿಗಳೇ ಆಶ್ರಯವುಹಿತವಹುದು ಪುರಂದರವಿಠಲನಾಶ್ರಯವು 3
--------------
ಪುರಂದರದಾಸರು
ಪುರಾಣ ಮೂಲದಹರಿಸ್ತುತಿಅಕೊ ಹಾಗಿಹನೆ ಇಕೊ ಹೀಗಿಹನೆ ಪಕಾಲಿಲ್ಲದೆ ನಡಸುವ ಕೈಯಿಲ್ಲದೆ ಹಿಡಿಸುವಹಲ್ಲಿಲ್ಲದೆ ತಿನ್ನಿಸುವ ಹೊಟ್ಟಿಯಿಲ್ಲದೆ ಉಣಿಸುವ1ಕಣ್ಣಿಲ್ಲದೆ ಕಾಣಿಸುವ ಕಿವಿಯಿಲ್ಲದೆ ಕೇಳಿಸುವಕಾಣಿಸಿಕೊಳ್ಳನೀತ ಒಳಗೆ ಹೊರಗೆ ತಿರುಗುವ 2ಶ್ವೇತದ್ವೀಪದಲ್ಲಿ ನಿಂತು ಅನಂತಾಸನದಲಿ ಮಲಗಿನಿತ್ಯವೈಕುಂಠ ವಾಸ ಪುರಂದರವಿಠಲ 3
--------------
ಪುರಂದರದಾಸರು