ಒಟ್ಟು 20 ಕಡೆಗಳಲ್ಲಿ , 11 ದಾಸರು , 20 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರಿಸರ್ವೋತ್ತಮನೆಂದರಸುವರು ಪ ಹರಿದಾಸರಿವರು ಧರೆಯೊಳಿವರಿಗೆ ಸರಿಗಾಣೆ ಕೇಳಮ್ಮ ಜಾಣೆ ಅ.ಪ ಸಾಧುಸಜ್ಜನರಿಗೆ ಬಾಗುವರು ವೇದಕೆ ನಮಿಸುವರು ವಾದವಾಂಛಲ್ಯವ ತೊಡದಿಹ್ಯರು ಭೇದಿಲ್ಲದಿವರು 1 ಕಾಮ ಕ್ರೋಧಾದಿಗಳು ಜೈಸಿಹ್ಯರು ತಾಮಸಬಿಟ್ಟಿಹರು ಭೂಮಿ ಮೋಹಾದಿಗಳನಳಿದಿಹ್ಯರು ಸ್ವಾಮಿನ ಭಜಿಸುವರು 2 ಕ್ಲೇಶಪಂಚಕದಿಂದುಳಿದಿಹ್ಯರು ಮೋಸಕೆ ಒಳಪಡರು ಅಶಪಾಶಗಳೆಲ್ಲ ತುಳಿದಿಹ್ಯರು ವಾಸನೆ ತೊಳೆದಿಹ್ಯರು 3 ಮೆಚ್ಚದೆ ಸಂಸಾರ ತುಚ್ಛೀಕರಿಸಿಹ್ಯರು ಎಚ್ಚರಗೊಂಡಿಹ್ಯರು ಅಚ್ಚುತಾನಂತನೆ ಗತಿಯೆಂಬುವರು ಬಚ್ಚಿಟ್ಟು ನೆನೆಯುವರು 4 ಹರಿಯೆ ಪರದೈವವೆಂದರಿತಿಹ್ಯರು ಹರಿಯ್ಹೊರತಿಲ್ಲೆಂಬುವರು ಸರುವ ಜಗಭರಿತನೆಂದವರು ಸಿರಿರಾಮನ್ನ ತಿಳಿದಿಹ್ಯರು 5
--------------
ರಾಮದಾಸರು
ಅಂಜಬೇಡ ಬೇಡವೆಲೆ ಜೀವ -ಭವ - |<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಭಂಜನ ಹರಿಶರಣರ ತಾವ ಪ.ಬಂದಷ್ಟರಿಂದಲಿ ಬಾಳಿಕೊ - ಬಲು - |ಸಂದೇಹಬಂದಲ್ಲಿ ಕೇಳಿಕೊ ||ನಿಂದಾ - ಸ್ತುತಿಗಳನು ತಾಳಿಕೊ - ಗೋ - |ವಿಂದ ನಿನ್ನವನೆಂದು ಹೇಳಿಕೊ 1ಮಾಧವನಿಗೆ ತನುಮನ ಮೆಚ್ಚು - ಕಾಮ - |ಕ್ರೋಧಾದಿಗಳಕಲಿಮಲ ಕೊಚ್ಚು ||ಮೋದತೀರ್ಥವಚನವೆ ಹೆಚ್ಚು -ಮಾಯಾವಾದಿಮತೆಕೆ ಬೆಂಕಿಯ ಹಚ್ಚು 2ಪರವನಿತೆಯ ರಾಶಿಯ ಬಿಡು - ನೀಹರಿಸರ್ವೋತ್ತಮನೆಂದು ಕೊಂಡಾಡು ||ಪರಮಾತ್ಮನ ಧ್ಯಾನವಮಾಡು - ನಮ್ಮ - |ಸಿರಿಪುರಂದರವಿಠಲನ ನೀನೋಡು3
--------------
ಪುರಂದರದಾಸರು
ತೋರುತಲೈದಾನೆ ಮುಕ್ತಿಯ ತೋರುತಲೈದಾನೆಸಾರಿ ಶರಣರೆಂದು ಶ್ರೀನಿವಾಸದೇವ ಪ.ಹುಲ್ಲು ಕಲ್ಲಿನ ಪೂಜೆಯ ಮಾಡಿ ಕೆಡದೆಬೆಲ್ಲದಾಸೆಗೆಂಜಲು ತಿನ್ನದೆಸೊಲ್ಲುಸೊಲ್ಲಿಗೆ ಹರಿಸರ್ವೋತ್ತಮನೆಂದುಬಲ್ಲವರು ಭಕ್ತಿಲಿ ಭಜಿಸಿರೆಂದು 1ಭುವಿಯ ವೈಕುಂಠವು ನೋಡಿರಾನತರೆಂದುನವನವ ಉತ್ಸಾಹದೊಳಿಹನುಯುವತಿ ಲಕುಮಿ ಕೂಡ ಸ್ವಾಮಿ ಪುಷ್ಕರಕೂಲಭವನದೊಳಗಿಪ್ಪ ಭಕ್ತ ಚಿಂತಾಮಣಿ 2ನೆಲೆಯೆ ಸಿಕ್ಕದ ಧರ್ಮಕರ್ಮದ ತೊಡರ ಬಿಟ್ಟಲಸದೆ ತನ್ನಂಘ್ರಿಯಾತ್ರೆ ಮಾಡಿಸುಲಭದಿ ಮೋಕ್ಷವ ಗಳಿಸಿಕೊಳ್ಳೆನುತಲಿಕಲಿಯುಗದೊಳಗೆ ಪ್ರಸನ್ನವೆಂಕಟಪತಿ 3
--------------
ಪ್ರಸನ್ನವೆಂಕಟದಾಸರು
ಬರಿದೆ ಹೋಯಿತು ಹೊತ್ತು - ಹರಿಯೆ |ಶರೀರವೆ ಸ್ಥಿರವೆಂದು ಮರೆತು ನಾನಿದ್ದೆನೆ ಪಆಸೆಯೆಂಬುದು ಎನ್ನ ಕ್ಲೇಶಪಡಿಸುತಿದೆ |ಗಾಸಿಯಾದೆನೊ ಹರಿಯೆ ||ಶೇಷಶಯನನು ನೀನು ನಿನ್ನ ನಂಬಿದೆ ನಾನು |ನಾಶವಾಯಿತು ದಿನ ಮೋಸ ಹೋದೆನಯ್ಯ 1ಸತಿಸುತರೆಂದೆಂಬ ಅತಿ ಭ್ರಾಂತಿಗೊಳಗಾದೆ |ಮತಿಹೀನ ನಾನಾದೆನೊ ||ಸತತ ನಿರಂತರ ಜಡದೇಹ ನಾನಾದೆ |ರತಿಗೆಳೆಯುತಿದೆ ಮನಸು ಹರಿಸರ್ವೋತ್ತಮನೆ 2ಪರರ ಸೇವೆಯ ಮಾಡಿ ಪರರನೆ ಕೊಂಡಾಡಿ |ಮರೆತೆನೊ ನಿನ್ನ ಧ್ಯಾನ |ಕರುಣದಿಂದಲಿ ಎನ್ನ ಕಾಯ್ದು ನೀ ಸಲಹಯ್ಯ |ಪುರಂದರವಿಠಲ ನಿನ್ನನೆ ನಂಬಿದೆ ನಾನು3
--------------
ಪುರಂದರದಾಸರು
ಶ್ರೀ ಮದಾನಂದ ತೀರ್ಥ ಹನುಮ | ಭೀಮನಿನ್ನ ಸಮಾನ ಪುರುಷರುಈ ಮೂಜಗದೊಳಿಲ್ಲವೆಂದು ಶ್ರೀ ರಾಮಸಹಭೋಜನವನೀಯನೆ? ಪಹರಿವಿರಿಂಚಿ ಸಹಾಯದಿಂದ | ಹರನುತ್ರಿಪುರವನಳಿಯಲಾಗ |ಬರಿದೆ ಕೊಂಡಾಡಿದರು ಸರ್ವರು |ಅರಿಯದೆಯೆ ನಿನ್ನ ಸಾಹಸ ||ಶರಧಿಲಂಘಿಸಿ ದಾನವರನು ತರೆದುಸೀತೆಗೆ ಉಂಗುರವಿತ್ತು |ಪುರವನುರುಹಿ ಹರಿಯಡಿಗೆ ಆಕುರುಹತಂದು ಮುಟ್ಟಿಸಿದೆಯೊ 1ಸಾಸಿರದ ತನ್ನ ಪೆಡೆಯ ನಡುವೆ | ಈಸುಸಚರಾಚರವನೆಲ್ಲ |ಸಾಸಿವೆಯಂದದಲಿ ಇಟ್ಟಾ | ಶೇಷನ-ಮೂಲರೂಪದ ||ಆ ಶಕುತಿಯನು ತೋರಿಸಲುದಶಾಸ್ಯನೆಳೆಯುವ ಸೌಮಿತ್ರಿಯನುದಾಶರಥಿಯ ಬಳಿಗೆ ತಂದು | ನೀ ಸಲಹಿದೆ ಜಗವರಿಯಲು 2ತನ್ನ ಜನನಿಯೊಬ್ಬಳಿಗೆಸುಪರ್ಣಬಳಲಿ ಸುಧೆಯ ತರಲುಇನ್ನು ಪೊಗಳುತಿಹುದು ಲೋಕ | ನಿನ್ನಂತೆ ದೂರದಲಿಹ ||ಉನ್ನತದ ಶತಯೋಜನಗಲದ | ಅನ್ಯರು ತರಲಾರದ ಸಂಜೀ |ವನ್ನ ಗಿರಿಯ ತಂದು ಕಪಿಗಳನ್ನು ಕಾಯ್ದೆ ತವಕದಿಂದ 3ಸಕಲ ಪ್ಲವಗನಿಕರ ರಾಮನ | ತ್ರಿಕರಣಸೇವೆಯನು ಮಾಡಿ |ಮುಕುತಿ ಬೇಡಲಿತ್ತು ನಿನಗೇನು | ಬೇಕೆಂದುಕೇಳಲು ನೀನು ನಾ ||ಲುಕು ಪುರುಷಾರ್ಥಗಳಜರಿದು| ಭಕುತಿಯಕೊಡು ಎನಲು ನವಕನಕದ ಮಾಲೆ ಕೊರಳಿಗಿಟ್ಟು ಜಾ | ನಕಿರಮಣನುನಿನ್ನ ಪೊಗಳಿದ 4ಶರಧಿಯ ಮಥನದೊಳುದಿಸಿದ |ಗರಳಜಗತ್ತನು ಅಂಜಿಸೆಸಿರಿಯರಸನ ಪೆರ್ಮೆಯಿಂದ | ಸುರಿದುಅದನು ಜೀರ್ಣಿಸಿಕೊಂಡ ||ಮಾರುತನವತಾರ ವೃಕೋ | ದರನೆ ನೀನು ಎಂದರಿಯದೆಮರುಳ ಕೌರವರಿಕ್ಕಿದ ವಿಷವ | ಭರದಿಉಂಡು ತೇಗಿದುದರಿದೆ ? 5ಅವನಿಭಾರಕೆ ಮುಖ್ಯರಾದ | ಕವುರವ ಕೀಚಕಾದಿಗಳನುಬವರಮುಖದಿ ನಗುತ ಗೆಲಿದು |ಹವಿಯ ಕೃಷ್ಣಾನಿಗರುಪಿಸಿದಿವಿಜರೆದುರುಗೊಳಲುಅವರ|ನವರತಾರತಮ್ಯದಿ ಮನ್ನಿಸಿ |ಪವನಲೋಕದೊಳು ಮೆರೆದೆ ದ್ರವುಪದಿಯ ಸಹಿತನಾಗಿ 6ಸುರಾಸುರರ ಸಂಗ್ರಾಮದಲಿ |ಅರಿವಿಪ್ರಚಿತ್ತಿಯ ನೀನು ಕೊಲ್ಲಲು |ವಿರಿಂಚಿ-ಹರರ ವರದಿಂದವನೆ |ಜರಾಸಂಧನಾಗಿ ಇಳೆಯೊಳು |ಅರಸುಗಳನು ಕಾಡಲವನ ಸರನೆ ಸೀಳಿ ಪಶುವಿನಂತೆಹರಿಗೆ ಅರ್ಪಿಸಲವನು ಸಕಲಾ | ಧ್ವರಕ್ಕಿಂತಲು ತೃಪ್ತನಾದ 7ನಡುಮನೆಯೆಂಬ ಸಾಧುದ್ವಿಜನ | ಮಡದಿಯಬಸಿರಿನಲಿ ಉದಿಸಿಕಡು ಕುಮತದ ಮಾಯಿಗಳನು | ಅಡಿಗಡಿಗೇ ಸಚ್ಛಾಸ್ತ್ರದಿ ||ತಡೆದು ಆನಂದ ಶುಭಗುಣಗಳ | ಕಡಲುಹರಿಸರ್ವೋತ್ತಮನೆಂದುಒಡಂಬಡಿಸಿ ಸ್ವಮತವನ್ನು | ಪೊಡವಿಯೊಳಗೆಸ್ಥಾಪಿಸಿದೆಯೊ ನೀ 8ಮರುತ ನಿನ್ನವತಾರ ತ್ರಯವ | ನರಿತುಭಜಿಪಗೆ ಶ್ವೇತದ್ವೀಪ |ದರುಶನವನೆ ಮಾಡಿಸಿ ಶ್ರೀ |ಪುರಂದರವಿಠಲೇಶನ |ಕರುಣಕಟಾಕ್ಷದಿಂದ ವೈಕುಂಠ ಪುರದಿ ಅನಂತಾಸನದಲಿ |ಪರಮಾನಂದವ ಪಡೆಸಿ ಹೊರೆವೆ |ಪರಿಪರಿಯ ಭೋಗಗಳನಿತ್ತು 9
--------------
ಪುರಂದರದಾಸರು