ಒಟ್ಟು 20 ಕಡೆಗಳಲ್ಲಿ , 13 ದಾಸರು , 20 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರಿನಾಮ ಭಜನೆಯೊಳಿರು ಇರೂ ಶ್ರೀಹರಿ ಮಹಿಮೆಯ ಭುವಿ ತೋರುರೋರು ಪ ಸಜ್ಜನರ ಸಂಗವ ಮಾಡು ಮಾಡು ದುರ್ಜನರ ಸಂಗವ ಬಿಡೂ ಬಿಡೂ ಮೂಜ್ಜಗದೊಡೆಯನ ಪಾಡು ಪಾಡು ಇನ್ನು ಮುಕುತಿಯ ಬೇಕೆಂದು ಬೇಡು ಬೇಡು 1 ಪಾದ ಹಿಡಿ ಹಿಡಿ ಮನದಿರುವ ಕಾಮ ಕ್ರೋಧ ಕಡಿ ಕಡಿ ಶರಣರ ಕೂಟದೋಳ್ ಕೂಡಿ ಕೂಡಿ ಬೇಗ ನರಹರಿ ಮೂರ್ತಿಯ ನೋಡಿನೋಡಿ 2 ರಾಮನಾಮಾಮೃತ ಕುಡಿ ಕುಡಿ ಅತಿಕಾಮುಕ ದ್ರವ್ಯವ ಬಿಡಿಬಿಡಿ ಸ್ವಾಮಿ ನಾರಾಯಣನೆಂದು ನುಡಿನುಡಿ ಬಹು ಪ್ರೇಮದಿ ಹರಿಕರುಣ ಪಡಿಪಡಿ 3 ಸಕಲಶಾಸ್ತ್ರಗಳ ನೋಡು ನೋಡು ಅದರ ಸಾರಾಂಶ ತಿಳಿದು ಆಡೂ ಆಡೂ ಪ್ರಕಟಿತ ಭಕ್ತರಿಗನ್ನ ನೀಡು ನೀಡು ಇನ್ನು ಪರಮಾತ್ಮನ ಕೊಂಡಾಡು ಆಡು 4 ನರಹರಿಯು ಕಥೆಯ ಕಿವಿಲಿ ಕೇಳುಕೇಳು ಪರಮ ಭಕ್ತರ ಪಾದಕೆ ಬೀಳು ಬೀಳು ಶ್ರೀ ಪರಬ್ರಹ್ಮನ ಸೇವೆಗೆ ಏಳು ಏಳು 5 ಯೋಗ್ಯರ ಕಂಡರೆ ಹಿಗ್ಗೂ ಹಿಗ್ಗೂ ಅತಿ ಭಾಗ್ಯರ ಕಂಡರೆ ತಗ್ಗೂ ತಗ್ಗೂ ಸುಜ್ಞಾನಿಗಳಿಗೆ ಡೊಗ್ಗು ಡೊಗ್ಗು ಇನ್ನು ಶುದ್ಧಾತ್ಮಕರೊಳು ಜಗ್ಗು ಜಗ್ಗು 6 ಸನ್ಯಾಸಿಗಳನು ಸೇರು ಸೇರು ದುಷ್ಟದುರ್ಮಾಗರ ಕಂಡು ದೂರು ದೂರು ಮರ್ಮ ಬಲ್ಲವರಲ್ಲಿ ಜಾರು ಜಾರು ಶ್ರೀ ಮಹಾ 'ಹೆನ್ನ ವಿಠ್ಠಲನ’ ‘ಸಾರೂ ಸಾರೂ’ 7
--------------
ಹೆನ್ನೆರಂಗದಾಸರು
ಹೊಂದಿ ಬದುಕಿರೋ ಮನವೆ ಇಂದಿರೇಶನ ಎಂದೆಂದಗಲದೆ ದ್ವಂದ್ವ ಶ್ರೀಪಾದವ ಹೊಂದಿ ಸುಖಿಯಾಗೋ ತಂದೆ ಸರ್ವೇಶನ ಧ್ರುವ ಮುಚ್ಚಿಕೊಂಡು ಮುಕುತಿ ಸಾಧನ ಹುಚ್ಚುಗೊಂಡು ಸಚ್ಚಿದಾನಂದನ ಬಚ್ಚಿಟ್ಟುಕೊಂಡು ನಿಜ ನೆಚ್ಚಿಕೊಂಡಿರೋ ನೀ ಅಚ್ಯುತಾನಂತನ 1 ಹರಿಚರಣ ಕಮಲವ ಕಂಡು ಹರಿನಿಜಧ್ಯಾನ ನೆಲೆಗೊಂಡು ಹರಿಕರುಣವ ಪಡಕೊಂಡು ಹರಿನಾಮಾಮೃತ ಸವಿದುಂಡು 2 ಶ್ರೀಹರಿಸೇವೆ ಮಾಡಿಕೊಂಡು ಇಹಪರ ಸುಖ ಸೂರೆಗೊಂಡು ಬಾಹ್ಯಾಂತ್ರಪೂರ್ಣ ಮನಗಂಡು ಮಹಿಪತಿ ಸ್ವಾಮಿ ವಾಲ್ವೈಸಿಕೊಂಡು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ದಯಮಾಡು ದಯಮಾಡು ಶ್ರೀನಿವಾಸಭವಭಯ ನಿವಾರಣ ಭಜಕ ಭಕ್ತರಘನಾಶ ಪ.ನೇಮವೆನ್ನಲಿಲ್ಲ ನಾಮದರಿಕೆಯಿಲ್ಲನಾ ಮಹಾಪಾಪಿಯು ಸ್ವಾಮಿ ನೀನೊಲಿದು ಗಡ 1ಸದ್ಧರ್ಮ ಸರಕಿಲ್ಲ ಶುದ್ಧ ಬುದ್ಧಿಯಿಲ್ಲಉದ್ಧರಿಸೆನ್ನನಿರುದ್ಧಹರಿಕರುಣಿ2ಸತ್ಕುಲ ಹೊಂದೇನು ಸತ್ಕರ್ಮ ಮಾರ್ಗಿಲ್ಲಭಕ್ತರಕ್ಷಕ ಪಾಪಮುಕ್ತ ದೇವರ ದೇವ 3ಅವಗುಣದೆಣಿಕೆಯ ವಿವರ ನೋಡದೆ ಅಯ್ಯಜವನ ಬಲೆಯನು ತಪ್ಪಿಸುವ ಸರೀಸೃಪಶಯ್ಯ4ಅಜಾಮಿಳವ್ಯಾಧಆಗಜಅಹಲ್ಯೋದ್ಧರನಿಜ ಪ್ರಸನ್ವೆಂಕಟೇಶಸುಜನಪರಿಪೋಷ5
--------------
ಪ್ರಸನ್ನವೆಂಕಟದಾಸರು
ನಮಿಸೊ ಗಂಧವಹಗೆ ಪ್ರತಿದಿನ ನಿನ್ನ |ಶ್ರಮವ ಕಳೆದು ಅಭೀಷ್ಟಿಯ ಕೊಡುವ ಮನುಜ ಪಹರಿಕರುಣಿಸದಿರೆಗುರುಕರುಣಿಸುವನು |ಗುರುಕರುಣಿಸದಿರೆಹರಿಜರೆವ ||ಧರೆಯೊಳು ವಾತಪ್ರಸಾದ ಸಂಪಾದಿಸಿ |ಶಿರಿವಲ್ಲಭಗೆ ಬೇಕಾದವರ ಕೇಳು ಮನುಜ 1ಹನುಮನೊಲಿದನೆಂದು ಒಲಿದ ಸುಗ್ರೀವಗೆ |ಮನಸಿಜಪಿತನು ತನ್ನಯಚರಣ|ಘನವಾಹ ಸುತ ಭಜಿಸಿದರಿನ್ನವಗೆ ಪ್ರಭಂ |ಜನನೊಲಿಯದಕೆ ಕೊಂದನು ಕೇಳೆಲೊ ಮನುಜ 2ದುರ್ಜನಾಂತಕಗೆ ಬೇಕಾದ ಕಾರಣದಿಂದ |ಅರ್ಜುನಾದಿಗಳು ಸುಖವ ಬಿಟ್ಟರು ||ಅಬ್ಜಾಪ್ತಸುತ ಅಸಮರ್ಥನೆ ರಣದೊಳು |ನಿರ್ಜಿತನಾಗಲು ತಿಳಕೊ ಇದು ಮನುಜ 3ಸುರರೆಲ್ಲ ಕೂಡಿ ನ್ಯಾಯವ ಮಾಡಿ ನೋಡಲು |ಸರಿಯಾಗಲಿಲ್ಲವು ಮಾರುತಗೆ ||ಗಳವುದ್ಭವಿಸಲುಮಥನಕಾಲದಿ ಆದಿತ್ಯರ |ಮೊರೆಕೇಳಿಪ್ರಾಶನ ಮಾಡಿದ ಮನುಜ 4ಶಮೆಯಲ್ಲಿ ದಮೆಯಲ್ಲಿ ಸರ್ವಗುಣದಲ್ಲಿ |ಪವಮಾನಗೆ ಸರಿಯುಂಟಾವನು ಜಗದಿ ||ಅಮಲ ಪ್ರಾಣೇಶ ವಿಠಲಗಲ್ಲದವನು |ಯಮ ಸದನಕೆ ಯೋಗ್ಯ ಯಮಗಲ್ಲೆಂಬ ಮನುಜ 5
--------------
ಪ್ರಾಣೇಶದಾಸರು
ವ್ಯಾಪಾರವೆನಗಾಯಿತುಶ್ರೀಪತಿಯ ಪಾದಾರವಿಂದ ಸೇವೆಯೆಂಬ ಪಹರಿಕರುಣವೆಂಬಂಗಿಗುರುಕರುಣಮುಂಡಾಸುಹರಿದಾಸರ ದಯವೆಂಬ ಒಲ್ಲಿ ||ಪರಮಪಾಪಗಳೆಂಬ ಪಾಪೋಸವನೆ ಮೆಟ್ಟಿದುರುಳಾತ್ಮರಾದವರ ಎದೆ ಮೇಲೆ ನಡೆವಂಥ 1ಬಿಳಿಯ ಕಾಗದ ಹೃದಯ ಬಾಯಿ ಕಲಮದಾನಿನಾಲಗೆಯೆಂಬ ಲೆಕ್ಕಣಿಕೆ ||ಶ್ರೀಲೋಲನ ದಿವ್ಯನಾಮವೆಂಬುವ ಲೆಕ್ಕಶೀಲದಿ ಬರೆದು ಶ್ರೀಹರಿಗೆ ಒಪ್ಪಿಸುವಂಥ 2ನುಡಿನುಡಿಗಾನಂದ ಬಾಷ್ಪ ರೋಮಾಂಚನಮುಡುಪಿನೊಳಗೆ ಇಟ್ಟ ಕೈಜೀತವು ||ಕಡಿಮೆ ಸಂಬಳಕೆಲ್ಲ ಮುಕ್ತಿಸಾಧನವನ್ನುಕೊಡುವ ತೆರನಂತೆ ಚೀಟಿ ಬರೆಸಿಕೊಟ್ಟ 3ಹಿಂದಿನ ಸಂಸಾರ ಆಗಮನದ ಭಯಎಂದೆಂದಿಗದರ ಚಿಂತೆಯು ಬಿಟ್ಟಿತು ||ಮುಂದಿನ ಸಂಸಾರ ಸ್ಥಾನ ಭಾರಕೆಲ್ಲಸಂದಾಯವನು ಮಾಡಿ ಕತಬಿ ಹರಿಸಿಕೊಟ್ಟ 4ಕಂಡಕಂಡವರ ಕಾಲುಗಳಿಗೆರಗಿ ನನ್ನಮಂಡೆದಡ್ಡುಗಟ್ಟಿ ಬಳಲಿದೆನೊ ||ಪುಂಡರೀಕಾಕ್ಷಶ್ರೀಪುರಂದರವಿಠಲನುಕಂಡು ವೀಳೆಯ ಕೊಟ್ಟು ತನ್ನ ಸೇವೆಗೆ ಇಟ್ಟ 5
--------------
ಪುರಂದರದಾಸರು